Tuesday, October 10, 2017

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:
            
      ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಬಗ್ಗೆ ಮಡಿಕೇರಿ ತಾಲೋಕು ಪೇರೂರು ಗ್ರಾಮದಿಂದ ವರದಿಯಾಗಿದೆ. ಪೇರೂರು ಗ್ರಾಮ ಪಂಚಾಯ್ತಿ ಸದಸ್ಯ ಸಿ.ಪಿ. ಸೋಮಯ್ಯ ರವರಿಗೆ ದಿನಾಂಕ 9-10-2017 ರಂದು ದೊರೆತ ಮಾಹಿತಿ ಮೇರೆಗೆ ಅದೇ ಗ್ರಾಮದ ನಿವಾಸಿ ಬೊಟ್ಟೋಳಂಡ ಮಿಟ್ಟು ಚಂಗಪ್ಪನವರ ಬಾಪ್ತು ಕಾಫಿ ತೋಟದ ಪಕ್ಕದಲ್ಲಿ ಹರಿಯುತ್ತಿರುವ ಬೆಳ್ಳರಿ ಹೊಳೆಯ ಬಳಿ ಹೋಗಿ ನೋಡಲಾಗಿ ಸದರಿ ಹೊಳೆಯಲ್ಲಿ ಅಂದಾಜು 40- 50 ಇರುವುದು ಕಂಡು ಬಂದಿದ್ದು, ಈ ಸಂಬಂಧ ಸದರಿ ಪಿ.ಸಿ. ಸೋಮಯ್ಯನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಕಳವು:

     ವ್ಯಕ್ತಿಯೊಬ್ಬರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳವು ಆದ ಘಟನೆ ಮಡಿಕೇರಿ ನಗರದ ಗಣಪತಿ ಬೀದಿಯಲ್ಲಿ ನಡೆದಿದೆ. ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ ನಾಗರಾಜು ಎಂಬವರು ದಿನಾಂಕ 18-8-2017 ರಂದು ತಮ್ಮ ಬಾಪ್ತು ಬಜಾಜ್ ಮೋಟಾರ್ ಸೈಕಲನ್ನು ನಿಲ್ಲಿಸಿದ್ದು ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಮಡಿಕೇರಿ ನಗರ ಠಾಣೆಯಲ್ಲಿ, ಪ್ರಕರಣ ದಾಖಲಾಗಿದೆ.

ಮೊಬೈಲ್ ಕಳವು:
 
     ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಕಾಟ್ರಕೊಲ್ಲಿ ನಿವಾಸಿ ಸಿ.ಹೆಚ್. ಗಫೂರ್ ರವರು ದಿನಾಂಕ 1-9-2017 ರಂದು ತಮ್ಮ ಬಾಪ್ತು ಮೊಬೈಲ್ ಹ್ಯಾಂಡೆಸೆಟ್ ವಿವೋ ವನ್ನು ಮನೆಯ ಕಿಟಕಿಯ ಮೇಲೆ ಚಾರ್ಜ್ ಗೆ ಇಟ್ಟು ಮಲಗಿದ್ದು ಅದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಈರಳವಳಮುಡಿ ಗ್ರಾಮದ ನಿವಾಸಿ 32 ವರ್ಷ ಪ್ರಾಯದ ಮಹೇಂದ್ರ ವರ್ಮ ಎಂಬವರು ದಿನಾಂಕ 9-10-2017 ರಂದು ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈರಳವಳಮುಡಿ ಗ್ರಾಮದ ನಿವಾಸಿ ಶ್ರೀಮತಿ ಉಮಾ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.