Saturday, May 5, 2018

ವ್ಯಕ್ತಿಯ ಸಾವು ಪ್ರಕರಣ ದಾಖಲು: 

     ಬ್ಯಾಂಕ್ ಉದ್ಯೋಗಿಯೊಬ್ಬರು ತಮ್ಮ ಮನೆಯ ಬಾತ್ ರೂಂನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಮಡಿಕೇರಿ ನಗರದ ಮಹದೇವಪೇಟೆಯಲ್ಲಿ ನಡೆದಿದೆ. ಮಡಿಕೇರಿ ನಗರ ಠಾಣಾ ಸರಹದ್ದಿನ ಮಹದೇವ ಪೇಟೆ ನಿವಾಸಿ ರವಿ ಎಂಬವರು ಮಡಿಕೇರಿ ನಗರದ ಟೌನ್ ಬ್ಯಾಂಕ್ ಉದ್ಯೋಗಿಯಾಗಿದ್ದು ದಿನಾಂಕ 4-5-2018 ರಂದು ತಮ್ಮ ಮನೆಯ ಬಾತ್ ರೂಂ ನಲ್ಲಿ ಮೃತಪಟ್ಟಿರುವುದು ಕಂಡು ಬಂದಿದ್ದು, ಆರೋಗ್ಯದ ತೊಂದರೆಯಿಂದಲೋ ಅಥವಾ ಜಾರಿಬಿದ್ದು ಮೃತಪಟ್ಟರಬಹುದೆಂದು ಸುರೇಶ್ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವ್ಯಕ್ತಿ ಮೇಲೆ ಹಲ್ಲೆ, ಕೊಲೆ ಬೆದರಿಕೆ: 

     ಮಡಿಕೇರಿ ಗ್ರಾಮಾಂತರ ಠಾಣೆ ಸರಹದ್ದಿನ ಯು.ಚೆಂಬು ಗ್ರಾಮದ ನಿವಾಸಿ ಕೆ.ಜಿ.ನಯನ ಎಂಬವರು ದಿನಾಂಕ 1-5-2018 ರಂದು ಚೆಂಬು ಗ್ರಾಮದಲ್ಲಿ ಜೀಪಿನಲ್ಲಿ ಹೋಗುತ್ತಿದ್ದಾಗ ಆರೋಪಿಗಳಾದ ದೀಕ್ಷಿತ್, ಮನೋಹರ, ಜಿತೇಶ್, ನಂದಕುಮಾರ್, ರವರುಗಳು ಜೀಪನ್ನು ನಿಲ್ಲಿಸಿ ಜೀಪಿನಿಂದ ಕೆ.ಜಿ.ನಯನರವರನ್ನು ಎಳೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ದಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಾಗಿಲು ಮುರಿದು ಕಳವು: 

     ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ‍್ವರ ಬಡಾವಣೆಯಲ್ಲಿರುವ ಪ್ರದೀಪ್ ನರೋನ ಎಂಬವರ ಮನೆಯ ಹಿಂದಿನ ಬಾಗಿಲಿಗೆ ಹಾಕಿದ ಬೋಲ್ಟ್ ನ್ನು ಮುರಿದು ಒಳಗೆ ಪ್ರವೇಶಿಸಿ ಟಿ.ವಿ., ಪೋನ್, ಕೈಗಡಿಯಾರ, ಕ್ಯಾಮರಾ ಹಾಗು ಇತರೆ ಮನೆ ಸಾಮಾಗ್ರಿಗಳು ಒಟ್ಟು 21,000 ರೂ. ಬೆಲೆಬಾಳುವ ವಸ್ತುಗಳನ್ನು ಕಳವುಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸು ತನಿಖೆ ನಡೆಸುತ್ತಿದ್ದಾರೆ. 

ಮನೆ ಕಳವು: 

     ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಸರಹದ್ದಿನ ಸ್ವಾಮಿ ಬಡಾವಣೆಯಲ್ಲಿರುವ ಫಿರ್ಯಾದಿ ಪಿ.ಬಿ. ನಾಚಪ್ಪ, ಎಂಬವರ ಮನೆಯ ಮುಂಬಾಗದ ಕಿಟಕಿಯ ಎರಡು ರಾಡುಗಳನ್ನು ಕತ್ತರಿಸಿ ತೆಗದು ಕಿಟಕಿ ಮೂಲಕ ಒಳಪ್ರವೇಶಿಸಿ ನಗದು ರೂ.37,000, 2 ಬೆಳ್ಳಿ ನಾಣ್ಯ, ಅರ್ಧ ಪವನಿನ 2 ಮುತ್ತಿನ ಸರ ಕೆನರಾ ಬ್ಯಾಂಕಿನ ಎ.ಟಿ.ಎಂ. ಕಾರ್ಡ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿಷ ಸೇವಿಸಿ ವ್ಯಕ್ತಿ ಸಾವು: 

     ಶ್ರೀಮಂಗಲ ಠಾಣಾ ಸರಹದ್ದಿನ ಕುಮಟೂರು ಗ್ರಾಮದ ನಿವಾಸಿ ಕರ್ತಮಾಡ ಸುಬ್ರಮಣಿ ಎಂಬವರು ದಿನಾಂಕ 3-5-2018 ರಂದು ರಾತ್ರಿ ಯಾವುದೋ ವಿಷವನ್ನು ಸೇವಿಸಿ ಮೃತಪಟ್ಟಿದ್ದು, ಈ ಸಂಬಂಧ ಕರ್ತಮಾಡ ಎಸ್. ಬೋಪಣ್ಣ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.