Sunday, March 26, 2017

ಮಹಿಳೆ ಮತ್ತು ಮಕ್ಕಳು ಕಾಣೆ
                 ಅಸ್ಸಾಂ ರಾಜ್ಯದ ಮೂಲದವರಾದ ರಾಮ್ ಬುಯನ್ ಎಂಬುವವರು ಸಂಸಾರದೊಂದಿಗೆ 2 ವರ್ಷಗಳಿಂದ ವಿರಾಜಪೇಟೆ ತಾಲೂಕಿನ ನರಿಯಂದಡ ಗ್ರಾಮದ ಬಷೀರ್ ರವರ ಲೈನ್ ಮನೆಯಲ್ಲಿ ವಾಸವಾಗಿದ್ದು ದಿನಾಂಕ 20-3-2017 ರಂದು ರಾಮ್ ಬುಯನ್ ರವರ ಪತ್ನಿ ರೀಟಾ ಮಕ್ಕಳಾದ ರಾಜ್, ರಾಜೇಶ್, ಗಿಟ್ಟಿಕಾರವರು ಕಾಣೆಯಾಗಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದೇವಸ್ಥಾನದ ಹುಂಡಿ ಕಳವು
                  ಕುಶಾಲನಗರದ ಗೊಂದಿಬಸವನಹಳ್ಳಿ ದೇವಿ ಕೆರೆಯಮ್ಮ ದೇವಸ್ಥಾನದ ಭಂಡಾರದ ಹುಂಡಿಯನ್ನು ಕಳವು ಮಾಡಿದ ಘಟನೆ ನಡೆದಿದೆ. ದಿನಾಂಕ 25-3-2017 ರಂದು ಗೊಂದಿಬಸವನಹಳ್ಳಿಯ ನಿವಾಸಿಯಾದ ಸಂತೋಷರವರು ಸ್ನೇಹಿತರೊಂದಿಗೆ ಕುಶಾಲನಗರಕ್ಕೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಯಾದ ಯೋಗೇಶ ಎಂಬುವವರು ಗೊಂದಿಬಸವನಹಳ್ಳಿ ದೇವಿ ಕೆರೆಯಮ್ಮ ದೇವಸ್ಥಾನದ ಮುಂಭಾಗದಲ್ಲಿದ್ದ ಭಂಡಾರದ ಹುಂಡಿಯನ್ನು ಕಳವು ಮಾಡಿಕೊಂಡು ಹೋಗುತ್ತಿದ್ದವನನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲಿಗೆ ಕಾರು ಡಿಕ್ಕಿ
                  ಮೋಟಾರು ಸೈಕಲಿಗೆ ಕಾರು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಕುಶಾಲನಗರದ ಗಂಧದಕೋಟೆ ಎಂಬಲ್ಲಿ ನಡೆದಿದೆ. ದಿನಾಂಕ 24-3-2017 ರಂದು ಬಸವನಹಳ್ಳಿಯ ನಿವಾಸಿಯಾದ ಪುರುಷೋತ್ತಮ ಎಂಬುವವರು ಕುಶಾಲನಗರದ ಕಡೆಗೆ ಹೋಗುತ್ತಿರುವಾಗ ಹಿಂದುಗಡೆಯಿಂದ ಮಾರುತಿ ಕಾರಿನ ಚಾಲಕ ಗಂಧದಕೋಟೆಯ ನಿವಾಸಿ ವೇಣುಗೋಪಾಲ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಹಿಂದುಗಡೆಯಿಂದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿ ಪುರುಷೋತ್ತಮರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, March 25, 2017

ಮೋಟಾರು ಸೈಕಲ್ ಗೆ ಲಾರಿ ಡಿಕ್ಕಿ
      ಮೋಟಾರು ಸೈಕಲಿಗೆ ಹಿಂದಿನಿಂದ ಕಂಟೇನರ್ ಲಾರಿ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಕುಶಾಲನಗರದ ಮುಳ್ಳುಸೋಗೆ ಎಂಬಲ್ಲಿಂದಸವರದಿಯಾಗಿದೆ. ದಿನಾಂಕ 22-3-2017 ರಂದು ಬೈಲ್ ಕೊಪ್ಪದ ನಿವಾಸಿ ರಮೇಶರವರು ಟಿವಿಎಸ್ ಮೊಪೆಡ್ ನಲ್ಲಿ ಹೋಗುತ್ತಿರುವಾಗ ಮುಳ್ಳುಸೋಗೆ ಎಂಬಲ್ಲಿಗೆ ತಲುಪುವಾಗ ಹಿಂದಿನಿಂದ ಬಂದ ಕಂಟೈನರ್ ಲಾರಿಯನ್ನು ಚಾಲಕ ತೀರ್ಥರಾಮ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿ ಪಡಿಸಿದ ಪರಿಣಾಮ ರಮೇಶರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ಕ್ಷುಲ್ಲಕ ಕಾರಣಕ್ಕೆ ಜಗಳ:
      ಶ್ರೀಮಂಗಲ ಠಾಣಾ ಸರಹದ್ದಿನ ಬಾಡಗರಕೇರಿ ಗ್ರಾಮದ ನಿವಾಸಿಯಾದ ಮಲ್ಲೇಂಗಡ ತಿಮ್ಮಯ್ಯ ಎಂಬುವವರು  ಅದೇ ಗ್ರಾಮದ ಮಲ್ಲೇಂಗಡ ಮಾದಪ್ಪ ಎಂಬುವವರ ತೋಟದ ಒಳಗೆ ಪ್ರವೇಶ ಮಾಡಿ ಸ್ಪಿಂಕ್ಲರ್ ಪೈಪುಗಳನ್ನು ಜೋಡಿಸಿದ್ದು ಈ ಬಗ್ಗೆ ತಿಮ್ಮಯ್ಯನವರನ್ನು ವಿಚಾರಿಸಿದಾಗ ಜಗಳ ತೆಗೆದು ಗುದ್ದಿ ನೋವು ಪಡಿಸಿ ಅವ್ಯಾಚ ಶಬ್ದಗಳಿಂದ ಬೈದಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವ್ಯಕ್ತಿ ಕಾಣೆ:
        ಕೆಲಸಕ್ಕೆ ಹೋದ ವ್ಯಕ್ತಿ ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಕೈಕೇರಿ ಗ್ರಾಮದಿಂದ ವರದಿಯಾಗಿದೆ. ದಿನಾಂಕ 16-3-2017 ರಂದು ಕೈಕೇರಿ ಗ್ರಾಮದ ಈರಣ್ಣ ಕಾಲೋನಿಯ ನಿವಾಸಿ 30 ವರ್ಷ ಪ್ರಾಯದ ಸುಬ್ರಮಣಿ ಎಂಬುವವರು ಸೆಂಟ್ರಿಂಗ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಒಂದು ವಾರವಾದರೂ ಮನೆಗೆ ಬಾರದೇ ಇದ್ದು ಈ ಬಗ್ಗೆ ಸುಬ್ರಮಣಿಯವರ ಪತ್ನಿ ರತ್ನ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ಕಾಡಾನೆ ದಾಳಿಗೆ ಕಾಲೇಜು ವಿದ್ಯಾರ್ಥಿನಿ ಬಲಿ:
      ವಿರಾಜಪೇಟೆ ತಾಲೂಕಿನ ತಾರಿಕಟ್ಟೆ ಭದ್ರಗೋಳ ಗ್ರಾಮದ ನಿವಾಸಿಯಾದ ಮುಸ್ತಫಾ ಎಂಬುವವರ ಮಗ ಸಾಕೀರ್ ಮತ್ತು ಮಗಳು ಸಫಾನ ಎಂಬುವವರು ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಾಂಗ ಮಾಡುತ್ತಿದ್ದು ದಿನಾಂಕ 24-3-2017 ರಂದು ಎಂದಿನಂತೆ ಕಾಲೇಜಿಗೆ ಸ್ಕೂಟಿಯಲ್ಲಿ ಇಬ್ಬರು ಹೋಗುತ್ತಿರುವಾಗ ಕಾಫಿ ತೋಟದ ಒಳಗಿನಿಂದ ಕಾಡಾನೆಯೊಂದು ಹಠಾತ್ ದಾಳಿ ನಡೆಸಿ ಸಫಾನರವರನ್ನು ಸಾಯಿಸಿದ್ದು, ಶಾಕೀರ್ ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕೊಲೆಗೆ ಯತ್ನ:
      ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ವರದಿಯಾಗಿದೆ. ಕಗ್ಗೋಡ್ಲು ಗ್ರಾಮದ ಸ್ಟಾರ್ಸನ್ ರವರ ಲೈನು ಮನೆಯಲ್ಲಿ ವಾಸವಿರುವ ರಾಜು ಎಂಬುವವರು ಅವರ ಪತ್ನಿ ಯೊಂದಿಗೆ ಜಗಳಮಾಡಿದಾಗ ರಾಜುವಿನ ಪತ್ನಿ ದಿವ್ಯರವರು ಮಗುವನ್ನು ಕರೆದುಕೊಂಡು ಗುರುಪ್ರಸಾದ್ ರವರ ಮನೆಗೆ ಬಂದಾಗ ಗುರುಪ್ರಸಾದ್ ರವರು ಏಕೆ ಹೆಂಡತಿಯೊಂದಿಗೆ ಜಗಳ ಮಾಡುತ್ತೀಯಾ ಎಂದು ಕೇಳಿದ ವಿಷಯದಲ್ಲಿ  ಜಗಳ ತೆಗೆದು  ಚಾಕುವಿನಿಂದ ಗುರುಪ್ರಸಾದ್ ರವರ ಗಲ್ಲ, ಕುತ್ತಿಗೆಯ ಭಾಗಕ್ಕೆ  ತಿವಿದು ಗಾಯಪಡಿಸಿ ಕೊಲೆ ಮಾಡಲು ಯತ್ನಿಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹಳೇ ದ್ವೇಷ ವ್ಯಕ್ತಿಯ ಮೇಲೆ ಹಲ್ಲೆ:
      ಹಳೇ ದ್ವೇಷದಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಮಡಿಕೇರಿ ತಾಲೂಕಿನ ಹೆರವನಾಡು ಗ್ರಾಮದಲ್ಲಿ ವರದಿಯಾಗಿದೆದಿನಾಂಕ 24-3-2017 ರಂದು ಹೆರವನಾಡು ಗ್ರಾಮದ ನಿವಾಸಿಯಾದ ಹೊನ್ನಪ್ಪರವರು ಐನ್ ಮನೆಯಿಂದ ನಡೆದುಕೊಂಡು ತಮ್ಮ ಮನೆಗೆ ಹೋಗುತ್ತಿರುವಾಗ ಗೋಪಾಲಕೃಷ್ಣ, ಇಂದಿರ ಮತ್ತು ಲವರವರು ಜಗಳ ತೆಗೆದು ಕೈಗಳಿಂದ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Friday, March 24, 2017

ಮರದಿಂದ ಬಿದ್ದು ಗಾಯಗೊಂಡು ವ್ಯಕ್ತಿಯ ಮರಣ

              ವ್ಯಕ್ತಿಯೊಬ್ಬ ಕರಿಮೆಣಸನ್ನು ಕುಯ್ಯುತ್ತಿರುವಾಗ ಏಣಿಯಿಂದ ಕೆಳಕ್ಕೆ ಬಿದ್ದು ಗಾಯಗೊಂಡು ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಕೈಕಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 20-3-2017 ರಂದು ಬಲ್ಲಮಾವಟಿ ಗ್ರಾಮದ ನಿವಾಸಿ ನಾಣಯ್ಯ ಎಂಬುವವರು ಕೈಕಾಡು ಗ್ರಾಮದ ಬಟ್ಟಿಯಂಡ ರಮೇಶರವರ ಕಾಫಿ ತೋಟದಲ್ಲಿ ಕರಿಮೆಣಸನ್ನು ಕುಯ್ಯುತ್ತಿರುವಾಗ ಆಕಸ್ಮಿಕವಾಗಿ ಏಣಿಯಿಂದ ಕೆಳಗೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23-3-2017 ರಂದು ಮೃತಪಟ್ಟಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕರಿ ಮೆಣಸು ಕಳವು

                 ಸೋಮವಾರಪೇಟೆ ತಾಲೂಕಿನ ನೇಗಳ್ಳೆ ಗ್ರಾಮದ ನಿವಾಸಿ ಅಜಿತ್ ಕುಮಾರ್ ಎಂಬುವವರು ಕಾಳು ಮೆಣಸನ್ನು ಕುಯ್ದು ತನ್ನ ಮನೆಯ ಅಂಗಳದಲ್ಲಿ ಇಟ್ಟಿದ್ದು, ದಿನಾಂಕ 18-3-2017 ರಂದು ಬೆಳಿಗ್ಗೆ ನೋಡುವಾಗ 14 ಚೀಲಗಳ ಪೈಕಿ 8 ಚೀಲ ಕಾಳು ಮೆಣಸು ಕಳವು ಆಗಿದ್ದು, ಈ ಬಗ್ಗೆ ಮೋಹನ ಮತ್ತು ಸಿಂದು ಎಂಬುವವರ ಮೇಲೆ ಗುಮಾನಿ ಇರುವುದಾಗಿ ದಿನಾಂಕ 23-3-2017 ರಂದು ಕೊಟ್ಟ ಪುಕಾರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟ
               ಮಡಿಕೇರಿಯ ಗಣಿ ಮತ್ತು ಭೂ ಇಲಾಖೆಯ ಭೂ ವಿಜ್ಞಾನಿ ಶ್ರೀ ಎಸ್ ನಾಗೇಂದ್ರಪ್ಪರವರು ದಾಳಿ ನಡೆಸಿ ಅಕ್ರಮವಾಗಿ ಸರ್ಕಾರದ ಪರವಾನಿಗೆ ಇಲ್ಲದೆ ಮರಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡ ಘಟನೆ ವಿರಾಜಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ನಡೆದಿದೆ. ದಿನಾಂಕ 23-3-2017 ರಂದು ಶ್ರೀ ಎಸ್ ನಾಗೇಂದ್ರ ರವರು ಬೆಳಿಗ್ಗೆ 6-00 ಗಂಟೆಯ ಸಮಯದಲ್ಲಿ ಹರಿಹರ ಗ್ರಾಮದಲ್ಲಿ ವಾಹನಗಳನ್ನು ಪರಿಶೀಲಿಸುತ್ತಿರುವಾಗ ಹರಿಹರ ಕಡೆಯಿಂದ ಬೆಳ್ಳೂರು ಕಡೆ ಹೋಗುವ ರಸ್ತೆಯಲ್ಲಿ ಬಂದಂತಹ ಕೆಎ-12-ಎ-9145 ರ ಸ್ವರಾಜ್ ಮಜ್ದಾ ವಾಹನವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಮರಳು ತುಂಬಿದ್ದು, ಚಾಲಕನು ಓಡಿಹೋಗಿದ್ದು ಈ ಬಗ್ಗೆ ಶ್ರೀ ಎಸ್ ನಾಗೇಂದ್ರಪ್ಪ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಿದ್ಯುತ್ ತಂತಿ ತಾಗಿ ವ್ಯಕ್ತಿಯ ದುರ್ಮರಣ
                 ಕಾಳು ಮೆಣಸು ಕುಯ್ಯುತ್ತಿರುವಾಗ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ತಂಗಿ ತಾಗಿ ವ್ಯಕ್ತಿ ಮೃತಪಟ್ಟ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಹಾಲೇರಿ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 23-3-2017 ರಂದು ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯ ನಿವಾಸಿ ಪಳನಿ ಸ್ವಾಮಿ ಎಂಬುವವರು ಹಾಲೇರಿ ಗ್ರಾಮದ ಬಾಲಕೃಷ್ಣ ರೈ ರವರ ತೋಟದಲ್ಲಿ ಕಾಳು ಮೆಣಸು ಕುಯ್ಯುತ್ತಿರುವಾಗ ಅಲ್ಯೂಮೀನಿಯಂ ಏಣಿಯನ್ನು ಒಂದು ಮರದಿಂದ ಇನ್ನೋಂದು ಮರಕ್ಕೆ ಬದಲಾಯಿಸುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಪಳನಿಸ್ವಾಮಿಯವರು ಮೃತಪಟ್ಟಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Thursday, March 23, 2017

