Sunday, January 31, 2016

ಜೀವನದಲ್ಲಿ ಜಿಗುಪ್ಸೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

    ಮಡಿಕೇರಿ ನಗರದ ಮಂಗಳ ದೇವಿ ನಗರದ ನಿವಾಸಿ ಚಂದ್ರಶೇಖರ್ ಎಂಬವರು ಆಟೋ ಚಾಲಕರಾಗಿದ್ದು ಇವರಿಗೆ ವಿಪರೀತ ಸಾರಾಯಿ ಕುಡಿಯುವ ಹವ್ಯಾಸವಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30-01-2016 ರಂದು ಮಧ್ಯಾಹ್ನ ಸಮಯ 14-45 ಗಂಟೆಗೆ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿಗೆ.

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರು ಮತ್ತೊಬ್ಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಸೋಮವಾರಪೇಟೆ ತಾಲೂಕು ಮಾದಾಪುರದಲ್ಲಿ ನಡೆದಿದೆ. ದಿನಾಂಕ 29.01.2015 ರಂದು ಸಮಯ 06:30 ಪಿ.ಎಂಗೆ ಜಂಬೂರು ಗ್ರಾಮದ ನಿವಾವಿ ಕೆ. ರಾಜು ಎಂಬವರು ಮಾದಾಪುರದ ಹಳೆ ಸೇತುವೆ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಅಲ್ಲಿಗೆ ಬಂದ ಬಿಪಿನ್ ಎಂಬ ವ್ಯಕ್ತಿ ಕೆ.ರಾಜುರವರು ಏಕೆ ವಚನದಲ್ಲಿ ಮಾತನಾಡಿದ ವಿಚಾರದಲ್ಲಿ ಜಗಳ ಮಾಡಿ ಕಲ್ಲಿನಿಂದ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Posted by Vartika Katiyar, IPS at 6:39 PM
Saturday, January 30, 2016

ವ್ಯಕ್ತಿಯ ಮೇಲೆ ಗುಂಪಿನಿಂದ ಹಲ್ಲೆ:
     ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಅಕ್ರಮಕೂಟ ಸೇರಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಮಡಿಕೇರಿ ನಗರದ ಮುತ್ತಪ್ಪ ದೇವಾಲಯದ ಬಳಿ ನಡೆದಿದೆ. ದಿನಾಂಕ 29-01-2016 ರಂದು ರಾತ್ರಿ 20.00 ಗಂಟೆಗೆ ಮಡಿಕೇರಿ ನಗರದ ಎ.ವಿ ಶಾಲೆ ಪಕ್ಕದ ಮುತ್ತಪ್ಪ ದೇವಸ್ಥಾನದ ಜಂಕ್ಷನ್ ಬಳಿ ಪಿರ್ಯಾಧಿ ಶಾಸ್ರ್ತಿನಗರದ ನಿವಾಸಿ ಎಂ.ಹೆಚ್. ಇಬ್ರಾಹಿಂ ಎಂಬವರು ಕಾರಿನಲ್ಲಿ ಬರುತ್ತಿದ್ದಾಗ ಅಲ್ಲಿ ಗಲಾಟೆ ನಡೆಯುತ್ತಿದ್ದು, ಪಿರ್ಯಾಧಿಯವರು ಗಲಾಟೆ ಬಿಡಿಸಲು ಹೋದಾಗ ಗಭವತಿ ನಗರದ ನಿವಾಸಿಗಳಾದ ಸುಜಿತ್, ಜಗದೀಶ್, ಭರತ್, ಅರ್ಜುನ್, ಸುಪ್ರೀತ್, ಸುಜನ್ ಶಿವು ಹಾಗು ಮಣಿ ಎಂಬವರು ಅಕ್ರಮ ಕೂಟ ಕಟ್ಟಿಕೊಂಡು ಪಿರ್ಯಾದಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡುಗಳಿಂದ ಮತ್ತು ಕೈಗಳಿಂದ ಪಿರ್ಯಾಧಿಯವರ ಎಡ ಕಣ್ಣಿನ ಭಾಗಕ್ಕೆ, ತಲೆಯ ಬಲ ಭಾಗಕ್ಕೆ, ತಲೆಯ ನೆತ್ತಿಯ ಹಿಂಭಾಗಕ್ಕೆ ಮತ್ತು ಶರೀರಕ್ಕೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:
     ಅಕ್ರಮವಾಗಿ ಎರಡು ಲಾರಿಗಳಲ್ಲಿ ಮರಳು ಸಾಗಿಸುತ್ತಿದ್ದವರ ಮೇಲೆ ದಾಳಿ ನಡೆಸಿ ಡಿಸಿಬಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 29-1-2016 ರಂದು ನಾಲ್ಕೇರಿ ಗ್ರಾಮ ಬೇತ್ರಿ ಹೊಳೆಯ ಹತ್ತಿರ ಆರೋಪಿಗಳಾದ ಕುಂಞರಾಮ, ರಶೀದ್, ಅಶೋಕ್ ಮತ್ತು ಪಿ.ಟಿ. ರಮೇಶ್ ರವರುಗಳು ಎರಡು ಲಾರಿಗಳಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದು, ಮಡಿಕೇರಿ ಡಿಸಿಬಿ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಲಾರಿಗಳ ಮೇಲೆ ದಾಳಿ ನಡೆಸಿ ಲಾರಿಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣದ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿದ್ಯುತ್ ಕಂಬ ಬಿದ್ದು ವ್ಯಕ್ತಿಯ ದುರ್ಮರಣ:
     ವಿದ್ಯುತ್ ಕಂಬವನ್ನು ಟ್ರಾಕ್ಟರ್ ನಲ್ಲಿ ಸಾಗಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವ್ಯಕ್ತಿ ಮೇಲೆ ಬಿದ್ದು ಸದರಿ ವ್ಯಕ್ತಿ ಸಾವನಪ್ಪಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಹೈಸೊಡ್ಲೂರು ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ನಿವಾಸಿ ಮರುಲಿಂಗಯ್ಯ ಎಂಬವರ ಎರಡನೇ ಮಗ ರವೀಂದ್ರ ದಿನಾಂಕ 28/01/2016 ರಂದು ಕೂಲಿ ಕೆಲಸಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹೈಸೊಡ್ಲೂರು ಗ್ರಾಮದ ಕಳ್ಳೇಂಗಡ ಸಂಜು @ ಅಯ್ಯಪ್ಪ ರವರಲ್ಲಿಗೆ ಬಂದಿದ್ದು, ದಿನಾಂಕ 28/01/2016 ರಂದು ಸಮಯ ಸುಮಾರು 9:30 ಪಿ.ಎಂ.ಗೆ ಹೈಸೊಡ್ಲೂರು ಗ್ರಾಮದ ಕಳ್ಳೇಂಗಡ ಸುರೇಶ ರವರ ತೋಟಕ್ಕೆ ಹೋಗುವ ಮಣ್ಣಿನ ರಸ್ತೆಯಲ್ಲಿ ಸಿಮೆಂಟ್ ವಿದ್ಯುತ್ ಕಂಬ ಇದ್ದ ಟ್ರಾಕ್ಟರ್ ನಂ KA 45 T-3018 ಮತ್ತು ಟ್ರೆಲರ್ ನಂ KA 45 T-3019 ಚಾಲನೆಯಲ್ಲಿದ್ದು, ಮುಂದಕ್ಕೆ ಹತ್ತದೆ ಇದ್ದ ಕಾರಣ ರವೀಂದ್ರನು ಟ್ರೈಲರ್ ಅನ್ನು ತಳ್ಳುತ್ತಿದ್ದ ಸಂಧರ್ಭದಲ್ಲಿ ಟ್ರೈಲರ್ ನಲ್ಲಿದ್ದ ಸಿಮಂಟ್ ವಿದ್ಯುತ್ ಕಂಬ ಆಕಸ್ಮಿಕವಾಗಿ ರವೀಂದ್ರನ ಮೇಲೆ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಸದರಿಯವರನ್ನು ಚಿಕಿತ್ಸೆ ಬಗ್ಗೆ ಅಸ್ಪತ್ರೆಗೆ ಕರೆದು ಕೊಂಡು ಬಂದಾಗ ರವೀಂದ್ರ ಮೃತಪಟ್ಟಿದ್ದು, ಈ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಫಿ ಕಳವು, ಪ್ರಕರಣ ದಾಖಲು:
     ಮಡಿಕೇರಿ ಗ್ರಾಮಾಂತ್ರ ಠಾಣಾ ಸರಹದ್ದಿನ ಕಾಂತೂರು ಮುರ್ನಾಡು ಗ್ರಾಮದ ನಿವಾಸಿ ಶ್ರೀಮತಿ ರತಿ ಸೋಮಯ್ಯ ರವರ ಮನೆಯ ಮುಂದು ದಾಸ್ತಾನು ಇಟ್ಟಿದ್ದ ಸುಮಾರು 40,000 ರೂ ಬೆಲೆಬಾಳುವ ಹಸಿ ಕಾಫಿಯನ್ನು ದಿನಾಂಕ 21-1-2016 ರ ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ದಿನಾಂಕ ಶ್ರೀಮತಿ ರತಿ ಸೋಮಯ್ಯನವರು ದಿನಾಂಕ 29-1-2016 ರಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

Friday, January 29, 2016

ಅಕ್ರಮ ಪ್ರವೇಶ, ಆಸ್ತಿ ಹಾನಿ:

     ಭಾಗಮಂಡಲ ಠಾಣಾ ಸರಹದ್ದಿನ ಚೆತ್ತುಕಾಯ ಕರಿಕೆ ಗ್ರಾಮದ ನಿವಾಸಿಗಳಾದ ಶ್ರೀಜೇಶ್, ಲೀನಾ ಮತ್ತು ಶ್ರೀಜಾರವರುಗಳು ಈ ದಿನ ಬೆಳಿಗ್ಗೆ 8-00 ಗಂಟೆಗೆ ಶಬರಿ ಎಸ್ಟೇಟ್ ಗೆ ಅಕ್ರಮ ಪ್ರವೇಶ ಮಾಡಿ ಎಸ್ಟೇಟಿನ ಕಬ್ಬಿಣದ ಗೇಟನ್ನು ಕಲ್ಲಿನಿಂದ ಜಖಂ ಪಡಿಸಿ ನಷ್ಟಪಡಿಸಿ ಎಸ್ಟೇಟಿಗೆ ಹೋಗಲು ಅಡ್ಡಿಪಡಿಸಿರುತ್ತಾರೆಂದು ಎಸ್ಟೇಟಿನ ರೈಟರ್ ಕೆ.ಕೆ. ವಿಜಯನ್ ರವರು ನೀಡಿದರುವ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೈಕುಗಳ ಮುಖಾಮುಖಿ ಡಿಕ್ಕಿ, ಸವಾರರಿಗೆ ಗಾಯ:

      ದಿನಾಂಕ 28-01-2016 ರಂದು ಬೆಳಿಗ್ಗೆ ಸಮಯ 07.15 ಗಂಟೆಗೆ ಸೋಮವಾರಪೇಟೆ ತಾಲೂಕು ಯಲಕನೂರು ಗ್ರಾಮದ ನಿವಾಸಿ ಸುಧೀರ ಎಂಬ ವ್ಯಕ್ತಿ ತನ್ನ ಬಾಪ್ತು ಕೆಎ-12, ಜೆ-6071 ರ ಮೋಟಾರು ಸೈಕಲ್ ನಲ್ಲಿ ಉದಯ ಎಂಬುವವರನ್ನು ಕೂರಿಸಿಕೊಂಡು ಕುಶಾಲನಗರಕ್ಕೆ ಪೆಯಿಟಿಂಗ್ ಕೆಲಸಕ್ಕೆಂದು ಹೋಗುತ್ತಿದ್ದಾಗ ಯಲಕನೂರು ಗ್ರಾಮದ ಎರೆಕೊಲ್ಲಿ ಎಂಬಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕೆಎ-45, ಆರ್-0558 ರ ಮೋಟಾರು ಸೈಕಲ್ ನ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಮೋಟಾರು ಸೈಕಲನ್ನು ಚಾಲನೆ ಮಾಡಿಕೊಂಡು ಬಂದು ಸುಧೀರ್ ರವರ ಮೋಟಾರು ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸುಧೀರ್, ಉದಯರವರಿಗೆ ಹಾಗೂ ಕೆಎ-45, ಆರ್-0558 ರ ಮೋಟಾರು ಸೈಕಲ್ ನಲ್ಲಿದ್ದ ಇಬ್ಬರಿಗೂ ರಕ್ತಗಾಯಗಳಾಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಮೇಲೆ ದೌರ್ಜನ್ಯ, ಪ್ರಕರಣ ದಾಖಲು:

     ಸೋಮವಾರಪೇಟೆ ತಾಲೂಕು ಇಗ್ಗೋಡ್ಲು ಗ್ರಾಮದ ನಿವಾಸಿ ಶ್ರೀಮತಿ ಪುಷ್ಪರವರು ದಿನಾಂಕ: 26-1-2016ರಂದು ಎಂದಿನಂತೆ ಮಾದಾಪುರಕ್ಕೆ ವ್ಯಾಪಾರಕ್ಕೆಂದು ಹೋಗಿ ವ್ಯಾಪಾರ ಮುಗಿಸಿಕೊಂಡು ಸಮಯ ಸಂಜೆ 7:30 ಗಂಟೆಗೆ ಉಳಿದ ತರಕಾರಿಗಳನ್ನು ತಮ್ಮ ಮಾವ ಕಾರ್ತೀಗೆಯನ್ ರವರ ಬಾಪ್ತು ಟಿ.ಎನ್ 25 ಸಿ. 5546ರ ಟಾಟಾ ಸುಮೋದಲ್ಲಿ ತುಂಬಿಸಿಕೊಂಡು ಮನೆಯ ಮುಂದೆ ನಿಲ್ಲಿಸಿಕೊಂಡು ಅದಲ್ಲಿದ್ದ ತರಕಾರಿಯನ್ನು ಮನೆಯೊಳಗೆ ಇಳಿಸಿಕೊಂಡಿರುವಾಗ್ಗೆ ಇಗ್ಗೋಡ್ಲು ಗ್ರಾಮದ ನಿವಾಸಿ ವಜ್ಜುರವರು ಮೋಟಾರ್ ಸೈಕಲಿನಲ್ಲಿ ಅಲ್ಲಿಗೆ ವಾಹನವನ್ನು ನಿಲ್ಲಿಸಿದ ಬಗ್ಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಹಿಡಿದು ಎಳೆದಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬುಲ್ಲೆಟ್ ಬೈಕ್ ಗೆ ಪಿಕ್ಅಪ್ ಡಿಕ್ಕಿ:

     ವಿರಾಜಪೇಟೆ ವಿ. ಬಾಡಗ ಗ್ರಾಮದ ನಿವಾಸಿ ಎಂ.ಪಿ. ಬೋಪಣ್ಣರವರು ದಿನಾಂಕ 28-1-2016 ರಂದು ತಮ್ಮ ಬಾಪ್ಸು ಬುಲೆಟ್ ಮೋಟಾರ್ ಸೈಕಲ್ ನಲ್ಲಿ ವಿರಾಜಪೇಟೆ ಕಡೆಯಿಂದ ವಿ. ಬಾಡಗ ಗ್ರಾಮದ ಕಡೆಗೆ ಪ್ರಯಾಣಿಸುತ್ತಿದ್ದಾಗ ಗಣೇಶ, ಪಿಕ್ ಅಪ್ ಚಾಲಕ ತನ್ನ ವಾಹನವನ್ನು ಎದುರುಗಡೆಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ರಸ್ತೆಯ ಮೇಲೆ ಬಿದ್ದು, ಸವಾರ ಗಾಯಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.



Thursday, January 28, 2016

ಅನಾರೋಗ್ಯದ ಹಿನ್ನಲೆ ವ್ಯಕ್ತಿ ಆತ್ಮಹತ್ಯೆ:

     ವಿರಾಜಪೇಟೆ ತಾಲೂಕು ಪಾಲಿಬೆಟ್ಟದ ಕೋಟೆಬೆಟ್ಟ ಟಾಟಾ ಕಾಫಿ ತೋಟದ ಲೈನು ಮನೆಯಲ್ಲಿ ವಾಸವಾಗಿದ್ದ 55 ವರ್ಷ ಪ್ರಾಯದ ಹೊನ್ನಪ್ಪ ಎಂಬವರು ಫಿಡ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27-01-2016 ರಂದು ತೋಟದ ಮನೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು ಸದರಿಯವರನ್ನು ಚಿಕಿತ್ಸೆ ಬಗ್ಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ಸದರಿ ಹೊನ್ನಪ್ಪನವರು ಸಾವನಪ್ಪಿದ್ದು, ಈ ಸಂಬಂಧ ಮೃತರ ಪತ್ನಿ ಶ್ರೀಮತಿ ನಾಗುರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾಲೇಜು ಪ್ರಾಂಶುಪಾಲ ಆತ್ಮಹತ್ಯೆ ಆಡಳಿತ ಮಂಡಲಿ ಕಿರುಕುಳ ಆರೋಪ::
     ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿದ್ದ ವ್ಯಕ್ತಿಯೊಬ್ಬರು ಮಂಗಳೂರಿನ ಲಾಡ್ಜೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಗರಗಂದೂರು ಚನ್ನಮ್ಮ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ, ಪಿರ್ಯಾದಿ ಶ್ರೀಮತಿ ಸ್ನೇಹಲತಾ ಎಂಬವರ  ಪತಿ ಸುದೇಶ್‌ ಇವರಿಗೆ ಈಗ್ಗೆ ಮೂರು ವರ್ಷದಿಂದ ಕಾಲೇಜು ಪ್ರಾಂಶುಪಾಲರಾಗಿದ್ದವರಿಗೆ ಅರೋಪಿ ಗಳಾದ ಕಾಲೇಜು ಅಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯ ಮಂಡಳಿಯವರು ತನ್ನ ಗಂಡನಿಗೆ ಮುಗೇರಾ ಜಾತಿಗೆ ಸೇರಿದ್ದಾಗಿರುವುದರಿಂದ ಇವರಿಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿದ ಕಾರಣ ಅತ್ಮಹತ್ಯೆಗೆ ಪ್ರಚೋದನೆ ಮಾಡಿದ ಕಾರಣ ಸುದೇಶ್‌ರವರು ಮಂಗಳೂರಿನ ಕೆ.ಎಸ್‌.ಅರ್‌.ಟ.ಸಿ ಬಳಿ ಇರುವ ಕೀರ್ತಿ ಲಾಡ್ಜನಲ್ಲಿ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ನೀಡಿದ ದೂರಿನ ಬಗ್ಗೆ ಮಂಗಳೂರು ಊರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಸುಂಟಿಕೊಪ್ಪ ಠಾಣೆಗೆ ವರ್ಗಾಯಿಸಿದ್ದು, ಅದರಂತೆ ಸುಂಟಿಕೊಪ್ಪಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಮನೆ ಕಳವು ಪ್ರಕರಣ ದಾಖಲು:

        ಸೋಮವಾರಪೇಟೆ ತಾಲೂಕು ಹರಗ ಗ್ರಾಮದ ನಿವಾಸಿ ಹೆಚ್.ಟಿ ರಂಜು ರವರ ತಾಯಿ ಸ್ತ್ರೀ ಶಕ್ತಿ ಸಂಘದಿಂದ 65,000/- ಹಣವನ್ನು ಸಾಲ ತಂದು ಮನೆಯಲ್ಲಿಟ್ಟಿದ್ದು ಸದರಿ ಹಣದ ಪೈಕಿ ರೂ. 9,500/- ಗಳನ್ನು ದಿನಾಂಕ 23-1-2016 ಮತ್ತು 24-1-2016ರ ನಡುವೆ ಯಾರೋ ಕಳ್ಳರು ಕಳವು ಮಾಡಿದ್ದು, ಹರಗ ಗ್ರಾಮದ ನಿವಾಸಿ ಮಂಜುನಾಥನವರ ಮೇಲೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಸೂಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tuesday, January 26, 2016

ಮಹಿಳೆಯ ಮೇಲೆ ಹಲ್ಲೆಗೆ ಹತ್ನ, ಕೊಲೆ ಬೆದರಿಕೆ:

     ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ ಪಂಚಾಯ್ತಿ ಅದ್ಯಕ್ಷೆಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ವಾಲ್ನೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 23-1-2016 ರಂದು ಮದ್ಯಾಹ್ನ 02:00 ಗಂಟೆಗೆ ವಾಲ್ನೂರು ಗ್ರಾಮದ ನಿವಾಸಿ ಪಂಚಾಯ್ತಿ ಅಧ್ಯಕ್ಷೆ ನಾಗರತ್ನ ಎಂಬವರು ತನ್ನ ಮಗ ಮಂಜುನಾಥನೊಂದಿಗೆ ಪಂಚಾಯಿತಿ ಕೆಲಸದ ಬಗ್ಗೆ ಪಿ.ಡಿ.ಓ. ರವರ ಜೊತೆ ಹೋಗಿದ್ದಾಗ ಗ್ರಾಮ ಪಂಚಾಯಿತಿ ಸದಸ್ಯ ಭುವನೇಂದ್ರ, ಅವರ ತಮ್ಮ ವಿವೇಕ ಮತ್ತು ಅವರ ತಂದೆ ರಾಮಪ್ಪ ಸೇರಿ ಅಲ್ಲಿಗೆ ಬಂದು ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ಅಲ್ಲದೆ ಮಂಜುನಾಥನವರ ಕುತ್ತಿಗೆಪಟ್ಟಿ ಹಿಡಿದು ಎಳೆದಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವ ವಿಚಾರದಲ್ಲಿ ನ್ಯಾಯಾಲಯದ ಅನುಮತಿ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕಾರುಗಳ ಮುಖಾಮುಖಿ ನಾಲ್ಕು ಮಂದಿಗೆ ಗಾಯ: 

    ದಿನಾಂಕ 24-01-2016 ರಂದು ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿ ಫಿರ್ಯಾದಿ ಸುಂದರೇಶ ಆರಾಧ್ಯ ರವರು ತನ್ನ ಸಂಸಾರ ಸಮೇತ ಮೈಸೂರಿನಿಂದ ಮಂಗಳೂರಿಗೆ ತಮ್ಮ ಬಾಪ್ತು ಡಸ್ಟರ್ ಕಾರು ಸಂಖ್ಯೆ ಕೆಎ-45 ಎಂ-3212 ರಲ್ಲಿ ಹೋಗುತ್ತಿದ್ದಾಗ ರಾತ್ರಿ ಸಮಯ ಸುಮಾರು 11-45 ಪಿ.ಎಂ.ಗೆ ಬೋಯಿಕೇರಿ ಎಂಬಲ್ಲಿ ಎದುರುಗಡೆಯಿಂದ ಒಂದು ಕಾರನ್ನು ಅದರ ಚಾಲಕ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಸುಂದರೇಶರವರು ಚಾಲನೆ ಮಾಡುತ್ತಿದ್ದ ಕಾರಿಗೆ ಢಿಕ್ಕಿ ಪಡಿಸಿದ್ದು, ಪರಿಣಾಮವಾಗಿ ಕಾರಿನಲ್ಲಿದ್ದ ಫಿರ್ಯಾದಿ ಹಾಗೂ ಅವರ ಪತ್ನಿ ಹೇಮಲತಾ, ರೇವಣ್ಣ, ಅತ್ತೆ ರತ್ನಮ್ಮ ರವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೌಟುಂಬಿಕ ಕಲಹ ಪತ್ನಿಯಿಂದ ಪತಿ ಮೇಲೆ ಹಲ್ಲೆ:

    ಪತಿ ಪತ್ನಿ ನಡುವಿನ ಕಲಹದಿಂದ ಪತ್ನಿ ತನ್ನ ಪತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಕುರ್ಚಿಗ್ರಾಮದಲ್ಲಿ ನಡೆದಿದೆ. ಕುರ್ಚಿ ಗ್ರಾಮದ ನಿವಾಸಿ ಅಜ್ಜಮಾಡ ಪೂಣಚ್ಚ ರವರು ಸುಮಾರು 10 ವರ್ಷಗಳ ಹಿಂದಿ ಕವಿತಾ ಎಂಬವರನ್ನು ಮದುವೆಯಾಗಿದ್ದು ಇವರುಗಳ ನಡುವೆ ಆಗಿಂದಾಗ್ಗೆ ಜಗಳವಾಗುತ್ತಿದ್ದು, ದಿನಾಂಕ 24-1-2016 ರಂದು ಪೂಣಚ್ಚರವರ ಮೇಲೆ ಪತ್ನಿ ಕವಿತಾ ಜಗಳ ಮಾಡಿ ಮರದ ಬ್ಯಾಟ್ ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪೂಣಚ್ಚನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಪರಿಚಿತನಿಂದ  ಮೊಬೈಲ್ ದರೋಡೆ:

     ಗೋಣಿಕೊಪ್ಪ ನಗರದ ನಿವಾಸಿ ಉಪನ್ಯಾಸಕಿ ಟಿ.ಎನ್. ಅಕ್ಷತಾ ರವರು ದಿನಾಂಕ 23/01/2016 ರಂದು ಸಂಜೆ 6-45 ಪಿ.ಎಂ ಗೆ ಗೋಣಿಕೊಪ್ಪ ನಗರದ ಹಳೆ ಅಂಚೆ ಕಚೇರಿ ಎದುರು ನಡೆದುಕೊಂಡು ಹೋಗುತ್ತಿರುವಾಗ್ಗೆ ಯಾರೋ ಒಬ್ಬ ದರೋಡೆ ಕೋರ ಅಕ್ಷತಾರವರ ಕೈಯಲಿದ್ದ ಪರ್ಸ ಮತ್ತು ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿ ಪರ್ಸ್ ಕೆಳಗಡೆ ಬಿದ್ದುಹೋಗಿದ್ದು, ಆ ಸಂದರ್ಭದಲ್ಲಿ ರೂ 14000 ರೂ ಬೆಲೆ ಬಾಳುವ ಮೊಬೈಲ್ ಪೊನನ್ನು ಕಿತ್ತುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ರಿಕೇಟ್ ಆಟದ ವಿಚಾರದಲ್ಲಿ ಇಬ್ಬರ ನಡುವೆ ಜಗಳ 2 ಪ್ರಕರಣ ದಾಖಲು:

      ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಿಪೇಟೆಯ ನಿವಾಸಿಗಳಾದ ಡಿ.ಪಿ. ಪ್ರಶಾಂತ್ ಹಾಗು ಡಿ.ಎಸ್. ಅರ್ಪಿತ್ ತಮ್ಮ ಸ್ನೇಹಿತರೊಂದಿಗೆ ದಿನಾಂಕ 23-1-2016 ರಂದು ಸಂಜೆ 4-00 ಗಂಟೆಗೆ ಕೊಡ್ಲಪೇಟೆ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಕ್ರಿಕೇಟ್ ಆಟವಾಡುತ್ತಿದ್ದಾಗ ಡಿ.ಸಿ. ಪ್ರಶಾಂತ್ ಮತ್ತು ಡಿ.ಎಸ್. ಅರ್ಪಿತ್ ನಡುವೆ ಬೌಲಿಂಗ್ ಮಾಡುವ ವಿಚಾರದಲ್ಲಿ ಜಗಳವಾಗಿ ಅರ್ಪಿತ್ ಕ್ರಿಕೇಟ್ ಆಡುವ ವಿಕೇಟ್ ನಿಂದ ಪ್ರಶಾಂತ್ ಮೇಲೆ ಹಲ್ಲೆ ನಡೆಸಿದ್ದು, ಪ್ರಶಾಂತ್ ಒಂದು ದೊಣ್ಣೆಯಿಂದ ಅರ್ಪಿತ್ ಮೇಲೆ ಹಲ್ಲೆ ನಡೆಸಿರುತ್ತಾನೆಂದು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ಪ್ರತ್ಯೇಕ ದೂರುಗಳ ಮೇರೆಗೆ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Monday, January 25, 2016

ಹಳೆ ದ್ವೇಷ ವ್ಯಕ್ತಿ ಮೇಲೆ ಹಲ್ಲೆ: 

     ಹೊಡೆದಾಟದ ಕೇಸಿನಲ್ಲಿ ಆರೋಪಿತರ ವಿರುದ್ದ ವ್ಯಕ್ತಿಯೊಬ್ಬರು ಸಾಕ್ಷಿ ನೀಡಿದ ವಿಚಾರದಲ್ಲಿ ದ್ವೇಷ ಇಟ್ಟುಕೊಂಡು ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. , ದಿನಾಂಕ 24.01.2016 ರಂದು ಗೋಣಿಕೊಪ್ಪ ಠಾಣಾ ಸರಹದ್ದಿನ ಕೈಕೇರಿ ಗ್ರಾಮದ ಈರಣ್ಣ ಕಾಲೋನಿಯಲ್ಲಿ ಸಮಯ 20.30 ಗಂಟೆಗೆ ಆರೋಪಿಗಳಾದ ಸತೀಶ್ ಮತ್ತು ಅಯ್ಯಪ್ಪ ನವರು ಕೆ 12 ಬಿ-0511 ಆಟೋ ರಿಕ್ಷಾದಲ್ಲಿ ಬಂದು, ವಿರಾಜಪೇಟೆ ತಾಲೂಕು ತುಚಮಕೇರಿ ನಿವಾಸಿ ಪಿರ್ಯಾದಿ ಪಿ.ಜಿ. ಪೆಮ್ಮಯ್ಯ ರವರು ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಅವರನ್ನು ತಡೆದು ನಿಲ್ಲಿಸಿ, ಹೊಡೆದಾಟ ಪ್ರಕರಣದಲ್ಲಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಚಿ ನುಡಿದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯೊಬ್ಬರಿಗೆ ಸೇರಿದ ಜಾಗದ ಮೇಲೆ ಸಾಲ ಪಡೆದು ವಂಚನೆ:

     ದಿನಾಂಕ 16-01-2016ರ ಹಿಂದಿನ ದಿನಗಳಲ್ಲಿ ರಂದು ಕುಟ್ಟ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ನಾಲ್ಕೇರಿ ಗ್ರಾಮದ ವಿ.ವಿ. ಸುನಂದ, ವಿ.ವಿ. ಮಂಜುಳ, ಕೆ.ಆರ್. ಮೋಹನ್ ವಿ.ವಿ. ವಂದನ ಮತ್ತು ಯತೀರಾಜ್ ರವರು ಮಡಿಕೇರಿ ನಗರದ ಬ್ರಾಹ್ಮಣಬೀದಿ ನಿವಾಸಿ ಶಂಕರ್ ರಾವ್ ರವರಿಗೆ ಸೇರಿದ ನಾಲ್ಕೇರಿ ಗ್ರಾಮದಲ್ಲಿರುವ 7-00 ಏಕ್ರೆ ಕಾಫಿ ತೋಟದ ಮೇಲೆ ಶಂಕರ್ ರಾವ್ ರವರ ಗಮನಕ್ಕೆ ತಾರದೇ ಶ್ರೀಮಂಗಲದ ಪಿಎಸಿಸಿ ಸೊಸೈಟಿ ಲಿ. ಬ್ಯಾಂಕ್ ನಿಂದ ರೂ 1,13,000 ಹಣವನ್ನು ಸಾಲ ಪಡೆದಿದ್ದು. ಇದಕ್ಕೆ ಬ್ಯಾಂಕ್ ನ ಸಿ.ಇ.ಓ ಸಹಕರಿಸಿದ್ದು, ಪಾರ್ಟೀಶನ್ ಒಪ್ಪಂದದ ನಿಯಮಗಳನ್ನು ಪಾಲಿಸದೆ ವಂಚಿಸಿರುವುದಾಗಿ ಮಾನ್ಯ ಪೊನ್ನಂಪೇಟೆ ನ್ಯಾಯಾಯದಲ್ಲಿ ದೂರು ನೀಡಿದ್ದು ನ್ಯಾಯಾಲಯದ ನಿರ್ದೇಶನದ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Sunday, January 24, 2016

ಆಟೋರಿಕ್ಷಾಕ್ಕೆ ಲಾರಿ ಡಿಕ್ಕಿ ಇಬ್ಬರಿಗೆ ಗಾಯ:
     ಆಟೋ ರಿಕ್ಷಾಕ್ಕೆ ಲಾರಿಯೊಂದು ಡಿಕ್ಕಿಯಾಗಿ ರಿಕ್ಷಾ ಚಾಲಕ ಹಾಗು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಕೊಡ್ಲಿಪೇಟೆ ಯಲ್ಲಿ ನಡೆದಿದೆ. ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಿಪೇಟೆ ಕಲ್ಲಳ್ಳಿ ಗ್ರಾಮದ ನಿವಾಸಿ ಆಟೋ ಚಾಲಕ ಕೆ.ಜೆ. ಹರೀಶ ಎಂಬವರು ದಿನಾಂಕ 23-01-2016 ರಂದು ಸಮಯ ಮಧ್ಯಾಹ್ನ 12:00 ಗಂಟೆಗೆ ತನ್ನ ಬಾಪ್ತು ಆಟೋ ನಂ ಕೆಎ-12-ಎ-8410 ರಲ್ಲಿ ಶಾಂತಪುರ ಗ್ರಾಮದ ನಿವಾಸಿ ಸವಿತಾ ಹಾಗು ಆಕೆಯ ಮಗಳು ಜ್ಯೋತಿ ಮತ್ತು ಚಿಕ್ಕ ಮಗುವಿನೊಂದಿಗೆ ಕೊಡ್ಲೀಪೇಟೆ ಕಡೆಗೆ ಹೋಗುತ್ತಿದ್ದಾಗ ಕೊಡ್ಲಿಪೇಟೆ ಸಾರ್ವಜನಿಕ ರಸ್ತೆಯಲ್ಲಿ ಮಧು, ಲಾರಿ ನಂ ಕೆಎ-46-855 ರ ಚಾಲಕ ಸದರಿ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಆಟೋರಿಕ್ಷಾಗೆ ಡಿಕ್ಕಿಪಡಿಸಿದ ಪರಿಣಾಮ ಆಟೋ ಸಂಪೂರ್ಣವಾಗಿ ಜಖಂಗೊಂಡಿಲ್ಲದೆ ಆಟೋ ಚಾಲಕ ಕೆಳಗೆ ಬಿದ್ದು ಆಟೋದಲ್ಲದ್ದ ಸವಿತ ರವರಿಗೆ ಸೊಂಟ ಮತ್ತು ಬೆನ್ನು ಕುತ್ತಿಗೆ ಬಾಗಕ್ಕೆ ಗಾಯ ಉಂಟಾಗಿ ಹಾಗೆ ಜ್ಯೋತಿ ರವರಿಗೆ ಶರೀರದ ಭಾಗಕ್ಕೆ ನೋವುಂಟಾಗಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಾಕಿ ಹಣದ ವಿಚಾರದಲ್ಲಿ ಜಗಳ, ವ್ಯಕ್ತಿಯಿಂದ ಗಂಡ-ಹೆಂಡತಿ ಮೇಲೆ ಹಲ್ಲೆ:
ಹೊಟೇಲ್ ನಡೆಸುತ್ತಿದ್ದ ದಂಪತಿ ಮೇಲೆ ಬಾಕಿ ಹಣ ಕೇಳಿದ ವಿಚಾರದಲ್ಲಿ ವ್ಯಕ್ತಿಯೋರ್ವ ಅವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಶನಿವಾರಸಂತೆ ಠಾಣಾ ಸರದಹ್ದಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಮುಳ್ಳೂರು ಗ್ರಾಮದಲ್ಲಿ ಶ್ರೀಮತಿ ಕವಿತಾ ಹಾಗು ಆಕೆಯ ಪತಿ ಜಗದೀಶ ರವರು ದಿನಾಂಕ 23-01-2016 ರಂದು ತಮ್ಮ ಹೊಟೇಲ್ ನಲ್ಲಿದ್ದಾಗ ಅದೇ ಗ್ರಾಮದ ಲೋಕೇಶ ಎಂಬ ವ್ಯಕ್ತಿ ಅಲ್ಲಿಗೆ ಬಂದ್ದಿದ್ದು ಆತನು ನೀಡಬೇಕಾದ ಹಳೇ ಬಾಕಿ ಹಣವನ್ನು ಕೊಡುವಂತೆ ಕವಿತಾರವರು ಕೇಳಿದ ಕಾರಣಕ್ಕೆ ಲೋಕೇಶ ಕೋಪಗೊಂಡು ಕವಿತಾರವರನ್ನು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು ಅಲ್ಲದೆ ಕವಿತಾರವರ ಪತಿ ಜಗದೀಶರವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ರಿಕ್ಷಾ – ಕಾರು ನಡುವೆ ಅಪಘಾತ, ಚಾಲಕರು ಸಹಿತ ಇಬ್ಬರು ಮಕ್ಕಳಿಗೆ ಗಾಯ: 

    ರಿಕ್ಷಾವನ್ನು ತಿರುವು ಪಡೆದುಕೊಳ್ಳುವ ವೇಳೆ ಚಾಲಕನ ನಿರ್ಲಕ್ಷ್ಯದಿಂದ ಆಲ್ಟೋ ಕಾರಿಗೆ ಅಪ್ಪಳಿಸಿ ಚಾಲಕರಿಬ್ಬರು ಮತ್ತು ಮಕ್ಕಳಿಬ್ಬರು ಗಾಯಗೊಂಡ ಘಟನೆ ಕುಶಾಲನಗರದ ನಿಸರ್ಗಧಾಮ ಬಳಿ ನಡೆದಿದೆ. ದಿನಾಂಕ 23-1-2016 ರಂದು ಕುಶಾಲನಗರದ ಶಕ್ತಿ ಬಡಾವಣೆ ನಿವಾಸಿ ಎಂ.ಎಸ್. ದಿನೇಶ ಎಂಬವರು ತಮ್ಮ ಆಲ್ಟೋ ಕಾರಿನಲ್ಲಿ ತಮ್ಮ ಚಿಕ್ಕ ಮಕ್ಕಳೊಂದಿಗೆ ಕುಶಾಲನಗರದ ನಿಸರ್ಗಧಾಮದ ಕಡೆಗೆ ಹೊಗುತ್ತಿದ್ದಾಗ ನಿಸರ್ಗಧಾಮದ ಬಳಿ ತಲುಪುವಾಗ್ಗೆ ಆಟೋ ರಿಕ್ಷಾ ನಂ ಕೆ ಎ 12 ಬಿ 1602 ಎ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ತಕ್ಷಣದಲ್ಲಿ ಅಜಾಗರುಕತೆಯಿಂದ ರಸ್ತೆಯ ಎಡಬದಿಯಿಂದ ರಸ್ತೆಯ ಮಧ್ಯಭಾಗಕ್ಕೆ ತಿರುವ ಪಡೆದುಕೊಳ್ಳುವ ಸಲುವಾಗಿ ಬಂದು ಎಂ.ಎಸ್. ದಿನೇಶಯವರ ಆಲ್ಟೋ ಕಾರಿಗೆ ಅಪ್ಪಳಿಸಿದ್ದು , ಪರಿಣಾಮ ವಾಹನವು ತೀವ್ರವಾಗಿ ಜಖಂಗೊಂಡಿದ್ದು ಕಾರಿನಲ್ಲಿದ್ದ ದಿನೇಶ ಹಾಗು ಮಕ್ಕಳಾದ ಚಿರಂತನ ರಾವ್ ಮತ್ತು ಪ್ರಣೀತಾ ರಾವ್ ರವರಿಗೂ ಗಾಯನೋವಾಗಿದ್ದು ಮತ್ತು ಆಟೋ ಚಾಲಕ ರಾಯಪ್ಪನವರಿಗೂ ಗಾಯಗಳಾಗಿದ್ದು ಸದರಿಯವರುಗಳು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು , ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Saturday, January 23, 2016

ಅಕ್ರಮ ಕರ್ಪಚಕ್ಕೆ ದಾಸ್ತಾನು, ಪ್ರಕರಣ ದಾಖಲು:

      ಅಕ್ರಮವಾಗಿ ದಾಸ್ತಾನಿಟ್ಟಿದ್ದ ಕರ್ಪಚಕ್ಕೆಯನ್ನು ಪೊಲೀಸರು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಕಳಕೂರು ಗ್ರಾಮದ ಬಿರುಣಾಣಿ ಎಂಬಲ್ಲಿ ನಾಪೋಕ್ಲು , ಚೆರಿಯಪರಂಬು ನಿವಾಸಿ ಕೆ.ಎ. ಹಂಸ ಹಾಗು ಬಿರುನಾಣಿ ಗ್ರಾಮದ ನಿವಾಸಿ ಗುಡ್ಡಮಾಡ ಸುಧಿ @ ಸೋಮಯ್ಯ ರವರುಗಳು ಅಕ್ರಮವಾಗಿ ಚಕ್ಕೆ ಮರದಿಂದ ಸುಮಾರು 30 ಚೀಲದಲ್ಲಿ ಕರ್ಪಚಕ್ಕೆಯನ್ನು ತುಂಬಿಸಿ ದಾಸ್ತಾನು ಇಟ್ಟಿದ್ದನ್ನು ಕುಟ್ಟ ವೃತ್ತ ನಿರೀಕ್ಷಕರಾದ ಶ್ರೀ. ಸಿ.ಎನ್. ದಿವಾಕರ್ ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿ, ಸ್ವತ್ತನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಜೂಜು, ಪ್ರಕರಣ ದಾಖಲು:

