Monday, July 17, 2017

ವಾಹನ ಅಪಘಾತ ವ್ಯಕ್ತಿಯ ದುರ್ಮರಣ 
                 ದಿನಾಂಕ 16-06-2017 ರಂದು ಕುಶಾಲನಗರ ಗುಮ್ಮನಕೊಲ್ಲಿಯ ನಿವಾಸಿ ಸ್ವಾಮಿ ಎಂಬುವವ ರ ಮಗ ಪವನ್ ಕುಮಾರ್ ಎಂಬುವವರು ಕುಶಾಲನಗರದಿಂದ ಮೋಟಾರು ಸೈಲಿನಲ್ಲಿ ಗುಡ್ಡೆಹೊಸೂರುವಿಗೆ ಹೋಗುತ್ತಿರುವಾಗ ಮಾದಪಟ್ನ ಎಂಬಲ್ಲಿ ಎದುರುಗಡೆಯಿಂದ ಒಂದು ಮಿನಿ ಬಸ್ ನ್ನು ಅದರ ಚಾಲಕ ಅಜಾರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪವನ್ ಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ
                 ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ನಗರದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೀಗ ಮುರಿದು ಮನೆಯ ಒಳ ನುಗ್ಗಿ ಕಳವು ಮಾಡಿರುವ ಘಟನೆ ವರದಿಯಾಗಿದೆ. ಗೋಣಿಕೊಪ್ಪ ನಗರದ ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರದ ನಿವಾಸಿ ಶ್ರೀಮತಿ ಪುಷ್ಪಾವತಿ ಎಂಬುವವರು ದಿನಾಂಕ 13-07-2017 ರಂದು ತನ್ನ ಪತಿಯೊಂದಿಗೆ ಮಂಗಳೂರಿಗೆ ಮಗಳ ಮನೆಗೆ ಹೋಗಿದ್ದು ದಿನಾಂಕ 16-07-2017 ರಂದು ಪಕ್ಕದ ಮನೆಯ ರಾಧಾರವರು ಕರೆ ಮಾಡಿ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದಿರುವುದಾಗಿ ತಿಳಿಸಿದ ಮೇರೆಗೆ ಕೂಡಲೇ ಬಂದು ಪರಿಶೀಲಿಸಲಾಗಿ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಯಾರೋ ಕಳ್ಳರು ಒಳ ನುಗ್ಗಿ 164 ಗ್ರಾಂ ತೂಕದ ಚಿನ್ನಾಭರಣ ಮತ್ತು ರೂ 15,000 ನಗದು ಹಣ ಕಳವಾಗಿರುವುದಾಗಿ ಪುಷ್ಪಾವತಿಯವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.