Friday, January 15, 2016

ಬೈಕ್ ಅಪಘಾತ, ಸವಾರನ ದುರ್ಮರಣ, ಪಾದಚಾರಿಗೆ ಗಾಯ:

    ವೇಗದ ಚಾಲನೆಯಿಂದ ಬೈಕ್ ಸವಾರನೊಬ್ಬರ ಪಾದಚಾರಿಗೆ ಡಿಕ್ಕಿಪಡಿಸಿ ತಾನು ರಸ್ತೆಯ ಮೇಲೆ ಬಿದ್ದು ಸಾವನಪ್ಪಿದ ಘಟನೆ ಕುಶಾಲನಗರದ ಕಾಳೇಘಾಟ್ ಹೊಟೇಲ್ ಮುಂದುಗಡೆ ನಡೆದಿದೆ. ದಿನಾಂಕ 14/1/16 ರಂದು ರಾತ್ರಿ 10.00 ಗಂಟೆ ಸುಮಾರಿಗೆ ಕುಶಾಲನಗರದ ಕಾಳೇಘಾಟ್ ಹೊಟೇಲ್ ಮುಂಭಾಗದ ಬಿ.ಎಂ.ರಸ್ತೆಯಲ್ಲಿ ಬೈಚನಳ್ಳಿ ಕಡೆಯಿಂದ ಮೋಟಾರ್ ಸೈಕಲೊಂದನ್ನು ಅದರ ಸವಾರ ಅತಿವೇಗದಿಂದ ಚಾಲಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ವ್ಯಕ್ತಿಯ ಹಿಂಬದಿಗೆ ಡಿಕ್ಕಿಪಡಿಸಿದ್ದು, ಡಿಕ್ಕಿಯಾದ ರಭಸಕ್ಕೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಕಾಲಿಗೆ ಪೆಟ್ಟಾಗಿ ಅಲ್ಲಿಯೇ ಬಿದ್ದು ಹೋಗಿದ್ದು, ಬೈಕ್ ಸವಾರ ಸಹ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿದ್ದು ಗಂಭೀರವಾಗಿ ಗಾಯಗೊಂಡು ಸದರಿಯವರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುವ ವೇಳೆಯಲ್ಲಿ ಬೈಕ್ ಸವಾರ ಕುಶಾಲನಗರದ ಗುಮ್ಮನಕೊಲ್ಲಿ ನಿವಾಸಿ ರವಿ ಮೃತಪಟ್ಟಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಂಗಸು ಮತ್ತು ಮಕ್ಕಳು ಕಾಣೆ:

     ಪೊನ್ನಂಪೇಟೆ ಠಾಣಾ ಸರಹದ್ದಿನ ನಡಿಕೇರಿ ಗ್ರಾಮದ ನಿವಾಸಿ ಪಿರ್ಯಾದಿ ಪಂಜರಿಎರವರ ಸನ್ನುರವರ ಪತ್ನಿ ಪುಪ್ಪ ಮೊದಲನೇ ಮಗಳು ಚೀತೆ 2ನೇ ಮಗ ಕಿರಣ್ ರವರು ದಿನಾಂಕ 1-1-2016 ರಂದು ಬೆಳಿಗ್ಗೆಯಿಂದ ಕಾಣೆಯಾಗಿರುತ್ತಾರೆಂದು ಪಂಜರಿ ಎರವರ ಸನ್ನು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕ್ ಗಳ ನಡುವೆ ಅಪಘಾತ ಮೂವರಿಗೆ ಗಾಯ:

