Thursday, April 26, 2018


ಲಾರಿ ಅಪಘಾತ
                ದಿನಾಂಕ 24-04-2018 ರಂದು ಬೆಂಗಳೂರಿನ ಲಾಜಿಸ್ಟಿಕ್ ಕಂಪೆನಿಗೆ ಸೇರಿದ ಬಟ್ಟೆಗಳನ್ನು ಕಂಟೈನರ್ ಲಾರಿಯಲ್ಲಿ ಮಡಿಕೇರಿ ಮಾರ್ಗವಾಗಿ ಮಂಗಳೂರಿಗೆ ತೆಗೆದುಕೊಂಡು ಹೊಗುತ್ತಿರುವಾಗ ಮದೆನಾಡು ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದ್ದಿದ್ದು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾರುಗಳ ಡಿಕ್ಕಿ
                ದಿನಾಂಕ 25-04-2018 ರಂದು ಸಿದ್ದಾಪುರ ಕರಡಿಗೋಡು ಗ್ರಾಮದ ನಿವಾಸಿಯಾದ ಮಣಿ ಎಂಬುವವರು  ಕಾರಿನಲ್ಲಿ ಸಿದ್ದಾಪುರದಿಂದ ಪೊನ್ನಂಪೇಟೆಗೆ ಹೋಗಿದ್ದು, ಪೊನ್ನಂಪೆಟೆ ನಗರದಲ್ಲಿರುವ ಗಣಪತಿ ನರ್ಸರಿಗೆ ಹೋಗಲು ಮುತ್ತಮ್ಮ ಕಲ್ಯಾಣ ಮಂಟಪದ ಹತ್ತಿರ ಬಲಬದಿಗೆ ಹೋಗಲು ಸಿಗ್ನಲ್ ಲೈಟ್ ಹಾಕಿಕೊಂಡು ಬಲಬದಿಗೆ ತಿರುಗಿಸುವಾಗ ಹಿಂದಿನಿಂದ ಬಂದ ಕಾರನ್ನು ಅರ್ಜುನ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ್ದು, ಮಣಿ ಮತ್ತು ಸೀಮಂತ್ ಎಂಬುವವರಿಗೆ ಗಾಯಗಳಾಗಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲ್ ಗಳ ಪರಸ್ಪರ ಡಿಕ್ಕಿ
                 ದಿನಾಂಕ 24-04-2018 ರಂದು ಶನಿವಾರಸಂತೆಯ ನಿವಾಸಿ ಧರ್ಮ ಎಂಬುವವರು ತನ್ನ ಮೋಟಾರು ಸೈಕಲಿನಲ್ಲಿ ಶಾಂತಿ ಮತ್ತು ಮಗಳು ಶೋಭಿಕಾಳನ್ನು ಕೂರಿಸಿಕೊಂಡು ಗೋಪಾಲಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಹೋಗುತ್ತಿರುವಾಗ ಎದುರುಗಡೆಯಿಂದ ವಿನು ಜೋಸೆಫ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮ ಧರ್ಮ, ಶಾಂತಿ ಮತ್ತು 6 ವರ್ಷದ ಶೋಭಿತಾರವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣಿಯಲ್ಲಿ ಪ್ರಕಣ ದಾಖಲಾಗಿರುತ್ತದೆ.

ಅಪಘಾತದಿಂದ ಗಾಯಗೊಂಡಿದ್ದ ವ್ಯಕ್ತಿಯ ಸಾವು
               ದಿನಾಂಕ 22-04-2018 ರಂದು ಪಿರಿಯಾಪಟ್ಟಣ ತಾಲೂಕಿನ ಬ್ರಿಜೇಶ್ ಮತ್ತು ಮಂಜುನಾಥ ಎಂಬುವವರು ಕುಶಾಲನಗರದ ಗಂದದಕೋಟೆಯಲ್ಲಿರುವ ಸ್ನೇಹಿತನ ಮನೆಗೆ ಹೋಗುತ್ತಿರುವಾಗ ಗಂದದಕೋಟೆಯ ಹತ್ತಿರ ಕೆಎ-09-3069 ರ ಲಾರಿಯನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೇ ಅಜಾಗರೂಕತೆಯಿಂದ ಚಾಲನೆ ಮಾಡಿ ಬಲಕ್ಕೆ ತಿರುಗಿಸಿದಾಗ ಹಿಂದಿನಿಂದ ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿಯಾಗಿ ಬ್ರಿಜೇಶ್ ಮತ್ತು ಮಂಜುನಾಥರವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಗೊಂಡು ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುನಾಥರವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 25-04-2018 ರಂದು ಮೃತಪಟ್ಟಿರುತ್ತಾರೆ.

Wednesday, April 25, 2018

ಕಳವು ಪ್ರಕರಣ 
     ದಿನಾಂಕ 20-4-2018 ರಂದು ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ನಿವಾಸಿಯಾದ ಉತ್ತಯ್ಯನವರು ಮನೆಗೆ ಬೀಗ ಹಾಕಿ ಕೀಯನ್ನು ಅಲ್ಲಿಯೇ ಗೋಡೆಯ ಮೇಲೆ ಇಟ್ಟು ಮಡಿಕೇರಿಗೆ ಹೋಗಿ ವಾಪಾಸ್ಸು ಬಂದಿದ್ದು, ನಂತರ ದಿನಾಂಕ 23-03-2018 ರಂದು ಮನೆಯ ರಿಪೇರಿ ಕೆಲಸಕ್ಕೆ ಇಟ್ಟಿಗೆ, ಸಿಮೆಂಟ್ ತರುವ ಸಲುವಾಗಿ ಸೊಸೆಯನ್ನು ಹಣ ಕೇಳಿದಾಗ ಸದರಿಯವರು ಬೀರುವಿನಿಂದ ಹಣ ತೆಗೆಯಲು ಕೀಯನ್ನು ಹುಡುಕಿದಾಗ ಮಾಮೂಲಿ ಇಡುವ ಜಾಗದಲ್ಲಿ ಕೀ ಇಲ್ಲದೇ ಇದ್ದು, ಬೀರುವನ್ನು ನೋಡಿದಾಗ ತೆರೆದಿರುವುದು ಕಂಡುಬಂದು ನೋಡಲಾಗಿ ಬೀರುವಿನಲ್ಲಿಟ್ಟಿದ್ದ ನಗದು 60,000 ರೂ ಮತ್ತು 4 ಪೌನಿನ ಚಿನ್ನದ ಸರ ಕಳವು ಆಗಿರುವುದು ಕಂಡು ಬಂದಿರುವುದಾಗಿ ಸದರಿ ಉತ್ತಯ್ಯನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಅಕ್ರಮ ಮದ್ಯ ವಶ 
     ದಿನಾಂಕ 24-04-2018 ರಂದು ಚೆನ್ನಯ್ಯಕೋಟೆಯಲ್ಲಿರುವ ಪೊಲೀಸ್ ಉಪ ಠಾಣೆಯಲ್ಲಿ ಕರ್ತವ್ಯ ನಿವರ್ಹಿಸುತ್ತಿರುವ ಲೋಕೇಶ್ ಎಂಬುವವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಚೆನ್ನಯ್ಯನಕೋಟೆಯ ನಿವಾಸಿ ಜನಾರ್ಧನ @ ಜಗ್ಗರವರು ಸ್ಕೂಟಿಯಲ್ಲಿ ಚೆನ್ನಯ್ಯನಕೋಟೆಗೆ ಮದ್ಯವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದವನನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ. 
ಹಲ್ಲೆ ಪ್ರಕರಣ 
     ದಿನಾಂಕ 23-04-2018 ರಂದು ಸೋಮವಾರಪೇಟೆ ತಾಲೂಕಿನ ದೊಡ್ಡಮಲ್ತೆ ಗ್ರಾಮದ ನಿವಾಸಿಗಳಾದ ಕೃಷ್ಣಪ್ಪ ಮತ್ತು ಆತನ ಹೆಂಡತಿ ಇಂದಿರರವರು ರುಕ್ಮಿಣಿಯವರ ಮನೆಗೆ ಹೋಗಿ ಹಳೇ ದ್ವೇಷದಿಂದ ಜಗಳ ತೆಗೆದು ಹಲ್ಲೆ ನಡೆಸಿದ್ದು, ಈ ಬಗ್ಗೆ ರುಕ್ಮಿಣಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, April 24, 2018

ಮೋಟಾರು ಸೈಕಲ್ ಕಳ್ಳತನ
               ದಿನಾಂಕ 22-4-2018 ರಂದು ಕುಶಾಲನಗರದ ಗೊಂದಿಬಸವನಹಳ‍್ಳಿಯ ನಿವಾಸಿ ಜೀವನ್ ಎಂಬುವವರು ಸಮಯ 10-30 ಗಂಟೆಗೆ ಪಾಲಿಟೆಕ್ನಿಕಲ್ ಕಾಲೇಜಿನ ಮುಂಭಾಗದ ಗೇಟಿನ ಹತ್ತಿರ ಕೆಎ-12-ಆರ್-3477 ರ ರಾಯಲ್ ಎನ್‍ ಫಿಲ್ಡ್ ಬೈಕನ್ನು ನಿಲ್ಲಿಸಿ ಮೈದಾನದಲ್ಲಿ ಕ್ರಿಕೆಟ್ ಆಡಿ ವಾಪಾಸ್ಸು ಸಮಯ 2-30 ಗಂಟೆಗೆ ಬಂದು ನೊಡಿದಾಗ ಯಾರೋ ಸದರಿ ಬೈಕನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಜೀವನ್ ರವರು ನಿಡಿದ ದೂರಿನ ಮೆರೆಗೆ ಕುಶಾಲನಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮನನೊಂದು ಮಹಿಳೆ ಆತ್ಮಹತ್ಯೆ
               ಸೋಮವಾರಪೇಟೆ ತಾಲೂಕಿನ ಅತ್ತೂರು ನಲ್ಲೂರು ಗ್ರಾಮದ ನಿವಾಸಿಯಾದ ಸುಶೀಲಾರವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22-04-2018 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸುಶೀಲಾರವರ ಅಣ್ಣ ಚಂದ್ರರವರು ನಿಡಿದ ಪುಕಾರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕೊಲೆಗೆ ಯತ್ನ
             ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಸುಂಟಿಕೊಪ್ಪದ ಕೊಡಗರಹಳ್ಳಿಯ ಮಾರುತಿ ನಗರದಲ್ಲಿ ವರದಿಯಾಗಿದೆ. ದಿನಾಂಕ 22-04-2018 ರಂದು ಮಾರುತಿ ನಗರದ ನಿವಾಸಿಯಾದ ಪುಟ್ನಂಜ ಎಂಬುವವರು ಹಳೇ ದ್ವೇಷದಿಂದ ಕುಮಾರ ಎಂಬುವವರಿಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ್ದು, ಬಿಡಿಸಲು ಹೋದ ಸತೀಶ ಬಿ. ಟಿ, ಸತೀಶ ಪಿ ಎಂಬುವವರಿಗೂ ಸಹಾ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ್ದು, ಎಲ್ಲರೂ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಕುಮಾರರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Monday, April 23, 2018

ಮೋಟಾರ್ ಸೈಕಲ್ ಡಿಕ್ಕಿ ವ್ಯಕ್ತಿಗೆ ಗಾಯ: 

     ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಮೋಟಾರ್ ಸೈಕಲೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಕಾಂತೂರು ಮೂರ್ನಾಡು ಗ್ರಾಮದಲ್ಲಿ ನಡೆದಿದೆ. ಕಾಂತೂರು ಮೂರ್ನಾಡು ಗ್ರಾಮದ ನಿವಾಸಿ ಸುಂದರ ಎಂಬವರು ದಿನಾಂಕ 21-4-2018 ರಂದು ಸಂಜೆ 8-00 ಗಂಟೆ ಸಮಯದಲ್ಲಿ ಬೋರ್ ವೆಲ್ ನಿಂದ ನೀರು ತರಲೆಂದು ರಸ್ತೆ ದಾಟುತ್ತಿದ್ದ ವೇಳೆ ಮೋಟಾರ್ ಸೈಕಲೊಂದು ಡಿಕ್ಕಿಯಾಗಿ ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾರಿಗೆ ಬೈಕ್ ಡಿಕ್ಕಿ:

      ಕುಶಾಲನಗರದ ಸಮೀಪಕ ಕೂಡುಮಂಗಳೂರು ಗ್ರಾಮದ ನಿವಾಸಿ ಬೇಲೂರಯ್ಯ ಎಂಬವರು ದಿನಾಂಕ 21-4-2018 ರಂದು ಕಾರಿನಲ್ಲಿ ಕುಶಾಲನಗರದಿಂದ ಕೂಡುಮಂಗಳೂರು ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಸವಾರ ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳು ಜಖಂ ಗೊಂಡು ಕಾರಿನ ಚಾಲಕ ಬೇಲೂರಯ್ಯ ಮತ್ತು ಬೈಕಿನ ಸವಾರ ವಿಷ್ಣು ರವರು ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಲಾರಿಗೆ ಬೈಕ್ ಡಿಕ್ಕಿ: 