 ಹಳೆ ದ್ವೇಷ, ವ್ಯಕ್ತಿಯ ಕೊಲೆ
                       ದಿನಾಂಕ22/03/2017ರಂದು  ನಗರದ  ಕನ್ನಂಡ ಬಾಣೆ ನಿವಾಸಿ ಗೋಕುಲ ಎಂವರು ನಗರದ ಕಡೆ ಹೋಗಿ ಬರುವುದಾಗಿ ಹೇಳಿ ಅವರ ಮೋಟಾರು  ಬೈಕಿನಲ್ಲಿ ಹೋಗಿದ್ದು, ನಂತರ ರಾತ್ರಿ 10 ಗಂಟೆಯಾದರೂ ಮನೆಗೆ  ಬಾರದಿದ್ದು, ಅದೇ ಸಮಯಕ್ಕೆ ಕನ್ನಂಡ ಬಾಣೆಯ ಮತ್ತೋರ್ವ ನಿವಾಸಿ ಪ್ರದೀಪ್‌ ಎಂಬವರು ಗೋಕುಲನ ತಂಗಿ ಕಾವ್ಯಶ್ರೀ ಎಂಬಾಕೆಗೆ ಮೊಬೈಲ್‌ ಕರೆ ಮಾಡಿ ಆಕೆಯ ಅಣ್ಣ ಗೋಕುಲ ಕನ್ನಂಡ ಬಾಣೆಯ ಪಂಪ್‌ ಹೌಸ್‌ ಬಳಿ ಬಿದ್ದಿರುವುದಾಗಿ ತಿಳಿಸಿದ್ದು ಕಾವ್ಯಶ್ರೀರವರು ಒಡನೆ ಅಲ್ಲಿಗೆ ಹೋದಾಗ ಗೋಕುಲನ ಬೈಕ್‌ ರಸ್ತೆಯ ಮದ್ಯದಲ್ಲಿ ಬಿದ್ದಿದ್ದು, ರಸ್ತೆಯ ಬದಿಯಲ್ಲಿ ಗೋಕುಲನು ರಕ್ತದ ಮಡುವಿನಲ್ಲಿ ಬಿದ್ದು ಮೈಯಲ್ಲಿ ತೀವ್ರವಾಗಿ ಕಡಿದ ಗಾಯಗಳನ್ನು ಕಂಡು ಕೂಡಲೇ ಆಸ್ಪತ್ರೆಗೆ ಸಾಗಿಸಿದಾಗ ಆಸ್ಪತ್ರೆಯಲ್ಲಿ ವೈದ್ಯರು ಗೋಕುಲನು ಮೃತನಾಘಿರುವುದಾಗಿ ತಿಳಿಸಿದರೆನ್ನಲಾಗಿದೆ. ಕಾವ್ಯಶ್ರೀಯ ಅಣ್ಣ ಗೋಕುಲ ಹಾಗೂ ನಗರದ ಚಾಮುಂಡೇಶ್ವರಿ ನಗರದ ನಿವಾಸಿ ಕಾರ್ತಿಕ್‌ ಎಂಬಾತನಿಗೆ ವೈಮನಸ್ಸಿದ್ದು ಆತನೇ ಗೋಕುಲನನ್ನು ಕೊಲೆ ಮಾಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆಕಸ್ಮಿಕ ಸಾವು
                  ದಿನಾಂಕ 15/03/2017ರಂದು ಕುಟ್ಟ ಬಳಿಯ ನಾಲ್ಕೇರಿ ನಿವಾಸಿ ಪಣಿ ಎರವರ ಅಪ್ಪು ಎಂಬವರು ಅವರ ಮನೆಯಲ್ಲಿ ಮಲಗಿದ್ದಾಗ ಸೀಮೆಣ್ಣೆ ಬುಡ್ಡಿ ದೀಪವು ಮಗುಚಿ ಅಪ್ಪುರವರು ಮಲಗಿದ್ದ ಚಾಪಯ ಮೇಲೆ ಬಿದ್ದು ಬೆಂಕಿ ಹತ್ತಿಕೊಂಡ ಪರಿಣಾಮ ತೀವ್ರವಾಗಿ ಸುಟ್ಟು ಗಾಯಾಳುವಾದ ಅಪ್ಪುವನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಅರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 22/03/2017ರಂದು ಅಪ್ಪುರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಕಲಿ ಸಹಿ, ಮೋಸ
               ಪೊನ್ನಂಪೇಟೆ  ಬಳಿಯ ನಲ್ಲೂರು ಗ್ರಾಮದ ನಿವಾಸಿಯಾಗಿರುವ ಟಿ.ಯು.ಮಂಜು ಎಂಬವರ ತಂದೆಯ ಹೆಸರಿನಲ್ಲಿರುವ ಕಾಫಿ ತೋಟದ ವಿಚಾರವಾಗಿ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು ಈ ಸಂಬಂಧ ಪೊನ್ನಪ್ಪ ಸಂತೆಯ ಟಿ.ಯು.ಬೋಪಣ್ಣ, ಬೆಂಗಳೂರಿನ ಎಂ.ಕೆ.ಗೋಪಾಲ ಮತ್ತು ಎ.ಎನ್‌.ಅಶೋಕ ಎಂಬವರು ವಿವಿಧ ದಾಖಲೆಗಳಿಗೆ ನಕಲಿ ಸಹಿ ಮಾಡಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ  ಪೊನ್ನಂಪೇಟೆ  ಪೊಲೀಸರು ಪ್ರಕರಣ  ದಾಖಲಿಸಿ  ತನಿಖೆ  ಕೈಗೊಂಡಿದ್ದಾರೆ. 

ವ್ಯಕ್ತಿಯ ಆಕಸ್ಮಿಕ ಸಾವು
                       ದಿನಾಂಕ 22/03/2017ರಂದು ಕುಟ್ಟ ಬಳಿಯ ಕೋತೂರು ನಿವಾಸಿ ಪಣಿ ಎರವರ ಮಣಿ ಎಂಬವರು ಅದೇ ಗ್ರಾಮದ ನಿವಾಸಿ ಬಾಲಕೃಷ್ಣ ಎಂಬವರ ಗದ್ದೆಯ ಬದಿಯಲ್ಲಿ ಕುಳಿತ್ತಿದ್ದಾತನು ಕುಳಿತಲ್ಲೇ ಮೃತನಾಗಿದ್ದು, ಅತೀವ ಮದ್ಯವ್ಯಸನಿಯಾಗಿರುವ ಕಾರಣದಿಂದ ಮಣಿಯು ಮೃತನಾಗಿರಬಹುದಾಗಿ ಆತನ ಪತ್ನಿ ಪಣಿ ಎರವರ ಪಾಲಿರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                     ದಿನಾಂಕ 22/03/2017ರಂದು ಗೋಣಿಕೊಪ್ಪ ಬಳಿಯ ಬಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಪಣಿ ಎರವರ ಮುತ್ತ ಎಂಬವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹಿಂಭಾಗದಲ್ಲಿ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಪತ್ನಿ ತೀರಕೊಂಡ ಕಾರಣಕ್ಕೆ ಅತೀವ ಮದ್ಯ ವ್ಯಸನಿಯಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಣ ಕಳವು
                     ದಿನಾಂಕ 20/03/2017ರಂದು ಕೇರಳದ ಇರಿಟ್ಟಿ ನಿವಾಸಿ ಕುಂಞಿರಾಮನ್‌ ಎಂಬಾತನನ್ನು ಸುಳ್ಯದ ಸುರೇಶ್‌ ಕುಮಾರ್‌ ಎಂಬವನು ಇರಿಟ್ಟಿಯಲ್ಲಿ ಬೇಟೆಯಾಡಲು ಬರುವಂತೆ ಒತ್ತಾಯಿಸಿ ಮಡಿಕೇರಿಗೆ ಕರೆದುಕೊಂಡು ಬಂದಿದ್ದು ಮಡಿಕೇರಿಯ ಬಾರ್‌ ಒಂದರಲ್ಲಿ ಇಬ್ಬರೂ ಮದ್ಯಪಾನ ಮಾಡಿ ನಂತರ ರಾತ್ರಿ ನಗರದ ಬಸ್‌ ಸ್ಟ್ಯಾಂಡ್‌ನಲ್ಲಿ ಮಲಗಿದ್ದರೆನ್ನಲಾಗಿದೆ. ಮಾರನೇ ದಿನ ಬೆಳಿಗ್ಗೆ ಕುಂಞಿರಾಮನ್‌ರವರು ಎದ್ದು ನೋಡುವಾಗ ಸುರೇಶ್‌ ಕುಮಾರನು ಕಾಣೆಯಾಗಿದ್ದು ಕುಂಞಿರಾಮನ್‌ರವರು ಕೇರಳದಲ್ಲಿ ಲಾಟರಿ ಮಾರಾಟ ಮಾಡಿ ಸಂಪಾದಿಸಿದ ರೂ.80,000/- ಹಣವನ್ನು ಜೊತೆಯಲ್ಲಿಯೇ ಇಟ್ಟುಕೊಂಡಿದ್ದು ಆ ಹಣವೂ ಸಹಾ ಕಾಣೆಯಾಗಿದ್ದು, ಜೊತೆಗಿದ್ದ ಸುರೇಶ್‌ ಕುಮಾರನೇ ಕಳವು ಮಾಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಫಿ ಕಳವು
                    ಸಿದ್ದಾಪುರ ಬಳಿಯ ಪಾಲಿಬೆಟ್ಟ ನಿವಾಸಿ ಟಿ.ಜಿ.ವಿಜೇಶ್‌ ಎಂಬವರು ಪಾಲಿಬೆಟ್ಟ ನಗರದಲ್ಲಿ ಕಾಫಿ ವ್ಯಾಪಾರ ಮಾಡುತ್ತಿದ್ದು ಖರೀದಿಸಿದ ಕಾಫಿಯನ್ನು ಅವರ ಅಂಗಡಿಯ ಕಟ್ಟಡದಲ್ಲಿರುವ ಗೋದಾಮಿನಲ್ಲಿ ಇಡುತ್ತಿದ್ದು ದಿನಾಂಕ 22/03/2017ರಂದು ಬೆಳಿಗ್ಗೆ ಗೋದಾಮಿನೆಡೆ ಹೋಗಿ ನೋಡಿದಾಗ ಯಾರೋ ಕಳ್ಳರು ಗೋದಾಮಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಅಲ್ಲಿಟ್ಟಿದ್ದ ಒಣಗಿದ ಕಾಫಿಗಳಿದ್ದ ಚೀಲಗಳ ಪೈಕಿ ಸುಮಾರು ರೂ.24,000/- ಬೆಲೆಯ 14 ಚೀಲ ಕಾಫಿಯನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಕಾರು ಡಿಕ್ಕಿ
               ದಿನಾಂಕ 22/03/2017ರಂದು ಸಿದ್ದಾಪುರ ಬಳಿಯ ಗುಹ್ಯ ನಿವಾಸಿರವಿ ಎಂಬವರು ಕುಮಾರಿ ಗಣ್ಯ ಎಂಬವರೊಂದಿಗೆ ಅವರ ಮೋಟಾರು ಸೈಕಲಿನಲ್ಲಿ ಪಾಲಿಬೆಟ್ಟದ ಕಡೆಗೆ ಹೋಗುತ್ತಿರುವಾಗ ಆರ್ಕಾಡ್‌ ಟಾಟಾ ಕಾಫಿ ತೋಟದ ಲೈನು ಮನೆಯ ಬಳಿ ಎದುರಿನಿಂದ ಕೆಎ-20-ಎಂ-7336ರ ಕಾರನ್ನು ಅದರ ಚಾಲಕ ಗೋಕುಲ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ರವಿ ಹಾಗೂ ಗಣ್ಯರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, March 22, 2017

ವಿಷ ಸೇವಿಸಿ ವ್ಯಕ್ತಿ ಆತ್ಮ ಹತ್ಯೆ:

    ಪೋಲಿಯೋ ಪೀಡಿತ ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಸಮೀಪಕ ಕಡಂಗ ಅರಪಟ್ಟು ಗ್ರಾಮದಲ್ಲಿ ನಡೆದಿದೆ. ಕಡಂಗ ಅರಪಟ್ಟು ಗ್ರಾಮದ ನಿವಾಸಿ ಕೆ.ವಿ. ರಾಮಕೃಷ್ಣ ಎಂಬವರ ಹಿರಿಯ ಸಹೋದರ ಸುಬ್ರಮಣಿ (50) ಎಂಬವರು ಪೋಲಿಯೋ ಪೀಡಿತರಾಗಿದ್ದು, ಇದರಿಂದ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 20-3-2017 ರಂದು ಸಂಜೆ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಕಿರಿಯ ಸಹೋದರ ಕೆ.ವಿ. ರಾಮಕೃಷ್ಣರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಪರಿಚಿತ ಮಹಿಳೆ ಮೃತದೇಹ ಪತ್ತೆ:

      ಅಪರಿಚಿತ ಮಹಿಳೆಯೊಬ್ಬರ ಮೃತದೇಹವು ಸಿದ್ದಾಪುರ ಠಾಣಾ ವ್ಯಾಪ್ತಿಯ ಕರಡಿಗೋಡು ಗ್ರಾಮದ ಎಂ.ಸಿ. ಪೊನ್ನಪ್ಪ ಎಂಬವರಿಗೆ ಸೇರಿದ ಕಾಫಿ ಎಸ್ಟೇಟ್ ನಲ್ಲಿ ಪತ್ತೆಯಾಗಿದೆ. ದಿನಾಂಕ 21-3-2017 ರಂದು ಫಿರ್ಯಾದಿ ಕೆ.ಶಿವಣ್ಣ, ರೈಟರ್ ವೃತ್ತಿ, ಗೂಡುಗದ್ದೆ, ಗುಹ್ಯ ಗ್ರಾಮ ಇವರು  ಕೆಲಸ ನಿರ್ವಹಿಸುತ್ತಿರುವ ಕಾಫಿ ಎಸ್ಟೇಟ್ ಗೆ ಹೋಗಿದ್ದು ಅದೇ ಕಾಫಿ ತೋಟದ ಹತ್ತಿರ ವಿರುವ ಎಂ.ಸಿ. ಪೊನ್ನಪ್ಪ ಎಂಬವರ ಕಾಫಿ ತೋಟದಲ್ಲಿ ಅಂದಾಜು 38 ವರ್ಷ ಪ್ರಾಯದ ಒಂದು ಹೆಂಗಸಿನ ಮೃತದೇಹವು ಪತ್ತೆಯಾಗಿದ್ದು, ಈ ಸಂಬಂಧ ಸದರಿಯವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tuesday, March 21, 2017

ರಸ್ತೆ ಅಪಘಾತ - ಸಾಮಾಜಿಕ ಜವಾಬ್ದಾರಿ  ಮುಖ್ಯ - ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌.
                  ರಸ್ತೆ ಅಪಘಾತಗಳಲ್ಲಿ ಪ್ರತಿ ನಾಗರಿಕನ ಜವಾಬ್ದಾರಿಯುತ ಪ್ರತಿಕ್ರಿಯೆಯು ಅನೇಕ ಪ್ರಾಣಗಳನ್ನು ಉಳಿಸಬಲ್ಲುದು ಎಂದು ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿ  ಶ್ರೀ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ ರವರು ಅಭಿಪ್ರಾಯಪಟ್ಟರು.
ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡುತ್ತಿರುವ ಎಸ್‌.ಪಿ ರಾಜೇಂದ್ರ ಪ್ರಸಾದ್‌, ಐಪಿಎಸ್‌

