Friday, May 19, 2017

ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ: 
 
     ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಟಿಕೊಪ್ಪ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ ಬಸಂತ್ ಲಾಲ್ ಎಂಬ ವ್ಯಕ್ತಿಗೆ ಮಡಿಕೇರಿ ಕಡೆಯಿಂದ ಸುಂಟಿಕೊಪ್ಪ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಯಾದ ಪರಿಣಾಮ ಸದರಿ ಬಸಂತ್ ಲಾಲ್ ರವರು  ರಸ್ತೆ ಬದಿಯ ಚರಂಡಿಗೆ ಬಿದ್ದು  ಅವರ ಕೈ ಕಾಲು ಮತ್ತು ತಲೆಗೆ ತೀವ್ರ ತರಹದ ಗಾಯವಾಗಿದ್ದು ಸದರಿಯವರನ್ನು ಚಿಕಿತ್ಸೆ ಬಗ್ಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ಬಸ್ಸಿನಿಂದ ಬಿದ್ದು ಗಾಯಗೊಂಡ ನಿರ್ವಾಹಕ:  
 
      ಚಾಲಕನ ನಿರ್ಲಕ್ಯಕ್ಕೆ ಬಸ್ಸಿನ ನಿರ್ವಾಹಕ ಬಸ್ಸಿನಿಂದ ಬಿದ್ದು ಗಾಯಗೊಂಡ ಘಟನೆ ವಿರಾಜಪೇಟೆಯ ಚಿಕ್ಕಪೇಟೆ ಯಲ್ಲಿ ನಡೆದಿದೆ. ದಿನಾಂಕ 17-05-2017 ರಂದು ಮಡಿಕೇರಿಯಿಂದ ಕೆ.ಎ.12.ಬಿ.0875 ರ ಬಸ್ಸನ್ನು ಅದರ ಚಾಲಕ ಸತೀಶ್ ರೈ ಎಂಬುವವರು ಚಾಲನೆ ಮಾಡಿಕೊಂಡು ಬಂದು ವಿರಾಜಪೇಟೆ ನಗರದ ಚಿಕ್ಕಪೇಟೆ ಎಂಬಲ್ಲಿ ಸಮಯ 04-45 ಪಿಎಂಗೆ ಪ್ರಯಾಣಿಕರನ್ನು ಇಳಿಸಿ ಕ್ಲೀನರ್ ರವರು ವಿಷಲ್ ಊದುವ ಮೊದಲೇ ಬಸ್ಸನ್ನು ಒಮ್ಮಲೇ ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿದ್ದರಿಂದ ಬಸ್ಸಿನ ಹಿಂಬದಿ ಬಾಗಿಲಿನಿಂದ ಬಸ್ಸಿನ ಕಂಡಕ್ಟರ್ ಕೆ.ಎಂ. ಪೂಣಚ್ಚ ಎಂಬವರು ಬಸ್ಸಿನಿಂದ ಕೆಳಗೆ ಬಿದ್ದು, ಎಡಭಾಗದ ಬುಜದ ಮೂಳೆ ಮುರಿದು ಆಸ್ಪತ್ರೆಗೆ ದಾಖಲಾಗಿದ್ದು,  ಈ ಸಂಬಂಧ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 
 
ಪತ್ನಿಮೇಲೆ ಪತಿಯಿಂದ ಹಲ್ಲೆ: 
 
     ವಿನಾಕಾರಣ ವ್ಯಕ್ತಿಯೊಬ್ಬರು ತನ್ನ ಪತ್ನಿ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ. ಶ್ರೀಮತಿ ಇ.ಡಿ. ಕುಮಾರಿ ತನ್ನ ಪತಿ ಗೋವಿಂದರವರು ಅಮ್ಮತ್ತಿ ಗ್ರಾಮದಲ್ಲಿ ವಾಸವಾಗಿದ್ದು, ದಿನಾಂಕ 17-5-2017 ರಂದು ಗೋವಿಂದರವರು ತನ್ನ ಪತ್ನಿಯೊಂದಿಗೆ ವಿನಾಕಾರಣ ಜಗಳ ಮಾಡಿ ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಠೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 
 
