Tuesday, March 31, 2015

ಮಹಿಳೆಯ ಮಾನಭಂಗಕ್ಕೆ ಯತ್ನ:
     ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಮಹಿಳೆಯೊಬ್ಬರನ್ನು ಬೈದು ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಡಿಕೇರಿ ತಾಲೋಕು, ಮಕ್ಕಂದೂರು ಗ್ರಾಮದ ನಿವಾಸಿ ಶ್ರೀಮತಿ ಕಾವೇರಿ ಎಂಬುವರು ದಿ: 29-3-2015 ರಂದು ಮಡಿಕೇರಿಯಿಂದ ಮನೆಗೆ ಹೋಗಲು ಚೈನ್ ಗೇಟ್ ಬಳಿ ಬಸ್ಸಿಗೆಂದು ನಿಂತಿರುವಾಗ್ಗೆ ಆರೋಪಿ ಲಕ್ಷ್ಮಣ ಎಂಬ ವ್ಯಕ್ತಿ ಬಿಳಿ ಬಣ್ಣದ ಕಾರಿನಲ್ಲಿ ಬಂದು ಶ್ರೀಮತಿ ಕಾವೇರಿಯವರ ಬಳಿ ಕಾರನ್ನು ನಿಲ್ಲಿಸಿ ಆಸ್ತಿಯ ವಿಷಯದಲ್ಲಿ ದ್ವೇಷವನ್ನಿಟ್ಟುಕೊಂಡು ಶ್ರೀಮತಿ ಕಾವೇರಿಯವರನ್ನು ಅವಾಚ್ಯ ಶಬ್ದಗಳಿಂದ ಬೈದು, ಮಾನ ಭಂಗ ಮಾಡುವ ಉದ್ದೇಶದಿಂದ ಕೈ ಹಿಡಿದು ಎಳೆದಾಡಿ ನೆಲಕ್ಕೆ ಬೀಳಿಸಿದ ಬಗ್ಗೆ ಸದರಿ ಶ್ರೀಮತಿ ಕಾವೇರಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.  
ಲಾರಿ ಅಪಘಾತ, ಮನೆ ಹಾಗು ವಾಹನ ಜಖಂ:
     ಮರಳು ತುಂಬಿದ ಲಾರಿಯೊಂದು ಮನೆ ಹಾಗು ಅಂಗಡಿ ಕಟ್ಟಡಕ್ಕೆ ಸರಣಿ ಅಪಘಾತವಾಗಿ ಕಟ್ಟಡ ಹಾಗು ಕಾರು ಜಖಂಗೊಂಡ ಘಟನೆ ಮಡಿಕೇರಿ ಸಮೀಪದ ಬೋಯಿಕೇರಿಯಲ್ಲಿ ಸಂಭವಿಸಿದೆ. ದಿನಾಂಕ 30-03-2015 ರಂದು ಸಮಯ ಬೆಳಿಗ್ಗೆ 06-45 ಗಂಟೆಗೆ ಮಡಿಕೇರಿ ಕಡೆಯಿಂದ ಕೆಎ-42-2587 ರ ಮರಳು ತುಂಬಿದ ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೋಯಿಕೇರಿ ಯಲ್ಲಿರುವ ಪಿರ್ಯಾದಿ ಎಂ.ಕೆ. ಖಾದರ್ ಎಂಬುವರ ಮನೆಯ ಮುಂಭಾಗಕ್ಕೆ ಡಿಕ್ಕಿ ಪಡಿಸಿ, ನಂತರ ಮನೆಯ ಪಕ್ಕದಲ್ಲಿರುವ ತುಳಸೀದಾಸ್‌ ಎಂಬುವರಿಗೆ ಸೇರಿದ ಅಂಗಡಿ ಮತ್ತು ಮನೆಗೆ ಡಿಕ್ಕಿ ಪಡಿಸಿ ಲಾರಿಯು ಬಲಭಾಗಕ್ಕೆ ಮಗುಚಿಕೊಂಡ ಪರಿಣಾಮ ಫಿರ್ಯಾದಿ ಖಾದರ್‌ ಮತ್ತು ತುಳಸೀದಾಸ್‌ರವರ ಮನೆಗಳು ಹಾಗು ಅವರುಗಳಿಗೆ ಸೇರಿದ ಮಾರುತಿ 800 ಮತ್ತುಮಾರುತಿ ಓಮ್ನಿ ವ್ಯಾನ್‌ ಸಂಪೂರ್ಣ ಜಖಂ ಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  
ಮಹಿಳೆ ಆತ್ಮಹತ್ಯೆ , ಕಿರುಕುಳ ಶಂಕೆ:
     ವಿರಾಜಪೇಟೆ ತಾಲೋಕು ಪೊನ್ನಂಪೇಟೆ ನಗರದಲ್ಲಿ ವಾಸವಾಗಿರುವ ಫಿರ್ಯಾದಿ ಟಿ.ಸಿ. ಮಂಜು ಎಂಬುವರ ಪತ್ನಿಶ್ರೀಮತಿ ಶ್ವೇತಾ ರವರು ದಿನಾಂಕ 39-12-2014 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ದಿನಾಂಕ 8-2-2015 ರಂದು ಪಿರ್ಯಾದಿ ಟಿ.ಸಿ. ಮಂಜುರವರು ಮನೆ ಶುಚಿ ಮಾಡುತ್ತಿದ್ದಾಗ ಒಂದು ನೋಟ್ ಪುಸ್ತಕ ದೊರೆತ್ತಿದ್ದು ಅದರಲ್ಲಿ ಮೃತೆ ಶ್ವೇತಳ ಹಸ್ತಾಕ್ಷರವಿದ್ದು ಅದರಲ್ಲಿ ಶ್ವೇತಾಳಿಗೆ ಆರೋಪಿ ಚಂಗುಲಂಡ ರಾಣಾ ಎಂಬುವವರೊಂದಿಗೆ ಸಂಪರ್ಕವಿದ್ದು ಸದರಿಯವರು ಆಕೆಯ ನಗ್ನ ಬಾವಚಿತ್ರವನ್ನು ಮೊಬೈಲ್ ನಲ್ಲಿ ತೆಗೆದು ಆಗಾಗ ಲೈಂಗಿಕ ಕ್ರಿಯೆಗೆ ಬರುವಂತೆ ಹಾಗು ಹಣ ತರವಂತೆ ಒತ್ತಾಯಿಸಿತ್ತಿದ್ದದಲ್ಲದೆ, ಹೇಳಿದಂತೆ ಕೇಳದಿದ್ದಲ್ಲಿ ಅಂತರಜಾಲದಲ್ಲಿ ನಗ್ನ ಪೋಟೊವನ್ನು ಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಹಾಗೂ ಹಿಂಸೆ ನೀಡುತ್ತಿದ್ದುದಲ್ಲದೆ ಈ ವಿಚಾರವನ್ನು ಪಿರ್ಯಾದಿಯವರಿಗೆ ತಿಳಿಸಿದರೆ ಪಿರ್ಯಾದಿ ಹಾಗೂ ಮಗುವನ್ನು ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದುದರಿಂದ ಶ್ವೇತಾಳು ಜೀವನದಲ್ಲಿ ಜಿಗುಪ್ಸೆಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದು ಈ ವಿಚಾರವಾಗಿ ತಹಶೀಲ್ದಾರ್‌ರರು ನೀಡಿದ ದೂರಿನಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Monday, March 30, 2015

ಪತಿಯಿಂದ ಪತ್ನಿ ಕೊಲೆ:
      ದಿನಾಂಕ 29-07-2015 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ನೀಉಕೊಪ್ಪ ಇಬ್ನಿವಳವಾಡಿ ಗ್ರಾಮದ ನಿವಾಸಿ ಗಣಪತಿ ಎಂಬವರು ತನ್ನ ಪತ್ನಿ ಚಂದ್ರಾವತಿ ಎಂಬವರನ್ನು ಒಲೆ ಊದುವ ಕಬ್ಬಿಣದ ಕೊಳವೆಯಿಂದ ಹೊಡೆದು ಕೊಲೆ ಮಾಡಿದ್ದು, ಮೃತರ ಅಳಿಯ ಶ್ರೀಕಾಂತ್‌ ಎಂಬುವರು ನೀಡಿದದೂರಿನ ಮೇರೆಗೆ ಮಡಿಕೇರಿ ಗ್ರಾಮಾಂಗತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆಟೋ ರಿಕ್ಷಾ ಅವಘಡ ಇಬ್ಬರಿಗೆ ಗಾಯ:
    ಸಿದ್ದಾಪುರ ಠಾಣಾ ಸರಹದ್ದಿನ ಬೆಟ್ಟದಕಾಡು ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಕು: ಆನ್ಸಿ ಎಂಬುವರು ತನ್ನ ತಾಯಿ ಕುಂಞಿಮೋಳ್ ಹಾಗೂ ಅಗಸ್ಟಿನ್ ಎಂಬುವರೊಂದಿಗೆ ಆಟೋ ರಿಕ್ಷಾದಲ್ಲಿ ಸಿದ್ದಾಪುರದಿಂದ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಆಟೋ ಚಾಲಕ ಶಾಫಿ ಎಂಬುವರು ಸದರಿ ಆಟೋವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಆಟೋ ರಿಕ್ಷಾ ರಸ್ತೆಯಲ್ಲಿ ಮಗುಚಿ ಬಿದ್ದು ರಿಕ್ಷಾದಲ್ಲಿದ್ದ ಕು: ಆನ್ಸಿ, ಆಕೆಯ ತಾಯಿ ಕುಂಞಿಮೋಳ್ರವರುಗಳು ಗಾಯಗೊಂಡಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.  

ಅಸಹಜ ಸಾವು, ಪ್ರಕರಣ ದಾಖಲು:

     ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ಕೋತೂರು ಗ್ರಾಮದ ಲಕ್ಕುಂಧದಲ್ಲಿ ಪರಕಟಗ್ರಾಮದ ನಿವಾಸಿ ಶ್ರೀಮತಿ ರಾಣಿ ಎಂಬುವರ ತಮ್ಮ ನಂಜಪ್ಪ @ ನರು ಎಂಬವರು ವಿಪರೀತ ಮದ್ಯಪಾನ ಮಾಡುತ್ತಿದ್ದವರು ದಿನಾಂಕ 26-03-15 ರಿಂದ 28-03-15 ರ ರಾತ್ರಿ 07.30 ಗಂಟೆಯ ಮಧ್ಯದ ಅವದಿಯಲ್ಲಿ ವಿಪರೀತ ಮದ್ಯಪಾನ ಮಾಡಿ ತನ್ನ ವಾಸದ ಮನೆಯ ಒಳಗಡೆ ಬಿದ್ದು ಮೃತಪಟ್ಟಿದ್ದು, ಶ್ರೀಮತಿ ರಾಣಿಯವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿಮುಂದಿನ ಕ್ರಮ ಕೈಗೊಂಡಿದ್ದಾರೆ. 