               ಅವರು ಇಂದು ಮಡಿಕೇರಿ ನಗರದ ಮೈತ್ರಿ ಪೊಲೀಸ್‌ ಸಮುದಾಯ ಭವನದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯ ಆಶ್ರಯದಲ್ಲಿ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಸಹಯೋಗದೊಂದಿಗೆ ಪೊಲೀಸ್‌ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ರಸ್ತೆ ಅಪಘಾತಗಳ ಸಂದರ್ಭದಲ್ಲಿ ಗಾಯಾಳುಗಳ ಪ್ರಾಣ ಉಳಿಸಲು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ನಡೆದ ಒಂದು ದಿನದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡುತ್ತಿದ್ದರು. 
ಸಿಬ್ಬಂದಿಗಳಿಗೆ ಮಾಹಿತಿ ನೀಡುತ್ತಿರುವ  ತಜ್ಞ ವೈದ್ಯರು
ಜೀವರಕ್ಷಕ ಸಾಮಗ್ರಿಗಳ  ಬಗ್ಗೆ ಮಾಹಿತಿ ನೀಡುತ್ತಿರುವ  ವೈದ್ಯಕೀಯ ಸಿಬ್ಬಂದಿಗಳು
             ಅಮೆರಿಕಾದಂತಹ ಮುಂದುವರೆದ ದೇಶದಲ್ಲಿ ಭಾರತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಹಾಗೂ ವಾಹನ ಅಪಘಾತಗಳು ಸಂಭವಿಸುತ್ತಿದ್ದರೂ ಸಹಾ ಅಲ್ಲಿ ಭಾರತಕ್ಕಿಂತ ವಾಹನ ಅಪಘಾತಗಳಿಂದ ಸಂಭವಿಸುವ ಮರಣಗಳ ಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು ಇದಕ್ಕೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ನಾಗರಿಕರ, ವೈದ್ಯರ ಮತ್ತು ಪೊಲೀಸ್‌ ಇಲಾಖೆಯ ತುರ್ತು ಸ್ಪಂದನೆಯೇ ಪ್ರಮುಖ ಕಾರಣವಾಗಿದ್ದು, ಇದೇ ರೀತಿ ಭಾರತದಲ್ಲೂ ಸಹಾ ಯಾವುದೇ ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಿ ಗಾಯಾಳುಗಳ ಪ್ರಾಣ ಉಳಿಸಲು "ಅಮೃತ ಘಳಿಗೆ"ಯ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸಮಾಜದ, ವೈದ್ಯಾಧಿಕಾರಿಗಳ ಮತ್ತು ಪೊಲೀಸ್‌ ಇಲಾಖೆಯ ಪಾತ್ರ ಅತಿ  ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸೂಚನೆಯ ಪ್ರಕಾರ ಮಾನವೀಯ ನೆಲೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ತುರ್ತು ಚಿಕಿತ್ಸೆಗೆ ಸ್ಪಂದಿಸುವ ಯಾವುದೇ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಯಾವುದೇ ಇಲಾಖೆಯಿಂದ ತೊಂದರೆಯುಂಟಾಗುವುದಿಲ್ಲ ಆದ್ದರಿಂದ ಅಪಘಾತದ ಸಂದರ್ಭದಲ್ಲಿ ಎಲ್ಲಾ ನಾಗರಿಕರು ಪೊಲೀಸರ  ಅಥವಾ ವೈದ್ಯರ ಬರುವಿಕೆಯನ್ನು ಕಾಯದೆ ಗಾಯಾಳುಗಳ ಪ್ರಾಣ ರಕ್ಷಣೆಗೆ ಮುಂದಾಗಬೇಕೆಂದು ಕರೆಯಿತ್ತರು.
              ಕಾರ್ಯಾಗಾರದಲ್ಲಿ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ತಜ್ಞ ವೈದ್ಯರ ತಂಡವು ರಸ್ತೆ ಅಪಘಾತ ಸಂದರ್ಭದಲ್ಲಿ ಗಾಯಾಳುಗಳ ಪ್ರಾಣ ಉಳಿಸಲು ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಉತ್ತಮ ರೀತಿಯ ವಿವರಣೆ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿಯನ್ನು ನೀಡಿದರು.
              ಕಾರ್ಯಾಗಾರದಲ್ಲಿ ಕೊಡಗು ಜಲ್ಲೆಯ ಸುಮಾರು ನೂರಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಅಕ್ರಮ ಮರಳು ಸಾಗಾಟ
                     ದಿನಾಂಕ 20/03/2017ರಂದು ಶನಿವಾರಸಂತೆ ನಗರದ ಪ್ರದೀಪ್‌ ಮತ್ತು ಲೋಹಿತ್‌ ಎಂಬವರು ಕೆಎ-21-ಎ-9178ರ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸರ್ಕಾರದ ಪರವಾನಗಿಯಿಲ್ಲದೆ ಮರಳನ್ನು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಶನಿವಾರಸಂತೆ ಠಾಣೆ ಎಸ್‌ಐ ಬಿ.ಎಸ್‌.ಜನಾರ್ಧನರವರು ಟಿಪ್ಪರ್ ಸಮೇತ ಮರಳನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
              ದಿನಾಂಕ 19/03/2017ರಂದು ಸೋಮವಾರಪೇಟೆ ಬಳಿಯ ಯಡವಾರೆ ಗ್ರಾಮದ ನಿವಾಸಿ ಲೋಕೇಶ್‌ ಎಂಬವರು ಕುಶಾಲನಗರದ ಕಡೆಗೆ ಹೋಗುತ್ತಿರುವಾಗ ಎರೆಪಾರೆ ಗ್ರಾಮದ ಬಳಿ ಬಾಣಾವಾರ ಗ್ರಾಮದ  ರಾಕೇಶ್‌, ಪ್ರಸಿದ್ದ್, ಮಧು ಮತ್ತು ರವಿ ಎಂಬವರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ಲೋಕೇಶ್‌ರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ
              ದಿನಾಂಕ 20/03/2017ರಂದು ಸೋಮವಾರಪೇಟೆ ಬಳಿಯ ಯಡವನಾಡು ನಿವಾಸಿ ಪ್ರವೀಣ ಎಂಬವರು ಸೋಮವಾರಪೇಟೆ ನಗರದಲ್ಲಿ ರಿಕ್ಷಾವೊಂದರಲ್ಲಿ ಹೋಗುತ್ತಿರುವಾಗ ಲೋಕೇಶ್ ಎಂಬಾತನು ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಪ್ರವೀಣರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                 ದಿನಾಂಕ 19/03/2017ರಂದು ಶ್ರೀಮಂಗಲ ಬಳಿಯ ವೆಸ್ಟ್‌ ನೆಮ್ಮಲೆ ಗ್ರಾಮದ ನಿವಾಸಿ ಸಿ.ಎ.ಬೋಪಣ್ಣ ಎಂಬವರು ಕಾಫಿ ಕಣದಲ್ಲಿ  ಕೆಲಸ ಮಾಡಿಕೊಂಡಿರುವಾಗ ಅಲ್ಲಿಗೆ ಬಂದ ಪಣಿ ಎರವರ ಬೋಜ ಎಂಬಾತನನ್ನು ಕುರಿತು ಕಣಕ್ಕೆ ಬಾರದಂತೆ ಹೇಳಿದ ಕಾರಣಕ್ಕೆ ಬೋಜ ಮತ್ತು ಆತನ  ತೋಟದ  ಮಾಲೀಕರಾದ  ಅಚ್ಚಪ್ಪ ಮತ್ತು ನಂದಪ್ಪ ಎಂಬವರು ಸೇರಿಕೊಂಡು ಬೋಪಣ್ಣರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                      ದಿನಾಂಕ 12/03/2017ರಂದು ಮಡಿಕೇರಿ ನಗರದ ಚೈನ್‌ ಗೇಟ್ ಬಳಿಯ ನಿವಾಸಿ ಸ್ವಾಮಿ ಎಂಬವರ ಮನೆಯ ಪಕ್ಕದ ಜಾಗದಲ್ಲಿದ್ದ ಗುರುತಿನ ಕಲ್ಲನ್ನು ಸುರೇಂದ್ರ ಎಂಬವರು ಅಕ್ರಮವಾಗಿ ಕಿತ್ತುಹಾಕಿ ಅವರ ಕಲ್ಲನ್ನು ನೆಟ್ಟು ಜಾಗ ಗುರುತಿಸಿದ್ದು ನಂತರ ಸುರೇಂದ್ರರವರು ಸ್ವಾಮಿಯನ್ನು ಕುರಿತು ಅಲ್ಲಿಂದ ಖಾಲಿ ಮಾಡುವಂತೆ ತಿಳಿಸಿ ಸ್ವಾಮಿಯವರು ಸೇರಿದ ಪರಿಶಿಷ್ಟ ಜಾತಿಯನ್ನು ನಿಂದಿಸಿದುದಲ್ಲದೆ ಸುರೇಂದ್ರರವರ ಅಣ್ಣ ಮತ್ತು ತಂಗಿ ಮೂವರೂ ಸೇರಿಕೊಂಡು ಹಲ್ಲೆ ಮಾಡಿ ಸ್ವಾಮಿಯವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ  ದೂರು ನೀಡಿದ್ದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟಾಣಿ  ನಗರದ ನಿವಾಸಿ ಎನ್‌.ಎಸ್‌.ಪುಷ್ಪ ಎಂಬವರು  ಸ್ವಾಮಿ, ಕಾವ್ಯ, ತಂಗಚ್ಚನ್ ಮತ್ತು ಸ್ವಾಮಿಯ ಭಾವ ಸೇರಿಕೊಂಡು ಪುಷ್ಪರವರ ಮೇಲೆ ಹಲ್ಲೆ ಮಾಡಿರುವುದಾಗಿಯೂ  ಮಡಿಕೇರಿ ನಗರ  ಠಾಣೆಯಲ್ಲಿ  ದೂರು ನೀಡಿದ್ದು  ಮಡಿಕೇರಿ  ನಗರ ಪೊಲೀಸರು ಎರಡೂ ದೂರುಗಳ ಮೇಲೆ ಪ್ರಕರಣ  ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                ದಿನಾಂಕ 19/03/2017ರಂದು  ಸಿದ್ದಾಪುರ ಬಳಿಯ ಗುಹ್ಯ ಗ್ರಾಮದ ನಿವಾಸಿ ವೈ.ಟಿ. ಮಾರ ಎಂಬಾತನು ಯಾವುದೋ ಕಾರಣಕ್ಕೆ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ
                 ಸೋಮವಾರಪೇಟೆ ಬಳಿಯ ಹಂಪಾಪುರ ಬಳಿಯ ನಿವಾಸಿ ತಮ್ಮಣಿ ಎಂಬವರು ದಿನಾಂಕ  02/02/2017ರಂದು  ಗಾರೆ ಕೆಲಸಕ್ಕೆಂದು ಹೋದವರು ಇದುವರೆಗೂ ಮರಳಿ ಮನೆಗೆ ಬಾರದಿದ್ದು, ನೆಂಟರಿಷ್ಟರ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲವೆಂದು ತಮ್ಮಣಿಯವರ ಪತ್ನಿ ಸೌಮ್ಯರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಾರು ಡಿಕ್ಕಿ
              ದಿನಾಂಕ 20/03/2017ರಂದು ಮೈಸೂರು ನಿವಾಸಿ ಮುತ್ತುಮೈಲ್ ಎಂಬವರು ಅವರ ಕಾರಿನಲ್ಲಿ ಭಾಗಮಂಡಲದಿಂದ  ತಲಕಾವೇರಿ ಕಡೆಗೆ  ಹೋಗುತ್ತಿರುವಾಗ ಎದುರುಗಡೆಯಿಂದ ಕೆಎ-03-ಎಂಎನ್‌-6981ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮುತ್ತುಮೈಲ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿ ಕಾರಿನಲ್ಲಿದ್ದ ಮುತ್ತುಮೈಲ್‌ರವರ ಪತ್ನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಬೈಕ್‌ ಡಿಕ್ಕಿ
                     ದಿನಾಂಕ 20/03/2017ರಂದು ಕುಶಾಲನಗರ ಬಳಿಯ ಕೂಡುಮಂಗಳೂರು ನಿವಾಸಿ ಕೃಷ್ಣಪ್ಪ ಎಂಬವರು ಅವರ ಮೋಟಾರು ಬೈಕ್‌ ಸಂಖ್ಯೆ ಕೆಎ-12-ಕೆ-5863ರಲ್ಲಿ ಕೂಡಿಗೆ ಕಡೆಯಿಂದ ಅವರ ಮನೆಗೆ ಹೋಗುತ್ತಿರುವಾಗ ವಿಜಯಪುರ ಜಂಕ್ಷನ್‌ ಬಳಿ ಹಿಂದುಗಡೆಯಿಂದ ಕೆಎ-12-ಎಲ್‌-9380ರ ಮೋಟಾರು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು  ಕೃಷ್ಣಪ್ಪನವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಬೈಕ್‌ಗಳ ಸವಾರರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪತಿಯಿಂದ ಪತ್ನಿಯ ಹಲ್ಲೆ
                       ದಿನಾಂಕ 20/03/2017ರಂದು ಸೋಮವಾರಪೇಟೆ ಬಳಿಯ ಶಾಂತಳ್ಳಿ ನಿವಾಸಿ ಧರ್ಮಪ್ಪ ಎಂಬವರು ಆತನ ಪತ್ನಿ ಪಾರ್ವತಿ ಎಂಬಾಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ  ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್‌ಗೆ ಜೀಪು ಡಿಕ್ಕಿ
                 ದಿನಾಂಕ 18/03/2017ರಂದು ಪೊನ್ನಂಪೇಟೆ ನಿವಾಸಿ ಹೆಚ್‌.ಡಿ.ಜವರಯ್ಯ ಎಂಬವರು ಅವರ ಸ್ಕೂಟರನ್ನು ಚಾಲಿಸಿಕೊಂಡು ಹೋಗುತ್ತಿರುವಾಗ ಜೋಡುಬೆಟ್ಟಿಯ ಬಳಿ ಅವರ ಹಿಂದುಗಡೆಯಿಂದ ಕೆಎ-12-ಬಿ-3256ರ ಪಿಕ್‌ಅಪ್‌ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜವರಯ್ಯನವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಜವರಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣ ಕಳ್ಳತನ
                    ಕುಶಾಲನಗರ ಬಳಿಯ ಬೊಳ್ಳೂರು ಗ್ರಾಮದಲ್ಲಿರುವ ಅಮನ್‌ವನ ರೆಸಾರ್ಟಿಗೆ ದಿನಾಂಕ 20/03/2017ರಂದು ಬಂದಿದ್ದ ಉತ್ತರ ಭಾರತದ ನಿವಾಸಿ ಶಶಾಂಕ್‌ ಜೈನ್‌ರವರು ಪಡೆದಿದ್ದ ಕೊಠಡಿ ಸಂಖ್ಯೆ 203ರಲ್ಲಿ ಇರಿಸಿದ್ದ ಅವರ ಹಣದ ಪರ್ಸಿನಿಂದ ರೂ.9,000/-ದಷ್ಟು ಹಣ ಕಳುವಾಗಿರುವುದಾಗಿ ತಿಳಿಸಿದ್ದು, ಈ ಹಿಂದೆಯೂ ರೆಸಾರ್ಟಿನಲ್ಲಿ ಚಿನ್ನದ ಆಭರಣಗಳು ಕಳವಾಗಿದ್ದು, ರೆಸಾರ್ಟಿನಲ್ಲಿ ಕೆಲಸ ಮಾಡಿಕೊಂಡಿರುವ ಬೈರಪ್ಪ ಮತ್ತು ಕೀರ್ತಿ ಎಂಬವರು ಕಳವು ಮಾಡಿರುವ ಸಂಶಯವಿರುವುದಾಗಿ ರೆಸಾರ್ಟಿನ ಅಧಿಕಾರಿ ನವೀನ್‌ ಕುಮಾರ್‌ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, March 20, 2017

ಬಸ್‌ ಅವಘಡ
                  ದಿನಾಂಕ 19/03/2017ರಂದು ಗಣಗೂರು ಗ್ರಾಮದ ನಿವಾಸಿ ಮದನ್‌ ಎಂಬವರು ಕೆಎ-19-ಎಫ್‌-3025ರ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಹೊನ್ನವಳ್ಳಿ ಗ್ರಾಮದ ತಿರುವಿನ ಬಳಿ ಬಸ್ಸಿನ ಚಾಲಕ ಮೋಹನ್‌ ಸ್ವಾಮಿ ಎಂಬಾತನು ಬಸ್ಸನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಬಸ್ಸನ್ನು ರಸ್ತೆ ಬದಿಯ ಸೇತುವೆಯ ಕಟ್ಟೆಗೆ ಡಿಕ್ಕಿ ಪಡಿಸಿದ ಪರಿಣಾಮ ಮದನ್‌ ಹಾಗೂ ಇತರರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೀರಿಗೆ ಬಿದ್ದು ವ್ಯಕ್ತಿಯ ಸಾವು
                     ದಿನಾಂಕ 19/03/2017ರಂದು ಸೋಮವಾರಪೇಟೆ ಮಲ್ಲಳ್ಳಿ ಜಲಪಾತ ವೀಕ್ಷಣೆಗೆಂದು ತುಮಕೂರಿನ ವೆಂಕಟೇಶ್‌ ಹಾಗೂ ಬೆಂಗಳೂರಿನ ನವೀನ್‌ ಎಂಬಿಬ್ಬರು ಬಂದಿದ್ದು ಜಲಪಾತದಲ್ಲಿ ಇಬ್ಬರೂ ನೀರಿಗಿಳಿದು ಸ್ನಾನ ಮಾಡುತ್ತಿರುವಾಗ ನವೀನ್‌ ನೀರಿನಲ್ಲಿ ಮುಳುಗಿದ್ದು ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಾಹನ ಡಿಕ್ಕಿ, ಬಾಲಕನ ಸಾವು
                      ದಿನಾಂಕ 19/03/2017ರಂದು ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆ ಗ್ರಾಮದ ಮೆಟ್ನಳ್ಳ ಬಳಿ ಅಲ್ಲಿನ ನಿವಾಸಿ ಹಂಸ ಎಂಬವರ ಮಗ 8 ವರ್ಷ ಪ್ರಾಯದ ಇಸಾಕ್‌  ಎಂಬ ಬಾಲಕನು ರಸ್ತೆಯನ್ನು ದಾಟುತ್ತಿರುವಾಗ ಮಡಿಕೇರಿ ಕಡೆಯಿಂದ ಕೆಎ-19-ಎಂಎಂ-3696ರ ಸ್ಕಾರ್ಪಿಯೋ ವಾಹನವನ್ನು ಅದರ ಚಾಲಕ ಮಂಗಳೂರಿನ ಇಸ್ಮಾಯಿಲ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬಾಲಕ ಇಸಾಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ಇಸಾಕ್‌ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಸ್ಸಿಗೆ ಬೈಕ್‌  ಡಿಕ್ಕಿ
                 ದಿನಾಂಕ 18/03/2017ರಂದು ಕುಶಾಲನಗರ ಬಳಿಯ ಕಣಿವೆ ಗ್ರಾಮದಲ್ಲಿ ಕೆಎ-19-ಎಫ್‌-4738ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಶಿವರಾಜ್‌ ಕುಮಾರ್‌ ಎಂಬವರು ಚಾಲಿಸುತ್ತಿರುವಾಗ ಕೆಎ-13-ಇಸಿ-7327ರ ಮೋಟಾರು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬಸ್ಸಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಸಚಿನ್‌ ಮತ್ತು ರಾಮು ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್‌ಗೆ ಕಾರು ಡಿಕ್ಕಿ
                      ದಿನಾಂಕ 19/03/2017ರಂದು ಕುಶಾಲನಗರ ನಿವಾಸಿ ಸಾಹುಲ್‌ ಹಮೀದ್‌ ಎಂಬವರು ಅಭ್ಯತ್‌ಮಂಗಲ ಗ್ರಾಮದ ಬಳಿ ಅವರ ಸ್ಕೂಟರ್‌ ನಲ್ಲಿ ಹೋಗುತ್ತಿರುವಾಗ ಎದುರಿನಿಂದ  ಕೆಎ-20-ಎಂ-2416ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಾಹುಲ್‌ ಹಮೀದ್‌ರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸಾಹುಲ್‌ ಹಮೀದ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, March 19, 2017

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:

       ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಮಡಿಕೇರಿ ತಾಲೋಕು ಮುರ್ನಾಡು ಸಮೀಪಿದ ಕಾಂತೂರು ಗ್ರಾಮದ ಕರೆಮನೆ ಪುರುಷೋತ್ತಮ ಎಂಬವರ ಕಾಫಿತೋಟದಲ್ಲಿ ಪತ್ತೆಯಾಗಿದೆ.   ದಿನಾಂಕ 18-3-2017 ರಂದು ಪುರುಷೋತ್ತಮರವರ ಅಳಿಯ ಮಹದೇವ ಎಂಬವರು ಕಾಫಿ ತೋಟಕ್ಕೆ ಹೋಗಿದ್ದಾಗ ಕಾಫಿ ತೋಟದ ರಸ್ತೆ ಬದಿಯಲ್ಲಿ ಒಬ್ಬ ಅಪರಿಚಿತ ಗಂಡಸಿನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ, ಕಾಫಿ ಗಿಡಗಳನ್ನು ಕಡಿದು ನಷ್ಟ:

     ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಮ್ಮನ ಕಾಫಿ ತೋಟಕ್ಕೆ ಅಣ್ಣನು ಅಕ್ರಮ ಪ್ರವೇಶ ಮಾಡಿ ಕಾಫಿಗಿಡಗಳನ್ನು ಕಡಿದು ನಷ್ಟಪಡಿಸಿದ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಮ್ಯಾಗ್ ಡೋರ್ ಕಾಫಿ ಎಸ್ಟೇಟ್ ನಲ್ಲಿ ನಡೆದಿದೆ. 7ನೇ ಹೊಸಕೋಟೆ ಗ್ರಾಮದಲ್ಲಿರುವ ಮ್ಯಾಗ್ ಡೋರ್ ಕಾಫಿತೋಟವನ್ನು ಫಿರ್ಯಾದಿ ನಳಿನಿ ತಂಗಪ್ಪ ಎಂಬವರ ಕಿರಿಯ ಮಗ ಟಿ.ಟಿ. ರಾಕೇಶ್ ಎಂಬವರು ನೋಡಿಕೊಳ್ಳುತ್ತಿದ್ದು, ಸದರಿ ಕಾಫಿತೋಟದ ವಿಚಾರದಲ್ಲಿ ವಿವಾದವಿದ್ದು, ಅವರ ಹಿರಿಯ ಅಣ್ಣ ಟಿ.ಟಿ. ರಾಜೇಶ್ ರವರು ದಿನಾಂಕ 18-3-2017 ರಂದು ಸಂಜೆ 4-45 ಗಂಟೆಯ ಸಮಯದಲ್ಲಿ ಮ್ಯಾಗ್ ಡೋರ್ ಕಾಫಿತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕಾಫಿಗಿಡಗಳ ರೆಕ್ಕೆಗಳನ್ನು ಕಡಿದು ನಷ್ಟಪಡಿಸಿದ್ದು, ಇದನ್ನು ವಿಚಾರಿಸಿದ ತಮ್ಮ ಟಿ.ಟಿ. ರಾಕೇಶ್ ರವರನ್ನು ಅವಾಚ್ಯ ಶಬ್ದಗಳಿಂದ ಬೈದು ಕೊಲೆಬೆದರಿಕೆ ಒಡ್ಡಿರುತ್ತಾನೆಂದು ಶ್ರೀಮತಿ ನಳಿನಿ ತಂಗಪ್ಪನವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಪ್ರವೇಶ, ಕೆರೆಯಿಂದ ಮೀನು ಕಳವು:

     ಮಹಿಳೆಯೊಬ್ಬರಿಗೆ ಸೇರಿದ ಕೆರೆಗೆ ಸುಮಾರು 15 ಮಂದಿಯ ಗುಂಪೊಂದು ಅಕ್ರಮ ಪ್ರವೇಶ ಮಾಡಿ ಕೆರೆಯಲ್ಲಿ ಸಾಕಾಣಿಕೆ ಮಾಡಿದ ಮೀನುಗಳನ್ನು ಕಳವು ಮಾಡಿ, ಕಾವಲುಗಾರನಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ಶನಿವಾರಸಂತೆ ಠಾಣೆ ಸರಹದ್ದಿನ ಅಗಳಿ ಗ್ರಾಮದಲ್ಲಿ ನಡೆದಿದೆ. ಫಿರ್ಯಾದಿ ಶ್ರೀಮತಿ ನೇತ್ರಾವತಿ ಎಂಬವರು ಅಗಳಿ ಗ್ರಾಮದಲ್ಲಿ ವಾಸವಾಗಿದ್ದು ಬೆಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಳವಾಯಿ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಿ ಮಾರಾಟ ಮಾಡಲು ಅನುಮತಿಯನ್ನು ಪಡೆದು ಕೆರೆಗೆ ಕಾವಲುಗಾರನನ್ನು ನೇಮಿಸಿದ್ದು, ದಿನಾಂಕ 1-11-2016 ರಂದು ಸಮಯ 2-30 ಪಿ.ಎಂ. ಸಮಯದಲ್ಲಿ ಅಗಲಿ ಗ್ರಾಮದ ನಿವಾಸಿಗಳಾದ ರಾಮಯ್ಯ ಮತ್ತು ಇತರೆ 14 ಜನರು ಅಕ್ರಮಕೂಟ ಸೇರಿ ಫಿರ್ಯಾದಿಯವರ ಕೆರೆಗೆ ಅಕ್ರಮ ಪ್ರವೇಶ ಮಾಡಿ ಕೆರೆಯಲ್ಲಿ ಸಾಕಿದ ಮೀನುಗಳನ್ನು ಹಿಡಿದು ಪಿಕ್ ಅಪ್ ವಾಹನದಲ್ಲಿ ತುಂಬಿಕೊಂಡು ಹೋಗಿದ್ದು, ಹೋಗುವಾಗ ಕಾವಲುಗಾರ ರಾಮಸ್ವಾಮಿ ಎಂಬಾತನ್ನು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಹೋಗಿರುವ ಬಗ್ಗೆ ನ್ಯಾಯಾಲಯ ನಿರ್ದೇಶಿತ ದೂರಿನ ಮೇರೆಗೆ ದಿನಾಂಕ 18-3-2017 ರಂದು ಶನಿವಾರಸಂತೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪತಿಯಿಂದ ಪತ್ನಿ ಮೇಲೆ ಹಲ್ಲೆ:

     ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ದೇವನೂರು ಗ್ರಾಮದ ಕೊಡಂಬೂರು ಪೈಸಾರಿಯಲ್ಲಿ ವಾಸವಾಗಿರುವ ಶ್ರೀಮತಿ ಬಿ.ಆರ್. ಓಮನ ಎಂಬವರು ದಿನಾಂಕ 18-3-2017 ರಂದು ಸಮಯ 2-30 ಗಂಟೆ ಸಮಯದಲ್ಲಿ ದೇವನೂರು ಗ್ರಾಮದ ಸರ್ಕಲ್ ಎಸ್ಟೇಟಿನಲ್ಲಿ ಕೆಲಸ ಮಾಡಿಕೊಂಡಿರುವಾಗ ಆಕೆಯ ಪತಿ ಅಂಬು ಎಂಬಾತ ಅಲ್ಲಿಗೆ ಬಂದು ವಿನಾಕಾರಣ ಪತ್ನಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹಲ್ಲೆ ಮಾಡಿ ಗಾಯಪಡಿಸಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಜೆ.ಸಿ.ಬಿ. ಡಿಕ್ಕಿ, ಇಬ್ಬರಿಗೆ ಗಾಯ:

    ಕಾರೊಂದಕ್ಕೆ ಜಿ.ಸಿ.ಬಿ. ವಾಹನವು ಡಿಕ್ಕಿಯಾಗಿ ಚಾಲಕ ಸೇರಿ ಮಹಿಳೆಯೊಬ್ಬರು ಗಾಯಗೊಂಡು ಕಾರು ಜಖಂಗೊಂಡ ಘಟನೆ ವಿರಾಜಪೇಟೆ ತಾಲೋಕು ಬೆಕ್ಕಿಸೊಡ್ಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 17-3-2017 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಫಿರ್ಯಾದಿ ಬಲ್ಯಮಂಡೂರು ಗ್ರಾಮದ ನಿವಾಸಿ ಕೊಕ್ಕಂಡ ಚಂಗಪ್ಪ ಎಂಬವರು ತನ್ನ ಕಾರಿನಲ್ಲಿ ಕೆಲಸಗಾರರಾದ ಶ್ರೀಮತಿ ತಾಯಮ್ಮ ಮತ್ತು ನಿಂಗಪ್ಪ ರವರನ್ನು ಕೂರಿಸಿಕೊಂಡು ತಮ್ಮ  ಮನೆಯ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-12-ಜೆಡ್-8102ರ ಜೆ.ಸಿ.ಬಿ. ವಾಹನವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಚಾಲಕ ಕೊಕ್ಕಂಡ ಚಂಗಪ್ಪ ಹಾಗು ಕಾರಿನಲ್ಲಿದ್ದ ತಾಯಮ್ಮನವರು ಗಾಯಗೊಂಡು ಕಾರು ಜಖಂ ಗೊಂಡಿದ್ದು, ಈ ಸಂಬಂಧ ಕೊಕ್ಕಂಡ ಚಂಗಪ್ಪನವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, March 18, 2017

ಕಾಫಿ ಗಿಡ ಕಡಿದು ನಷ್ಟ:

          ಸಿದ್ದಾಪುರ ಠಾಣಾ ಸರಹದ್ದಿನ ಯಡೂರು ಗ್ರಾಮದ ಐನಂಡ ಬೋಪಣ್ಣ ನವರ ಕಾಫಿ ತೋಟಕ್ಕೆ ದಿನಾಂಕ 15-3-2017 ರಂದು ಅದೇ ಗ್ರಾಮದ ಬಲ್ಲಚಂಡ ಕುಟ್ಟಪ್ಪ ನವರು ಕಾಫಿ ತೋಟಕ್ಕೆ ಪ್ರವೇಶ ಮಾಡಿ ಬೆಳೆದು ನಿಂತ ಸುಮಾರು 30 ರಿಂದ 50 ಕಾಫಿ ಗಿಡಗಳನ್ನು ಕಡಿದು ನಷ್ಟ ಪಡಿಸಿದ್ದು ಈ ಬಗ್ಗೆ ಬೋಪಣ್ಣನವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಹಿಳೆಗೆ ಬೆಂಕಿ ತಾಗಿ ಮೃತ
         ಮಹಿಳೆಯ ಬಟ್ಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿ ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 28-2-2017 ರಂದು ನಾಲಡಿ ಗ್ರಾಮದ ನಿವಾಸಿ ಚಂದ್ರಶೇಖರರವರ ಪತ್ನಿ ಗೀತಾರವರು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ದೀಪಕ್ಕೆ ಕೈ ತಾಗಿ ಕೆಳಗೆ ಬಿದ್ದು ಗೀತಾರವರು ಧರಿಸಿದ್ದ ಬಟ್ಟೆಗೆ ತಾಗಿ ಬೆಂಕಿ ಹತ್ತಿಕೊಂಡು ಸುಟ್ಟ ಗಾಯಗಳಾಗಿದ್ದು ಸದರಿಯವರನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 17-3-2017 ರಂದು ಸದರಿಯವರು ಮೃತಪಟ್ಟಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕಿಗೆ ಕಾರು ಡಿಕ್ಕಿ:

                ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯವಾದ ಘಟನೆ ವಿರಾಜಪೇಟೆ ತಾಲೂಕಿನ ಕೈಕೇರಿ ಎಂಬಲ್ಲಿ ನಡೆದಿದೆ.  ದಿನಾಂಕ 17-3-2017ರಂದು ತಿತಿಮತಿಯ ಭದ್ರಗೋಳ ಗ್ರಾಮದ ನಿವಾಸಿ ವಿನೋದ್ ಎಂಬುವವರು ಗೋಣಿಕೊಪ್ಪದಿಂದ ವಿರಾಜಪೇಟೆ ಕಡೆಗೆ ಹೋಗುತ್ತಿರುವಾಗ ಕೈಕೇರಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಕಾರನ್ನು ಅದರ ಚಾಲಕ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ವಿನೋದ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ ಆರೋಪಿಯ ಬಂಧನ:
           ಶ್ರೀಮಂಗಲ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಸಣ್ಣಯ್ಯರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಬೆಳ್ಳೂರು ಗ್ರಾಮದ ನಿವಾಸಿ ನೂರೆರ ದಿಲೀಪ್ ಎಂಬುವವರು ಮನೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ್ನು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಪತ್ತೆ ಹಚ್ಚಿ ಆತನ ಬಳಿ ಇದ್ದ 90 ಎಂಎಲ್ ನ 16 ಅಮೃತ್ ಸಿಲ್ವರ್ ಕಪ್ ರೇರ ಬ್ರಾಂದಿ ಪ್ಯಾಕೆಟ್ ಮತ್ತು 120 ರೂ ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಕ್ರಮ ಮದ್ಯ ಮಾರಾಟ:

         ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬ್ಬೂರು ಗ್ರಾಮದ ನಿವಾಸಿ ದೇವರಾಜಮ್ಮ @ ಮಂಜುಳ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಮಂಚಯ್ಯರವರು ತಮ್ಮ ಸಿಬ್ಬಂದಿಯವರೊಂದಿಗೆ ದಿನಾಂಕ 17-3-2017 ರಂದು ದಾಳಿ ಮಾಡಿ ಆರೋಪಿ ದೇವರಾಜಮ್ಮ ನವರಿಂದ  90 ಎಂಎಲ್ ನ ಒರಿಜಿನಲ್ ಚಾಯ್ಸ್ 52 ಪ್ಯಾಕೆಟ್, 90 ಎಂಎಲ್ ನ ಕೋಡೆಸ್ ರಮ್ 5 ಪ್ಯಾಕೆಟ್ ಮತ್ತು 90 ಎಂಎಲ್ ನ ಒರಿಜಿನಲ್ ವಿಸ್ಕಿ 7 ಪ್ಲಾಸ್ಟಿಕ್ ಬಾಟಲಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

 

Friday, March 17, 2017

ಅಕ್ರಮ ಮರಳು ಸಾಗಾಟ:

      ವ್ಯಕ್ತಿಯೊಬ್ಬರು ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದುನ್ನು ಪತ್ತೆಹಚ್ಚಿದ ಸೋಮವಾರಪೇಟೆ ಪೊಲೀಸ್ ರು ಪ್ರಕರಣ ದಾಖಲಿಸಿದ್ದಾರೆ. ಕೆಎಲ್ 58 ಈ 0301 ರ ಟಿಪ್ಪರ್ ಚಾಲಕ ಹ್ಯಾರೀಸ್  ಎಂಬವರು ದಿನಾಂಕ 14-03-2017 ರಂದು ಇಗ್ಗೋಡ್ಲು ಗ್ರಾಮದದಲ್ಲಿ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದನ್ನು ಪತ್ತೆಹಚ್ಚಿದ ಸೋಮವಾರಪೇಟೆ ಪೊಲೀಸ್ ಠಾಣೆಯ ಮಾದಾಪುರ ಉಪಠಾಣೆಯ ಸಿಹೆಚ್ ಸಿ ಕೆ.ಕೆ.ಶಶಿಧರ್ ರವರು ಲಾರಿಯಲ್ಲಿ ಮರಳನ್ನು ಸಾಗಿಸುತ್ತಿದ್ದನ್ನು ಚಾಲಕ ಹ್ಯಾರೀಸ್ ನವರಲ್ಲಿ ವಿಚಾರಿಸಿದಾಗ ಸದರಿ ಲಾರಿಯ ಚಾಲಕ ಪೊಲೀಸ್ ಸಿಬ್ಬಂದಿಯನ್ನು ತಳ್ಳಿ ಲಾರಿಯನ್ನು ಚಾಲಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜೀಪು ಅಪಘಾತ, ಚಾಲಕ ಸೇರಿ ಇಬ್ಬರ ಸಾವು:

     ಚಾಲಕನ ನಿಯಂತ್ರಣ ಕಳೆದ ಪರಿಣಾಮ ಜೀಪೊಂಡು ಅಪಘಾತಕ್ಕೀಡಾಗಿ ಚಾಲಕ ಸಾವನಪ್ಪಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಕಾಕೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 16-3-2017 ರಂದು ಕೇರಳ ರಾಜ್ಯದ ಅರಣಪಾರ ತೋಲ್ಪಟ್ಟಿ ಗ್ರಾಮದ ನಿವಾಸಿ ಅಜೀಜ್ ಎಂಬ ವ್ಯಕ್ತಿ ಕೆಲಸದಾಳುಗಳನ್ನು ತನ್ನ ಜೀಪಿನಲ್ಲಿ ಹರಿಹರ ಗ್ರಾಮಕ್ಕೆ ಕರಿಮೆಣಸು ಕುಯ್ಯುವ ಕೆಲಸದ ಬಾಪ್ತು ಹೋಗುತ್ತಿದ್ದಾಗ ಸದರಿ ಜೀಪು ಅಪಘಾತಕ್ಕೀಡಾಗಿ ಚಾಲಕ ಅಜೀಶ್ ಮತ್ತು ಶಿನೋಜ್ ರವರುಗಳು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರು ಸಾವನಪ್ಪಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, March 16, 2017

