ನೇಣುಬಿಗಿದುಕೊಂಡು ಯುವತಿ ಸಾವು:
ಯುವತಿಯೋರ್ವಳು ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಹೊಸಪಟ್ಟಣ ಗ್ರಾಮದಲ್ಲಿ ನಡೆದಿದೆ. ಹೊಸಪಟ್ಟಣ ಗ್ರಾಮದ ನಿವಾಸಿ ಮಾಯಿಗಯ್ಯಾ ಎಂಬವರ ಮಗಳಾದ 19 ವರ್ಷ ಪ್ರಾಯದ ಸಂಗೀತ ಎಂಬಾಕೆ ದಿನಾಂಕ 30-7-2017 ರಂದು ತನ್ನ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಆಕೆಯ ತಂದೆ ಮಾಯಿಗಯ್ಯಾ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಂಗಡಿ ಬೀಗ ಮುರಿದು ಹಣ ಕಳ್ಳತನ:
ಸೋಮವಾರಪೇಟೆ ತಾಲೂಕು ಶನಿವಾರಸಂತೆ ನಗರದ ನಿವಾಸಿ ಹೆಚ್.ಎಂ. ಹರೀಶ್ ಎಂಬವರು ಶನಿವಾರಸಂತೆ ನಗರದಲ್ಲಿ ಸುಮಾರು ಒಂದು ವರ್ಷದಿಂದ ಸಿದ್ದಗಂಗಾ ಸ್ಟೋರ್ ಎಂಬ ದಿನಸಿ (ಸಗಟು ವ್ಯಾಪಾರಿ) ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದು ದಿನಾಂಕ 29-07-2017 ರಂದು ರಾತ್ರಿ ವ್ಯಾಪಾರವನ್ನು ಮುಗಿಸಿ ಮನೆಗೆ ಹೋಗಿದ್ದು, ಎಂದಿನಂತೆ ದಿನಾಂಕ 30-7-2017 ರಂದು ಬೆಳಿಗ್ಗೆ 7.30 ಗಂಟೆಗೆ ಬಂದು ಅಂಗಡಿಯ ಬಾಗಿಲನ್ನು ನೋಡಿದಾಗ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಒಡೆದು ಒಳ ನುಗ್ಗಿ ಕ್ಯಾಶ್ ಟೇಬಲ್ ನಲ್ಲಿದ್ದ 9,000 ರೂ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿರುವ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಡಿ ಬೀಗ ಮುರಿದು ನಗದು ಕಳವು.
ಶನಿವಾರಸಂತೆ ನಗರದ ಹೊಸೂರು ರಸ್ತೆಯಲ್ಲಿರುವ ಹೆಚ್.ಪಿ. ಮೋಹನ್ ಎಂಬವರಿಗೆ ಸೇರಿದ ಆದರ್ಶ ಟ್ರೇಡರ್ಸ್ ಮಳಿಗೆಗೆ ದಿನಾಂಕ 29-7-2017 ರಂದು ರಾತ್ರಿ ಯಾರೋ ಕಳ್ಳರು ಶೆಟರ್ಸ್ ಗೆ ಹಾಕಿದ ಬೀಗವನ್ನು ಮುರಿದು ಒಳಪ್ರವೇಶಿಸಿ ಕ್ಯಾಶ್ ಟೇಬಲ್ ನಲ್ಲಿಟ್ಟಿದ್ದ 6,000 ರೂ. ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಹೆಚ್.ಪಿ. ಮೋಹನ್ ರವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಕೊಲೆಗೆ ಯತ್ನ:
ಹಳೇ ದ್ವೇಷದಿಂದ ವ್ಯಕ್ತಿಯೊಬ್ಬರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ವಿರಾಜಪೇಟೆ ತಾಲ್ಲೂಕು ಹಳ್ಳಿಗಟ್ಟು ಗ್ರಾಮದ ಹೊದ್ದೂರು ಪೈಸಾರಿಯಲ್ಲಿ ವಾಸವಾಗಿರುವ ಬಿ.ಆರ್. ಅಜಿತ್ ಎಂಬವರು ದಿನಾಂಕ 30-7-2017 ರಂದು ಗೋಣಿಕೊಪ್ಪ ನಗರದ ಮಟ್ಟನ್ ಮಾರ್ಕೆಟ್ ಬಳಿ ನಿಂತಿದ್ದಾಗ ಆರೋಪಿ ಜೇನುಕುರುಬರ ಮಂಜು ಎಂಬವರು ಅಲ್ಲಿಗೆ ಬಂದು ವಿನಾಕಾರಣ ಹಳೆ ದ್ವೇಷವನ್ನಿಟ್ಟುಕೊಂಡು ಜಗಳ ಮಾಡಿ ‘ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ’ವೆಂದು ಹೇಳಿ ಬಿ.ಆರ್. ಅಜಿತ್ ರವರ ಸೊಂಟದ ಭಾಗಕ್ಕೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿ ಕೊಲೆಗೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದಾರಿ ತಡೆದು ಹಲ್ಲೆಗೆ ಯತ್ನ, ಕೊಲೆ ಬೆದರಿಕೆ:
ಹಳೆ ದ್ವೇಷದ ಹಿನ್ನೆಲೆಯಲ್ಲಿ ಮೂವರು ವ್ಯಕ್ತಿಗಳ ದಾರಿ ತಡೆದು ಹಲ್ಲೆಗೆ ಯತ್ನಿಸಿ ಕೊಲೆಗೆ ಬೆದರಿಕೆ ಒಡ್ಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ರಿಯ ಮುಕ್ಕೋಡ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 30-7-2017 ರಂದು ಮುಕ್ಕೋಡ್ಲು ನಿವಾಸಿಗಳಾದ ನಂಜುಂಡ, ಶ್ರೀಮತಿ ಸುಶೀಲ ಹಾಗು ಧರ್ಮರಾಯ ಎಂಬವರು ನಂಜುಂಡರವರ ಗದ್ದೆ ಬಳಿಯ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಕೆ.ಟಿ. ಕಾರ್ಯಪ್ಪ ಎಂಬವರು ಹಳೇ ವೈಷಮ್ಯದಿಂದ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ್ದೂ ಅಲ್ಲದೆ, ಗುಂಡುಹೊಡೆದು ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆಂದು ನಂಜುಂಡರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.