Tuesday, February 20, 2018

ರಸ್ತೆ ಅಪಘಾತ
                          ದಿನಾಂಕ 19/02/2018ರಂದು ಮೈಸೂರು ನಿವಾಸಿ ಸುರೇಶ್ ಎಂಬವರು ಕೆಎ-01-ಎಂಸಿ-5141ರ  ಕಾರಿನಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಾರ್ಕಳದಿಂದ ಮೈಸೂರಿಗೆ ಹೋಗುತ್ತಿರುವಾಗ ಸಂಪಾಜೆ ಬಳಿಯ ಕೊಯನಾಡು ಬಳಿ ಎದುರಿನಿಂದ ಕೆಎ-04-ಎಂಸಿ-1543ರ ವ್ಯಾನನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುರೇಶ್‌ರವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ
                          ದಿನಾಂಕ 18/02/2018ರಂದು ಬಾಳೆಲೆ ಬಳಿಯ ದೇವನೂರು ನಿವಾಸಿ ಮಲ್ಲ ಎಂಬವರು ಬಾಳೆಲೆ ನಗರದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-12-ಜೆ-8405ರ ಸ್ಕೂಟರನ್ನು ಅದರ ಸವಾರ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಲ್ಲರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮರದಿಂದ ಬಿದ್ದು ಸಾವು
                         ದಿನಾಂಕ 19/02/2018ರಂದು ಶ್ರೀಮಂಗಲ ಬಳಿಯ ಬೀರುಗ ನಿವಾಸಿ ರಂಜನ್ ಎಂಬವರು ಚೇಂದ್ರಿಮಾಡ ಕಾಳಯ್ಯ ಎಂಬವರ ತೊಟದಲ್ಲಿ ಕರಿ ಮೆಣಸು ಕುಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ  ಬಿದ್ದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಾಗಾಟ
                       ದಿನಾಂಕ 19/02/2018ರಂದು ಶ್ರೀಮಂಗಲ ಬಳಿಯ ಹೈಸೊಡ್ಲೂರು ಗ್ರಾಮದ  ಹೊಳೆಯಿಂದ ಚೋಡುಮಾಡ ವಿಕ್ರಂ ಮತ್ತು ಸತೀಶ್‌ ಎಂಬವರು ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಲಾರಿಯಲ್ಲಿ ಸಾಗಿಸುತ್ತಿದ್ದುದನ್ನು  ಶ್ರೀಮಂಗಲ ಠಾಣಾ ಪಿಎಸ್‌ಐ ಸಣ್ಣಯ್ಯರವರು ಪತ್ತೆ ಹಚ್ಚಿ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮರದಿಂದ ಬಿದ್ದು ಸಾವು
                            ದಿನಾಂಕ 19/02/2018ರಂದು ಶನಿವಾರಸಂತೆ ಬಳಿಯ ಶಿವಾರಳ್ಳಿ ಗ್ರಾಮದಲ್ಲಿ ಹಾಸನ ಜಿಲ್ಲೆಯ ಮಲ್ಲಿಪಟ್ನ ನಿವಾಸಿ ಎನ್‌.ಆರ್.ರವಿ ಎಂಬವರು ಮರಗಸಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಮರದಿಂದ ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, February 19, 2018

 ತೋಟಕ್ಕೆ ತೆರಳದಂತೆ ಅಡ್ಡಿ:

     ವಿರಾಜಪೇಟೆ ತಾಲೋಕು, ಬಿರುಣಾಣಿ ಗ್ರಾಮದ ನೆಲ್ಲೀರ ಸುಬ್ಬಯ್ಯನವರ ಕಾಫಿ ತೋಟಕ್ಕೆ ಕಾಫಿ ಕುಯ್ಯುವ ಕೆಲಸಕ್ಕೆ ದಿನಾಂಕ 2-2-2018 ರಂದು ಬೆಳಗ್ಗೆ 10-00 ಗಂಟೆಗೆ ಕೆಲಸದವರು ಜೀಪಿನಲ್ಲಿ ತೆರಳುತ್ತಿದ್ದಾಗ ಆರೋಪಿಗಳಾದ ನೆಲ್ಲೀರ ಈರಪ್ಪ ಹಾಗು ನೆಲ್ಲೀರ ನಿರನ್ ಎಂಬವವರು ಜೀಪನ್ನು ಅಡ್ಡಗಟ್ಟಿ ನಿಲ್ಲಿಸಿ ಕೆಲಸಕ್ಕೆ ಹೋಗದಂತೆ ತಡೆದಿರುತ್ತಾರೆಂದು ಫಿರ್ಯಾದಿ ನೆಲ್ಲೀರಿ ಸುಬ್ಬಯ್ಯನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

     ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿಯಾದ ಕೆ.ಸಿ. ರಾಜೀವ್ ಎಂಬವರ ತಂದೆ ಚಂದ್ರ ಎಂಬವರು ದಿನಾಂಕ 14-2-2018 ತಮ್ಮ ಮನೆಯಿಂದ ಹೋಗಿದ್ದು, ನಂತರ ದಿನಾಂಕ 18-2-2018 ರಂದು ಸದರಿಯವರು ಅಮ್ಮತ್ತಿ ಕಾರ್ಮಾಡು ಗ್ರಾಮದ ಅರಣ್ಯ ಪ್ರದೇಶದಲ್ಲಿ ಯಾವುದೋ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಓಮ್ನಿ ವ್ಯಾನಿಗೆ ರಿಕ್ಷಾ ಡಿಕ್ಕಿ:

     ದಿನಾಂಕ 18-2-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಲಕ್ಮೀಪ್ರಸಾದ್, ಮಡಿಕೇರಿ ಸಂಚಾರಿ ಠಾಣೆ ಇವರು ತಮ್ಮ ಬಾಪ್ತು ಮಾರುತಿ ಓಮ್ನಿ ವ್ಯಾನಿನಲ್ಲಿ ಮಡಿಕೇರಿ ನಗರದಿಂದ ಜ್ಯೋತಿನಗರದ ಕಡೆಗೆ ಹೋಗುತ್ತಿದ್ದಾಗ ಸ್ಟೋನ್ ಹಿಲ್ ಬಳಿ ಇರುವ ಬಂಟರ ರುದ್ರಭೂಮಿ ಬಳಿ ತಲುಪುವಾಗ್ಗೆ ಎದುರುಗಡೆಯಿಂದ ಬಂದ ಆಟೋ ರಿಕ್ಚಾ ಸದರಿ ವ್ಯಾನಿಗೆ ಡಿಕ್ಕಿಯಾದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 4 ಜನರಿಗೆ ಗಾಯಗಳಾಗಿದ್ದು ಅಲ್ಲದೆ ರಿಕ್ಞಾ ಚಾಲಕ ಹಾಗು ವ್ಯಾನಿನ ಚಾಲಕರುಗಳಿಗೆ ಸಹ ಗಾಯಯಗಳಾಗಿದ್ದು, ಎರಡೂ ವಾಹನಗಳು ಜಖಂ ಗೊಂಡಿದ್ದು, ಈ ಸಂಬಂಧ ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕಯಗೊಂಡಿದ್ದಾರೆ.
 

Sunday, February 18, 2018


ಪೆಟ್ರೋಲ್ ಲಾರಿ ಅಪಘಾತ
                 ದಿನಾಂಕ 16-2-2018 ರಂದು ಕೆಎ-06-ಬಿ-9572 ರ ಲಾರಿಯಲ್ಲಿ ಪೆಟ್ರೋಲ್ ಮತ್ತು ಡೀಸಲ್ ತುಂಬಿಸಿಕೊಂಡು ಹಾಸನದಿಂದ ಸಂಪಾಜೆ ಹೋಗುತ್ತಿರುವಾಗ ಮದೆನಾಡು ಎಂಬಲ್ಲಿಗೆ ತಲುಪುವಾಗ ಚಾಲಕನ ಅಜಾಗರೂಕತೆಯಿಂದ ಲಾರಿ ಮಗುಚಿಬಿದ್ದು ಪೆಟ್ರೋಲ್ ಹಾಗೂ ಡೀಸಲ್ ನಷ್ಟವಾಗಿದ್ದು ಈ ಬಗ್ಗೆ ಅಶೋಕರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, February 17, 2018