      ಚಲಿಸುತ್ತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ನಡೆದಿದೆ. ಪಿರಿಯಾಪಟ್ನ ತಾಲೋಕು ಕುಂದನಹಳ್ಳಿ ಗ್ರಾಮದ ನಿವಾಸಿಗಳಾದ ಬ್ರಿಜೇಶ್ ಹಾಗು ಮನೋಜ್ ಎಂಬವರು ಮೋಟಾರ್ ಸೈಕಲಿನಲ್ಲಿ ಗಂಧದಕೋಟೆಯಲ್ಲಿರುವ ಅವರ ಸ್ನೇಹಿತರವರ ಮನೆಗೆ ಹೋಗುತ್ತಿದ್ದಾಗ ಮುಂದುಗಡೆ ಹೋಗುತ್ತಿದ್ದ ಲಾರಿಯನ್ನು ಅದರ ಚಾಲಕ ಯಾವುದೇ ಸೂಚನೆಗಳನ್ನು ನೀಡದೆ ಬಲಕ್ಕೆ ತಿರುಗಿಸಿದಾದ ಬ್ರಿಜೇಶ್ ರವರು ಚಾಲನೆ ಮಾಡುತ್ತಿರುವ ಬೈಕ್ ಲಾರಿಗೆ ಡಿಕ್ಕಿಯಾಗಿ ಇಬ್ಬರೂ ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Sunday, April 22, 2018

ವ್ಯಕ್ತಿ ಆತ್ಮಹತ್ಯೆ
                        ದಿನಾಂಕ 20/04/2018ರಂದು ಕುಶಾಲನಗರ ಬಳಿಯ ಗುಡ್ಡೆಹೊಸೂರು ನಿವಾಸಿ ವಸಂತ ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಮೇಲ್ಛಾವಣಿಗೆ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ವಸಂತ ವಿಪರೀತ ಮದ್ಯ ವ್ಯಸನಿಯಾಗಿದ್ದು ಯಾವುದೋ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಜೀಪು ಕಳ್ಳತನ
                    ಕುಶಾಲನಗರ ಪಟ್ಟಣದ ಕೋಕಾ ಕೋಲಾ ಪಾನೀಯದ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಾಹುಲ್ ಹಮೀದ್ ಎಂಬವರು ದಿನಾಂಕ 19/04/2018ರ ಸಂಜೆ ಪಾನೀಯಗಳನ್ನು ಅಂಗಡಿಗಳಿಗೆ ವಿತರಿಸಿ ನಂತರ ಪಾನೀಯಗಳನ್ನು ವಿತರಿಸುವ ಪಿಕ್‌ ಅಪ್ ವಾಹನ ಸಂಖ್ಯೆ ಕೆಎ-45-4379ನ್ನು ನಗರದ ಕೊಹಿನೂರ್ ಹೊಟೆಲಿನ ಬಳಿ ಇರುವ ಗೋದಾಮಿನ ಬಳಿ ನಿಲ್ಲಿಸಿ ವಾಹನದ ಚಾವಿಯನ್ನು ಗೋದಾಮಿನೊಳಗೆ ಇರಿಸಿ ಮನೆಗೆ ಹೋಗಿದ್ದು ನಂತರ ದಿನಾಂಕ 21/04/2018ರಂದು ಪುನಃ ಕೋಕಾ ಕೋಲ ಪಾನೀಯ ವಿತರಣೆ ಮಾಡುವ ಸಲುವಾಗಿ ಗೋದಾಮಿನ ಬಳಿ ಬಂದಾಗ ಪಿಕ್‌ ಅಪ್ ಜೀಪು ಕಾಣಿಸದೇ ಇದ್ದು ಕೂಡಲೇ ಗೋದಾಮಿನ ಬೀಗ ತೆರೆದು ನೋಡಿದಾಗ ಯಾರೋ ಕಳ್ಳರು ಗೋದಾಮಿನ ಮೇಲ್ಛಾವಣಿಯ ಶೀಟನ್ನು ತೆಗೆದು ಒಳ ಪ್ರವೇಶಿಸಿ ಗೋದಾಮಿನೊಳಗಿಟ್ಟಿದ್ದ ಜೀಪಿನ ಚಾವಿಯನ್ನು ತೆಗೆದುಕೊಂಡು ಹೊರಗೆ ನಿಲ್ಲಿಸಿದ್ದ ಜೀಪನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮೊಬೈಲ್ ಫೋನ್ ಕಳವು
                     ನಾಪೋಕ್ಲು ಬಳಿಯ ಬಾವಲಿ ನಿವಾಸಿ ಕೆ.ವಿ.ಮಂದಣ್ಣ ಎಂಬವರು ದಿನಾಂಕ 21/04/2018ರಂದು ನಾಪೋಕ್ಲಿನಲ್ಲಿ ನಡೆಯುತ್ತಿರುವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಭಾಗವಹಿಸಲೆಂದು ಹೋಗಿ ಮೈದಾನದ ಹೊರಗೆ ಬಟ್ಟೆ ಬದಲಾಯಿಸುವಾಗ ಅವರ ಎರಡು ಮೊಬೈಲ್  ಫೋನ್ ಗಳನ್ನು ಪ್ಯಾಂಟಿನ ಜೇಬಿಲ್ಲಿರಿಸಿ ಪ್ಯಾಂಟನ್ನು ಕೆಎ-12-ಎಂಎ-1477 ರ ಓಮಿನಿ ವ್ಯಾನಿನಲ್ಲಿ ಇಟ್ಟು ಆಟವಾಡಲು ಹೋಗಿದ್ದು ಮರಳಿ ಬಂದು ನೋಡುವಾಗ ಯಾರೋ ಕಳ್ಳರು ವ್ಯಾನಿನ ಬಲ ಭಾಗದ ಗಾಜನ್ನು ಕೆಳಕ್ಕೆ ತಳ್ಳಿ ವ್ಯಾನಿನೊಳಗಿಟ್ಟಿದ್ದ ಒಂದು ಓಪೋ ಮತ್ತು ಒಂದು ಸ್ಯಾಮ್‌ಸಂಗ್ ಕಂಪೆನಿಯ ಒಟ್ಟು ಸುಮಾರು ರೂ.45,000/- ಮೌಲ್ಯದ ಎರಡು ಮೊಬೈಲ್ ಫೋನ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮರಳು ಕಳವು ಪ್ರಕರಣ
                        ದಿನಾಂಕ 21/04/2018ರಂದು ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಲಕ್ಷ್ಮಣ ತೀರ್ಥ ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಮಡಿಕೇರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಕೆ.ಎಸ್.ನಾಗೇಂದ್ರಪ್ಪರವರು ಶ್ರೀಮಂಗಲ ಪಿಎಸ್‌ಐ ಸಣ್ಣಯ್ಯರವರೊಂದಿಗೆ ಸ್ಥಳಕ್ಕೆ ತೆರಳಿದಾಗ ಅಲ್ಲಿ ಕೆಎ-04-ಟಿ-2356ರ ಟ್ರ್ಯಾಕ್ಟರನ್ನು ಬಳಸಿಕೊಂಡು ಕೆಎ-12-ಟಿ-4238ರ ಟ್ರೈಲರಿನಲ್ಲಿ ಸುಮಾರು ರೂ 5,000/- ಮೌಲ್ಯದ ಮರಳನ್ನು ಕಳವು ಮಾಡಿ ತುಂಬಿಸಿದ್ದು ಮರಳು ತುಂಬಿಸುತ್ತಿರುವವರು ಮತ್ತು  ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು ಟ್ರ್ಯಾಕ್ಟರ್ ಸಮೇತ ಮರಳನ್ನು ವಶಪಡಿಸಿಕೊಂಡು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Saturday, April 21, 2018

ಮೋಟಾರು ಸೈಕಲ್ ಕಳ್ಳತನ 
             ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರು ಸೈಕಲನ್ನು ಕಳವು ಮಾಡಿರುವ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ಕುಶಾಲನಗರದ ಬಾಪೂಜಿ ಬಡಾವಣೆಯ ನಿವಾಸಿ ಉಲ್ಲಾಸ್ ಕೃಷ್ಣ ಎಂಬುವವರು ಎಂದಿನಂತೆ ದಿನಾಂಕ 19-4-2018 ರಂದು ರಾತ್ರಿ ಮನೆಯ ಮುಂದುಗಡೆ ನಿಲ್ಲಿಸಿದ್ದ ಎನ್ ಫೀಲ್ಡ್ ಬುಲೆಟ್ ಮೋಟಾರು ಸೈಕಲನ್ನು ಯಾರೋ ಕಳವು ಮಾಡಿದ್ದು, ಈ ಬಗ್ಗೆ ಉಲ್ಲಾಸ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Friday, April 20, 2018

ಅಕ್ರಮ ಬಂದೂಕು ವಶ
                     ವಿರಾಜಪೇಟೆ ಬಳಿಯ ಹೆಗ್ಗಳ ನಿವಾಸಿ ಸುರೇಶ ಎಂಬವರು ಅಕ್ರಮವಾಗಿ ಬಂದೂಕನ್ನು ಹೊಂದಿರುವುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ಗ್ರಾಮಾಂತರ ಠಾಣೆಯ  ಪಿಎಸ್‌ಐ ಬಸವರಾಜುರವರು ದಿನಾಂಕ 19/04/2018ರಂದು ಸುರೇಶರವರ ಮನೆಗೆ ತೆರಳಿ ಒಂದು ಒಂಟಿ ನಳಿಗೆಯ ಬಂದೂಕನ್ನು ವಶಪಡಿಸಿಕೊಂಡು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಾಗಾಟ ಪತ್ತೆ 
                        ದಿನಾಂಕ 19/04/2018ರಂದು ಸೋಮವಾರಪೇಟೆ ಬಳಿಯ ಕೂತಿ ಮಾರ್ಗವಾಗಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಂಡೇಗೌಡರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗುತ್ತಿರುವಾಗ ತೋಳೂರು ಶೆಟ್ಟಳ್ಳಿ ಬಳಿ ಎದುರಿನಿಂದ ಕೆಎ-12-ಬಿ-0241ರ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದು ಲಾರಿ ಹಾಗೂ ಮರಳನ್ನು ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Thursday, April 19, 2018

ಕರಿಮೆಣಸು ಕಳವು 
     ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ಕರಿಮೆಣಸನ್ನು ಕಳವು ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ತಿತಿಮತಿ ಗ್ರಾಮದೆ ನೋಕ್ಯ ಎಂಬಲ್ಲಿ ವರದಿಯಾಗಿದೆ. ತಿತಿಮತಿ ಗ್ರಾಮದ ನಿವಾಸಿ ಚೆಪ್ಪುಡಿರ ಕಾರ್ಯಪ್ಪ ಎಂಬುವವರು ತಮ್ಮ ಗೋಡಾನಿನಲ್ಲಿ 126 ಚೀಲಗಳಷ್ಟು ಕರಿಮೆಣಸನ್ನು ಶೇಖರಿಸಿಟ್ಟಿದ್ದು, ದಿನಾಂಕ 9-4-2018 ರಂದು ನೋಡಲಾಗಿ ಗೋದಾಮಿನ ಮೇಲ್ಬಾಗ ಇರುವ ಕಿಂಡಿಯಿಂದ ಒಳನುಗ್ಗಿ 150 ಕೆ ಜಿ ಯಷ್ಟು ಕರಿಮೆಣನ್ನು ಕಳವು ಮಾಡಿರುವುದು ಕಂಡು ಬಂದಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಹಲ್ಲೆ ಪ್ರಕರಣ 
     ದಿನಾಂಕ 18-4-2018 ರಂದು ಸೋಮವಾರಪೇಟೆ ನಗರದ ನಿವಾಸಿ ಮೋಹನರವರು ವ್ಯಾಪಾರ ಮುಗಿಸಿ ಮನೆಗೆ ಹೋಗುತ್ತಿರುವಾಗ ನಗರದ ಗಣೇಶ ಪೆಟ್ರೋಲ್ ಬಂಕ್ ಬಳಿ ತಲುಪುವಾಗ ಮನೋಹರ, ಪ್ರಮೋದ್ ಮತ್ತು ಇನ್ನೊಬ್ಬ ವ್ಯಕ್ತಿ ಮೋಹನರವರೊಂದಿಗೆ ವ್ಯಾಪಾರದ ವಿಷಯದಲ್ಲಿ ಜಗಳ ತೆಗೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಬಸ್ಸಿಗೆ ಲಾರಿ ಡಿಕ್ಕಿ 
     ದಿನಾಂಕ 17-4-018 ರಂದು ಭಟ್ಕಳ ಡಿಪ್ಪೋಕ್ಕೆ ಸೇರಿದ ಕೆ.ಎಸ್.ಆರ್.ಟಿ. ಸಿ ಬಸ್ಸುಮುರುಡೇಶ್ವರದಿಂದ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ಹೋಗುತ್ತಿರುವಾಗ ಬೋಯಿಕೇರಿ ಎಂಬಲ್ಲಿಗೆ ತಲುಪುವಾಗ ಹಿಂದುಗಡೆಯಿಂದ ಬಂದ ಲಾರಿಯನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿಪಡಿಸಿದ್ದು, ಈ ಬಗ್ಗೆ ಬಸ್ಸಿನ ಚಾಲಕ ಅಶೋಕರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
ಹಲ್ಲೆ ಪ್ರಕರಣ 
      ದಿನಾಂಕ 18-4-2018 ರಂದು ಬಲ್ಲಮಾವಟಿ ಗ್ರಾಮದ ಬಿದ್ದಪ್ಪನವರು ನಾಪೋಕ್ಲುವಿನಿಂದ ಪ್ರೆಂಡ್ಸ್ ಗ್ಯಾರೇಜ್ ನ ಪ್ರಭಾಕರರವರ ಓಮಿನಿ ವ್ಯಾನಿನಲ್ಲಿ ಪ್ರಭಾಕರರವರನ್ನು ನೆಲಜಿ ಗ್ರಾಮದ ತಾರಾರವರ ಮನೆಗೆ ಬಿಟ್ಟು ವಾಪಾಸ್ಸು ಹೋಗುತ್ತಿರುವಾಗ ನೆಲಜಿ ಗ್ರಾಮದ ನಿವಾಸಿಗಳಾದ ಪ್ರವೀಣ, ಪೊನ್ನಮ್ಮ, ಲೀಲಾವತಿ ಮತ್ತು ಯೋಗಿತರವರು ಜಗಳ ತೆಗೆದು ಬಿದ್ದಪ್ಪನವರ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಬಿದ್ದಪ್ಪನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Wednesday, April 18, 2018