 ಅಕ್ರಮ ಜೂಜಾಟ ಆರೋಪಿಗಳ ಬಂಧನ

                  ದಿನಾಂಕ 15-3-2017 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮಾಕುಟ್ಟ ಉಪ ಠಾಣಾ ವ್ಯಾಪ್ತಿಯ ಕಾಕೆತೋಡು ಭಗವತಿ ಜಾತ್ರೆಯು ಜರುಗಿದ್ದು, ಈ ಸಂದರ್ಭದಲ್ಲಿ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರುರವರ ಮಾರ್ಗದರ್ಶನದಲ್ಲಿ ಪಿಐ ಡಿಸಿಬಿ, ಎಂ ಮಹೇಶ್, ಡಿಸಿಐಬಿ ಸಿಬ್ಬಂದಿಯವರಾದ ಹಮೀದ್, ತಮ್ಮಯ್ಯ, ಅನಿಲ್, ವೆಂಕಟೇಶ್, ನಿರಂಜನ್, ವಸಂತ, ಯೋಗೇಶ್, ಗಣೇಶ, ಶೇಷಪ್ಪ, ಶಶಿಧರ ರವರೊಂದಿಗೆ ಮಾಕುಟ್ಟ ರಕ್ಷಿತಾರಣ್ಯದ ಮದ್ಯದಲ್ಲಿ ಜೂಜಾಡುತ್ತಿದ್ದ ಗುಂಪಿನ ಮೇಲೆ ಧಾಳಿ ನಡೆಸಿ 16 ಜನ ಆರೋಪಿಗಳನ್ನು ವಶಕ್ಕೆ ಪಡೆದು, 55,980 ರೂ ನಗದು ಹಾಗೂ ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಆಕಸ್ಮಿಕ ಮರಣ

             ದಿನಾಂಕ 14-3-2017 ರಂದು ವಿರಾಜಪೇಟೆ ತಾಲೂಕಿನ ಅಂಬಟ್ಟಿ ಗ್ರಾಮದ ನಿವಾಸಿ ಸುಬ್ಬಯ್ಯ ಎಂಬುವವರು ವಿಪರೀತ ಮದ್ಯಪಾನ ಮಾಡಿ ಮದ್ಯದ ಅಮಲಿನಲ್ಲಿ ಗ್ಯಾಸ್ಟ್ರಿಕ್ ಔಷಧಿ ಎಂದು ಕ್ರಿಮಿನಾಶಕ ಔಷಧಿಯನ್ನು ಆಕಸ್ಮಿಕವಾಗಿ ಸೇವಿಸಿ ಮೃತಪಟ್ಟಿದ್ದು ಈ ಬಗ್ಗೆ ಪತ್ನಿ ಮಮತಾರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಕ್ಲುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

           ಕ್ಲುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಕತ್ತಿಯಿಂದ ಕಡಿದು ಗಾಯಪಡಿಸಿದ ಘಟನೆ ವಿರಾಜಪೇಟೆ ತಾಲೂಕಿನ ಕುಟ್ಟ ಬಳಿಯ ಮಂಚಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಚಳ್ಳಿ ಗ್ರಾಮದ ಎಂ ಪಿ ಸೋಮಯ್ಯನವರ ಲೈನ್ ಮನೆಯಲ್ಲಿ ವಾಸವಿರುವ ಜವನ ಎಂಬುವವರು ದಿನಾಂಕ 14-3-2017 ರಂದು ಸಮಯ ರಾತ್ರಿ ಮನೆಯಲ್ಲಿ ಟಿ.ವಿ ನೋಡಿಕೊಂಡಿರುವಾಗ ಪಕ್ಕದಲ್ಲೇ ವಾಸವಿರುವ ಜವನರವರ ತಮ್ಮ ಬೊಳಕನು ಮದ್ಯಪಾನ ಮಾಡಿಕೊಂಡು ಮನೆಯ ಹತ್ತಿರ ಹೋಗಿ ಜಗಳ ತೆಗೆದು ಕತ್ತಿಯಿಂದ ತಲೆಗೆ ಕಡಿದು ಗಾಯಪಡಿಸಿದ್ದು ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

            ಸೋಮವಾರಪೇಟೆ ತಾಲೂಕಿನ ಕೊಣ್ಣಿಗನಹಳ್ಳಿ ಗ್ರಾಮದ ನಿವಾಸಿ ಕೆ ಆರ್ ರಂಗಸ್ವಾಮಿ ಎಂಬುವವರು ಹಾಸನದಲ್ಲಿ ಉಪನ್ಯಾಸಕರಾಗಿದ್ದು ಕೊಣ್ಣಗನಹಳ್ಳಿಯ ತಮ್ಮ ಮನೆಯಲ್ಲಿ ಕಾಫಿ ಮತ್ತು ಕಾಳುಮೆಣಸನ್ನು ಮನೆಯ ಒಳಗಡೆ ಶೇಖರಿಸಿ ಇಟ್ಟಿದ್ದು, ದಿನಾಂಕ 14-3-2017 ರಂದು ಮನೆಗೆ ಬೀಗ ಹಾಕಿ ಹಾಸನದಲ್ಲಿರುವ ಮನೆಗೆ ಹೋಗಿದ್ದು ದಿನಾಂಕ 15-3-2017 ರಂದು ಸಹೋದರ ಸುಬ್ಬೇಗೌಡರು ದೂರವಾಣಿ ಕರೆ ಮಾಡಿ ಮನೆಯಲ್ಲಿಟ್ಟಿದ್ದ ಕಾಫಿ ಮತ್ತು ಕಾಳು ಮೆಣಸು ಕಳುವಾದ ಬಗ್ಗೆ ತಿಳಿಸಿದ ಮೇರೆಗೆ ಮನೆಗೆ ಬಂದು ನೋಡುವಾಗ 8 ಕ್ವಿಂಟಾಲ್ ಕಾಳು ಮೆಣಸು, 150 ಕೆ ಜಿ ರೋಬಸ್ಟಾ ಕಾಫಿ ಮತ್ತು 3 ಚೀಲ ತೆನೆ ಬಿಡಿಸದ ಹಸಿ ಕರಿ ಮೆಣಸನ್ನು ಕಳವು ಮಾಡಿರುವುದು ಕಂಡು ಬಂದಿದ್ದು, ಈ ಕಳವನ್ನು ಕೂಲಿ ಕೆಲಸ ಮಾಡುವ ಶಿವ, ಕುಮಾರ, ಸುರೇಶ ಮತ್ತು ಇತರರು ಮಾಡಿರುವುದಾಗಿ ಗುಮಾನಿ ಇರುವುದಾಗಿ ಕೊಟ್ಟ ಪುಕಾರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಮೋಟಾರು ಸೈಕಲ್ ಅಪಘಾತ ವ್ಯಕ್ತಿಯ ದುರ್ಮರಣ

             ದಿನಾಂಕ 11-3-2017 ರಂದು ಮಾದಾಪುರದ ಮೂವತ್ತೋಕ್ಲು ಗ್ರಾಮದ ನಿವಾಸಿ ರವಿರವರು ಸುಂಟಿಕೊಪ್ಪದಿಂದ ಮನೆಗೆ ಹೋಗುತ್ತಿರುವಾಗ ಗರಗಂದೂರು ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗ ತಲುಪುವಾಗ ಅಜಾಗರೂಕತೆಯಿಂಧ ಚಾಲನೆ ಮಾಡಿ ನಿಯಂತ್ರಣ ತಪ್ಪಿ ಮಗುಚಿಬಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 14-3-2017 ರಂದು ಮೃತಪಟ್ಟಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಕೆರೆಯಲ್ಲಿ ಈಜಲು ತೆರಳಿ ವ್ಯಕ್ತಿಯ ದುರ್ಮರಣ

               ವಿರಾಜಪೇಟೆ ತಾಲೂಕಿನ ಟಿ ಶೆಟ್ಟಿಗೇರಿ ಗ್ರಾಮದ ವಸಂತ ಎಂಬುವವರ ಲೈನ್ ಮನೆಯಲ್ಲಿ ವಾಸವಿರುವ ರಂಜು ಎಂಬುವವರು ದಿನಾಂಕ 14-3-2017 ರಂದು ಕೂಲಿ ಕೆಲಸ ಮುಗಿಸಿ ಸ್ನಾನ ಮಾಡಲು ಕೆರೆಗೆ ಹೋಗಿದ್ದು ಈಜುವ ಸಂದರ್ಭ ತಾವರೆ ಗಿಡದ ಬೇರು ಸಿಕ್ಕಿಹಾಕಿಕೊಂಡು ಈಜಲು ಸಾದ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಸರಣಿ ಅಪಘಾತ

             ದಿನಾಂಕ 15-3-2017 ರಂದು ಕುಶಾಲನಗರದ ನಿವಾಸಿ ಕೃಷ್ಣಪ್ಪ ಎಂಬುವವರು ಮಾದಪಟ್ಟಣ ಗ್ರಾಮದ ಶಿವಣ್ಣ ಎಂಬುವರೊಂದಿಗೆ ಮೋಟಾರು ಬೈಕಿನಲ್ಲಿ ಕೆಲಸಕ್ಕೆಂದು ಕಂಬಿ ಬಾಣೆಗೆ ಹೋಗಿ ವಾಪಾಸ್ಸು ಬರುವಾಗ ಆನೆ ಕಾಡು ಎಂಬಲ್ಲಿಗೆ ತಲುಪುವಾಗ ರಾಜ್ಯ ಹೆದ್ದಾರಿಯಲ್ಲಿ ಕೆಎಲ್- 41 -ಎಫ್-6633 ನಂಬರಿನ ಇನ್ನೋವಾ ಕಾರಿನ ಚಾಲಕ ಅತೀ ವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಿಟ್ಜ್ ಕಾರಿಗೆ ಡಿಕ್ಕಿಪಡಿಸಿದಾಗ ರಿಟ್ಜ್ ಕಾರಿನ ಚಾಲಕ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಸವಾರ ಶಿವಣ್ಣ ಮತ್ತು ಕೃಷ್ಣಪ್ಪನವರಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ವಿದ್ಯುತ್ ತಂತಿಗೆ ಏಣಿ ತಾಗಿ ವ್ಯಕ್ತಿಯ ದುರ್ಮರಣ

                    ಕರಿಮೆಣಸನ್ನು ಕುಯ್ಯುತ್ತಿರುವಾಗ ಅಲ್ಯುಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿ ವ್ಯಕ್ತಿಯು ಮರಣ ಹೊಂದಿದ ಘಟನೆ ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 15-3-2017 ರಂದು ಕುಕ್ಲೂರು ಗ್ರಾಮದ ನಿವಾಸಿ ಬಿದ್ದಪ್ಪ ಎಂಬುವವರ ಕಣ್ಣಂಗಾಲದಲ್ಲಿರುವ ತೋಟದಲ್ಲಿ ಕುಮಾರ ಎಂಬುವವರು ಅಲ್ಯಮಿನಿಯಂ ಏಣಿಯನ್ನು ಉಪಯೋಗಿಸಿ ಕರಿಮೆಣಸನ್ನು ಕುಯ್ಯುತ್ತಿರುವಾಗ ಏಣಿಯು ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಹರಿದು ಕುಮಾರರವರು ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 

Wednesday, March 15, 2017

ವಾಹನ ಅಪಘಾತ ಹೆಚ್ಚಳ - ಪತ್ರಿಕಾ ಪ್ರಕಟಣೆ
                   ಸುಗಮ ಸಂಚಾರ ವ್ಯವಸ್ಥೆ ಹಾಗೂ ರಸ್ತೆ ಅಪಘಾತ ತಡೆಗಟ್ಟುವ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಆರ್.ಟಿ.ಓ ಇಲಾಖೆಯಿಂದ ಅನೇಕ ಸಲಹೆ ಸೂಚನೆಗಳನ್ನು ನೀಡಿದರೂ ಸಹ ಜೀಪು/ಪಿಕ್ಅಪ್ ಹಾಗೂ ಸರಕು ಸಾಗಿಸುವ ವಾಹನಗಳಲ್ಲಿ ಕೆಲಸಗಾರರನ್ನು ಕುರಿಗಳ ರೀತಿಯಲ್ಲಿ ತುಂಬಿಕೊಂಡು ಸಂಚರಿಸುತ್ತಿರುವುದು ಇತ್ತೀಚಿಗಿನ ದಿನಗಳಲ್ಲಿ ಕಂಡು ಬಂದಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ದಿನಾಂಕ 02-03-2017 ರಂದು ಸುಂಟಿಕೊಪ್ಪದಲ್ಲಿ ಟ್ರಾಕ್ಟರ್ ವಾಹನ ಅಪಘಾತಕ್ಕೀಡಾಗಿ ಅದರಲ್ಲಿ ಸಂಚರಿಸುತ್ತಿದ್ದ ಇಬ್ಬರು ಕೆಲಸಗಾರರು ಮೃತಪಟ್ಟಿರುತ್ತಾರೆ, ಹಾಗೂ ದಿನಾಂಕ 13-03-2017 ರಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಕುಕ್ಲೂರು ಬಳಿ 20 ಕ್ಕಿಂತ ಹೆಚ್ಚು ಕೆಲಸಗಾರರನ್ನು ಸಾಗಿಸುತ್ತಿದ್ದ ಸರಕು ಸಾಗಣೆ ಮಾಡುವ ಪಿಕಪ್ ವಾಹನ ಅಪಘಾತಕ್ಕೀಡಾಗಿ ಎಲ್ಲಾ ಕೆಲಸಗಾರರಿಗೆ ತೀವ್ರತರವಾದ ಗಾಯವಾಗಿ ಮಡಿಕೇರಿ ಹಾಗೂ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
                ಆದ್ದರಿಂದ ವಾಹನದ ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಎಲ್ಲಾ ವಾಹನಗಳು ಅಂದರೆ ಆಟೋ, ಶಾಲಾ ವಾಹನ, ಮ್ಯಾಕ್ಸಿ ಕ್ಯಾಬ್ ಹಾಗೂ ಸರಕು ಸಾಗಿಸುವ ವಾಹನಗಳಲ್ಲಿ ಕೆಲಸಗಾರರನ್ನು ಸಾಗಿಸುವುದು ಐಎಂವಿ ಕಾಯ್ದೆಯ ಪ್ರಕಾರ ಅಪರಾಧವಾಗಿದ್ದು, ಸದರಿ ವಾಹನದ ಮಾಲೀಕರು ಹಾಗೂ ಚಾಲಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಹಾಗೂ ಚಾಲಕನ ಚಾಲನಾ ಪರವಾನಗಿಯನ್ನು ರದ್ದುಪಡಿಸಲು ಆರ್.ಟಿ.ಓ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಈ ಬಗ್ಗೆ ಎಲ್ಲಾ ಆಟೋ, ಶಾಲಾ ವಾಹನ ಹಾಗೂ ಮ್ಯಾಕ್ಸಿ ಕ್ಯಾಬ್ ಮಾಲೀಕರು/ಚಾಲಕರುಗಳು ಎಚ್ಚರ ವಹಿಸುವುದು.
                     ಅಲ್ಲದೆ ಮಾನ್ಯ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿ ನಿರ್ಧೇಶನದನ್ವಯ ವಿಮೆ ಇಲ್ಲದ ವಾಹನಗಳನ್ನು ಜಫ್ತಿ ಮಾಡಿ ವಾಹನದ ಮಾಲೀಕರುಗಳು ವಿಮಾ ಪಾಲಿಸಿಗಳನ್ನು ತಂದು ಹಾಜರುಪಡಿಸುವವರೆಗೆ ಪೊಲೀಸ್ ವಶದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿರುತ್ತದೆ. ಆದುದರಿಂದ ಎಲ್ಲಾ ವಾಹನ ಮಾಲೀಕರುಗಳು ಈ ಬಗ್ಗೆ ಎಚ್ಚರ ವಹಿಸಬೇಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಪಿ ರಾಜೇಂದ್ರ ಪ್ರಸಾದ್, ಐ.ಪಿ.ಎಸ್. ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  
 
ಪತಿಯಿಂದ ಪತ್ನಿಯ ಕೊಲೆ

                 ಪತಿಯು ಪತ್ನಿಯನ್ನು ಕೊಲೆ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ. ಹಚ್ಚಿನಾಡು ಗ್ರಾಮದ ಐನಂಡ ಚೇತನ್ ರವರ ಪಳ್ಳೆಕೆರೆ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಲೈನ್ ಮನೆಯಲ್ಲಿ ವಾಸವಿರುವ ಪಶ್ಚಿಮ ಬಂಗಾಳ ರಾಜ್ಯದವರಾದ ಮುಲಿಯಾಸ್ ಮುಂಡ ಹಾಗೂ ಬೀನಾ ಮುಂಡ ದಂಪತಿಗಳು ವಾಸವಿದ್ದು ದಿನಾಂಕ 13-3-2017 ರಂದು ರಾತ್ರಿ ಮುಲಿಯಾಸ್ ಮುಂಡ ಹಾಗೂ ಬೀನಾ ಮುಂಡ ರವರು ಮದ್ಯಪಾನ ಮಾಡಿಕೊಂಡು ಗಲಾಟೆ ಮಾಡಿಕೊಂಡಿದ್ದು, ಮುಲಿಯಾಸ್ ಮುಂಡರವರು ಪತ್ನಿ ಬೀನಾ ಮುಂಡರವರ ಕತ್ತು ಹಿಸುಕಿ ಕೊಲೆ ಮಾಡಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಲಾರಿಗೆ ಕಾರು ಡಿಕ್ಕಿ
               ದಿನಾಂಕ 14-3-2017 ರಂದು ಪುತ್ತೂರಿನ ನಿವಾಸಿ ನೋಣಯ್ಯ ಎಂಬುವವರು ಶೇಖರ್ ಎಂಬುವವರೊಂದಿಗೆ ಟ್ಯಾಂಕರ್ ಲಾರಿಯಲ್ಲಿ ಕೂಡಿಗೆಯಿಂದ ಮಂಗಳೂರಿಗೆ ಹೋಗುತ್ತಿರುವಾಗ ಕಾಟಕೇರಿ ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಕಾರನ್ನು ಚಾಲಕ ವಿನಯ್ ಪ್ರಸಾದ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಪಡಿಸಿ ಟ್ಯಾಂಕರ್ ಲಾರಿ ಹಾಗೂ ಕಾರು ಜಖಂಗೊಂಡಿದ್ದು, ಕಾರಿನ ಚಾಲಕ ಮತ್ತು ಕಾರಿನಲ್ಲಿದ್ದ ಮಹಿಳೆಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಕಾರುಗಳು ಮುಖಾಮುಖಿ ಡಿಕ್ಕಿ
            ತಮಿಳುನಾಡು ರಾಜ್ಯದ ಚೆನ್ನೈ ನ ನಿವಾಸಿ ಮುರುಗೇಶನ್ ಎಂಬುವವರು ಸಂಸಾರದೊಂದಿಗೆ ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದು, ದಿನಾಂಕ 14-3-2017 ರಂದು ತಲಕಾವೇರಿಗೆ ಹೋಗಿ ವಾಪಾಸ್ಸು ಮೂರ್ನಾಡು ಮೂಲಕ ಮಡಿಕೇರಿಗೆ ಬರುತ್ತಿರುವಾಗ ಮೇಕೇರಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ಕಾರನ್ನು ಚಾಲಕ ನಂಜಪ್ಪರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮುರುಗೇಶನ್ ರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು ಕಾರಿನಲ್ಲಿದ್ದ ಮುರುಗೇಶನ್, ಭಾರತಿಯವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಹೊಳೆಗೆ ಸ್ನಾನಕ್ಕೆ ತೆರಳಿ ವ್ಯಕ್ತಿಯ ಆಕಸ್ಮಿಕ ಮರಣ

