Thursday, May 18, 2017


ವ್ಯಕ್ತಿಯ ಆತ್ಮ ಹತ್ಯೆ
                      ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಚಿಕ್ಕ ಅಳುವಾರ ಗ್ರಾಮದಲ್ಲಿ ವರದಿಯಾಗಿದೆ. ಚಿಕ್ಕ ಅಳುವಾರ ಗ್ರಾಮದ ನಿವಾಸಿ 65 ವರ್ಷ ಪ್ರಾಯ ರಾಜಶೆಟ್ಟಿಯವರು ದಿನಾಂಕ 16-5-2017 ರಂದು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಮಗ ರಮೇಶರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರದಿಂದ ಬಿದ್ದು ವ್ಯಕ್ತಿಯ ಮರಣ
                   ಕೆಲಸ ಮಾಡುತ್ತಿರುವಾಗ ಮರದಿಂದ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಕೊಡ್ಲಿಪೇಟೆಯ ಬೆಸೂರು ಎಂಬಲ್ಲಿ ವರದಿಯಾಗಿದೆ. ದಿನಾಂಕ 17-5-2017 ರಂದು ಬೆಸೂರು ಗ್ರಾಮದ ಗೌರಮ್ಮನವರ ಕಾಫಿ ತೋಟದಲ್ಲಿ ಹಾಸನ ಜಿಲ್ಲೆಯ ಮಾರನ ಕೊಪ್ಪಲಿನ ನಿವಾಸಿ ಸೋಮಶೇಖರ ಎಂಬುವವರು ಮರ ಹತ್ತಿ ಕಪಾತು ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮರದಿಂದ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
              ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ವರದಿಯಾಗಿದೆ. ಸಂಪಾಜೆಯ ನಿವಾಸಿ ಮಿಥುನ್ ಎಂಬುವವರರಿಗೆ ವಿಪರೀತ ಮದ್ಯ ಸೇವನೆಯ ಅಬ್ಯಾಸವಿದ್ದು ದಿನಾಂಕ 16-5-2017 ರಂದು ಮಿಥುನ್ ಮದ್ಯಪಾನ ಮಾಡಿ ಮನೆಗೆ ಬಂದಿದ್ದು ಇದನ್ನು ತಾಯಿ ಸುಲೋಚನರವರು ವಿಚಾರಿಸಿದ ಕಾರಣಕ್ಕೆ ಕೋಪಗೊಂಡು ಕುಡಿದ ಅಮಲಿನಲ್ಲಿ ಮನೆಯ ಪಕ್ಕದಲ್ಲದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವುದಾಗಿ ಕೊಟ್ಟ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅನುಮಾನಾಸ್ಪದ ವ್ಯಕ್ತಿಯ ಬಂಧನ
                 ದಿನಾಂಕ 17-5-2017 ರಂದು ಪೊನ್ನಂಪೇಟೆ ಠಾಣೆಯ ಉಪ ನಿರೀಕ್ಷಕರಾದ ಜಯರಾಮ್ ರವರು ಸಿಬ್ಬಂದಿಯವರೊಂದಿಗೆ ಗಸ್ತು ಕರ್ತವ್ಯದಲ್ಲಿರುವಾಗ ನಡಿಕೇರಿ ಬಸ್ಸು ತಂಗುದಾಣದಲ್ಲಿ ನಾಪೋಕ್ಲುವಿನ ನಾಲಡಿ ಗ್ರಾಮದ ನಿವಾಸಿ ಕುಡಿಯರ ಅಶೋಕ ಎಂಬುವವರು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದವನನ್ನು ವಶಕ್ಕೆ ತೆಗೆದುಕೊಂಡು ಪರಿಶೀಲಿಸಲಾಗಿ ಆತನ ಜೇಬಿನಲ್ಲಿ ಕೀ ಗೊಂಚಲು ಮತ್ತು 16200 ರೂ ಹಣವಿದ್ದುದರ ಬಗ್ಗೆ ವಿಚಾರ ಮಾಡಲಾಗಿ ಕುಟ್ಟ ಗ್ರಾಮದ ಕಾಳಮಾಡ ಅಯ್ಯಣ್ಣನವರ ಗೋಡಾನ್ ನಿಂದ 3 ಚೀಲ ಕರಿಮೆಣಸನ್ನು ಕಳವು ಮಾಡಿ ಅದನ್ನು ಮಾರಾಟ ಮಾಡಿದ ಹಣವೆಂದು ತಿಳಿಸಿದ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಆಸ್ತಿ ವಿಚಾರದಲ್ಲಿ ಜಗಳ
                      ಕುಶಾಲನಗರದ ಸುಂದರ ನಗರದ ನಿವಾಸಿ ರಾಜೀವಿ ಎಂಬುವವರು ಈ ಹಿಂದೆ ಮಗಳಿಗೆ 1-60 ಸೆಂಟ್ ಜಾಗವನ್ನು ಮಗಳು ಜ್ಯೋಗಿ ಪ್ರಮೀಳಳ ಹೆಸರಿಗೆ ವಿಲ್ ಮಾಡಿಸಿದ್ದು, ಮಗಳು ಸರಿಯಾಗಿ ತಾಯಿಯನ್ನು ನೋಡಿಕೊಳ್ಳದೇ ಇದ್ದುದ್ದರಿಂದ ವಿಲ್ ಅನ್ನು ವಜಾ ಮಾಡಿ ತಾನೇ ಕೃಷಿ ಮಾಡಿಕೊಂಡಿದ್ದು ದಿನಾಂಕ 17-5-2017 ರಂದು ಸದರಿ ಜಾಗದಲ್ಲಿ ರಾಜೀವಿರವರು ಕೆಲಸ ಮಾಡಿಕೊಂಡಿರುವಾಗ ಮಗಳು ಜ್ಯೋಗಿ ಪ್ರಮೀಳಳು ತಾಯಿಯೊಂದಿಗೆ ಜಾಗದ ವಿಚಾರದಲ್ಲಿ ಜಗಳ ತೆಗೆದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.