Sunday, March 29, 2015

ಕಾರು - ಆಟೋ ರಿಕ್ಷಾ ಪರಸ್ಪರ ಡಿಕ್ಕಿ, ಇಬ್ಬರಿಗೆ ಗಾಯ:

     ವೇಗದ ಚಾಲನೆಯಿಂದ ಕಾರು ರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರು ಗಾಯಗೊಂಡು ಎರಡೂ ವಾಹನಗಳು ಜಖಂಗೊಂಡ ಘಟನೆ ಮಡಿಕೇರಿ ನಗರದ ಕಾರ್ಯಪ್ಪ ಕಾಲೇಜು ಬಳಿ ನಡೆದಿದೆ. ದಿನಾಂಕ 27-3-2015 ರಂದು ಮಡಿಕೇರಿ ನಗರದ ಪ್ರತಾಪ್‌ ಎಂಬುವರು ತಮ್ಮ ಆಟೋ ರಿಕ್ಷಾದಲ್ಲಿ ಗಾಳಿಬೀಡು ಕಡೆಯಿಂದ ನಗರದ ಕಡೆಗೆ ಬರುತ್ತಿರುವಾಗ ಎದುರುಗಡೆಯಿಂದ ಬಂದ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ರಿಕ್ಷಾದಲ್ಲಿದ್ದ ಚಂಗಪ್ಪ ಹಾಗು ರಿಕ್ಷಾ ಚಾಲಕ ಪ್ರತಾಪ್‌ರವರು ಗಾಯಗೊಂಡು ಎರಡೂ ವಾಹನಗಳು ಜಖಂ ಗೊಂಡಿದ್ದು, ಮಡಿಕೇರಿ ಸಂಚಾರಿ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮದುವೆ ವಿಚಾರಲ್ಲಿ ಮನನೊಂದು ಯುವತಿ ಆತ್ಮಹತ್ಯೆ:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಾಳುಗೋಡು ಗ್ರಾಮದ ನಿವಾಸಿ ಮಾಚೇಟಿರ ಸುಶೀಲ ಎಂಬವರ ಮನೆಯಲ್ಲಿ ಕೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಪಾರು ಎಂಬ ಯುವತಿ ಮಂದಣ್ಣ ಎಂಬುವರನ್ನು ಪ್ರೀತಿಸುತ್ತಿದ್ದು, ಅವರ ಮದುವೆ ನಡೆಯದೇ ಇರುವ ಕಾರಣ ಸದರಿ ಪಾರು ಮನನೊಂದು ದಿನಾಂಕ 28-3-2015 ರಂದು ಬೆಳಿಗ್ಗೆ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಜೀವನದಲ್ಲಿ ಜಿಗುಪ್ಸೆ ಯುವಕನ ಆತ್ಮಹತ್ಯೆ:

     ವಿರಾಜಪೇಟೆ ತಾಲೋಕು ಕಾನೂರು ಗ್ರಾಮದ ಗಣೇಶ್‌ ಎಂಬವರ ಮಗ ನಿತಿನ್‌ ಕುಮಾರ್‌ (22) ನಗೆ ಮದ್ಯಪಾದ ಮಾಡುವ ಚಟವಿದ್ದು, ಆತನ ತಂದೆ ಗಣೇಶ್‌ರವರು ಮದ್ಯಪಾನ ಮಾಡದಂತೆ ಬುದ್ದಿ ಹೇಳಿದ್ದು ಇದರಿಂದ ಮನನೊಂದು ದಿನಾಂಕ 27-3-2015 ರಂದು ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಓದಲು ವಿಚಾರದಲ್ಲಿ ಮನನೊಂದು ಯುವಕ ನೇಣಿಗೆ ಶರಣು:

    ಓದು ಮುಂದುವರಿಸಲು ಇಷ್ಟವಿಲ್ಲದ ಯುವಕನೋರ್ವ ಕುತ್ತಿಗೆಗೆ ನೇಣು ಹಾಕಿಕೊಂಡು ಸಾವನಪ್ಪಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿ ನಡೆದಿದೆ. ಮದಲಾಪುರ ಗ್ರಾಮದ ರಾಜಶೇಖರ್‌ ಎಂಬುವರ ಮಗ ಅಭಿಶೇಕ್‌ (20) ಎಂಬಾತ ಡಿಪ್ಲೊಮೋ ಮುಗಿಸಿದ್ದು ಮುಂದೆ ವ್ಯಾಸಂಗ ಮಾಡಲು ಇಷ್ಟವಿಲ್ಲವೆಂದು ಹೇಳುತ್ತಿದ್ದು, ಇದೇ ವಿಚಾರವಾಗಿ ಜೀಗುಪ್ಸೆ ಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಫಿರ್ಯಾದಿ ರಾಜಶೇಖರರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾ ಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Saturday, March 28, 2015

ಜಾಗದ ವಿಚಾರ, ಮಹಿಳೆ ಮೇಲೆ ಹಲ್ಲೆ:
     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಪೆರಾಜೆ ಗ್ರಾಮದ ನಿವಾಸಿ ಶ್ರೀಮತಿ ಮೀನಾಕ್ಚಿ ಮತ್ತು ಅವರ ಪಕ್ಕದ ಮನೆಯ ಭವಾನಿಯವರಿಗೂ ಜಾಗದ ವಿಷಯದಲ್ಲಿ ಜಗಳವಾಗಿ ಮಾತುಕತೆ ಇಲ್ಲದೇ ಇದ್ದು ದಿನಾಂಕ 25-03-2015 ರಂದು ಭವಾನಿಯವರು ಮೀನಾಕ್ಷಿಯವರ ನಾಯಿಗೆ ಹೊಡೆದ ವಿಚಾರದಲ್ಲಿ ಜಗಳವಾಗಿ ಫಿರ್ಯಾದಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಎಳೆದು ದೂಡಿ ಬೀಳಿಸಿದ್ದು ಅಲ್ಲದೆ ಅವರ ಜೊತೆಯಲ್ಲಿದ್ದ ಉಕ್ರಪ್ಪ ನಾಯಕ, ಶೀಲಾವತಿ, ಪುರುಷೋತ್ತಮ ಮತ್ತು ಮಂಜುನಾಥರವರು ಅಲ್ಲಿಗೆ ಬಂದು ಅವರೂ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ನಿನ್ನ ಗಂಡನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆಂದು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರನ್ನು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ.  
ಸಾಲ ಬಾದೆ, ವ್ಯಕ್ತಿಯ ಆತ್ಮಹತ್ಯೆ:
     ಶನಿವಾರಸಂತೆ ಠಾಣಾ ಸರಹದ್ದಿನ ಬೆಂಬಳೂರು ಗ್ರಾಮದ ನಿವಾಸಿ ಸಚಿನ್‌ ರವರ ಅಜ್ಜ ಅಣ್ಣೇಗೌಡ ಎಂಬವರು ಜಿಗುಪ್ಸೆಗೊಂಡು ದಿನಾಂಕ 22-3-2015 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಸದರಿಯವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನದ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27-3-2015 ರಂದು ಸದರಿಯವರು ಮೃತಪಟ್ಟಿದ್ದು, ಪೆಡೆದ ಸಾಲವನ್ನು ಮರುಪಾವತಿಸಲು ಆಗದೇ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಫಿರ್ಯಾದಿ ಸಚಿನ್‌ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಾರಿಗೆ ಲಾರಿ ಡಿಕ್ಕಿ ವ್ಯಕ್ತಿಗೆ ಗಾಯ:
     ಕುಶಾಲನಗರದ ನಿವಾಸಿ ವೆಂಕಟೇಶ್‌ ರವರು ತಮ್ಮ ಮಗ ಸಂತೋಷ್‌ ಮತ್ತು ತಮ್ಮ ಮನುರವರೊಂದಿಗೆ ದಿನಾಂಕ 24-3-2015 ರಂದು ಕಾರಿನಲ್ಲಿ ಮಡಿಕೇರಿ ಕಡೆಯಿಂದ ಕುಶಾಲನಗರದ ಕಡೆಗೆ ಹೋಗುತ್ತಿದ್ದಾಗ ಕುಶಾಲನಗರದ ಕಡೆಯಿಂದ ಸುಂಟಿಕೊಪ್ಪದ ನಿವಾಸಿ ಫಯಾಜ್‌ ಎಂಬವರು ಮಜ್ದಾ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವೆಂಕಟೇಶ್‌ರವರ ಮಗ ಸಂತೋಷ್‌ ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಮನುರವರ ತಲೆಗೆ ಗಾಯವಾಗಿದ್ದು ಸದರಿಯವರನ್ನು  ಚಿಕಿತ್ಸೆಗೆ ಮೈಸೂರಿನ ಜೆ.ಎಸ್‌.ಎಸ್‌ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ದಿನಾಂಕ 27-3-2015 ರಂದು ಪ್ರಕರಣ ದಾಖಲಿಸಿಲಾಗಿದೆ.
ಪೊಲೀಸ್‌ ದಾಳಿ ಅಕ್ರಮ ಮದ್ಯ ವಶ:

     ಶ್ರೀಮಂಗಲ ಠಾಣಾಧಿಕಾರ ಬಿ.ಎಸ್‌.ಶ್ರೀಧರ್‌ರವರಿಗೆ  ದೊರೆತ ಖಚಿತ ಮಾಹಿತಿ ಮೇರೆಗೆ ದಿನಾಂಕ 27-3-2015 ರಂದು ಬಲ್ಯಮಂಡೂರು ಗ್ರಾಮದ ನಿವಾಸಿ ದೇಯಂಡ ಅಣ್ಣಯ್ಯ ಎಂಬವರ ಅಂಗಡಿಗೆ ದಾಳಿ ನಡೆಸಿಅಕ್ರಮವಾಗಿ  ಮಾರಾಟ ಮಾಡಲು ಸಂಗ್ರಹಿಸಿಟ್ಟ ಸುಮಾರು 1190-00 ರೂ ಬೆಲೆಬಾಳುವ ವಿವಿಧ ರೀತಿಯ ಮದ್ಯವನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Friday, March 27, 2015