ಬೈಕಿಗೆ ಜೀಪು ಡಿಕ್ಕಿ
                       ದಿನಾಂಕ 16/02/2018ರಂದು ಹೆಚ್‌ಡಿ.ಕೋಟೆ ನಿವಾಸಿ ನಾಗೇಶ ಎಂಬವರು ಬೈಕಿನಲ್ಲಿ ತೂಚಮಕೇರಿಯ ಮಾದೇವ ಕಾಲೊನಿ ಬಳಿ ಹೋಗುತ್ತಿರುವಾಗ ಎದುರಿನಿಂದ ಕೆಎ-12-ಜೆಡ್-4718ರ ಜೀಪನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಾಗೇಶರವರ ಬೈಕಿಗೆ ಡಿಕ್ಕಿಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ
                      ದಿನಾಂಕ 16/02/2018ರಂದು ಸೋಮವಾರಪೇಟೆ ಬಳಿಯ ಬಜೆಗುಂಡಿ ನಿವಾಸಿ ಭಾಸ್ಕರ ಎಂಬವರು ಅವರ ಮೋಟಾರು ಬೈಕಿನಲ್ಲಿ ನಗರೂರು ಬಳಿ ಹೋಗುತ್ತಿರುವಾಗ ಎದುರುಗಡೆ ಹೋಗುತ್ತಿದ್ದ ಸಿಕೆಡಬ್ಲ್ಯು-7558ರ ಕಾರನ್ನು ಅದರ ಚಾಲಕ ಗೋಪಾಲ್ ಎಂಬವರು ಯಾವುದೇ ಸೂಚನೆ ನೀಡದೆ ಏಕಾ ಏಕಿ ಬಲಕ್ಕೆ ತಿರುಗಿಸಿದ ಪರಿಣಾಮ ಭಾಸ್ಕರರವರ ಬೈಕು ಕಾರಿಗೆ ಡಿಕ್ಕಿಯಾಗಿ ರಸ್ತೆಯಲ್ಲಿ ಬಿದ್ದು ಭಾಸ್ಕರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
                       ದಿನಾಂಕ 16/02/2018ರಂದು ರಾತ್ರಿ ವೇಳೆ ಕಾರ್ಕಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ವಿಶಾಲ್‌ ಎಂಬ ಹೆಸರಿನ ಖಾಸಗಿ ಬಸ್ಸನ್ನು ಅದರ ನಿರ್ವಾಹಕ ಪ್ರವೀಣ್ ಹೆಗ್ಡೆ ಎಂಬವರು ಆನೆಕಾಡು ಬಳಿಯ ಬ್ರೈಟ್ ಹೋಟೆಲಿನ ಬಳಿ ಪ್ರಯಾಣಿಕರ ಕೋರಿಕೆ ಮೇರೆಗೆ ಶೌಚಕ್ಕೆಂದು ನಿಲ್ಲಿಸಿದ್ದು ಮೂಡಬಿದ್ರೆ ನಿವಾಸಿ ಅಜ್ಮೀರ್ ಅಹಮದ್ ಮತ್ತು ಸಿರಾಜ್‌ ಎಂಬವರು ಬಸ್ಸಿನಿಂದಿಳಿದು ರಸ್ತೆ ಬದಿ ಮೂತ್ರ ವಿಸರ್ಜನೆಗೆಂದು ತೆರಳಿದ್ದಾಗೆ ಕುಶಾಲನಗರ ಕಡೆಯಿಂದ ಕೆಎ-12-ಜೆಡ್‌-4563 ರ ಸ್ವಿಫ್ಟ್ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆ ಬದಿ ನಿಲ್ಲಿಸಿದ್ದ ಒಂದು ಟಾಟಾ ಇಂಡಿಗೋ ಕಾರಿಗೆ ಡಿಕ್ಕಿಪಡಿಸಿ ನಂತರ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಸಿರಾಜ್‌ ಹಾಗೂ ಅಜ್ಮೀರ್ ಅಹಮದ್‌ರವರಿಗೆ ಡಿಕ್ಕಿಪಡಿಸಿ ಮಗುಚಿಕೊಂಡ ಪರಿಣಾಮ ಸಿರಾಜ್‌ರವರು ಸ್ಥಳದಲ್ಲೇ ಸಾವಿಗೀಡಾಗಿದ್ದು ಅಜ್ಮೀರ್ ಅಹಮದ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆ ಕಳವು ಪ್ರಕರಣ
                          ದಿನಾಂಕ 15/02/2018ರಂದು ಪೊನ್ನಂಪೇಟೆ ನಿವಾಸಿ ಪುತ್ತಾಮನೆ ದತ್ತು ಗಣೇಶ್ ಎಂಬವರು ಮತ್ತೂರು ಗ್ರಾಮದ ಅವರ ತೋಟದ ಮನೆಗೆ ಹೋಗಿದ್ದು ದಿನಾಂಕ 16/02/2018ರಂದು ಪೊನ್ನಂಪೇಟೆಯ ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲು ಮುರಿದು ಒಳ ಪ್ರವೇಶಿಸಿ ಮನೆಯ ಬೀರುವಿನಲ್ಲಿಟ್ಟಿದ್ದ ರೂ.10,000/- ನಗದು ಹಾಗೂ ಎರಡು ವಾಚುಗಳನ್ನು ಕಳವು ಮಾಡಿದ್ದು ಮನೆಯೊಳಗಿದ್ದ ಕೋವಿಯನ್ನು ಮುರಿದು ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ವ್ಯಕ್ತಿ ಆತ್ಮಹತ್ಯೆ
                     ದಿನಾಂಕ 15/02/2018ರಿಂದ 16/02/2018ರ ನಡುವೆ ವಿರಾಜಪೇಟೆ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಹಿಂದಿನ ಕುರುಚಲು ಕಾಡಿನೊಳಗೆ ಓರ್ವ ಅಪರಿಚಿತ ಯುವಕನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿರಾಜಪೇಟೆ ಬಸ್‌ ನಿಲ್ದಾಣದ ಸಂಚಾರಿ ನಿಯಂತ್ರಕರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆ ಕಳವು ಪ್ರಕರಣ
                        ಮಡಿಕೇರಿ ನಗರದ ರಾಘವೇಂದ್ರ ದೇವಸ್ಥಾನ ಬಳಿಯ ನಿವಾಸಿ ಪಿ.ಎಸ್.ಮಧುಸೂದನ್ ಎಂಬವರು ದಿನಾಂಕ 15/02/2018ರಂದು ರಾತ್ರಿ ಅವರ ವ್ಯಾಪರದ ಹಣ ಸುಮಾರು ರೂ.37,500/- ನಗದು ಹಾಗೂ ರೂ.10,000/- ಬೆಲೆಯ ಒಂದು ಮೋಬೈಲ್ ಫೋನನ್ನು ಮನೆಯ ಮುಂಭಾಗದ ಹಾಲ್‌ನ ದಿವಾನದಲ್ಲಿಟ್ಟು ರಾತ್ರಿ ಮಲಗಿದ್ದು ಬೆಳಿಗ್ಗೆ ಎದ್ದು ನೋಡುವಾಗ ಮನೆಯ ಹಿಂದಿನ ಬಾಗಿಲು ತೆರೆದಿದ್ದು ಅದರ ಮೂಲಕ ಒಳ ಪ್ರವೇಶಿಸಿದ ಕಳ್ಳರು ಮಧುಸೂದನ್‌ರವರು ಇಟ್ಟಿದ್ದ ಹಣ ಹಾಗೂ ಮೋಬೈಲನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ  ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, February 16, 2018

 ಆಸ್ತಿ ವಿಚಾರ, ಪರಸ್ಪರ  ಹಲ್ಲೆ:

     ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮರಗೋಡು ಗ್ರಾಮದ ನಿವಾಸಿಗಳಾದ ವಸಂತಕುಮಾರ್ ಮತ್ತು ಅದೇ ಗ್ರಾಮದ ನಿವಾಸಿ ದಯಾನಂದ ಎಂಬವರುಗಳ ನಡುವೆ ಆಸ್ತಿ ವಿಚಾದಲ್ಲಿ ವೈಮನಸ್ಸು ಇದ್ದು ದಿನಾಂಕ 15-2-2018 ರಂದು ಪರಸ್ಪರ ಜಗಳವಾಡಿಕೊಂಡಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.   

ಮನೆ ಕಳವು:

      ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕುಂಜಿಲಗೇರಿ ಗ್ರಾಮದ ನಿವಾಸಿ ಕಾಮೆಯಂಡ ಶ್ರೀಮತಿ ಜಯಶೀಲ ಎಂಬವರ ಮನೆಗೆ ದಿನಾಂಕ 13-2-2018 ರಂದು ಸಮಯ ಸಂಜೆ 18-00 ಗಂಟೆಯಿಂದ ದಿನಾಂಕ 14-2-2018ರ ಸಂಜೆ 18-00ಗಂಟೆ ಮದ್ಯದ ಅವಧಿಯಲ್ಲಿ ಮನೆಯ ಕಿಟಕಿಯನ್ನು ತೆಗೆದು ಅದರ ಮೂಲಕ ಮನೆಗೆ ನುಗ್ಗಿದ ಯಾರೋ ಕಳ್ಳರು 6000 ರೂ ಬೆಲೆಬಾಳುವ ಕಾಫಿ ಮತ್ತು 13,600 ರೂ ಬೆಲೆಬಾಳುವ ಕರಿಮೆಣಸನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರಿಮೆಣಸ ಕಳವು:

      ವಿರಾಜಪೇಟೆ ತಾಲೋಕು ಕಡಂಗಮರೂರು ಗ್ರಾಮದ ನಿವಾಸಿ ಕೆ.ಎಂ. ಪೊನ್ನಪ್ಪ ಎಂಬವರಿಗೆ ಸೇರಿದ ಲೈನು ಮನೆಯಲ್ಲಿಟ್ಟಿದ್ದ 16,000 ರೂ ಬೆಲೆಬಾಳುವ ಕರಿಮೆಣಸನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಫಿರ್ಯಾದಿ ಕೆ.ಎಂ. ಪೊನ್ನಪ್ಪ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಟ್ಯಾಂಕರ್ ಡಿಕ್ಕಿ ಮಹಿಳೆ ಸಾವು:
     ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಟ್ಯಾಂಕರ್ ಡಿಕ್ಕಿಯಾಗಿ ಮಹಿಳೆ ಸಾವನಪ್ಪಿದ ಘಟನೆ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಎಂಬಲ್ಲಿ ನಡೆದಿದೆ. ಶ್ರೀಮತಿ ಶಾಂತಲ, ಎಂಬವರು ದಿನಾಂಕ 13-2-2018 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಗುಮ್ಮನಕೊಲ್ಲಿ ಎಂಬಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಟ್ಯಾಂಕರ್ ಲಾರಿಯೊಂದು ಬಂದು ಡಿಕ್ಕಿಯಾದ ಪರಿಣಾಮ ಸದರಿ ಮಹಿಳೆ ಶಾಂತಲಾರವರು ಗಂಭೀರವಾಗಿ ಗಾಯಗೊಂಡು ಅವರನ್ನು ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿ ಶಾಂತಲಾರವರು ದಿನಾಂಕ 15-2-2018 ರಂದು ಮೃತಪಟ್ಟಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Thursday, February 15, 2018

ವಿಷ ಸೇವಿಸಿ ಯುವಕನ ಆತ್ಮಹತ್ಯೆ:

     ಶನಿವಾರಸಂತೆ ಠಾಣಾ ವ್ಯಾಪ್ತಿಯ ಶಿವರಳ್ಳಿ ಗ್ರಾಮದ ನಿವಾಸಿ ವಿರಾಜು ಎಂಬವರ ಮಗ 27 ವರ್ಷ ಪ್ರಾಯದ ಸಚಿನ್ ಎಂಬ ಯುವಕ ದಿನಾಂಕ 13-2-2018 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಯಾವುದೇ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು ಅವರನ್ನು ಚಿಕಿತ್ಸೆಗೆ ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದುಕೊಂಡು ಹೋಗುವಾಗ ದಾರಿ ಮದ್ಯೆ ಸದರಿ ಸಚಿನ್ ಸಾವನಪ್ಪಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಮಹಿಳೆ ಕಾಣೆ ಪ್ರಕರಣ ದಾಖಲು:

     ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುರ್ನಾಡು ಬೇತು ಗ್ರಾಮದಲ್ಲಿ ವಾಸವಾಗಿರುವ ಟಿ.ಕೆ. ಗಿರೀಶ ಎಂಬವರ ಪತ್ನಿ ಶ್ರೀಮತಿ ನೇತ್ರ ಎಂಬವರು ದಿನಾಂಕ 13-2-2018 ರಂದು ಅವರ ತಾಯಿಯವರ ಮನೆಗೆ ಹೋಗಿದ್ದು ಅಲ್ಲಿಂದ ಆಕೆ ಕಾಣೆಯಾಗಿರುವುದಾಗಿ ಆಕೆಯ ಗಂಡ ಟಿ.ಕೆ. ಗಿರೀಶ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣ ಹಲ್ಲೆ:

     ಸೋಮವಾರಪೇಟೆ ತಾಲೋಕು ಐಗೂರು ಗ್ರಾಮದ ನಿವಾಸಿ ಹೆಚ್.ಆರ್. ಸೌಮ್ಯ ಎಂಬವರು ದಿನಾಂಕ 14-2-2018 ರಂದು ತಮ್ಮ ಮನೆಯಲ್ಲಿರುವಾಗ ಸಮಯ ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಆಕೆಯ ಗಂಡ ಕಿರಣ್ ರವರು ಮನೆಗೆ ಬಂದು ಮೊಬೈಲ್ ಕರೆಯನ್ನು ಸ್ವೀಕರಿಸಲಿಲ್ಲ ವೆಂಬ ಕಾರಣಕ್ಕೆ ಜಗಳ ಮಾಡಿ ಬೆಲ್ಟ್ ನಿಂದ ಸೌಮ್ಯರವರ ಮೇಲೆ ಹಲ್ಲೆ ನಡೆಸಿ ನೋವು ಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Wednesday, February 14, 2018

ವ್ಯಕ್ತಿಯ ಅಸಹಜ ಸಾವು.