     ಅಕ್ರಮ ಜೂಜು ಅಡ್ಡಮೇಲೆ ದಾಳಿ ಮಾಡಿದ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣದ ದಾಖಲಿಸಿದ್ದಾರೆ. ದಿನಾಂಕ 22-01-2016 ರಂದು ಸಮಯ 20.00 ಗಂಟೆಗೆ ಮಡಿಕೇರಿ ನಗರದ ಕೊಹಿನೂರು ರಸ್ತೆಯಲ್ಲಿರುವ ಮೂಕಾಂಬಿಕ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ವ್ಯಕ್ತಿಗಳಾದ ವಿ.ಜಿ. ಸತೀಶ, ತೇಜಸ್, ಪಿ. ಗಣೇಶ, ಹೆಚ್. ಎಸ್. ಕುಮಾರ ಪಿ. ರವಿಕುಮಾರ್, ಎಸ್.ಟಿ. ರೆಹಮಾನ್, ಮತ್ತು ಕೆ. ಆದರ್ಶ ಎಂಬವರ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಶ್ರೀ ಎಂ.ಎಂ. ಭರತ್ ಹಾಗು ಸಿಬ್ಬಂದಿಗಳು ದಾಳಿ ಮಾಡಿ ಜೂಜಾಟಕ್ಕೆ ಬಳಲಿಸಿದ ರೂ.5400-00 ಗಳನ್ನು ಹಾಗು 7 ಮೊಬೈಲ್ ಫೋನ್ ಉಪಕರಣಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Friday, January 22, 2016

ವರದಕ್ಷಿಣೆ ಕಿರುಕುಳ ಪತಿ ವಿರುದ್ಧ ಪ್ರಕರಣ ದಾಖಲು:

      ವ್ಯಕ್ತಿಯೊಬ್ಬರು ತನ್ನ ಪತ್ನಿಗೆ ವರದಕ್ಷಿಣೆಗಾಗಿ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ತಾವಳಗೇರಿ ಗ್ರಾಮದ ಟಿ.ಶೆಟ್ಟಿಗೇರಿಯಲ್ಲಿ ನಡೆದಿದೆ. ತಾವಳಗೇರಿ ಗ್ರಾಮದ ನಿವಾಸಿ ಶ್ರೀಮತಿ ಸೋನಿ ಎಂಬವರು ದಿನಾಂಕ 15/12/2009 ರಂದು ಕುಟುಂಬದವರ ಒಪ್ಪಿಗೆಯಂತೆ ಸಂಪ್ರದಾಯ ಬದ್ದವಾಗಿ ತಾವಳಗೇರಿ ಗ್ರಾಮದ ಮುರಗೇಶ ಎಂಬುವವರನ್ನು ವಿವಾಹವಾಗಿದ್ದು ವಿವಾಹವಾದ 6 ತಿಂಗಳ ನಂತರ ಶ್ರೀಮತಿ ಸೋನಿಗೆ ಗಂಡ ಮುರುಗೇಶ ಮದ್ಯ ಕುಡಿದು ವಿನಾಕಾರಣ ಜಗಳ ಮಾಡಿ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ನೀಡಿ ಹಣ ನೀಡುವಂತೆ ಪೀಡಿಸುತ್ತಿದ್ದು ಆಕೆಯ ಚಿನ್ನಾಭರಣಗಳನ್ನು ಕಿತ್ತೊಯ್ದು ಕೆಲವನ್ನು ಮಾರಿ ಕೆಲವನ್ನು ಬ್ಯಾಂಕಿನಲ್ಲಿ ಅಡವಿಟ್ಟಿದ್ದು, ಅಲ್ಲದೇ ತವರು ಮನೆಯಿಂದ ಹಣವನ್ನು ತೆಗೆದುಕೊಂಡು ಬಾ ಎಂದು ಪದೇ,ಪದೇ ಹಲ್ಲೆ ನಡೆಸಿ ಶ್ರೀಮತಿ ಸೋನಿರವರ ತವರು ಮನೆಗೆ ಕಳುಹಿಸುತ್ತಿದ್ದು, ದಿನಾಂಕ 14/02/2015 ರಂದು ಸದರಿ ಮುರಗೇಶ ಏಕಾಏಕಿ ಪತ್ನಿ ಸೋನಿಯನ್ನು ಕೊಲ್ಲಲ್ಲು ಪ್ರಯತ್ನಿಸಿದ್ದು ನಂತರ ಆಕೆ ತನ್ನ ರವರು ಮನೆಯಲ್ಲಿ ಆಶ್ರಯ ಪಡಿಡೆದುಕೊಂಡಿದ್ದು, ಅಲ್ಲಿಗೂ ಸಹ ಮುರಗೇಶ ಬಂದು ಅವಾಚ್ಯ ಶಬ್ದಗಳಿಂದ ಬೈದು ಹಣ ತರುವಂತೆ ಸೂಚಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ನಿಲ್ಲಿಸಿದ್ದ ಕಾರಿನ ಟಯರ್ಗಳ ಕಳ್ಳತನ:

     ವ್ಯಕ್ತಿಯೊಬ್ಬರು ತಮ್ಮ ಮನೆಯ ಹತ್ತಿರ ನಿಲ್ಲಿಸಿದ ಕಾರಿನ ಚಕ್ರಗಳನ್ನು ಕಳ್ಳರು ಕಳವುಮಾಡಿದ ಘಟನೆ ಕುಶಾಲನಗರದ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ. ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದ ನಿವಾಸಿ ಎನ್. ಕೆ. ಚಂದ್ರಶೇಖರ ಎಂಬವರು ದಿನಾಂಕ 18-1-2016 ರಂದು ಸಮಯ 10-00 ಪಿ.ಎಂಗೆ ತಮ್ಮ ಬಾಪ್ತು ಮಾರುತಿ ಸುಜುಕಿ ಸ್ವಿಪ್ಟ್ ಕಾರು ನಂ ಕೆಎ 03 ಎಂ 7599 ಕಾರನ್ನು ತಮ್ಮ ಮನೆಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಲಾಕ್ ಮಾಡಿ ನಿಲ್ಲಿಸಿ ಮನೆಗೆ ಹೋಗಿದ್ದು ದಿನಾಂಕ 19-1-2016 ರಂದು ಸಮಯ 07-00 ಎ.ಎಂಗೆ ನೋಡಲಾಗಿ ಅಂದಾಜು ಮೌಲ್ಯ 20,000/- ಬೆಲೆಬಾಳುವ ಕಾರಿನ ನಾಲ್ಕು ಚಕ್ರಗಳನ್ನು ಯಾರೋ ಕಳ್ಳರು ಮ್ಯಾಗ್ ವೀಲ್ ಡಿಸ್ಕ್ ಸಮೇತ ಕಳ್ಳತನ ಮಾಡಿಕೊಂಡು ಹೋಗಿದ್ದು, ಕುಶಾಲನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:

     ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವ್ಯಕ್ತಿಯಿಂದ ಸಿದ್ದಾಪುರ ಪೊಲೀಸರು ಲಾರಿಯನ್ನು ಜಪ್ತಿ ಮಾಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದಿನ ದಿನಾಂಕ 22-1-2016 ರಂದು ಬೆಳಗಿನ ಜಾವ 6-00 ಗಂಟೆಯ ಸಮಯದಲ್ಲಿ ಗೋಣಿಕೊಪ್ಪದ ಚೆನ್ನಂಗೊಲ್ಲಿ ಪೈಸಾರಿ ನಿವಾಸಿ ಅನುಕುಮಾರ್ ಎಂಬವರು ತಮ್ಮ ಬಾಪ್ಸು ನಂ.ಕೆ.ಎಲ್. 17 ಡಿ 7230 ರ ಸ್ವರಾಜ್ ಮಜ್ದಾ ವಾಹನದಲ್ಲಿ ಅಕ್ರಮವಾಗಿ ಸರಕಾರದ ಯಾವುದೇ ಪರವಾನಗಿ ಇಲ್ಲದೇ ಮರಳನ್ನು ತುಂಬಿಸಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದುದನ್ನು ಸಿದ್ದಾಪುರ ಠಾಣಾ ಪಿ.ಎಸ್. ಐ ರವರಾದ ಬಿ.ಜಿ. ಕುಮಾರ್ ಹಾಗು ಸಿಬ್ಬಂದಿಗಳು ಪತ್ತೆಹಚ್ಚಿ ವಾಹನ ಹಾಗೂ ಆರೋಪಿಗಳಾದ ಅನುಕುಮಾರ್ ಮತ್ತು ರೋಷನ್ ರವರನ್ನು ತಮ್ಮ ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿರುತ್ತಾರೆ.

Thursday, January 21, 2016

ಬಿಲ್ ಕಲೆಕ್ಟರ್ ರೊಬ್ಬರಿಂದ  ಸರಕಾರಕ್ಕೆ ಲಕ್ಷಾಂತರ ಹಣ ವಂಚನೆ:

     ನಾಗರೀಕರಿಂದ ವಸೂಲಿ ಮಾಡಿದ ತೆರಿಗೆ ಹಣವನ್ನು ನಗರ ಸಭೆಗೆ ಬಿಲ್ ಕಲೆಕ್ಟರ್ ರೊಬ್ಬರು ಸಂದಾಯ ಮಾಡದೆ ವಂಚಿಸಿದ ಘಟನೆ ಮಡಿಕೇರಿ ನಗರ ಸಭೆಯಲ್ಲಿ ನಡೆದಿದೆ. ಮಡಿಕೇರಿ ನಗರ ಸಭೆಯಲ್ಲಿ 07-08-2009 ರಿಂದ 28-06-2014 ರವರೆಗೆ ಸ್ವಾಮಿ ಎನ್. ಎಂಬುವವರು ಕರ ವಸೂಲಿಗಾರರಾಗಿ ಕರ್ತವ್ಯ ಮಾಡಿಕೊಂಡಿದ್ದು, ಸದರಿಯವರು ನಗರ ಸಭೆಗೆ ಸೇರಿದ ಕಟ್ಟಡ ಮತ್ತು ಇತರ ತೆರಿಗೆ ವಸೂಲಾತಿ ಮಾಡುತ್ತಿದ್ದು, ಈ ಸಂದರ್ಭ ನೀರಿನ ತೆರಿಗೆ, ಮಳಿಗೆಗಳ ಮಾಲೀಕರಿಂದ ಬಾಡಿಗೆ ಹಣವಾಗಿ ಒಟ್ಟು ರೂ 7,09,298/- ಹಣವನ್ನು ವಸೂಲಿ ಮಾಡಿ ಇದರಲ್ಲಿ ನಗರ ಸಭೆಗೆ ಒಟ್ಟು 86,891/- ರೂ ವನ್ನು ಜಮೆ ಮಾಡಿ ಉಳಿದ ಹಣ ರೂ. 6,22,407/- ರೂ ಗಳನ್ನು ನಗರ ಸಭೆಗೆ ವಂಚಿಸಿ ಮೋಸ ಮಾಡಿರುರುತ್ತಾರೆಂದು ನಗರ ಸಭೆಯ ಪೌರಾಯುಕ್ತೆ ಶ್ರೀಮತಿ ಪುಷ್ಪಾವತಿಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗಂಡಸು ಕಾಣೆ:

     ವಿರಾಜಪೇಟೆ ನಗರದ ಪಂಜರು ಪೇಟೆಯ ಕ್ಷೌರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿರಾಜಪೇಟೆ ಗಾಂಧೀನಗರದ ನಿವಾಸಿ ಎಸ್.ಪಿ.ಸೋಮಶೇಖರ್ (26) ರವರು ದಿನಾಂಕ 8-1-2016 ರಿಂದ ಅಂಗಡಿಗೆ ಕೆಲಸಕ್ಕೆ ಬಾರದೆ ಕಾಣೆಯಾಗಿರುತ್ತಾರೆಂದು ಸದರಿಯವರ ಅಣ್ಣ ಎಸ್.ಪಿ ಚಂದ್ರ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವ್ಯಕ್ತಿಯೊಬ್ಬರಿಂದ ಪಿಡಿಓ ರವರ ಕರ್ತವ್ಯಕ್ಕೆ ಅಡ್ಡಿ:

    ಶ್ರೀ ಜಿ.ಎಲ್. ಧನಂಜಯ ಎಂಬವರು ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ರೇಣುಕಾರವರ ಪತಿ ಮೇದಪ್ಪರವರು ದಿನಾಂಕ 05-01-2016 ರಂದು ಮದ್ಯಾಹ್ನ 03.00 ಗಂಟೆ ವೇಳೆಗೆ ಪಂಚಾಯ್ತಿ ಕಛೇರಿಗೆ ಬಂದು ವಿನಾ ಕಾರಣ ಪಿಡಿಓರವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಅವ್ಯಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಒಡ್ಡಿದ್ದು ಅಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಬೈಕ್ ಅಪಘಾತ ಇಬ್ಬರಿಗೆ ಗಾಯ:

     ದಿನಾಂಕ 17-1-2016 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ಅತ್ತೂರು ಗ್ರಾಮದ ನಿವಾಸಿ ಮಂಜು ಹಾಗು ಅವರ ಸ್ನೇಹಿತ ರಮೇಶ್ ರವರುಗಳು ಪೊನ್ನಂಪೇಟೆ ನಗರದ ಕೃಷ್ಣ ಕಾಲೋನಿ ನಿವಾಸಿ ತಮ್ಮಣ್ಣ ಎಂಬವರ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್ ಅಪಘಾತಕ್ಕೀಡಾಗಿ ಫಿರ್ಯಾದಿ ಮಂಜು ಮತ್ತು ರಮೇಶ್ ರವರುಗಳಿಗೆ ಗಾಯಗಳಾಗಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಗಳಿಂದ ಅಕ್ರಮ ಪ್ರವೇಶ, ಅಡಿಕೆ ಕಳ್ಳತನ:

     ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಮುಗುಟಗೇರಿ ಗ್ರಾಮದ ನಿವಾಸಿಗಳಾದ ಎಂ.ಎಂ. ಗಣಪತಿ, ಎಂ.ಜಿ. ಪ್ರಕಾಶ್ ಮತ್ತು ಎಂ.ಜಿ. ಪ್ರಜೀತ್ ರವರುಗಳು ದಿನಾಂಕ 15/11/2015 ರಂದು ಫಿರ್ಯಾದಿ ಎಂ.ಎಂ. ಬೋಪಣ್ಣ ರವರ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ರೂ. 15,000/- ಬೆಲೆ ಬಾಳುವ ಅಡಿಕೆಯನ್ನು ಕಳ್ಳತನ ಮಾಡಿದ್ದು ಇದನ್ನು ವಿಚಾರಿಸಿದ ಫಿರ್ಯಾದಿಯವರನ್ನು ಎಂ.ಎಂ. ಗಣಪತಿ ಮತ್ತು ಎಂ.ಜಿ. ಪ್ರಜೀತ್ ರವರು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Wednesday, January 20, 2016

ಅಪ್ರಾಪ್ತ ಹುಡುಗ ಕಾಣೆ, ಅಪಹರಣ ಶಂಕೆ:
     ಶಾಲೆಗೆ ಹೋದ ಅಪ್ರಾಪ್ತ ಹುಡುಗ ಕಾಣೆಯಾಗಿರುವ ಘಟನೆ ವಿರಾಜಪೇಟೆ ತಾಲೂಕು ಅಮ್ಮತ್ತಿಯಲ್ಲಿ ನಡೆದಿದೆ. ಅಮ್ಮತ್ತಿ ನಗರದ ನಿವಾಸಿ ಫಿರ್ಯಾದಿ ಬ್ರಿಜಿಟ್ ರೀಟಾ ಎಂಬವರ ಮಗ ಪ್ರಾಯ 10 ವರ್ಷದ ಸ್ಕೇಶಿತ್ ಎಂಬುವವರು ಅಮ್ಮತ್ತಿಯ ಪ್ರೌಢ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಾಂಗ ಮಾಡಿಕೊಂಡಿದ್ದು, ದಿನಾಂಕ 18-01-16 ರಂದು ಬೆಳಿಗ್ಗೆ ಸಮಯ 9-00ಗಂಟೆಗೆ ಶಾಲೆಗೆ ಹೋಗಿದ್ದು, ಸಂಜೆ 5-00 ಗಂಟೆ ಯಾದರೂ ವಾಪಾಸ್ಸು ಮನೆಗೆ ಬಾರದೆ, ಪಿರ್ಯಾದಿಯವರು ಆತನನ್ನು ಅಕ್ಕಪಕ್ಕದಲ್ಲಿ, ನೆಂಟರಿಷ್ಟರಲ್ಲಿ ಎಲ್ಲಾ ಕಡೆ ಹುಡು ಕಾಡಿದಲ್ಲು ಪತ್ತೆಯಾಗದೇ ಇದ್ದು ಸ್ನೇಶಿತ್ ನನ್ನು ಯಾರೋ ಅಪಹರಣ ಮಾಡಿರುವ ಸಂಶಯವಿರುವುದಾಗಿ ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

ಹೊಗೆ ಸೊಪ್ಪಿನ ಮನೆಯ ಖಾತೆಯನ್ನು ಬದಲಾಯಿಸಿ ವಂಚನೆ:

    ಕುಶಾಲನಗರ ಠಾಣಾ ವ್ಯಾಪ್ತಿಯ ಶಿರಂಗಾಲ ಗ್ರಾಮದ ನಿವಾಸಿ ಪಿರ್ಯಾದಿ ಎಸ್. ಎ. ಕೃಷ್ಣಪ್ಪ, ನವರ ಸ್ವಾದೀನದಲ್ಲಿರುವ ಹೊಗೆ ಸೊಪ್ಪಿನ ಬ್ಯಾರಲ್ ಮನೆಯನ್ನು ಅವರ ಅಣ್ಣನಾದ ಎಸ್.ಎ.ಚನ್ನರಾಜಪ್ಪವರು ಕಳೆದು ಒಂದು ತಿಂಗಳ ಹಿಂದೆ ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಕುಮಾರ್ ರವರ ಸಹಾಯದಿಂದ ಫಿರ್ಯಾದಿ ಎಸ್. ಎ. ಕೃಷ್ಣಪ್ಪ, ನವರ ಪಾಲಿನ ಅರ್ಧ ಬಾಗ ಹೊಗೆಸೊಪ್ಪಿನ ಮನೆಯನ್ನು ಒಳಗೊಂಡಂತೆ ನಕಲಿ ದಾಖಲೆ ಸೃಷ್ಠಿಸಿ ಹೊಗೆ ಸೊಪ್ಪಿನ ಮನೆಯನ್ನು ಚನ್ನರಾಜಪ್ಪನವರ ಮಗಳಾದ ಪೊನ್ನಮ್ಮ.ಎಸ್.ಸಿ ರವರಿಗೆ ಖಾತೆ ಮಾಡಿಸಿ ಕೊಟ್ಟು ವಂಚಿಸಿರುತ್ತಾರೆಂದು ಫಿರ್ಯಾದಿ ಎಸ್. ಎ. ಕೃಷ್ಣಪ್ಪ, ನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ, ಪ್ರಕರಣ ದಾಖಲು:

    ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ರೀಮಂಗಲ ಠಾಣಾ ಸರಹದ್ದಿನ ಬಲ್ಯಮಂಡೂರು ಗ್ರಾಮದ ನಿವಾಸಿ ಮಾಚಿಮಾಡ ಸುರೇಶ ಎಂಬವರು ತಮ್ಮ ಮನೆಯ ಮುಂದುಗಡೆ ಅಕ್ರಮವಾಗಿ ಮದ್ಯವನ್ನು ಮಾರಾಟಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ದಾಳಿ ನಡೆಸಿ ಆರೋಪಿ ಮಾಚಿಮಾಡ ಸುರೇಶರವರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಟೆಂಪೋ ಟ್ರಾವ್ಲರ್ ಗೆ ಕಾರು ಡಿಕ್ಕಿ, ಪ್ರಕರಣ ದಾಖಲು:

    ಕಾರು ಮತ್ತು ಟೆಂಪೋ ಟ್ರಾವ್ಲರ್ ನಡುವೆ ಅಪಘಾತ ಸಂಭವಿಸಿದ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಮೈಲಿನ ಕೆದಕಲ್ ಗ್ರಾಮದಲ್ಲಿ ನಡೆದಿದೆ. ತಮಿಳುನಾಡಿನ ಕೊಯಮತ್ತೂರುವಿನಂದ ಪ್ರಭು ಎಂಬವರು ತಮ್ಮ ವಾಹನ ಸಂಖ್ಯೆ ಟಿ.ಎನ್ 50 ಎಫ್ 5934 ರ ಟೆಂಪೋ ಟ್ರಾವಲಸ್ ನಲ್ಲಿ ದಿನಾಂಕ 19.01.2016 ರಂದು ಸಮಯ 04.30 ಗಂ<ಟೆಗೆ ಕುಶಾಲನಗರದ ಗೊಲ್ಡನ್ ಟೆಂಪಲ್ನಿಂದ ಮಡಿಕೇರಿಗೆ ಹೋಗುತ್ತಿದ್ದಾಗ ಸುಂಟಿಕೊಪ್ಪದ 7ನೇ ಮೇಲಿಗೆ ತಲುಪುವಾಗ್ಯೇ ಎದುರುಕಡೆಯಿಂದ ಬಂದು ಕಾರು ನಂ ಕೆಎ 04 ಎಂ.ಹೆಚ್ 4370 ರ ಕಾರಿನ ಚಾಲಕನ್ನು ಅತೀವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರಭುರವರು ಚಾಲಯಿಸುತ್ತೀದ ವಾಹನಕ್ಕೆ ಡಿಕ್ಕಿಪಡಿಸಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕತ್ತಿಯಿಂದ ಹಲ್ಲೆನಡೆಸಿ ಮಹಿಳೆ ಕೊಲೆ:

    ದಿನಾಂಕ 19-1-20125 ರಂದು ಕುಶಾಲನಗರ ಠಾಣಾ ಸರಹದ್ದಿನ ಗೋಂದಿಬಸವನಳ್ಳಿ ಗ್ರಾಮದ ನಿವಾಸಿ ಕವಿತಾ ರವರೊಂದಿಗೆ ಜಾನ್ಸನ್ ಹಾಗೂ ಜಗ ಎಂಬವರು ತಮ್ಮ ಮನೆಯ ಹಿಂಬಾಗದ ಅವರ ಹೊಲದಲ್ಲಿ ಗಲಾಟೆ ಮಾಡಿಕೊಂಡು ಜಗನು ಕವಿತಾಳನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದು ಜಾನ್ಸನ್ ಯಾನೆ ಜಾನಿ ತನ್ನ ಅಕ್ರಮ ಸಂಬಂದಕ್ಕೆ ಕವಿತಾ ಅಡ್ಡಿಪಡಿಸುತಿದ್ದ ವಿಚಾರದಲ್ಲಿ ಸದರಿ ಕವಿತಾಳನ್ನು ಕೊಲೆ ಮಾಡಿರುತ್ತಾರೆಂದು ಗುಮ್ಮನಕೊಲ್ಲಿ ನಿವಶಿ ರಾಜೀವ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಆತ್ಮಹತ್ಯೆ:

    ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿಯಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕು ಅಮ್ಮತ್ತಿ ನಗರದ ನಿವಾಸಿ ರಾಜು ಎಂಬವರ ಪತ್ನಿ ಪಾರ್ವತಿ ಎಂಬವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19-1-2015 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಮಾರಿ ಆರ್. ತುಳಸಿ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.









