Sunday, April 16, 2017

ವಿದ್ಯುತ್ ಸ್ಪರ್ಷಿಸಿ ವ್ಯಕ್ತಿ ಸಾವು:

     ತೆಂಗಿನಮರವೇರಿದ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಷಗೊಂಡು ಸಾವನಪ್ಪಿದ ಘಟನೆ ಗೋಣಿಕೊಪ್ಪ ನಗರದ ಸಮೀಪದ ಕೈಕೇರಿ ಗ್ರಾಮದಲ್ಲಿ ಸಂಭವಿಸಿದೆ. ಪಿರಿಯಾಪಟ್ಟಣ ನಿವಾಸಿ ಮುತ್ತುರಾಜ್ ಹಾಗು ಕೆ.ಆರ್.ನಗರದ ಬಲರಾಮ ಎಂಬವರುಗಳು ವಿರಾಜಪೇಟೆ ತಾಲೋಕು ಕೈಕೇರಿ ಗ್ರಾಮದ ನಿವಾಸಿ ಚೇತನ್ ಎಂಬವರ ತೆಂಗಿನ ತೋಟವನ್ನು ಗುತ್ತಿಗೆಗೆ ಪಡೆದುಕೊಂಡಿದ್ದು, ದಿನಾಂಕ 15-4-2017 ರಂದು 9-50 ಎ.ಎಂ. ಗಂಟೆಯ ಸಮಯದಲ್ಲಿ ಬಲರಾಮರವರು ಸದರಿ ಗುತ್ತಿಗೆ ಪಡೆದ ತೋಟದಲ್ಲಿರುವ ತೆಂಗಿನ ಮರವೇರಿದ ಸಂದರ್ಭದಲ್ಲಿ ಮರದ ಪಕ್ಕದಲ್ಲಿ ಹಾದುಹೋದ ವಿದ್ಯುತ್ ತಂತಿ ಸ್ಪರ್ಷಿಸಿ ಸಾವನಪ್ಪಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 

ನೇಣು ಬಿಗಿದು ಅಪರಿಚಿತ ವ್ಯಕ್ತಿ ಆತ್ಮಹತ್ಯೆ:

     ಅಪರಿಚಿತ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಮಾಡಿ ಕೊಂಡಿರುವುದು ಪತ್ತೆಯಾಗಿದೆ. ವಿರಾಜಪೇಟೆ ತಾಲೋಕು ಕಂಡಂಗಾಲ ಗ್ರಾಮದ ನಿವಾಸಿ ಮಾಚಿಯಂಡ ಈರಪ್ಪ ಎಂಬವರಿಗೆ ಸೇರಿದ ಜಾಗದಲ್ಲಿ ಇರುವ ಮರವೊಂದಕ್ಕೆ ಅಂದಾಜು 35 ವರ್ಷ ಪ್ರಾಯದ ಅಪರಿಚಿತ ಗಂಡಸು ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು, ಈ ಸಂಬಂಧ ಸದರಿ ಮಾಚಿಯಂಡ ಈರಪ್ಪ ನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.