     ಸೋಮವಾರಪೇಟೆ ತಾಲೋಕು ಕುಂಬಾರಗಡಿಗೆ ಗ್ರಾಮದ ನಿವಾಸಿ ಫಿರ್ಯಾದಿ ತಂಬುಕುತ್ತೀರ ಪಿ. ಮುದ್ದಯ್ಯ ಎಂಬವರ ತಮ್ಮ ಬಸಪ್ಪನವರು ಬೆಂಗಳೂರಿನಲ್ಲಿ ಗನ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದು ಬ್ಯಾಂಕಿನ ಹಣ ವ್ಯಾನಿನಲ್ಲಿ ಸಾಗಿಸುವ ಸಂದರ್ಭದಲ್ಲಿ ಅವರು ಗನ್ ಮ್ಯಾನ್ ಆಗಿದ್ದು, ಸದರಿ ವ್ಯಾನ್ ಅನ್ನು ಸುಮಾರು ಏಳುವರೆ ಕೋಟಿ ಬ್ಯಾಂಕಿನ ಹಣದೊಂದಿಗೆ ಅಪರಿಸಿದ್ದು ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣದಲ್ಲಿ ಬಸಪ್ಪ ತಲೆ ಮರೆಸಿಕೊಂಡಿದ್ದು ಬಸಪ್ಪನು ಹೆಂಡತಿ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದು ದಿನಾಂಕ 13-02-2018 ರಂದು ಬೆಂಗಳೂರಿನ ಮನೆಯಲ್ಲಿ ರಾತ್ರಿ ಮಲಗಿದ್ದು ಅಲ್ಲೇ ಸಾವನಪ್ಪಿರುವುದು ಕಂಡು ಬಂದಿದ್ದು ಈ ಸಂಬಂಧ ಫಿರ್ಯಾದಿ ತಂಬುಕುತ್ತೀರ ಪಿ. ಮುದ್ದಯ್ಯ ಎಂಬವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಣದ ವಿಚಾರಲ್ಲಿ ಪತಿಯಿಂದ ಪತ್ನಿಯ ಕೊಲೆ:

     ಮದ್ಯ ಸೇವಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಮರದದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ರುದ್ರಬೀಡು ಗ್ರಾಮದಲ್ಲಿ ನಡೆದಿದೆ. ರುದ್ರಬೀಡು ಗ್ರಾಮದ ನಿವಾಸಿ ಚೆಪ್ಪುಡೀರ ಗಣೇಶ್ ಎಂಬವರ ಲೈನುಮನೆಯಲ್ಲಿ ವಾಸವಾಗಿರುವ ಜೇನು ಕುರುಬರ ಕೃಷ್ಣ ಎಂಬ ವ್ಯಕ್ತಿ ತನ್ನ ಪತ್ನಿ ಜೇನುಕುರುಬರ ರಾಣಿರವರು ಮದ್ಯಸೇವಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ 12-2-2018 ರಂದು ರಾತ್ರಿ ಜಗಳ ಮಾಡಿ ಪತ್ನಿ ರಾಣಿರವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮರದಿಂದ ಬಿದ್ದು ವ್ಯಕ್ತಿ ಸಾವು:

     ಮರದಿಂದ ಕರಿಮೆಣಸು ಕುಯ್ಯುತ್ತಿರುವಾಗ ವ್ಯಕ್ತಿ ಮರದಿಂದ ಬಿದ್ದು ದುರ್ಮರಣಕ್ಕೀಡಾದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಹೊಸೂರುಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೋಕು, ಬೈಲುಕೊಪ್ಪ ನಿವಾಸಿ 33 ವರ್ಷ ಪ್ರಾಯದ ಮನು ಎಂಬ ವ್ಯಕ್ತಿ ದಿನಾಂಕ 12-2-2018 ರಂದು ಸಂಗಡಿಗರೊಂದಿಗೆ ಕರಿಮೆಣಸು ಕುಯ್ಯುವ ಕೆಲಸಕ್ಕೆ ಕೊಡಗು ಜಿಲ್ಲೆಯ ಹೊಸೂರು ಬೆಟ್ಟಗೇರಿ ಗ್ರಾಮಕ್ಕೆ ಬಂದು ಮರ ಹತ್ತಿ ಕರಿಮೆಣಸು ಕುಯ್ಯುತ್ತಿದ್ದಾಗ ಆಕಸ್ಮಿಕ ಮರದಿಂದ ಏಣಿ ಸಮೇತಬಾಗಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಸದರಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಮನು ಸಮಯ 12-30 ಗಂಟೆಗೆ ಸಾವನಪ್ಪಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಅತ್ತೂರು ನಲ್ಲೂರು ಗ್ರಾಮದ ನಿವಾಸಿ 40 ವರ್ಷ ಪ್ರಾಯದ ಚಂದ್ರು ಎಂಬವರು ಸಂಸಾರದಲ್ಲಿ ಬೇಸತ್ತು ದಿನಾಂಕ 12-2-2018 ರಂದು ತಾನು ವಾಸವಾಗಿದ್ದ ಲೈನುಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಹಿಳೆ ಕಾಣೆ, ಪ್ರಕರಣ ದಾಖಲು:

     ವಿರಾಜಪೇಟೆ ತಾಲೋಕು ಹೆಗ್ಗಳ ಗ್ರಾಮದ ನಿವಾಸಿ ಸುರೇಶ್ ಎಂಬವರ ಪತ್ನಿ ಶ್ರೀಮತಿ ಶ್ವೇತ ಎಂಬವರು ದಿನಾಂಕ 8-2-2018 ರಂದು ತನ್ನ ತಾಯಿ ಶ್ರೀಮತಿ ಪಾರ್ವತಿ ಎಂಬವರೊಂದಿಗೆ ತಾಯಿಮನೆಗೆ ಹೋಗಿ ದಿನಾಂಕ 12-2-2018 ರಂದು 12-15 ಗಂಟೆಗೆ ವಾಪಾಸು ಮಡಿಕೇರಿಗೆ ಬಂದಿದ್ದು ನಂತರ ಮನೆಗೆ ಹೋಗದೆ ಕಾಣೆಯಾಗಿರುತ್ತಾಳೆ ಎಂದು ನೀಡಿದ ದೂರಿನ ಮೇರೆಗೆ ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tuesday, February 13, 2018

ಹಲ್ಲೆ ಪ್ರಕರಣ
                        ದಿನಾಂಕ 11/02/2018ರಂದು ರಾತ್ರಿ ಮಡಿಕೇರಿ ನಗರದ ದೇಚೂರು ನಿವಾಸಿ ಬೊಳಿಯಂಡ ಗಣೇಶ್‌ ಎಂಬವರು ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಬೀಡಾ ತರಲೆಂದು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಬೀಡಾ ಅಂಗಡಿಗೆ ಹೋದಾಗ ನಗರದ ದಿನೇಶ್ ಎಂಬಾತನು ಹಳೆ ದ್ವೇಷದಿಂದ ಗಣೇಶ್‌ ರವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿದ್ಯುತ್ ಸ್ಪರ್ಶ, ಸಾವು
                            ದಿನಾಂಕ 12/02/2018ರಂದು ಸಿದ್ದಾಪುರ ಬಳಿಯ ಹಚ್ಚಿನಾಡು ನಿವಾಸಿ ಮಂಡೇಪಂಡ ಪೂವಣ್ನ ಎಂಬವರ ತೋಟದಲ್ಲಿ ಕರಿ ಮೆಣಸು ಕುಯ್ಯುತ್ತಿದ್ದ ಕಾರ್ಮಿಕ ಸ್ವಾಮಿ ಎಂಬಾತನು ಕರಿಮೆಣಸು ಬಳ್ಳಿ ಹಬ್ಬಿದ ಮರಕ್ಕೆ ಏಣಿ ಇಡಲು ಹೋದಾಗ ಏಣಿಯು ಮರದ ಮೇಲಿನಿಂದ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಪ್ರವಹಿಸಿ ಏಣಿ ಹಿಡಿದುಕೊಂಡಿದ್ದ ಸ್ವಾಮಿರವರಿಗೆ ವಿದ್ಯುದಾಘಾತ ಉಂಟಾಗಿ ಕೆಳಗೆ ಬಿದ್ದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಡಿಕ್ಕಿ
                      ದಿನಾಂಕ 12/02/2018ರಂದು ವಿರಾಜಪೇಟೆ ಬಳಿಯ ಕಲ್ಲುಬಾಣೆ ನಿವಾಸಿ ಎಂ.ಹೆಚ್.ಅನ್ಸಾರಿ ಎಂಬವರು ಕೆಎ-04-ಎಂಎ-4463 ರ ಕಾರಿನಲ್ಲಿ ಮದುವೆ ಸಮಾರಂಭದ ಕೆಲಸಕ್ಕೆ ಂದು ಸ್ನೇಹಿತರೊಂದಿಎಗ ಕೇರಳಕ್ಕೆ ಹೋಗುತ್ತಿರುವಾಗ ಮಾಖುಟ್ಟ ಬಳಿಯ ಮೇಮನಕೊಲ್ಲಿ ಎಂಬಲ್ಲಿ ಎದುರಿನಿಂದ ಕೆಎ-01-ಎಎ-6440 ರ ಕಾರನ್ನು ಅದರ ಚಾಲಕ ಸಹೀರ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅನ್ಸಾರಿರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಅನ್ಸಾರಿ ಸೇರಿದಂತೆ ಕಾರಿನಲ್ಲಿದ್ದ ಮುಜೀಬ್ ರಹಮಾನ್ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ಶವ ಪತ್ತೆ
                      ದಿನಾಂಕ 12/02/2018ರಂದು ಪೊನ್ನಂಪೇಟೆ ಬಳಿಯ ದೇವರಪುರ ನಿವಾಸಿ ಬಿ.ಎಂ.ಹಮೀದ್ ಎಂಬರ ಕಾಫಿ ತೋಟದ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                          ದಿನಾಂಕ 12/02/2018ರಂದು ಶ್ರೀಮಂಗಲ ಬಳಿಯ ಕೋಣಗೇರಿ ವಾಸಿಗಳಾದ ಪಣಿ ಎರವರ ಕಡ್ಡಿ ಎಂಬಾತನು ಆತನ ಮಗಳು ಜಾನು ಎಂಬಾಕೆಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಹಲ್ಲೆ ಮಾಡಿದ್ದು ಈ ಕಾರಣಕ್ಕೆ ಜಾನುವಿನ ಪತಿ ಮಣಿ ಎಂಬಾತನು ಕಡ್ಡಿಯ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, February 12, 2018

