Monday, December 4, 2017

ರಸ್ತೆ  ಅಪಘಾತ
                          ದಿನಾಂಕ 02/12/2017ರಂದು ರಾತ್ರಿ ವೇಳೆ ಸೋಮವಾರಪೇಟೆ ನಿವಾಸಿ ಅಫ್ರೀದ್ ಎಂಬವರು ಕೆಎ-12-ಬಿ-3181ರ ಲಾರಿಯಲ್ಲಿ ಪೊನ್ನಂಪೇಟೆಯಿಂದ ಕುಶಾಲನಗರಕ್ಕೆ ಹೋಗುತ್ತಿರುವಾಗ ತಿತಿಮತಿಯ ಮಜ್ಜಿಗೆ ಹಳ್ಳದ ಬಳಿ ಮೈಸೂರು ಕಡೆಯಿಂದ ಕೆಎ-04-ಎಂಬಿ-0221ರ ಕಾರನ್ನು ಅದರ ಚಾಲಕ ಅತಾವುಲ್ಲಾ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಫ್ರೀದ್‌ರವರ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಲಾರಿ ಹಾನಿಗೊಳಗಾಗಿದ್ದು ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಗುಂಪು ಹಲ್ಲೆ
                       ದಿನಾಂಕ 02/12/2017ರಂದು ವಿರಾಜಪೇಟೆ ಬಳಿಯ ಅರಪಟ್ಟು ನಿವಾಸಿ ಪಿ.ಬಿ.ಪುಟ್ಟ ಎಂಬವರು ಮನೆಯಲ್ಲಿರುವಾಗ ಕಡಂಗ ಗ್ರಾಮದ ನಿವಾಸಿಗಳಾದ ವಿನು, ದಿನೇಶ, ಈಶ್ವರ, ಗಣೇಶ ಮತ್ತು ವಾಸು ಎಂಬವರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ಪುಟ್ಟರವರೊಂದಿಗೆ ಜಗಳವಾಡಿ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣದ  ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                       ದಿನಾಂಕ 03/12/2017ರಂದು ವಿರಾಜಪೇಟೆ ಬಳಿಯ ಕೊಳತ್ತೋಡು ಬೈಗೋಡು ನಿವಾಸಿ ಪಂಜರಿ ಎರವರ ರಾಜೇಶ್‌ ಎಂಬವರು ಹುತ್ತರಿ ಹಬ್ಬ ಆಚರಿಸುತ್ತಿರುವಾಗ ರಾಜೇಶ್‌ರವರ ತಮ್ಮ ಸತೀಶನಿಗೆ ಅವರ ಅತ್ತಿಗೆ ರಾಧಿಕಾ ವೈದ ವಿಚಾರದಲ್ಲಿ ಜಗಳವಾಗಿ ಇನ್ನೊಬ್ಬ ಅಣ್ಣ ರಾಜಪ್ಪ ಕತ್ತಿಯಿಂದ ರಾಜೇಶನ ಮೇಲೆ  ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಮಗುಚಿ ಅವಘಢ
                           ದಿನಾಂಕ 03/12/2017ರಂದು ಕುಶಾಲನಗರದ ಗುಮ್ಮನಕೊಲ್ಲಿ ನಿವಾಸಿ ರಫೀಕ್ ಎಂಬವರು ಲಾರಿಯಲ್ಲಿ ಕೂಡಿಗೆ ಮಾರ್ಗವಾಗಿ ಯಲಕನೂರಿಗೆ ಹೋಗುತ್ತಿರುವಾಗ ಹೆಬ್ಬಾಲೆ ಕಡೆಯಿಂದ ಬಂದ ಕೆಎ-09-ಆರ್-4270ರ ಬೈನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದ ಪರಿಣಾಮ ಬೈಕ್ ಆತನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಕೊಂಡು ಅವಘಢಕ್ಕೀಡಾಗಿ ಬೈಕಿನಲ್ಲಿದ್ದ ಇಬ್ಬರು ಸವಾರರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.