Tuesday, January 19, 2016

ಅತಿಯಾದ ಮದ್ಯಪಾನ, ವ್ಯಕ್ತಿ ಸಾವು:

     ವಿಪರೀತ ಮದ್ಯಪಾನ ಮಾಡಿ ಕಟ್ಟಡವೊಂದರ ವೆರಾಂಡದಲ್ಲಿ ಮಲಗಿದ್ದ ವ್ಯಕ್ತಿ ಸಾವನಪ್ಪಿದ ಘಟನೆ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಾರ್ಮಾಡು ಗ್ರಾಮದಲ್ಲಿ ಮಹೇಶ್ ಯಾನೆ ಮಲ್ಲ ಎಂಬ ವ್ಯಕ್ತಿಯು ಸುಮಾರು 5 ವರ್ಷಗಳಿಂದ ಅಮ್ಮತ್ತಿ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಆತನು ಎ.ಪಿ.ಸಿ.ಎಂ.ಎಸ್. ಕಟ್ಟಡದ ವೆರಾಂಡದಲ್ಲಿ ಮಲಗಿಕೊಳ್ಳುತ್ತಿದ್ದು, ಆತನು ಪ್ರತಿ ದಿವಸ ಕೂಲಿ ಕೆಲಸ ಮಾಡಿಕೊಂಡು ಸಂಜೆ ಸಮಯದಲ್ಲಿ ವಿಪರೀತ ಮದ್ಯಪಾನ ಮಾಡುತ್ತಿದ್ದು, ದಿನಾಂಕ: 17-01-16 ರಂದು ರಾತ್ರಿ ವಿಪರೀತ ಮದ್ಯಪಾನ ಮಾಡಿಕೊಂಡು ಮಲಗಿದ್ದು, ವಿಪರೀತ ಚಳಿಯಿಂದಾಗಿ ಹಾಗೂ ಮದ್ಯಪಾನ ಮಾಡಿದ್ದರಿಂದ ಆತನು ರಾತ್ರಿ ವೇಳೆಯಲ್ಲಿ ಮೃತಪಟ್ಟಿರುತ್ತಾನೆಂದು ಕಾರ್ಮಾಡು ಪಂಚಾಯ್ತಿ ಅಧಿಕಾರಿ ಕೆ.ಎ. ತಮ್ಮಯ್ಯ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ. 

ಪಾದಚಾರಿಗೆ ಮೋಟಾರ್ ಸೈಕಲ್ ಡಿಕ್ಕಿ:

    ಪಾದಚಾರಿಯೊಬ್ಬರಿಗೆ ಮೋಟಾರ್ ಸೈಕಲ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಸಿದ್ದಾಪುರ ಸಮೀಪದ ನೆಲ್ಲಿಹುದಿಕೇರಿಯಲ್ಲಿ ನಡೆದಿದೆ. ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಸೇತುವೆ ಬಳಿ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಎ.ವಿ. ಜೋಸೆಫ್ ಎಂಬವರು ದಿನಾಂಕ 18-1-2016 ರಂದು ರಾತ್ರಿ 8-30 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮುಂಭಾಗದಿಂದ ಮೋಟಾರ್ ಸೈಕಲ್ ಸವಾರನೊಬ್ಬ ತನ್ನ ಮೋಟಾರ್ ಸೈಕಲ್ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎ.ವಿ. ಜೋಸಿಫ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ರಸ್ತೆಮೇಲೆ ಬಿದ್ದು ಗಾಯಗೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿ ಆತ್ಮಹತ್ಯೆ:

      ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ನೇಣಿಗೆ ಶರಣಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕೆ. ನಿಡುಗಣೆ ಗ್ರಾಮದಲ್ಲಿ ನಡೆದಿದೆ. ಕೆ.ಸಿ.ಆಗಸ್ಟಿನ್‌ ಪಾಣತ್ತೂರು, ಕಾಸರಗೋಡು ಇವರು ಹಾಲಿ ಕೆ. ನಿಡುಗಣೆ ಗ್ರಾಮದಲ್ಲಿರುವ ಪಾರ್ವತಿ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಅವರ ತಂದೆಯು ಆಸ್ತಿಯನ್ನು ಯಾರಿಗೋ ಮಾರಾಟ ಮಾಡಿರುವ ವಿಚಾರದಲ್ಲಿ ಮಾನಸಿಕ ಕಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 18.01.2016 ರಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಹ್ಮದ್ ಅಬ್ದುಲ್ಲಾ ಮುನಿರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ಕಾರು ಅಪಘಾತ  ಸಾವನಪ್ಪಿದ ಚಾಲಕ:

    ನಾಪೋಕ್ಲು ಠಾಣಾ ಸರಹದ್ದಿನ ಬೇಂಗೂರು ಗ್ರಾಮದ ನಿವಾಸಿ ಮಂದಪಂಡ ಎನ್. ಪವನ್ ಎಂಬವರು ದಿನಾಂಕ 18-1-2016 ರಂದು ಮದ್ಯಾಹ್ನ ತಮ್ಮ ಬಾಪ್ತು ಕಾರಿನಲ್ಲಿ ಗೋಣಿಕೊಪ್ಪ ದಿಂದ ಬೇಂಗೂರು ಗ್ರಾಮದಲ್ಲಿರುವ ತಮ್ಮ ಮನೆಗೆ ಸ್ನೇಹಿತರಾದ ವಿಜಯ್, ಸುರೇಶ ಮತ್ತು ಸೋಮಯ್ಯರವರೊಂದಿಗೆ ಪ್ರಯಾಣಿಸುತ್ತಿದ್ದಾಗ ಕಾರುಗುಂದ ಗ್ರಾಮದಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡ ಚಾಲಕ ಪವನ್ ರವರನ್ನು ಚಿಕಿತ್ಸೆಗಾಗಿ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಸಮಯದಲ್ಲಿ ಸದರಿ ಪವನ್ ರವರು ಸಾವನಪ್ಪಿದ್ದು, ವಿಜಯ್ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಡಾನೆ ದಾಳಿ ಮಹಿಳೆ ದುರ್ಮರಣ:

     ಶ್ರೀಮತಿ ಮಾರಿಯಮ್ಮ ಗಂಡ ಪಾಳಯ್ಯ,  ಕೂಲಿಕೆಲಸ, ವಾಸ : ಟಾಟಾ ಕಾಫಿ ತೋಟದ ಲೈನ್ಮನೆ, ಪಳ್ಳಕೆರೆ, ಆನಂದಪುರ ತೋಟ. ಇವರು ತಮ್ಮ ಪಕ್ಕದ ಮನೆಯ ನಿವಾಸಿಯಾದ ಕಾಶೀಶ್ವರಿ (40) ನವರೊಂದಿಗೆ ಸಿದ್ದಾಪುರ ಠಾಣಾ ಸರಹದ್ದಿನ ಹಚ್ಚಿನಾಡು ಗ್ರಾಮದ ಸೋಮಯಂಡ ನಾಣಯ್ಯನವರ ಕಾಫಿ ತೋಟದಲ್ಲಿ ಕೆಲಸಕ್ಕೆ ಹೋಗಿದ್ದು, ಕಾಶೀಶ್ವರಿಯವರು ಊಟದ ಬ್ಯಾಗ್‌‌ನ್ನು ರಸ್ತೆಯಲ್ಲಿಟ್ಟಿದ್ದದನ್ನು ತರಲು ಹೋದಾಗ ಕಾಡಾನೆಯು ತೋಟದ ಒಳಗಿನಿಂದ ಬಂದು ರಸ್ತೆಯಲ್ಲಿದ್ದ ಕಾಶೀಶ್ವರಿಯ ಮೇಲೆ ದಾಳಿ ನಡೆಸಿದ್ದು ತೀವ್ರವಾಗಿ ಗಾಯಗೊಂಡ ಸದರಿ ಮಹಿಳೆ ಸಾವನಪ್ಪಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Sunday, January 17, 2016

ಟಿವಿ ವಾಹಿನಿಯ ಅನಧಿಕೃತ ಪ್ರಸಾರ
                 ಅನಧಿಕೃತವಾಗಿ ಟಿ.ವಿ.ವಾಹಿನಿಯ ಪ್ರಸಾರ ಮಾಡುತ್ತಿದ್ದ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ದೂರು ದಾಖಲಾಗಿದೆ. ಗೋಣಿಕೊಪ್ಪ ವಿಭಾಗದಲ್ಲಿ  ಕೂರ್ಗ್‌ ಬ್ರಾಡ್‌ಕ್ಯಾಸ್ಟಿಂಗ್‌ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆಯು ದಿನಾಂಕ 01/04/2015ರಿಂದ ಝೀ ವಾಹಿನಿಯ 26 ಚಾನಲ್‌ಗಳನ್ನು ಝೀ ವಾಹಿನಿಯ ಪ್ರಸಾರದ ಹಕ್ಕನ್ನು ಹೊಂದಿರುವ ತಾಜ್‌ ಟೆಲಿವಿಷನ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ಯಾವುದೇ ಸಂಭಾವನೆಯನ್ನು ಪಾವತಿಸದೆ ಅನಧಿಕೃತವಾಗಿ ಪ್ರಸಾರ ಮಾಡುತ್ತಿರುವುದಾಗಿ ಸಂಸ್ಥೆಯ ಅಧೀಕಾರಿ ಮುಂಬೈನ ಉಪೇಂದ್ರ ನಾಮ್‌ದೇವ್‌ ಜಲ್ಗಾವಕರ್‌ ಎಂಬವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಕೂರ್ಗ್‌ ಬ್ರಾಡ್‌ ಕಾಸ್ಟಿಂಗ್‌ ಸರ್ವಿಸಸ್‌ ಸಂಸ್ಥೆಯ ಪೊನ್ನಪ್ಪ ಕೆ.ಎ. ಎಂಬವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಗೋಸಾಗಾಟ ಪತ್ತೆ.
                 ಅಕ್ರಮವಾಗಿ ಕೇರಳಕ್ಕೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಮದನ್ನು ಕುಟ್ಟ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 16/01/2016ರಂದು ಕುಟ್ಟ ಬಳಿಯ ಪೈತ್‌ ಎಸ್ಟೇಟಿನ ಒಳಭಾಗದಲ್ಲಿ ಸುಮಾರು ರೂ.15,000/- ಬೆಲೆ ಬಾಳುವ ಎರಡು ಗೋವುಗಳನ್ನು ಅಕ್ರಮವಾಗಿ ಕಾಲ್ನಡಿಗೆಯ ಮೂಲಕ ಕೇರಳಕ್ಕೆ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಕುಟ್ಟ ಪಿಎಸ್‌ಐ ಜೆ.ಮಂಜುರವರು ಜಾನುವಾರುಗಳನ್ನು ವಶಪಡಿಸಿಕೊಂಡು ಸಾಗಾಟ ಮಾಡುತ್ತಿದ್ದ ದಿನೇಶ್‌ ಎಂಬಾತನನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ಯುವಕನ ಆತ್ಮಹತ್ಯೆ
                 ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಬಳಿಯ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ಮೈಲಾಥ್‌ಪುರ ಕಾಫಿ ತೋಟದ ಕಾರ್ಮಿಕ ಮಹದೇವ ಎಂಬವರ ಮಗ 19 ವರ್ಷ ಪ್ರಾಯದ ಮಣಿಕಂಠ ಎಂಬಾತನು ದಿನಾಂಕ 16/01/2016ರಂದು ಮನೆಯ ಮಾಡಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಮಾರು 3 ವರ್ಷಗಳಿಂದ ಮಣಿಕಂಠ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದು ಜೀವನದಲ್ಲಿ ಜುಗುಪ್ಸೆಗೊಂಡಿದ್ದು ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ, ಇಬ್ಬರಿಗೆ ಗಾಯ
                    ಬೈಕಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 16-01-16 ರಂದು ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿಗಳಾದ ಸಂತೋಷ್‌ ಮತ್ತು ಅವರ ಸ್ನೇಹಿತ ಅಪ್ಪು ಎಂಬವರು  ಕೆಎ-04-ಇಇ-7060 ರ ಪಲ್ಸರ್‌ ಮೋಟಾರ್ ಬೈಕಿನಲ್ಲಿ ಹರಿಹರ ಗ್ರಾಮದಿಂದ ಬಂದು ಟಿ ಶೆಟ್ಟಿಗೇರಿಯ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಅಪ್ಪುರವರು ಬೈಕನ್ನು ಚಾಲಿಸುತ್ತಾ ಗೋಣಿಕೊಪ್ಪ ಕುಟ್ಟ ಸಾರ್ವಜನಿಕ ರಸ್ತೆಗೆ ಬಂದಾಗ ಕುಟ್ಟ ಕಡೆಯಿಂದ ಬಂದ ಕೆಎಲ್‌ -04 ಎಎಫ್‌-8008 ರ ಕೆಂಪು ಬಣ್ಣದ ಮಾರುತಿ ಸ್ವಿಫ್ಟ್‌ ಕಾರನ್ನು ಅದರ ಚಾಲಕ ಸುಲ್ತಾನ್ ಬತೇರಿಯ ಆಜಾದ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಸಂತೋಷ್‌ ಮತ್ತು ಅವರ ಸ್ನೇಹಿತ ಅಪ್ಪುರವರು ಬೈಕ್‌ ಸಮೇತ ಕೆಳಗಡೆ ಬಿದ್ದಿದ್ದು ತೀವ್ರತರದ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, January 16, 2016