ಹಲ್ಲೆ ಪ್ರಕರಣ ದಾಖಲು:
     ಮಡಿಕೇರಿ ನಗರ ಠಾಣಾ ಸರಹದ್ದಿನ ಮುಳಿಯಾ ಲೇಔಟ್, ವಿದ್ಯಾನಗರದ ನಿವಾಸಿ ರಾಜು ಎಂಬವರು ದಿನಾಂಕ 16-4-2018 ರಂದು ರಾತ್ರಿ ಸಮಯ 8-15 ಗಂಟೆಗೆ ಮನೆಗೆ ಹೋಗುತ್ತಿದ್ದಾಗ ಆರೋಪಿಗಳಾದ ವಿನೋದ್, ಮೋನಿಶ್, ಯತೀಶ್ ರವರುಗಳು ದಾರಿ ತಡೆದು ದಾರಿಯಲ್ಲಿ ತಿರುಗಾಡುವ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳು ಫಿರ್ಯಾದಿ ಮೇಲೆ ಕೈಗಳಿಂದ ಹಾಗು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 
ಮನುಷ್ಯ ಕಾಣೆ: 
    ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಶ್ರೀಮತಿ ಕೆ.ಎಂ. ರಾಹಿಬ ಎಂಬವರ ಪತಿ ಮುಬೀನ್ ಎಂಬವರು ದಿನಾಂಕ 1-12-2017 ರಂದು ಬೆಳಿಗ್ಗೆ ಪಿರಿಯಾಪಟ್ಟಣಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದೆ. 

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು: 
     ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಹ್ಯ ಗ್ರಾಮದ ಗೂಡುಗದ್ದೆ ನಿವಾಸಿ ಚೌರಿಯಪ್ಪ ಎಂಬವರು ದಿನಾಂಕ 16-4-2018 ರಂದು ಸಂಜೆ ಗೂಡುಗದ್ದೆ ಕಾವೇರಿ ಹೋಳೆಗೆ ಸ್ನಾನಮಾಡಲು ಹೋಗಿ ಆಕಸ್ಮಿಕ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಮೃತರ ಪತ್ನಿ ಶ್ರೀಮತಿ ರೋಸಿ ಅಲ್ಫೋನ್ಸ್ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವ್ಯಕ್ತಿಯ ಅಸ್ವಬಾವಿಕ ಸಾವು: 
     ಸೋಮವಾರಪೇಟೆ ಠಾಣಾ ಸರಹದ್ದಿನ ದೊಡ್ಡಬ್ಬೂರು ಗ್ರಾಮದ ನಿವಾಸಿ ಎ.ಡಿ. ಜೋಯಪ್ಪ ಎಂಬವರು ತಮ್ಮ ಮನೆಯ ಮುಂದುಗಡೆ ಮೃತಪಟ್ಟಿರುವುದು ಕಂಡು ಬಂದಿದ್ದು ಇದು ದಿನಾಂಕ 16-4-2018ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ 17-4-2018ರ ಬೆಳಗ್ಗೆ 8-00 ಗಂಟೆಯ ನಡುವೆ ನಡೆದಿದ್ದು ಈ ಸಂಬಂಧ ಮೃತರ ಪತ್ನಿ ಶ್ರೀಮತಿ ಪುಷ್ಪ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ: 
     ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಆಲೂರು ಸಿದ್ದಾಪುರ ಗ್ರಾಮದ ಹೆಚ್.ಸಿ. ರಾಜಯ್ಯ ಎಂಬವರು ಸುಮಾರು ಒಂದು ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ನೊಂದು ದಿನಾಂಕ 16-4-2018 ರಂದು ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡು ಅವರನ್ನು ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಜಿತ್ಸೆ ಫಲಕಾರಿಯಾಗದೆ ಸದರಿ ಹೆಚ್.ಸಿ. ರಾಜಯ್ಯನವರು ಮೃತಪಟ್ಟಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಪರಸ್ಪರ ಹಲ್ಲೆ, 2 ಪ್ರತ್ಯೇಕ ಪ್ರಕರಣ ದಾಖಲು: 
     ದಿನಾಂಕ 17-4-2018 ರಂದು ಸಂಜೆ 17-30 ಗಂಟೆಗೆ ಮಾದಾಪಟ್ಟಣ ಗ್ರಾಮದಲ್ಲಿ ಸರಕಾರದ ವತಿಯಿಂದ ಚರಂಡಿ ದುರಸ್ಥಿ ಕೆಲಸ ನಡೆಯುತ್ತಿದ್ದು ಗುತ್ತಿಗೆದಾರು ಮಾದಾಪಟ್ಟಣದ ನಿವಾಸಿಗಳಾದ ಶ್ರೀಮತಿ ಗೀತಾರವರಿಗೆ ಮನೆಯ ಮುಂದಿನ ಶೀಟುಗಳನ್ನು ತೆರವುಗೊಳಿಸಲು ತಿಳಿಸಿದ್ದು, ಅದಕ್ಕೆ ನಾಳೆ ಸದರಿ ಶೀಟ್ ಗಳನ್ನು ತೆರವುಗೊಳಿಸಿಕೊಡಲಾಗುವುದೆಂದು ತಿಳಿಸಿದ್ದು, ಈ ವಿಚಾರದಲ್ಲಿ ಎರಡು ಕಡೆಯವರಿಗೆ ಜಗಳವಾಗಿ ಪರಸ್ಪರ ಹಲ್ಲೆ ಮಾಡಿದ್ದು ಈ ಸಂಬಂಧ ಶ್ರೀಮತಿ ಗೀತಾರವರು ರಾಜು, ಮಂಜು ಭಾಗ್ಯರವರು ಹಲ್ಲೆ ನಡೆಸಿದ ಬಗ್ಗೆ ಹಾಗು ಶ್ರೀಮತಿ ಶೃತಿರವರು ಮಾದೇಶ, ಮಧು, ಪ್ರಮೋದ್, ಪ್ರವೀಣ, ಗೀತಾ, ಮಾಲಾ ಭವ್ಯರವರು ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ ಕುಶಾಲನಗರ ಪಟ್ಟಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tuesday, April 17, 2018

ರಸ್ತೆ ಅಪಘಾತ
                             ದಿನಾಂಕ 16/04/2018ರಂದು ಕುಶಾಲನಗರದ ಮಾದಾಪಟ್ನದ ನಿವಾಸಿ ಎಂ.ಎಂ.ಮಂಜು ಎಂಬವರು ಅವರ ರಿಕ್ಷಾದಲ್ಲಿ ಮೈಸೂರು ರಸ್ತೆಯ ಭವಾನಿ ಹಾರ್ಡ್‌ವೇರ್ ಮುಂಭಾಗದಲ್ಲಿ ಹೋಗುತ್ತಿರುವಾಗ ಅವರ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಂಜುರವರ ರಿಕ್ಷಾವನ್ನು ಹಿಂದಿಕ್ಕಿ ಮುಂದೆ ಹೋಗುತ್ತಿದ್ದ ಕೆಎ-25-ಯು-9377ರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರಿನ ಸವಾರ ಪ್ರಕಾಶ್‌ ಕುದ್ರೋಳಿ ಎಂಬವರಿಗೆ ಗಾಯಗಳಾಗಿದ್ದು ಡಿಕ್ಕಿಪಡಿಸಿದ ಕಾರು ಚಾಲಕ ಕಾರನ್ನು ನಿಲ್ಲಿಸದೆ ಹೊರಟು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, April 16, 2018

ಅಕ್ರಮ ಜೂಜಾಟ: 

     ಅಕ್ರಮ ಇಸ್ಪೀಟ್ ಜೂಜಾಟವಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 15-4-2018 ರಂದು ಬೆಳಗಿನ ಜಾವದಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಎಸ್.ಎನ್. ಜಯರಾಮ್ ರವರಿಗೆ ಬಂದ ಮಾಹಿತಿ ಮೇರೆಗೆ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೋನಿಯಲ್ಲಿರುವ ಆದಿ ಬ್ರಹ್ಮ ಮೊಗೇರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬಾಪುಟ್ಟಿ, ಲತೀಫ್ ಮತ್ತು ಇತರರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವನ್ನಾಗಿಟ್ಟು ಇಸ್ಪೀಟ್ ಆಟವಾಡುತ್ತಿದ್ದುದನ್ನು ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ವ್ಯಕ್ತಿಯ ಅಸಹಜ ಸಾವು ಪ್ರಕರಣ ದಾಖಲು: 

     ಸುಂಟಿಕೊಪ್ಪ ಠಾಣಾ ಸರಹದ್ದಿನ ಮಾದಾಪುರದ ಮಲ್ಲಿಕಾರ್ಜುನನಗರ ಕಾಲೋನಿ ನಿವಾಸಿ ಎಂ. ಸುಂದರ ಎಂಬವರ ಅಣ್ಣ ಬಾಬು ಎಂಬ ವ್ಯಕ್ತಿ ದಿನಾಂಕ 14-4-2018 ರಂದು ಹರದೂರು ಗ್ರಾಮದಲ್ಲಿ ನಡೆದ ಶ್ರೀ ಆದಿ ನಾಗಬ್ರಹ್ಮ ಮುನೇರ್ಕಳ ದೇವಸ್ಥಾನದ ಉತ್ಸವಕ್ಕೆ ಹೋಗಿದ್ದು, ಅವರು ಬೆಳಿಗ್ಗೆ ವರೆಗೂ ಮನೆಗೆ ಬಾರದೇ ಇದ್ದುದರಿಂದ ಮನೆಯವರು ಸದರಿಯವರನ್ನು ಹುಡುಕಿದಾಗ ಗರಗಂದೂರು ಗ್ರಾಮದ ಮಾದಾಪುರ ಕಡೆಗೆ ಹರಿಯುವ ಹೊಳೆಯ ಹತ್ತಿ ಕಾಡಿನಲ್ಲಿ ಸದರಿ ಬಾಬುರವರ ಮೃತದೇಹ ಪತ್ತೆಯಾಗಿದ್ದು, ಫಿರ್ಯಾದಿ ಎಂ. ಸುಂದರರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 


ವಿನಾಕಾರಣ ಹಲ್ಲೆ: 


    ಬೈಲುಕೊಪ್ಪ ಗ್ರಾಮದ ನಿವಾಸಿ ಪುಟ್ಟನಾಯಕ ಎಂಬವರು ದಿನಾಂಕ 15-4-2018 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಅವರ ಸ್ನೇಹಿತಯೋರ್ವರ ಮಗಳ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಊಟಕ್ಕೆ ಕುಳಿತ್ತಿದ್ದಾಗ ಅವರ ಸ್ನೇಹಿತರಾದ ಪ್ರಸನ್ನ ಹಾಗು ವಸಂತ ಎಂಬವರ ಮೇಲೆ ಆರೋಪಿಗಳಾದ ಅಕ್ಷಯ ಹಾಗು ಇತರರು ಸೇರಿ ಹಲ್ಲೆ ನಡೆಸುತ್ತಿದ್ದು ಅವರನ್ನು ತಡೆಯಲು ಫಿರ್ಯಾದ ಪುಟ್ಟನಾಯಕರವರು ಹೋದ ಸಂದರ್ಭದಲ್ಲಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹಲ್ಲೆ ನಡೆಸಿ ರಕ್ತ ಗಾಯಪಡಿಸಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 


ನಿರ್ಮಾಣ ಹಂತದ ಮನೆಯಿಂದ ಕಳವು: 


ಹೊಸದಾಗಿ ನಿರ್ಮಾಣ ಮಾಡುತ್ತಿದ್ದ ಮನೆಯಿಂದ ಮನೆ ನಿರ್ಮಿಸಲು ತಂದಿಟ್ಟ ಸಾಮಾಗ್ರಿಗಳನ್ನು ಕಳವು ಮಾಡಿದ ಘಟನೆ ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯಲ್ಲಿ ನಡೆದಿದೆ. ಎಸ್. ಸಲೀಂ ಅಬ್ಕರ್ ಎಂಬವರು ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯಲ್ಲಿ ಹೊಸ ಮನೆಯನ್ನು ಕಟ್ಟುತ್ತಿದ್ದು ಅದಕ್ಕೆ ಬೇಕಾದ ಸಾಮಾಗ್ರಿಗಳನ್ನು ಒಂದು ಕೋಣೆಯಲ್ಲಿ ಇಟ್ಟು ಬೀಗವನ್ನು ಹಾಕಿದ್ದು, 8 ದಿವಸದ ಹಿಂದ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿ ದಿನಾಂಕ 15-4-2018 ರಂದು ಬೆಳಗಿನ ಜಾವ 3-00 ಗಂಟೆಗೆ ಬಂದು ನೋಡಿದಾಗ ಸಾಮಾಗ್ರಿಗಳನ್ನು ಇಟ್ಟ ಕೋಣೆಯ ಬೀಗವನ್ನು ಯಾರೋ ಕಳ್ಳರು ಒಡೆದು ಸುಮಾರು 2.5 ಲಕ್ಷ ಮೌಲ್ಯದ ಹಾರ್ಡ್ ವೇರ್ ಮೆಟಿರಿಯಲ್ಸ್, ಡೋರ್ ಫಿಟ್ಟಿಂಗ್ಸ್, ಬಾತ್ ರೂಂ ಪಿಟ್ಟಿಂಗ್ಸ್, ಲೈಟ್ ಪಿಟ್ಟಿಂಗ್ಸ್ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, April 15, 2018