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ: 
     ಕುಟ್ಟ ಪೊಲೀಸ್‌ ಠಾಣಾ ಸರಹದ್ದಿನ ಬಾಡಗ ಗ್ರಾಮದ ನಿವಾಸಿ ಚೆಪ್ಪುಡೀರ ಬೋಪಣ್ಣ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಕಾಳಪ್ಪ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ 25-3-2015 ವಿಪರೀತ ಮದ್ಯಪಾನ ಮಾಡಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಬಸ್ಸ್ ಡಿಕ್ಕಿ. ಗಾಯಗೊಂಡ ಸವಾರನ ಸಾವು:
     ಕುಶಾಲನಗರದ ಹುದುಗೂರು ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಗಣೇಶ ಎಂಬವರ ಮಗ ಅಭಿ ಎಂಬಾತ ದಿನಾಂಕ23-3-2015 ರಂದು ಬೆಳಿಗ್ಗೆ 9-00 ಗಂಟೆಗೆ ಕೂಡಿಗೆ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ಸು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಸವಾರ ಅಭಿ ಎಂಬಾತ ಗಾಯಗೊಂಡು ಸದರಿಯಾತನನ್ನು ಮೈಸೂರಿನ ಕೆಆರ್‌ ಆಸ್ಪತ್ರೆಗೆ ದಾಖಲು ಪಡಿಸಿದ್ದು ಚಿಕಿತ್ಸೆ ಫಲಕಾರಿಯಾಗದೆದಿನಾಂಕ 25-3-2015 ರಂದು ಸಾವನಪ್ಪಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗ್ಯಾಸ್‌ ವಿತರಣೆಯಲ್ಲಿ ವಿಳಂಬ, ವ್ಯಕ್ತಿಯ ಮೇಲೆ ಹಲ್ಲೆ:
     ಅಡುಗೆ ಗ್ಯಾಸ್‌ ಸಿಲೆಂಡರ್‌ನ್ನು ಸರಿಯಾಗಿ ವಿತರಿಸಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಗೋಣಿಕೊಪ್ಪ ಸಮೀಪದ ಅರುವತ್ತೊಕ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 25-3-2015 ರಂದು ಫಿರ್ಯಾದಿ ಎಂ.ಜೆ. ಜಿತು ಎಂಬುವರು ಅರುವತ್ತೊಕ್ಲುವಿನ ಮೈಸೂರಮ್ಮ ಕಾಲೋನಿಯಲ್ಲಿ ವಾಹನದಲ್ಲಿ ಗ್ಯಾಸ್‌ ಸಿಲೆಂಡರ್‌ಗಳನ್ನು ವಿತರಿಸುತ್ತಿದ್ದಾಗ ಆರೋಪಿ ತರುಣ್‌ ತಮ್ಮಯ್ಯ ಎಂಬುವರು ಅಲ್ಲಿಗೆ ಬಂದು ವಾಹನವನ್ನು ತಡೆದು ನಿಲ್ಲಿಸಿ ಎಂ.ಜೆ. ಜಿತುರವರ ಮೇಲೆ ಹಲ್ಲೆ ನಡೆಸಿ ಸರಿಯಾಗಿ ಗ್ಯಾಸ್‌ ಸಿಲೆಂಡರ್‌ಗಳನ್ನು ವಿತರಿಸದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ಫಿರ್ಯಾದಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಹಿಳೆಗೆ ಕೊಲೆ ಬೆದರಿಕೆ:
     ಹೈಸೊಡ್ಲೂರು ಗ್ರಾಮದ ನಿವಾಸಿ ಕೆ.ಎ. ಪಾರ್ವತಿ ಎಂಬವರಿಗೆ ಆರೋಪಿಗಳಾದಕೇಚಮಾಡ ರವಿ ಸೋಮಯ್ಯ ಹಾಗು ಇಟ್ಟೀರ ವಸಂತ ರವರುಗಳು ಕೊಲೆ ಬೆದರಿಕೆ ಹಾಕುತ್ತಿದ್ದು ಅಲ್ಲದೆ ಕರೆಂಟ್‌ ಮತ್ತು ಟೆಲಿಫೋನ್‌ ಸಂಪರ್ಕ ಕಡಿತಪಡಿಸಿ ತೊಂದರೆ ಕೊಡುತ್ತಿದ್ದಾರೆಂದು ಫಿರ್ಯಾದಿ ಕೆ.ಎ. ಪಾರ್ವತಿರವರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, March 26, 2015

ಹಣದ ವಿಚಾರಕ್ಕೆ ಇಬ್ಬರ ಮೇಲೆ ಹಲ್ಲೆ
         ಹಣದ ವಿಚಾರವಾಗಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಕುಶಾಲನಗರ ಸಮೀಪದ ಕೂಡು ಮಂಗಳೂರುವಿನಲ್ಲಿ ನಡೆದಿದೆ. ದಿನಾಂಕ 24-03-2015 ರಂದು ಸಂಜೆ ಕೂಡು ಮಂಗಳೂರುವಿನ ವಿಜಯನಗರ ಬಡಾವಣೆ  ನಿವಾಸಿ ಸುಮಿತ್ರ ಎಂಬವರು  ಮನೆಯಲ್ಲಿರುವಾಗ ಅದೇ ಬಡಾವಣೆಯ ನಿವಾಸಿ ವಿನೋದ ಎಂಬುವರು ಹಣಕಾಸಿನ ವಿಚಾರದಲ್ಲಿ ಸುಮಿತ್ರರವರ ಮನೆಗೆ ಬಂದು ಅವರ ಗಂಡನನ್ನು ಕೇಳಿ ಜಗಳ ತೆಗೆದು ಬಾಗಿಲಿಗೆ ಒದ್ದು, ಸುಮಿತ್ರರವರಿಗೆ ರಾಡುವಿನಿಂದ ಹೊಡೆದು ಗಾಯಪಡಿಸಿದ್ದು, ಬಿಡಿಸಲು ಬಂದ ಆಕೆಯ ಗಂಡ ಮಂಜುನಾಥ ಹಾಗೂ  ಮಗ ಯತೀಶರವರ ಮೇಲೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
           ಮದ್ಯಪಾನ ಮಾಡಲು ಹಣ ಕೊಡಲಿಲ್ಲವೆನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಬಳಿಯ ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ಕೇರಳ ರಾಜ್ಯದ ಮಾನಂದವಾಡಿಯ ನಿವಾಸಿ ಬಿಂದು ಎಂಬವರು  ಹೊಸೂರು ಬೆಟ್ಟಗೇರಿ ಗ್ರಾಮದ ಎಂ.ಎನ್. ಅಶೋಕ ಎಂಬವರ ಜಾಗದಲ್ಲಿ ಶುಂಠಿ ಕೆಲಸವನ್ನು ಮಾಡಿಕೊಂಡು ತನ್ನ ಗಂಡ ರಾಜನ್ ಹಾಗೂ ಸಂಬಂಧಿಕರೊಂದಿಗೆ ಕಳೆದ 4 ವರ್ಷಗಳಿಂದ ವಾಸವಿದ್ದು, ದಿನಾಂಕ 24-3-2015 ರಂದು ರಾತ್ರಿ  ಗಂಡ ರಾಜನ್ ರವರು ಮದ್ಯಪಾನ ಮಾಡಲು ಹಣ ಕೊಡುವಂತೆ ಕೇಳಿದ್ದು  ಬಿಂದುರವರು ಕೊಡದಿದ್ದಾಗ ಕೋಪಗೊಂಡು ನಾನು ಬದುಕುವುದಿಲ್ಲವೆಂದು ಹೇಳಿ ಹೋದರೆನ್ನಲಾಗಿದೆ.  ರಾತ್ರಿಯಾದ್ದರಿಂದ  ಬಿಂದುರವರು ಕೂಡ ಪತಿಯನ್ನು  ಹುಡುಕದೇ ಮನೆಯಲ್ಲಿದ್ದು, ಮರು ದಿನ ಬೆಳಿಗ್ಗೆ ಸುಮಾರು 06:00 ಗಂಟೆಗೆ ತಾನು ವಾಸವಿರುವ ಶೆಡ್ ನ ಹತ್ತಿರದ ಕೆರೆಯ ಬಳಿ ಹೋಗಿ ನೋಡುವಾಗ  ಗಂಡ ರಾಜನ್ ರವರು ಪಾನುವಾಳ  ಮರಕ್ಕೆ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೋಟಾರು ಬೈಕ್‌ ಕಳವು
       ನಿಲ್ಲಿಸಿದ್ದ ಮೋಟಾರು ಬೈಕೊಂದನ್ನು ಕಳವು ಮಾಡಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 22/03/2015ರಂದು ಹುದುಗೂರು ನಿವಾಸಿ ಕಿಶೊರ್‌ ಎಂಬವರು ಅವರ  ಸ್ನೇಹಿತನ ಬಾಪ್ತು  ಕೆಎ-02-ಇಡಿ-2690ರ ಹೀರೋ ಹೋಂಡಾ  ಮೋಟಾರು ಸೈಕಲ್ ನಲ್ಲಿ ಸ್ವಂತ ಕೆಲಸದ ನಿಮಿತ್ತ ಕುಶಾಲನಗರಕ್ಕೆ ಬಂದು ಕೂರ್ಗ್ ಟ್ರಾನ್ಸ್ ಪೋರ್ಟ್ ಕಛೇರಿಯ ಮುಂದೆ ರಾತ್ರಿ 10-30 ಕ್ಕೆ ಬೈಕ್ ನಿಲ್ಲಿಸಿ 11-30 ಸಮಯಕ್ಕೆ ಕೆಲಸ ಮುಗಿಸಿ ವಾಪಸು ಹೋಗಲು ಬಂದು ನೋಡುವಾಗ ನಿಲ್ಲಿಸದ್ದ ಬೈಕನ್ನು ಯಾರೋ ಕಳ್ಳರು ಮೋಟಾರು ಸೈಕಲ್ಲನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ದೇಗುಲದ ವಸ್ತು ಹಾನಿ ಹಾಗೂ ಕೊಲೆ ಬೆದರಿಕೆ
        ದೇವಾಲಯದ ವಸ್ತಯಗಳನ್ನು ಹಾನಿ ಮಾಡಿ ವ್ಯಕ್ತಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ವಿರಾಜಪೇಟೆ ಬಳಿಯ ತೋಮರ ಎಂಬಲ್ಲಿ ನಡೆದಿದೆ. ದಿನಾಂಕ: 25-03-15ರಂದು ಸಂಜೆ ತೋಮರ ನಿವಾಸಿ ಪಂಜರಿ ಎರವರ ಕರಿಯಪ್ಪ ಎಂಬಾತನು ಊರಿನಲ್ಲಿರುವ ಚಾಮುಂಡಿ ದೇವಸ್ಥಾನದ ತ್ರಿಶೂಲಗಳನ್ನು ಕಿತ್ತು ಅಲ್ಲಿ ಪ್ರತಿಷ್ಠಾ ಪಿಸಿದ ಪವಿತ್ರ ಕಲ್ಲುಗಳನ್ನು ನಾಶ ಮಾಡಿದ್ದಲ್ಲದೆ ಎರಡು ಶೂಲಗಳನ್ನು ಹಿಡಿದುಕೊಂಡು ತನ್ನ ಮೈಗೆ ಅವುಗಳಿಂದ ಹೊಡೆದುಕೊಂಡು ಅದೇ ಗ್ರಾಮದ ಬಿ.ಸಿ.ಶಿವಪ್ಪ ಎಂಬವರ  ಮನೆಯ ಅಂಗಳಕ್ಕೆ ಹೋಗಿ ಮನೆ ಕಡೆಗೆ ಹೋಗುತ್ತಿದ್ದ ಶಿವಪ್ಪನವರನ್ನು ತಡೆದು  ತನ್ನ ಕೈಯಲ್ಲಿರುವ ತ್ರಿಶೂಲಗಳನ್ನು ತೋರಿಸಿ ಇವುಗಳಿಂದ  ಚುಚ್ಚಿ ಸಾಯಿಸಿ ಬಿಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, March 25, 2015