ಬ್ಯಾಂಕ್‌ ಸಿಬ್ಬಂದಿಗಳಿಂದ ಹಣ ದುರುಪಯೋಗ
               ಬ್ಯಾಂಕ್‌ ಸಿಬ್ಬಂದಿಗಳು ಬ್ಯಾಂಕ್‌ ಚಲನ್‌ಗಳ ಮೂಲಕ ಹಣವನ್ನು ದುರುಪಯೋಗಪಡಿಸಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಅನಂತಮೂರ್ತಿ ಎಂಬವರು ಕುಶಾಲನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಶಾಖೆಯಲ್ಲಿ  ಒಂದು ವರ್ಷದಿಂದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ಕಳೆದ 2015 ನೇ ವರ್ಷದ ಕೊನೆಯ ತಿಂಗಳು ತಮ್ಮ ಬ್ಯಾಂಕಿನ ವ್ಯವಹಾರದ ರಿಜಿಸ್ಟರ್ ಮತ್ತು ಚೆಕ್ಕು ಮತ್ತು ಇತರ ವ್ಯವಹಾರದ ಪತ್ರಗಳನ್ನು ಪರಿಶೀಲಿಸಿ ನೋಡಿದಾಗ ಹಣದ ಲೆಕ್ಕದಲ್ಲಿ ರೂ. 7,77,886 ಗಳಷ್ಟು ವ್ಯತ್ಯಾಸವಾಗಿದ್ದು, ತಮ್ಮ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿಗಳು ಬ್ಯಾಂಕ್ ನ ಚಲನ್ ಗಳನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕ್ ಗೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿ ಮಹಿಳೆಗೆ ಮೋಟಾರು ಬೈಕ್‌ ಡಿಕ್ಕಿ
                   ಪಾದಚಾರಿಗೆ ಮೋಟಾರು ಬೈಕ್‌ ಡಿಕ್ಕಿಯಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 14-1-2016 ರಂದು ವಿರಾಜಪೇಟೆಯ ವಿಜಯನಗರ ನಿವಾಸಿ ಎಂ.ಎಸ್‌.ಸಿರಿನ್‌ ಎಂಬವರು ವಿರಾಜಪೇಟೆ ನಗರಕ್ಕೆ ಬಂದು ಕೆಲಸ ಮುಗಿಸಿಕೊಂಡು ವಾಪಾಸು ಮನೆಗೆ ಹೋಗಲೆಂದು ವಿರಾಜಪೇಟೆ ನಗರದ ಖಾಸಗಿ ಬಸ್ಸು ನಿಲ್ದಾಣದ ಮುಂಭಾಗದ ನೀಲಿಮಾ ಸ್ಟೋರ್ ಮುಂದೆ ಸಾರ್ವಜನಿಕರ ರಸ್ತೆಯನ್ನು ಅಡ್ಡ ದಾಟುತ್ತಿರುವಾಗ, ರಸ್ತೆಯ ಮೇಲ್ಭಾಗದ ಕಡೆಯಿಂದ ಮೋಟಾರು ಸೈಕಲ್ ನಂಬರ್ ಕೆಎ-27-ಹೆಚ್.-1829 ರ ಚಾಲಕ ವಿಜು ಎಂಬಾತನು ಮೋಟಾರು ಸೈಕಲನ್ನು ಅತೀ ವೇಗದಿಂದ ಓಡಿಸಿಕೊಂಡು ಬಂದು ಸಿರಿನ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಟಿವಿ ವಾಹಿನಿಯ ಅನಧಿಕೃತ ಪ್ರಸಾರ
                 ಅನಧಿಕೃತವಾಗಿ ಟಿ.ವಿ.ವಾಹಿನಿಯ ಪ್ರಸಾರ ಮಾಡುತ್ತಿದ್ದ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.ಸಿದ್ದಾಪುರ ವಿಭಾಗದಲ್ಲಿ  ಕೊಡಗು ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆಯು ದಿನಾಂಕ 01/04/2015ರಿಂದ ಝೀ ವಾಹಿನಿಯ 26 ಚಾನಲ್‌ಗಳು ಮತ್ತು ಇತರೆ 4 ಸ್ಥಳೀಯ ಚಾನಲ್‌ಗಳನ್ನು ಝೀ ವಾಹಿನಿಯ ಪ್ರಸಾರದ ಹಕ್ಕನ್ನು ಹೊಂದಿರುವ ತಾಜ್‌ ಟೆಲಿವಿಷನ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ಯಾವುದೇ ಸಂಭಾವನೆಯನ್ನು ಪಾವತಿಸದೆ ಅನಧಿಕೃತವಾಗಿ ಪ್ರಸಾರ ಮಾಡುತ್ತಿರುವುದಾಗಿ ಸಂಸ್ಥೆಯ ಅಧೀಕಾರಿ ಮುಂಬೈನ ಉಪೇಂದ್ರ ನಮೋಡಿ ಜಲ್ಗಾವಕರ್‌ ಎಂಬವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಕೊಡಗು ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್‌ ಸಂಸ್ಥೆಯ ದೀಪಕ್‌ ದೇವಯ್ಯ ಎಂಬವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಫಿ ಸಾಗಿಸದೆ ಮೋಸ
                  ಒಪ್ಪಂದಂತೆ ಕಾಫಿ ಸಾಗಿಸದೆ ಮೋಸ ಮಾಡಿದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ. ಬೆಂಗಳೂರಿನ ಮಲ್ಲೇಶ್ವರ ನಿವಾಸಿ ಲಕ್ಷ್ಮೀಕಾಂತ್‌ ಎಂಬವರು ಕಾಫಿ ಸಪ್ಲೈ ಎಂಜೆಂಟ್‌ ಆಗಿ ಕೆಲಸ ಮಾಡುತ್ತಿದ್ದು, ತಮಿಳು ನಾಡಿನ ಹೊಸೂರಿಗೆ 10,000 ಕೆ.ಜಿ ರೋಬಸ್ಟಾ ಚೆರಿ ಕಾಫಿಯನ್ನು ಸಾಗಾಟ ಮಾಡುವ ಬಗ್ಗೆ ಮೈಸೂರಿನ ಮುರಳಿ ಅಂಡ್‌ ಕೋ ಸಂಸ್ಥೆಯ ಅಧಿಕಾರಿಗಳಾದ ನಂದಗೋಪಾಲ್‌ ಎಂಬವರೊಡನೆ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ದಿನಾಂಕ 01/01/2016ರಂದು ಕುಶಾಲನಗರದ ಕೂಡ್ಲೂರುವಿನ ರಾಯಲ್‌ ಟ್ರೇಡರ್ಸ್‌ ಸಂಸ್ಥೆಯ ವತಿಯಿಂದ ಕಾಫಿಯನ್ನು ಹೊಸೂರಿಗೆ ಕಳುಹಿಸಿಕೊಟ್ಟಿದ್ದು ದಿನಾಂಕ 07/01/2016ರ ವರೆಗೂ ಲಾರಿ ಹೊಸೂರು ತಲುಪದ ಕಾರಣ ಮುರಳಿ ಅಂಡ್‌ ಕೋ ಸಂಸ್ಥೆಯ ನಂದಗೋಪಾಲ್‌ ಮತ್ತು ಶಿವಣ್ಣರವರನ್ನು ವಿಚಾರಿಸಿದಾಗ ಅವರು ಲಾರಿ ಹಾನಿಗೊಳಗಾಗಿದ್ದು ತಡವಾಗಿ ಲಾರಿ ತಲುಪಬಹುದೆಂದು ತಿಳಿಸಿದ್ದು ದಿನಾಂಕ 14/01/2016 ಕಳೆದರೂ ಕಾಫಿ ತಲುಪದ ಕಾರಣ ನಂದಗೋಪಾಲ್‌ ಮತ್ತು ಶಿವಣ್ಣರವರ ಮೇಲೆ ದೂರು ನೀಡಿದ್ದು ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ ಡಿಕ್ಕಿ, ಸವಾರ ಸಾವು 
              ಪಾದಚಾರಿಗೆ ಬೈಕೊಂದು ಡಿಕ್ಕಿಯಾಗಿ ಬೈಕ್‌ ಸವಾರ ಸಾವಿಗೀಡಾದ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 14/1/16 ರಂದು ರಾತ್ರಿ 10.00 ಗಂಟೆ ಸುಮಾರಿಗೆ ಕುಶಾಲನಗರದ ಇಂದಿರಾ ಬಡಾವಣೆ ನಿವಾಸಿ ಜಕ್ರಿಯಾ ಎಂಬವರು ಕುಶಾಲನಗರದ ರೈತ ಭವನದ ರಸ್ತೆಯಲ್ಲಿರುವ ತನ್ನ ಕಛೇರಿಯಿಂದ ಇಂದಿರಾ ಬಡಾವಣೆಯಲ್ಲಿರುವ ಮನೆಗೆ ಹೋಗುತ್ತಿರುವಾಗ ಕುಶಾಲನಗರದ ಕಾಳೇಘಾಟ್ ಹೊಟೇಲ್ ಮುಂಭಾಗದ ಬಿ.ಎಂ.ರಸ್ತೆಯಲ್ಲಿ ಬೈಚನಳ್ಳಿ ಕಡೆಯಿಂದ ಕೆಎ-12-ಜೆ-9227ರ ಮೋಟಾರ್ ಸೈಕಲೊಂದನ್ನು ಅದರ ಸವಾರ ರವಿ ಎಂಬಾತನು ಅತಿವೇಗದಿಂದ ಚಾಲಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ವ್ಯಕ್ತಿಯ ಹಿಂಬದಿಗೆ ಡಿಕ್ಕಿಪಡಿಸಿದ್ದು, ಡಿಕ್ಕಿಯಾದ ರಭಸಕ್ಕೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಕಾಲಿಗೆ ಪೆಟ್ಟಾಗಿ ಅಲ್ಲಿಯೇ ಬಿದ್ದು ಹೋಗಿದ್ದು, ಬೈಕ್ ಸವಾರ ರವಿ ಸಹ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿದ್ದು ಜಕ್ರಿಯಾ ಮತ್ತು ಇತರರು ಸೇರಿ  ಬೈಕ್ ಸವಾರ ರವಿ ಮತ್ತು ಬೈಕ್ ಡಿಕ್ಕಿಯಾದ ವ್ಯಕ್ತಿಯನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದಾಗ ವೈದ್ಯರು ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ರವಿಯು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿನೀಡಿದದೂರಿನಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, January 15, 2016

ಬೈಕ್ ಅಪಘಾತ, ಸವಾರನ ದುರ್ಮರಣ, ಪಾದಚಾರಿಗೆ ಗಾಯ:

    ವೇಗದ ಚಾಲನೆಯಿಂದ ಬೈಕ್ ಸವಾರನೊಬ್ಬರ ಪಾದಚಾರಿಗೆ ಡಿಕ್ಕಿಪಡಿಸಿ ತಾನು ರಸ್ತೆಯ ಮೇಲೆ ಬಿದ್ದು ಸಾವನಪ್ಪಿದ ಘಟನೆ ಕುಶಾಲನಗರದ ಕಾಳೇಘಾಟ್ ಹೊಟೇಲ್ ಮುಂದುಗಡೆ ನಡೆದಿದೆ. ದಿನಾಂಕ 14/1/16 ರಂದು ರಾತ್ರಿ 10.00 ಗಂಟೆ ಸುಮಾರಿಗೆ ಕುಶಾಲನಗರದ ಕಾಳೇಘಾಟ್ ಹೊಟೇಲ್ ಮುಂಭಾಗದ ಬಿ.ಎಂ.ರಸ್ತೆಯಲ್ಲಿ ಬೈಚನಳ್ಳಿ ಕಡೆಯಿಂದ ಮೋಟಾರ್ ಸೈಕಲೊಂದನ್ನು ಅದರ ಸವಾರ ಅತಿವೇಗದಿಂದ ಚಾಲಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ವ್ಯಕ್ತಿಯ ಹಿಂಬದಿಗೆ ಡಿಕ್ಕಿಪಡಿಸಿದ್ದು, ಡಿಕ್ಕಿಯಾದ ರಭಸಕ್ಕೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಕಾಲಿಗೆ ಪೆಟ್ಟಾಗಿ ಅಲ್ಲಿಯೇ ಬಿದ್ದು ಹೋಗಿದ್ದು, ಬೈಕ್ ಸವಾರ ಸಹ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿದ್ದು ಗಂಭೀರವಾಗಿ ಗಾಯಗೊಂಡು ಸದರಿಯವರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುವ ವೇಳೆಯಲ್ಲಿ ಬೈಕ್ ಸವಾರ ಕುಶಾಲನಗರದ ಗುಮ್ಮನಕೊಲ್ಲಿ ನಿವಾಸಿ ರವಿ ಮೃತಪಟ್ಟಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಂಗಸು ಮತ್ತು ಮಕ್ಕಳು ಕಾಣೆ:

     ಪೊನ್ನಂಪೇಟೆ ಠಾಣಾ ಸರಹದ್ದಿನ ನಡಿಕೇರಿ ಗ್ರಾಮದ ನಿವಾಸಿ ಪಿರ್ಯಾದಿ ಪಂಜರಿಎರವರ ಸನ್ನುರವರ ಪತ್ನಿ ಪುಪ್ಪ ಮೊದಲನೇ ಮಗಳು ಚೀತೆ 2ನೇ ಮಗ ಕಿರಣ್ ರವರು ದಿನಾಂಕ 1-1-2016 ರಂದು ಬೆಳಿಗ್ಗೆಯಿಂದ ಕಾಣೆಯಾಗಿರುತ್ತಾರೆಂದು ಪಂಜರಿ ಎರವರ ಸನ್ನು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕ್ ಗಳ ನಡುವೆ ಅಪಘಾತ ಮೂವರಿಗೆ ಗಾಯ:

     ಸಕಲೇಶಪುರದ ನಿವಾಸಿ ಎಲ್.ಆರ್. ಗಿರೀಶ ಎಂಬವರು ದಿನಾಂಕ 14-1-2016 ರಂದು ಸಂಜೆ 8-00 ಗಂಟೆಯ ಸಯಮದಲ್ಲಿ ತನ್ನ ಪತ್ನಿ ಹಾಗು ಮಗನೊಂದಿಗೆ ತನ್ನ ಮೋಟಾರ್ ಸೈಕಲ್ ನಲ್ಲಿ ಸೋಮವಾರಪೇಟೆ ಯಿಂದ ಸಕಲೇಶಪುರದ ಕಡೆಗೆ ಹೋಗುತ್ತಿದ್ದಾಗ ಶನಿವಾರಸಂತೆ ಠಾಣಾ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗಿರೀಶರವರು ಚಾಲಿಸುತ್ತಿದ್ದ ಬೈಕ್ ಗೆ ಡಿಕ್ಕಿಪಡಿಸಿದ್ದು, ಸದರಿ ಅಪಘಾತದಲ್ಲಿ ಗಿರೀಶ, ಅವರ ಪತ್ನಿ ಮತ್ತು ಮಗ ಗಾಯಗೊಂಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹೋದರರ ನಡುವೆ ಜಗಳ ತಮ್ಮನ ಮೇಲೆ ಹಲ್ಲೆ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ನಿವಾಸಿಗಳಾದ ಫಿರ್ಯಾದಿ ಮನು ಮತ್ತು ಅವರ ಅಣ್ಣ ರಘುರವರು ಅಕ್ಕ-ಪಕ್ಕದ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಮನು ರವರು ಕಾಫಿ ಒಣಗಿಸುವ ಕಣಕ್ಕೆ ಅಣ್ಣ ರಘು ರವರು ಕೊಳಚೆ ನೀರನ್ನು ಬಿಡುತ್ತಿದ್ದು, ಈ ಬಗ್ಗೆ ಫಿರ್ಯಾದಿಯವರು ಕೇಳಿದ್ದು, ದಿನಾಂಕ: 14.01.2016 ರಂದು ಸಮಯ ಅಂದಾಜು 01-45 ಪಿ.ಎಂ.ಗೆ ಫಿರ್ಯಾದಿಯವರು ಕಾಫಿ ಕಣದಲ್ಲಿ ಕಾಫಿ ಒಣಗಿಸುತ್ತಿರುವಾಗ್ಗೆ ಫಿರ್ಯಾದಿಯ ಅಣ್ಣ ರಘು, ರಘುವಿನ ಅಳಿಯ ದಿವಾಕರ, ರಘುವಿನ ಹೆಂಡತಿ ಸುಬ್ಬಮ್ಮ ಹಾಗೂ ದಿವಾಕರನ ಹೆಂಡತಿ ಸುಮ ರವರುಗಳು ಫಿರ್ಯಾದಿಯವರ ಬಳಿ ಬಂದು ಜಗಳ ತೆಗೆದು ದಿವಾಕರನು ಇಟ್ಟಿಗೆ ತುಂಡಿನಿಂದ ಫಿರ್ಯಾದಿಯ ತಲೆಗೆ ಹೊಡೆದು, ಉಳಿದವರು ಕಾಲಿನಿಂದ ದ್ದು, ಕೈಯಿಂದ ಹೊಡೆದು ನೋವುಂಟು ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿ ವಿವಾದದ ಹಿನ್ನಲೆ ವ್ಯಕ್ತಿ ಮೇಲೆ ಹಲ್ಲೆ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ನಿವಾಸಿಗಳಾದ ಫಿರ್ಯಾದಿ ದಿವಾಕರ ರವರ ಮಾವ ರಘು ಹಾಗೂ ಅವರ ತಮ್ಮ ಮನು ರವರಿಗೆ ಮನೆಯ ಪಾಲು ಪರಿಕತ್ತಿನ ವಿಚಾರದಲ್ಲಿ ವೈಮನಸ್ಸು ಇದ್ದು, ಈ ದಿನ ದಿನಾಂಕ: 14.01.2016 ರಂದು ಸಮಯ ಅಂದಾಜು 01-45 ಪಿ.ಎಂ.ಗೆ ಫಿರ್ಯಾದಿಯವರ ಪತ್ನಿ ಸುಮಾವತಿಯವರನ್ನು ಕುರಿತು ನೀನು ಯಾಕೆ ಬಂದಿರುತ್ತೀಯಾ ಎಂದು ಕೇಳಿ ಒಂದು ಇಟ್ಟಿಗೆ ತುಂಡಿನಿಂದ ಬೀಸಿ ಎಸೆದಿದ್ದು, ಅದನ್ನು ಸುಮಾವತಿಯು ಕೈಯಿಂದ ತಡೆದಾಗ ಅವರ ಕೈಗೆ ತಾಗಿ ಗಾಯವಾಗಿದ್ದು, ನಂತರ ಫಿರ್ಯಾದಿಯವರು ಸುಮಾವತಿಯವರನ್ನು ಹಿಡಿದುಕೊಳ್ಳಲು ಹೋದಾಗ ಮನುರವರು ಒಂದು ಕಾಡು ಕಲ್ಲನ್ನು ಬೀಸಿ ಎಸೆದಿದ್ದು, ಸದರಿ ಕಲ್ಲು ಫಿರ್ಯಾದಿಯವರ ತಲೆಗೆ ತಾಗಿ ಗಾಯವಾಗಿರುವುದಾಗಿ ಫಿರ್ಯಾದಿ ದಿವಾಕರನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರುತಿ ಓಮ್ನಿ ಅವಘಡ, ಇಬ್ಬರಿಗೆ ಗಾಯ:

     ಮಡಿಕೇರಿನಗರದ ದೇಚೂರು ನಿವಾಸಿ ಕೆ.ಆರ್. ಪದ್ಮನಾಭ ಎಂಬವರು ದಿನಾಂಕ 10.01.2016 ರಂದು ತಮ್ಮ ತಾಯಿ ಪದ್ಮಾವತಿ, ಪತ್ನಿ ಮಿತ್ರ ಮತ್ತು ಮಕ್ಕಳಾದ ಸ್ವಾತಿ, ಚೇತನ್ ರವರು ತಮ್ಮ ಭಾವ ರಮೇಶ್ ರವರ ಓಮಿನಿ ಕಾರು ನಂ: ಕೆಎ-12 ಎನ್-8503 ರಲ್ಲಿ ಮಂಗಳೂರು ಕಡೆಯಿಂದ ಮಡಿಕೇರಿಗೆ ಬರುತ್ತಿರುವಾಗ್ಗೆ ಮಡಿಕೇರಿ ಮಂಗಳೂರು ರಸ್ತೆಯ ತಾಳತ್‌ಮನೆಯ ಬಳಿ ತಲುಪುವಾಗ್ಗೆ ಸಮಯ ಸುಮಾರು 11-50 ಪಿ.ಎಂ.ಗೆ ಚಾಲಕ ರಮೇಶ್ ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಣಿ ಎಂಬುವವರ ಮನೆಯ ಕಾಂಪೌಂಡಿಗೆ ಢಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿ ಇದ್ದ ಫಿರ್ಯಾದುದಾರರು ಹಾಗೂ ಅವರ ಪತ್ನಿ ಮಿತ್ರ ರವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Thursday, January 14, 2016

ವೇಗದ ಚಾಲನೆ ಅಪಘಾತಕ್ಕೀಡಾಗಿ ಬೈಕ್ ಸವಾರ ಸಾವು:

    ಸೋಮವಾರಪೇಟೆ ತಾಲೂಕು ಕಾನ್ ಬೈಲು ನಿವಾಸಿ ಜಗದೀಶ ಎಂಬಾತ ದಿನಾಂಕ : 12-01-2016 ರಂದು ನಾಕೂರು ಗ್ರಾಮದಿಂದ ಯಡವಾರೆ ಗ್ರಾಮದ ಅಶೋಕ ಎಂಬವರ ಮನೆಗೆ ಻ದೇ ಗ್ರಾಮದ ವೇಣು ರವರ ಬಾಪ್ತು ಮೋಟಾರು ಸೈಕಲ್ ನಂ : ಕೆಎ-12, ಇ-7061 ರ ಯಮಹಾ ಮೋಟಾರು ಸೈಕಲ್‌ ಲ್ಲಿ ರಾತ್ರಿ ಸಮಯ 21.15 ಗಂಟೆಗೆ ಯಡವಾರೆಯಿಂದ ಹೊರಟು ಸೋಮವಾರಪೇಟೆ ಕಡೆಗೆ ಬರುತ್ತಿದ್ದಾಗ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಯಡವಾರೆ ಗ್ರಾಮದ ಬಳಿಯ ನಾಂಗಾರು ಚಿನ್ನಪ್ಪ ರವರ ಬಾಪ್ತು ಕಾಫಿ ತೋಟದ ಹತ್ತಿರ ವಿದ್ಯುತ್ ಕಂಬಕ್ಕೆ ಮೋಟಾರು ಸೈಕಲನ್ನು ಡಿಕ್ಕಿ ಪಡಿಸಿಕೊಂಡಿದ್ದು, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸದರಿಯವರು ಮೃತಪಟ್ಟಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಗಿದೆ. 