ಪಾದಚಾರಿಗೆ ಕಾರು ಡಿಕ್ಕಿ 
             ದಿನಾಂಕ 13-4-2018 ರಂದು ವಿರಾಜಪೇಟೆ ನಗರದ ಹರಿಕೇರಿಯ ನಿವಾಸಿಯಾದ ಮಂಜುನಾಥ ಎಂಬುವವರು ಕಾಫಿ ಲೋಡಿಂಗ್ ಕೆಲಸ ಮುಗಿಸಿ ರಾತ್ರಿ 10-30 ಗಂಟೆಗೆ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಮಾರುತಿ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಡೆದುಕೊಂಡು ಹೊಗುತ್ತಿದ್ದ ಮಂಜುನಾಥರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು, ಮಂಜುನಾಥರವರಿಗೆ ಗಾಯಗಳಾಗಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಹೊಡೆದಾಟದಿಂದ ಗಾಯಗೊಂಡಿದ್ದ ಮಹಿಳೆ ಸಾವು 
          ಹೊಡೆದಾಟದಿಂದ ಗಾಯಗೊಂಡಿದ್ದ ಮಹಿಳೆ ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೂಕಿನ ಶಿರಂಗಾಲ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 12-4-2018 ರಂದು ಶಿರಂಗಾಲ ಗ್ರಾಮದ ನಿವಾಸಿಯಾದ ಅಕ್ಕಮ್ಮನವರಿಗೆ ಪಕ್ಕದ ಮನೆಯವರಾದ ಆಶಾ, ರೇಷ್ಮ ಮತ್ತು ನಾಗೇಶರವರು ಸೇರಿಕೊಂಡು ಹಳೇ ದ್ವೇಷದಿಂದ ಕಲ್ಲಿನಿಂದ ತಲೆ ಮತ್ತು ಶರೀರಕ್ಕೆ ಹೊಡೆದು ಗಾಯಗೊಳಿಸಿದ್ದು, ಗಾಯಗೊಂಡಿದ್ದ ಅಕ್ಕಮ್ಮನವರು ಚಿಕಿತ್ಸೆ ಪಡೆಯದೇ ಮನೆಯಲ್ಲೇ ಇದ್ದವರು ದಿನಾಂಕ 13-4-2018 ರಂದು ಮೃತಪಟ್ಟಿರುವುದಾಗಿ ಮಗ ರಘುರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಹಲ್ಲೆ ಪ್ರಕರಣ 
             ದಿನಾಂಕ 11-4-2018 ರಂದು ಸೋಮವಾರಪೆಟೆ ತಾಲೂಕಿನ ಯಲಕನೂರು ಗ್ರಾಮದ ನಿವಾಸಿಯಾದ ಗೀತಾರವರು ಪತಿ ಅಂತುರವರು ತಂದ ಕೋಳಿ ಮಾಂಸವನ್ನು ಸಾರು ಮಾಡಲಿಲ್ಲವೆಂದು ಜಗಳ ತೆಗೆದು ಕತ್ತಿಯಿಂದ ಕಡಿದು ಗಾಯಪಡಿಸಿದ್ದು ಈ ಬಗ್ಗೆ ದಿನಾಂಕ 14-4-2018 ರಂದು ಗೀತಾರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಹಲ್ಲೆ ಪ್ರಕರಣ 
               ದಿನಾಂಕ 14-4-2018 ರಂದು ಗೋಣಿಕೊಪ್ಪ ನಗರದ ಬೈಪಾಸ್ ರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡಿರುವ ರೀತುರಾಜ್ ರವರ ಅಂಗಡಿಗೆ ಈ ಹಿಂದೆ ಅವರ ಕಾರಿನಲ್ಲಿ ಚಾಲಕನಾಗಿದ್ದ ಸಾಯಿಕುಮಾರ್ ಎಂಬುವವರು ಪಿಕ್ಅಪ್ ಜೀಪಿನಲ್ಲಿ ನಾಲ್ಕು ಜನರೊಂದಿಗೆ ಹೋಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, April 14, 2018

ಪಾದಚಾರಿಗೆ ಬೈಕ್ ಡಿಕ್ಕಿ
                    ದಿನಾಂಕ 12/04/2018ರಂದು ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ ಕೀಜರ್ ಅಹಮದ್ ಷರೀಫ್ ಎಂಬವರು ನಗರದ ದಾಸವಾಳ ರಸ್ತೆಯ ಬ್ರಹ್ಮಕುಮಾರಿ ಈಶ್ವರೀಯ ಕೇಂದ್ರದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ-12-ಇ-8744ರ ಮೋಟಾರು ಸೈಕಲನ್ನು ಅದರ ಚಾಲಕ ಶರಣು ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೀಜರ್‌ ಅಹಮದ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಕೀಜರ್‌ ಅಹಮದ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಲಾರಿಗೆ ಕಾರು ಡಿಕ್ಕಿ
                  ದಿನಾಂಕ 13/04/2018ರಂದು ಬೆಂಗಳೂರು ನಿವಾಸಿ ಶಿವೇಗೌಡ ಎಂಬವರು ಕೆಎ-01-ಎಬಿ-9302ರ ಲಾರಿಯನ್ನು ಚಾಲಿಸಿಕೊಂಡು ಕುಶಾಲನಗರ ಕಡೆಯಿಂದ ಮಡಿಕೇರಿಗೆ ಬರುತ್ತಿರುವಾಗ ಮಡಿಕೇರಿಯ ಅರಣ್ಯ ಭವನದ ಬಳಿ ಎದುರಿನಿಂದ ಕೆಎ-41-ಎಂ-8076ರ ಕಾರನ್ನು ಅದರ ಚಾಲಕಿ ಕವಿತಾ ಎಂಬಾಕೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಿವೇಗೌಡರವರ ಕಂಟೈನರ್ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಚಾಲಕಿ ಕವಿತಾ ಸೇರಿದಂತೆ ಕಾರಿನಲ್ಲಿದ್ದ ಅಶ್ವಥ್ ಮತ್ತು ಅಖಿಲಾ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್ಸಿಗೆ ಲಾರಿ ಡಿಕ್ಕಿ
                  ದಿನಾಂಕ 13/04/2018ರಂದು ಮಡಿಕೇರಿಯ ಕೆಎಸ್‌ಆರ್‌ಟಿಸಿ ಡಿಪೋದ ಚಾಲಕ ದೇವಯ್ಯ ಎಂಬವರು ಕೆಎ-09-ಎಫ್‌-4770ರ ಬಸ್ಸಿನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಮಂಗಳೂರಿನಿಂದ ಮಡಿಕೇರಿಗೆ ಬರುತ್ತಿರುವಾಗ ಕಾಟಕೇರಿ ಬಳಿ ಎದುರಿನಿಂದ ಕೆಎ-20-ಬಿ-1991ರ ಟ್ಯಾಂಕರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ದೇವಯ್ಯನವರು ಚಾಲಿಸುತ್ತಿದ್ದ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                     ದಿನಾಂಕ 12/04/2018ರ ರಾತ್ರಿ ವೇಳೆ ಸೋಮವಾರಪೇಟೆ ಬಳಿಯ ಮಾದಾಪುರದ ಜಂಬೂರು ಬಾಣೆ ನಿವಾಸಿ ಅರುಣ್ ಕುಮಾರ್ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಅರುಣ್ ಕುಮಾರನು ಯಾವುದೋ ಕ್ಷುಲ್ಲಕ ಕಾರಣಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮೋಟಾರು ಸೈಕಲ್ ಕಳವು
               ಕುಶಾಲನಗರ ಪಟ್ಟಣದ ಸೋಮೇಶ್ವರ ರಸ್ತೆಯ ನಿವಾಸಿ ಮೂರ್ತಿ ಎನ್‌.ಎಸ್.ಎಂಬವರು ದಿನಾಂಕ 12/04/2018ರಂದು ಅವರಿಗೆ ಸೇರಿದ ಕೆಎ-12-ಎಂ-2447ರ ಹೀರೋ ಹೋಂಡಾ ಮೋಟಾರು  ಸೈಕಲನ್ನು ಮನೆಯ ಮುಂದೆ ನಿಲ್ಲಿಸಿ ಹೊಳೆ ನರಸೀಪುರಕ್ಕೆ ಹೋಗಿದ್ದು ದಿನಾಂಕ 13/04/2018ರಂದು ಸಂಜೆ ಮರಳಿ ಬಂದು ನೋಡುವಾಗ ಬೈಕನ್ನು ಯಾರೋ ಕಳ್ಳರು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, April 13, 2018

ಮಹಿಳೆ ಆತ್ಮಹತ್ಯೆ
                    ದಿನಾಂಕ 11/04/2018ರಂದು ವಿರಾಜಪೇಟೆ ಬಳಿಯ ವಿ.ಬಾಡಗ ನಿವಾಸಿ ಪಣಿ ಎರವರ ಪಾಲಿ ಎಂಬವರು ಅವರ ಮಗ ಮಂಜುರವರು ಅಕಾಲಿಕವಾಗಿ ಮರಣ ಹೊಂದಿದ ವಿಚಾರವಾಗಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮರದಿಂದ ಬಿದ್ದು ವ್ಯಕ್ತಿ ಸಾವು
                   ದಿನಾಂಕ 20/03/2018ರಂದು ಅಭ್ಯತ್‌ಮಂಗಲ ಬಳಿಯ ಗ್ರೀನ್‌ ಫೀಲ್ಡ್ ತೋಟದ ಕಾರ್ಮಿಕ ಶೇಖರ್ ಎಂಬವರು ಮರದಲ್ಲಿ ಕರಿ ಮೆಣಸು ಕುಯ್ಯುತ್ತಿರುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ದಿನಾಂಕ 12/04/2018ರಂದು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದು,  ತೋಟದಲ್ಲಿ ಮರ ಹತ್ತಿ ಕೆಲಸ ಮಾಡುತ್ತಿರುವಾಗ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಮಾಡದೆ ತೋಟದ ಆಡಳಿತ ಮಂಡಳಿಯ ಪ್ರಮೋದ್ ಕುರಿಯನ್ ಮತ್ತು ಜಾರ್ಜ್‌ ಎಂಬವರುಗಳು ನಿರ್ಲಕ್ಷ್ಯತೆ ವಹಿಸಿದ್ದರೆಂದು ಆರೋಪಿಸಿ ನೀಡಲಾದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಂದೂಕು ಕಳವು
                        ದಿನಾಂಕ 10/04/2018ರಂದು ನಾಪೋಕ್ಲು ಬಳಿಯ ನೆಲಜಿ ನಿವಾಸಿ ಮಣವಟ್ಟಿರ ಕುಶಾಲಪ್ಪ ಎಂಬವರು ಕೆಲಸದ ನಿಮಿತ್ತ ಮೈಸೂರಿಗೆ ಹೋಗಿ ದಿನಾಂಕ 12/04/2018ರಂದು ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಮನೆಯ ಮಲಗುವ ಕೋಣೆಯಲ್ಲಿದ್ದ ಸುಮಾರು ರೂ.19,000/- ಬೆಲೆ ಬಾಳುವ ಒಂದು ಎಸ್‌ಬಿಬಿಎಲ್‌ ಬಂದೂಕನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, April 11, 2018


ಕಳ್ಳತನ ಮತ್ತು ಸುಲಿಗೆ ಪ್ರಕರಣ ಪತ್ತೆ:

      ಕುಶಾಲನಗರ ಪಟ್ಟಣದಲ್ಲಿ ರಾತ್ರಿಯ ವೇಳೆ ಸುಲಿಗೆ ಮತ್ತು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಇವರು ಕುಶಾಲನಗರದಲ್ಲಿ ತಂಡಗಳನ್ನು ರಚಿಸಿ ವಿಶೇಷ ರಾತ್ರಿ ಗಸ್ತು ನಡೆಸುವ ಬಗ್ಗೆ ಈ ತಂಡಗಳಿಗೆ ತಿಳುವಳಿಕೆಯನ್ನು ನೀಡಿದ್ದು, ದಿನಾಂಕ: 10.04.2018 ರಂದು ರಾತ್ರಿ ಕುಶಾಲನಗರ ಟೌನ್ ಠಾಣೆಯ ಪಿಎಸ್ಐ ಶ್ರೀ. ಜಗದೀಶ್ ಪಿ. ರವರು ಸಿಬ್ಬಂದಿಯವರುಗಳ ಜೊತೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ ವಿಶೇಷ ರಾತ್ರಿ ಗಸ್ತಿನಲ್ಲಿರುವಾಗ್ಗೆ, 10/11.04.2018 ರ 02.30 ಎ.ಎಂ.ಗೆ ಕುಶಾಲನಗರ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳು ಒಂದು ನೋಂದಣಿ ಸಂಖ್ಯೆ ಇಲ್ಲದ ಮೋಟಾರ್ ಸೈಕಲ್ನ್ನು ನಿಲ್ಲಿಸಿಕೊಂಡು ಇದ್ದು, ಸದರಿಯವರುಗಳು ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಸದರಿಯವರ ಹೆಸರುಗಳು ಈ ಕೆಳಕಂಡಂತೆ ಇರುತ್ತದೆ.