ದಾರಿ ತಡೆದು ವ್ಯಕ್ತಿ ಮೇಲೆ: 
 
     ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗೆಜ್ಜೆ ಹಣಕೋಡು ಗ್ರಾಮದ ನಿವಾಸಿಗಳಾದ ಜೆ.ಕೆ. ಸಚಿನ್ ಎಂಬವರು ಹೂವಣ್ಣ ಎಂಬವರೊಂದಿಗೆ ದಿನಾಂಕ 18-5-2017 ರಂದು ಅವರ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿ ವಾಪಾಸ್ಸು ಸಮಯ 03:30ಪಿ.ಎಂಗೆ ಮನೆಗೆ ದಾರಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಗೆಜ್ಜೆ ಹಣಕೋಡು ಜಂಕ್ಷನ್ ಹತ್ತಿರ ತಲುಪುವಾಗ್ಗೆ ಆರೋಪಿಗಳಾದ ಮಲ್ಲೇಶ ಮತ್ತು ನಾಗೇಶ ಎಂಬವರು ಅವರ ದಾರಿ ತಡೆದು ವಿನಃ ಕಾರಣ ಜಗಳ ತೆಗೆದು ಅಲ್ಲೇ ಬಿದ್ದದ್ದ ದೊಣ್ಣೆಯಿಂದ ಜೆ.ಕೆ. ಸಚಿನ್ ಮತ್ತು ಹೂವಣ್ಣರವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿರುವ ಬಗ್ಗೆ ನೀಡಿರುವ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 
 
ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ: 
 
     ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗೆಜ್ಜೆ ಹಣಕೋಡು ಗ್ರಾಮದ ನಿವಾಸಿಗಳಾದ ಸಿ.ಆರ್. ನಾಗೇಶ್ ಎಂಬವರು ದಿನಾಂಕ 18-5-2017 ರಂದು ಅವರ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿ ವಾಪಾಸ್ಸು ಸಮಯ 03:30ಪಿ.ಎಂಗೆ ಮನೆಗೆ ದಾರಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಗೆಜ್ಜೆ ಹಣಕೋಡು ಜಂಕ್ಷನ್ ಹತ್ತಿರ ತಲುಪುವಾಗ್ಗೆ ಆರೋಪಿಗಳಾದ ಸಚಿನ್, ದರ್ಶನ್, ಕುಟ್ಟಪ್ಪ ರವರುಗಳು ನಾಗೇಶ್ ರವರ ದಾರಿ ತಡೆದು ಹಲ್ಲೆನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ಅಕ್ರಮ ಪ್ರವೇಶ, ಕೊಲೆ ಬೆದರಿಕೆ:
  
   ಇಬ್ಬರು ವ್ಯಕ್ತಿಗಳು ವ್ಯಕ್ತಿಯೋರ್ವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಕೊಲೆ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಾಟಕೇರಿ ಗ್ರಾಮದ ಕೆ.ಸಿ. ಹೊನ್ನಪ್ಪರವರ ಮನೆಯಲ್ಲಿ ಅವರ ಅಕ್ಕ ಹೇಮಾವತಿರವರು ಒಬ್ಬರೇ ಇದ್ದಾಗ ಮನೆಯ ಅಂಗಳಕ್ಕೆ ಆರೋಪಿಗಳಾದ ರಾಜೀವ್ ಲೋಚನ್ ಮತ್ತು ಕುಮಾರ್ ಎಂಬವರು ಅಕ್ರಮ ಪ್ರವೇಶ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ ವಿಚಾರದಲ್ಲಿ ಜಗಳ ಮಾಡಿ ಕೆ.ಸಿ. ಹೊನ್ನಪ್ಪನವರನ್ನು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.