               ದಿನಾಂಕ 12-3-2017 ರಂದು ಸೋಮವಾರಪೇಟೆ ತಾಲೂಕಿನ ಬಾಳುಗೋಡುವಿನ ನಿವಾಸಿ ಮುಕ್ಕಾಟಿರ ಮೇದಪ್ಪ ಎಂಬುವವರು ಬಾಳುಗೋಡು ಗ್ರಾಮದ ಕಾವೇರಿ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಅಕ್ರಮ ಮರಳು ಸಾಗಾಟ ಲಾರಿ ವಶಕ್ಕೆ

                ದಿನಾಂಕ 14-3-2017 ರಂದು ಸೋಮವಾರಪೇಟೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶಿವಣ್ಣರವರಿಗೆ ಸಿಕ್ಕಿದ  ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ಶಾಂತಳ್ಳಿ ಬಸ್ಸು ತಂಗುದಾಣದ ಹತ್ತಿರ ಕುಂದಳ್ಳಿ ಕಡೆಯಿಂದ ಬಂದ ಕೆಎ-12-ಬಿ-1268 ರ ಟಿಪ್ಪರ್ ಲಾರಿಯನ್ನು ಪರಿಶೀಲಿಸಿ ಅಕ್ರಮವಾಗಿ ಪರವಾನಿಗೆ ಇಲ್ಲದೇ ಮರಳು ಸಾಗಾಟ ಮಾಡುತ್ತಿದ್ದುದ್ದು ಕಂಡು ಬಂದು ಚಾಲಕನನ್ನು ವಶಕ್ಕೆ ಪಡೆದು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

 ಮೋಟಾರು ಸೈಕಲ್ ಗಳ  ಡಿಕ್ಕಿ
            ಪಿರಿಯಾಪಟ್ಟಣ ತಾಲೂಕಿನ ಶಾನುಬೋಗನ ಹಳ್ಳಿಯ ನಿವಾಸಿಯಾದ ನಿಂಗಪ್ಪ ಎಂಬುವವರು ಜಲೇಂದ್ರ ರವರೊಂದಿಗೆ ಮೋಟಾರು ಸೈಕಲಿನಲ್ಲಿ ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಗ್ರಾಮದಲ್ಲಿರುವ ಬಸವಣ್ಣ ಪೆಟ್ರೋಲ್ ಬಂಕ್ ಹತ್ತಿರ ಬಲಕ್ಕೆ ಸಿಗ್ನಲ್ ಕೊಟ್ಟು ತಿರುಗುವಾಗ ಹಿಂಬದಿಯಿಂದ ಚೇತನ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿ ಮಗುಚಿ ಬಿದ್ದ ಪರಿಣಾಮ ನಿಂಗಪ್ಪ, ಜಲೇಂದ್ರ ಮತ್ತು ಡಿಕ್ಕಿಪಡಿಸಿದ ಮೋಟಾರು ಸೈಕಲ್ ಸವಾರ ಮತ್ತು ಹಿಂಬದಿಯಲ್ಲಿ ಕುಳಿತ್ತಿದ್ದ ಮಂಜುನಾಥ ಎಂಬುವವರಿಗೆ ಗಾಯಗಳಾಗಿದ್ದು ಈ ಬಗ್ಗೆ ನಿಂಗಪ್ಪನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಪಾದಾಚಾರಿಗೆ ಆಟೋ ಡಿಕ್ಕಿ

               ದಿನಾಂಕ 14-3-2017 ರಂದು ಕುಶಾಲನಗರದ ಮಾರ್ಕೆಟ್ ರಸ್ತೆಯ ನಿವಾಸಿಯಾದ ಆಲ್ಬೆರ್ಟ್ ಎಂಬುವವರು ಕೊಪ್ಪ ಗೇಟ್ ಕಡೆಯಿಂದ ಮಾರ್ಕೆಟ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಆಟೋವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಪಡಿಸಿದ ಪರಿಣಾಮ ಆಲ್ಬೆರ್ಟ್ ರವರು ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲ್ ಗಳ ಮುಖಾಮುಖಿ ಡಿಕ್ಕಿ

                 ಸುಂಟಿಕೊಪ್ಪದ ನಿವಾಸಿ ಮಹಮ್ಮದ್ ಇರ್ಷಾದ್ ಎಂಬುವವರು ಅಣ್ಣ ಮಹಮ್ಮದ್ ರಫಿ ಎಂಬುವವರೊಂದಿಗೆ ದಿನಾಂಕ 14-3-2017 ರಂದು ಮೋಟಾರು ಸೈಕಲಿನಲ್ಲಿ ಕುಶಾಲನಗರಕ್ಕೆ ಹೋಗುತ್ತಿರುವಾಗ ನಿಸರ್ಗಧಾಮದ ಹತ್ತಿರ ತಲುಪುವಾಗ ಎದುರುಗಡೆಯಿಂದ ಮೋಟಾರು ಸೈಕಲನ್ನು ಅದರ ಸವಾರ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮಹಮ್ಮದ್ ರಫಿ ರವರು ಚಾಲನೆ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರು ಸೈಕಲ್ ಸಮೇತ ಕೆಳಗೆ ಬಿದ್ದು ಮಹಮ್ಮದ್ ಇರ್ಷಾದ್ ಮತ್ತು ಮಹಮ್ಮದ್ ರಫಿರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಮೋಟಾರು ಸೈಕಲ್ ಅಪಘಾತ

                   ಸೋಮವಾರಪೇಟೆ ತಾಲೂಕಿನ ಮುವತ್ತೋಕ್ಲು ಗ್ರಾಮದ ನಿವಾಸಿ ರವಿಯವರು ದಿನಾಂಕ 11-3-2017 ರಂದು ಸುಂಟಿಕೊಪ್ಪದಿಂದ ಮನೆಗೆ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಗರಗಂದೂರು ಎಂಬಲ್ಲಿಗೆ ತಲುಪುವಾಗ ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಅಕ್ರಮ ಜೂಜಾಟ ಆರೋಪಿಗಳ ಬಂಧನ

                      ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕುವೆಂಪು ಶಾಲೆಯ ಹತ್ತಿರ ಇರುವ ದೇವರಕಾಡಿನಲ್ಲಿ ಇಸ್ಪೇಟು ಎಲೆಗಳಿಂದ ಜೂಜಾಟ ಆಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸೋಮವಾರಪೇಟೆ ಠಾಣೆಯ ಉಪನಿರೀಕ್ಷಕರಾದ ಶೀವಣ್ಣರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಜೂಜಾಟಕ್ಕೆ ಬಳಸಿದ ನಗದು 2,110 ರೂ ಮತ್ತು ಎಂಟು ಜನ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

 ಅಕ್ರಮ ಮದ್ಯ ಮಾರಾಟ

            ಕುಟ್ಟ ವೃತ್ತ ನಿರೀಕ್ಷಕರಾದ ದಿವಾಕರರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಶ್ರೀಮಂಗಲ ಠಾಣಾ ಸರಹದ್ದಿನ ತೂಚಮಕೇರಿ ಗ್ರಾಮದ ನಿವಾಸಿ ಚಿನ್ನಮಾಡ ಅಶೋಕರವರು ಅವರ ತೋಟದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ್ನು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಲಾಟರಿ ಟಿಕೆಟ್ ಮಾರಾಟ ವ್ಯಕ್ತಿಯ ಬಂಧನ.

                   ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಗಳನ್ನು ಪೊನ್ನಂಪೇಟೆ ನಗರದಲ್ಲಿ ಮಾರಾಟ ಮಾಡುತ್ತಿದ್ದ ಕುಟ್ಟ ಗ್ರಾಮದ ನಿವಾಸಿ ರಾಜ ಎಂಬುವವರನ್ನು ಪೊನ್ನಂಪೇಟೆ ಠಾಣೆಯ ಉಪನಿರೀಕ್ಷಕರಾದ ಜಯರಾಮ್ ರವರು ಪತ್ತೆಹಚ್ಚಿ ರಾಜರವರಿಂದ ಕೇರಳ ರಾಜ್ಯದ 150 ಲಾಟರಿ ಟಿಕೆಟ್ ಗಳನ್ನು ಹಾಗೂ ನಗದು 2,520 ರೂಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

Tuesday, March 14, 2017

 ಮಹಿಳೆ ಆತ್ಮಹತ್ಯೆ

  ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಅರುವತ್ತೋಕ್ಲು ಗ್ರಾಮದಿಂದ ವರದಿಯಾಗಿದೆ. ಅರುವತ್ತೋಕ್ಲು ಗ್ರಾಮದ ಶ್ರೀಮತಿ ಪಾರು ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 13-3-2017 ರಂದು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅನುಮಾನಾಸ್ಪದ ವ್ಯಕ್ತಿಯ ಬಂಧನ.

  ದಿನಾಂಕ 13-3-2017 ರಂದು ಕುಶಾಲನಗರ ಠಾಣೆಯ ಸಿಬ್ಬಂದಿಯವರಾದ ಸಜಿ ಮತ್ತು ಲೋಕೇಶರವರು ರಾತ್ರಿ ನಗರದಲ್ಲಿ ಗಸ್ತುವಿನಲ್ಲಿರುವಾಗ ರಥಬೀದಿಯಲ್ಲಿರುವ ಶುಭ್ ಜ್ಯುವೆಲ್ಲರಿ ಅಂಗಡಿಯ ಮುಂಭಾಗದಲ್ಲಿ ಅನುಮಾನಾಸ್ಪದವಾಗಿ ಅಲೆದಾಡಿಕೊಂಡಿದ್ದ ಬಂಟ್ವಾಳದ ನಿವಾಸಿ ಶ್ರೀಧರ್ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೀಪು ಅಪಘಾತ, 22 ಮಂದಿಗೆ ಗಾಯ: 
 ದಿನಾಂಕ 13-3-2017 ರಂದು ಕಕ್ಕಬ್ಬೆಯ ನಿವಾಸಿ ಚಂಗಪ್ಪ @ ಬೋಪಣ್ಣ ಎಂಬುವವರು ಜೀಪಿನಲ್ಲಿ 22 ಜನರನ್ನು ಕೂರಿಸಿಕೊಂಡು ಹೋಗುತ್ತಿದ್ದ ವೇಳೆ ವಿರಾಜಪೇಟೆ ನಗರದ ಕುಕ್ಲೂರು ಎಂಬಲ್ಲಿ ಜೀಪು ಅಪಘಾತಕ್ಕೀಡಾದ ಪರಿಣಾಮ ಜೀಪಿನ ತೊಟ್ಟಿಯಲ್ಲಿ ಕುಳಿತ್ತಿದ್ದ ಸುಮಾರು 22 ಜನರಿಗೆ ಗಾಯಗಳಾಗಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟ ಆರೋಪಿಗಳ ಬಂಧನ:

 ಸುಂಟಿಕೊಪ್ಪ ಠಾಣೆಯ ಉಪನಿರೀಕ್ಷಕರಾದ ಅನೂಪ್ ಮಾದಪ್ಪನವರು ದಿನಾಂಕ 13-3-2017 ರಂದು ರಾತ್ರಿ ಗಸ್ತುವಿನಲ್ಲಿರುವಾಗ ಗರಗಂದೂರುವಿನ ಹಾರಂಗಿ ಹಿನ್ನೀರಿನಿಂದ ಮರಳನ್ನು ಅಕ್ರಮವಾಗಿ ತುಂಬಿಸಿಕೊಂಡು ಜೀಪಿನಲ್ಲಿ ಸಾಗಿಸುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಚಾಲಕ ರಮಾನಂದ ಹಾಗೂ ಇತರ 3 ಜನರನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಣದ ವಿಚಾರದಲ್ಲಿ ಜಗಳ:
     ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಗದ್ದೆಹಳ್ಳದ ನಿವಾಸಿ ಸುಬ್ರಮಣಿ ಎಂಬುವವರು ಚಂದ್ರು ಎಂಬುವವರಿಗೆ ಹಣ ಸಾಲವಾಗಿ ನೀಡಿದ್ದು, ಸದರಿ ಸಾಲವನ್ನು ಕೇಳಲು ದಿನಾಂಕ 13-3-2017 ರಂದು ಚಂದ್ರು ರವರ ಮನೆಗೆ ಹೋದಾಗ, ಚಂದ್ರು ತಂಗವೇಲು, ಅಯಣ್ಣಾರ್ ಮತ್ತು ಅರುಣರವರು ಸೇರಿ ಸುಬ್ರಮಣಿಯವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲಿಗೆ ಆಂಬ್ಯುಲೆನ್ಸ್ ವಾಹನ ಡಿಕ್ಕಿ:
   ಮೋಟಾರು ಸೈಕಲಿಗೆ ಆಂಬ್ಯುಲೆನ್ಸ್ ವಾಹನ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ವಿರಾಜಪೇಟೆ ತಾಲೂಕಿನ ಕುಕ್ಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 13-3-2017 ರಂದು ಮೈತಾಡಿ ಗ್ರಾಮದ ನಿವಾಸಿ ನವೀನ್ ಎಂಬುವವರು ಮೋಟಾರು ಸೈಕಲಿನಲ್ಲಿ ಹಿಂಬದಿಯಲ್ಲಿ ತನ್ನ ತಾಯಿಯನ್ನು ಕೂರಿಸಿಕೊಂಡು ವಿರಾಜಪೇಟೆ ಕಡೆಯಿಂದ ಮೈತಾಡಿ ಕಡೆಗೆ ಹೋಗುತ್ತಿರುವಾಗ ಕುಕ್ಲೂರು ಗ್ರಾಮದ ಮುತ್ತಪ್ಪ ದೇವಸ್ಥಾನದ ಬಳಿ ತಲುಪುವಾಗ ಹಿಂದುಗಡೆಯಿಂದ ಬಂದ ಆಂಬ್ಯುಲೆನ್ಸ್ ವಾಹನವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಸವಾರರಿಬ್ಬರಿಗೂ ಗಾಯಗಳಾಗಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Monday, March 13, 2017