1. ನವೀನ್ ಎನ್.ಎಲ್. @ ಅಪ್ಪುಣು, ತಂದೆ: ಲಕ್ಷ್ಮಣ @ ಚಾಮಿ, ಪ್ರಾಯ: 20 ವರ್ಷ, ಹಂದಿ ಸಾಕಾಣಿಕೆ, ವಾಸ: ಗೊಂದಿಬಸನವನಹಳ್ಳಿ ಗ್ರಾಮ, ಕುಶಾಲನಗರ.

2. ಸುಬ್ರಮಣಿ @ ಸುಬ್ಬು, ತಂದೆ: ಲಕ್ಷ್ಮಣ @ ಚಾಮಿ, ಪ್ರಾಯ: 25 ವರ್ಷ, ಸೈನಿಕ, ವಾಸ: ಗೊಂದಿಬಸನವನಹಳ್ಳಿ ಗ್ರಾಮ, ಕುಶಾಲನಗರ.

ಸದರಿ ಆರೋಪಿಗಳು ವಿಚಾರಣಾ ವೇಳೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ 1 ಸುಲಿಗೆ ಮತ್ತು 1 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಕುಶಾಲನಗರ ಟೌನ್ ಠಾಣೆ ಮೊ.ಸಂ. 68/2018 ಕಲಂ 379 ಐ.ಪಿ.ಸಿ. ಮತ್ತು ಕುಶಾಲನಗರ ಟೌನ್ ಠಾಣೆ ಮೊ.ಸಂ. 75/2018 ಕಲಂ 392 ಐ.ಪಿ.ಸಿ. ಪ್ರಕರಣಗಳು ದಾಖಲಾಗಿರುತ್ತದೆ.

ಆರೋಪಿ ಸುಬ್ರಮಣಿ @ ಸುಬ್ಬು ಈತನು ಭಾರತೀಯ ಸೈನ್ಯದಲ್ಲಿ ಕಳೆದ 4 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, 2017 ನೇ ಸಾಲಿನ ಡಿಸೆಂಬರ್ ತಿಂಗಳಿನಲ್ಲಿ ರಜೆಯಲ್ಲಿ ಊರಿಗೆ ಬಂದವನು ವಾಪಾಸ್ಸು ಕರ್ತವ್ಯಕ್ಕೆ ತೆರಳಿರುವುದಿಲ್ಲ ಎಂದು ತಿಳಿದುಬಂದಿರುತ್ತದೆ.

ಈ ಪ್ರಕರಣದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀನಿವಾಸಮೂರ್ತಿ ಬಿ.ಎಲ್., ಡಿವೈಎಸ್ಪಿ ಸೋಮವಾರಪೇಟೆ ಉಪವಿಭಾಗ ಇವರ ನೇತೃತ್ವದಲ್ಲಿ, ಕ್ಯಾತೇಗೌಡ, ಸಿಪಿಐ ಕುಶಾಲನಗರ, ಜಗದೀಶ್ ಪಿ., ಪಿಎಸ್ಐ, ಕುಶಾಲನಗರ ನಗರ ಪೊಲೀಸ್ ಠಾಣೆ, ನವೀನ್ಗೌಡ, ಪಿಎಸ್ಐ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಕುಶಾಲನಗರದ ವಿಶೇಷ ಅಪರಾಧ ಪತ್ತೆ ತಂಡದ ಸುರೇಶ್ ಪಿ.ಬಿ., ಮುಸ್ತಾಫ ಪಿ.ಎಂ., ಸುಧೀಶ್ ಕುಮಾರ್ ಕೆ.ಎಸ್., ಉದಯಕುಮಾರ್, ಸಂಪತ್ ರೈ, ದಯಾನಂದ, ಜೋಸೆಫ್, ಲೋಕೇಶ್, ಚಾಲಕರಾದ ಪ್ರವೀಣ್ ಮತ್ತು ಗಣೇಶ್ ಹಾಗೂ ಸೈಬರ್ ಸೆಲ್ ನ ರಾಜೇಶ್ ಹಾಗೂ ಗಿರೀಶ್ ರವರು ಸದರಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.
ಸದರಿ ಆರೋಪಿಗಳಿಂದ ರೂ. 4,50,000/- ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಿವರ ಈ ಕೆಳಕಂಡಂತಿರುತ್ತದೆ.
1) 130 ಗ್ರಾಂ ಚಿನ್ನಾಭರಣ ಅಂದಾಜು ಮೌಲ್ಯ ರೂ. 3,90,000/-
2) 2 ಮೊಬೈಲ್ ಫೋನ್ಗಳು ಅಂದಾಜು ವೌಲ್ಯ ರೂ 20,000/-
3) ಒಂದು ಮೋಟಾರ್ ಸೈಕಲ್, ಅಂದಾಜು ಮೌಲ್ಯ ರೂ. 40,000/-
ಮೇಲ್ಕಂಡ ಆರೋಪಿಗಳನ್ನು ಪತ್ತೆಹಚ್ಚಿ ಸುಲಿಗೆ ಮತ್ತು ಕಳವು ಪ್ರಕರಣಗಳನ್ನು ಪತ್ತೆಹಚ್ಚಿದ ಮೇಲ್ಕಂಡ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ಮನುಷ್ಯ ಕಾಣೆ 
             ವಿರಾಜಪೇಟೆ ತಾಲೂಕಿನ ಬಿಳುಗುಂದ ಗ್ರಾಮದ ನಿವಾಸಿಯಾದ ಕುಟ್ಟಪ್ಪ ಎಂಬುವವರು ದಿನಾಂಕ 6-4-2018 ರಂದು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಗೆ ಕೆಲಸಕ್ಕೆ ಸೇರಲು ಹೋಗುತ್ತಿರುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ಕಾಣೆಯಾಗಿದ್ದು ಈ ಬಗ್ಗೆ ಕುಟ್ಟಪ್ಪನವರ ಅಣ್ಣ ಬಿದ್ದಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವೃದ್ದ ವ್ಯಕ್ತಿಯ ಸಾವು 
           ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿಯಲ್ಲಿರುವ ಬಸ್ಸು ತಂಗುದಾಣದಲ್ಲಿ ಸುಮಾರು 70 ಪ್ರಾಯದ ಸುಂದರ ಎಂಬುವವರು ಅನಾರೋಗ್ಯದಂದ ಮಲಗಿದ್ದವರು ದಿನಾಂಕ 10-4-2018 ರಂದು ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಬೈಕಿಗೆ ಪಿಕ್ಅಪ್ ಜೀಪು ಡಿಕ್ಕಿ 
           ಬೈಕಿಗೆ ಪಿಕ್ಅಪ್ ಜೀಪು ಡಿಕ್ಕಿಯಾಗಿ ಬೈಕಿನಲ್ಲಿದ್ದವರಿಗೆ ಗಾಯವಾದ ಘಟನೆ ಸೋಮವಾರಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 10-4-2018 ರಂದು ಮನೋಜ್ ಕುಮಾರ್ ಎಂಬುವವರು ತನ್ನ ಮಗ ಅಭಿಷೇಕ್ ನೊಂದಿಗೆ ಮೋಟಾರು ಸೈಕಲಿನಲ್ಲಿ ಸೋಮವಾರಪೇಟೆ ನಗರಕ್ಕೆ ಹೋಗುತ್ತಿರುವಾಗ ಶಿವಪುರ ಗ್ರಾಮದ ಕಾವಾಡಿಕಟ್ಟೆ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಪಿಕ್ ಅಪ್ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಇಬ್ಬರು ಕೆಳಗೆ ಬಿದ್ದು ಗಾಯಗಳಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  

ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನ 
                 ದಿನಾಂಕ 10-4-2018 ರಂದು ತಾಳತ್ ಮನೆಯ ನಿವಾಸಿ ಅಜಿತ್ ಕುಮಾರ್ ಎಂಬುವವರು ಮಡಿಕೇರಿ ನಗರದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪ್ರಮೋದ್ ಮತ್ತು ಇತರರು ದಾರಿ ತಡೆದು ಹಲ್ಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಅಜಿತ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಪಘಾತ ಪ್ರಕರಣ 
              ದಿನಾಂಕ 8-4-2018 ರಂದು ಸುಳ್ಯ ತಾಲೂಕಿನ ಕೂತುಕುಂಜ ಗ್ರಾಮದ ನಿವಾಸಿಯಾದ ದೇವಪ್ಪನಾಯ್ಕ ಎಂಬುವವರು ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಸುಳ್ಯಕ್ಕೆ ಕಾರಿನಲ್ಲಿ ಸಂಸಾರದವರೊಂದಿಗೆ ಹೋಗುತ್ತಿರುವಾಗ ಸಂಪಾಜೆ ಗ್ರಾಮದ ದೇವರಕೊಲ್ಲಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬರುತ್ತಿದ್ದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ದೇವಪ್ಪನಾಯ್ಕ, ಅವರ ಪತ್ನಿ ಮತ್ತು ಮಗನಿಗೆ ಗಾಯವಾಗಿದ್ದು, ಸದರಿಯವರು ಮಂಗಳೂರಿನ ಎ. ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, April 10, 2018

ಅಕ್ರಮ ಮರಳು ಸಾಗಾಟ ಪತ್ತೆ
                    ದಿನಾಂಕ 09/04/2018ರಂದು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಹೆಚ್‌.ಎನ್.ಸಿದ್ದಯ್ಯನವರು ನಾಪೋಕ್ಲು ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಚೆರಿಯಪರಂಬು ಬಳಿ ಕಾವೇರಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದಾಗ ಅಲ್ಲಿ ಸುಮಾರು 4-5 ಜನರು ಕಾವೇರಿ ನದಿಯಿಂದ ಮರಳನ್ನು ತೆಗೆದು ಕೆಎಲ್‌-12-ಸಿ-7200ರ ಲಾರಿಗೆ ತುಂಬಿಸುತ್ತಿದ್ದುದು ಕಂಡು ಬಂದಿದ್ದು ಪೊಲೀಸರನ್ನು ಕಂಡ ಕೂಡಲೇ ನಾಲ್ವರೂ ಅಲ್ಲಿಂದ ಓಡಿ ಹೋಗಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                      ದಿನಾಂಕ 08/04/2018ರಂದು ಸಿದ್ದಾಪುರ ಬಳಿಯ ಟಾಟಾ ಕಾಫಿ ತೋಟದ ಎಮ್ಮೆಗುಂಡಿ ವಿಭಾಗದ ತೋಟದಲ್ಲಿ ಕಾರ್ಮಿಕ ಬಾಬು ಲಾಲ್ ಬಸು ಎಂಬವರು ಮನೆಯಲ್ಲಿದ್ದಾಗ ನೆರೆಮನೆಯ ಸಂಜಯ್ ಹಲ್‌ದಾರ್ ಎಂಬವರೊಡನೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಸಂಜಯ್‌ ಹಲ್‌ದಾರರು ಬಾಬು ಲಾಲ್ ಬಸುರವರ ಮೇಲೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ
                  ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿ ಸ್ವಾಮಿಗೌಡ ಎಂಬವರು ಹಾಸನ ಜಿಲ್ಲೆಯ ಹಾಲುಮತ ಕುರುಬ ಜನಾಂಗಕ್ಕೆ ಸೇರಿದ್ದು ಆದರೆ ಅವರು ಕೊಡಗು ಜಿಲ್ಲೆಯ ಪರಿಶಿಷ್ಟ ಪಂಗಡದ ಕುರುಬ ಜನಾಂಗಕ್ಕೆ ಸೇರಿರುವ ಬಗ್ಗೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯತ್ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಉದ್ಯೋಗವನ್ನು ಪಡೆದುಕೊಂಡು ಸರ್ಕಾರಕ್ಕೆ ವಂಚಿಸಿರುವುದಾಗಿ ನೀಡಲಾದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಿಕ್ಷಾಕ್ಕೆ ಬೆಂಕಿ
                  ದಿನಾಂಕ 08/04/2018ರಂದು ಚೆಟ್ಟಳ್ಳಿ ಬಳಿಯ ಚೇರಳ ಶ್ರೀಮಂಗಲ ನಿವಾಸಿ ಮಹಮದ್ ಅಶೀಫ್ ಎಂಬವರ ಕೆಎ-12-ಎ-8682ಕ್ಕೆ ರಾತ್ರಿ ವೇಳೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕೊಲೆ ಬೆದರಿಕೆ ಪ್ರಕರಣ
                 ದಿನಾಂಕ 09/04/2018ರಂದು ನಾಪೋಕ್ಲು ಬಳಿಯ ನರಿಯಂದಡ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಚೇನಂಡ ಗಿರೀಶ್‌ ಪೂಣಚ್ಚ ಎಂಬವರು ಮದ್ಯಾಹ್ನದ ಬಳಿಕ ಕೆಲಸದ ನಿಮಿತ್ತ ಶಾಲೆಗೆ ಹೋದಾಗ ಶಾಲೆಯ ಗುಮಾಸ್ತರಾದ ಜೀತು ಕುಮಾರ್ ಎಂಬವರು ಗಿರೀಶ್‌ ಪೂಣಚ್ಚನವರನ್ನು ತಡೆದು ನಿಲ್ಲಿಸಿ ಅಶ್ಲೀಲವಾಗಿ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದ್ದು.ಅದೇ ರೀತಿ   ಗಿರೀಶ್‌ ಪೂಣಚ್ಚ ಹಾಗೂ ಸುರೇಶ್‌ ನಾಣಯ್ಯ ಎಂಬವರಿಬ್ಬರು ಸೇರಿಕೊಂಡು ಶಾಲೆಯ ಗುಮಾಸ್ತ ಜೀತು ಕುಮಾರ್ ಮತ್ತು ಮುಖ್ಯೋಪಾಧ್ಯಾಯ ಮಾನೋಹರ ನಾಯ್ಕ್ ಎಂಬವರಿಗೆ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುವುದಾಗಿ ನೀಡಲಾದ ಎರಡು ಪ್ರತ್ಯೇಕ ದೂರುಗಳು ಸೇರಿದಂತೆ ಒಟ್ಟು ಮೂರು ದೂರುಗಳನ್ನು ನಾಪೋಕ್ಲು ಪೊಲೀಸರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                 ದಿನಾಂಕ 09/04/2018ರಂದು ಸೋಮವಾರಪೇಟೆ ಬಳಿಯ ಮಸಗೋಡು ನಿವಾಸಿ ಜಯಮ್ಮ ಎಂಬವರಿಗೆ ಅವರ ಪತಿ ಶಿವರಾಜ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿಗೆ ಬಿದ್ದು ಯುವಕ ಸಾವು
               ದಿನಾಂಕ 09/04/2018ರಂದು ಸೋಮವಾರಪೇಟೆ ಬಳಿಯ ಕೂಗೆಕೋಡಿ ನಿವಾಸಿಗಳಾದ ಕಿರಣ್ ಕುಮಾರ್, ಸಂತೋಷ್, ಅವಿನಾಶ್, ಸಂದರ್ಶ್‌, ಅಭಿಷೇಕ್ ಮುಂತಾದವರು ಮಲ್ಲಳ್ಳಿ ಜಲಪಾತಕ್ಕೆ ತೆರಳಿದ್ದು ಅಲ್ಲಿ ನೀರಿನಲ್ಲಿ ಆಟವಾಡುತ್ತಿದ್ದಾಗ ಅಭಿಷೇಕ್ ಎಂಬಾತನು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಾಹನ ಅಪಘಾತ
                  ದಿನಾಂಕ 09/04/2018ರಂದು ಹಾಸನದ ರಾಮನಾಥಪುರ ನಿವಾಸಿ ಚೇತನ್ ಎಂಬಾತನು ಸ್ನೇಹಿತ ಗಂಗಾಧರ ಎಂಬವರೊಂದಿಗೆ ಕೆಎ-12-ಆರ್-0831ರ ಬೈಕಿನಲ್ಲಿ ಕುಶಾಲನಗರದಿಂದ ಹಾಸನಕ್ಕೆ ಹೋಗುತ್ತಿರುವಾಗ ಕುಶಾಲನಗರದ ಕುಶಾಲ್ ಲಾಡ್ಜ್ ಬಳಿ ಎದುರಿನಿಂದ ಕೆಎಲ್‌-05-ಎಎಲ್-7761ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚೇತನ್‌ರವರು ಪ್ರಯಾಣಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಚೇತನ್ ಹಾಗೂ ಅವರ ಸ್ನೇಹಿತ ಗಂಗಾಧರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, April 9, 2018

