Wednesday, July 12, 2017

ಪತ್ರಿಕಾ ಪ್ರಕಟಣೆ
        ಸಾಮಾಜಿಕ ಜಾಲ ತಾಣಗಳಾದ (Whatsapp, Twitter, Facebook, Telegram etc.,)ವಾಟ್ಸಪ್, ಟ್ವಿಟ್ಟರ್, ಫೇಸ್ಬುಕ್, ಟೆಲಿಗ್ರಾಮ್ ಹಾಗೂ ಇನ್ನಿತರೆ ಜಾಲತಾಣಗಳಲ್ಲಿ ದೇಶದ ಸುರಕ್ಷತೆ ಹಾಗೂ ಜನರಲ್ಲಿ ಪ್ರಚೋದನೆ ಮೂಡಿಸುವಂತಹ ಮಾಹಿಗಳಿಂದ ರಾಜ್ಯಾದ್ಯಂತ ಸಮಾಜದಲ್ಲಿನ ಶಾಂತಿ ಹದಗೆಡುತ್ತಿದ್ದು, ಸಮಾಜದಲ್ಲಿನ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಯಾವುದೇ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಮಾಹಿತಿಯನ್ನು, ಕಾನೂನು ಬಾಹಿರ ಮಾಹಿತಿಯನ್ನು, ದೇಶದ ಸುರಕ್ಷತೆಗೆ ದಕ್ಕೆಯುಂಟು ಮಾಡುವ ಮಾಹಿತಿಯನ್ನು, ಕೋಮು ಪ್ರಚೋದನೆ ಉಂಟುಮಾಡುವ ಯಾವುದೇ ಜಾತಿ, ಭಾಷೆ, ಜನಾಂಗಗಳ ಬಗ್ಗೆ ವಿಷಯವನ್ನು ಅನಾವಶ್ಯಕವಾಗಿ ಚರ್ಚೆ ಹಾಗೂ ರವಾನೆ  ಮಾಡುವ ಯಾವುದೇ ವ್ಯಕ್ತಿ ಹಾಗೂ ( Whatsapp, Telegram Group Admin)ವಾಟ್ಸಪ್, ಟೆಲಿಗ್ರಾಮ್ ಗ್ರೂಪಿನ  ಅಡ್ಮಿನ್ ಹಾಗೂ ಮಾಹಿತಿ ರವಾನಿಸುವವರ ವಿರುದ್ಧ ಕೊಡಗು ಜಿಲ್ಲೆಯಲ್ಲಿ ಇನ್ನು ಮುಂದೆ  ನಿರ್ದಾಕ್ಷಣ್ಯವಾಗಿ  ಕಾನೂನು ಕ್ರಮ ಜರುಗಿಸಲಾಗುವುದು, ಈ ಬಗ್ಗೆ (
Whatsapp, Twitter, Facebook, Telegram etc.,)ವಾಟ್ಸಪ್, ಟ್ವಿಟ್ಟರ್, ಫೇಸ್ಬುಕ್, ಟೆಲಿಗ್ರಾಮ್ ಇನ್ನಿತರೆ ಜಾಲತಾಣಗಳ ಮೇಲೆ ಹದ್ದಿನ ಕಣ್ಣು ಇರಿಸಲು ಕೊಡಗು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ  ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ (Social Media Monitoring Cell) ನ್ನು ಪ್ರಾರಂಭಿಸಲಾಗುವುದು.


       ಕೊಡಗು ಜಿಲ್ಲೆಯಲ್ಲಿ ಕೆಲವು ಕಿಡಿಗೇಡಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಶಾಂತಿ ಕದಡಲು ಪ್ರಯತ್ನಿಸುತ್ತಿರುವುದರ ಬಗ್ಗೆ ಮಾಹಿತಿ ಇದ್ದು, ಅಂತಹವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಇಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವುದು, ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಡಲಾಗುವುದು. ಈಗಾಗಲೇ ಪೊಲೀಸ್ ಇಲಾಖೆಯವತಿಯಿಂದ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಲಹಾ ಪೆಟ್ಟಿಗೆಯನ್ನು ಇರಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ವಿಧ್ಯಾರ್ಥಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ಮಾಹಿತಿ ನೀಡುವಂತೆ  ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ.

 ಸಾರ್ವಜನಿಕ ಮಾಹಿತಿ ಅಧಿಕಾರಿ
 ಕೊಡಗು ಜಿಲ್ಲೆ.