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಸಾವು:

     ವಿರಾಜಪೇಟೆ ತಾಲೋಕು ಮತ್ತೂರು ಗ್ರಾಮದ ನಿವಾಸಿ ಮಲ್ಲೇಂಗಡ ಮಧು ಮಾಚಯ್ಯ ಎಂಬವರು ದಿನಾಂಕ 27-1-2018 ರಂದು ತಮ್ಮ ಪತ್ನಿ ಯೊಂದಿಗೆ ಸ್ಕೂಟರಿನಲ್ಲಿ ಪೊನ್ನಂಪೇಟೆಯಿಂದ ತಮ್ಮ ಮನೆಗೆ ಹೋಗುತ್ತಿದ್ದಾಗ ಪೊನ್ನಂಪೇಟೆ ನಗರದ ಪೀಸ್ ಕ್ಲಬ್ ಹತ್ತಿರ ಎ.ಎಂ. ಜುನೈದ್ ಎಂಬವರು ಪಿಕ್ ಅಪ್ ವಾಹನವನ್ನು ಅತೀ ವೇಗ ಮತ್ತು ಅಜಾಗರೈಕತೆಯಿಂದ ಚಾಲಿಸಿಕೊಂಡು ಬಂದು ಮಧು ಮಾಚಯ್ಯರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಮಧು ಮಾಚಯ್ಯನವರು ಸ್ಕೂಟರಿನಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಸಮಯದಲ್ಲಿ ಸದರಿ ಮಧು ಮಾಚಯ್ಯನವರು ದಿನಾಂಕ 11-2-2018 ರಂದು ಸಾವನಪ್ಪಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

    ಕುಶಾಲನಗರದ ಮುಳ್ಳುಸೋಗೆ ಗ್ರಾಮದ ವಾಸಿ ನಿಕೇತನ್ ರಾವ್ ಎಂಬವರ ತಮ್ಮ ನಂಜುಂಡರಾವ್ (40) ದಿನಾಂಕ 11-2-2018 ರಂದು ತಮ್ಮ ಟೈಲರ್ ಅಂಗಡಿಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಫಿರ್ಯಾದಿ ನಿಕೇತನರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇಸ್ಪೀಟ್ ಜೂಜು ಪ್ರಕರಣ ದಾಖಲು:

    ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಸಿ.ಎನ್. ದಿವಾಕರ್ ರವರಿಗೆ ಬಂದ ಮಾಹಿತಿ ಆದಾರದ ಮೇರೆಗೆ ಸಂಜೆ 5-15 ಗಂಟೆ ಸಮುಯದಲ್ಲಿ ಸಿಬ್ಬಂದಿಯೊಂದಿಗೆ ಗೋಣಿಕೊಪ್ಪ ನಗರದಲ್ಲಿ 7 ಮಂದಿ ಆರೋಪಿಗಳು ಇಸ್ಪೀಟ್ ಜೂಜಾಡುತ್ತಿದ್ದುದರ ಮೇಲೆ ದಾಳಿ ನಡೆಸಿ ಆರೋಪಿಗಳಿಂದ ನಗದು 4,900/- ರೂ. ಹಾಗು ಜೂಜಾಟಕ್ಕೆ ಬಳಸಿದ ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.  

Sunday, February 11, 2018

ಅಸ್ವಾಭಾವಿಕ ಸಾವು, ಪ್ರಕರಣ ದಾಖಲು:

     ಸಿದ್ದಾಪುರ ಠಾಣಾ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಶ್ರೀಮತಿ ವಿಮಲಾ ಎಂಬವರಿಗೆ ಲೈನ್ ಮನೆಗಳಿದ್ದು ಸದರಿ ಲೈನ್ ಮನೆಯೊಂದರಲ್ಲಿ ರಾಮಕೃಷ್ಣ ಎಂಬುವವರು ಬಾಡಿಗೆಗೆ ಬಂದು ವಾಸವಾಗಿದ್ದು, ಇವರು ಒಬ್ಬಂಟಿಯಾಗಿ ಸುಮಾರು 15 ವರ್ಷಗಳಿಂದ ಸಿದ್ಧಾಪುರದಲ್ಲಿಯೇ ವಾಸವಾಗಿದ್ದರು. ಇವರು ಕೂಲಿಕೆಲಸ ಮಾಡಿಕೊಂಡಿದ್ದು, ಜಾಂಡೀಸ್ ಕಾಯಿಲೆಗೆ ತುತ್ತಾಗಿದ್ದರೂ ಸಹ ಚಿಕಿತ್ಸೆಯನ್ನು ಪಡೆಯದೆ ಮದ್ಯಪಾನ ಮಾಡುತ್ತಿದ್ದು, ಹೀಗೆ ಒಂದು ವಾರಗಳ ಹಿಂದಿನಿಂದ ಜಾಂಡೀಸ್ ಕಾಯಿಲೆ ಹೆಚ್ಚಾಗಿದ್ದರಿಂದ ಫಿರ್ಯಾದಿ ಶ್ರೀಮತಿ ವಿಮಲಾರವರು ಅಕ್ಕಪಕ್ಕದವರೊಂದಿಗೆ ದಿನಾಂಕ 06-02-2018 ರಂದು ಸಿದ್ಧಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಸದರಿ ರಾಮಕೃಷ್ಣರವರು ದಿನಾಂಕ 09-02-2018 ರಂದು ಚಿಕಿತ್ಸೆಯನ್ನು ಲೆಕ್ಕಿಸದೆ ಮಾನಸಿಕ ಅಸ್ವಸ್ಥನಂತೆ ಲೈನು ಮನೆಗೆ ರಾತ್ರಿ ಬಂದಿದ್ದು, ದಿನಾಂಕ 10-02-2018 ರಂದು ಬೆಳಿಗ್ಗೆ 10.00 ಗಂಟೆಗೆ ಲೈನ್ ಮನೆ ಮುಂಭಾಗ ಮೃತಪಟ್ಟಿರುರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Saturday, February 10, 2018

ಹಳೇ ದ್ವೇಷ ವ್ಯಕ್ತಿಯ ಮೇಲೆ ಹಲ್ಲೆ 
            ದಿನಾಂಕ 9-2-2018 ರಂದು ಸೋಮವಾರಪೇಟೆ ನಗರದ ಜನತಾ ಕಾಲೋನಿಯ ನಿವಾಸಿ ಹರ್ಷಿತ್ ಎಂಬುವವರು ಬಜೆಗುಂಡಿಯ ಕುಸುಬೂರು ಗ್ರಾಮದ ದೇವಸ್ಥಾನದ ಹತ್ತಿರ ಸ್ಕೂಟರಿನಲ್ಲಿ ಹೋಗುತ್ತಿರುವಾಗ ಕಾರಿನಲ್ಲಿ ಹಿಂದಿನಿಂದ ಬಂದ ಭರತ್, ಅಭಿ, ರಾಜೇಶ್ ಮತ್ತು ಇನ್ನಿಬ್ಬರು ಸ್ಕೂಟರಿನ ಹಿಂಭಾಗಕ್ಕೆ ಕಾರನ್ನು ಡಿಕ್ಕಿಪಡಿಸಿದ್ದು, ಹರ್ಷಿತ್ ರವರು ಕೆಳಗೆ ಬಿದ್ದಾಗ ಕಾರಿನಲ್ಲಿದ್ದವರು ರಾಡು ಮತ್ತು ದೊಣ್ಣೆಗಳಿಂದ ಹರ್ಷಿತ್ ರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕಣ ದಾಖಲಾಗಿರುತ್ತದೆ.

ವಾಹನ ಅಪಘಾತ
              ದಿನಾಂಕ 8-2-2018 ರಂದು ಕುಶಾಲನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಶಾಲನಗರದ ನಿವಾಸಿಯಾದ ಗೌರೀಶ್ ಎಂಬುವವರು ಮೋಟಾರು ಸೈಕಲಿನ ಹಿಂಬದಿಯಲ್ಲಿ ಯಶವಂತ್ ಎಂಬುವವರನ್ನು ಕೂರಿಸಿಕೊಂಡು ಹೋಗುತ್ತಿರುವಾಗ ಪಕ್ಕದ ರಸ್ತೆಯಿಂದ ಮಾರುತಿ 800 ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ್ದು, ಗೌರೀಶ್ ಮತ್ತು ಯಶವಂತರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅನುಮಾನಾಸ್ಪದ ಸಾವು
            ದಿನಾಂಕ 8-2-2018 ರಂದು ವಿರಾಜಪೇಟೆ ತಾಲೂಕಿನ ಈಚೂರು ಗ್ರಾಮದ ನಿವಾಸಿಯಾದ ಅಯ್ಯಪ್ಪ ಎಂಬುವವರು ಮನೆಯಿಂದ ಪೊನ್ನಂಪೇಟೆಗೆ ಹೋಗಿ ಬರುತ್ತೇನೆಂದು ಹೋದವರು ಮನೆಗೆ ವಾಪಾಸ್ಸು ಬಾರದೇ ಇದ್ದು, ನಂತರ ದಿನಾಂಕ   9-2-2018 ರಂದು ಈಚೂರು ಗ್ರಾಮದ ಪೂವಯ್ಯನವರ ಕೆರೆಯಲ್ಲಿ ಅಯ್ಯಪ್ಪನವರ ಮೃತ ಶರೀರ ತೇಲುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಮೃತನ ಪತ್ನಿ ರಮ್ಯರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Friday, February 9, 2018


ಅಕ್ರಮ ಮದ್ಯ ಮಾರಾಟ
                     ದಿನಾಂಕ 18-02-2018 ರಂದು ಕುಟ್ಟ ಠಾಣಾಧಿಕಾರಿಯವರಾದ ಡಿ ಕುಮಾರ್ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಕೆ ಬಾಡಗ ಗ್ರಾಮದ ನಾಣಚ್ಚಿ ಎಂಬಲ್ಲಿ ರಾಮುರವರು ತನ್ನ ಅಂಗಡಿಯ ಪಕ್ಕದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಜಾಗಕ್ಕೆ ದಾಳಿ ಮಾಡಿ ರಾಮುರವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವಾಹನ ಅಪಘಾತ

