Sunday, October 8, 2017

ವ್ಯಕ್ತಿ ಮೇಲೆ ಹಲ್ಲೆ
                  ವಿರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದ ನಿವಾಸಿ ಹರೀಶ ಮತ್ತು ರಾಜ ಎಂಬುವವರಿಗೆ ಆಸ್ತಿಯ ವಿಚಾರದಲ್ಲಿ ತಕರಾರು ಇದ್ದು ದಿನಾಂಕ 7-10-2017 ರಂದು ಹರೀಶರವರು ಸ್ಕೂಟಿಯಲ್ಲಿ ಹೋಗುತ್ತಿರುವಾಗ ರಾಜರವರು ಸ್ಕೂಟರನ್ನು ಅಡ್ಡಗಟ್ಟಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅನುಮಾನಾಸ್ಪದ ವ್ಯಕ್ತಿಯ ಬಂಧನ
              ದಿನಾಂಕ 7-10-2017 ರಂದು ಶನಿವಾರಸಂತೆ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹರೀಶರವರು ಹೋಂಗಾರ್ಡ್ ರವರೊಂದಿಗೆ ಕೊಡ್ಲಿಪೇಟೆ ನಗರಲ್ಲಿ ಬೆಳಿಗ್ಗೆ 5-00 ಗಂಟೆಗೆ ಬೀಟ್ ಕರ್ತವ್ಯ ನಿರ್ವಹಿಸುತ್ತಿರುವಾಗ ಬಸ್ಸು ನಿಲ್ದಾಣದ ಹಿಂಭಾಗದ ಅಂಗಡಿಯ ಬಳಿ ಒಬ್ಬ ವ್ಯಕ್ತಿ ಕತ್ತಲಲ್ಲಿ ನಿಂತುಕೊಂಡಿದ್ದು ಪೊಲೀಸರನ್ನು ಕಂಡು ಓಡಲು ಪ್ರಯತ್ನಿಸಿದಾಗ ಹಿಡಿದುಕೊಂಡು ವಿಚಾರಣೆ ನಡೆಸಿದಾದ ಸಮರ್ಪಕವಾದ ಉತ್ತರ ನೀಡದೇ ಇದ್ದು ಯಾವುದೋ ಅಪರಾಧ ಮಾಡಲು ಸಂಚು ಮಾಡುತ್ತಿರುವುದಾಗಿ ಕಂಡು ಬಂದ ಮೇರೆಗೆ ಸಿಬ್ಬಂದಿಯವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.