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ:
ಮಡಿಕೇರಿ ತಾಲೋಕು ಐಕೊಳ ಗ್ರಾಮದ ನಿವಾಸಿ ಚಾರಿಮಂಡ ಕುಟ್ಟಪ್ಪ ಎಂಬವರು ದಿನಾಂಕ 24-3-2015 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು , ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಬಸ್ಸ್ ಡಿಕ್ಕಿ ಸವಾರನಿಗೆ ಗಾಯ:
ಕುಶಾಲನಗರದ ಹುದುಗೂರು ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಗಣೇಶ ಎಂಬವರ ಮಗ ಅಭಿ ಎಂಬಾತ ದಿನಾಂಕ23-3-2015 ರಂದು ಬೆಳಿಗ್ಗೆ 9-00 ಗಂಟೆಗೆ ಕೂಡಿಗೆ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಬೈಕ್‌ಗೆ ಡಿಕ್ಕಿ ಪಡಿಸಿದ ಪರಿಣಾಮ ಸವಾರ ಗಾಯಗೊಂಡಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಕ್‌ಅಪ್‌ ವಾಹನಕ್ಕೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:ಸುಂಟಿಕೊಪ್ಪ ಠಾಣಾ ಸರಹದ್ದಿನ ಸಪ್ತಗಿರಿ ಎಸ್ಟೇಟ್‌ ಬಳಿ ಜಿಕ್ಕಮಗಳೂರು ಜಿಲ್ಲೆಯ ಮೊಹಮ್ಮದ್‌ ನಾಸಿರ್‌ಎಂಬವರು ಚಾಲಿಸಿತ್ತಿದ್ದ ಪಿಕ್ಅಪ್‌ ವಾಹನಕ್ಕೆ ಆಲ್ಟೋಕಾರು ಡಿಕ್ಕಿಯಾಗಿ ಕಾರಿನ ಚಾಲಕ ಸುಜಿತ್‌ ಕುಮಾರ್‌ ಹಾಗು ಕಾರಿನಲ್ಲಿದ್ದ ಶ್ರೇಯಸ್‌ ಎಂಬವರು ಗಾಯಗೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗ ಕಾಣೆ, ಪ್ರಕರಣ ದಾಖಲು:ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಸಫಿಯಾ ಎಂಬವರ ಮಗ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಿಹಾಬ್‌ ಎಂಬಾತ ದಿನಾಂಕ22-3-2015 ರಂದು ಶಾಲೆಗೆ ಹೋಗಿದ್ದು, ನಂತರ ಮನೆಗೆ ಬಾರದೆ ಕಾಣೆಯಾಗಿದ್ದು, ಫಿರ್ಯಾದಿ ಸಫಿಯಾರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, March 24, 2015

ದಾರಿ ವಿವಾದ, ವ್ಯಕ್ತಿಯ ಮೇಲೆ ಹಲ್ಲೆ:

ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಕೆಲಕೊಡ್ಲಿ ಗ್ರಾಮದ ವಾಸಿ ಶ್ರೀ ಕೆ.ಪಿ. ನಂಜುಂಡಯ್ಯ ಎಂಬುವವರನ್ನು ಅವರ ತಂದೆ ಹಾಗು ಸಹೋದರರಾದ ಶಿವಲಿಂಗಯ್ಯ, ದಿನೇಶ, ಪುಟ್ಟಸ್ವಾಮಿ ಪುಟ್ಟಸ್ವಾಮಿ, ದಯಾಕರ, ರಂಗಪ್ಪ , ಮಲ್ಲಪ್ಪ ಹಾಗು ಸುಂದರ ರವರುಗಳು ಸೇರಿ ದಾರಿಯ ವಿಚಾರದಲ್ಲಿ ಕೆಲಕೊಡ್ಲಿ ಗ್ರಾಮದಲ್ಲಿರುವ ಕುಟುಂಬದ ತೋಟಕ್ಕೆ ಹೋಗಬಾರದೆಂದು ಹೀಳಿ ತೋಟಕ್ಕೆ ಹೋಗುವ ರಸ್ತೆಯಲ್ಲಿ ದಿನಾಂಕ 04-03-2015 ರಂದು ಸುಮಾರು 11-30 ರಿಂದ 12-00 ಗಂಟೆಯ ಸಮಯದಲ್ಲಿ ಕಿ.ಪಿ. ನಂಜುಡಯ್ಯನವರ ಮೇಲೆ ಕೈಯಿಂದ ಮತ್ತು ದೊಣ್ಣೆಯಿಂದ ಸೊಂಟಕ್ಕೆ ಹಲ್ಲೆ ನಡೆಸಿ, ಚಾಕುವಿನಿಂದ ಕುತ್ತಿಗೆ ಹಾಗೂ ಕಿವಿಗೆ ಚುಚ್ಚಿದ್ದು ಈ ಸಂಬಂಧ ಸದರಿ ಕೆ.ಪಿ. ನಂಜುಂಡಯ್ಯನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಮುಂದಿನ ಕ್ರಮ ಕೈಗೊಂಡಿದ್ದಾರೆ.  

ಹಳೆಯ ದ್ವೇಷ, ವ್ಯಕ್ತಿಯ ಮೇಲೆ ಗುಂಪಿನಿಂದ ಹಲ್ಲೆ:

ದಿನಾಂಕ 22-3-2015 ರಂದು ಫಿರ್ಯಾದಿ ಹಾನಗಲ್ಲು ಗ್ರಾಮದ ಆರ್‌. ನವೀನ್‌ ಎಂಬವರು ಹಾನಗಲ್ಲು ಗ್ರಾಮದ ರಾಜು ಎಂಬುವವರ ಅಂಗಡಿ ಬಳಿ ನಿಂತುಕೊಂಡಿರುವಾಗ್ಗೆ ಆರೋಪಿಗಳಾದ ಅರುಣ್‌ ಕುಮಾರ್‌, ಗಣೇಶ, ರಾಣಿ, ಮತ್ತು ರಾಧ ಎಂಬವರು ಅಲ್ಲಿಗೆ ಹೋಗಿ ಹಳೇ ದ್ವೇಷದಿಂದ ಕಬ್ಬಿಣದ ರಾಡು, ದೊಣ್ಣೆಯಿಂದ ಹಲ್ಲೆನಡೆಸಿ, ಕೊಲೆ ಬೆದರಿಕೆ ಹಾಕಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ:

ಸೋಮವಾರಪೇಟೆ ಠಾಣಾ ಸರಹದ್ದಿನ ಹಾನಗಲ್ಲು ಗ್ರಾಮದ ನಿವಾಸಿ ಅರುಣ್‌ ಕುಮಾರ್‌ ಎಂಬವರು ದಿನಾಂಕ 22-3-2015 ರಂದು ರಾಜು ಎಂಬವರ ಅಂಗಡಿ ಮುಂದೆನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಅದೇ ಗ್ರಾಮದ ನವೀನ, ಮಂಜ ಮತ್ತು ಅರುಣ ಎಂಬವರು ಅರುಣ್‌ಕುಮಾರ್‌ರವರ ದಾರಿ ತಡೆದು ಆಟೋ ರಿಕ್ಷಾ ರಿಪೇರಿ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕ್ರಿಕೇಟ್‌ ಬ್ಯಾಟ್‌ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ದೇವಸ್ಥಾನದ ವಂತಿಗೆ ವಿಚಾರ, ವ್ಯಕ್ತಿ ಮೇಲೆ ಹಲ್ಲೆ:

ಸೋಮವಾರಪೇಟೆ ತಾಲೋಕು ಐಗೂರು ಗ್ರಾಮದ ನಿವಾಸಿ ಪಿರ್ಯಾದಿ ಎ.ಕೆ. ಧರಣೇಶ್‌ರವರು ಈ ದಿನಾಂಕ 23-03-2015 ರಂದು ಸೋಮವಾರಪೇಟೆಯಿಂದ ವಾಪಾಸು ಮನೆಗೆ ಹೋಗುತ್ತಿರುವಾಗ್ಗೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿ ತಲುಪುವಾಗ್ಗೆ ಅವರ ಮನೆ ಹತ್ತಿರದ ವಾಸಿ ಸೋಮಪ್ಪ ಎಂಬವರು ದೇವಸ್ಥಾನಕ್ಕೆ ವಂತಿಗೆ ಕೊಡುವ ವಿಚಾರದ್ಲಲ್ಲಿ ಗಲಾಟೆ ತೆಗೆದು ಏಕಾಏಕಿ ಎದೆಪಟ್ಟಿಯನ್ನು ಹಿಡಿದು ಎಳೆದಾಡಿ ಫಿರ್ಯಾದಿಯ ಎಡಕಣ್ಣಿನ ಭಾಗಕ್ಕೆ ಹಾಗೂ ಎದೆಯ ಭಾಗಕ್ಕೆ ತೀವ್ರವಾಗಿ ಕೈಯಿಂದ ಹಾಗೂ ಕ್ಲಲಿನಿಂದ ಗುದ್ದಿ ನೋವನ್ನುಂಟುಮಾಡಿ ನನಗೆ ಮೂಗಿನಲ್ಲಿ ರಕ್ತಗಾಯವಾಗಿದ್ದು, ಫಿರ್ಯಾದಿಯ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.



 

Monday, March 23, 2015

ಕಾರು ಡಿಕ್ಕಿ, ಮಹಿಳೆಗೆ ಗಾಯ:

     ನಾಪೋಕ್ಲು ಗ್ರಾಮದ ನಿವಾಸಿ ಶ್ರೀಮತಿ ಫಾತೀಮರವರು ಮತ್ತು ಅವರ ಮಗಳು ಜಮೀಳ ದಿನಾಂಕ 22-3-2015 ರಂದು ಕೂಲಿ ಕೆಲಸಕ್ಕೆ ಹೋಗಿ ವಾಪಾಸು ಮನೆ ಕಡೆ ನಡೆದುಕೊಂಡು ಬರುತ್ತಿರುವಾಗ ನಾಪೋಕ್ಲು ಗ್ರಾಮದ ಚೋನಕೆರೆಯ ರಾಜಪ್ಪ ಎಂಬುವವರ ಅಂಗಡಿ ಮುಂದೆ ನೆಲಜಿ ಕಡೆಯಿಂದ ನಾಪೋಕ್ಲು ಕಡೆಗೆ ಆಲ್ಟೋ ಕಾರು ಸಂಖ್ಯೆ ಕೆಎ-04-ಎಂಬಿ-6527 ರನ್ನು ಅದರ ಚಾಲಕ ಜಕ್ರೀಯಾ ಎಂಬವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜಮೀಳರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರ ಬಲದ ಕೈ ಮತ್ತು ತಲೆಗೆ ರಕ್ತಗಾಯವಾಗಿದ್ದು, ನಂತರ ಸದರಿಯವರನ್ನು ಚಿಕಿತ್ಸೆ ಬಗ್ಗೆ ನಾಪೋಕ್ಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಲಾರಿ ಡಿಕ್ಕಿ, ಮಹಿಳೆ ಸಾವು: 