                   ದಿನಾಂಕ 7-02-2018 ರಂದು ಗೋಣೀಕೊಪ್ಪಲುವಿನ ನಿವಾಸಿ ರಘುನಾಥ ಎಂಬುವವರು ತನ್ನ ಪತ್ನಿ ಭಾಗ್ಯಲಕ್ಷ್ಮಿ ಎಂಬುವವರೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ಮೈಸೂರಿಗೆ ಹೋಗಿ ವಾಪಾಸು ಬರುತ್ತಿರುವಾಗ ರಾತ್ರಿ 8-30 ಗಂಟೆಗೆ ದೇವರಪುರ ಎಂಬಲ್ಲಿಗೆ ತಲುಪುವಾಗ ಎದುರುಗಡಯಿಂದ ತಿತಿಮತಿಯ ನಿವಾಸಿ ಮಂಜು ಎಂಬುವವರು ಅಜಾಗರೂಕತೆಯಿಂದ ಮೋಟಾರು ಸೈಕಲನ್ನು ಚಾಲನೆ ಮಾಡಿಕೊಂಡು ಹೋಗಿ ಕಾರಿಗೆ ಡಿಕ್ಕಿಪಡಿಸಿ ಮಂಜುರವರು ಗಾಯಗೊಂಡಿದ್ದು ರಘುನಾಥರವರ ಪತ್ನಿಯೂ ಸಹಾ ಗಾಯಗೊಂಡಿದ್ದು ಈ ಬಗ್ಗೆ ರಘುನಾಥರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೀಟೆ ಮರ ಕಳವು
                      ಸಿದ್ದಾಪುರ ಠಾಣಾ ಸರಹದ್ದಿಗೆ ಸೇರಿದ ಚೆನ್ನಯ್ಯನಕೋಟೆ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಸೇರಿದ ಕಾಫಿ ತೋಟದಲ್ಲಿದ್ದ 20,000 ರೂ ಬೆಲೆಬಾಳುವ ಬೀಟೆ ಮರವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ತೋಟದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಸೋಮಯ್ಯನವರು ನೀಡಿದ ಪುಕಾರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬಸ್ಸುಗಳ ಮುಖಾಮುಖಿ ಡಿಕ್ಕಿ
                     ದಿನಾಂಕ 8-02-2018 ರಂದು ಸುಂಟಿಕೊಪ್ಪ ಠಾಣಾ ಸರಹದ್ದಿನ ಮುಖ್ಯ ರಸ್ತೆಯಲ್ಲಿ ಶಾಂತಿಗಿರಿ ಎಸ್ಟೇಟ್ ಹತ್ತಿರ ತಿರುವು ರಸ್ತೆಯಲ್ಲಿ ಎರಡು ಕೆ.ಎಸ್.ಆ.ಟಿ.ಸಿ ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿ ಚಾಲಕರಿಬ್ಬರೂ ಮೃತಪಟ್ಟಿದ್ದು ಬಸ್ಸಿನಲ್ಲಿದ್ದ ಸುಮಾರು 15 ರಿಂದ 20 ಜನ ಪ್ರಯಾಣಿಕರಿಗೆ ಗಾಯಗಳಾಗಿರುತ್ತದೆ. ಮಡಿಕೇರಿ ಕಡೆಯಿಂದ ಹೋಗುತ್ತಿದ್ದ ಬಸ್ಸಿನ ಚಾಲಕನು ಬೇರೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಅಜಾಗರೂಕತೆಯಿಂದ ಬಸ್ಸನ್ನು ಚಾಲನೆ ಮಾಡಿ ಎದುರುಗಡೆಯಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿಪಡಿಸಿದ್ದು, ಚಾಲಕರಾದ ಮೊಯಿದೀನ್ ಶರೀಫ್ ಮತ್ತು ಪಾಲಾಕ್ಷ ಎಂಬುವವರು ಮೃತಪಟ್ಟಿದ್ದು, ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಬೆದರಿಕೆ ಪ್ರಕರಣ
                        ದಿನಾಂಕ 08/02/2018ರಂದು ಶ್ರೀಮಂಗಲ ಬಳಿಯ ವೆಸ್ಟ್ ನೆಮ್ಮಲೆ ಗ್ರಾಮದ ನಿವಾಸಿ ಕುಂಞಂಗಡ ನಟೇಶ್‌ ಎಂಬವರು ತೋಟದ ಬಳಿ ಕೆಲಸ ಮಾಡುತ್ತಿದ್ದಾಗ ಅದೇ ಗ್ರಾಮದ ನಿವಾಸಿ ಕುಂಞಂಗಡ ನಾಣಯ್ಯ ಎಂಬವರು ಅತೀವ ಮದ್ಯಪಾನ ಮಾಡಿ ಬಂದು ಮದ್ಯದ ಅಮಲಿನಲ್ಲಿ ನಟೇಶ್‌ರವರನ್ನು ಕೊಲೆ ಮಾಡುವುದಾಗಿ ಕೋವಿ ತೋರಿಸಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಂಗಡಿಗೆ ಬೆಂಕಿ
                          ದಿನಾಂಕ 07/02/2018ರಂದು ಗೋಣಿಕೊಪ್ಪ ಬಳಿಯ ಹಾತೂರು ನಿವಾಸಿ ತೆರೆಸಾ ಎಂಬವರ ಅಂಗಡಿಗೆ ಬೆಂಕಿ ಬಿದ್ದಿರುವುದಾಗಿ ಸಂಜೆ 7 ಗಂಟೆ ಸುಮಾರಿಗೆ ಕಾಳೇಂಗಡ ಮುತ್ತಪ್ಪ ಎಂಬವರು ತಿಳಿಸಿದ್ದು ತೆರೆಸಾರವರು ಸ್ಥಳಕ್ಕೆ ತೆರಳಿದಾಗ ಅಂಗಡಿಗೆ ಬೆಂಕಿ ಬಿದ್ದು ಸುಮಾರು ರೂ. 40,000/- ದಷ್ಟು ನಷ್ಟ ಉಂಟಾಗಿದ್ದು ಅಂಗಡಿಯ ಪಕ್ಕದ ನಿವಾಸಿ ಸಿ.ಡಬ್ಲ್ಯು ಪೂಣಚ್ಚ ಎಂಬವರು ಈ ಕೃತ್ಯ ಎಸಗಿರಬಹುದಾಗಿ ಶಂಕಿಸಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, February 8, 2018

ಕಾಫಿ ಮಾರಾಟ ಮಾಡಿ ವಂಚನೆ:

     ದಿನಾಂಕ 29-01-2018 ರಂದು ಸಿದ್ಧಾಪುರ ಠಾಣಾ ವ್ಯಾಪ್ತಿಯ ಮುಲ್ಲೆತೋಡುವಿನ ವೆಳ್ಳಿಯಪ್ಪ ಎಸ್ಟೇಟ್ ನಲ್ಲಿ ಕಚೇರಿ ಗುಮಾಸ್ತನಾಗಿ ಕೆಲಸ ಮಾಡಿಕೊಂಡಿದ್ದ ವೆಂಕಟಾಚಲಂ ಎಂಬುವವರು ಕಾಫಿ ತೋಟದಲ್ಲಿ ಒಣಗಿಸಿ ಶೇಖರಿಸಿಟ್ಟಿದ್ದ 5 ಲಕ್ಷ ರೂ ಬೆಲೆಬಾಳುವ 23 ಚೀಲ ಅಂದಾಜು 1150 ಕೇಜಿ ತೂಕದ ಕರಿಮೆಣಸನ್ನು ತೋಟದ ಮಾಲೀಕರಿಗೆ ಹಾಗೂ ಫಿರ್ಯಾದಿ  ಪಿ.ಆರ್. ಗಣೇಶ್ ರವರ ಗಮನಕ್ಕೆ ಬಾರದಂತೆ ಮಾರಾಟ ಮಾಡಿ ಹಣವನ್ನು ಪಡೆದಿದ್ದಲ್ಲದೆ, ಕಾಫಿತೋಟದಲ್ಲಿ ಬೆಳೆದು ನಿಂತಿದ್ದ ಅಡಿಕೆ ಫಸಲನ್ನು ಕೂಡ ಅವರ ಗಮನಕ್ಕೆ ಬಾರದೆ 50,000/- ರೂ ಗೆ ಗುತ್ತಿಗೆ ನೀಡಿ ಹಣವನ್ನು ಪಡೆದುಕೊಂಡು ಅದೇ ದಿನ ಯಾರಿಗೂ ತಿಳಿಯದೆ ತೋಟವನ್ನು ಬಿಟ್ಟು ಹೋಗಿ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುವುದಾಗಿ sಸಿದ್ದಾಪುರದ ವಳ್ಳಿಯಪ್ಪ ಎಸ್ಟೇಟ್ ನ ವ್ಯವಸ್ಥಾಪಕರಾದ ಪಿ.ಆರ್. ಗಣೇಶ್ ರವರು ನೀಡಿದ ದೂರನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಫಿ ಮಾರಾಟ ಮಾಡಿ ವಂಚನೆ:

     ದಿನಾಂಕ 15-12-2017 ರಿಂದ 02-01-2018 ರ ನಡುವೆ ಸಿದ್ಧಾಪುರ ಠಾಣಾ ವ್ಯಾಪ್ತಿಯ ಅತ್ತಿತೋಪು ಮೇ ಫ್ಲೋರ್ ಎಸ್ಟೇಟ್ ನಲ್ಲಿ ಕಚೇರಿ ಗುಮಾಸ್ತ ಹಾಗೂ ರೈಟರ್ ಕೆಲಸ ಮಾಡಿಕೊಂಡಿದ್ದ ವೆಳ್ಳಿಯಪ್ಪ ಎಂಬುವವರು ಕಾಫಿ ತೋಟದ ಗೋದಾಮಿನಲ್ಲಿಟ್ಟಿದ್ದ ಅಂದಾಜು ಬೆಲೆ 2,50,000/- ರೂ ಬೆಲೆಬಾಳುವ 65 ಚೀಲ ಕಾಫಿ ತೋಟದ ಮಾಲೀಕರ ಹಾಗೂ ಫಿರ್ಯಾದಿ ಶ್ರೀನಿವಾಸ ರಾಘವನ್, ವ್ಯವಸ್ಥಾಪಕರ ಗಮನಕ್ಕೆ ಬಾರದಂತೆ ಮಾರಾಟ ಮಾಡಿ ಹಣವನ್ನು ಪಡೆದಿದ್ದಲ್ಲದೆ, ವಿಚಾರಣೆ ಮಾಡಿದಾಗ ಹಣವನ್ನು ನೀಡುವುದಾಗಿ ಪತ್ರದ ಮುಖಾಂತರ ತಿಳಿಸಿದ್ದು, ಕಾಫಿತೋಟದಲ್ಲಿ ಬೆಳೆದು ನಿಂತಿದ್ದ ಅಡಿಕೆ ಫಸಲನ್ನು ಕೂಡ ಅವರ ಗಮನಕ್ಕೆ ಬಾರದೆ ಗುತ್ತಿಗೆ ನೀಡಿ ಹಣವನ್ನು ಪಡೆದುಕೊಂಡು 50,000/- ರೂ ವನ್ನು ಮಾಲೀಕರ ಖಾತೆಗೆ ಹಾಕಿ, 50,000/- ರೂ ಹಣವನ್ನು ಲೆಕ್ಕ ನೀಡದೆ ತೆಗೆದುಕೊಂಡು ಯಾರಿಗೂ ತಿಳಿಯದೆ ತೋಟವನ್ನು ಬಿಟ್ಟು ಹೋಗಿ ಹಣವನ್ನು ನೀಡದೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುವುದಾಗಿ ನೀಡಿದ ಪುಕಾರಿಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಅಪಘಾತ:

     ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯ ಕೂಗೂರು ಗ್ರಾಮದ ನಿವಾಸಿ ಧರ್ಮ ಎಂಬವರ ಮಗ ಅರುಣ ಹಾಗು ಕೂಗೂರು ಗ್ರಾಮದ ಗಿರೀಶ ಎಂಬವರು ದಿನಾಂಕ 24-12-2017 ರಂದು ಸಮಯ 15-30 ಗಂಟೆಗೆ ಹೆಗ್ಗುಳ ಗ್ರಾಮದಿಂದ ಕೂಗೂರು ಗ್ರಾಮಕ್ಕೆ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ನಾಯಿಯೊಂದು ಸ್ಕೂಟರಿಗೆ ಅಡ್ಡ ಬಂದ ಕಾರಣ ಸ್ಕೂಟರ್ ಸವಾರ ಗಿರೀಶ ಮೋಟಾರ್ ಬೈಕಿನ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಚರಂಡಿಗೆ ಬಿದ್ದು,  ಪರಿಣಾಮ ಹಿಂಬದಿ ಸವಾರ ಅರುಣರವರ ಸೊಂಟಕ್ಕೆ ಪೆಟ್ಟಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಫಿರ್ಯಾದಿ ಧರ್ಮರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪತ್ತೆ:

     ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ನಾಲ್ಕೇರಿ ಗ್ರಾಮದಲ್ಲಿ ಆರೋಪಿ ಎಂ.ಎನ್. ಸುದೀರ್ ಎಂಬವರು ಅವರ ಅಂಗಡಿಯ ಹಿಂಭಾಗದ ಕಾಫಿ ತೋಟದ ಒಳಗಡೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ಕುಟ್ಟ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಡಿ.ಕುಮಾರ್ ರವರು ಹಾಗು ಸಿಬ್ಬಂದಿಗಳು ದಾಳಿ ಮಾಡಿ ಆರೋಪಿಯು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 550/- ರೂ ಬೆಲೆಬಾಳುವ ಮದ್ಯದ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
 

Wednesday, February 7, 2018

ಅಂಗಡಿಗೆ ನುಗ್ಗಿ ಮದ್ಯ ಕಳವು:
 
     ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕುಶಾಲನಗರದ ಸುಂದರನಗರದಲ್ಲಿರುವ ದರ್ಶನ್ ವೈನ್ ಅಂಗಡಿಗೆ ದಿನಾಂಕ 5-2-2018 ರಾತ್ರಿ ಸಮಯದಲ್ಲಿ ನುಗ್ಗಿದ ಕಳ್ಳರು ರೂ. 6,080/- ಮೌಲ್ಯದ ವಿವಿಧ ಮಾದರಿಯ ಮದ್ಯವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು,  ಕುಶಾಲನಗರ ಮುಳ್ಳುಸೋಗೆ ಗ್ರಾಮದ ನಿವಾಸಿ ವಿ.ಜಿ. ಮುರಳಿದರ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಕುಶಾಲನಗರ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ಮಗನಿಂದ ತಂದೆ ಮೇಲೆ ಹಲ್ಲೆ:
 
     ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಬಳೂರು ಗ್ರಾಮದ ನಿವಾಸಿ ಬಿ.ವಿ. ಅಣ್ಣಯ್ಯಚಾರ್ ಎಂಬವರ ಮೇಲೆ ದಿನಾಂಕ 6-2-2018 ರಂದು ಶುಂಠಿ ಬೇಸಾಯದ ಬಗ್ಗೆ ಅವರ ಮಗ ವರದರಾಜ್ ಹಾಗು ಸೊಸೆ ಲೀಲಾರವರು ಜಗಳ  ಮಾಡಿ  ಕಬ್ಬಿಣದ ಕೊಳವೆಯಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲಿಸರು ತನಿಖೆ ಕೈಗೊಂಡಿದ್ದಾರೆ.
 
ವಿಷ ನೀಡುವ ಮೂಲಕ ಕೊಲೆಗೆ ಯತ್ನ:
 
      ಸೋಮವಾರಪೇಟೆ ತಾಲೋಕು ವಾಲ್ನೂರು ತ್ಯಾಗತ್ತೂರು ಗ್ರಾಮದ ನಿವಾಸಿ ಶ್ರೀಮತಿ ಕೆ.ಎ. ಬೋಜಮ್ಮ ನವರ ಹಿರಿಯ ಮಗಳಾದ ಜಯಶ್ರೀಯನ್ನು ಕುಶಾಲನಗರದ ಪಿ.ಎಸ್. ಪ್ರಸಾದ್ ರವರು ಮದುವೆಯಾಗಿ  ಸಂಸಾರದಲ್ಲಿ ಹೊಂದಾಣಿಕೆ ಯಾಗದೇ ಇದ್ದುದರಿಂದ ಜಯಶ್ರೀರವರು ಗಂಡನ ವಿರುದ್ದ ವಿಚ್ಛೇದನೆಗಾಗಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದು  ವಿಚ್ಛೇದನೆಗಾಗಿ ಅರ್ಜಿ ಸಲ್ಲಿಸಲು ಶ್ರೀಮತಿ ಕೆ.ಎ. ಬೋಜಮ್ಮನವರು ಕುಮ್ಮಕ್ಕು ನೀಡಿರುತ್ತಾರೆಂದು ಭಾವಿಸಿದ ಅಳಿಯ ಪಿ.ಎಸ್. ಪ್ರಸಾದ್ ರವರು ದಿನಾಂಕ 7-1-2018 ರಂದು ಸಂಜೆ 5-00 ಗಂಟೆಗೆ ಮಿಲ್ಕಿಬಾರ್ ಚಾಕೊಲೇಟ್ ಗೆ ಯಾವುದೋ ವಿಷವನ್ನು ಬೆರೆಸಿ ಪಿ.ಎಸ್. ಪ್ರಸಾದ್ ರವರ 11 ವರ್ಷದ ಮಗನೊಂದಿಗೆ ಕಳುಹಿಸಿಕೊಟ್ಟು ತಿನ್ನಲು ನೀಡಿ ಅದರ ಮೂಲಕ ಕೊಲೆಗೆ ಯತ್ನಿಸಿದ್ದಾಗಿ  ಶ್ರೀಮತಿ ಕೆ.ಎ. ಬೋಜಮ್ಮನವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ಮೋಟಾರ್ ಬೈಕ್ ಕಳವು:
 
       ಮಡಿಕೇರಿ ನಗರದ ಮುತ್ತಪ್ಪ ದೇವಾಲಯದ ಹತ್ತಿರ ವಾಸವಾಗಿರುವ ಅಬ್ದುಲ್ ಬಾಸಿತ್ ಎಂಬವರು ದಿನಾಂಕ 4-2-2018 ರಂದು ಸಂಜೆ 7-15 ಗಂಟೆ ಸಮಯದಲ್ಲಿ ತಮ್ಮ ಬಾಪ್ತು Royal Enfeild  ಮೋಟಾರ್ ಸೈಕಲನ್ನು ತಮ್ಮ ಮನೆಯ ಕಾಪೌಂಡ್ ನಲ್ಲಿ ನಿಲ್ಲಿಸಿದ್ದು ರಾತ್ರಿ 10-00 ಗಂಟೆ ಸಮಯದಲ್ಲಿ ಬಂದು ನೋಡಿದಾಗ ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, February 6, 2018

ಬಸ್ ಹರಿದು ಮಹಿಳೆ ಸಾವು
                       ದಿನಾಂಕ 05/02/2018ರಂದು ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟು ನಿವಾಸಿ ಹೆಚ್‌.ಎಸ್.ರಾಜು ಎಂಬವರ ಪತ್ನಿ ದೇವಕಿ ಎಂಬವರು ಚಿಕ್ಕಮಂಡೂರು ಗ್ರಾಮಕ್ಕೆ ಹೋಗಲು ಕೆಎ-12-ಎ-2388ರ ಖಾಸಗಿ ಬಸ್ಸನ್ನು ಹತ್ತುತ್ತಿದ್ದಾಗ ಬಸ್‌ ಚಾಲಕ ಪ್ರವೀಣ್ ಕುಮಾರ್ ಬಸ್ಸನ್ನು ಏಕಾ ಏಕಿ ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬಸ್‌ ಹತ್ತುತ್ತಿದ್ದ ದೇವಕಿ ಕೆಳಗೆ ಬಿದ್ದು ಬಸ್‌ನ ಚಕ್ರ ಅವರ ಮೇಲೆ ಹರಿದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                     ದಿನಾಂಕ 04/02/2018ರಂದು ಕುಶಾಲನಗರ ಬಳಿಯ ಹೆಬ್ಬಾಲೆ ನಿವಾಸಿ ಸುಜಾತ ಎಂಬವರು ಅವರ ಪತಿ ಶ್ರೀನಿವಾಸ್ ಎಂಬವರೊಂದಿಗೆ ಗ್ರಾಮದ ಆನಂದ ಎಂಬವರ ಮನೆಗೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಗಳಾದ ಬಸಪ್ಪ, ಸುಶೀಲ, ಗೋಪಿ, ಹರೀಶ್, ಅಭಿಲಾಷ್ ಮತ್ತು ಉದಯ ಎಂಬವರು ಸೇರಿಕೊಂಡು ಆಸ್ತಿ ವಿಚಾರದಲ್ಲಿ ಜಗಳವಾಡಿ ಶ್ರೀನಿವಾಸ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                     ದಿನಾಂಕ 05/02/2018ರಂದು ಶನಿವಾರಸಂತೆ ಬಳೀಯ ಒಡೆಯನಪುರ ನಿವಾಸಿ ಮೂರ್ತಿ ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಪತ್ನಿ ಹಾಗೂ ಮಕ್ಕಳು ಆತನನ್ನು ತೊರೆದು ಹೋಗಿರುವ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, February 5, 2018

ಅಪರಿಚಿತರಿಂದ ವ್ಯಕ್ತಿಯ ಅಪಹರಣ:

