Friday, December 1, 2017

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
                           ದಿನಾಂಕ 30/11/2017ರಂದು ಮಡಿಕೇರಿ ಬಳಿಯ ಮರಗೋಡು ನಿವಾಸಿ ಟಿ.ಎನ್.ತಮ್ಮಯ್ಯ ಅಲಿಯಾಸ್ ಜಯ ಎಂಬವರು ಮನೆಯಲ್ಲಿದ್ದ ಕಳೆ ನಾಶಕ ಔಷಧಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ತಮ್ಮಯ್ಯ ದೀರ್ಘ ಕಾಲದಿಂದ ಹರ್ನಿಯಾ ಕಾಯಿಲೆಯಿಂದ ಬಳಲುತ್ತಿದ್ದು ಇದರಿಂದಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
                            ದಿನಾಂಕ 29/11/2017ರಂದು ಕುಶಾಲನಗರ ಬಳಿಯ ಗೊಂದಿ ಬಸವನಹಳ್ಳಿ ನಿವಾಸಿ ಗಣೇಶ್‌ ಮತ್ತು ಆತನ ಪತ್ನಿ ಅನಿತಾ ಎಂಬವರು ಸುಂಟಿಕೊಪ್ಪದಲ್ಲಿರುವ ಅನಿತಾರವರ ಮಾವ ರುಕ್ಮಯ್ಯ ಎಂಬವರ ಮನೆಯಲ್ಲಿ ಗಣೇಶನು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥನಾಗಿದ್ದು ಆತನನ್ನು ಚಿಕಿತ್ಸೆಗಾಗಿ ಮೈಸೂರಿನ ಸೆಂಟ್ ಜೋಸೆಫ್ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 30/11/2017ರಂದು ಗಣೇಶನು ಮೃತನಾಗಿರುವುದಾಗಿ ವರದಿಯಾಗಿದೆ. ಮೃತ ಗಣೇಶನು ಶುಂಠಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದು ಹಾಗೂ ಸಾಲಗಾರರ ಸಾಲ ತೀರಿಸಲಾಗದೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.