ಪತಿಯಿಂದ ಪತ್ನಿಯ ಕೊಲೆ
                     ಸಿದ್ದಾಪುರ ಸಮೀಪದ ವಾಲ್ನೂರು ಬಳಿಯ ಬಾಳೆಗುಂಡಿ ಗಿರಿಜನ ಹಾಡಿಯ ನಿವಾಸಿ ಪವಿತ್ರಾ ಎಂಬಾಕೆಯು ಆಕೆಯ ಪತಿ ವಸಂತ ಎಂಬಾತನೊಂದಿಗೆ ವಿರಸದಿಂದ ತವರು ಮನೆಯಲ್ಲಿದ್ದು ದಿನಾಂಕ 12/03/2017ರಂದು ಪತಿ ವಸಂತನು ಆಕೆಯನ್ನು ಕುರಿತು ಮನೆಗೆ ಕರೆದಿದ್ದು ಪವಿತ್ರಳು ವಸಂತನೊಂದಿಗೆ ಹೋಗಲು ನಿರಾಕರಿಸಿದಾಗ ವಸಂತನು ಪವಿತ್ರಳ ಮೇಲೆ ಕತ್ತಿಯಿಂದ ತೀವ್ರವಾಗಿ ಹಲ್ಲೆ ಮಾಡಿದ ಕಾರಣ ಪವಿತ್ರಳು ಸಾವಿಗೀಡಾಗಿದ್ದು ಪತ್ನಿಯನ್ನು ಕೊಲೆಗೈದ ವಸಂತನ ವಿರುದ್ದ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ
                    ದಿನಾಂಕ 12/03/2017ರಂದು ಮಡಿಕೇರಿ ಗ್ರಾಮಾಂತರ ಠಾಣೆಯ ಪಿಎಸ್‌ಐ ಶಿವಪ್ರಕಾಶ್‌ರವರು ಗಸ್ತು ಕರ್ತವ್ಯದಲ್ಲಿರುವಾಗ ಸಂಪಾಜೆ ಬಳಿಯ ಪೆಟ್ರೋಲ್‌ ಬಂಕ್‌ ಒಂದರ ಬಳಿ ಬರುತ್ತಿದ್ದ ಕೆಎ-19-ಎಎ-4295 ರ ಐಷರ್‌ ಲಾರಿಯ ಚಾಲಕನು ಪೊಲೀಸ್‌ ವಾಹನವನ್ನು ಕಂಡು ಲಾರಿಯನ್ನು ನಿಲ್ಲಿಸಿ ಲಾರಿಯಿಂದ ಇಳಿದಯ ಓಡಿ ಹೋಗಿದ್ದು ಸಂಶಯಗೊಂಡ ಪಿಎಸ್‌ಐ ಶಿವಪ್ರಕಾಶ್‌ರವರು ಲಾರಿಯನ್ನು ಪರಿಶೀಲಿಸಿದಾಗ ಲಾರಿಯಲ್ಲಿ  ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದ್ದು ಮರಳು ಸಮೇತ ಲಾರಿಯನ್ನು ವಶಪಡಿಸಿಕೊಂಡು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                     ದಿನಾಂಕ 11/03/2017ರಂದು ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಪಣಿ ಎರವರ ಕಾವಲ ಎಂಬಾತನು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅದೇ ದಿನ ಕಾವಲನು ಮದ್ಯಪಾನ ಮಾಡಿ ಬಂದು ಆತನ ಪತ್ನಿ ಮಂಜುಳಾರ ಮೊದಲ ಪತಿಯ ಮಗ ಅಜಿತ ಎಂಬಾತನಿಗೆ ಹೊಡೆದ ಕಾರಣಕ್ಕೆ ಪತ್ನಿ ಮಂಜುಳಾ ಮಗನೊಂದಿಗೆ ಪಕ್ಕದ ಮನೆಯ ಚಿಟ್ಟಿ ಎಂಬವರ ಮನೆಗೆ ಹೋಗಿದ್ದು ಈ ಸಂದರ್ಭದಲ್ಲಿ ಕಾವಲನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗುಮಾನಿ ವ್ಯಕ್ತಿಗಳ ಬಂಧನ
                 ದಿನಾಂಕ 12/03/2017ರ ಬೆಳಗಿನ ಜಾವ ಕುಶಾಲನಗರ ಗ್ರಾಮಾಂತರ ಠಾಣೆಯ ಸಿಬ್ಬಂದಿ  ಡಿ.ಆರ್‌.ರಂಗೇಗೌಡ ಮತ್ತು ಸಿಬ್ಬಂದಿಯವರು ಗಸ್ತು ಕರ್ತವ್ಯದಲ್ಲಿದ್ದಾಗ ಕೂಡು ಮಂಗಳೂರು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಕೂಡ್ಲೂರು ನಿವಾಸಿಗಳಾದ ರಾಜೇಶ ಮತ್ತು ಶಿವಪ್ರಸಾದ್‌ ಎಂಬವರುಗಳು ಕಬ್ಬಿಣದ ರಾಡನ್ನು ಹಿಡಿದುಕೊಂಡು ಯಾವುದೋ ಅಪರಾಧ ಕೃತ್ಯ ಎಸಗುವ ಉದ್ದೇಶದಿಂದ ಸಂಶಯಾಸ್ಪದವಾಗಿ ಸುತ್ತಾಡುತ್ತದ್ದವರನ್ನು  ಕಂಡು ವಿಚಾರಿಸಿದಾಗ ಅವರ ಇರುವಿಕೆಯ ಬಗ್ಗೆ ಸೂಕ್ತ ಸಮಜಾಯಿಸಿಕೆ ದೊರೆಯದ ಕಾರಣ ಅವರನ್ನು ಸಂಶಯದ ಮೇರೆಗೆ ಬಂಧಿಸಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪಾದಚಾರಿಗೆ ಬೈಕ್‌  ಡಿಕ್ಕಿ
                ದಿನಾಂಕ 12/03/2017ರಂದು ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ನಿವಾಸಿ ಚಟ್ಟಂಗಡ ಪ್ರತಾಪ್‌ ಎಂಬವರು ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ  ಮುಗಿಸಿಕೊಂಡು ರಸ್ತೆಯಲ್ಲಿ ಹೋಗುತ್ತಿರುವಾಗ ಗೋಣಿಕೊಪ್ಪ ಕಡೆಯಿಂದ ಕೆಎ-12-ಕ್ಯು-2467ರ ಮೋಟಾರು ಸೈಕಲನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರತಾಪ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಪ್ರತಾಪ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಕಾರು ಡಿಕ್ಕಿ
                   ದಿನಾಂಕ 11/03/2017ರಂದು ಕುಟ್ಟ ಬಳಿಯ ಕೋತೂರು ನಿವಾಸಿ ವಿ.ಕೆ.ಪ್ರದೀಪ ಎಂಬವರು ಕೆಎ-12-ಕೆ-9347ರ ಮೋಟಾರು ಬೈಕಿನಲ್ಲಿ ಹರಿಹರ ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಕೆಎ-03-ಎಂಜೆ-9160ರ ಮಾರುತಿ ಓಮಿನಿ  ವ್ಯಾನನ್ನು ಅದರ ಚಾಲಕ ಮಹಾದೇವ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರದೀಪನು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಪ್ರದೀಪನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                  ದಿನಾಂಕ 11/03/2017ರಂದು ಕಾಲೂರು ಗ್ರಾಮದ  ಮಾಂದಲಪಟ್ಟಿ ನಿವಾಸಿ ಟಿ.ಪಿ.ನಂಜುಂಡ ಎಂಬವರು  ಮಾಂದಲಪಟ್ಟಿಯಲ್ಲಿ ಅವರ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗ ಅಲ್ಲಿಗೆ ಬಂದ ಹಚ್ಚಿನಾಡು ಗ್ರಾಮ ಟಿ.ಡಿ.ಬಿದ್ದಪ್ಪ, ಟಿ.ಎಲ್.ಈರಪ್ಪ, ಟಿ.ಎಲ್‌.ವಿಠಲ, ಟಿ.ಎ.ಉಮೇಶ, ಚೆನ್ನಪಂಡ ಗಿರೀಶ, ಬೊಟ್ಟೋಳಂಡ ಕಾರ್ಯಪ್ಪ, ಬಾರಿಬೆಳ್ಳಚ್ಚು ಗ್ರಾಮದ ಪೊನ್ನಚೆಟ್ಟಿರ ಪೊನ್ನಪ್ಪ ಮತ್ತು ಬೊಟ್ಟೋಳಂಡ ಮೊಣ್ಣಪ್ಪ ಎಂಬವರು ಅಂಗಡಿಗೆ ಅಕ್ರಮವಾಗಿ  ಪ್ರವೇಶಿಸಿ ಹಫ್ತಾ ಹಣ ನೀಡುವಂತೆ ಒತ್ತಾಯಿಸಿ ನಂಜುಂಡರವರ ಮೇಲೆ ಕಲ್ಲು ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, March 12, 2017

ಹಳೇ ವೈಷಮ್ಯ ವ್ಯಕ್ತಿಯ ಮೇಲೆ ಹಲ್ಲೆ

                        ಹಳೇ ವೈಷಮ್ಯದಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಗಾಯ ಪಡಿಸಿದ ಘಟನೆ ಮಡಿಕೇರಿ ತಾಲೂಕಿನ ಮಕ್ಕಂದೂರು ಎಂಬಲ್ಲಿ ವರದಿಯಾಗಿದೆ. ದಿನಾಂಕ 10-3-2017 ರಂದು ಮಕ್ಕಂದೂರು ಗ್ರಾಮದ ನಿವಾಸಿ ವಿಜು ಎಂಬುವವರು ರಾತ್ರಿ ಮನೆಯಲ್ಲಿರುವಾಗ ಕೆ ನಿಡುಗಣೆ ಗ್ರಾಮದ ನಿವಾಸಿಯಾದ ಕಾಶಿ @ ಕಾವೇರಪ್ಪನವರು ಮೊಬೈಲ್ ಗೆ ಕರೆ ಮಾಡಿ ಮಕ್ಕಂದೂರು ದೇವಸ್ಥಾನದ ಹತ್ತಿರ ಬರಲು ತಿಳಿಸಿದ ಮೇರೆಗೆ ದೇವಸ್ಥಾನದ ಹತ್ತಿರ ಹೋದಾಗ ಕಾಶಿ @ ಕಾವೇರಪ್ಪನವರೊಂದಿಗೆ ಕೆ ನಿಡುಗಣೆ ಗ್ರಾಮದ ಅಚ್ಚಯ್ಯ ಹಾಗೂ ಚಂದನ್ ರವರು ಸಹಾ ಇದ್ದು ಸದ್ರಿಯವರು ಹಳೇ ವೈಷಮ್ಯದಿಂದ ಏಕಾ ಏಕಿ ವಿಜುರವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                        ಮಡಿಕೇರಿ ನಗರದ ನಿವಾಸಿ ಅಭಿಲಾಶ್ ಎಂಬುವವರು ದಿನಾಂಕ 10-3-2017 ರಂದು ರಾತ್ರಿ ಗ್ರೀನ್ ಲ್ಯಾಂಡ್ ಹೊಟೆಲ್ ಗೆ ಹೋಗುತ್ತಿರುವಾಗ ಅಲ್ಲೇ ಪಕ್ಕದ ಟೂರಿಸ್ಟ್ ಲಾಡ್ಜ್ ನ ಮುಂದೆ ಸ್ನೇಹಿತ ನಿತಿನ್ ರವರೊಂದಿಗೆ ಭಗವತಿ ನಗರದ ನಿವಾಸಿಗಲಾದ ಕಾಶಿಕಾವೇರಪ್ಪ, ಚಂದನ್ ಮತ್ತು ನೀಲಾಧರರವರು ಗಲಾಟೆ ಮಾಡುತ್ತಿದ್ದುದ್ದನ್ನು ಕಂಡು ಏಕೆ ಗಲಾಟೆ ಮಾಡುತ್ತಿದ್ದೀರಾ ಎಂದು ಕೇಳಿದಾಗ ಮೂವರೂ ಸೇರಿ ಅಭಿಲಾಶ್ ರವರ ಮೇಲೆ ಹಲ್ಲೆ ನಡಸಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಹಿಳೆಯನ್ನು ವಂಚಿಸಿ ಸರ ಅಪಹರಣ
                        ಶನಿವಾರಸಂತೆಯ ಕೂಗೂರು ಗ್ರಾಮದ ನಿವಾಸಿಯಾದ ಲೀಲಾವತಿಯವರು ದಿನಾಂಕ 11-3-2017ರಂದು ಕೆ.ಆರ್.ಸಿ ಸರ್ಕಲ್ ನಿಂದ ಶನಿವಾರಸಂತೆಯ ಮಾರ್ಕೆಟ್ ರಸ್ತೆಯಲ್ಲಿ ನಡೆದುಕೊಂಢು ಹೋಗುತ್ತಿದ್ದಾಗ ಓರ್ವ ಅಪರಿಚಿತ ಹೆಂಗಸು ಲೀಲಾವತಿಯವರನ್ನು ಮಾತನಾಡಿಸಿ ನನಗೆ ಚಿನ್ನ ಸಿಕ್ಕಿದೆ, ಅದನ್ನು ನೋಡುತ್ತೀರಾ ಎಂದು ಹೇಳಿ ಮಾತನಾಡಿಸುತ್ತಿದ್ದಾಗ ಅಲ್ಲಿಗೆ ಒಬ್ಬ ಅಪರಿಚಿತ ಗಂಡಸು ಬಂದು ಆಕೆಯನ್ನು ಮಾತನಾಡಿಸಿ ನಾನು ಚಿನ್ನ ತೆಗೆದುಕೊಳ್ಳುತ್ತೇನೆ. ಇಲ್ಲಿ ಮಾತನಾಡುವುದು ಬೇಡ, ಸೈಡಿಗೆ ಹೋಗೋಣ ಎಂದು ಹೇಳಿ ಇಬ್ಬರನ್ನು ಪ್ರವಾಸ ಮಂದಿರದ ಬಳಿ ಕರೆದುಕೊಂಡು ಹೋಗಿ ಹೆಂಗಸಿದ ಬಳಿ ಇದ್ದ 2 ಚಿನ್ನದಂತಹ ಮಾಂಗಲ್ಯ ಕರಿ ಮಣಿ ಸರ ಹಾಗೂ ಕಾಸನ್ನು ಪೋಣಿಸಿರುವ ಸರವನ್ನು ತೆಗೆದು ತೋರಿಸಿ ಇದರ ಬೆಲೆ 1,50,000 ರೂ ಆಗುತ್ತದೆ ಎಂದು ಹೇಳಿ ಕೈಯ್ಯಲ್ಲಿದ್ದ ಸರವನ್ನು ಕಲ್ಲಿಗೆ ಉಜ್ಜಿ ಇದು ಶುದ್ದ ಚಿನ್ನ, ನೋಡಿ ಎಂದು ಹೇಳಿ ತೋರಿಸಿ ಲೀಲಾವತಿಯವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕೇಳಿದಾಗ ಬಿಚ್ಚಿ ಆಕೆಯ ಕೈಗೆ ಕೊಟ್ಟಾಗ ಆಕೆ ಅದನ್ನು ಉಜ್ಜಿ ಇದು ತುಂಬಾ ಕಮ್ಮಿ ಕ್ಯಾರೆಟಿನ ಚಿನ್ನ ಎಂದು ಹೇಳಿ ಲೀಲಾವತಿಯ ಬಳಿ ಇದ್ದ ಮಾಂಗಲ್ಯ ಸರವನ್ನು ಬದಲಿಸಿ ಹೆಂಗಸಿನ ಬಳಿ ಇದ್ದ ನಕಲಿ ಚಿನ್ನದ ಚೈನನ್ನು ನೀಡಿ ವಂಚಿಸಿರುವುದಾಗಿ ಲೀಲಾವತಿಯವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ
                         ಮಡಿಕೇರಿ ನಗರದ ಜಲಾಶ್ರಯ ಬಡಾವಣೆಯ ನಿವಾಸಿ ಅನಂತ ಕೃಷ್ಣ ಎಂಬುವವರು ಬಾವ ಸುಶೀಲ್ ಕುಮಾರ್ ರವರೊಂದಿಗೆ ಅರಂತೋಡುವಿನ ತೊಡಿಕಾನ ದೇವಸ್ಥಾನಕ್ಕೆ ಹೋಗಿ ಬರುತ್ತಿರುವಾಗ ಜೋಡುಪಾಲ ಎಂಬಲ್ಲಿಗೆ ತಲುಪುವಾಗ ಮುಂದಿನಿಂದ ಬಂದ ಕೆಎಲ್ -14-ಹೆಚ್- 5154 ರ ಇನ್ನೋವಾ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕಾರಿಗೆ ಡಿಕ್ಕಿ ಪಡಿಸಿ ಕಾರು ಜಖಂ ಗೊಂಡಿದ್ದು, ಚಾಲಕ ಫಕೀರಪ್ಪನವರಿಗೆ ಗಾಯವಾಗಿದ್ದು, ಇನ್ನೋವಾ ಕಾರನ್ನು ಚಾಲಕ ಡಿಕ್ಕಿ ಪಡಿಸಿ ನಿಲ್ಲಿಸದೇ ಹೊರಟು ಹೋಗಿರುವುದಾಗಿ ಅನಂತ ಕೃಷ್ಣರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, March 11, 2017

ಅಕ್ರಮ ಮರಳು ಸಾಗಾಟ
                  ದಿನಾಂಕ 10/03/2017ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್‌ಐ ಜೆ.ಇ.ಮಹೇಶ್‌ರವರು ಗಸ್ತು ಕರ್ತವ್ಯದಲ್ಲಿದ್ದಾಗ ಹುದುಗೂರು ಹೊಳೆಯಿಂದ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವ ಕುರಿತು ದೊರೆತ ಖಚಿತ ಸುಳಿವಿನ ಮೇರೆಗೆ ಸ್ಥಳಕ್ಕೆ ತೆರಳಿದಾಗ ಹಾರಂಗಿ ಗ್ರಾಮದ ಮೋಹನ, ಮದಲಾಪುರದ ಕುಶಾಲಪ್ಪ ಮತ್ತು ಹಾರಂಗಿ ಗ್ರಾಮದ ನವೀನ ಎಂಬವರು ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಹುದುಗೂರು ಹೊಳೆಯಿಂದ ಮರಳನ್ನು ಕೆಎ-35-7020ರ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದು ಲಾರಿ ಸಮೇತ ಆರೋಪಿಗಳಲ್ಲಿ ಓರ್ವನಾದ ನವೀನನ್ನು ಬಂಧಿಸಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ.