     ಮಹಿಳೆಯೊಬ್ಬರು ರಸ್ತೆ ದಾಡುವಾಗ ಲಾರಿ ಅಪಘಾತದಿಂದ ಸಾವನಪ್ಪಿದ ಘಟನೆ ಸುಂಟಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 22-3-2015 ರಂದು ಸೋಮವಾರಪೇಟೆ ತಾಲೋಕು ಕೆದಕಲ್‌ ಗ್ರಾಮದ ನಿವಾಸಿಗಳಾದ ಲೂಯಿಸ್‌ ಡಿಸೋಜ ಮತ್ತು ಮಗ್ಗಿ ಡಿಸೋಜಾರವರು ಸುಂಟಿಕೊಪ್ಪ ನಗರದ ಪ್ರಶಾಂತ್‌ ಬಟ್ಟೆ ಅಂಗಡಿಯಿಂದ ರಸ್ತೆಯ ಇನ್ನೊಂದು ಕಡೆ ಇರುವ ಅಶ್ವಿನಿ ಮೆಡಿಕಲ್ಸ್‌ ಗೆ ಹೋಗಲು ರಸ್ತೆ ದಾಟುತ್ತಿರುವಾಗ ಆರೋಪಿ ಎಸ್.ಬಿ. ಗಣೇಶ ಎಂಬವರು ತಮ್ಮ ಬಾಪ್ಸು ಸುರಾಜ್‌ ಮಜ್ದಾ ವಾಹನ ವನ್ನು ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಗ್ಗಿ ಡಿಸೋಜಾರವರಿಗೆ ಡಿಕ್ಕಿಪಡಿಸಿದ ಕಾರಣ , ಸದರಿಮಗ್ಗಿ ಡಿಸೋಜಾರವರು ಗಾಯಗೊಂಡು ಅವರನ್ನು ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸುವ ಮೃತಪಟ್ಟಿದ್ದು, ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 
 
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ: 

     ಶ್ರೀಮಂಗಲ ಠಾಣಾ ಸರಹದ್ದಿನ ವೆಸ್ಟೆನೆಮ್ಮಾಲೆ ಗ್ರಾಮದ ನಿವಾಸಿ ಪಣಿಎರವರ ಬೊಳ್ಳಿ ಎಂಬವರು ತಮ್ಮ ಮನೆಯಲ್ಲಿರುವಾಗ 7-30 ಗಂಟೆಗೆ ಆರೋಪಿಗಳಾದ ಪಣಿ ಎರವರ ಬೇಬಿ ಹಾಗು ಪಣಿಎರವರ ರಾಮು ಎಂಬವರು ಅಲ್ಲಿಗೆ ಬಂದು ಹಳೇ ದ್ವೇಷದಿಂದ ಜಗಳ ಮಾಡಿ ಕತ್ತಿಯಿಂದ ಕಡಿದು ಗಾಯ ಪಡಿಸಿದ್ದು, ಈ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, March 22, 2015

ಕಾರಿಗೆ ಜೀಪು ಡಿಕ್ಕಿ ಕಾರು ಜಖಂ:
ಮಡಿಕೇರಿ ನಗರದ ಹಿಲ್‌ ರಸ್ತೆಯ ನಿವಾಸಿ ಎಸ್‌.ಎನ್‌. ಗಿರೀಶ್‌ ಎಂಬವರು ದಿನಂಕ 21-3-2015 ರಂದು ಬೆಳಿಗ್ಗೆ 10-00 ಗಂಟೆಗೆ ತಮ್ಮ ಕಾರಿಯಲ್ಲಿ ಮೂರ್ನಾಡು ಕಡೆಯಿಂದ ಮಡಿಕೇರಿಗೆ ಬರುತ್ತಿರುವಾಗ ಎದುರುಗಡೆಯಿಂದ ಕೆಎ-19ಎಂಇ-4699ರ ಬೊಲೆರೋ ಜೀಪನ್ನು ಅದರ ಚಾಲಕ ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲಿಸಿಕೊಂಡು ಬಂದು ಫಿರ್ಯಾದಿ ಎಸ್‌.ಎನ್‌.ಗಿರೀಶ್‌ರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂ ಗೊಂಡಿದ್ದು, ಮಡಿಕೇರಿ ಟ್ರಾಫಿಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಪತಿ-ಪತ್ನಿ ಜಗಳ, ಮನೆ ಮತ್ತು ಸ್ಕೂಟರ್‌ ಹಾನಿ:

ಪತಿ ಪತ್ನಿಯನ್ನು ಅವಾಚ್ಯವಾಗಿ ನಿಂದಿಸಿ ಮನೆಯ ಕಿಟಕಿ ಹಾಗು ಸ್ಕೂಟರ್‌ನ್ನು ಹಾನಿಪಡಿಸಿದ ಘಟನೆ ಶನಿವಾರಸಂತೆಯ ಸುಳುಗಳಲೆ ಕಾಲೋನಿಯಲ್ಲಿ ನಡೆದಿದೆ. ದಿನಾಂಕ21-3-2015 5ರಂದು ಸುಳುಗಳಲೆ ಕಾಲೋನಿಯಲ್ಲಿ ವಾಸವಾಗಿರುವ ಸಿ.ಎಲ್‌. ಹೇಮ ರವರು ರಾತ್ರಿ 2-30 ಗಂಟಯ ಸಮಯದಲ್ಲಿ ತನ್ನ ಮಕ್ಕಳೊಂದಿಗೆ ಇರುವಾಗ ಆಕೆಯ ಪತಿ ಕುಮಾರ ಎಂಬವರು ಮದ್ಯಪಾನ ಮಾಡಿ ಬಂದು ಮನೆಯ ಕಿಟಕಿಯ ಗಾಜುಗಳನ್ನು ಕಬ್ಬಿಣದ ರಾಡಿನಿಂದ ಒಡೆದು ಹಾಕಿದ್ದು ಅಲ್ಲದೆ ಅಂಗಳದಲ್ಲಿ ನಿಲ್ಲಿಸಿದ್ದ ಪತ್ನಿಯ ಸ್ಕೂಟರನ್ನು ಸಹ ಜಖಂ ಪಡಿಸಿದ್ದು, ಪತ್ನಿ ಸಿ.ಎಲ್‌ ಹೇಮನವರ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 


ಕಾರಿಗೆ ಟಾಟಾ ಏಸ್‌ ವಾಹನ ಡಿಕ್ಕಿ, ಇಬ್ಬರಿಗೆ ಗಾಯ:

ದಿನಾಂಕ 21/3/15 ರಂದು ಬೆಳಿಗ್ಗೆ 10.00 ಗಂಟೆಗೆ ಕೆಎ 12 ಎನ್‌ 1236 ರ ಆಲ್ಟೋ ಕಾರಿನಲ್ಲಿ ಪಿರ್ಯಾದಿ ತತಿಮತಿ ನಿವಾಸಿನವೀನ ಮತ್ತು ಮಂಜುನಾಥ ಮತ್ತು ಉಮೇಶ ಎಂಬುವರು ಮತ್ತಿಗೋಡು ಆನೆ ಕ್ಯಾಂಪಿಗೆ ಹೋಗಿ ಆನೆಗಳನ್ನು ನೋಡಿಕೊಂಡು ಬರಲು ಹೋಗಿದ್ದು, ಸದರಿ ಕಾರಿನಲ್ಲಿ ಸಂಜೆ ಮತ್ತಿಗೋಡಿನಿಂದ ವಾಪಾಸು ತಿತಿಮತಿಗೆ ಬರುತ್ತಿದ್ದಾಗ ಉಮೇಶನವರು ಕಾರು ಚಾಲನೆ ಮಾಡುತ್ತಿದ್ದು, 4.00 ಗಂಟೆಗೆ ಮಜ್ಜಿಗೆಹಳ್ಳದ ಕಮಾನು ಗೇಟ್‌ ಬಳಿ ತಲುಪುವಾಗ್ಗೆ, ಎದುರುಗಡೆಯಿಂದ ಟಾಟಾ ಏಸ್‌ ಗೂಡ್ಸ್‌ ಗಾಡಿ ಬಂದಿದ್ದರಿಂದ ಅದಕ್ಕೆ ಸೈಡ್‌ ಕೊಡುವ ಸಮಯದಲ್ಲಿ ಕಾರು ಹತೋಟಿ ತಪ್ಪಿ ಪಲ್ಟಿಯಾಗಿ ಕಾರಿನಲ್ಲಿದ್ದ ಪಿರ್ಯಾದಿ ನವೀನ ಮತ್ತು ಮಂಜುನಾಥನಿಗೆ ರಕ್ತ ಗಾಯವಾಗಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Saturday, March 21, 2015