     ದಿನಾಂಕ 31-1-2018 ರಂದು ಕಲಬುರ್ಗಿ ಜಿಲ್ಲೆಯ ಕುರಿಕೋಟ ಗ್ರಾಮದ ತೇಜಪ್ಪ ಎಂಬವರ ಮಗ ಗಣೇಶ ಎಂಬವರು ಸ್ನೇಹಿತರಾದ ಕೈಲಾಶ್, ಶಿವಲಿಂಗ, ಸಿದ್ದಪ್ಪ, ಬಾಬುರಾವ್ ಹಾಗು ಆನಂದ ರವರುಗಳು ಸೇರಿ ಕೊಡಗು ಜಿಲ್ಲೆಗೆ ಪ್ರವಾಸ ಬಂದಿದ್ದು, ದಿನಾಂಕ 3-2-2018 ರಂದು ಸಂಜೆ 7-30 ಗಂಟೆಗೆ ಕುಶಾಲನಗರದ ಕಾರ್ಮೆಲ್ ಲಾಡ್ಜ್ ನಲ್ಲಿ ಕೋಣೆಗಳನ್ನು ಬುಕ್ ಮಾಡಿ ರಾತ್ರಿ 10-00 ಗಂಟೆಗೆ ಊಟ ಮುಗಿಸಿ ಲಾಡ್ಜ್ ಗೆ ಹೋಗುತ್ತಿದ್ದಾಗ 4 ಜನ ಅಪರಿಚಿತ ವ್ಯಕ್ತಿಗಳು ಇನ್ನೋವಾ ಕಾರಿನಲ್ಲಿ ಬಂದು ಫಿರ್ಯಾದಿ ಗಣೇಶರವರ ಸ್ನೇಹಿತ ಕೈಲಾಸ್ ನ್ನು ಅಪಹರಿಸಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕ್ ಡಿಕ್ಕಿ ಇಬ್ಬರಿಗೆ ಗಾಯ:

     ಬೆಂಗಳೂರಿನಿಂದ ಪ್ರವೀಣ್ ಭಟ್ ಹಾಗು ಅವರ ಸ್ನೇಹಿತರುಗಳು ದಿನಾಂಕ 3-1-2018 ರಂದು ಕೊಡಗು ಜಿಲ್ಲೆಯ ಕೂಡಿಗೆಗೆ ಬಂದಿದ್ದು ದಿನಾಂಕ 04-02-2018 ರಂದು ಸಮಯ ಸುಮಾರು 02.30 ಗಂಟೆಗೆ ಶೃತಿ ಡಿ ಪಾಟಿಲ್‌ ಹಾಗೂ ಸುಜೇಯ ಆಚಾರ್ಯ ಹಾಗೂ ಇನ್ನಿತರ ಸ್ನೇಹಿತರು ದುಬಾರೆ ರಾಪ್ಟಿಂಗ್‌ಗೆ ಹೋಗಿ ರಸ್ತೆ ಬದಿಯಲ್ಲಿದ್ದ ಎಳೆನೀರು ಕುಡಿಯಲು ನಂಜರಾಯಪಟ್ಟಣ ರಾಜ್ಯ ಹೆದ್ದಾರಿ ರಸ್ತೆ ದಾಟುವಾಗ ಗುಡ್ಡೆಹೊಸರು ಕಡೆಯಿಂದ ಬಂದ ಕೆಎ-12ಜೆ 6455 ರ ಮೊಟಾರು ಬೈಕ್‌ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕನ್ನು ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಶೃತಿ ಡಿ ಪಾಟಿಲ್‌ ಹಾಗೂ ಬೈಕ್‌ನಲ್ಲಿದ್ದ ಕಿರಣರವರಿಗೆ ರಕ್ತಗಾಯವಾಗಿದ್ದು ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗು ಸೇರಿ ಇಬ್ಬರು ಮಹಿಳೆಯವರು ಕಾಣೆ:

     ಪೊನ್ನಂಪೇಟೆ ಠಾಣಾ ಸರಹದ್ದಿನ ಕಾನೂರು ಗ್ರಾಮದ ಬ್ರಹ್ಮಗಿರಿ ಪೈಸಾರಿಯಲ್ಲಿ ವಾಸವಾಗಿರುವ ಪಂಜರಿ ಎರವರ ಎಂ.ಪ್ರಥ್ವಿ @ ಶರಣು ಎಂಬವರು ದಿನಾಂಕ 2-2-2018 ರಂದು ತನ್ನ ತಾಯಿಯನ್ನು ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಅವರ ಪತ್ನಿ ಪಿ.ಪಿ. ಕಾವ್ಯ, ಮಗು ಪಿ.ಪಿ. ಅಶ್ವಿನಿ ಮತ್ತು ನಾದಿನಿ ಪಿ.ಕೆ. ಪ್ರಿಯಾ @ ಸಂದ್ಯ ರವರುಗಳು ಕಾಣೆಯಾಗಿದ್ದು ಈ ಸಂಬಂಧ ಫಿರ್ಯಾದಿ ಪಂಜರಿ ಎರವರ ಎಂ. ಪ್ರಥ್ವಿ ಎಂಬವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಜೀಪು ಡಿಕ್ಕಿ:

     ದಿನಾಂಕ 4-2-2018 ಹುಣಸೂರು ತಾಲೋಕಿನ ಹೈರಿಗೆ ಗ್ರಾಮದವರಾದ ಶಪಿವುಲ್ಲಾ ರವರು ತನ್ನ ಪತ್ನಿಯೊಂದಿಗೆ ಮೋಟಾರ್ ಸೈಕಲಿನಲ್ಲಿ ನಾಪೋಕ್ಲು ಗ್ರಾಮಕ್ಕೆ ಬರುತ್ತಿದ್ದಾಗ ತಿತಿಮತಿ ನಗರದ ದೇವಸ್ಥಾನದ ಹತ್ತಿರ ಹಿಂದಿನಿಂದ   ಜೀಪವೊಂದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಪಿವುಲ್ಲಾ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಸಫಿವುಲ್ಲಾ ಹಾಗು ಅವರ ಪತ್ನಿ ಬೈಕಿನಿಂದ ಬಿದ್ದು ಗಾಯಗೊಂಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Sunday, February 4, 2018

ಬಾಲಕನಿಗೆ ಕಾರು ಡಿಕ್ಕಿ
                       ದಿನಾಂಕ 03/02/2018ರಂದು ಭಾಗಮಂಡಲ ಬಳಿಯ ತಲಕಾವೇರಿ ನಿವಾಸಿ ಬಿ.ಆರ್.ಸುಶೀಲ ಎಂಬವರ ಮಗ 8 ವರ್ಷದ ಬಾಲಕ ಪ್ರೀತಮ್ ಎಂಬಾತನು ಶಾಲೆಗೆ ಹೋಗಲು ಪುಸ್ತಕ ತರಲೆಂದು ರಸ್ತೆ ದಾಟುತ್ತಿರುವಾಗ ಕೆಎ-06-ಎಎ-1078ರ ಕಾರನ್ನು ಅದರ ಚಾಲಕ ಗೋವಿಂದರಾಜು ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರೀತಮ್‌ಗೆ ಡಿಕ್ಕಿಪಡಿಸಿದ ಪರಿಣಾಮ ಪ್ರೀತಮ್‌ಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗುಂಡು ಹೊಡೆದು ಕೊಲೆ
                     ದಿನಾಂಕ 03/02/2018ರಂದು ಮೂರ್ನಾಡು ಬಳಿಯ ಎಂ ಬಾಡಗ ನಿವಾಸಿ ಉತ್ತಪ್ಪ ಎಂಬವರು ಅವರ ಅಣ್ಣ ದೇವಯ್ಯ ಹಾಗೂ ಅಣ್ಣನ ಪತ್ನಿ ದೇಚಮ್ಮ ಎಂಬವರನ್ನು ಕೋವಿಯಿಂದ ಗುಂಡು ಹೊಡೆದು ಕೊಲೆ ಮಾಡಿದ್ದು ನಂತರ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ವರದಿಯಾಗಿದೆ. ಜಾಗದ ವಿಚಾರದಲ್ಲಿನ ವಿವಾದದಿಂದಾಗಿ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಂಚನೆ ಪ್ರಕರಣ
                ಚೆಯ್ಯಂಡಾಣೆ ನಿವಾಸಿ ಎಂ.ಎಸ್.ಚಿಣ್ಣಪ್ಪ ಎಂಬವರಿಗೆ ಮರಂದೋಡ ಗ್ರಾಮದಲ್ಲಿರುವ ಆಸ್ತಿಯನ್ನು ಆರೋಪಿಗಳಾದ ಅಕ್ಕಮ್ಮ, ಸುನಿತಾ ಬೋಪಣ್ಣ, ಮೊಣ್ಣಪ್ಪ ಕೆ.ಎಂ. ಮತ್ತು ಕೆ.ಕೆ.ಅಕ್ಕಮ್ಮ ಎಂಬವರು ಅವರ ಆಸ್ತಿ ಎಂಬುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ತೊಟಗಾರಿಕಾ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಸರ್ಕಾರಕ್ಕೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                     ದಿನಾಂಕ 03/02/2018ರಂದು ಕುಶಾಲನಗರದ ವಿವೇಕಾನಂದ ಬಡಾವಣೆ ನಿವಾಸಿ ಮಂಜುನಾಥ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಮಂಜುನಾಥ್ ಅತಿಯಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ನೋವಿನಿಂದ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ರಿಕ್ಷಾ ಡಿಕ್ಕಿ
                      ದಿನಾಂಕ 03/02/2018ರಂದು ವಿರಾಜಪೇಟೆ ಬಳಿಯ ಚೆಂಬೆಬೆಳ್ಳೂರು ನಿವಾಸಿ ಕೆ.ಸಿ.ಕುಟ್ಟಪ್ಪ ಎಂಬವರು ಅವರ ಮಾರುತಿ ಕಾರು ಸಂಖ್ಯೆ ಕೆಎ-12-ಜೆಡ್-6316ರಲ್ಲಿ ವಿರಾಜಪೇಟೆಗೆ ಬರುತ್ತಿರುವಾಗ ಕುಕ್ಲೂರು ಬಳಿಯ ತಾತಂಡ ಮೊಟ್ಟೆ ಎಂಬಲ್ಲಿ ಎದುರಿನಿಂದ ಕೆಎ-12-ಎ-4240ರ ರಿಕ್ಷಾವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕುಟ್ಟಪ್ಪನವರ ಕಾರಿಗೆ ಡಿಕ್ಕಿಪಡಿಸಿ ನಂತರ ಚಾಲಕನು ರಿಕ್ಷಾವನ್ನು ಅಲ್ಲೇ ನಿಲ್ಲಿಸಿ ಓಡಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, February 3, 2018

ಮೋಟಾರ್ ಬೈಕಿಗೆ ಜೀಪು ಡಿಕ್ಕಿ.
 
