Wednesday, December 6, 2017

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ಸಿದ್ದಾಪುರ ಠಾಣಾ ವ್ಯಾಪ್ತಿಯ ಮಾಲ್ದಾರೆ ಗ್ರಾಮದ ನಿವಾಸಿ ಶ್ರೀಮತಿ ಬಿ.ಎಂ. ಪುಷ್ಪ ಎಂಬವರ ಪತಿ ವಿ.ಕೆ. ಕುಮಾರ (40) ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಇದೇ ಕಾರಣದಿಂದ ಮನನೊಂದು ದಿನಾಂಕ 4-12-2017 ರಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆದರಿಸಿ ವ್ಯಕ್ತಿಯಿಂದ ಹಣ ವಸೂಲಿ:

    ವಿರಾಜಪೇಟೆ ತಾಲೋಕು ನಡಿಕೇರಿ ಗ್ರಾಮದ ನಿವಾಸಿ ಎ.ಎಂ. ರಫೀಕ್ ಎಂಬವರು ನಡಿಕೇರಿ ಗ್ರಾಮದಲ್ಲಿ ಕ್ಯಾಂಟಿನ್ ಇಟ್ಟುಕೊಂಡಿದ್ದು ದಿನಾಂಕ 4-12-2017 ರಂದು ಸಮಯ 11-30 ಗಂಟೆಯ ಸಮಯದಲ್ಲಿ ಕೆಎಲ್-18-ಎಸ್-1328 ಸ್ವಿಪ್ಟ್ ಡಿಸಾಯರ್ ಕಾರಿನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಟೀ ಕುಡಿದು ನಂತರ ಕ್ಯಾಂಟಿನ್ ಮಾಲಿಕ ಎ.ಎಂ. ರಫೀಕ್ ರವರನ್ನು ಬೆದರಿಸಿ ಅವರ ಕೈಯಲ್ಲಿಂದ 1900/- ರೂ.ಗಳನ್ನು ಪಡೆದುಕೊಂಡು ಹೋಗಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜೀಪು ಕಳವು:

     ಮನೆಯ ಮುಂದೆ ರಸ್ತೆಯಲ್ಲಿ ನಿಲ್ಲಿಸಿದ್ದ ಜೀಪೊಂದನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ವಿ.ಎಕ್ಸ್. ಆಂಟೋನಿ ಎಂಬವರು ದಿನಾಂಕ 4-12-2017 ರಂದು ರಾತ್ರಿ ತಮ್ಮ ಬಾಪ್ತು ಜೀಪನ್ನು ತಮ್ಮ ಮನೆಯ ಗೇಟಿನ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದು, ಸದರಿ ಜೀಪನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





a