ಕ್ಷುಲ್ಲಕ ಕಾರಣ, ದಾರಿ ತಡೆದು ಹಲ್ಲೆ:
    ಬ್ರಾಂದಿ ಕುಡಿಸಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಗಳ ದಾರಿ ತಡೆದು ಇಬ್ಬರು ಹಲ್ಲೆ ನಡೆಸಿದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 20-3-2015 ರಂದು ರಾತ್ರಿ 11-00 ಗಂಟೆಯ ಸಮಯದಲ್ಲಿ ಅರ್ವತ್ತೊಕ್ಲು ಗ್ರಾಮದ ನಿವಾಸಿ ಫಿರ್ಯಾದಿ ಜಮ್ಮಡ ಉಮೇಶ ಹಾಗು ರವರ ಸ್ನೇಹಿತ ಮುಕುಂದ ಎಂಬವರು ಗೋಣಿಕೊಪ್ಪ ನಗರದ ನಂದನವನ ಲಾಡ್ಜ್ ಕಡೆಗೆ ಹೋಗುತ್ತಿರುವಾಗ ಅವರಿಗೆ ಕುಪ್ಪಂಡ ಎ ದೇವಯ್ಯ ಹಾಗೂ ಕೇಚಮಾಡ ಪೃಥ್ವಿ ರವರು ಅಲ್ಲಿಗೆ ಬಂದು ಫಿರ್ಯಾದಿಯ ದಾರಿ ತಡೆದು ಬ್ರಾಂದಿ ಕುಡಿಸಬೇಕೆಂದು ತಾಕೀತು ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಾಗು ಕಲ್ಲಿನಿಂದ ಹಲ್ಲೆ ನಡೆಸಿದ್ದು, ಈ ಸಂಬಂಧ ಫಿರ್ಯಾದಿಯ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗಿ ಕಾಣೆ:
   ಮಡಿಕೇರಿ ನಗರದ ತ್ಯಾಗರಾಜ ಕಾಲೋನಿಯಲ್ಲಿ ವಾಸವಾಗಿರುವ ಎಂ.ಯು. ನೌಶಾದ್‌ ಎಂಬವರ ತಂಗಿ 19 ವರ್ಷ ಪ್ರಾಯದ ಕು: ನೌರೀನ್‌ ಎಂಬಾಕೆ ದಿನಾಂಕ 18-3-2015 ರಂದು ಬೆಳಿಗ್ಗೆ 10-00 ಗಂಟೆಗೆ ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ದ್ವೇಷ, ವ್ಯಕ್ತಿಯ ದಾರಿ ತಡೆದು ಹಲ್ಲೆ:
    ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಂಬಟ್ಟಿ ಗ್ರಾಮದಲ್ಲಿ ಫಿರ್ಯಾದಿ ಪಿ.ಎ. ಸಂಶದ್ದೀನ್‌ ಎಂಬವರು ತಮ್ಮ ಕಾರಿ ನಲ್ಲಿ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದಾಗ ಆರೋಪಿ ಗಣೇಶ ಎಂಬವರು ತಮ್ಮ ಆಟೋ ರಿಕ್ಷಾವನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹಲ್ಲೆ ಮಾಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದಾರಿ ತಡೆದು ರಿಕ್ಷಾ ಚಾಲಕನ ಮೇಲೆ ಹಲ್ಲೆ:
     ದಿನಾಂಕ:20-03-15ರಂದು ಸಮಯ ಮದ್ಯಾಹ್ನ 2-45ಗಂಟೆಗೆ ಪಿರ್ಯಾದಿ ಬಿಟ್ಟಂಗಾಲ ಗ್ರಾಮದ ನಿವಾಸಿ ಕೆ. ಗಣೇಶ ಎಂಬವರು ಕೆಎ.12.ಎ.7252ರ ಆಟೋ ರಿಕ್ಷಾದಲ್ಲಿ ಬಿಟ್ಟಂಗಾಲ ಪಂಚಾಯಿತಿ ಪಿ.ಡಿ. ಓ. ಶ್ರೀಮತಿ. ಧರಣಿ ಮತ್ತು ಕಂಪ್ಯೂಟರ್ ಆಪರೇಟರ್ ರವರನ್ನು ಬಾಡಿಗೆಗೆ ಕರೆದುಕೊಂಡು ಬರುತ್ತಿರು ವಾಗ ಅಂಬಟ್ಟಿ ಬಳಿ ತಲುಪುವಾಗ್ಗೆ, ರಸ್ತೆಯಲ್ಲಿ ಆರೋಪಿಗಳಾದ ಸಂಶುದ್ದೀನ್‌, ಸೌಮಲ್‌, ಜಕ್ರೀಯ ರವರುಗಳು ಕೆಎ.01.ಜೆಡ್. 4302ರ ಕಾರನ್ನು ನಿಲ್ಲಿಸಿಕೊಂಡು ಯಾವುದೋ ಆಟೋ ರಿಕ್ಷಾದ ಚಾಲಕನಿಗೆ ಜೋರು ಮಾಡು ತ್ತಿದ್ದು, ಪಿರ್ಯಾದಿಯವರು ಹಾರ್ನ್ ಮಾಡಿ ಕಾರು ತೆಗೆದು ದಾರಿ ಬಿಡಲು ಹೇಳಿದಾಗ ಸದ್ರಿ ಕಾರಿನಲ್ಲಿದ್ದ ಸಂಶುದ್ದೀನ್, ಸೌಮಲ್, ಜಕ್ರಿಯ ಹಾಗೂ ಇತರರು ಪಿರ್ಯಾದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೆ, ಸಂಶುದ್ದೀನ್ ರವರು ಹಾಕಿ ಸ್ಟಿಕ್ ನಿಂದ ಪಿರ್ಯಾದಿ ಯವರ ಎಡದ ಮೊಣಕೈಗೆ ಹೊಡೆದು ನೋವುಂಟು ಮಾಡಿರುವುದಲ್ಲದೆ, ಸೌಮಲ್ ಮತ್ತು ಜಕ್ರಿಯ ಮತ್ತು ಇತರರು ಕೈಗಳಿಂದ ಪಿರ್ಯಾದಿಯ ತಲೆಗೆ ಮುಖಕ್ಕೆ ಹೊಡೆದು ಕಾಲಿನಿಂದ ಕಿಬ್ಬೊಟ್ಟೆಗೆ ಒದ್ದು ನೋವುಂಟು ಮಾಡಿರುವುದಾಗಿ ನೀಡಿದ ದೂರಿಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

17 ವರ್ಷದ ಹುಡುಗಿ ಕಾಣೆ:
     ಸೋಮವಾರಪೇಟೆ ತಾಲೋಕು ತೋಳೂರು ಶೆಟ್ಟಳ್ಳಿ ಗ್ರಾಮದ ನಿವಾಸಿ ಟಿ.ಪಿ. ರಾಜೇಂದ್ರ ರವರ ಮಗಳು 17 ವರ್ಷ ಪ್ರಾಯದ ಸುಶ್ಮತಾಳು ದಿನಾಂಕ 19-3-2015 ರಂದು ಶಾಲೆಗೆ ಹೋಗದೆ ಮನೆಯಲ್ಲಿ ಇದ್ದು, ಮನೆಯಿಂದ ಆಕೆ ಕಾಣೆಯಾಗಿರುತ್ತಾಳೆಂದು ಟಿ.ಪಿ. ರಾಜೇಂದ್ರರವರು ದಿನಾಂಕ 20-3-2015 ರಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಹುಡುಗಿ ಕಾಣೆ ಪ್ರಕರಣ ದಾಖಲು:
   ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಪೆರಾಜೆ ಗ್ರಾಮದ ನಿವಾಸಿ ಎ.ಎಸ್‌. ಧನಂಜಯ ಎಂಬವರ ಮಗಳು 21 ವರ್ಷ ಪ್ರಾಯದ ಸುಕನ್ಯ 5 ವರ್ಷಗಳಿಂದ ಬೆಂಗಳೂರಿನಲ್ಲಿ ಪ್ರೈವೇಟ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಮಗಳು 15 ದಿವಸಗಳ ಹಿಂದೆ ಸಂಬಳ ಕಡಿಮೆ ಇದ್ದು, ಖರ್ಚಿಗೆ ಸಾಕಾಗದೇ ಇದ್ದುದ್ದರಿಂದ ವಾಪಾಸ್ಸು ಬಟ್ಟೆಬರೆಯೊಂದಿಗೆ ಮನೆಗೆ ಬಂದು ಕೆಲಸಕ್ಕಾಗಿ ವಿಚಾರಸುತ್ತಿದ್ದಳು, ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ, ದಿನಾಂಕ 13-03-2015 ರಂದು ಮಗಳು ಚಿಕ್ಕಮ್ಮನ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಸಮಯ 4-00 ಪಿ ಎಂ ಗೆ ಒಂದು ಜೊತೆ ಬಟ್ಟೆಯೊಂದಿಗೆ ಹೋಗಿದ್ದು, ಆಕೆ ಹೋದ 2 ದಿವಸ ಕಳೆದ ನಂತರ ಕೆಲಸದವರಿಗೆ ಸಂಬಳ ಕೊಡಲು ನೋಡಿದಾಗ ಮನೆಯಲ್ಲಿ ಇಟ್ಟಿದ್ದ 42,000 ರೂ ಮತ್ತು 10 1/2 ಪವನಿನ ಚಿನ್ನದ ಒಡವೆಗಳು ಕಾಣೆಯಾಗಿದ್ದು, ಸಂಶಯಗೊಂಡು ಆಕೆಯ ಚಿಕ್ಕಮ್ಮನ ಮನೆಗೆ ಪೋನ್ ಮಾಡಿ ವಿಚಾರಿಸಿದಾಗ ಆಕೆ ಅಲ್ಲಿಗೆ ಹೋಗದೇ ಇದ್ದು, ಇದುವರೆಗೂ ಸಂಬಂದಿಕರ ಮನೆಗಳಲ್ಲಿ ವಿಚಾರಿಸಿದಲ್ಲೂ ಪತ್ತೆಯಾಗದೇ ಇದ್ದು ಆಕೆಯನ್ನು ಪತ್ತೆಹಚ್ಚಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

Friday, March 20, 2015

ವಿದ್ಯುತ್‌ ಸ್ಪರ್ಷ ಕಾರ್ಮಿಕನ ಸಾವು:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಹೋರೂರು ಗ್ರಾಮದ ಧೀರ ಎಸ್ಟೇಟ್‌ನಲ್ಲಿ ತಮಿಳುನಾಡು ಮೂಲದ ಕೆ. ರಾಮರಾಜ್‌ ತನ್ನ ತಂದೆ ಕುಪ್ಪನ್‌ ಹಾಗೂ ಅವರ ಕುಟುಂಭದವರು ಒಂದು ವಾರದ ಹಿಂದೆ ಒಳ್ಳೆ ಮೆಣಸು ಕುಯ್ಯುವ ಕೆಲಸಕ್ಕೆಂದು ದೀರಾ ಬಂದಿದ್ದು, ದಿನಾಂಕ 19.03.15 ರಂದು ಸಮಯ 09.30 ಗಂಟೆಗೆ ಕುಪ್ಪನ್‌ರವರು ಎಸ್ಟೇಟ್‌ನಲ್ಲಿ ಒಳ್ಳೆ ಮೆಣಸು ಕುಯ್ಯುವ ಕೆಲಸ ಮಾಡಿಕೊಂಡಿ ರುವಾಗ ಕಬ್ಬಿಣದ ಏಣಿಯ ಮೂಲಕ ಮರದಲ್ಲಿರುವ ಒಳ್ಳೆಮೆಣಸು ಬಳ್ಳಿಯಿಂದ ಒಳ್ಳೆ ಮೆಣಸು ಕುಯ್ಯುತ್ತಿರುವ ವೇಳೆ ಅಕಸ್ಮಿಕವಾಗಿ ಮರದಿಂದ ಜಾರಿ ಪಕ್ಕದಲ್ಲಿ ಹಾದು ಹೋಗಿರುವ ವಿಧ್ಯುತ್‌ ತಂತಿಗೆ ತಾಗಿ ವಿಧ್ಯುತ್‌ ಸ್ಪರ್ಶಗೊಂಡು ಗಂಭೀರ ಗಾಯಗೊಂಡವರನ್ನು ಮಡಿಕೇರಿ ಜಿಲ್ಲಾ ಸರ್ಕಾರಿ ಅಸ್ಪತ್ರೆಗೆ ಸಾಗಿಸುವಾಗ ಸಾವನಪ್ಪಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.   