ಅಪ್ರಾಪ್ತ ಬಾಲಕ ಕಾಣೆ: 

    ಶಾಲೆಗೆ ಹೋದ ಬಾಲಕನೋರ್ವ ಕಾಣೆಯಾದ ಘಟನೆ ವಿರಾಜಪೇಟೆ ಸಮೀಪದ ಆರ್ಜಿ ಗ್ರಾಮದಿಂದ ವರದಿಯಾಗಿದೆ. ವಿರಾಜಪೇಟೆ ಠಾಣಾ ಸರಹದ್ದಿಗೆ ಸೇರಿದ ಆರ್ಜಿ ಗ್ರಾಮದ ಕಲ್ಲುಬಾಣೆಯ ಬದ್ರಿಯಾ ಶಾಲೆಗೆ ಫಿರ್ಯಾದಿ ಶ್ರೀಮತಿ ನಸೀರ ಎಂಬವರ ಮಗನಾದ ನಿಯಾಜ್, ಪ್ರಾಯ 16 ವರ್ಷ ಈತ ದಿನಾಂಕ 12.01.2016 ರಂದು ಬೆಳಗ್ಗೆ ಶಾಲೆಗೆಂದು ಹೋದವನು ವಾಫಸ್ಸು ಮನೆಗೂ ಬಾರದೆ ಹಾಗೂ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದು, ಶ್ರೀಮತಿ ನಸೀರರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  

ಕಾರಿಗೆ ಬಸ್ಸು ಡಿಕ್ಕಿ, ಕಾರು ಚಾಲಕನ ಸಾವು:

   ಕಾರು ಮತ್ತು ಬಸ್ಸು ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಸಾವನಪ್ಪಿದ ಘಟನೆ ಕುಶಾಲನಗರದ ಬಸವನಳ್ಳಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದಿದೆ. ದಿನಾಂಕ 13-01-2016ರಂದು ಸಮಯ 11:00ಗಂಟೆಗೆ ಕುಶಾಲನಗರದ ಬಸವನಳ್ಳಿ ಗ್ರಾಮದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕುಶಾಲನಗರದಿಂದ ಮಡಿಕೇರಿ ಕಡೆಗೆ ಒಂದು ನೊಂದಣೆ ಇಲ್ಲದ ಖಾಸಗಿ ಬಸ್ ಅದರ ಚಾಲಕ ಬಸ್ಸನ್ನು ಅತಿವೇಗ ಹಾಗು ಅಜಾಗರುಕತೆಯಿಂದ ಚಾಲಿಸಿಕೊಂಡು ಹೋಗಿ ಮಡಿಕೇರಿಯಿಂದ ಕುಶಲನಗರ ಕಡೆಗೆ ಬರುತ್ತಿದ್ದ ಕಾರ್ ನಂ ಕೆಎ 18 ಎಂ 5259ರ ಪೋರ್ಡ್ ಐಕಾನ್ ಕಾರಿಗೆ ಡಿಕ್ಕಿಯಾದ ಪರಿಣಾಮ ಕಾರು ಬಸ್ಸಿನ ಒಳಗೆ ನುಸುಳಿ ಹೋಗಿದ್ದು , ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರು ಚಾಲಕ ಕೊಣನೂರು ನಿವಾಸಿ ಕುಮಾರ ಎಂಬವರು ಮೃತಪಟ್ಟಿದ್ದು ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಸ್ತಿ ವಿಚಾರದಲ್ಲಿ ಜಗಳ, ಮನೆಗೆ ಅಕ್ರಮ ಪ್ರವೇಶ, ಕೊಲೆ ಬೆದರಿಕೆ:


    ಸೋಮವಾರಪೇಟೆ ತಾಲೋಕು, ಕೊಡ್ಲಿಪೇಟೆ ನಿವಾಸಿ ಫಿರ್ಯಾದಿ ಸಿ.ಬಿ. ಸೋಮನಾಥ ಎಂಬವರು ದಿನಾಂಕ 12-01-2016 ರಂದು ಸಂಜೆ 06-00 ಗಂಟೆಗೆ ಅವರ ಹೆಂಡತಿ ಮತ್ತು ತಮ್ಮ ಗುರುಮೂರ್ತಿ ರವರೊಂದಿಗೆ ಮಾತನಾಡಿಕೊಂಡಿರುವಾಗ್ಗೆ ಆರೋಪಿಗಳಾದ ಸಿ.ಟಿ. ಸುನಿಲ್ ಕುಮಾರ್ ಮತ್ತು ಸಿ.ಬಿ. ತಮ್ಮಯ್ಯ ರವರುಗಳು ಆಸ್ತಿಯ ಪಾಲು ಪಾರಿಕತ್ತಿನ ವಿಚಾರದಲ್ಲಿ ದ್ವೇಷ ಇಟ್ಟುಕೊಂಡು ಕಲ್ಲಿನಿಂದ ಫಿರ್ಯಾದಿಯವರ ಮನೆಯ ಬಾಗಿಲನ್ನು ಹೊಡೆದು ಮುರಿದು ಹಾಕಿ, ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮನೆಯ ವಸ್ತುಗಳನ್ನು ಹಾಳು ಮಾಡಿ ಫಿರ್ಯಾದಿ ಅವರ ಹೆಂಡತಿ ಮತ್ತು ತಮ್ಮನನ್ನು ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ಅತಿಯಾದ ಸಾಲ ವ್ಯಕ್ತಿ ಆತ್ಮಹತ್ಯೆ:

     ಸೋಮವಾರಪೇಟೆ ತಾಲೂಕು ತೋಳೂರು ಶೆಟ್ಟಳ್ಳಿ ಗ್ರಾಮದ ನಿವಾಸಿ ಬಿ.ಕೆ. ರವಿ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 12-1-2016 ರಂದು ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮುದಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿಯವರು ಹಲವು ಬ್ಯಾಂಕುಗಳಲ್ಲಿ ಮತ್ತು ವ್ಯಕ್ತಿಗಳಿಂದ ಸಾಲವನ್ನು ಪಡೆದು ಅದನ್ನು ತೀರಿಸಲು ಅಸಾಧ್ಯವಾದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಅವರ ಪತ್ನಿ ಶ್ರೀಮತಿ ಸವಿತ ರವಿ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Posted byVartika Katiyar, IPS
Wednesday, January 13, 2016

ಮಾರುತಿ ವ್ಯಾನ್ - ಮಹೇಂದ್ರ ಮ್ಯಾಕ್ಸಿಮೋ ನಡುವೆ ಡಿಕ್ಕಿ: 
    ಮಾರುತಿ ವ್ಯಾನ್ ಮತ್ತು ಮಹೇಂದ್ರ ಮ್ಯಾಕ್ಸಿಮೋ ನಡುವೆ ಅಪಘಾತ ಸಂಭವಿಸಿ ಮಾರುತಿ ವ್ಯಾನ್ ಚಾಲಕ ಗಾಯಗೊಂಡ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಚೆರಿಯಪರಂಬು ಗ್ರಾಮದಲ್ಲಿ ನಡೆದಿದೆ. ಮೊಹಮ್ಮದ್ ಆಲಿ ಎಂಬವರು ದಿನಾಂಕ 12-01-2016 ರಂದು ಕೆಲಸದ ನಿಮಿತ್ತ ಕುಂಜಿಲ ಗ್ರಾಮಕ್ಕೆ ಚೆಟ್ಟಳ್ಳಿಯ ಅಬ್ದುಲ್ ಸಲೀಂರವರನ್ನು ಕರೆದುಕೊಂಡು ತನ್ನ ಬಾಪ್ತು ಕೆಎ-12-ಪಿ-8973 ರ ಮಾರುತಿ ಓಮಿನಿ ವ್ಯಾನ್‍ನ್ನು ನಾಪೋಕ್ಲು ಕಡೆಗೆ ಬರುತ್ತಿರುವಾಗ್ಗೆ ಚೆರಿಯಪರಂಬು ರಸ್ತೆ ಕ್ರಾಸ್‍ನಲ್ಲಿ ಸಮಯ 08-30 ಎ.ಎಂ ಗೆ ನಾಪೋಕ್ಲು ಕಡೆಯಿಂದ ಕೆಎ-12-ಬಿ-1763 ರ ವಾಹನವನ್ನು ಅದರ ಚಾಲಕ ಗಿರೀಶ್‍ರವರು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲಿಸಿಕೊಂಡು ಬಂದು ಓಮಿನಿ ವ್ಯಾನ್‍ಗೆ ಡಿಕ್ಕಿ ಪಡಿಸಿದ ಪರಿಣಾಮ ವ್ಯಾನ್‍ ಜಖಂಗೊಂಡು ಮೊಹಮ್ಮದ್ ಆಲಿ ರವರ ಎರಡೂ ಕಾಲಿನ ಮಂಡಿಗೆ, ಮೂಗಿಗೆ, ಹಾಗೂ ಅವರ ಜೊತೆಯಲ್ಲಿದ್ದ ಅಬ್ದುಲ್ ಸಲೀಂರವರ ಬಲಕಣ್ಣಿನ ಹತ್ತಿರ ಹಾಗೂ ಬಲಕೈಯ ಅಂಗೈಗೆ ಗಾಯವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಗೆ ಬೈಕ್ ಡಿಕ್ಕಿ:

     ಶಾಲೆಯಿಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಗೆ ಬೈಕೊಂದು ಡಿಕ್ಕಿಯಾಗಿ ಗಾಯಗೊಂಡಿರುವ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 12-01-2016 ರಂದು ಸಮಯ 4-30 ಪಿ.ಎಂ.ಗೆ ವಿರಾಜಪೇಟೆ ನಗರದ ಶಾಂತಿನಗರದ ನಿವಾಸಿ ಅಸ್ಲಾಂ ಎಂಬವರು ತನ್ನ ಕಿರಿಯ ಮಗಳಾದ 8 ವರ್ಷ ಪ್ರಾಯದ ಐಶಳನ್ನು ಶಾಲೆಯಿಂದ ಕರೆದುಕೊಂಡು ಗೋಣಿಕೊಪ್ಪ ರಸ್ತೆಯ ಶಕ್ತಿ ಡೀಸಲ್ ಮುಂಭಾಗೆ ಎಡಭಾಗದಲ್ಲಿ ನಡೆದುಕೊಂಡು ಮನೆ ಕಡೆಗೆ ಹೋಗುತ್ತಿರುವಾಗ ಸಿದ್ದಾಪುರ ಕಡೆಯಿಂದ ಆರೋಪಿ ತನ್ನ ಮೋಟಾರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಐಶಳಿಗೆ ಡಿಕ್ಕಿಪಡಿಸಿದ ಪರಿಣಾಮ ಆಕೆಯ ಬಲದ ಕೈಗೆ, ಮಂಡಿ ಹಾಗೂ ಕಾಲಿಗೆ ಗಾಯವಾಗಿ ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಮನೆ ಬೋಗ್ಯದ ವಿಚಾರದಲ್ಲಿ ಜಗಳ, ಮಹಿಳೆ ಮೇಲೆ ಹಲ್ಲೆ:
      ದಿನಾಂಕ 08-01-2015ರಂದು ಸಮಯ 08:00ಪಿ ಎಂ ಗೆ ಕುಶಾಲನಗರದ ಮುಳ್ಳುಸೋಗೆ ಗ್ರಾಮದ ನಿವಾಸಿ ಪಿರ್ಯಾದಿ ಕೆ.ಕೆ. ಪ್ರೇಮ ಎಂಬವರು ತಾನು ಬೋಗ್ಯಕ್ಕೆ ಪಡೆದು ವಾಸವಿರುವ ಮನೆಯ ಬೀಗವನ್ನು ತೆರೆಯುವ ಸಂದರ್ಭ ಆರೋಪಿ ಪದ್ಮರವರು ಅಲ್ಲಿಗೆ ಬಂದು ನೀನು ಮನೆಯನ್ನು ಖಾಲಿ ಮಾಡು, ನಿನ್ನ ಬೋಗ್ಯದ ಹಣವನ್ನು ನಾನು ಬಿಸಾಡುತ್ತೇನೆ. ಎಂದು ಜಗಳ ತೆಗೆದು ಕೈಯಲ್ಲಿದ್ದ ಒಂದು ದೊಣ್ಣೆಯಿಂದ ಕೆ.ಕೆ. ಪ್ರೇಮರವರ ಎರಡು ಕೈಗಳಿಗೆ ಹೊಡೆದಿದ್ದಲ್ಲದೇ ಕೈಯಿಂದ ಮುಖಕ್ಕೆ ಗುದ್ದಿ ,ಕಾಲಿನಿಂದ ಮೈಗೆ ಒದ್ದು ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

Tuesday, January 12, 2016

ಪಾದಚಾರಿಗೆ ಬೈಕ್ ಡಿಕ್ಕಿ:

   ಬೈಕೊಂದು ಡಿಕ್ಕಿಯಾಗಿ ಪಾದಚಾರಿಯೊಬ್ಬರಿಯೊಬ್ಬರು ಗಾಯಗೊಂಡಿರುವ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಹುದಿಕೇರಿಯಲ್ಲಿ ನಡೆದಿದೆ. ದಿನಾಂಕ 11/01/16 ರಂದು ಪಿರ್ಯಾದಿ ಚೀಯಣಮಾಡ ಪೂಣಚ್ಚ ಎಂಬವರು ಬೆಳಿಗ್ಗೆ 9:30 ಗಂಟೆಗೆ ಹುದಿಕೇರಿ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಸದರಿಯವರ ಹಿಂಬದಿಯಿಂದ ಕೆಎಲ್-12 4825 ಬಜಾಜ್ ಡಿಸ್ಕವರ್ ನ ಬೈಕ್ ನ ಸವಾರ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಅವರ ಬಲದ ಕಾಲು ಮತ್ತು ಎಡದಭುಜಕ್ಕೆ , ತಲೆಯ ಎಡಭಾಗಕ್ಕೆ ಗಾಯಗಳಾಗಿದ್ದು ಈ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜೀವನದಲ್ಲಿ ಜಿಗುಪ್ಸೆ ಅಪ್ರಾಪ್ತೆ ಆತ್ಮಹತ್ಯೆ:

    ಹೊಟ್ಟೆನೋವಿನಿಂದ ಬಳಲುತ್ತಿದ್ದ ಹುಡುಗಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಪುಲಿಯೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 10-1-2016 ರಂದು ಸಿದ್ದಾಪುರ ಸಮೀಪದ ಪುಲಿಯೇರಿ ಗ್ರಾಮದ ನಿವಾಸಿ ವಿಸ್ಮಯ ಪ್ರಾಯ 16 ವರ್ಷ ಎಂಬಾಕೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯೊಳಗಡೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈಕೆ ಅನಾರೋಗ್ಯದಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶ್ರೀಮತಿ ಬಿಂದುರವರು ನೀಡಿದ ದೂರಿನ ಮೇರೆಗೆ ಸಿಪ್ಪಾಪುರ ಠಾಣೆಯಲ್ಲಿ ಪ್ರಕರಣದ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ:

     ವಿರಾಜಪೇಟೆ ನಗರದ ನೆಹರುನಗರದಲ್ಲಿ ವಾಸವಾಗಿರುವ ವಿ.ಕೆ. ಅನಿಲ್ ಎಂಬವರು ದಿನಾಂಕ 11-1-2015 ರಂದು ನೆಹರು ನಗರದ ನಿವಾಸಿ ಲೋಕೇಶ್ ಎಂಬವರ ಮನೆಯಲ್ಲಿಟ್ಟಿದ್ದ ಗಾರೆ ಸಾಮಾಗ್ರಿಗಳನ್ನು ತರಲೆಂದು ಹೋಗುತ್ತಿದ್ದಾಗ ಲೋಕೇಶರವರು ವಿನಾಕಾರಣ ವಿ.ಕೆ. ಅನಿಲ್ ರವರೊಂದಿಗೆ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆಂದು ಸದರಿ ವಿ.ಕೆ. ಅನಿಲ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Monday, January 11, 2016

ಆಕಸ್ಮಿಕ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು:

     ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ 65 ವರ್ಷ ಪ್ರಾಯದ ವೃದ್ದರೊಬ್ಬರು ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕು ಹೊಸೂರು ಗ್ರಾಮದ ನಿವಾಸಿ ಶ್ರೀಮತಿ ಪಣಿಎರವರ ಕಾಳಿರವರು ತಮ್ಮ ಗಂಡ ಕಡ್ಡಿ ಹಾಗು ಮನೆಯವರೊಂದಿಗೆ ದಿನಾಂಕ 10-01-2016 ರಂದು ಬೆಳಿಗ್ಗೆ 11:00 ಗಂಟೆಗೆ ಬಟ್ಟೆ ತೊಳೆಯಲೆಂದು ಪಕ್ಕದ ಕೆರೆಗೆ ಹೋಗಿದ್ದು ಅದೇ ಸಮಯದಲ್ಲಿ ಕಡ್ಡಿಯವರು ಸ್ನಾನ ಮಾಡಲೆಂದು ಕೆರೆಗೆ ಇಳಿದು ಸ್ನಾನ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಕೆರೆಯೊಳಗೆ ಮುಳುಗಿ ಮೃತಪಟ್ಟಿದ್ದು ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ವಿವಾದಿತ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ, ಕಾಫಿ ಕಳವು:

     ವಿವಾದಿತ ಕಾಫಿ ತೋಟಕ್ಕೆ ಮೂವರು ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ ತೋಟದಲ್ಲಿದ್ದ ಕಾರ್ಮಿಕರನ್ನು ಬೆದರಿಸಿ ಕಾಫಿ ಕುಯ್ದು ಕಳ್ಳತನ ಮಾಡಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಬೀರುಗ ಗ್ರಾಮದಲ್ಲಿ ನಡೆದಿದೆ. ಬೀರುಗ ಗ್ರಾಮದ ನಿವಾಸಿ ಅಜ್ಜಮಾಡ ಚಂಗಪ್ಪ ಎಂಬವರಿಗೆ ಸೇರಿದ ಬೀರುಗ ಗ್ರಾಮದಲ್ಲಿರುವ ವಿವಾದಿತ ಕಾಫಿ ತೋಟದ ಸರ್ವೆ ನಂ 21/01, 21/39, 21/40ರ ಕಾಫಿ ತೋಟಕ್ಕೆ ಆರೋಪಿಗಳಾದ ಎಂ.ಪಿ ಜಾರ್ಜ್, ಅನಿಲ್‌ ಕೋಷಿ, ಕೋಗಿಲೆ, ಇವರುಗಳು ಮೈಸೂರಿನಿಂದ ಟಾಟಾ ಸುಮ, ಕ್ವಾಲೀಸ್‌, ಮತ್ತು ಬೆನ್ಜ್‌ ವಾಹನಗಳಲ್ಲಿ ಸುಮಾರು 50 ಜನರನ್ನು ಕರೆದುಕೊಂಡು ಬಂದು ಅಜ್ಜಮಾಡ ಚಂಗಪ್ಪ ನವರ ಮೇಲ್ಕಾಣಿಸಿದ ಕಾಫಿ ತೋಟದಿಂದ ಕಾಫಿ ಕುಯ್ಯದಿರುವುದಾಗಿ ಮತ್ತು ತೋಟದಲ್ಲಿದ್ದ ಕಾರ್ಮಿಕರಿಗೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರು ಮೇರೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹೆಂಗಸು ಕಾಣೆ, ಪ್ರಕರಣ ದಾಖಲು:

     ಕೆಲಸಕ್ಕೆಂದು ಹೋದ ಮಹಿಳೆಯೊಬ್ಬರು ಕಾಣೆಯಾಗಿರುವ ಘಟನೆ ಮಡಿಕೇರಿ ನಗರದ ಮಂಗಳಾದೇವಿ ನಗರದಲ್ಲಿ ನಡೆದಿದೆ. ಮಂಗಳಾ ದೇವಿ ನಗರದ ನಿವಾಸಿ ಸುರೇಶ್ ಎಂಬವರ ಪತ್ನಿ ಮೀನಾ ಎಂಬವರು ಮಡಿಕೇರಿ ನಗರದ ಕೆಎಸ್ಆರ್ ಟಿಸಿ ಬಸ್ ಡಿಪೋ ಬಳಿ ಇರುವ ಸ್ಪೈಸಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 9-1-2016 ರಂದು ಎಂದಿನಂತೆ ಕೆಲಸಕ್ಕೆ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆಂದು ಆಕೆಯ ತಾಯಿ ಶ್ರೀಮತಿ ಪುಷ್ಪಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Saturday, January 9, 2016

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ:

     ಫಿಡ್ಸ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜಿಗುಪ್ಸೆಗೊಂಡು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಮಡಿಕೇರಿ ನಗರದ ಸುಧರ್ಶನ ಬಡಾವಣೆಯಲ್ಲಿ ವಾಸವಾಗಿರುವ ಶ್ರೀಮತಿ ಬಿ.ಪಿ. ಶಾಂತಾ ಎಂಬವರ ಪತಿ ಶಂಕರೇಗೌಡ ಎಂಬವರು ಬೆಟ್ಟಗೇರಿಯ ಉದಯ ಪ್ರೌಡ ಶಾಲೆಯಲ್ಲಿ ದ್ವಿತೀಯ ದರ್ಜೆಯ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಪಿಡ್ಸ್‌ ಖಾಯಿಲೆ ಇದ್ದು, ವಿಪರೀತವಾಗಿ ಮದ್ಯಪಾನ ಮಾಡುತ್ತಿದ್ದು, ಇದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 8-1-2016 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಶ್ರೀಮತಿ ಶಾಂತಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

  ವಿನಾ ಕಾರಣ ವ್ಯಕ್ತಿಯ ದಾರಿ ತಡೆದು ಹಲ್ಲೆ: 

      ವಿರಾಜಪೇಟೆ ತಾಲೂಕು ನಲ್ವತ್ತೊಕ್ಲು ಗ್ರಾಮದ ನಿವಾಸಿ ಮುಕ್ಕಾಟಿರ ಕುಶಾಲಪ್ಪ ನವರು ದಿನಾಂಕ 08-01-16ರಂದು ಅವರ ಸ್ನೇಹಿತ ಸುನೀಲ್ ಪೂಣಚ್ಚ ರವರ ಮನೆಗೆ ಸಂಜೆ ಸಮಯ 17-30 ಗಂಟೆಗೆ ನಡೆದುಕೊಂಡು ಹೋಗುತ್ತಿರು ವಾಗ, ಅಬ್ದುಲ್ ಸಮ್ಮದ್ ಎಂಬ ವ್ಯಕ್ತಿ ತನ್ನ ಆಟೋ ರಿಕ್ಷಾವನ್ನು ಜೋರಾಗಿ ಚಾಲಿಸಿಕೊಂಡು ಬಂದು ಕುಶಾಲಪ್ಪನವರ ಬಳಿ ನಿಲ್ಲಿಸಿ ದಾರೆ ತಡೆದು ಜಗಳ ಮಾಡಿದ್ದು ಅಲ್ಲದೆ ತಳ್ಳಿ ನೆಲಕ್ಕೆ ಬೀಳಿಸಿರುವುದಲ್ಲದೆ ನಂತರ ಸಮಯ 17-45ಗಂಟೆಗೆ ಅದೇ ಜಾಗಕ್ಕೆ ಅಬ್ದುಲ್ ಸಮ್ಮದ್ 3 ಜನರನ್ನು ಕರೆದುಕೊಂಡು ಬಂದು ದೊಣ್ಣೆ ಹಾಗು ಕೈಗಳಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:               