ನಿಶಾಮತ್ತ ವ್ಯಕ್ತಿ ಸಾವು:

     ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ನಿವಾಸಿ ಕಾಸ್ಪಾಡಿ ಟಿ. ರವೀಂದ್ರ ಎಂಬವರ ತಮ್ಮ 55 ವರ್ಷ ಪ್ರಾಯದ ಗಿರಿಯಪ್ಪ ಎಂಬವರು ಸುಮಾರು 10 ವರ್ಷಗಳಿಂದ ಸರಿಯಾಗಿ ಮನೆಗೆ ಹೋಗದೆ ವಿಪರೀತ ಮದ್ಯಪಾನ ಮಾಡುತ್ತಿದ್ದು ದಿನಾಂಕ 6-4-2018 ರಂದು ಮಡಿಕೇರಿ ನಗರಕ್ಕೆ ಬಂದಿದ್ದು ನಂತರ ಮನೆಗೆ ಹೋಗದೇ ದಿನಾಂಕ 7-4-2018 ರಂದು ಮಡಿಕೇರಿ ನಗರದ ಖಾಸಗಿ ಬಸ್ಸು ನಿಲ್ದಾಣದಲ್ಲಿ ವಿಪರೀತ ಮದ್ಯಪಾನ ಮಾಡಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು 108 ಆ್ಯಂಬುಲೆನ್ಸ್ ನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗಿ ಸದರಿ ವ್ಯಕ್ತಿ ದಿನಾಂಕ 7-4-2018 ರಂದು ಮದ್ಯರಾತ್ರಿ ಮೃತಪಟ್ಟಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರುಗಳ ಮುಖಾಮುಖಿ ಡಿಕ್ಕಿ:

     ದಿನಾಂಕ 8-4-2018 ರಂದು ಬೆಂಗಳೂರಿನ ವಿಜಯನಗರದ ನಿವಾಸಿಯಾದ ಡಾ: ವಿಶ್ವನಾಥ್ ಶರ್ಮಾ ರವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೆಎ-04 ಎಂಜೆ-2458 ರ ಕಾರಿನಲ್ಲಿ ಪುತ್ತೂರಿನಿಂದ ಮಡಿಕೇರಿ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದಾಗ ಮಡಿಕೇರಿ ಬಳಿ ಮಂಗಳುರು ರಸ್ತೆಯ ಕಾವೇರಿ ಹೋಂಸ್ಟೇ ಬಳಿ ಸಮಯ 5-20 ಪಿ.ಎಂ. ಗೆ ತಲುಪಿದಾಗ ಮಡಿಕೇರಿ ನಗರದ ಕಡೆಯಿಂದ ಕೆಎಲ್-14-ಟಿ1404ರ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಸಿಕೊಂಡು ಬಂದು ಫಿರ್ಯಾದಿ ಡಾಳ ವಿಶ್ವನಾಥ್ ರವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ವಿಶ್ವನಾಥ ಹಾಗು ಅವರ ಪತ್ನಿಗೆ ರಕ್ತ ಗಾಯಗಳಾಗಿದ್ದು ಎರಡೂ ಕಾರುಗಳು ಜಖಂ ಗೊಂಡಿದ್ದು, ಈ ಸಂಬಂಧ ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಹೃಧಯಾಘಾತದಿಂದ ರಿಕ್ಷಾ ಚಾಲಕನ ಸಾವು:

     ಕುಶಾಲನಗರದ ಗೊಂದಿಬಸವನಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಮೀನಾಕ್ಷಿ ಎಂಬವರ ಪತಿ 40 ವರ್ಷ ಪ್ರಾಯದ ಪ್ರಕಾಶ ರವರು ಆಟೋ ರಿಕ್ಷಾ ಇಟ್ಟುಕೊಂಡು ಜೀವನಸಾಗಿಸುತ್ತಿದ್ದು ದಿನಾಂಕ 7-4-2018 ರಂದು ಸದರಿಯವರು ಕುಶಾಲನಗರದ ಎ.ಪಿ.ಸಿ.ಎಂ.ಎಸ್ . ಬಳಿ ಆಟೋ ರಿಕ್ಷಾದಲ್ಲಿ ಹೃಧಯಾಘಾತದಿಂದ ಮೃತಪಟ್ಟಿದ್ದು, ಈ ಸಂಬಂಧ ಶ್ರೀಮತಿ ಮೀನಾಕ್ಷಿರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

Sunday, April 8, 2018

ಲಾರಿಗೆ ಕಾರು ಡಿಕ್ಕಿ 
                 ಲಾರಿಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದವರಿಗೆ ಗಾಯವಾದ ಘಟನೆ ಮಡಿಕೇರಿ ನಗರದಲ್ಲಿ ವರದಿಯಾಗಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಿಂಗಪ್ಪ ಎಂಬುವವರು ದಿನಾಂಕ 7-4-2018 ರಂದು ಲಾರಿಯನ್ನು ಚಾಲನೆ ಮಾಡಿಕೊಂಡು ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಶಿರಾಗೆ ಹೋಗುತ್ತಿರುವಾಗ ಮಡಿಕೇರಿ ನಗರದ ಹತ್ತಿರ ತಲುಪುವಾಗ ಎದುರುಗಡೆಯಿಂದ ಕಾರನ್ನು ಅದರ ಚಾಲಕ ಗಣೇಶ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದ್ದು, ಈ ಬಗ್ಗೆ ಲಾರಿ ಚಾಲಕ ನಿಂಗಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಹಲ್ಲೆ ಪ್ರಕರಣ 
                ದಿನಾಂಕ 7-4-2018 ರಂದು ವಿರಾಜಪೇಟೆ ತಾಲೂಕಿನ ಬಿ ಶೆಟ್ಟಿಗೇರಿ ಗ್ರಾಮದ ನಿವಾಸಿಯಾದ ಕಾವ್ಯರವರು ತನ್ನ ತಂದೆಯೊಂದಿಗೆ ಗೋಣಿಕೊಪ್ಪ ನಗರದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪೊನ್ನಂಪೇಟೆಯ ನಿವಾಸಿಯಾದ ದೀಪು ಎಂಬುವವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಹಲ್ಲೆ ಮಾಡಿದ್ದು, ಈ ಬಗ್ಗೆ ಕಾವ್ಯರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಪಾದಚಾರಿಗೆ ವಾಹನ ಡಿಕ್ಕಿ 
           ದಿನಾಂಕ 7-4-2018 ರಂದು ಸೋಮವಾರಪೇಟೆ ನಗರದ ನಿವಾಸಿ ಕಣ್ಣಮ್ಮ ಎಂಬುವವರು ಮನೆಯಿಂದ ನಡೆದುಕೊಂಡು ರಸ್ತೆಯ ಬದಿಯಲ್ಲಿ ಹೋಗುತ್ತಿರುವಾಗ ಅಜಿತ್ ಎಂಬುವವರು ಪಿಕ್ ಅಪ್ ಜೀಪನ್ನು ಅಜಾಗರೂಕತೆಯಿಂದ ಹಿಂದಕ್ಕೆ ಚಾಲನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ಕಣ್ಣಮ್ಮನವರಿಗೆ ಡಿಕ್ಕಿಪಡಿಸಿದ ಪರಿಣಾಮ ಕಣ್ಣಮ್ಮನವರ ಕಾಲಿಗೆ, ಭುಜಕ್ಕೆ ಮತ್ತು ತಲೆಗೆ ಗಾಯವಾಗಿದ್ದು ಈ ಬಗ್ಗೆ ಕಣ್ಣಮ್ಮನವರ ಮಗಳು ಲಕ್ಷ್ಮಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 



Saturday, April 7, 2018

ವಾಹನ ಅಪಘಾತ 
         ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಚಾಲಕ ಗಾಯಗೊಂಡ ಘಟನೆ ಕುಶಾಲನಗರದ ಆನೆಕಾಡು ಎಂಬಲ್ಲಿ ವರದಿಯಾಗಿದೆ. ದಿನಾಂಕ 05-04-2018 ರಂದು ಕೆದಕಲ್ ಗ್ರಾಮದ ನಿವಾಸಿಯಾದ ಕಿರಣರವರು ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಯಾವುದೋ ವಾಹನ ಡಿಕ್ಕಿಯಾಗಿ ಕಿರಣರವರ ತಲೆಗೆ ತೀವ್ರ ತರಹದ ಗಾಯವಾಗಿ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಬಗ್ಗೆ ಕಮಲಾಸನ್ ಎಂಬುವವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಟ್ರ್ಯಾಕ್ಟರ್ ಗೆ ಆಟೋ ರಿಕ್ಷಾ ಡಿಕ್ಕಿ 
        ಟ್ರ್ಯಾಕ್ಟರ್ ಗೆ ಆಟೋ ರಿಕ್ಷಾ ಡಿಕ್ಕಿಯಾಗಿ ಆಟೋದಲ್ಲಿದ್ದವರು ಗಾಯಗೊಂಡ ಘಟನೆ ಕುಶಾಲನಗರದ ಕೂಡುಮಂಗಳೂರು ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 06-04-2018 ರಂದು ಅರಕಲಗೋಡು ಗ್ರಾಮದ ಜವರೇಗೌಡ ಎಂಬುವವರು ಟ್ರ್ಯಾಕ್ಟರನ್ನು ಚಾಲನೆ ಮಾಡಿಕೊಂಡು ಕೂಡುಮಂಗಳೂರು ಗ್ರಾಮದ ವಿಜಯನಗರದ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಆಟೋವನ್ನು ಚಾಲಕ ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಹೋಗಿ ಟ್ರ್ಯಾಕ್ಟರಿನ ಹಿಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಟೋದಲ್ಲಿದ್ದ ಪಾರ್ವತಮ್ಮನವರಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿಯ ಆತ್ಮಹತ್ಯೆ 
           ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಕೂರು ಶಿರಂಗಾಲ ಗ್ರಾಮದಲ್ಲಿ ವರದಿಯಾಗಿದೆ. ನಾಕೂರ ಶಿರಂಗಾಲ ಗ್ರಾಮದ ನಿವಾಸಿಯಾದ ರಾಜುರವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 05-04-2018 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಶುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ. 