ಹೆಂಗಸು ಕಾಣೆ ಪ್ರಕರಣ ದಾಖಲು

     ಮಾನಸಿಕ ಅಸ್ವಸ್ಥಮಹಿಳೆಯೊಬ್ಬರು ಕಾಣೆಯಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವರದಿಯಾಗಿದೆ. ಮಡಿಕೇರಿ ನಗರದ ಮಹದೇವಪೇಟೆ ನಿವಾಸಿ ಪಿ.ಎ. ಮಂಜುನಾಥ ಎಂಬವರ ತಾಯಿ 18 ವರ್ಷ ಪ್ರಾಯದ ಪಾರ್ವತಿ ಎಂಬವರು ಕೆಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ದಿನಾಂಕ 15-3-2015 ರಂದು ಪಿ.ಎ. ಮಂಜುನಾಥರವರ ತಮ್ಮನವರ ಮನೆ ಮದೆನಾಡುವಿಗೆ ಹೋಗಿ ಬರುವುದಾಗಿ ಹೋಗಿ ಅಲ್ಲಿಂದ ಕಾಣೆಯಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

Thursday, March 19, 2015

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:
    ಸಿದ್ದಾಪುರ ಠಾಣಾ ಸರಹದ್ದಿನ ಚೆನ್ನಯ್ಯನ ಕೋಟೆ ಗ್ರಾಮದ ನಿವಾಸಿ ಸಿ.ಬಿ. ಸ್ಟೀಪನ್‌ ಹಾಗು ಅವರ ಸ್ನೇಹಿತರಾದ ಪ್ರವೀಣ್‌ಹಾಗು ರತೀಶ್‌ ರವರೊಂದಿಗೆ ದಿನಾಂಕ 17-3-2015 ರಂದು ಸಂಜೆ 7-00 ಗಂಟೆಯ ಸಮಯದಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಸಿಗರೇಟ್‌ ವಿಚಾರದಲ್ಲಿ ಜೊತೆಯಲ್ಲಿದ್ದ ಪ್ರವೀಣ್‌ ಹಾಗು ರತೀಶ್‌ರವರು ಜಗಳ ಮಾಡಿ ಸ್ಟೀಪನ್‌ರವರ ಮೇಲೆ ಕೈಯಿಂದ ಹಾಗು ಕಲ್ಲಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ವಿಚಾರವಾಗಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1.5 ಲಕ್ಷ ಮೌಲ್ಯದ ಕರಿಮೆಣಸು ಕಳವು:

    ದಿನಾಂಕ 17-3-2015ರ ರಾತ್ರಿ ಸಮಯದಲ್ಲಿ ಶನಿವಾರಸಂತೆ ಠಾಣಾ ವ್ಯಾಪ್ತಿಯ ಚಂಗಡಹಳ್ಳಿ ಗ್ರಾಮದ ನಿವಾಸಿ ಎಂ.ಪಿ. ಶಣ್ಮುಗಪ್ಪ ಎಂಬವರ ತಮ್ಮನ ಮನೆಯ ಹಿಂಭಾಗದಲ್ಲಿ ಒಣಗಿಸಿ ಇಟ್ಟ 13 ಚೀಲ ಕರಿಮೆಣಸಿನ ಪೈಕಿ 8 ಚೀಲ ಕರಿಮೆಣಸನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿತನಿಖೆ ಕೈಗೊಂಡಿದ್ದಾರೆ. 

ಶಾಲಾ ಮಕ್ಕಳ ಆಟೋಗೆ ಕಾರು ಡಿಕ್ಕಿ, ಮೂವರಿಗೆ ಗಾಯ: 
    ವಿರಾಜಪೇಟೆ ತಾಲೋಕು ಪಾಲಿಬೆಟ್ಟ ನಿವಾಸಿ ತನ್ನ ಬಾಪ್ತು ಆಟೋ ರಿಕ್ಷಾದಲ್ಲಿ ಎಂದಿನಂತೆ ಪಾಲಿಬೆಟ್ಟದ ಲೂಡ್ಸ್‌ ಶಾಲೆಯ ಮಕ್ಕಳನ್ನು ಕೂರಿಸಿಕೊಂಡು ತೋಪನಕೊಲ್ಲಿಯ ಕಡೆಗೆ ಹೋಗುತ್ತಿದ್ದಾದ ಎದುರುಕಡೆಯಿಂದ ಸಂಶುದ್ದೀನ್‌ ಎಂಬವರು ತಮ್ಮ ಬಾಪ್ಸು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಟೋ ರಿಕ್ಷಾ ಮಗುಚಿಕೊಂಡು ಆಟೋರಿಕ್ಚಾದಲ್ಲಿದ್ದ ಇಬ್ಬರು ಮಕ್ಕಳಿಗೆ ಹಾಗು ಆಟೋ ಚಾಲಕನಿಗೆಗಾಯಗಳಾಗಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Wednesday, March 18, 2015

ಬಾಲಕಿ ಮೇಲೆ ಬಾಲಕನಿಂದ ಮಾನಭಂಗಕ್ಕೆ ಯತ್ನ:

    ಶಾಲೆಯಿಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ಅಪ್ರಾಪ್ತ ಹುಡುಗನೋರ್ವ ಮಾನಭಂಗಕ್ಕೆ ಯತ್ನಿಸಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ತೂಚಮಕೇರಿ ಗ್ರಾಮದಲ್ಲಿ ನಡೆದಿದೆ. ತೂಚಮಕೇರಿ ಗ್ರಾಮದ ವಾಸಿ ಪೆಮ್ಮಂಡ ಎ ಮುತ್ತಪ್ಪ ಎಂಬವರ 14 ವರ್ಷ ಪ್ರಾಯದ ಮಗಳು ಗಂಗಮ್ಮ ಬೆಕ್ಕೆಬೆಕ್ಕೆಸೊಡ್ಲೂರು ಗ್ರಾಮದಲ್ಲಿ ರುವ ಶಾರಧಾ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು ದಿನಾಂಕ 17-3-2015 ರಂದು ಸಂಜೆ ಶಾಲೆಯಿಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ಚಿಂಡಮಾಡ ಎಂಬವರ ಲೈನುಮನೆಯಲ್ಲಿ ವಾಸವಾಗಿರುವ 15 ವರ್ಷ ಪ್ರಾಯದ ವಿಜೀತ್‌ ಎಂಬ ಹುಡುಗ ಗಂಗಮ್ಮಳ ದಾರಿತಡೆದು ಪಕ್ಕದ ತೋಟಕ್ಕೆ ಎಳೆದುಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿದ್ದು, ಈ ವಿಚಾರವಾಗಿ ಗಂಗಮ್ಮಳ ತಂದೆ ಪೆಮ್ಮಂಡ ಎ.ಮುತ್ತಪ್ಪನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯಿಂದ ಪತ್ನಿಗೆ ಕಿರುಕುಳ ಪ್ರಕರಣ ದಾಖಲು:
     ಕುಟ್ಟಪಟ್ಟಣದಲ್ಲಿ ಫಿರ್ಯಾದಿ ಶ್ರೀಮತಿ ಸಿಂಧು ಎಂಬವರು ತಮ್ಮ ಪತಿ ಮಣಿಯೊಂದಿಗೆ ವಾಸವಾಗಿದ್ದು, ಪ್ರತಿ ದಿನ ವಿನಾಕಾರಣ ಸದರಿ ಮಣಿ ಮಾನಸಿಕ ಹಾಗು ದೈಹಿಕ ಹಿಂಸೆ ನೀಡುತ್ತಿದ್ದು, ದಿನಾಂಕ 17-3-2015 ರಂದು ಶ್ರೀಮತಿ ಸಿಂಧು ಮನೆಯಲ್ಲಿರುವಾಗ ಪತಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ತಲೆ ಕೂದಲನ್ನು ಎಳೆದು ಮಂಚಕ್ಕೆ ಕಟ್ಟಿಹಾಕಿ ಗಾಯಪಡಿಸಿದ್ದು, ಸಿಂಧುರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂ ಡಿದ್ದಾರೆ.   

ಕಾರುಗಳ ಮುಖಾಮುಖಿ ಡಿಕ್ಕಿ ಒಬ್ಬನಿಗೆ ಗಾಯ:

   ಕೇರಳ ಮೂಲದ ಟೋಮಿ ಎಂಬವರು ದಿನಾಂಕ 17.3.15 ರಂದು ಸಮಯ 10:30 ಗಂಟೆಗೆ ಬೀನು ವರ್ಗಿಸ್‌‌ರವರ ಜೊತೆ ಕೇರಳದಿಂದ ಬೆಂಗಳೂರಿಗೆ ಗೋಣಿಕೊಪ್ಪ ಮಾರ್ಗವಾಗಿ ಕೆಎಲ್‌.59.ಎಂ.ಜಿ.5104 ರ ಕಾರಿನಲ್ಲಿ ಹೋಗುತ್ತಿದ್ದು, ತಿತಿಮತಿಯ ಪಾಲಿಬೆಟ್ಟ ಜಂಕ್ಷನ್‌ ಹತ್ತಿರ ತಲುಪುವಾಗ್ಗೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಕೆಎ.51.ಎಂ.ಸಿ.7870 ರ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪಿರ್ಯಾದಿಯವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಮುಂಭಾಗವು ಜಖಂಗೊಂಡಿದ್ದು, ಪಿರ್ಯಾದಿ ಟೋಮಿಯವರ ತಲೆಯ ಭಾಗಕ್ಕೆ ಗಾಯವಾಗಿ ಡಿಕ್ಕಿಪಡಿಸಿದ ಕಾರು ಸಹ ಜಖಂಗೊಂಡಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಸಾವು:

     ದಿನಾಂಕ 9-3-2015 ರಂದು ಶಿರಂಗಾಲ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಟರಾಜು ಹಾಗು ಕಾಳೇಗೌಡ ಎಂಬವರು ಸ್ಕೂಟಿಯೊಂದರಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಸತೀಶ್‌ ಎಂಬವರು ತಮ್ಮ ಮೋಟಾರ್‌ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಸ್ಖೂಟಿಯಲ್ಲಿ ಹೋಗುತ್ತಿದ್ದ ಕಾಳೇಗೌಡ ರವರು ಗಾಯಗೊಂಡಿದ್ದು ಸದರಿಯವರು ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿದ್ದು ಚಿಕಿತ್ಸೆ ಫಲಕಾರಿಯಾಗಿದೆ ಸದರಿ ಗಾಯಾಳು ಮೃತಪಟ್ಟಿದ್ದು, ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Tuesday, March 17, 2015

