Sunday, May 14, 2017


 ಪತ್ರಿಕಾ ಪ್ರಕಟಣೆ 
ನಾಗರಿಕ ಬಂದೂಕು ತರಬೇತಿ ಶಿಬಿರ:
    ಕೊಡಗು ಜಿಲ್ಲೆಯಲ್ಲಿ ವಾಸಿಸುವ ನಾಗರಿಕರಿಗಾಗಿ ಬಂದೂಕು ತರಬೇತಿಯನ್ನು ಕೊಡಗು ಜಿಲ್ಲಾ ಪೊಲೀಸ್ಇಲಾಖಾ ವತಿಯಿಂದ ನಡೆಸಲು ಉದ್ದೇಶಿಸಲಾಗಿದ್ದು ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮಡಿಕೇರಿಯ ಡಿಎಆರ್ ಆರ್ಪಿಐ ರವರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ                      : ರೂ.10
ಸಂಪರ್ಕ ಸಂಖ್ಯೆ                : 9480804906 ಹಾಗೂ 08272 - 228420
ಸಂಪರ್ಕಿಸಬೇಕಾದವರು     : ಶ್ರೀ ತಿಮ್ಮಪ್ಪ, ಪೊಲೀಸ್ನಿರೀಕ್ಷಕರು, ಡಿಎಆರ್‌, ಮಡಿಕೇರಿ.
ತರಬೇತಿಯ ಅವಧಿ           : 22/05/2017 ರಿಂದ 27/05/2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/05/2017

ಆಸಕ್ತಿಯುಳ್ಳ ನಾಗರಿಕರು ತಮ್ಮ ಇತ್ತೀಚಿನ 4 ಪಾಸ್ಪೋರ್ಟ್ಅಳತೆಯ ಭಾವ ಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಜಾನುವಾರು ಕಳವು:
     ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಜಾನುವಾರುಗಳು ಕಳ್ಳತನವಾದ ಘಟನೆ ಸೋಮವಾರಪೇಟೆ ತಾಲೋಕು ಕುಸುಬೂರು ಗ್ರಾಮದಲ್ಲಿ ನಡೆದಿದೆ. ಕುಸುಬೂರು ಗ್ರಾಮದ ನಿವಾಸಿ ಕೆ.ಡಿ. ಕೃಷ್ಣ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ 3 ಹಸುಗಳನ್ನು ದಿನಾಂಕ 12-5-2017ರ ರಾತ್ರಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗಿ ಕಾಣೆ, ಪ್ರಕರಣ ದಾಖಲು:

     ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಿಕಾರ ಗ್ರಾಮದ ವಾಸಿ ಈರಯ್ಯ ಎಂಬವರ ಮಗಳಾದ ರೋಹಿಣಿ ದಿನಾಂಕ 13-5-2017 ರಂದು ತಮ್ಮ ಮನೆಯಿಂದ ಕಾಣೆಯಾಗಿದ್ದು, ಆಕೆಯ ತಂದೆ ಈರಯ್ಯ ನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಮೆಡಿಕಲ್ ಶಾಫ್ ನಿಂದ ನಗದು ಕಳವು:

     ವಿರಾಜಪೇಟೆ ತಾಲೋಕು ಕಳತ್ಮಾಡು ಗ್ರಾಮದ ನಿವಾಸಿ ಬಿ.ಯು. ದೇವೇಂದ್ರ ಎಂಬವರು ಗೋಣಿಕೊಪ್ಪ ನಗರದಲ್ಲಿ ಕಾಂಚನ ಮೆಡಿಕಲ್ ಶಾಪ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ 12/05/2017 ರಂದು ರಾತ್ರಿ ವ್ಯಾಪಾರ ಮುಗಿಸಿ ಅಂಗಡಿಗೆ ಬೀಗ ಹಾಕಿಕೊಂಡು ಹೋಗಿದ್ದು ಮರುದಿನ ದಿನಾಂಕ 13/05/2017 ರಂದು ಬೆಳಿಗ್ಗೆ 7-30 ಗಂಟೆಗೆ ಅಂಗಡಿಯ ಬಾಗಿಲನ್ನು ತೆರೆಯಲು ಬಂದಾಗ ಅಂಗಡಿಯ ಶೆಟರ್ಸ್ ನ್ನು ಯಾರೋ ಕಳ್ಳರು ಬೆಂಡ್ ಮಾಡಿ ಅಂಗಡಿಗೆ ನುಗ್ಗಿ ವ್ಯಾಪಾರ ಮಾಡಿ ಡ್ರಾಯರ್ ನಲ್ಲಿ ಇಟ್ಟಿದ್ದ ಹಣ ರೂ 7000/- ರೂ ಹಣ ಮತ್ತು ಇನ್ಸುರೆನ್ಸ್ ಹಣ ರೂ 16,000/- ಹಣ ಒಟ್ಟು 23,000/- ರೂನಗದು ಹಣ ವನ್ನು ಕಳುವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಗಿಲು ಮುರಿದು ಕಳವು:

     ವಿರಾಜಪೇಟೆ ತಾಲೋಕು ಹಳ್ಳಿಗಟ್ಟು ಗ್ರಾಮದ ನಿವಾಸಿ ಸಿ.ಪಿ. ಮುಸ್ತಾಫ ಎಂಬವರಿಗೆ ಪೊನ್ನಂಪೇಟೆ ಕಾರು ನಿಲ್ದಾಣದ ಹತ್ತಿರ ಪ್ಯಾಷನ್ ಬಾಕ್ಸ್ ಎಂಬ ಅಂಗಡಿ ಇದ್ದು ಎಂದಿನಂತೆ ದಿನಾಂಕ 12-5-2017 ರಂದು ರಾತ್ರಿ 8-30 ಗಂಟೆಗೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ರಾತ್ರಿ ಯಾರೋ ಕಳ್ಳರು ಅಂಗಡಿ ಬಾಗಿಲನ್ನು ಮುರಿದು ಒಳಪ್ರವೇಶಿಸಿ ಅಂಗಡಿಯ ಡ್ರಾಯರ್ ನಲ್ಲಿಟ್ಟಿದ್ದ 5 ರಿಂದ 8 ಸಾವಿರ ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಂಗಡಿಗೆ ನುಗ್ಗಿ ಕಳವು:

     ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಅಮ್ಮತ್ತಿ ನಗರದಲ್ಲಿರುವ ಎಂ.ಪಿ. ಜುಬೇರ್ ಎಂಬವರಿಗೆ ಸೇರಿದ ಸೂಪರ್ ಮಾರ್ಕೆಟ್ ಅಂಗಡಿಗೆ ದಿನಾಂಕ 12-5-2017ರ ರಾತ್ರಿ ಯಾರೋ ಕಳ್ಳರು ಶೆಟ್ಟರ್ಸ್ ನ್ನು ಕಬ್ಬಿಣದ ಸಲಾಕೆಯಿಂದ ಮೇಲಕ್ಕೆತ್ತಿ ಅಂಗಡಿಗೆ ನುಗ್ಗಿ ಸುಮಾರು 6,000 ರೂ ನಗದು ಮತ್ತು 5000 ರೂ. ಬೆಲೆಬಾಳುವ ಸಿಗರೇಟ್ ಗಳನ್ನು ಕಳ್ಳತನ ಮಾಡಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು:

     ಮಡಿಕೇರಿ ತಾಲೋಕು ಚೇರಂಬಾಣೆ ಗ್ರಾಮದ ನಿವಾಸಿ ಕೆ.ಪಿ. ಮೋಹನ್ ಎಂಬವರ ಅಣ್ಣನ ಮಗ ಸುಬ್ಬಯ್ಯ ಎಂಬಾತ ದಿನಾಂಕ 13-5-2017 ರಂದು ಮದೆನಾಡು ಗ್ರಾಮದಲ್ಲಿರುವ ಪಯಸ್ವಿನಿ ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕ ಕಾಲುಜಾರಿ ನೀರಿಗೆ ಬಿದ್ದು ಸಾವನಪ್ಪಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾನುವಾರು ಕಳವು, ಪ್ರತ್ಯೇಕ ಪ್ರಕರಣ ದಾಖಲು:


ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗದ್ದೆಹೊಸಹಳ್ಳಿ ಗ್ರಾಮದಲ್ಲಿ ಪುಟ್ಟಸ್ವಾಮಿ, ಜಿ.ಟಿ. ಮನುಕುಮಾರ್ ಹಾಗು ಸಿ.ಟಿ. ಸಾಗರ್ ರವರುಗಳು ವಾಸವಾಗಿದ್ದು, ದಿನಾಂಕ 12-5-2017 ರಂದು ರಾತ್ರಿ ಪುಟ್ಟಸ್ವಾಮಿರವರ ಮನೆಯ ಬಳಿ ಕಟ್ಟಿಹಾಕಿದ್ದ ಒಂದು ಹೋರಿ, ಮನುಕುಮಾರ್ ರವರ ಕೊಟ್ಟಿಯಲ್ಲಿ ಕಟ್ಟಿಹಾಕಿದ್ದ ಒಂದು ಸಿಂಧಿ ಹಸು ಮತ್ತು ಟಿ.ಸಿ. ಸಾಗರ್ ರವರ ಕೊಟ್ಟಿಗೆಯಿಂದ 2 ಹೋರಿ ಮತ್ತು ಒಂದು ಹಸುವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಮೇಲ್ಕಾಣಿಸಿದ ಮೂವರು ನೀಡಿದ ಪ್ರತ್ಯೇಕ ದೂರುಗಳನ್ವಯ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ ಕುಶಾಲನಗರ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಗೋವುಗಳ ಸಾಗಾಟ ಪತ್ತೆ:

     ಅಕ್ರಮವಾಗಿ ಟೆಂಪೋ ಟ್ರಾವಲರ್  ಮತ್ತು ಪಿಕ್  ಅಪ್ ವಾಹನಗಳಲ್ಲಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ  ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ ಮರಿಸ್ವಾಮಿ ರವರಿಗೆ ಬಂದ ಖಚಿತ ವರ್ತಮಾಮದ ಮೇರೆಗೆ ಸಿಬ್ಬಂದಿಯೊಂದಿಗೆ ದಿನಾಂಕ 13-5-2017 ರ ಬೆಳಗಿನ ಜಾವ 05-00 ಗಂಟೆ ಸಮಯದಲ್ಲಿ ಶನಿವಾರಸಂತೆ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ಆರೋಪಿಗಳಾದ ಮಹಮ್ಮದ್ ಮನ್ಸೂರ್, ಕೈಕಂಬ ಗ್ರಾಮ, ಮಂಗಳೂರು ರವರು ಕೆಎ-02-ಎಸಿ-8007 ರ ಟೆಂಪೋ ಟ್ರಾವಲರ್ ವಾಹನದಲ್ಲಿ ಮತ್ತು ಮೊಹಮ್ಮದ್ ಶರೀಫ್ ಎಂಬವರು ಕೆಎ-19-ಎಎ-4623 ಪಿಕ್ ಅಪ್ ವಾಹನದಲ್ಲಿ ಇತರೆ 5 ವ್ಯಕ್ತಿಗಳೊಂದಿಗೆ ಸೋಮವಾರಪೇಟೆ ತಾಲೋಕಿನ ಬೇರೆ ಬೇರೆ ಕಡೆಗಳಿಂದ ಗೋವುಗಳನ್ನುಕಳ್ಳತನ ಮಾಡಿ ವಾಹನದಲ್ಲಿ ತುಂಬಿಸಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿ ವಾಹನಗಳನ್ನು ವಶಕ್ಕೆ ಪಡದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

ವಾಹನ ತಪಾಸಣೆ ವೇಳೆ ಸಿಬ್ಬಂದಿಗಳ ಕೊಲೆಗೆ ಯತ್ನ:

     ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಪರಿಶೀಲಿಸಲು ಯತ್ನಿಸಿದ ಪೊಲೀಸ್ ಸಿಬ್ಬಂದಿ ಮೇಲೆ ವಾಹನಗಳನ್ನು ಹರಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ದಿನಾಂಕ 13-5-2017 ರಂದು ಬೆಳಗಿನ ಜಾವ 5-00 ಗಂಟೆಯ ಸಮಯದಲ್ಲಿ ಶನಿವಾರಸಂತೆ ಠಾಣೆಯ  ಕೊಡ್ಲಿಪೇಟೆ ಉಪಠಾಣೆಯ ಹತ್ತಿರ ವಿರುವ ಕಡೇಪೇಟೆ ಎಂಬಲ್ಲಿ ಆರೋಪಿ ಮಹಮ್ಮದ್ ಮನ್ಸೂರ್, ಮತ್ತು ಮಹಮ್ಮದ್ ಶರೀಫ್ ಇತರೆ 5 ಮಂದಿಗಳೊಂದಿಗೆ ದಿನಾಂಕ 12-5-2016 ರಾತ್ರಿ ಶನಿವಾರಸಂತೆಯ ಸುತ್ತಮುತ್ತಲಿನ ಗ್ರಾಮಗಳಿಂದ ಜಾನುವಾರುಗಳನ್ನು ಕಳ್ಳತನ ಮಾಡಿ ಟೆಂಪೋ ಟ್ರಾವಲರ್ ಮತ್ತು ಪಿಕ್ ಅಪ್ ಜೀಪಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು, ಈ ಬಗ್ಗೆ ಶನಿವಾರಸಂತೆ ಠಾಣಾಧಿಕಾರಿಯವರ ಸೂಚನೆಯಂತೆ ಕೊಡ್ಲಿಪೇಟೆ ಉಪ ಠಾಣೆಯ ಸಿಬ್ಬಂದಿಗಳು ವಾಹನಗಳನ್ನು ಪರಿಶೀಲಿಸುವ ಸಂಬಂಧ ತಮ್ಮ ಮೋಟಾರ್ ಸೈಕಲಿನಲ್ಲಿ ಕೊಡ್ಲಿಪೇಟೆ ಕಡೇಪೇಟೆಗೆ ತೆರಳಿ  ಸಾರ್ವಜನಿಕ ರಸ್ತೆಯಲ್ಲಿ ಗೋವುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ವಾಹನಗಳನ್ನು ಪರಿಶೀಲಿಸುವ ಬಗ್ಗೆ ನಿಲ್ಲಿಸಲು ಸೂಚಿಸಿದ್ದು, ಇದನ್ನು ಲೆಕ್ಕಿಸದ ಟೆಂಪೋ ಟ್ರಾವ್ ಲರ್  ವಾಹನ ಚಾಲಕ ಮಹಮ್ಮದ್ ಮನ್ಸೂರ್ ವಾಹನವನ್ನು ನಿಲ್ಲಿಸದೇ ಸಿಬ್ಬಂದಿಯವರ ಮೇಲೆಯೇ ವಾಹನವನ್ನು ಹರಿಸಿ ಕೊಲೆಗೆ ಯತ್ನಿಸಿದ್ದು, ಈ ಸಂಬಂಧ ಸಿಬ್ಬಂದಿಯವರ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

       ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನಾಂಕ 13-5-2016 ರಂದು ರಾತ್ರಿ ಕೊಡ್ಲಿಪೇಟೆ ಶಾಂತಪುರ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮತ್ತು ಗೃಹ ರಕ್ಷಕ ಸಿಬ್ಬಂದಿಯವರನ್ನು ಲೆಕ್ಕಿಸದೇ  ಟೆಂಪೋ ಟ್ರಾವಲರ್ ವಾಹನದಲ್ಲಿ ಜಾನುವಾರುಗಳನ್ನು ತುಂಬಿಸಿಕೊಂಡು ಚೆಕ್ ಪೋಸ್ಟ್ ಮೂಲಕ ಬಂದ ಚಾಲಕ ಮೊಹಮ್ಮದ್ ಮನ್ಸೂರ್  ಚೆಕ್ ಪೋಸ್ಟ್ ನ ರಸ್ತೆಯಲ್ಲಿ ಇಟ್ಟಿದ್ದ ಬ್ಯಾರಿಕೇಡ್ ಗೆ ವಾಹನವನ್ನು ಡಿಕ್ಕಿಪಡಿಸಿ ಬ್ಯಾರಿಕೇಡ್ ಸಂಪೂರ್ಣ ಜಖಂ ಪಡಿಸಿದ್ದು. ಈ ಸಂಬಂಧ ಕರ್ತವ್ಯದಲ್ಲಿದ್ದ ಹೆಚ್.ಸಿ. ಶ್ರೀ ಬಸವರಾಜ್ ಶೆಟ್ಟಿರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಆರೋಪಿ ವಿರುದ್ದ ಮತ್ತೊಂದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

        ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಟೆಂಪೋ ಟ್ರಾವಲರ್ ಮತ್ತು ಪಿಕ್ ಅಪ್ ವಾಹನಗಳನ್ನು ಕೊಡ್ಲಿಪೇಟೆ ಉಪ ಠಾಣೆಯ ಹತ್ತಿರ ನಿಲ್ಲಿಸಿದ್ದು,  ಕೆ.ಟಿ. ಕುಮಾರ್ ಮತ್ತು ಧರ್ಮರಾಜ್ ಎಂಬವರು ಟೆಂಪೋ ಟ್ರಾವಲರ್ ವಾಹನಕ್ಕೆ ಬೆಂಕಿಹಚ್ಚಿ, ವಾಹನವು ಸುಟ್ಟು ಸಂಪೂರ್ಣ ನಷ್ಟ ಉಂಟಾಗಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.