ಆಕಸ್ಮಿಕವಾಗಿ ನೀರಿಗೆ ಬಿದ್ದು ಮಹಿಳೆಯ ಸಾವು 
           ಹೊಳೆಗೆ ಕಾಲುಜಾರಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಕೊಳಕೇರಿ ಗ್ರಾಮದಲ್ಲಿ ವರದಿಯಾಗಿದೆ. ಕೊಳಕೇರಿ ಗ್ರಾಮದ ಕರುಂಬಯ್ಯ ಎಂಬುವವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಹನುಮಂತ ಎಂಬುವವರ ಪತ್ನಿ ಜಯಮ್ಮ ಎಂಬುವವರು ದಿನಾಂಕ 04-04-2018 ರಂದು ಮನೆಯಿಂದ ಅಂಗಡಿಗೆ ಹೋಗಿದ್ದವರು ವಾಪಾಸ್ಸು ಮನೆಗೆ ಹೋಗುವಾಗ ಕಾಲುಜಾರಿ ಹೊಳೆಗೆ ಬಿದ್ದು ಮೃತಪಟ್ಟವರ ಮೃತದೇಹ ದಿನಾಂಕ 06-04-2018 ರಂದು ಪತ್ತೆಯಾಗಿದ್ದು, ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Friday, April 6, 2018

ಕಾರು ಅಪಘಾತ, ವ್ಯಕ್ತಿ ಸಾವು
                     ದಿನಾಂಕ 29/03/2018ರಂದು ಪೊನ್ನಂಪೇಟೆ ನಗರದಲ್ಲಿ ಸಂಭವಿಸಿದ್ದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗಾಯಾಳು ಬೈಕ್ ಸವಾರ ಪೊನ್ನಂಪೇಟೆ ನಿವಾಸಿ ಎಂ.ಆರ್.ಸುರೇಶ್‌ ದಿನಾಂಕ 05/04/2018ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ದೊರೆತ ಮಾಃಇತಿಯ ಮೇರೆಗೆ ಪೊನ್ನಂಪೇಟೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                       ದಿನಾಂಕ04/04/2018ರಂದು ಸಿದ್ದಾಪುರ ಬಳಿಯ ಹಚ್ಚಿನಾಡು ನಿವಾಸಿ ರವಿ ಎಂಬಾತನು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಘಟನೆಯ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ
                       ದಿನಾಂಕ 05/04/2018ರಂದು ಬೆಳಗಿನ ಜಾವ ಮಂಗಳೂರಿನಿಂದ ಗ್ಯಾಸ್ ಸಿಲಿಂಡರ್‌ಗಳನ್ನು ತೆಗೆದುಕೊಂಡು ಮಡಿಕೇರಿ ಮಾರ್ಗವಾಗಿ ಟಿ.ನರಸೀಪುರಕ್ಕೆ ಕೆಎ-19-ಡಿ-6045ರ ಲಾರಿಯನ್ನು ಚಾಲಿಸಿಕೊಂಡು ಹೋಗುತ್ತಿದ್ದ ಚಾಲಕ ಬಾಲಕೃಷ್ಣ ಎಂಬವರು ಬೋಯಿಕೇರಿ ಬಳಿ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಾರಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, April 5, 2018

ಅಕ್ರಮ ಮರಳು ಸಾಗಾಟ:

       ಅಕ್ರಮವಾಗಿ ಸ್ವರಾಜ್ ಮಜ್ದಾ ಲಾರಿಯಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಕಳತ್ತೋಡು ದೇವರಪುರ ಗ್ರಾಮದಲ್ಲಿ ಸ್ವರಾಜ್ ಮಜ್ದಾ ಲಾರಿ ಸಂಖ್ಯೆ ಕೆಎ 12 ಎ 4216 ರಲ್ಲಿ ಅಕ್ರಮವಾಗಿ ಮರಳನ್ನು ಸಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿನ ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಬಿ.ಜಿ. ಮಹೇಶ್ ಹಾಗು ಸಿಬ್ಬಂದಿಗಳು ಮರಳು ತುಂಬಿದ ಲಾರಿಯನ್ನು ಹಾಗು ಕೆ.ಎ.-12-ಎನ್-3847 ಕಾರನ್ನು ವಶಕ್ಕೆ ಪಡೆದು ಆರೋಪಿ ಕಾರ್ತಿಕ್ ರವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದ್ವೇಷದ ಹಿನ್ನಲೆ ವ್ಯಕ್ತಿ ಮೇಲೆ ಹಲ್ಲೆ:

       ವಿರಾಜಪೇಟೆ ನಗರದ ಕೊಡವ ಸಮಾಜ ಹತ್ತಿರ ವಾಸವಾಗಿರುವ ಮಂಡೇಡ ಎಂ.ಮುತ್ತಣ್ಣ @ ಚೇತನ್ ಎಂಬವರು ದಿನಾಂಕ 4-4-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ನಲ್ವತ್ತೊಕ್ಲು ಗ್ರಾಮದ ತಮ್ಮ ಐನ್ ಮನೆಯಲ್ಲಿ ತಿಥಿ ಕಾರ್ಯಕ್ರಮ ವಿದ್ದುದರಿಂದ ಸದರಿ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿಂದ ಸಂಜೆ ನಲ್ವತ್ತೊಕ್ಲು ಗ್ರಾಮದಕ್ಕೆ ಹೋಗಿ ಸಂಜೆ 4-00 ಗಂಟೆ ಸಮಯದಲ್ಲಿ ಐನ್ ಮನೆಯ ಕಡೆಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ನಾಚಪ್ಪ, ಬಿದ್ದು ಹಾಗು ಮಧು ಮತ್ತು ಪೂವಣ್ಣ ರವರುಗಳು ಇದ್ದು ಅವರೊಂದಿಗೆ ಮಾತನಾಡಲು ಹೋದ ವೇಳೆಯಲ್ಲಿ ಸದರಿ ವ್ಯಕ್ತಿಗಳು ಮುತ್ತಣ್ಣರವರೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿ ನೋವುಪಡಿಸಿದ್ದು ಈ ಸಂಬಂಧ ಎಂ. ಮುತ್ತಣ್ಣನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Wednesday, April 4, 2018

ವ್ಯಕ್ತಿಯ ಆತ್ಮಹತ್ಯೆ
              ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ವರದಿಯಾಗಿದೆ. ಹಾನಗಲ್ಲು ಗ್ರಾಮದ ನಿವಾಸಿಯಾದ ಲೋಕೇಶ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ದಿನಾಂಕ 02-04-2018 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ. 

ಕಾಲೇಜಿಗೆ ನುಗ್ಗಿ ಕಳ್ಳತನಕ್ಕೆ ಯತ್ನ 
              ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ದಿನಾಂಕ 26-03-2018 ರಿಂದ 03-04-2018 ರ ಒಳಗೆ ಯಾರೋ ಕಾಲೇಜಿನ ಬಾಗಿಲು ಮುರಿಯಲು ಪ್ರಯತ್ನಿಸಿ, ಕಿಟಕಿಯಿಂದ ಒಳನುಗ್ಗಿ ಕಾಗದ ಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿದ್ದು ಈ ಬಗ್ಗೆ ಪ್ರಾಂಶುಪಾಲರಾದ ಹೇಮಾವತಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಚಿನ್ನಾಭರಣ ಕಳವು 
          ದಿನಾಂಕ 30-03-2018 ರಂದು ಬೆಂಗಳೂರಿನಲ್ಲಿ ವಾಸವಿರುವ ಸೋಮವಾರಪೇಟೆ ತಾಲೂಕಿನ ಕಾಂಡನಕೊಲ್ಲಿ ಗ್ರಾಮದವರಾದ ಮಾಚಯ್ಯ ಎಂಬುವವರು ಊರಿಗೆ ಹಬ್ಬದ ಸಂಬಂದ ಬೆಂಗಳೂರಿನಿಂದ ಮನೆಗೆ ಬರುವಾಗ ತನ್ನ ಪತ್ನಿಯ ಚಿನ್ನಾಭರಣಗಳನ್ನು ಸೂಟ್ ಕೇಸಿನಲ್ಲಿ ಇಟ್ಟುಕೊಂಡು ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಬಂದಿದ್ದು, ಬೆಳಿಗ್ಗೆ 4-00 ಗಂಟೆಯ ಸಮಯಕ್ಕೆ ಶನಿವಾರಸಂತೆಗೆ ತಲುಪುವಾಗ ತನ್ನ ಪಕ್ಕದಲ್ಲಿದ್ದ ಸೂಟ್ ಕೇಸನ್ನು ನೋಡುವಾಗ ತೆರೆದುಕೊಂಡಿದ್ದು ಅದರ ಒಳಗಡೆ ಇಟ್ಟಿದ್ದ ಅಂದಾಜು 2.5 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವುದು ಕಂಡುಬಂದಿದ್ದು, ಈ ಬಗ್ಗೆ ದಿನಾಂಕ 03-04-2018 ರಂದು ಮಾಚಯ್ಯನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವಾಹನ ಅಪಘಾತ 
              ದಿನಾಂಕ 03-04-2018 ರಂದು ಕುಶಾಲನಗರದ ನಿವಾಸಿ ಜಮೀರ್ ರವರು ಚೇರಂಬಾಣೆಯಲ್ಲಿ ನಡೆಯುವ ಸಂತೆಗೆ ವ್ಯಾಪಾರಕ್ಕೆ ಹೋಗಿದ್ದವರು ವಾಪಾಸ್ಸು ಮಾರುತಿ ಓಮಿನಿ ವ್ಯಾನಿನಲ್ಲಿ ಹೋಗುತ್ತಿರುವಾಗ ಮಡಿಕೇರಿ ಕುಶಾಲನಗರ ರಸ್ತೆಯಲ್ಲಿ ಕೆದಕಲ್ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ಇನ್ನೋವಾ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನಲ್ಲಿದ್ದ ಸರ್ತಾಜ್ ಹಾಗೂ ಜಬಿತಾಜ್ ರವರಿಗೆ ಗಾಯವಾಗಿದ್ದು, ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, April 3, 2018