    ವಿರಾಜಪೇಟೆ ತಾಲೂಕು ನಲ್ವತ್ತೊಕ್ಲು ಗ್ರಾಮದ ನಿವಾಸಿ ಕೆ.ಯು. ಅಬ್ದುಲ್ ಸಮ್ಮದ್ ರವರು ಅದೇ ಗ್ರಾಮದ ನಲ್ಲಚಂಡ ಜಯ,ರವರ ಕಾಫಿ ತೋಟವನ್ನು ಗುತ್ತಿಗೆ ಪಡೆದಿದ್ದು, ದಿನಾಂಕ; 08-01-16ರಂದು ತೋಟದಿಂದ ಹಸಿ ಕಾಫಿಯನ್ನು ತರಲು ಜಯ ರವರ ತೋಟಕ್ಕೆ ಆಟೋ ರಿಕ್ಷಾದಲ್ಲಿ ಹೋಗುತ್ತಿರುವಾಗ ಅದೇ ಗ್ರಾಮದ ಸುನೀಲ್ ಎಂಬವರ ಮನೆಯ ಮುಂದೆ ರಸ್ತೆಗೆ ಅಡ್ಡಲಾಗಿ ಸೈಜ್ ಕಲ್ಲುಗಳನ್ನು ಇಟ್ಟಿದ್ದು, ಸದರಿ ಕಲ್ಲುಗಳನ್ನು ಬದಿಗೆ ಸರಿಸಿ ತೋಟಕ್ಕೆ ಹೋಗಿ ಕಾಫಿ ತಂದು ಮನೆಗೆ ಇಟ್ಟು ಪುನ: ಜಯ ರವರ ತೋಟಕ್ಕೆ ಕಾಫಿಯನ್ನು ತರಲು ಹೋಗುತ್ತಿರುವಾಗ ಸಮಯ ಸಂಜೆ 17-30ಗಂಟೆಗೆ ಕಲ್ಲನ್ನು ರಸ್ತೆಗೆ ಇಟ್ಟಿದ್ದ ಸ್ಥಳದಲ್ಲಿ ರೋಪಿಗಳಾದ ಕುಶಾಲಪ್ಪ,ಸುನೀಲ್ ಪೂಣಚ್ಚ, ಅಚ್ಚಯ್ಯ, ರವರುಗಳು ಇದ್ದು, ಪಿರ್ಯಾದಿ ಯವರನ್ನು ದಾರಿ ತಡೆದು ದಾರಿಯಲ್ಲಿ ಇಟ್ಟಿದ್ದ ಕಲ್ಲನ್ನು ತೆಗೆದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಒಂದು ಕಾಡು ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ನೋವು ಪಡಿಸಿದ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮದ್ಯದ ಅಮಲಿನಲ್ಲಿ ವ್ಯಕ್ತಿ ಮೇಲೆ ಹಲ್ಲೆ:

    ಮದ್ಯಪಾನ ಮಾಡಿದ ಇಬ್ಬರು ವ್ಯಕ್ತಿಗಳ ನಡುವೆ ಜಗಳವಾಗಿ ಒಬ್ಬಾತ ಮತ್ತೊಬ್ಬನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಸೋಮವಾರಪೇಟೆ ತಾಲೂಕು ಬಜೆಗುಂಡಿ ಗ್ರಾಮದಲ್ಲಿ ನಡೆದಿದೆ., ದಿನಾಂಕ 8-01-2016 ರಂದು ಸಮಯ ರಾತ್ರಿ 9.00 ಗಂಟೆಗೆ ಪಿರ್ಯಾದಿ ಚಂದನ್ ರವರು ಅವರ ಮನೆಯ ಪಕ್ಕ ರಜನಿ ಎಂಬವರೊಂದಿಗೆ ಮಾಮುಲಿಯಂತೆ ಮಾತನಾಡಿಕೊಂಡಿರುವಾಗ ಇಬ್ಬರಿಗು ಮಾತಿಗೆ ಮಾತಾಗಿ ಇಬ್ಬರು ಮದ್ಯಪಾನ ಮಾಡಿದ್ದರಿಂದ ಏಕಾಏಕಿ ರಜನಿ ಅಲ್ಲೇ ಬಿದ್ದಿದ್ದ ಕಲ್ಲಿನಿಂದ ಪಿರ್ಯಾದಿ ಚಂದನ್ ರವರ ಎಡ ಹಣೆಯ ಭಾಗಕ್ಕೆ ಹೊಡೆದು ಹಣೆಯ ಭಾಗಕ್ಕೆ ಗಾಯಪಡಿಸಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, January 7, 2016

ಬ್ಯಾಂಕ್ ಖಾತೆ ವಿವರ ಪಡೆದು ವಂಚನೆ:

     ಅಪರಿಚಿತ ವ್ಯಕ್ತಿಯೊಬ್ಬರು ತಾನು ಬ್ಯಾಂಕ್ ಮೇನೇಜರ್ ಎಂಬುದಾಗಿ ದೂರವಾಣಿ ಮೂಲಕ ಮಹಿಳೆಯೊಬ್ಬರಿಂದ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು ಹಣ ಡ್ರಾ ಮಾಡಿ ವಂಚಿಸಿದ ಘಟನೆ ಮಡಿಕೇರಿ ನಗರ ಠಾಣೆಯಲ್ಲಿ ವರದಿಯಾಗಿದೆ. ಮಡಿಕೇರಿ ನಗರ ಠಾಣಾ ಸರಹದ್ದಿನ ಗದ್ದಿಗೆ ಬಳಿ ವಾಸವಾಗಿರುವ ಶ್ರೀಮತಿ ಜುಬೈದಾ ಎಂಬವರು ಇಂಡಿಯನ್ ಓವರ್‌ ಸಿಸ್‌ ಬ್ಯಾಂಕಿನಲ್ಲಿ ತಮ್ಮಹಾಗು ತಮ್ಮ ಗಂಡನ ಹೆಸರಿನಲ್ಲಿ  ಜಂಟಿ ಖಾತೆಯನ್ನು ಹೊಂದಿದ್ದು,    ದಿನಾಂಕ 06-01-2016 ರಂದು ಶ್ರೀಮತಿ ಜುಬೈದಾರವರ ಮೊಬೈಲ್‌ಗೆ  ಕರೆಮಾಡಿದ ಯಾರೊ ಒಬ್ಬ ವ್ಯಕ್ತಿ ಹಿಂದಿ ಹಾಗು ಕನ್ನಡ ಬಾಷೆಯಲ್ಲಿ ಮಾತನಾಡುತ್ತ ನಾನು ಇಂಡಿಯನ್ ಓವರ್ಸಿಸ್ ಬ್ಯಾಂಕಿನ ಮ್ಯಾನೇಜರ್ ಎಂದು ಹೇಳಿ ನಿಮ್ಮ ಎ.ಟಿ.ಎಂ ಕಾರ್ಡ ಬ್ಲಾಕ್ ಆಗಿದೆ ಎಂದು ತಿಳಿಸಿ ಎ.ಟಿ.ಎಂ ಕಾರ್ಡ್‌ ಹಾಗು ಪಿನ್‌ ನಂಬರ್‌ನ್ನು ಪಡೆದುಕೊಂಡು ಶ್ರೀಮತಿ ಜುಬೈದಾರವರ ಬ್ಯಾಂಕ್ ಖಾತೆಯಿಂದ ಕ್ರಮವಾಗಿ 8 ಭಾರಿ ರೂ. 4,510=00, 2,510=00, 1,010=00, 510=00, 5,010=00, 5,010=00, 5,010=00, ಮತ್ತು 5,010=00 ರೂಗಳಂತೆ ಒಟ್ಟು 28,580=00 ರೂಪಾಯಿ ಹಣ ಡ್ರಾ ಮಾಡಿ ವಂಚಿಸಿರುತ್ತಾರೆಂದು ಸದರಿ ಶ್ರೀಮತಿ ಜುಬೈದಾರವರು ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ ಹಿನ್ನೆಲೆ, ವ್ಯಕ್ತಿಗಳಿಂದ ಅಕ್ರಮ ಪ್ರವೇಶ, ಆಸ್ತಿ ಹಾನಿ, ಕೊಲೆ ಬೆದರಿಕೆ:
    ಆಸ್ತಿ ವಿವಾದದ ಹಿನ್ನಲೆಯಲ್ಲಿ ಸುಮಾರು 10-15 ಜನರು ಮಹಿಳೆಯೊಬ್ಬರಿಗೆ ಸೇರಿದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಕಾಫಿ, ಮೆಣಸು ಕೃಷಿಯನ್ನು ಕಿತ್ತು ನಷ್ಟ ಪಡಿಸಿ ಪಸಲನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 6-1-2016 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದ ಶ್ರೀಮತಿ ಕಳ್ಳೆಂಗಡ ಲತಾ ಎಂಬುವವರಿಗೆ ಸೇರಿದ ಜಾಗದಲ್ಲಿ ಆರೋಪಿಗಳಾದ ಶ್ರೀಮತಿ ಕಮಲಾಕ್ಷಿ, ಶ್ರೀಮತಿ ಪ್ರೇಮ, ಪ್ರವೀಣ್, ಚೋಡುಮಾಡ ಶರೀನ್ ಸುಬ್ಬಯ್ಯ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಚೋಡುಮಾಡ ಸೂರಜ್ ಸುಬ್ಬಯ್ಯ, ಅಳಮೇಂಗಡ ಬೋಸ್ ಮಂದಣ್ಣ, ಕಾಟಿಮಾಡ ಶರಿನ್, ಮಲ್ಲೇಂಗಡ ಜೀವನ್, ಮಲ್ಲೇಂಗಡ ವಿನಸ್, ಮುಕ್ಕಾಟಿರ ಸೋಮಯ್ಯ, ಪಿ.ಎ. ಪ್ರಭುಕುಮಾರ್, ಪೋರಂಗಡ ಡಾಲಿ ಚಿಟ್ಟಿಯಪ್ಪ ಹಾಗು ಇನ್ನಿತರರು ಸೇರಿ ಅಕ್ರಮ ಪ್ರವೇಶ ಮಾಡಿ ತೋಟಕ್ಕೆ ಅಳವಡಿಸಿದ ತಂತಿಬೇಲಿಯನ್ನು ಕಿತ್ತು, ತೋಟದಲ್ಲಿ ಬೆಳೆದ ಕಾಫಿ, ಮೆಣಸು ಬಳ್ಳಿಗಳನ್ನು ಕಿತ್ತು ನಷ್ಟ ಪಡಿಸಿದ್ದು, ತೋಟದಲ್ಲಿದ್ದ ಕಾಫಿ ಮತ್ತು ಅಡಿಕೆಯನ್ನು ತೆಗೆದು ಕಳ್ಳತನ ಮಾಡಿದ್ದು, ಅಲ್ಲದೆ ಫಿರ್ಯಾದಿ ಶ್ರೀಮತಿ ಕಳ್ಳೇಂಗಡ ಲತಾ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನ್ಯಾಯಾಲಯದಲ್ಲಿ ಸಲ್ಲಿಸಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Wednesday, January 6, 2016

ಪರಸ್ಪರ ಸ್ಕೂಟರ್‌ ಡಿಕ್ಕಿ; ಇಬ್ಬರಿಗೆ ಗಾಯ
                    ಪರಸ್ಪರ ಸ್ಕೂಟರ್‌ಗಳು ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 05/01/2016ರಂದು ಸೋಮವಾರಪೇಟೆ ನಗರದ ಬಸವೇಶ್ವರ ರಸ್ತೆ ನಿವಾಸಿ ಪ್ರವೀಣ ಎಂಬವರು ಅವರ ಸ್ನೇಹಿತ ದಿನೇಶ್ ರವರೊಂದಿಗೆ ಕೆಎ-02-ಕ್ಯೂ-9086 ರ ಸ್ಕೂಟರ್ ನಲ್ಲಿ ಹಾಲು ತರುವ ಸಲುವಾಗಿ ಸೋಮವಾರಪೇಟೆಗೆ ಬಂದು ಹಾಲು ತೆಗೆದುಕೊಂಡು ಮನೆಗೆ ಹೋಗುತ್ತಿರುವಾಗ ಸ್ಕೂಟರ್ ಅನ್ನು ದಿನೇಶ್ ರವರು ಓಡಿಸುತ್ತಿದ್ದು ನಗರದ ಗಾಂಧಿ ವೃತ್ತದ ಬಳಿ ಮುಂದಿನಿಂದ ಜಗದೀಶ್ ಎಂಬವರು ಕೆಎ-12-ಕ್ಯೂ-0851ರ ಸ್ಕೂಟಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ದಿನೇಶ್‌ರವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪ್ರವೀಣ ಮತ್ತು ಜಗದೀಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪತಿ ಪತ್ನಿ ಮೇಲೆ ಹಲ್ಲೆ
                      ನಡೆದುಕೊಂಡು ಹೋಗುತ್ತಿದ್ದ ಪತಿ ಹಾಗೂ ಪತ್ನಿಯ ಮೇಲೆ ಇಬ್ಬರು ಹಲ್ಲೆ ನಡೆಸಿದ ಘಟನೆ ಮಡಿಕೇರಿ ಸಮೀಪ ಅರುವತೊಕ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 05/01/2016ರಂದು ಅರುವತೊಕ್ಲು ನಿವಾಸಿ ಅನಿತಾ ಮತ್ತು ಅವರ ಗಂಡ ಸೀನಪ್ಪರವರು ನಡೆದುಕೊಂಡು ಬರುವಾಗ ಅದೇ ಗ್ರಾಮದವರಾದ ತೆನ್ನೀರ ಶಶಿ ಮತ್ತು ಮುಂಜಾಂದಿರ ಬೋಪು ನಾಣಯ್ಯನವರು ಒಂದು ಕಾರಿನಲ್ಲಿ ಬಂದು ಅನಿತಾರವರ ಕೈಹಿಡಿದು ಎಳೆದಾಡಿ, ಪಕ್ಕದ ತೋಟಕ್ಕೆ ಎಳೆದುಕೊಂಡು ಹೋಗುವಾಗ ತಡೆಯಲು ಬಂದ ಸೀನಪ್ಪರವರಿಗೆ  ಕಲ್ಲಿನಿಂದ ಮೂಗಿಗೆ ಹೊಡೆದು ಗಾಯಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣದ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                       ಹಣದ ವಿಚಾರವಾಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಭಾಗಮಂಡಲ ಬಳಿಯ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 05/01/2016ರಂದು ಅಯ್ಯಂಗೇರಿ ಗ್ರಾಮದ ಮಹಮದ್‌ ಎಂಬವರ ಕಾಫಿ ಗೋಡಾನಿನ ಬಳಿ ಅಯ್ಯಂಗೇರಿ ಗ್ರಾಮದ ಪಿ.ಎಸ್‌.ಮಹಮದ್‌ ಎಂಬವರಿಗೆ ಕುಂಞಿ ಅಹಮದ್‌ ಎಂಬವರು ಸಿಕ್ಕಿದಾಗ ಕುಂಞಿ ಅಹಮದ್‌ರವರು ನೀಡ ಬೇಕಾದ ಬಾಕಿ ಹಣ ರೂ.10,000/-ವನ್ನು ಪಿ.ಎಸ್‌.ಮಹಮದ್‌ರವರು ವಾಪಾಸು ಕೇಳಿದಾಗ ಕುಂಞಿ ಅಹಮದ್‌ರವರು ಜಗಳವಾಡಿ ಪಿ.ಎಸ್‌.ಮಹಮದ್‌ರವರಿಗೆ ಹಲ್ಲೆ ಮಾಡಿರುವುದಾಗಿ ನೀಡಿದ  ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಲಾರಿ ಡಿಕ್ಕಿ
                  ಬೈಕಿಗೆ ಲಾರಿಯೊಂದು ಡಿಕ್ಕಿಯಾದ ಘಟನೆ ವಿರಾಜಪೇಟೆ ಬಳಿಯ ಮಾಕುಟ್ಟದಲ್ಲಿ ನಡೆದಿದೆ. ಪಿರಿಯಾಪಟ್ನ ನಿವಾಸಿ ಎನ್‌.ಜಿ.ಅಣ್ಣಯ್ಯ ಎಂಬವರು ಕೇರಳ ರಾಜ್ಯದ ಪೆರಾವೂರಿನ ರಶ್ಮಿ ಆಸ್ಪತ್ರೆಯಲ್ಲಿ ಸುಮಾರು 6 ವರ್ಷದಿಂದ ಕೆಲಸ ಮಾಡಿ ಕೊಂಡಿದ್ದು, ದಿನಾಂಕ: 02-01-16 ರಂದು  ಶಬರಿಮಲೈ ಯಾತ್ರೆಗೆ ಹೋಗುವ ಬಗ್ಗೆ ತಂದೆ ತಾಯಿಯವರಿಗೆ ತಿಳಿಸಲು  ಆಸ್ಪತ್ರೆಯ ವೈದ್ಯರಾದ ಕಮಲ್ ರವರ ಬಾಪ್ತು ಕೆಎ-36-ಯು-4794 ಮೋಟಾರ್ ಸೈಕಲಿನಲ್ಲಿ ನೀಲವಾಡಿ ಗ್ರಾಮಕ್ಕೆ ಬಂದು ವಾಪಾಸು ದಿನಾಂಕ: 03-01-16ರಂದು ಬೆಳಿಗ್ಗೆ ಮನೆಯಿಂದ ಪೆರಾವೂರಿಗೆ ಮಾಕುಟ್ಟದ ಬಳಿ ತಲುಪುವಾಗ ಎದುರುಗಡೆಯಿಂದ ಲಾರಿ ನಂ.ಡಬ್ಲ್ಯೂಬಿ-41-ಜಿ-8922ರ ಚಾಲಕ ಶಬೀರ್‌ ಮಲ್ಲಿಕ ಎಂಬಾತನು ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಣ್ಣಯ್ಯನವರು ಚಾಲನೆ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಅಣ್ಣಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಮೋಟಾರು ಬೈಕ್‌ ಡಿಕ್ಕಿ
                   ನಿಲ್ಲಿಸಿದ್ದ ಕಾರಿಗೆ ಮೋಟಾರು ಬೈಕನ್ನು ಡಿಕ್ಕಿಪಡಿಸಿದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ಬಿ.ಆರ್‌.ಶೆಟ್ಟಿ ಎಂಬವರು ದಿನಾಂಕ 05-01-2016 ರಂದು ಬೆಳಿಗ್ಗೆ ವಿರಾಜಪೇಟೆ ನಗರದ ಆತ್ರೇಯ ಆಸ್ವತ್ರೆಯ ಮುಂಭಾಗದ ಸಾರ್ವಜನಿಕ ರಸ್ತೆಯ ಎಡ ಭಾಗದಲ್ಲಿ ಅವರ ಬಾಪ್ತು KA-19 MF -763 ರ ಕಾರನ್ನು ನಿಲ್ಲಿಸಿ ಕಾಫಿ ಕುಡಿಯಲು ಹೋದ ವೇಳೆ ಯಾರೋ ಒಬ್ಬಅಪರಿಚಿತ ಮೋಟಾರ್ ಬೈಕ್ ಸವಾರ ಆತನ ಮೋಟಾರ್ ಬೈಕ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಶೆಟ್ಟಿಯವರ ಕಾರಿಗೆ ಡಿಕ್ಕಿ ಪಡಿಸಿ ಜಖಂಪಡಿಸಿದಲ್ಲದೆ ಮೋಟಾರ್ ಬೈಕ್ ಅನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ
                        ಅಕ್ರಮವಾಗಿ ಮರಳು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಶನಿವಾರಸಂತೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 05.01.2016 ರಂದು ಕೊಡ್ಲಿಪೇಟೆ ಉಪ ಠಾಣೆಯ ಸಿಬ್ಬಂದಿ ಸೋಮಶೇಖರ್‌ರವರು ಕೊಡ್ಲಿಪೇಟೆ ಉಪ ಠಾಣೆಯಲ್ಲಿರುವಾಗ ಬೆಳಗಿನ ಜಾವ ನ್ಯಾಯದ ಹಳ್ಳ ಹೊಳೆಯಿಂದ ಬೆಸೂರು ಗ್ರಾಮದ ಕಡೆಗೆ ಒಂದು ಟ್ರಾಕ್ಟರ್ ನಲ್ಲಿ ಮರಳನ್ನು ಕಳವು ಮಾಡಿಕೊಂಡು ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಮುಖ್ಯ ಆರಕ್ಷಕ ಸೋಮಶೇಖರ್‌ರವರು ಸ್ಥಳಕ್ಕೆ ಹೋದಾಗ ಮರಳು ತುಂಬಿಸಿಕೊಂಡು ಒಂದು ಟ್ರ್ಯಾಕ್ಟರ್ ಹೋಗುತ್ತಿದ್ದು, ಅದನ್ನು ಹಿಂಬಾಲಿಸಿಕೊಂಡು ಹೋಗಿ ಟ್ರಾಕ್ಟರ್ ಚಾಲಕನಿಗೆ ಟ್ರಾಕ್ಟರ್ ಅನ್ನು ನಿಲ್ಲಿಸುವಂತೆ ಸೂಚಿಸಿದಾಗ ಆತನು ಸ್ವಲ್ಪ ದೂರ ಮುಂದಕ್ಕೆ ಹೋಗಿ ಟ್ರಾಕ್ಟರ್ ಅನ್ನು ನಿಲ್ಲಿಸಿ ಓಡಿ ಹೋಗಿದ್ದು ನಂತರ ಪರಿಶೀಲಿಸಲಾಗಿ ಟ್ರ್ಯಾಕ್ಟರ್ ನಂಬರ್ ಕೆ.ಎ-12-ಟಿ-4602 ಆಗಿದ್ದು ಟ್ರ್ಯಾಕ್ಟರ್ ಚಾಲಕನು ಸರ್ಕಾರದ ಸೊತ್ತಾದ ಮರಳನ್ನು ಸಂಬಂಧ ಪಟ್ಟ ಇಲಾಖೆಯಲ್ಲಿ ಯಾವುದೇ ಪರವಾನಿಗೆಯನ್ನು ಪಡೆಯದೇ ಸುಮಾರು 5,000/- ಮೌಲ್ಯದ ಮರಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ದೇವಸ್ಥಾನ ಕಳವು ಯತ್ನ
                            ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಲು ಯತ್ನಿಸಿದ ಘಟನೆ ಶನಿವಾರಸಂತೆ ಬಳಿಯ ಕೊಡ್ಲಿಪೇಟೆಯಲ್ಲಿ ನಡೆದಿದೆ. ದಿನಾಂಕ 05-01-2016 ರಂದು ಬೆಳಗಿನ ಜಾವ ಪ್ರಕರಣದ ಫಿರ್ಯಾದಿ ಮೂತ್ರ ಮಾಡಲು ಮನೆಯ ಹೊರಗೆ ಬಂದು ಮೂತ್ರ ಮಾಡಿ ಮನೆಯ ಒಳಗೆ ಹೋಗುತ್ತಿರುವಾಗ ಸಮೀಪದ ಬಸವೇಶ್ವರ ದೇವಸ್ಥಾನದ ಒಳಗಿನಿಂದ ಜೋರಾದ ಶಬ್ದ ಕೇಳಿ ದೇವಸ್ಥಾನದ ಹತ್ತಿರ ಹೋಗಿ ನೋಡಲಾಗಿ ಬೀಟಿಕಟ್ಟೆ ನಿವಾಸಿ ಸಂತೋಷ್‌ ಎಂಬಾತನು ಟಾರ್ಚ್ ಬೆಳಕಿನ ಸಹಾಯದಿಂದ ದೇವಸ್ಥಾನದ ಗರ್ಭಗುಡಿ ಮುಂಭಾಗದಲ್ಲಿರುವ ಹುಂಡಿಯನ್ನು ಒಡೆಯುತ್ತಿರುವುದು ಕಂಡು ಬಂದಿದ್ದು ಫಿರ್ಯಾದಿಯವರನ್ನು ನೋಡಿ ದೇವಸ್ಥಾನದ ಕಾಂಪೌಂಡನ್ನು ಹಾರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟಿ.ವಿ.ಎಸ್. ಸ್ಕೂಟರ್ ನಂ ಕೆ.ಎ-09-ಡಬ್ಲ್ಯೂ 874 ರಲ್ಲಿ ಹೊರಟು ಹೋಗಿದ್ದು ನಂತರ ಫಿರ್ಯಾದಿ ಮತ್ತು ಊರಿನವರು ಮೇಲ್ಕಂಡ ಆರೋಪಿಯನ್ನು ಹಿಡಿದು ಠಾಣೆಗೆ ಕರೆದುಕೊಂಡು ಬಂದು, ದೇವಸ್ಥಾನದ ಹುಂಡಿಯನ್ನು ಒಡೆದು ಕಳ್ಳತನ ಮಾಡಲು ಪ್ರಯತ್ನಿಸಿದ ಬಗ್ಗೆ ನೀಡಿದ ದೂರಿನ ಮೇರೆಗೆ ಶನಿವಾರಸಂತೆ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, January 5, 2016

