Friday, October 6, 2017

ವ್ಯಕ್ತಿ ಆತ್ಮಹತ್ಯೆ
                              ದಿನಾಂಕ 05/10/2017ರಂದು ನಾಪೋಕ್ಲು ಬಳಿಯ ಪಾರಾಣೆ ನಿವಾಸಿ ಶರಣು ಎಂಬಾತನು ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಮಗನ ಕಣ್ಣಿನಿಂದ ಕೀವು ಬರುತ್ತಿದ್ದು ವಾಸಿಯಾಗದ ಕಾರಣದಿಂದ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ 
                             ದಿನಾಂಕ 04/10/2017ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಂಕನಾಡಿ ನಿವಾಸಿ ನಾಗರಾಜ ಎಂಬವರು ಅವರ ತಮ್ಮ ಶಿವಕುಮಾರ, ಅಳಿಯ ಪಾಂಡಿರಾಜ, ಅಕ್ಕನ ಮಗ ತಂಗಪಾಡಿ ಮತ್ತು ಗಣೇಶ್‌ ಎಂಬವರೊಂದಿಗೆ ತಮಿಳುನಾಡಿಗೆ ಹೋಗುವ ಸಲುವಾಗಿ ಕೆಎ-21-ಎನ್-6513ರ ಕಾರಿನಲ್ಲಿ ಪುತ್ತೂರಿನಿಂದ ಹೋಗುತ್ತಿರುವಾಗ ರಾತ್ರಿ ವೇಳೆ ಕಾಟಕೇರಿ ಬಳಿ ಅವರೊಳಗೆ ಜಗಳವಾಗಿ ಪಾಂಡಿರಾಜನು ಮಾವ ನಾಗರಾಜುರವರಿಗೆ ಚಾಕುವಿನಿಂದ ಹಲ್ಲೆ ಮಾಡಿ ಕಾರಿಗೆ ಕಲ್ಲಿನಿಂದ ಗುದ್ದಿ ಹಾನಿಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                           ದಿನಾಂಕ 05/10/2017ರಂದು ಶ್ರೀಮಂಗಲ ಬಳಿಯ ಬೆಳ್ಳೂರಿನ ಹೆಮ್ಮಾಡು ಕಾಲೋನಿ ನಿವಾಸಿ ಕರಿಯ ಎಂಬವರ ಮೊಮ್ಮಗ ರಾಜು ಎಂಬವರು ಹೆಮ್ಮಾಡಿನ ಮನೆಯಲ್ಲಿ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಮೃತ ರಾಝುರವರ ತಂಗಿ ರಾಣಿ ಎಂಬಾಕೆಯು ದಿನಾಂಕ 04/10/2017ರಂದು ಹೃದಯಾಘಾತದಿಂದ ಮೃತರಾಗಿದ್ದು ತಂಗಿಯ ಸಾವಿನಿಂದ ಅತೀವವಾಗಿ ನೊಂದು ರಾಜುರವರು ಆತ್ಮಹತ್ಯೆ ಮಾಡಿಕೊಂಡರಿರಬಹುದಾಗಿ ರಾಜುರವರ ತಾತ ಕರಿಯರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ರಿಕ್ಷಾ ಡಿಕ್ಕಿ
                          ದಿನಾಂಕ 05/10/2017ರಂದು ಕುಟ್ಟ ಬಳಿಯ ಬಾಡಗ ನಿವಾಸಿ ಯು.ಐ. ಸುಬ್ಬಯ್ಯ ಎಂಬವರು ಅವರ ಕೆಎ-12-ಎನ್-6285ರ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕೇಂಬುಕೊಲ್ಲಿಯಲ್ಲಿರುವ ಅವರ ಬಾರ್‌ಗೆ ಹೋಗಿ ಬಾರ್‌ನ ಮುಂಭಾಗ ಕಾರು ನಿಲ್ಲಿಸಿ ಒಳಗಡೆ ವ್ಯಾಪಾರ ಮಾಡಿಕೊಂಡಿರುವಾಗ ಮದ್ಯಾಹ್ನ ವೇಳೆಯಲ್ಲಿ ಕಾನೂರು ಕಡೆಯಿಂದ ಕೆಎ-12-ಬಿ-4641ರ ರಿಕ್ಷಾವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ವ್ಯಕ್ತಿ ಸಾವು
           ದಿನಾಂಕ 05/10/2017ರಂದು ವಿರಾಜಪೇಟೆ ಪಟ್ಟಣ ಪಂಚಾಯಿತಿಯ ಆಹಾರ ನಿರೀಕ್ಷಕ ವಿ.ಕೆ.ಸೋಮಶೇಖರ್‌ರವರು ಕರ್ತವ್ಯ ನಿಮಿತ್ತ ನಗರದಲ್ಲಿರುವಾಗ ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ಓರ್ವ ಅಪರಿಚಿತ ಗಂಡಸಿನ ಮೃತ ದೇಹವು ಕಂಡು ಬಂದಿದ್ದು, ಮೃತನು ಸುಮಾರು ಒಂದು ವಾರದಿಂದ ನಗರದಲ್ಲಿ ಭಿಕ್ಷೆ ಬೇಡಿ ಜೀವಿಸುತ್ತಿದ್ದುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ
                    ಸೋಮವಾರಪೇಟೆ ಬಳಿಯ ಹಾನಗಲ್ಲು ಶೆಟ್ಟಳ್ಳಿ ನಿವಾಸಿ ಮಂಜುಳಾ ಎಂಬವರು ದಿನಾಂಕ 04/10/2017ರಂದು ಮನೆಯಿಂದ ಹೊರಗೆ ಹೋಗಿದ್ದು ಮನೆಗೆ ಹಿಂತಿರುಗದ ಕಾರಣ ಎಲ್ಲರೂ ಆಕೆಯನ್ನು ಹುಡುಕಾಡುವಾಗ ಗ್ರಾಮದ ಜೋಗಿ ಕೆರೆಯಲ್ಲಿ ಆಕೆಯ ಮೃತದೇಹ ತೇಲುತ್ತಿದ್ದುದು ಕಂಡು ಬಂದಿದ್ದು, ಮದುವೆಯಾಗಿ ಸುಮಾರು 8 ವರ್ಷವಾದರೂ ಮಕ್ಕಳಾಗದ ಕಾರಣ ಜುಗುಪ್ಸೆಗೊಂಡು ಆಕೆಯು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ತಮ್ಮ ಪ್ರಸನ್ನರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                      ದಿನಾಂಕ 04/10/2017ರಂದು ಕುಶಾಲನಗರ ಬಳಿಯ ನಂಜರಾಯಪಟ್ಟಣ ನಿವಾಸಿ ಹನಿತ್ ಎಂಬವರು ಅವರ ಮಾವ ವಿಶ್ವನಾಥರವರ ತೋಟಕ್ಕೆ ಲಾರಿಯಲ್ಲಿ ಗೊಬ್ಬರ ತಂದು ಇಳಿಸುತ್ತಿದ್ದ ಸಮಯದಲ್ಲಿ ಅಲ್ಲಿಗೆ ಒಂದು ಕಾರಿನಲ್ಲಿ  ಬಂದ ಅದೇ ಗ್ರಾಮದವರಾದ ಸಚಿನ್, ಸುನಿಲ್, ಬಾಲಕೃಷ್ಣ ಮತ್ತು ಇತರರು ಹನಿತ್‌ನೊಂದಿಗೆ ಮರಳಿನ ವಿಷಯವಾಗಿ ಜಗಳವಾಡಿ ಹಲ್ಲೆ ಮಾಡಿದ್ದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.