ಕಾರು ಡಿಕ್ಕಿ, ಯುವಕ ಸಾವು
                    ದಿನಾಂಕ 02/04/3018ರಂದು ವಿರಾಜಪೇಟೆ ಬಳಿಯ ನಾಲ್ಕೇರಿ ನಿವಾಸಿ ಅರೆಯಂಡ ಮಿಥುನ್ ಎಂಬ ಯುವಕನು ಕೆಎ-12-9969ರ ಬುಲೆಟ್ ಬೈಕಿನಲ್ಲಿ ಕಾಕೋಟುಪರಂಬುವಿನ ಬಳಿ ಹೋಗುತ್ತಿರುವಾಗ ಎದುರಿನಿಂದ ಕೆಎ-12-ಪಿ-4897ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಿಥುನ್‌ ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಿಥುನ್ ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                      ದಿನಾಂಕ 13/03/2018ರಂದು ವಿರಾಜಪೇಟೆ ಬಳಿಯ ಗುಹ್ಯ ಗ್ರಾಮದ ನಿವಾಸಿ ಮಣಿ ಎಂಬವರು ಕಾರಿನಲ್ಲಿ ಸ್ನೇಹಿತರಾದ ಅದೀಶ್ ಮತ್ತು ಅಜು ಎಂಬವರೊಂದಿಗೆ ಪುಲಿಯೇರಿ ಗ್ರಾಮದ ರದೀಶ್‌ ಎಂಬವರ ಮನೆಗೆ ಹೋಗುತ್ತಿರುವಾಗ ಅಮ್ಮತ್ತಿ ಬಳಿ ಕಂಬೀರಂಡ ಬೋಜ, ಚಕ್ರವರ್ತಿ ಮತ್ತಿತರರು ದಾರಿ ಮಧ್ಯೆ ಮಾತನಾಡುತ್ತಾ ನಿಂತಿದ್ದು ಮಣಿರವರು ದಾರಿ ಬಿಡುವಂತೆ ಕೇಳಿದ ಕಾರಣಕ್ಕೆ ಮಣಿರವರೊಂದಿಗೆ ಜಗಳವಾಡಿ ಬೋಜ ಮತ್ತು ಚಕ್ರವರ್ತಿ ಮತ್ತಿತರರು ಸೇರಿಕೊಂಡು ಮಣಿರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ 
                       ದಿನಾಂಕ 02/04/2018ರಂದು ತಿತಿಮತಿ ಬಳಿಯ ಚೇನಿಹಡ್ಲು ಹಾಡಿಯ ನಿವಾಸಿ ಪಂಜರಿಎರವರ ಮಂಜುನಾಥ ಎಂಬವರು ನೆರೆಮನೆಯ ಪಿ.ಸಿ.ರಾಮು ಎಂಬವರೊಂದಿಗೆ ತಿತಿಮತಿಗೆ ಹೋಗುತ್ತಿರುವಾಗ ದಾರಿಯಲ್ಲಿ ಮಣಿ, ರವೀಣಾ, ಬೋಜ, ರಮೇಶ್, ಕಪ್ಪಡಿ ಮತ್ತು ರಘು ಎಂಬವರು ಸೇರಿಕೊಂಡು ಹಣದ ವಿಚಾರದಲ್ಲಿ ಜಗಳವಾಡಿ ದೊಣ್ಣೆಯಿಂದ ಮಂಜುನಾಥರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                        ದಿನಾಂಕ 01/04/2018ರಂದು ಕುಶಾಲನಗರ ಪಟ್ಟಣದ ಕಾಳಮ್ಮ ಕಾಲೋನಿ ನಿವಾಸಿ ಸುರೇಶ ಕೆ.ಸಿ. ಎಂಬವರೊಂದಿಗೆ ಅದೇ ಕಾಲೋನಿ ನಿವಾಸಿ ಶಿವರಾಜ್, ಅಪ್ಪು ಮತ್ತು ಅನುಸೂಯ ಎಂಬವರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಸುರೇಶ್‌ ರವರು ಶಿವರಾಜ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ಪ್ರತಿ ದೂರು ನೀಡಿದ್ದು ಕುಶಾಲನಗರ ಪಟ್ಟಣ ಪೊಲೀಸರು ಎರಡೂ ದೂರುಗಳನ್ನು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಕರಿಮೆಣಸು ಮತ್ತು ಕಾಫಿ ಕಳವು
                      ಸೋಮವಾರಪೇಟೆ ಬಳಿಯ ಜಂಬೂರು ನಿವಾಸಿ ಮಜೀದ್ ಎಂಬವರು ಅವರ ಗೋದಾಮಿನಲ್ಲಿ ಅವರಿಗೆ ಸೇರಿದ ಕಾಫಿ ಮತ್ತು ಕರಿ ಮೆಣಸನ್ನು ಚೀಲದಲ್ಲಿ ಶೇಖರಿಸಿಟ್ಟಿದ್ದು ದಿನಾಂಕ 02/04/2018ರಂದು ಬೆಳಿಗ್ಗೆ ಹೋಗಿ ನೋಡುವಾಗ ಯಾರೋ ಕಳ್ಳರು ಗೋದಾಮಿನ ಬೀಗ ಮುರಿದು ಒಳ ಪ್ರವೇಶಿಸಿ ಅಲ್ಲಿದ್ದ ಸುಮಾರು ರೂ.2,18,560/- ಮೌಲ್ಯದ 32 ಕೆ.ಜಿ.ತೂಕದ 18 ಚೀಲ ಕರಿಮೆಣಸು ಹಾಗೂ 50 ಕೆ.ಜಿ. ತೂಕದ 4 ಚೀಲ ಕಾಫಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ, ಕೊಲೆ ಬೆದರಿಕೆ
                       ದಿನಾಂಕ 02/04/2018ರಂದು ಬೆಟ್ಟಗೇರಿ ಬಳಿಯ ಅರುವತೊಕ್ಲು ನಿವಾಸಿ ಬಿ.ಎಂ.ಪ್ರಸನ್ನ ಎಂಬವರು ಅವರ ಮತ್ತು ಅವರ ಚಿಕ್ಕಪ್ಪನವರ ಮನೆಗೆ ಹೋಗುವ ದಾರಿಯ ಕೈ ತೊರೆಗೆ ಜೆ.ಸಿ.ಬಿ. ಯಂತ್ರದಿಂದ ಮಣ್ಣು ಹಾಕುವ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದ ಕಡ್ಯದ ಜಯಕುಮಾರ್ ಎಂಬವರು ಜಾಗದ ವಿಚಾರವಾಗಿ ಜಗಳವಾಡಿ ಪ್ರಸನ್ನರವರಿಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೃಷಿ ಸಲಕರಣೆ ಕಳವು
                      ಪಾಲೆಬೆಟ್ಟ ಬಳಿಯ ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿರುವ ಟಾಟಾ ಕಾಫಿ ತೋಟದ ಗೋದಾಮಿಗೆ ಯಾರೋ ಕಳ್ಳರು ನುಗ್ಗಿ ಸುಮಾರು ರೂ.23,000/- ಮೌಲ್ಯದ ಹಳೆಯ ಗೀಸರ್ ಸಿಲಿಂಡರ್ ಡ್ರಂ,  ತಾಮ್ರದ ಹಂಡೆಗಳು ಮತ್ತು ಔಷಧಿ ಸಿಂಪರಣೆಯ ಸಲಕರಣೆಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, April 2, 2018

 ಪೊಲೀಸ್ ಧ್ವಜ ದಿನಾಚರಣೆ.


     ಜಿಲ್ಲೆಯ ಕರ್ತವ್ಯನಿರತ ಪೊಲೀಸರು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಆಲಿಸಿ ಅರ್ಥೈಸಿಕೊಂಡು ಸಾರ್ವಜನಿಕರಿಗೆ ಸೇವೆಯನ್ನು ನಿಡುವಂತೆ ನಿವೃತ್ತ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಶ್ರೀ ಕೆ.ಎಸ್. ಕುಶಾಲಪ್ಪ ಪೊಲೀಸರಿಗೆ ಕರೆ ನೀಡಿದರು. ಅವರು ಇಂದು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. 
     ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗೆ ಪ್ರತಿ ವರ್ಷ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪರವರ ಸ್ಮರಣಾರ್ಥ ಅವರ ಮಕ್ಕಳಾದ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪನವರು ನೀಡುತ್ತಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿಯನ್ನು ಜಿಲ್ಲೆಯ ಗುಪ್ತದಳದ ಹೆಡ್ ಕಾನ್ಸ್ ಟೇಬಲ್ ಸಿ.ಡಿ. ಆನಂದರವರಿಗೆ ನೀಡಿ ಗೌರವಿಸಲಾಯಿತು. ಜೊತೆಗೆ ಉತ್ತಮ ಕರ್ತವ್ಯ ನಿರ್ವಹಿಸಿದ ಸುಮಾರು 9 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸಹ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
     ಕಾರ್ಯಕ್ರಮದಲ್ಲಿ ಕಳೆದ ವರ್ಷ ನಿವೃತ್ತರಾದ ಅಧಿಕಾರಿ ಹಾಗು ಸಿಬ್ಬಂದಿಗಳನ್ನು ಸನ್ಮಾನಿಸುವುದರೊಂದಿಗೆ ವೈದ್ಯಕೀಯ ವೆಚ್ಚದ ಸಹಾಯ ಧನವನ್ನು ಸಹ ವಿತರಿಸಲಾಯಿತು. 

     ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಮಾತನಾಡಿದ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪನವರು ಪ್ರಸಕ್ತ ಹವಾಮಾನ ವೈಪರಿತ್ಯದ ಸಮಯದಲ್ಲಿ ನೀರನ್ನು ಮಿತವಾಗಿ ಬಳಸುವಂತೆ ಕರೆ ನೀಡಿದರಲ್ಲದೆ ಮುಂಬರುವ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತೆ ಪೊಲೀಸರಿಗೆ ಕಿವಿಮಾತು ಹೇಳಿದರು. 
    ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಐ.ಪಿ.ಎಸ್., ರವರು ಸ್ವಾಗತಿಸಿ ನಿವೃತ್ತ ಪೊಲೀಸ್ ಅಧೀಕ್ಷಕ ಎಂ.ಎ. ಅಪ್ಪಯ್ಯನವರು ವಂದಿಸಿದರು. ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು ಮತ್ತು ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. 




ವಿದ್ಯುತ್ ಸ್ಪರ್ಶದಿಂದ ಮಹಿಳೆ ಸಾವು:

     ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಂಚಿಕಾಡು ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿರುವ ಎಲಿಜಾ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮೊಹರ್ ಆಲಿ ಎಂಬವರ ಪತ್ನಿ ಶ್ರೀಮತಿ ಸಹರ್ ಬಾನು ಎಂಬ ಮಹಿಳೆ ದಿನಾಂಕ 1-4-2018 ರಂದು ಸೌದೆ ತರಲು ಕಾಫಿ ತೋಟಕ್ಕೆ ಹೋಗಿದ್ದು ತೋಟದ ಅಂಚಿನಲ್ಲಿದ್ದ ವಿದ್ಯುತ್ ಕಂಬದ ಕೆಳಗೆ ಸೌದೆಗಳನ್ನು ಜೋಡಿಸುತ್ತಿದ್ದ ವೇಳೆ ಕಂಬದಿಂದ ವಿದ್ಯುತ್ ಹರಿದು ಸದರಿ ಮಹಿಳೆ ಸುಟ್ಟು ಸಾವನಪ್ಪಿದ್ದು, ಈ ಸಂಬಂಧ ಮೃತರ ಪತಿ ಮೊಹರ್ ಆಲಿರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಸಾಗಾಟ:

     ದಿನಾಂಕ 31-3-2018 ರಂದು ವಿರಾಜಪೇಟೆ ನಗರ ಪೊಲೀಸ್ ಠಾಣಾ ಸಿಬ್ಬಂದಿ ಪಿ. ಮುನೀರ್ ರವರು ಪೆರುಂಬಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಆರೋಪಿ ಕಣ್ಣೂರು ಜಿಲ್ಲೆಯ ಆನಪಂದಿ ಅಯ್ಯನ್ ಕುನ್ ಗ್ರಾಮ ದ ನಿವಾಸಿ ಸತೀಶ್ ಕುಮಾರ್ ಎಂಬವರು ತಮ್ಮ ವಾಹನದಲ್ಲಿ ಅಕ್ರಮವಾಗಿ 180 ಎಂ.ಎಲ್ ನ 18 ಟೆಟ್ರಾ ಪ್ಯಾಕೇಟ್ ಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ:

     ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕೈಕೇರಿ ಗ್ರಾಮದ ಬಿ.ಹೆಚ್. ದೇವರಾಜ್ ಎಂಬವರು ತಮ್ಮ ಮನೆಯ ಮುಂದುಗಡೆ ಇರುವ ಶೆಡ್ಡಿನಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹೆಚ್. ಸುಬ್ಬಯ್ಯ ಮತ್ತು ಸಿಬ್ಬಂದಿಗಳು ಮಾರಾಟ ಮಾಡಲು ಇಟ್ಟಿದ್ದ ರೂ.2,491/- ಬೆಲೆಬಾಳುವ 90 ಎಂ.ಎಲ್.ನ ಒಟ್ಟು 84 ಟೆಟ್ರಾ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

    ವಿರಾಜಪೇಟೆ ತಾಲೋಕು ಹೆಗ್ಗಳ ಗ್ರಾಮದ ಎಂ.ಕೆ. ರವೀಂದ್ರನ್ ಎಂಬವರ ಮಗ ಪ್ರಾಯ 26 ವರ್ಷದ ಸಜೀತ್ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 1-4-2018 ರಂದು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, April 1, 2018

ಸುಳ್ಳು ದಾಖಲೆ ನೀಡಿ ನ್ಯಾಯಾಲಯಕ್ಕೆ ಮೋಸ 
             ಸೋಮವಾರಪೇಟೆಯ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ಘನ ನ್ಯಾಯಾಲಯದಲ್ಲಿ ಆರೋಪಿಯಾದ ಪ್ರದೀಪರವರಿಗೆ ವಾರಂಟ್ ಹೊರಡಿಸಿದ್ದಾಗ ಅವರಿಗೆ ಜಾಮೀನುದಾರರಾಗಿದ್ದ ವೇದಮೂರ್ತಿ ಎಂಬುವವರು ದೊಡ್ಡಕೊಳತ್ತೂರು ಗ್ರಾಮದ ಜಯಲಿಂಗಪ್ಪ ಎಂಬುವವರ ಆಸ್ತಿಯ ಆರ್.ಟಿ.ಸಿ ಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ತಾನೇ ಜಯಲಿಂಗಪ್ಪ ಎಂದು ನ್ಯಾಯಾಲಯಕ್ಕೆ ತಿಳಿಸಿ ದಿನಾಂಕ 25-11-2014 ರಂದು ಆರೋಪಿಗೆ ಜಾಮೀನು ನೀಡಿದ್ದು, ಈ ಬಗ್ಗೆ ಶಿರಸ್ತೆದಾರರಾದ ಲಕ್ಷ್ಮಿರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿಯ ಮೇಲೆ ಹಲ್ಲೆ 
            ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ವರದಿಯಾಗಿದೆ. ಹೆಬ್ಬೆಟ್ಟಗೇರಿಯ ನಂದಿಮೊಟ್ಟೆ ಎಂಬಲ್ಲಿ ಕೆ ನಿಡುಗಣೆ ಗ್ರಾಮದ ಚಂದನ್ ಎಂಬುವವರು ತಮ್ಮ ಬಾಪ್ತು ಜೀಪನ್ನು ನಿಲ್ಲಿಸಿಕೊಂಡಿರುವಾಗ ಅಲ್ಲಿಗೆ ಅವರ ಗ್ರಾಮದವರೇ ಆದ ಮುತ್ತಣ್ನ ಎಂಬುವವರು ಕಾರಿನಲ್ಲಿ ಬಂದು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಚಂದನ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಮದ್ಯ ಮಾರಾಟ ವ್ಯಕ್ತಿಯ ಬಂಧನ 
                ಕುಶಾಲನಗರದ ತೊರೆನೂರು ಗ್ರಾಮದಲ್ಲಿ ತ್ರಿಣೇಶ ಎಂಬುವವರು ತೊರೆನೂರು ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಇದ್ದ ಮಾಹಿತಿ ಮೇರೆಗೆ ದಿನಾಂಕ 31-3-2018 ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕರಾದ ನವೀನ್ ಗೌಡರವರು ಸಿಬ್ಬಂದಿಯವರೊಂದಿಗೆ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಮದ್ಯವನ್ನು ವಶಪಡಿಸಿಕೊಂಡು ತ್ರಿಣೇಶ್ ರವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.