     ಸಕಲೇಶಪುರದ ನಿವಾಸಿ ಎಲ್.ಆರ್. ಗಿರೀಶ ಎಂಬವರು ದಿನಾಂಕ 14-1-2016 ರಂದು ಸಂಜೆ 8-00 ಗಂಟೆಯ ಸಯಮದಲ್ಲಿ ತನ್ನ ಪತ್ನಿ ಹಾಗು ಮಗನೊಂದಿಗೆ ತನ್ನ ಮೋಟಾರ್ ಸೈಕಲ್ ನಲ್ಲಿ ಸೋಮವಾರಪೇಟೆ ಯಿಂದ ಸಕಲೇಶಪುರದ ಕಡೆಗೆ ಹೋಗುತ್ತಿದ್ದಾಗ ಶನಿವಾರಸಂತೆ ಠಾಣಾ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗಿರೀಶರವರು ಚಾಲಿಸುತ್ತಿದ್ದ ಬೈಕ್ ಗೆ ಡಿಕ್ಕಿಪಡಿಸಿದ್ದು, ಸದರಿ ಅಪಘಾತದಲ್ಲಿ ಗಿರೀಶ, ಅವರ ಪತ್ನಿ ಮತ್ತು ಮಗ ಗಾಯಗೊಂಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹೋದರರ ನಡುವೆ ಜಗಳ ತಮ್ಮನ ಮೇಲೆ ಹಲ್ಲೆ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ನಿವಾಸಿಗಳಾದ ಫಿರ್ಯಾದಿ ಮನು ಮತ್ತು ಅವರ ಅಣ್ಣ ರಘುರವರು ಅಕ್ಕ-ಪಕ್ಕದ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಮನು ರವರು ಕಾಫಿ ಒಣಗಿಸುವ ಕಣಕ್ಕೆ ಅಣ್ಣ ರಘು ರವರು ಕೊಳಚೆ ನೀರನ್ನು ಬಿಡುತ್ತಿದ್ದು, ಈ ಬಗ್ಗೆ ಫಿರ್ಯಾದಿಯವರು ಕೇಳಿದ್ದು, ದಿನಾಂಕ: 14.01.2016 ರಂದು ಸಮಯ ಅಂದಾಜು 01-45 ಪಿ.ಎಂ.ಗೆ ಫಿರ್ಯಾದಿಯವರು ಕಾಫಿ ಕಣದಲ್ಲಿ ಕಾಫಿ ಒಣಗಿಸುತ್ತಿರುವಾಗ್ಗೆ ಫಿರ್ಯಾದಿಯ ಅಣ್ಣ ರಘು, ರಘುವಿನ ಅಳಿಯ ದಿವಾಕರ, ರಘುವಿನ ಹೆಂಡತಿ ಸುಬ್ಬಮ್ಮ ಹಾಗೂ ದಿವಾಕರನ ಹೆಂಡತಿ ಸುಮ ರವರುಗಳು ಫಿರ್ಯಾದಿಯವರ ಬಳಿ ಬಂದು ಜಗಳ ತೆಗೆದು ದಿವಾಕರನು ಇಟ್ಟಿಗೆ ತುಂಡಿನಿಂದ ಫಿರ್ಯಾದಿಯ ತಲೆಗೆ ಹೊಡೆದು, ಉಳಿದವರು ಕಾಲಿನಿಂದ ದ್ದು, ಕೈಯಿಂದ ಹೊಡೆದು ನೋವುಂಟು ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿ ವಿವಾದದ ಹಿನ್ನಲೆ ವ್ಯಕ್ತಿ ಮೇಲೆ ಹಲ್ಲೆ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ನಿವಾಸಿಗಳಾದ ಫಿರ್ಯಾದಿ ದಿವಾಕರ ರವರ ಮಾವ ರಘು ಹಾಗೂ ಅವರ ತಮ್ಮ ಮನು ರವರಿಗೆ ಮನೆಯ ಪಾಲು ಪರಿಕತ್ತಿನ ವಿಚಾರದಲ್ಲಿ ವೈಮನಸ್ಸು ಇದ್ದು, ಈ ದಿನ ದಿನಾಂಕ: 14.01.2016 ರಂದು ಸಮಯ ಅಂದಾಜು 01-45 ಪಿ.ಎಂ.ಗೆ ಫಿರ್ಯಾದಿಯವರ ಪತ್ನಿ ಸುಮಾವತಿಯವರನ್ನು ಕುರಿತು ನೀನು ಯಾಕೆ ಬಂದಿರುತ್ತೀಯಾ ಎಂದು ಕೇಳಿ ಒಂದು ಇಟ್ಟಿಗೆ ತುಂಡಿನಿಂದ ಬೀಸಿ ಎಸೆದಿದ್ದು, ಅದನ್ನು ಸುಮಾವತಿಯು ಕೈಯಿಂದ ತಡೆದಾಗ ಅವರ ಕೈಗೆ ತಾಗಿ ಗಾಯವಾಗಿದ್ದು, ನಂತರ ಫಿರ್ಯಾದಿಯವರು ಸುಮಾವತಿಯವರನ್ನು ಹಿಡಿದುಕೊಳ್ಳಲು ಹೋದಾಗ ಮನುರವರು ಒಂದು ಕಾಡು ಕಲ್ಲನ್ನು ಬೀಸಿ ಎಸೆದಿದ್ದು, ಸದರಿ ಕಲ್ಲು ಫಿರ್ಯಾದಿಯವರ ತಲೆಗೆ ತಾಗಿ ಗಾಯವಾಗಿರುವುದಾಗಿ ಫಿರ್ಯಾದಿ ದಿವಾಕರನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರುತಿ ಓಮ್ನಿ ಅವಘಡ, ಇಬ್ಬರಿಗೆ ಗಾಯ:

     ಮಡಿಕೇರಿನಗರದ ದೇಚೂರು ನಿವಾಸಿ ಕೆ.ಆರ್. ಪದ್ಮನಾಭ ಎಂಬವರು ದಿನಾಂಕ 10.01.2016 ರಂದು ತಮ್ಮ ತಾಯಿ ಪದ್ಮಾವತಿ, ಪತ್ನಿ ಮಿತ್ರ ಮತ್ತು ಮಕ್ಕಳಾದ ಸ್ವಾತಿ, ಚೇತನ್ ರವರು ತಮ್ಮ ಭಾವ ರಮೇಶ್ ರವರ ಓಮಿನಿ ಕಾರು ನಂ: ಕೆಎ-12 ಎನ್-8503 ರಲ್ಲಿ ಮಂಗಳೂರು ಕಡೆಯಿಂದ ಮಡಿಕೇರಿಗೆ ಬರುತ್ತಿರುವಾಗ್ಗೆ ಮಡಿಕೇರಿ ಮಂಗಳೂರು ರಸ್ತೆಯ ತಾಳತ್‌ಮನೆಯ ಬಳಿ ತಲುಪುವಾಗ್ಗೆ ಸಮಯ ಸುಮಾರು 11-50 ಪಿ.ಎಂ.ಗೆ ಚಾಲಕ ರಮೇಶ್ ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಣಿ ಎಂಬುವವರ ಮನೆಯ ಕಾಂಪೌಂಡಿಗೆ ಢಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿ ಇದ್ದ ಫಿರ್ಯಾದುದಾರರು ಹಾಗೂ ಅವರ ಪತ್ನಿ ಮಿತ್ರ ರವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.