Saturday, December 2, 2017

ಕಾಡು ಗೂಳಿ ಹತ್ಯೆ
                       ದಿನಾಂಕ 01/12/2017ರಂದು ಸಿದ್ದಾಪುರ ಬಳಿಯ ಬಾಡಗ ಬಾಣಂಗಾಲ ನಿವಾಸಿ ಎಂ.ಎಂ.ವಿವೇಕ್‌ ಎಂಬವರು ಗ್ರಾಮದ ಬಿಬಿಟಿಸಿ ಕಾಫಿ ತೋಟದ ಬಳಿಯ ರಸ್ತೆಯಲ್ಲಿ ಒಂದು ಕಾಡು ಗೂಳಿ ಸತ್ತು ಬಿದ್ದಿರುವುದನ್ನು ಕಂಡಿದ್ದು ಮೃತ ಗೂಳಿಯ ಮೈಮೇಲೆ ಗುಂಡು ತಗುಲಿರುವ ಚಿಹ್ನೆಗಳು ಕಂಡು ಬಂದಿದ್ದು ಯಾರೋ ದುಷ್ಕರ್ಮಿಗಳು ಬೇಟೆಯಾಡುವ ಸಲುವಾಗಿ ಕಾಡು ಗೂಳಿಗೆ ಗುಂಡು ಹೊಡೆದು ಕೊಂದಿರಬಹುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಅವಘಢ
                          ದಿನಾಂಕ 01/12/2017ರಂದು ಮಡಿಕೇರಿಯ ಪುಟಾಣಿನಗರ ನಿವಾಸಿ ಹನುಮಂತ ರಾಜು ಎಂಬವರು ಅವರ ಮನೆ ಬಳಿಯ ನಾರಾಯಣ ಎಂಬವರ ಕೆಎ-12-ಪಿ-4398ರ ಕಾರಿನಲ್ಲಿ ನಾರಾಯಣ ಮತ್ತು ನಾರಾಯಣರವರ ಪತ್ನಿ ವಿಜಯಲಕ್ಷ್ಮಿ ಎಂಬವರೊಂದಿಗೆ ಅರಸೀಕಟ್ಟೆಗೆ ಹೋಗುತ್ತಿರುವಾಗ ಸುಂಟಿಕೊಪ್ಪ ಬಳಿಯ ಕೆದಕಲ್ ಗ್ರಾಮದ ಭದ್ರಕಾಳಿ ದೇವಸ್ಥಾನದ ಬಳಿ ಎದುರಿನಿಂದ ಕೆಎ-03-ಎಂಬಿ-6174 ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹನುಮಂತ ರಾಜುರವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಹನುಮಂತರಾಜು, ನಾರಾಯಣರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ಗೆ ಕಾರು ಡಿಕ್ಕಿ
                       ದಿನಾಂಕ 01/12/2017ರಂದು ಶನಿವಾರಸಂತೆ ಬಳಿಯ ಮಣಗಲಿ ನಿವಾಸಿ ರಾಜಶೇಖರ್ ಎಂಬವರು ಅವರ ಮಗಳು ಪ್ರಿಯಾಂಕಳನ್ನು ಶಾಲೆಯಿಂದ ಕರೆದುಕೊಂಡು ಅವರ ಬೈಕ್‌ನಲ್ಲಿ ಮನೆಗೆ ಹೋಗುತ್ತಿರುವಾಗ ಬೆಳ್ಳಾರಳ್ಳಿ ಗ್ರಾಮದ ಬಳಿ ಎದುರುಗಡೆಯಿಂದ ಒಂದು ಮಾರುತಿ ವ್ಯಾನನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಜಶೇಖರ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ರಾಜಶೇಖರ್ ಹಾಗೂ ಅವರ ಮಗಳು ಪ್ರಿಯಾಂಕಳಿಗೆ ಗಾಯಗಳಾಗಿದ್ದು ವ್ಯಾನಿನ ಚಾಲಕ ವ್ಯಾನನ್ನು ನಿಲ್ಲಿಸದೆ ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗ್ಯಾಸ್ ಸಿಲಿಂಡರ್ ಕಳವು
                    ದಿನಾಂಕ 01/12/2017ರಂದು ಪೊನ್ನಂಪೇಟೆ ಬಳಿಯ ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹೆಚ್‌.ಎಂ.ಪಾರ್ವತಿರವರು ಬೆಳಿಗ್ಗೆ ಶಾಲೆಗೆ ಬಂದಾಗ ಯಾರೋ ಕಳ್ಳರು ಶಾಲೆಯ ಅಡುಗೆ ಕೋಣೆಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಒಳಗಿದ್ದ ಒಂದು ಇಂಡೇನ್ ಸಂಸ್ತೆಯ ಅನಿಲ ಸಿಲಿಂಡರನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ, 
                       ದಿನಾಂಕ 30/11/2017ರಂದು ಕುಟ್ಟ ಬಳಿಯ ಕೋತೂರು ಗ್ರಾಮದ ಲಕ್ಕುಂದ ಪೈಸಾರಿ ನಿವಾಸಿ ಸುರೇಂದ್ರ ಎಂಬವರು ಕ್ಷುಲ್ಲಕ ಕಾರಣಕ್ಕೆ ಅದೇ ಗ್ರಾಮದ ನಿವಾಸಿ ಪರಮೇಶ್ವರ್ ಹಾಗೂ ಅವರ ತಾಯಿ ಜಾನಕಿರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಂಚನೆ ಪ್ರಕರಣ
                        ವಿರಾಜಪೇಟೆ ಬಳಿಯ ಬಿಟ್ಟಂಗಾಲ ನಿವಾಸಿ ಸುಮಿತ್ರ ಎಂಬವರು ಮಡಿಕೇರಿಯ ಸಹರಾ ಇಂಡಿಯಾ ಸಂಸ್ಥೆಯ ಬೆನಿಫಿಟ್‌ ಸ್ಕೀಂನಲ್ಲಿ 2011ನೇ ಸಾಲಿನಿಂದ  ವಾರ್ಷಿಕ ರೂ.12,000/- ದಂತೆ ಒಟ್ಟು 60,000/- ರೂಗಳನ್ನು ಐದು ವರ್ಷಗಳ ಕಾಲ ವಿರಾಜಪೇಟೆಯ ಸಹರಾ ಇಂಡಿಯಾ ಸಂಸ್ಥೆಯ ಏಜೆಂಟ್ ಎ.ಈಶ್ವರ್ ಎಂಬವರ ಮೂಲಕ ಕಟ್ಟಿದ್ದು ಐದು ವರ್ಷಗಳ ಕಾಲಮಿತಿ ಪಕ್ವಗೊಂಡ ನಂತರ ಸುಮಿತ್ರರವರು ಅವರಿಗೆ ಬರಬೇಕಾದ ಹಣ ಮತ್ತು ಬಡ್ಡಿಯ ಮೊತ್ತವನ್ನು ಪಾವತಿಸುವಂತೆ ಕೇಳಿದಾಗ ಮಡಿಕೇರಿಯ ಸಹರಾ ಸಂಸ್ಥೆಯ ವ್ಯವಸ್ಥಾಪಕ ಮನೋಹರ್‌ರವರು ಹಣ ನೀಡದೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.