     ಸೋಮವಾರಪೇಟೆ ತಾಲೋಕು ಗೋಣಿಮರೂರು ಗ್ರಾಮದ ನಿವಾಸಿ ಟಿ.ಎಸ್. ಪ್ರಶಾಂತ್ ಎಂಬವರು ದಿನಾಂಕ 2-2-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಕೇರಳದ ಮಾನಂದವಾಡಿ ಯಿಂದ ಕುಟ್ಟ ಮಾರ್ಗವಾಗಿ ಸೋಮವಾರಪೇಟೆ ತಾಲೋಕಿನ ಗೋಣಿಮರೂರು ಗ್ರಾಮಕ್ಕೆ ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ಶ್ರೀಮಂಗಲ ಸಮೀಪದ ಇರ್ಪು ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಜೀಪನ್ನು ಅದರ ಚಾಲಕ ಯಾವುದೇ ಸೂಚನೆಗಳಿಲ್ಲದೆ  ರಸ್ತೆಯ ಮದ್ಯಭಾಗಕ್ಕೆ ಚಲಿಸಿದ ಪರಿಣಾಮ ಫಿರ್ಯಾದಿ ಟಿ.ಎಸ್. ಪ್ರಶಾಂತ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿಯಾಗಿ ಟಿ.ಎಸ್. ಪ್ರಶಾಂತರವರು ಕೆಳಗೆ ಬಿದ್ದು ಗಾಯಗೊಂಡಿದ್ದು, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:
 
     ವಿರಾಜಪೇಟೆ ತಾಲೋಕು ಬೈಗೋಡು ಗ್ರಾಮದ ಪಣಿಎರವರ ಶಾರದ ಎಂಬವರು ಗಂಡ ಅಪ್ಪುಟ್ಟ (48) ರವರು ದಿನಾಂಕ 2-2-2018 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Friday, February 2, 2018

ರಸ್ತೆ ಅಪಘಾತ
                            ದಿನಾಂಕ 31/01/2018ರಂದು ಕುಶಾಲನಗರ ಬಳಿಯ ಗೊಂದಿಬಸವನಹಳ್ಳಿ ನಿವಾಸಿ ಡಿ.ನವೀನ್ ಕುಮಾರ್ ಎಂಬವರು ಮಡಿಕೇರಿಯಿಂದ ಸ್ನೇಹಿತರೊಂದಿಗೆ ಕೆಎ-12-ಜೆಡ್-9628ರ ಕಾರಿನಲ್ಲಿ ಕುಶಾಲನಗರ ಕಡೆಗೆ ಹೋಗುತ್ತಿರುವಾಗ ಅರಣ್ಯ ಭವನದ ಬಳಿ ಎದುರಿನಿಂದ ಕೆಎ-01-ಎಹೆಚ್- 3397ರ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನವೀನ್‌ ಕುಮಾರ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಫಿ ಕಳವು ಪ್ರಕರಣ
                              ದಿನಾಂಕ 28/01/2018ರಂದು ಶ್ರೀಮಂಗಲ ಬಳಿಯ ಕುಮಟೂರು ನಿವಾಸಿ ಲತಾ ಎಂಬವರಿಗೆ ಸೇರಿದ ನಿಟ್ಟೂರು ಗ್ರಾಮದ ಕಾಫಿ ತೋಟಕ್ಕೆ ಕಮಲಾಕ್ಷಿ, ವಿಷ್ಣು ಮುತ್ತಣ್ಣ ಮತ್ತು ವಿಜಯ ಭಾರ್ಗವ ಎಂಬವರು ಅಕ್ರಮವಾಗಿ ಪ್ರವೇಶಿಸಿ ಸುಮಾರು ರೂ.2,50,000/- ಮೌಲ್ಯದ 18,000 ಕೆ.ಜಿ. ಹಸಿ ಕಾಫಿಯನ್ನು ಕಳವು ಮಾಡಿ ಸಾಗಿಸಿದ್ದು ವಿಚಾರಿಸಿದ ಕಾರಣಕ್ಕೆ ಲತಾರವರಿಗೆ ಹೀಯಾಳಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                        ದಿನಾಂಕ 01/02/2018ರಂದು ಮಡಿಕೇರಿ ನಗರದ ದೇಚೂರು ನಿವಾಸಿ ಪಿ.ಕೆ.ನಾಣಯ್ಯ ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಅವರ ಅಳಿಯ ರ್ಯಾಲಿ ಕಾರ್ಯಪ್ಪ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಪಿ.ಕೆ.ನಾಣಯ್ಯನವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, February 1, 2018

ಲಾರಿ ಅಪಘಾತ
                    ಪಿರಿಯಾಪಟ್ಟಣ ತಾಲೋಕು ಅರೆನಹಳ್ಳಿ ಗ್ರಾಮದವರಾದ ಶಿವಣ್ಣ ಎಂಬವರು ದಿನಾಂಕ 31-1-2018 ರಂದು ಬೆಳಗ್ಗೆ 5-45 ಗಂಟೆ ಸಮಯದಲ್ಲಿ ಅವರ ಗ್ರಾಮದ ಶಿವಣ್ಣ, ಜಗದೀಶ, ಮಹೇಶ ಹಾಗು ಲಾರಿ ಚಾಲಕ ಅಬ್ದುಲ್ ಹಮೀದ್ ರವರ ಜೊತೆ ಲೋಡ್ ಕೆಲಸಕ್ಕೆ ಬಂದು ಲಾರಿಯಲ್ಲಿ ಕೊಂಡಂಗೇರಿ ಅಮ್ಮತ್ತಿ ಕಡೆಯಿಂದ ಸಿದ್ದಾಪುರದ ಕಡೆಗೆ ಹೋಗುತ್ತಿದ್ದಾಗ ಪುಲಿಯೇರಿ ಗ್ರಾಮದ ಆನಂದಪುರ ರಸ್ತೆಯಲ್ಲಿ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಲಾರಿ ರಸ್ತೆ ಬದಿಯ ಕಾಫಿ ತೋಟದೊಳಗೆ ಮಗುಚಿ ಬಿದ್ದ ಪರಿಣಾಮವಾಗಿ ಲಾರಿಯಲ್ಲಿದ್ದ ಫಿರ್ಯಾದಿ ಶಿವಣ್ಣ , ಜಗದೀಶ ಹಾಗು ಮಹೇಶರವರು ಗಾಯಗೊಂಡಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಎಟಿಎಮ್ ಪಿನ್ ಪಡೆದು ಹಣ ವಂಚನೆ
               ಮಡಿಕೇರಿ ನಗರದ ಸಂಪಿಕೆ ಕಟ್ಟೆ ನಿವಾಸಿ ಎಂ.ಪಿ. ಯೋಗಾನಂದ ಎಂಬವರಿಗೆ ದಿನಾಂಕ 20-1-2018 ರಂದು ಅಪರಿಚಿತ ವ್ಯಕ್ತಿಯೋರ್ವ ದೂರವಾಣಿ ಮೂಲಕ ತಾನು ಎಸ್.ಬಿ.ಐ. ಬ್ಯಾಂಕಿನ ಅಧಿಕಾರಿ ಎಂದು ಹೇಳಿ ಎ.ಟಿ.ಎಂ. ಕಾರ್ಡಿನ ಮಾಹಿತಿಯನ್ನು ಪಡೆದುಕೊಂಡು ಸದರಿ ಎಂ.ಪಿ. ಯೋಗಾನಂದನವರ ಬ್ಯಾಂಕ್ ಖಾತೆಯಿಂದ ದಿನಾಂಕ 20-1-2018 ರಿಂದ 26-1-2018ರ ಅವಧಿಯಲ್ಲಿ 3,45,900/0 ರೂ.ಗಳನ್ನು ಡ್ರಾ ಮಾಡಿ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿ ಸಾವು
                 ಮಡಿಕೇರಿ ತಾಲೋಕು ಚಿಕ್ಲಿಹೊಳೆ ಪೈಸಾರಿಯಲ್ಲಿ ವಾಸವಾಗಿರುವ ಶ್ರೀಮತಿ ಗಂಗೆ ರವರ ಗಂಡ ರಾಜು ಮತ್ತು ಮುರುಗೇಶ್ ರವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಮುರುಗೇಶ್ ರವರು ರಾಜುರವರ ಮೇಲೆ ಹಲ್ಲೆ ನಡೆಸಿದ್ದು, ರಾಜುರವರು ಗಾಯಗೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿ ರಾಜುರವರು ದಿನಾಂಕ 31-1-2018 ರಂದು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಕೂಟರಿಗೆ ಕಾರು ಡಿಕ್ಕಿ
                         ವಿರಾಜಪೇಟೆ ತಾಲೋಕು ಬೊಳ್ಳುಮಾಡು ಗ್ರಾಮದ ನಿವಾಸಿ ಎಂ.ಆರ್. ಬೆಳ್ಳ್ಯಪ್ಪ ರವರ ತಂದೆ ರಾಮಕೃಷ್ಣ ಎಂಬುವರು ತಮ್ಮ ಬಾಪ್ತ ಹೋಂಡಾ ಆಕ್ಟೀವಾ ಸ್ಕೂಟರ್ ಸಂಖ್ಯೆ ಕೆಎ-12-ಆರ್-7968 ರಲ್ಲಿ ವಿರಾಜಪೇಟೆಯಿಂದ ಬೊಳ್ಳುಮಾಡುವಿಗೆ ಹೋಗುತ್ತಿದ್ದು, ಕುಕ್ಲೂರು ಗ್ರಾಮದ ಸೆಂಟ್ ಜಾನ್ಸ್ ಇಂಡಸ್ಟ್ರೀಸ್ ಬಳಿ ಎದುರುನಿಂದ ಬಂದ ಕೆಎ-04-ಎಂಎ-4356 ರ ಮಾರುತಿ 800 ಕಾರಿನ ಚಾಲಕಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಮಕೃಷ್ಣ ಓಡಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಡಪಸಿದ ಪರಿಣಾಮ ರಾಮಕೃಷ್ಣ ರವರು ಗಾಯಗೊಂಡು ವಾಹನವು ಸಹ ಜಖಂಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕ್ಷುಲ್ಲಕ ಕಾರಣಕ್ಕೆ ಬೆದರಿಕೆ
                ದಿನಾಂಕ 31-01-2018 ರಂದು ಗೋಣೀಕೊಪ್ಪ ಠಾಣಾ ಸರಹದ್ದಿಗೆ ಸೇರಿದ ಬಾಳಾಜಿ ಗ್ರಾಮದ ನಿವಾಸಿ ಕಾವ್ಯ ಎಂಬುವವರು ಕೆರೆಯ ಏರಿಯಲ್ಲಿ ಕುಳಿತ್ತಿದ್ದಾಗ ಅದೇ ಗ್ರಾಮದ ನಿವಾಸಿಗಳಾದ ಮುತ್ತಣ್ಣ ಮತ್ತು ತಿಮ್ಮಯ್ಯನವರು ಕಾವ್ಯರವರಿಗೆ ದೊಣ್ಣೆಯಿಂದ ಹೊಡೆಯಲು ಪ್ರಯತ್ನಿಸಿ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಕಾವ್ಯ ರವರು ನೀಡದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಜೂಜಾಟ 
              ದಿನಾಂಕ 31-01-2018 ರಂದು ಶನಿವಾರಸಂತೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಮರಿಸ್ವಾಮಿ ಮತ್ತು ಸಿಬ್ಬಂದಿಯವರು ಬೆಸೂರು ಗ್ರಾಮದ ನ್ಯಾಯದಹಳ್ಳಿ ಸೇತುವೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಜೂಜಾಡುತ್ತಿದ್ದ 5 ಜನ ಆರೋಪಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ 1200 ರೂ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.