Monday, October 9, 2017

ಪರಸ್ಪರ ಕಾರು ಡಿಕ್ಕಿ
                          ದಿನಾಂಕ 08/10/2017ರಂದು ಮಂಡ್ಯ ಜಿಲ್ಲೆಯ ನಾಡಬೋಗನಹಳ್ಳಿ ನಿವಾಸಿ ಮಂಜಪ್ಪ ಎಂಬವರು ಅವರ ಸ್ನೇಹಿತ ಪ್ರಶಾಂತ್ ಎಂಬವರೊಂದಿಗೆ ಕೆಎ-09-ಸಿ-5418ರ ಕಾರಿನಲ್ಲಿ ಸುಬ್ರಮಣ್ಯದಿಂದ ಮಡಿಕೇರಿ ಮಾರ್ಗವಾಗಿ  ಮೈಸೂರಿಗೆ ಹೋಗುತ್ತಿರುವಾಗ ಕಾಟಕೇರಿ ಬಳಿ ಎದುರುಗಡೆಯಿಂದ ಕೆಎ-12-ಜೆಡ್-4234ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಂಜಪ್ಪನವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
                            ದಿನಾಂಕ 08/10/2017ರಂದು ಕುಶಾಲನಗರ ಬಳಿಯ ಹೆಬ್ಬಾಲೆ ನಿವಾಸಿ ಶ್ರೀನಿವಾಸ ಎಂಬವರು ಅವರ ಮನೆಯ ಕೋಣೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಮೃತರು ವಿಪರೀತ ಮದ್ಯಪಾನ ಮಾಡುವ ಚಟವುಳ್ಳವರಾಗಿದ್ದು ಪತ್ನಿ ವಿದ್ಯಾರವರು ಎಷ್ಟೇ ಬುದ್ದಿ ಹೇಳಿದರೂ ಮದ್ಯಪಾನದ ಚಟ ಬಿಡದ ಕಾರಣ ಮದ್ಯಪಾನದ ಚಟ ಬಿಟ್ಟರೆ ಮಾತ್ರ ಮನೆಗೆ ಬರುವುದಾಗಿ  ಹೇಳಿ ತವರು ಮನೆಗೆ ಹೋದ ಕಾರಣಕ್ಕೆ ಶ್ರೀನಿವಾಸರವರು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.