ಹೊಳೆಯಲ್ಲಿ ಮುಳುಗಿ ಯುವಕನ ಸಾವು
                     ಹೊಳೆಯಲ್ಲಿ ಮುಳುಗಿದ ಯುವಕನೋರ್ವ ಸಾವಿಗೀಡಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 3-1-2016 ರಂದು ಬೈಲಕುಪ್ಪೆಯ ಟಿಬೆಟಿಯನ್‌ ಕ್ಯಾಂಪ್‌ ನಿವಾಸಿ 17 ವರ್ಷ ಪ್ರಾಯದ ಲೋಬೋಸಾಂಗ್ ಸಿಂಪ ಎಂಬವರು ಸ್ನೇಹಿತರೊಂದಿಗೆ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಪಕ್ಕ ಕಾವೇರಿ ನದಿಯಲ್ಲಿ ಈಜಾಡಲು ಬಂದಿದ್ದು, ಲೋಬೋಸಾಂಗ್ ಸಿಂಪ ರವರಿಗೆ ಸ್ನೇಹಿತರು ತುಂಬಾ ಆಳ ಇದ್ದು ಈಜಾಡಲು ಹೋಗದಂತೆ ತಿಳಿಸಿದರೂ ಕೂಡಾ  ಲೋಬೋಸಾಂಗ್ ಸಿಂಪರವರು ಈಜಾಡಲು ಹೋಗಿ ಆಕಸ್ಮಿಕವಾಗಿ ಮುಳುಗಿರುವುದಾಗಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ.
                ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಕುಶಾಲನಗರ ಬಳಿಯ ಗೊಂದಿಬಸವನಹಳ್ಳಿಯಲ್ಲಿ ನಡೆದಿದೆ. ದಿನಾಂಕ 3-1-2015 ರಂದು ಗೊಂದಿಬಸವನಹಳ್ಳಿ ನಿವಾಸಿ ಜಾನ್ಸನ್ ಎಂಬುವರು ಅದೇ ಗ್ರಾಮದ ನಿವಾಸಿ ಕವಿತಾ ಎಂಬ ಮಹಿಳೆಯನ್ನು ಬೈಕಿನಲ್ಲಿ ಸ್ನೇಹಿತನ ಮನೆಗೆ ಹೋಗೋಣವೆಂದು ಹೇಳಿ ಕರೆದುಕೊಂಡು ಕೂಡ್ಲೂರು ಗ್ರಾಮದ ಉಮಾರವರ ಮನೆಯ ಹತ್ತಿರ ಮುಂದುಗಡೆ ಕವಿತಾರವರೊಂದಿಗೆ ಮದುವೆಯ ವಿಚಾರವಾಗಿ ಜಗಳ ತೆಗೆದು ಜಾನ್ಸನ್ ಅಲ್ಲೇ ಬಿದ್ದಿದ್ದ ಒಂದು ಸೈಜು ಕಲ್ಲನ್ನು ಕವಿತಾರವರ ಎಡಕಾಲಿನ ಮೇಲೆ ಎತ್ತಿ ಹಾಕಿ ನೋವುಪಡಿಸಿದ್ದಲ್ಲದೆ ಜಾನ್ಸನ್ ಮತ್ತು ಉಮಾ ಇಬ್ಬರು ಸೇರಿಕೊಂಡು ಕೈಗಳಿಂದ ಕವಿತಾರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನಿಲ್ಲಿಸಿದ್ದ ಕಾರಿಗೆ ಬಸ್‌ ಡಿಕ್ಕಿ
                  ನಿಲ್ಲಿಸಿದ್ದ ಕಾರಿಗೆ ಬಸ್‌ ಒಂದು ಡಿಕ್ಕಿಯಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.ಚೆಟ್ಟಳ್ಳಿ ನಿವಾಸಿ ಬಿ.ಸಿ.ಗಣಪತಿ ಎಂಬವರು ಖಾಸಗಿ  ಬಸ್ಸೊಂದರಲ್ಲಿ  ಏಜೆಂಟರಾಗಿ ಕೆಲಸ  ಮಾಡುತ್ತಿದ್ದು ದಿನಾಂಕ 04/01/2016ರಂದು ಎಂದಿನಂತೆ ಅವರ ಕಾರು ಸಂಖ್ಯೆ ಕೆಎ-03-ಎಂ-3716ನ್ನು ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ಇರುವ ಸುರಭಿ ಹೋಟೆಲಿನ ಮುಂಭಾಗದಲ್ಲಿ ನಿಲ್ಲಿಸಿ ಕರ್ತವ್ಯ ನಿರತರಾಗಿರುವಾಗ ಅಂಚೆ ಕಚೇರಿ ಕಡೆಯಿಂದ ಕೆಎ-55-99ರ ಬಸ್ಸನ್ನು ಅದರ ಚಾಲಕ ಸಹೀರ್‌ ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗಣಪತಿಯವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಮಡಿದ್ದು, ನಿಲ್ಲಿಸಿದ್ದ ಕಾರು ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿ ಕಬೀರ್‌ ಎಂಬವರಿಗೆ ಡಿಕ್ಕಿಯಾಗಿ ಅವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, January 4, 2016

ರಿಕ್ಷಾ ಡಿಕ್ಕಿ; ಮಹಿಳೆಯರಿಬ್ಬರಿಗೆ ಗಾಯ
                     ರಿಕ್ಷಾವೊಂದು ಡಿಕ್ಕಿಯಾದ ಪರಿಣಾಮ ಪಾದಚಾರಿ ಮಹಿಳೆಯರಿಬ್ಬರಿಗೆ ಗಾಯಗಳಾದ ಘಟನೆ ಕುಶಾಲನಗರದ ಬ್ಲೂಮೂನ್‌ ಪೆಟ್ರೋಲ್‌ ಬಂಕ್‌ ಬಳಿ ನಡೆದಿದೆ. ದಿನಾಂಕ 1-1-2016 ರಂದು ಕುಶಾಲನಗರದ ಗಂಧದಕೋಠಿ ಬಳಿಯ ನಿವಾಸಿ ಸುಮಿತ್ರ ಹಾಗೂ ಪಕ್ಕದ ಮನೆಯಜಯಲಕ್ಷ್ಮೀ ಮತ್ತು ಕಮಲ ಎಂಬವರುಗಳು ನಡೆದುಕೊಂಡು ಹೋಗುತ್ತಿರುವಾಗ ಬ್ಲೂಮೂನ್‌  ಪೆಟ್ರೋಲ್ ಬಂಕ್ ಹತ್ತಿರ  ಗುಡ್ಡೆಹೊಸೂರು ಕಡೆಯಿಂದ ಒಂದು ಆಟೋ ರಿಕ್ಷಾವನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಸುಮಿತ್ರ ಹಾಗೂ ಜಯಲಕ್ಷ್ಮೀರವರಿಗೆ ಡಿಕ್ಕಿಪಡಿಸಿದ ಪರಿಣಾಮ ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ  ಪೊಲೀಸರು  ಪ್ರಕರಣ  ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಾನು ಡಿಕ್ಕಿ ; ಗಾಯ
                             ಮಾರುತಿ ವ್ಯಾನೊಂದು ಕೆಇಬಿ ಕಚೇರಿಯ ಗೇಟಿಗೆ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬರಿಗೆ ಗಾಯಗಳಾದ ಘಟನೆ ಸಿದ್ದಾಪುರ ನಗರದಲ್ಲಿ ನಡೆದಿದೆ. ದಿನಾಂಕ 03-12-2015 ರಂದು ಸಿದ್ಧಾಪುರ ನಗರದ ಕೆ.ಇ.ಬಿ. ಮುಂದಿನ ರಸ್ತೆಯಲ್ಲಿ ನೆಲ್ಲಿಹುದಿಕೇರಿ ನಿವಾಸಿ ಜಮಾಲ್‌ ಎಂಬವರ ಸಂಬಂಧಿಕರಾದ ಅಬ್ದುಲ್ ಕರೀಂ ಮತ್ತು  ಅಬ್ದುಲ್ಲಾ ಎಂಬುವವರೊಂದಿಗೆ ಕೆಎ 12 ಪಿ 7915 ರ ಮಾರುತಿ ಓಮಿನಿ ವ್ಯಾನಿನಲ್ಲಿ ಕ್ಯಾಲಿಕಟ್‌‌ನಿಂದ ಸಿದ್ಧಾಪುರಕ್ಕೆ ಬರುತ್ತಿರುವಾಗ ಅಬ್ದುಲ್ ಕರೀಂರವರು ಮಾರುತಿ ಓಮಿನಿ ವ್ಯಾನನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಿದ್ದಾಪುರದ ಕೆ.ಇ.ಬಿ. ಕಚೇರಿಯ ಮುಂಭಾಗದ ಗೇಟಿಗೆ ಡಿಕ್ಕಿ ಪಡಿಸಿದ ಪರಿಣಾಮ ಗೇಟಿಗೆ ಜಖಂ ಉಂಟುಮಾಡಿದ್ದು, ಅಬ್ದುಲ್ಲ ಮತ್ತು ಅಬ್ದುಲ್‌ ಕರೀಂ ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ, ಓರ್ವನ ಬಂಧನ
                      ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಶ್ರೀಮಂಗಲ ಪೊಲೀಸರು ಬಂಧಿಸಿದ್ದಾರೆ. ತಾವಳಗೇರಿ ಗ್ರಾಮದಲ್ಲಿ ನೂರೇರ ಮಿಥುನ್ ಎಂಬುವವನು ಆತನ ಮನೆಯ ಪಕ್ಕ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗವಾಗುವಂತೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆಂದು ದೊರೆತ ದೂರವಾಣಿ ಮಾಹಿತಿಯ ಮೇರೆಗೆ ದಿನಾಂಕ 03/01/2016ರಂದು ಶ್ರೀಮಂಗಲ ಪೊಲೀಸ್‌ ಉಪ ನಿರೀಕ್ಷಕರಾದ ಬಿ.ಎಸ್‌.ಶ್ರೀಧರ್‌ರವರು ಸಿಬ್ಬಂದಿಗಳೊಂದಿಗೆ ತಾವಳಗೇರಿ ಗ್ರಾಮದಲ್ಲಿರುವ ನೂರೇರ ಮಿಥುನ್‌ರವರ ಮನೆ ಹಿಂಬಾಗ ತಾವಳಗೇರಿಯಿಂದ ಬೆಳ್ಳೂರು ಗ್ರಾಮದ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಚ್ಚಾ ರಸ್ತೆಯಲ್ಲಿ ನೂರೇರ ಮಿಥುನ್‌ರವರು ಸಾರ್ವಜನಿಕ ರಸ್ತೆ ಬದಿಯಲ್ಲಿ ನಿಂತಿದ್ದು ಈತನ ಪಕ್ಕ ಇನ್ನಿಭ್ಬರು ಕಾರ್ಮಿಕರು ಮದ್ಯವನ್ನು ಸೇವಿಸುತ್ತಿದ್ದುದನ್ನು ಕಂಡು ಸ್ಥಳಕ್ಕೆ ಧಾವಿಸಿ ಸರ್ಕಾರದ ರಹದಾರಿಯಿಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ನೂರೇರ ಮಿಥುನ್‌ರವರನ್ನು ಬಂಧಿಸಿ ರೂ.252 /- ಬೆಲೆಯ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ 
 
ಪಾದಚಾರಿಗೆ ರಿಕ್ಷಾ ಡಿಕ್ಕಿ
                ಪಾದಚಾರಿಯೊಬ್ಬರಿಗೆ ರಿಕ್ಷಾವೊಂದು ಡಿಕ್ಕಿಯಾದ ಘಟನೆ ಭಾಗಮಂಡಲ ಬಳಿಯ ಪದಕಲ್ಲು ಎಂಬಲ್ಲಿ ನಡೆದಿದೆ. ದಿನಾಂಕ 03/01/2016ರಂದು ಪದಕಲ್ಲು ನಿವಾಸಿ ಮಂಜು ಎಂಬವರು ಅವರ ಮಗಳೊಂದಿಗೆ ಮನೆಯ ಪಕ್ಕದಲ್ಲಿರುವ ಹ್ಯಾರೀಸ್ ಎಂಬುವರ ಅಂಗಡಿಗೆ ಹೋಗಿ ಸಾಮಾನು ತೆಗೆದುಕೊಂಡು ವಾಪಾಸು ಬರುತ್ತಿರುವಾಗ ಗ್ರಾಮ ಪಂಚಾಯಿತಿ ಕಟ್ಟಡದ ಎದುರು ಹಿಂಬದಿಯಿಂದ ಬಂದ ಒಂದು ಸಂಖ್ಯೆ ಕೆಎ-12-ಎ-7782ರ ಟಾಟಾ ಮ್ಯಾಜಿಕ್  ಆಟೋವನ್ನು ಅದರ ಚಾಲಕ ನರೇಂದ್ರ ಎಂಬಾತನು ಅತೀ ವೇಗವಾಗಿ ಓಡಿಸಿಕೊಂಡು ಬಂದು ಮಂಜುರವರ ಮಗಳು ಜಿತಿಕಾಳಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಮಗಳು ಜಿತಿಕಾಳಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, January 1, 2016

ಬೈಕ್ ಗೆ ಟಾಟಾ ಏಸ್ ಡಿಕ್ಕಿ ಸವಾರರಿಬ್ಬರಿಗೆ ಗಾಯ:

      ಬೈಕ್ ಮತ್ತು ಟಾಟಾ ಏಸ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 31.12.15 ರಂದು ಸಮಯ ಬೆಳಿಗ್ಗೆ 8.30 ಗಂಟೆಗೆ 7ನೇ ಹೊಸಕೋಟೆ ಗ್ರಾಮದಲ್ಲಿ ಪಿರ್ಯಾದಿ ಎಸ್.ಪುನೀತ್‌ ಎಂಬವರು ಅವರ ಸ್ನೇಹಿತ ಸುನಿಲ್ ಎಂಬಾತನೊಂದಿಗೆ ಮಡಿಕೇರಿ ಅಬ್ಬಿಪಾಲಾಸ್ಸ್‌ ನೋಡಲೆಂದು ಸುನಿಲ್‌ ಓಡಿಸುತ್ತಿದ್ದ ನಂ ಕೆಎ-42-ಅರ್-5582 ರ ಮೋಟಾರ್ ಸೈಕಲ್‌ನಲ್ಲಿ ಹಿಂಬದಿಯಲ್ಲಿ ಕುಳಿತು ಮೈಸೂರು ಕಡೆಯಿಂದ ಕುಶಾಲನಗ ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಕಡೆಗೆ ಹೋಗುತ್ತಿರುವಾಗ ಮಡಿಕೇರಿ ಕಡೆಯಿಂದ ಕುಶಾಲನಗರದ ಕಡೆಗೆ ನಂ: ಕೆಎ0-25-ಡಿ-9582 ರ ಟಾಟಾ ಯೇಸ್‌ ವಾಹನವನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೋಟಾರ್ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಸುನಿಲ್‌ಗೆ ಹಾಗೂ ಹಿಂಬದಿ ಸವಾರರಾದ ಪುನಿತ್ ರವರ ಬಲಕಾಲಿನ ಮೂಳೆ ಮುರಿದು ಶರೀರಕ್ಕೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಆಸ್ತಿ ವಿಚಾರದಲ್ಲಿ ಜಗಳ, ಕೊಲೆ ಬೆದರಿಕೆ:
     ಆಸ್ತಿ ವಿಚಾರದಲ್ಲಿ ಮಹಿಳೆಯೊಬ್ಬರಿಗೆ ಅವರ ಪತಿಯ ಅಣ್ಣನ ಮಗ ಜಗಳ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ವಿರಾಜಪೇಟೆ ತಾಲೂಕು ನಾಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ: 15-12-15ರಂದು ರಾತ್ರಿ ಸಮಯದಲ್ಲಿ ಪಿರ್ಯಾದಿ ನಾಂಗಾಲ ಗ್ರಾಮದ ನಿವಾಸಿ ಶ್ರೀಮತಿ ಚೇಮಿರ ಸೀತಮ್ಮ ನವರು ಗದ್ದೆಯ ವಿಚಾರದಲ್ಲಿ ದಾಖಲಾತಿಗಳ ಬಗ್ಗೆ ಅವರ ಪತಿಯ ಅಣ್ಣನ ಮಗ ಮಂಜು ರವರನ್ನು ವಿಚಾರಿಸಿದ್ದು ಇದೇ ವಿಚಾರದಲ್ಲಿ ಸದರಿ ಮಂಜು ಫಿರ್ಯಾದಿಯವರನ್ನು ಅವಾಚ್ಯ ಶಬ್ದಗಳಿಂದ ಬೈದಿರುವು ದಲ್ಲದೆ, ಕೊಲೆ ಮಾಡಿ ಎಸೆಯುತ್ತೇನೆಂದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.