Monday, May 15, 2017


ಪತ್ರಿಕಾ ಪ್ರಕಟಣೆ
ನಾಗರಿಕ ಬಂದೂಕು ತರಬೇತಿ ಶಿಬಿರ
ಕೊಡಗು ಜಿಲ್ಲೆಯಲ್ಲಿ ವಾಸಿಸುವ ನಾಗರಿಕರಿಗಾಗಿ ಬಂದೂಕು ತರಬೇತಿಯನ್ನು ಕೊಡಗು ಜಿಲ್ಲಾ ಪೊಲೀಸ್‌ ಇಲಾಖಾ ವತಿಯಿಂದ ನಡೆಸಲು ಉದ್ದೇಶಿಸಲಾಗಿದ್ದು ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮಡಿಕೇರಿಯ ಡಿಎಆರ್‌ ನ ಆರ್‌ಪಿಐ ರವರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ : ರೂ.10
ಸಂಪರ್ಕ ಸಂಖ್ಯೆ : 9480804906 ಹಾಗೂ 08272 - 228420
ಸಂಪರ್ಕಿಸಬೇಕಾದವರು : ಶ್ರೀ ತಿಮ್ಮಪ್ಪ, ಪೊಲೀಸ್‌ ನಿರೀಕ್ಷಕರು, ಡಿಎಆರ್‌, ಮಡಿಕೇರಿ.
ತರಬೇತಿಯ ಅವಧಿ : 22/05/2017 ರಿಂದ 27/05/2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/05/2017

ಆಸಕ್ತಿಯುಳ್ಳ ನಾಗರಿಕರು ತಮ್ಮ ಇತ್ತೀಚಿನ 4 ಪಾಸ್‌ಪೋರ್ಟ್‌ ಅಳತೆಯ ಭಾವ ಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
 
ದನ ಕಳವು
                        ವಿರಾಜಪೇಟೆ ಬಳಿಯ ಕದನೂರು ನಿವಾಸಿ ಮೈಕೆಲ್ ಲೋಬೊ ಎಂಬವರು ದಿನಾಂಕ 12/05/2017ರಂದು ಬೆಳಿಗ್ಗೆ ಅವರ ದನಗಳಿಗೆ ಮೇವು ಹಾಕಲೆಂದು ಕೊಟ್ಟಿಗೆಗೆ ಹೋದಾಗ ಸುಮಾರು ರೂ.45,000/- ಬೆಲೆ ಬಾಳುವ 4 ಹಸುಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಮಹಿಳೆ ಆತ್ಮಹತ್ಯೆ
                     ಪೊನ್ನಂಪೇಟೆ ಬಳಿಯ ಧನುಗಾಲ ಗ್ರಾಮದ ನಿವಾಸಿ ಬಾನಂಡ ರವಿ ಎಂಬವರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಹಾಲಮ್ಮ ಎಂಬ ಮಹಿಳೆಯು ದಿನಾಂಕ 13/05/2017ರಂದು ಶುಂಠಿ  ಬೆಳೆಗೆ  ಸಿಂಪಡಿಸುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತೆಯು ತೀವ್ರ ತಲೆನೋವಿನಿಂದ ಬಳಲುತ್ತಿದ್ದು, ಇದರಿಂದಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಅಂಗಡಿ ಕಳವು 
                      ದಿನಾಂಕ 13/05/2017ರ ರಾತ್ರಿ ವೇಳೆ ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿರುವ ಕೆಪಿಎಂ  ಟ್ರೇಡಿಂಗ್ ಕಂಪೆನಿ ಎಂಬ ದಿನಸಿ ಅಂಗಡಿಯ ರೋಲಿಂಗ್‌ ಶಟರ್ಸ್ ಅನ್ನು ಯಾರೋ ಕಳ್ಳರು ಬಲಾತ್ಕಾರವಾಗಿ ತೆರೆದು ಅಂಗಡಿಯ ಗಲ್ಲಾ ಪೆಟ್ಟಿಗೆಯಲ್ಲಿದ್ದ ರೂ.53,000/- ನಗರದನ್ನು ಕಳವು ಮಾಡಿರುವುದಾಗಿ ಸಿ.ಸಿ.ಆಲಿ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್‌ಗೆ ಕಾರು ಡಿಕ್ಕಿ
                    ದಿನಾಂಕ 14/05/2017ರಂದು ಚೆಯ್ಯಂಡಾಣೆ ನಿವಾಸಿ ಪ್ರಕಾಶ್‌ ಟಿ.ಕೆ. ಎಂಬವರು ಕೆಎ-12-ಕ್ಯು-3688ರ ಸ್ಕೂಟರಿನಲ್ಲಿ ಕೃತಿಕಾ ಮತ್ತು ಅಖಿನ್ ಎಂಬವರೊಂದಿಗೆ ಮಡಿಕೇರಿಗೆ ಬರುತ್ತಿರುವಾಗ ಹಾಕತ್ತೂರು ಬಳಿ ಕೆಎ-12-ಪಿ-0725ರ ಮಾರುತಿ ಓಮಿನಿ ವ್ಯಾನನ್ನು ಅದರ ಚಾಲಕ ಕೆ.ಎಸ್‌. ಸೋಮಯ್ಯ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಪ್ರಕಾಶ್‌, ಕೃತಿಕ ಮತ್ತು ಅಖಿನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                     ದಿನಾಂಕ 14/05/2017ರಂದು ಸಿದ್ದಾಪುರ ಬಳಿಯ ಮೇಕೂರು ಹೊಸ್ಕೇರಿ ನಿವಾಸಿ ಜೆ.ಕೆ.ಸುರೇಶ ಎಂಬಾತನು ಮನೆಯಲ್ಲಿ ಮಾಡಿಗೆ ಯಾವುದೋ ವಾಹನದ ಕ್ಲಚ್‌ ವಯರಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅತೀವ ಮದ್ಯಪಾನದ ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.