 

ಬಾಲಕರು ಕಾಣೆ
                    ದಿನಾಂಕ 09/07/2017ರಂದು ಸುಂಟಿಕೊಪ್ಪ ಬಳಿಯ ಪಂಪ್ ಹೌಸ್ ರಸ್ತೆ ನಿವಾಸಿ ಪಳನಿ ಸ್ವಾಮಿ ಎಂಬವರ ಮಕ್ಕಳಾದ ಬಾಲರಾಜು ಮತ್ತು ಸಂಜಯ ಎಂಬ ಬಾಲಕರು ಮನೆಯಿಂದ ಆಟವಾಡಲೆಂದು ಹೊರಗಡೆ ಹೋದವರು ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರಿಗೆ ಕಾರು ಡಿಕ್ಕಿ
                    ದಿನಾಂಕ 11/07/2017ರಂದು ಕುಶಾಲನಗರದ ಬೈಚನಹಳ್ಳಿಯ ಬಳಿಯ ಸೈದು  ಎಂಬವರ ಮಗಳು ಅಫ್ರಿದಾ ಎಂಬಾಕೆಯು ಒಂದು ಹೊಸ ಸ್ಕೂಟರಿನಲ್ಲಿ ಪಂಪ್‌ ಹೌಸ್‌ ರಸ್ತೆಯ ಕಡೆಯಿಂದ ಚಾಲನೆ ಮಾಡಿಕೊಂಡು ಬರುತ್ತಿರುವಾಗ ಕುಶಾಲನಗರ ಪಟ್ಟಣದ ಕಡೆಯಿಂದ ಕೆಎ-50-ಎನ್‌-7990ರ ಚಾಲಕನು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಫ್ರಿದಾರವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ  ಪರಿಣಾಮ ಅಫ್ರಿದಾರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಿಲಿಸಿ ತನಿಖೆ ಕೈಗೊಂಡಿದ್ದಾರೆ. 

ಮರದಿಂದ ಬಿದ್ದು ವ್ಯಕ್ತಿಯ ಸಾವು
ದಿನಾಂಕ 06/07/2017ರಂದು ವಿರಾಜಪೇಟೆ ಬಳಿಯ ತೋರ ಗ್ರಾಮದ ನಿವಾಸಿ ಹರೀಶ್ ಎಂಬವರು ಅರುಣ ಎಂಬವರ ಕಾಫಿ ತೋಟದಲ್ಲಿ ಕಪಾತು ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಮರದಿಂದ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹರೀಶ್‌ರವರು ದಿನಾಂಕ 11/07/2017ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಜೀಪು ಡಿಕ್ಕಿ
ದಿನಾಂಕ 11/07/2017ರಂದು ಸಿದ್ದಾಪುರ ಬಳಿಯ ಅಭ್ಯತ್‌ಮಂಗಲ ನಿವಾಸಿ ಅಭಿಲಾಷ್ ಎಂಬವರು ಕೆಎ-12-ಆರ್-0941ರ ಬೈಕಿನಲ್ಲಿ ಹೋಗುತ್ತಿರುವಾಗ ನೆಲ್ಲಿಹುದಿಕೇರಿಯ ಬಳಿ ಮುಂದುಗಡೆ ಕೆಎ-12-ಬಿ-1937ರ ಟಾಟಾ  ಜಿಪ್ ವಾಹನವನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೆ ಏಕಾ ಏಕಿ ರಸ್ತೆಗೆ ತಿರುಗಿಸಿದ ಪರಿಣಾಮ ಅಭಿಲಾಶ್‌ರವರು ಬೈಕನ್ನು ಕೂಡಲೇ ಬ್ರೇಕ್‌ ಹಾಕಿ ನಿಲ್ಲಿಸದರೂ ಸಹ ಬೈಕ್ ಟಾಟಾ ಜಿಪ್‌ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಅಭಿಲಾಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಜೀಪಿಗೆ ಕಾರು ಡಿಕ್ಕಿ
ದಿನಾಂಕ 11/07/2017ರಂದು ಮಡಿಕೇರಿಯ ಚಾಮುಂಡೇಶ್ವರಿ ನಗರ ನಿವಾಸಿ ಅಭಿಲಾಶ್‌ ಎಂಬವರು ಅಫ್ರೀದ್‌ ಎಂಬವರೊಂದಿಗೆ ಕೆಎ-12-ಎ-6048ರ ಪಿಕ್‌ಅಪ್ ಜೀಪಿನಲ್ಲಿ  ಮೂರ್ನಾಡು ಬಳಿಯ ಎಂ.ಬಾಡಗ ಗ್ರಾಮದಿಂದ ಮೂರ್ನಾಡು ಕಡೆಗೆ ಬರುತ್ತಿರುವಾಗ ಎದುರುಗಡೆಯಿಂದ ಕೆಎ-09-ಎಂ-1119ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಭಿಲಾಶ್‌ರವರ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಅಭಿಲಾಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.