Tuesday, May 16, 2017

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ: 

     ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮ್ಮತ್ತಿ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೊಸಕೋಟೆ ಗ್ರಾಮದಲ್ಲಿ ವಾಸವಾಗಿದ್ದ ಕಿಶಾನ್ ಎಂಬವರು ತಮ್ಮ ತಂದೆ-ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಮನನೊಂದು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 14-5-2017 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಅಣ್ಣನಾದ ಬಿ.ಎಸ್. ಕಿರಣ್ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

ವ್ಯಕ್ತಿಯ ಅಸಹಜ ಸಾವು: 

     ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬೇತು ಗ್ರಾಮದಲ್ಲಿ ಕೆ.ವೈ. ಹಮೀದ್, ಎಎಸ್ಐ, ರವರಿಗೆ ಸೇರಿದ ಜಾಗದ ಹತ್ತಿರ ಹಳೆಯ ಹೆಂಚಿನ ಮನೆ ಇದ್ದು, ಸದರಿ ಮನೆಯಲ್ಲಿ ಅಂದಾಜು 45 ವರ್ಷ ಪ್ರಾಯದ ಮಾರೇಗೌಡ ಎಂಬ ವ್ಯಕ್ತಿ ದಿನಾಂಕ 15-5-2017 ರಂದು ಮೃತಪಟ್ಟಿರುವುದು ಕಂಡುಬಂದಿದ್ದು, ಸದರಿ ವ್ಯಕ್ತಿ ನಾಪೋಕ್ಲು ಗ್ರಾಮದಲ್ಲಿ ಸಿಕ್ಕಿದ ಕಡೆ ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯಪಾನ ಮಾಡಿ ಸಿಕ್ಕಿದ ಕಡೆ ಮಲಗುವ ಅಭ್ಯಾಸವನ್ನಿಟ್ಟುಕೊಂಡಿದ್ದು, ಈತನಿಗೆ ಸಂಬಂಧಿಕರು ಯಾರೂ ಇಲ್ಲದೆ ಇದ್ದು, ಈತನ ಸಾವಿನ ಬಗ್ಗೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.
 
ಅಪರಿಚಿತ ವಾಹನ ಡಿಕ್ಕಿ ಪಾದಚಾರಿ ಸಾವು:

     ಪಾದಚಾರಿಯೊಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಮೃತಪಟ್ಟ ಘಟನೆ ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ನಡೆದಿದೆ. ದಿನಾಂಕ 15-5-2017 ರಂದು ವಿರಾಜಪೇಟೆ ತಾಲೋಕು ಕಂಡಂಗಾಲ ಗ್ರಾಮದ ನಿವಾಸಿ ಸಿ.ಯು. ಸೋಮಯ್ಯ (54) ಎಂಬವರು ದಿನಾಂಕ 15-5-2017 ರಂದು ಬಿಟ್ಟಂಗಾಲ ಗ್ರಾಮದ ರೋಟರಿ ಶಾಲೆಯ ಸಮೀಪ ಸಾರ್ವಜನಿಕ ಮುಖ್ಯ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಮನೆಯ ಕಡೆಗೆ ಹೋಗುತ್ತಿದ್ದಾಗ ಯಾವುದೋ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿಪಡಿಸಿದ ಪರಿಣಾಮ ಸೋಮಯ್ಯನವರ ತಲೆಗೆ ಮತ್ತು ಎಡಕೈ ಮತ್ತು ಮೊಣಕಾಲಿಗೆ ತೀವ್ರ ತರಹದ ಗಾಯಗಳಾಗಿ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ:

     ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕಬ್ಬಿನಗದ್ದೆ ರಂಗಸಮುದ್ರ ಗ್ರಾಮದ ಶ್ರೀಮತಿ ಯಶೋಧ ಎಂಬವರು ದಿನಾಂಕ 14-5-2017 ರಂದು ಅವರ ವಾಸದ ಮನೆಯ ಪಕ್ಕದ ಕಾಫಿ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಣದ ವಿಚಾರದಲ್ಲಿ ಜಗಳ: 

    ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮದ ನಿವಾಸಿ ರಮೇಶ ಮತ್ತು ಅದೇ ಗ್ರಾಮದ ಸೋಮಯ್ಯ ಎಂಬವರ ನಡುವೆ ಸಾಲದ ಹಣದ ವಿಚಾರದಲ್ಲಿ ಜಗಳವಾಗಿದ್ದು, ಮದ್ಯ ಪ್ರವೇಶಿಸಿದ ರಮೇಶನವರ ಪತ್ನಿ ಶ್ರೀಮತಿ ಪಿ.ಆರ್. ಲೀಲಾವತಿರವರ ಮೇಲೆ ಆರೋಪಿ ಸೋಮಯ್ಯ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಜಗಳ ಬಿಡಿಸಲು ಹೋದ ಶ್ರೀಮತಿ ಪಿ.ಆರ್. ಲೀಲಾವತಿರವರ ಮಾವ ಮೇದಪ್ಪನವರ ಮೇಲೂ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮುನುಷ್ಯ ಕಾಣೆ: 

    ಮಡಿಕೇರಿ ತಾಲೋಕಿನ ಪೆರಾಜೆ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಕೆ.ಜೆ. ಸತ್ಯವತಿ ಎಂಬವರ ಪತಿ ಸಂತೋಷ್ ಕುಮಾರ್ ಎಂಬವರು ದಿನಾಂಕ 12-5-2017 ರಂದು ಮನೆಯಿಂದ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಶ್ರೀಮತಿ ಕೆ.ಜೆ. ಸತ್ಯವತಿರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.