ಅಕ್ರಮ ಮರಳು ಸಾಗಾಟ ಪತ್ತೆ
                ದಿನಾಂಕ 10/03/2017ರಂದು ಸೋಮವಾರಪೇಟೆ ಠಾಣೆಯ ಪಿಎಸ್‌ಐ ಶಿವಣ್ಣರವರು ಗಸ್ತು ಕರ್ತವ್ಯದಲ್ಲಿದ್ದಾಗ ಶಾಂತಳ್ಳಿ ಮಾರ್ಗವಾಗಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವ ಕುರಿತು ದೊರೆತ ಸುಳಿವಿನ ಮೇರೆಗೆ ಸಿಬ್ಬಂದಿಗಳೊಂದಿಗೆ ಐಗೂರಿನ ರಸ್ತೆಯಲ್ಲಿ ಹೊಂಚು ಹಾಕಿ ಕಾದಿದ್ದು ಐಗೂರು ಹೊಳೆಯ ಕಡೆಯಿಂದ ಕೆಎ-04-ಡಿ-3251ರ ಪಿಕ್‌ಅಪ್‌ ಜೀಪಿನಲ್ಲಿ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಕಂಡು ಜೀಪನ್ನು ನಿಲ್ಲಿಸಿದಾಗ ಜೀಪು ಚಾಲಕನು ಜೀಪನ್ನು ನಿಲ್ಲಿಸಿ ಓಡಿ ಹೋಗಿದ್ದು, ಜೀಪಿನಲ್ಲಿ ಅಕ್ರಮವಾಗಿ ಸರ್ಕಾರದ ಪರವಾನಗಿ ಸಾಗಾಟ ಮಾಡುತ್ತಿದ್ದ ಮರಳನ್ನು ಜೀಪು ಸಮೇತ ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪತ್ತೆ
                   ದಿನಾಂಕ 10/03/2017ರಂದು ಶನಿವಾರಸಂತೆ ವ್ಯಾಪ್ತಿಯಲ್ಲಿ  ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವ ಕುರಿತು ದೊರೆತ ಸುಳಿವಿನ ಮೇರೆಗೆ ಶನಿವಾರಸಂತೆ ಠಾಣೆಯ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ಸಿಬ್ಬಂದಿಗಳೊಂದಿಗೆ ಹಾರೆಹೊರೂರು ಗ್ರಾಮದ ರಸ್ತೆಯಲ್ಲಿ ಹೊಂಚು ಹಾಕಿ ಕಾದಿದ್ದು ಕೆಎ-12-ಎ-9972 ಮತ್ತು ಕೆಎ-21-ಎ-3383ರ ಮಿನಿ ಲಾರಿಗಳಲ್ಲಿ  ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಅಕ್ರಮವಾಗಿ ಸರ್ಕಾರದ ಪರವಾನಗಿ ಸಾಗಾಟ ಮಾಡುತ್ತಿದ್ದ ಮರಳನ್ನು ಲಾರಿಗಳ ಸಮೇತ ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ
                   ದಿನಾಂಕ 28/02/2017ರಂದು ಗೋಣಿಕೊಪ್ಪ ನಗರದ ನಿವಾಸಿ ಟಿ.ಎಂ.ಮಂಜುನಾಥ ಎಂಬವರು ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಮೈಸೂರಿಗೆ ಹೋಗಿ ಬರುವುದಾಗಿ  ಹೇಳಿ ಹೋದವರು ಇನ್ನೂ ಮನೆಗೆ ಮರಳಿ ಬಾರದೆ ಕಾಣೆಯಾಗಿರುವುದಾಗಿ ಮಂಜುನಾಥರವರ ಮತ್ನಿ ನಿಶಾರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಕಸ್ಮಿಕ ಸಾವು
                    ದಿನಾಂಕ 10/03/2017ರಂದು ವಿರಾಜಪೇಟೆ ಬಳಿಯ ಬೇತ್ರಿ ಸಮೀಪದ ನಾಲ್ಕೇರಿ ಗ್ರಾಮದ ನಿವಾಸಿ ಕೆ.ಎನ್‌.ಮೇದಪ್ಪ ಎಂಬವರು ಗ್ರಾಮದ ಪಂಚಾಯಿತಿ ಬಾವಿಯಲ್ಲಿ ನೀರು ನೋಡಲೆಂದು ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು  ಮೃತರಾಗಿರುವುದಾಗಿ  ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, March 10, 2017

ಹಲ್ಲೆ ಪ್ರಕರಣ
                       ದಿನಾಂಕ 9-3-2017 ರಂದು ವಿರಾಜಪೇಟೆ ತಾಲೂಕಿನ ಕುಮಟೂರು ಗ್ರಾಮದ ನಿವಾಸಿ ಲತ ಎಂಬುವವರು ನಿಟ್ಟೂರು ಗ್ರಾಮದಲ್ಲಿ ಇರುವ ಅವರ ತೋಟಕ್ಕೆ ಕೆಲಸಕ್ಕೆ ಆಳುಗಳನ್ನು ಕರೆದುಕೊಂಡು ಹೋದಾಗ ನಿಟ್ಟೂರು ಗ್ರಾಮದ ನಿವಾಸಿಗಳಾದ ಲತಾ ಮತ್ತು ವಿಷ್ಣುರವರು ಲತಾರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಣ ವಸೂಲಿ ಮಾಡಿ ಮೋಸ
                  ಜಾಗ ಕೊಡಿಸುವುದಾಗಿ ವ್ಯಕ್ತಿಯೊಬ್ಬರು ಜನರಿಂದ ಹಣ ವಸೂಲಿ ಮಾಡಿ ಮೋಸ ಮಾಡಿರುವ ಬಗ್ಗೆ ಸಿದ್ದಾಪುರದಲ್ಲಿ ವರದಿಯಾಗಿದೆ. 2 ವರ್ಷದ ಹಿಂದೆ ಸಿದ್ದಾಪುರದ ವಾಸಿ ವಿನೋದಿನಿ ಮತ್ತು ಚೆರಿಯಪರಂಬುವಿನ ನಿವಾಸಿ ಸವಿತಾ ಎಂಬುವವರು ರಾಜಶೇಖರ ಮತ್ತು ಇತರ ಸುಮಾರು 150 ಜನರಿಂದ ಅಕ್ರಮ ಸಕ್ರಮದ ಅಡಿಯಲ್ಲಿ ಮನೆ ನಿವೇಶನದ ಜಾಗವನ್ನು ಕೊಡಿಸಿ ಕೊಡುವುದಾಗಿ ಹೇಳಿ ತಲಾ 3000 ರೂ ಹಣವನ್ನು ಪಡೆದು ಇದುವರೆಗೂ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ಕೊಟ್ಟ ಪುಕಾರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ಕಾರು ಕಳವು
                 ಮನೆಯ ಮುಂದೆ ನಿಲ್ಲಿಸಿದ್ದ ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಘಟನೆ ಸೋಮವಾರಪೇಟೆ ತಾಲೂಕಿನ ಕೆದಕಲ್ ಎಂಬಲ್ಲಿ ವರದಿಯಾಗಿದೆ. ಕೆದಕಲ್ ಗ್ರಾಮದ ನಿವಾಸಿ ಮಜೀದ್ ರವರು ಮಾರುತಿ 800 ಕಾರನ್ನು ಮನೆಯ ಮುಂದೆ ಎಂದಿನಂತೆ ನಿಲ್ಲಿಸಿದ್ದು, ದಿನಾಂಕ 7-3-2017 ರ ರಾತ್ರಿ ಯಾರೋ ಕಳ್ಳರು ಕಾರನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ವ್ಯಕ್ತಿಯ ಮೇಲೆ ಹಲ್ಲೆ
                       ಮಡಿಕೇರಿ ತಾಲೂಕಿನ ಗುಹ್ಯ ಗ್ರಾಮದ ನಿವಾಸಿ ದೇವರಾಜು ಎಂಬುವವರು ಪಳ್ಳೆಕೆರೆ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದು, ದಿನಾಂಕ 7-3-2017 ರ ರಾತ್ರಿ ಸಮಯದಲ್ಲಿ ಮಲಗಿರುವಾಗ ಲೈನ್ ಮನೆಯ ಮುಂದಿನ ರಸ್ತೆಯಲ್ಲಿ ಯಾರೋ ಜೋರಾಗಿ ಮಾತನಾಡುವ ಶಬ್ದ ಕೇಳಿ ಹೊರಗೆ ರಸ್ತೆಗೆ ತೆರಳಿ ನೋಡಿದಾಗ ಅದೇ ತೋಟದಲ್ಲಿ ಕೆಲಸ ಮಾಡುತ್ತಿರುವ ದಶರಥ ಹಾಗೂ ಸತೀಶ್ ಎಂಬುವವರು ಜೋರಾಗಿ ಮಾತನಾಡುತ್ತಿದ್ದವರನ್ನು ವಿಚಾರಿಸಿದಾಗ ಇಬ್ಬರೂ ಸೇರಿ ದೇವರಾಜುರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ವಿಷ ಸೇವಿಸಿ ಆತ್ಮಹತ್ಯೆ
               ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳುರು ಗ್ರಾಮದ ನಿವಾಸಿ ಸುಮಿತ್ರ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ದಿನಾಂಕ 9-3-2017 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದಾಖಲಾಗಿರುತ್ತದೆ.

Thursday, March 9, 2017

 ಕಳವು ಪ್ರಕರಣ                     ಕುಶಾಲನಗರದ ಕೂಡುಮಗಳೂರು ಗ್ರಾಮದ ನಿವಾಸಿಯಾದ ರೀಟಾರವರು ಸಿದ್ದಾಪುರದಲ್ಲಿರುವ ರಿಲಾಯನ್ಸ್ ಕಾಫಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ 6-3-2017 ರಂದು ಎಂದಿನಂತೆ ಕೆಲಸಕ್ಕೆ ಬರುವಾಗ ಬ್ಯಾಂಕಿಗೆ ಸಾಲವನ್ನು ಕಟ್ಟಲು ರೂ.15000/- ನಗದನ್ನು ಹಾಗೂ ಅವರು ಧರಿಸಿಕೊಂಡಿದ್ದ 65,000 ರೂ ಮೌಲ್ಯದ ಚಿನ್ನದಾಭರಣಗಳನ್ನು ಒಂದು ಬ್ಯಾಗಿನಲ್ಲಿ ಹಾಕಿ ಅಂಗಡಿಯ ಒಳಗೆ ಕ್ಯಾಬಿನ್ ನ ಹೊರಭಾಗದ ಟೇಬಲ್ ನ ಮೇಲೆ ಇಟ್ಟು ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ 3 ಜನ ಅಪರಿಚಿತ ವ್ಯಕ್ತಿಗಳು ಕಾಫಿ ದರ ಕೇಳುವ ನೆಪದಲ್ಲಿ ಅಂಗಡಿಗೆ ಬಂದಿದ್ದು ಅವರು ಬಂದು ಹೋದ ನಂತರ ರೀಟಾರವರು ಇಟ್ಟಿದ್ದ ಬ್ಯಾಗು ಕಾಣೆಯಾಗಿದ್ದು ಸದರಿ 3 ಜನ ವ್ಯಕ್ತಿಗಳು ಬ್ಯಾಗನ್ನು ತೆಗೆದುಕೊಂಡು ಹೋಗಿರುವುದಾಗಿ ಸಂಶಯವಿರುವುದಾಗಿ ನೀಡಿದ ಪುಕಾರಿಗೆ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಾಗಿ ವ್ಯಕ್ತಿಯ ದುರ್ಮರಣ
                    ವಿರಾಜಪೇಟೆ ತಾಲೂಕಿನ ಅಮ್ಮತ್ತಿಯ ಹೊಸಕೋಟೆ ಎಂಬಲ್ಲಿ ಕರಿಮೆಣಸನ್ನು ಕುಯ್ಯಲು ಕಬ್ಬಿಣದ ಏಣಿಯನ್ನು ಬಳಸಿ ಏಣಿಯು ವಿದ್ಯುತ್ ತಂತಿಗೆ ತಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ದಿನಾಂಕ 8-3-2017 ರಂದು ಹೊಸಕೋಟೆಯ ನಿವಾಸಿ ಸೈಯದ್ ರವರು ಹೊಸಕೋಟೆ ಗ್ರಾಮದ ಗಣಪತಿಯವರ ತೋಟದಲ್ಲಿ ಕರಿಮೆಣಸನ್ನು ಕುಯ್ಯುತ್ತಿರುವಾಗ ಏಣಿಯು ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿ ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಕ್ಷುಲ್ಲಕ ಕಾರಣಕ್ಕೆ ಹಲ್ಲೆ
                 ದಿನಾಂಕ 7-3-2017 ರಂದು ವಿರಾಜಪೇಟೆ ತಾಲೂಕಿನ ತಾವಳಗೇರಿಯ ತಟ್ಟಂಗಡ ಚಾಮಿಯವರ ಲೈನ್ ಮನೆಯಲ್ಲಿ ವಾಸವಿರುವ ಪಣಿಯರವರ ಪಾಲಿ ಎಂಬುವವರು ಮನೆಯಲ್ಲಿರುವಾಗ ಪಕ್ಕದ ಲೈನ್ ಮನೆಯ ವಾಸಿ ಪಣಿಯರವರ ಜಪ್ಪು ಎಂಬುವವರು ಮದ್ಯಪಾನ ಮಾಡಿ ಬೊಬ್ಬೆ ಹಾಕುತ್ತಿದ್ದುದನ್ನು ವಿಚಾರಿಸಿದ ಕಾರಣಕ್ಕೆ ಜಪ್ಪುವು ಏಕಾ ಏಕಿ ಕಬ್ಬಿಣದ ರಾಡಿನಿಂದ ಪಾಲಿಯವರಿಗೆ ಹೊಡೆದು ಗಾಯಪಡಿಸಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಮೋಟಾರು ಸೈಕಲ್ ಡಿಕ್ಕಿ
              ಪಾದಚಾರಿಯೊಬ್ಬರಿಗೆ ಮೋಟಾರು ಸೈಕಲ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ವಿರಾಜಪೇಟೆ ನಗರದಲ್ಲಿ ಸಂಭವಿಸಿದೆ. ದಿನಾಂಕ 8-3-2017 ರಂದು ತಮಿಳುನಾಡು ರಾಜ್ಯದ ತಿರುವಣ್ಣಾಮಲೈ ಜಿಲ್ಲೆಯ ನಿವಾಸಿಯಾದ ರಾಜುರವರು ವಿರಾಜಪೇಟೆ ನಗರದ ಮೋಹನ್ ಪೆಟ್ರೋಲ್ ಬಂಕ್ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಾಜುರವರಿಗೆ ಡಿಕ್ಕಿ ಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು, ರಾಜುರವರಿಗೆ ಗಾಯಗಳಾಗಿದ್ದು ಈ ಬಗ್ಗೆ ವಿರಾಜಪೇಟೆ ನಗರದಲ್ಲಿ ಪ್ರಕರಣ ದಾಖಲಾಗಿರುತ್ತದೆ.

Wednesday, March 8, 2017

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮ ಹತ್ಯೆ
         ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿ ವರದಿಯಾಗಿದೆ. ಕಡಗದಾಳು ಗ್ರಾಮದ ತುರ್ಕರಟ್ಟಿಯ ನಿವಾಸಿ ನಾರಾಯಣ ಎಂಬುವವರಿಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದು ದಿನಾಂಕ 6-3-2017 ರ ರಾತ್ರಿ ಸಮಯದಲ್ಲಿ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಗ ಪ್ರವೀಣ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಬೈಕ್ ಡಿಕ್ಕಿ
                 ಪಾದಚಾರಿ ಮಹಿಳೆಗೆ ಬೈಕು ಡಿಕ್ಕಿಯಾಗಿ ಗಾಯಗೊಂಡ ಘಟನೆ ಗರಗಂದೂರು ಗ್ರಾಮದಲ್ಲಿ ವರದಿಯಾಗಿದೆ. ಗರಗಂದೂರು ಗ್ರಾಮದ ನಿವಾಸಿ ಸುಶೀಲಾ ಸಿಕ್ವೇರಾ ಎಂಬುವವರು ದಿನಾಂಕ 6-3-2017 ರಂದು ನಡೆದುಕೊಂಡು ಹೋಗುತ್ತಿರುವಾಗ ಮಲ್ಲಿಕಾರ್ಜುನ ಕಾಲೋನಿಯ ಜಂಕ್ಷನ್ ಬಳಿ ನಜೀಮ್ ಎಂಬುವವರು ಬೈಕನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಸುಶೀಲಾ ಸಿಕ್ವೇರಾ ರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು, ಸುಶೀಲಾ ಸಿಕ್ವೇರರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಬೈಕ್ ಡಿಕ್ಕಿ
               ಪಾದಚಾರಿ ಮಹಿಳೆಯೊಬ್ಬರು ರಸ್ತೆ ದಾಟುವಾಗ ಬೈಕು ಡಿಕ್ಕಿಯಾಗಿ ಗಾಯಗೊಂಡ ಘಟನೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ನಡೆದಿದೆ. ಅಮ್ಮತ್ತಿ ಒಂಟಿಯಂಗಡಿಯ ನಿವಾಸಿ ಕಮಲ ಎಂಬುವವರು ದಿನಾಂಕ 7-3-2017ರಂದು ಅಮ್ಮತ್ತಿ ನಗರದ ಟೈಟಾನಿಕ್ ಬಾರ್ ಮುಂದುಗಡೆ ರಸ್ತೆ ದಾಟುವಾಗ ವಿರಾಜಪೇಟೆ ನಗರದ ಮಲೆತಿರಿಕೆ ಬೆಟ್ಟದ ನಿವಾಸಿ ಸುಬ್ರಮಣಿ ಎಂಬುವವರು ಬೈಕನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿ ಕಮಲರವರಿಗೆ ಗಾಯಗಳಾಗಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗುಂಡು ಹೊಡೆದುಕೊಂಡು ವ್ಯಕ್ತಿಯ ಆತ್ಮಹತ್ಯೆ
               ವ್ಯಕ್ತಿಯೊಬ್ಬರು ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದಲ್ಲಿ ವರದಿಯಾಗಿದೆ. ಚಾಮುಂಡೇಶ್ವರಿ ನಗರದ ನಿವಾಸಿ ಅಪ್ಪಯ್ಯ ಎಂಬುವವರಿಗೆ ಮದ್ಯಪಾನ ಮಾಡುವ ಚಟವಿದ್ದು ಹಾಗೂ ಸಾಲ ಮಾಡಿಕೊಂಡಿದ್ದು ಇದೇ ವಿಚಾರದಲ್ಲಿ ಮನನೊಂದು ದಿನಾಂಕ 7-3-2017 ರಂದು ಮನೆಯಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಗ ಕವನ್ ಕರುಂಬಯ್ಯರವರು ನೀಡಿದ ಪುಕಾರಿಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.