ಮಾನಸಿಕ ಅಸ್ವಸ್ಥ ಮಹಿಳೆ ಕಾಣೆ 
clip_image002                 ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಮಹಿಳೆಯೊಬ್ಬರು ಕಾಣೆಯಾದ ಘಟನೆ ಮೂರ್ನಾಡು ಬಳಿಯ ಹೊದ್ದೂರು ಗ್ರಾಮದಲ್ಲಿ ನಡೆದಿದೆ. ಹೊದ್ದೂರು ಗ್ರಾಮದ ನಿವಾಸಿ ಎನ್‌.ಸಿ.ಅಪ್ಪಚ್ಚ ಎಂಬವರ ಪತ್ನಿ 48 ವರ್ಷ ಪ್ರಾಯದ ಮೀನಾ ಎಂಬಾಕೆಯು ಮಾನಸಿಕ ಅಸ್ವಸ್ಥಳಾಗಿದ್ದು ದಿನಾಂಕ 07/03/2015ರಂದು ಮನೆಯ ಪಟ್ಟಿಗೆಯಲ್ಲಿದ್ದ ಆಕೆಯ ಬಟ್ಟೆಗಳನ್ನು ತೆಗೆದುಕೊಂಡು ಎಲ್ಲಿಗೋ ಹೋಗಿದ್ದು, ಎಲ್ಲಾ ಕಡೆಗಳಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತೋಟದಿಂದ ಒಳ್ಳೆಮೆಣಸು ಕಳವು 
               ತೋಟವೊಂದರಿಂದ ಹಸಿ ಒಳ್ಳೆಮೆಣಸನ್ನು ಕಳವು ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಬೊಳ್ಳುಮಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ: 11-03-15ರಂದು ಬೊಳ್ಳುಮಾಡು ನಿವಾಸಿ ಪಾಲಚಂಡ ಚಿಟ್ಟಿಯಪ್ಪ ಎಂಬವರ ತೋಟ ದಿಂದ ಯಾರೋ 3 ಜನ ವ್ಯಕ್ತಿಗಳು 3 ಚೀಲಗಳಲ್ಲಿ ಒಳ್ಳೆಮೆಣಸನ್ನು ಕಳವು ಮಾಡಿಕೊಂಡು ಹೋಗುವುದನ್ನು ಮಂಡೇಟಿರ ಪ್ರಭು ಎಂಬವವರು ನೋಡಿದಾಗ ಆ ವ್ಯಕ್ತಿಗಳು ಕೈಯಲ್ಲಿದ್ದ ಒಳ್ಳೆಮೆಣಸಿನ ಚೀಲವನ್ನು ಅಲ್ಲಿಯೇ ಬಿಸಾಡಿ ಓಡಿ ಹೋಗಿರುವುದಾಗಿ ಮಂಡೇಟಿರ ಪ್ರಭುರವರು ಚಿಟ್ಟಿಯಪ್ಪನವರಿಗೆ  ಪೋನ್ ಮುಖಾಂತರ ತಿಳಿಸಿದ ನಂತರ ಚಿಟ್ಟಿಯಪ್ಪನವರು ತೋಟದ ಬಳಿ ಪರಿಶೀಲಿಸಿದಾಗ ಸದರಿ 3 ಬ್ಯಾಗ್ ಗಳಲ್ಲಿ ಒಟ್ಟು 10 ಕೆ.ಜಿ. ಹಸಿ ಒಳ್ಳೆಮೆಣಸು ಇದ್ದು, ನಂತರ ತೋಟದೊಳಗೆ ಹೋಗಿ ನೋಡಲಾಗಿ, ತೋಟದಲ್ಲಿ 42 ಒಳ್ಳೆಮೆಣಸು ಬಳ್ಳಿಯಿಂದ ಅಂದಾಜು 15000/- ಬೆಲೆಯ ಒಂದು ಕ್ವಿಂಟಾಲ್ ಹಸಿ ಒಳ್ಳೆಮೆಣಸು ಕಳವು ಮಾಡಿ ಕೊಂಡು ಹೋಗಿರುವುದು ಕಂಡು ಬಂದಿತೆನ್ನಲಾಗಿದೆ. ನಂತರ ದಿನಾಂಕ: 16-03-15 ರಂದು  ಮಂಡೇಟ್ಟಿರ ಉಮೇಶ್  ಎಂಬವರಲ್ಲಿ ಕೆಲಸ ಮಾಡಿಕೊಂಡಿರುವ ರವಿ, ಉಮೇಶ್ ಮತ್ತು ತಮಿಳರ ಪಾಂಡಿ ಎಂಬವರು ಚಿಟ್ಟಿಯಪ್ಪನವರ ತೋಟದಲ್ಲಿ ಒಳ್ಳೆಮೆಣಸು ಕಳವು ಮಾಡಿದ ವ್ಯಕ್ತಿಗಳೆಂದು ಮಂಡೇಟಿರ ಪ್ರಭುರವರು ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ಮೃತ ದೇಹ ಪತ್ತೆ
                ಅಪರಿಚಿತ ಗಮಡಸಿನ ಮೃತ ದೇಹವೊಂದು ವಿರಾಜಪೇಟೆ ನಗರದ ಬಳಿ ಮಗ್ಗುಲ ಗ್ರಾಮದಲ್ಲಿ ಪತ್ತೆಯಾಗಿದೆ. ದಿನಾಂಕ 16-03-2015 ರಂದು ಐಮಂಗಲ ಗ್ರಾಮದ ನಿವಾಸಿ ಬಿ.ಎಂ.ನಾಣಯ್ಯ ಎಂಬವರು ವಿರಾಜಪೇಟೆ ನಗರಕ್ಕೆ ಬರುತ್ತಿರುವಾಗ ಮಗ್ಗುಲ ಗ್ರಾಮದ ರವಿರಾಜ್ ಗ್ಯಾಸ್ ಏಜೆನ್ಸಿಯ ಪಕ್ಕದ ಸಾರ್ವಜನಿಕ ಕಚ್ಚಾ  ರಸ್ತೆಯಲ್ಲಿ ಸುಮಾರು 50 ವರ್ಷ ಪ್ರಾಯದ ಒಬ್ಬ ಅಪರಿಚಿತ ಗಂಡಸು ಮೃತ ಪಟ್ಟಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ಯಾವುದೇ ವಿವರಗಳು ತಿಳಿದು ಬಂದಿರುವುದಿಲ್ಲ. 

ಕಾರು ಮಗುಚಿ ಹಾನಿ
            ಚಾಲಕನ ಅಜಾಗರೂಕತೆಯಿಂದ ಕಾರೊಂದು ಮಗುಚಿಕೊಂಡು ಹಾನಿಗೀಡಾದ ಘಟನೆ ಕುಶಾಲನಗರ ಬಳಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 12-3-2015 ರಂದು ಸೋಮವಾರಪೇಟೆಯ ಹಾಡಗೇರಿ ನಿವಾಸಿ ಸೆಂದಿಲ್‌ ನಾದನ್‌ ಎಂಬವರು ಅವರ ಅಳಿಯ ಶರವಣನ್ ನವರ ಕಾರು ನಂ ಕೆಎ-03-ಎಂಯು-2248 ರ ಮಾರುತಿ ಸ್ವಿಫ್ಟ್‌ ಡಿಸೈರ್ ಕಾರಿನಲ್ಲಿ ಕುಶಾಲನಗರಕ್ಕೆ ಬರುತಿರುವಾಗ ಬಸವನಹಳ್ಳಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎದುರಿನಿಂದ ದನಗಳು ಅಡ್ಡ ಬರುತಿದ್ದುದನ್ನು ತಪ್ಪಿಸಲು ಚಾಲಕ ಶರವಣನ್‌ರವರು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ಚಾಲಕನ ನಿಂಯಂತ್ರಣ ತಪ್ಪಿ ರಸ್ತೆಯ ಎಡ ಬಾಗಕ್ಕೆ ಮಗುಚಿಕೊಂಡು ಜಖಂಗೊಂಡಿದ್ದು ಕಾರಿನಲ್ಲಿದ್ದ ಸೆಂದಿಲ್‌ ನಾದನ್ ಹಾಗೂ ಅವರ ಅಳಿಯ ಶರವಣನ್ ರವರಿಗೆ ಗಾಯಗಳಾಗಿರುವುದಿಲ್ಲ ಎಂಬುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ.
               ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ಬಳಿಯ ಐಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 16/03/2015 ರಂದು ಹಾಸನ ಜಿಲ್ಲೆಯ ಸಕಲೇಶಪುರದ ಬಾಳೆಗದ್ದೆ ನಿವಾಸಿ ದಿನೇಶ ಎಂಬವರ ಅಣ್ಣ ಆನಂದ ಎಂಬವರು ಅವರ ಪತ್ನಿಯ ತವರು ಮನೆ ಇರುವ ಸೋಮವಾರಪೇಟೆ ಬಳಿಯ ಯಡವಾರೆಗೆ ಹೋಗಿ ಅಲ್ಲಿಂದ ಮನೆಗೆ ವಾಪಾಸು ಹೋಗುವಾಗ ಐಗೂರಿನಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾಗಿ ಬಿದ್ದಿರುವುದಾಗಿ ದಿನೇಶರವರ ಚಿಕ್ಕಮನ ಮಗ ಉಮೇಶ ತಿಳಿಸಿದ ಮೇರೆ ದಿನೇಶರವರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ಅಣ್ಣ ಆನಂದ ಮೃತನಾಗಿದ್ದು, ಜೀವನದಲ್ಲಿ ಜುಗುಪ್ಸೆಗೊಂಡು ಯಾವುದೋ ವೀಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ
              ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಸುವಂತೆ ನಟಿಸಿ ಅತ್ಯಾಚಾರ ಮಾಡಿರುವ ಘಟನೆ ಪೊನ್ನಂಪೇಟೆ ಬಳಿಯ ತಿತಿಯಲ್ಲಿ ನಡೆದಿದೆ. ದಿನಾಂಕ 01-03-15 ರಂದು ನಲ್ಲೂರು ಗ್ರಾಮದ ಪ್ರಿಯದರ್ಶಿನಿ ಕಾಲೊನಿ ನಿವಾಸಿ ಪಿ.ಕೆ.ತಿಮ್ಮ ಎಂಬವರು ಅವರ ಪತ್ನಿ  ಗಂಗೆಯೊಂದಿಗೆ ಕೂಲಿ ಕೆಲಸಕ್ಕೆ ಹೋಗಿದ್ದು ಸಂಜೆ ಕೆಲಸ ಮುಗಿಸಿ ವಾಪಾಸು ಮನೆಗೆ ಬಂದಾಗ ಮಗಳು ಮನೆಯಲ್ಲಿ ಕಾಣದಾಗಿದ್ದು  ಆಕೆಯ ಬಗ್ಗೆ ಅಕ್ಕ ಪಕ್ಕ ವಿಚಾರಿಸಿದಾಗ ಆಕೆಯು ಅದೇ  ಗ್ರಾಮದ ಮಹೇಶ ಎಂಬಾತನ್ನು ಪ್ರೀತಿಸುತ್ತಿರುವ ವಿಚಾರ ತಿಳಿದಿದ್ದು ಆತನೇ ಮಗಳನ್ನು ಕರೆದುಕೊಂಡು ಹೋಗಿರುವುದು ತಿಳಿದುಬಂದಿತೆನ್ನಲಾಗಿದೆ. ನಂತರ ದಿನಾಂಕ 16-03-15 ರಂದು ತಿಮ್ಮರವರ ಮಗಳು ಮನೆಗೆ ವಾಪಾಸು ಬಂದು ಆಕೆಯನ್ನು ಮಹೇಶನು ಕರೆದುಕೊಂಡು ಹೋಗಿ ಒಂಟಿಯಂಗಡಿಯ ಅವರ ಭಾವನವರ ಲೈನು ಮನೆಗೆ ಕರೆದುಕೊಂಡು ಹೋಗಿ ಆಕೆಯನ್ನು ಹಲವಾರು ಬಾರಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದು, ಕೆಲವು ದಿವಸದ ನಂತರ  ಆತ ಶ್ರೀಮಂಗಲಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಪೆಮ್ಮಂಡ ಜಯರವರ ಲೈನು ಮನೆಯಲ್ಲಿ ಸಹಾ ಬಲಾತ್ಕಾರವಾಗಿ ಅತ್ಯಾಚಾರ ಮಾಡಿರುವುದಾಗಿ ತಂದೆಯೊಂದಿಗೆ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Monday, March 16, 2015

ಕೆಲಸದಾಳುಗಳ ವಿಚಾರದಲ್ಲಿ ಜಗಳ ವ್ಯಕ್ತಿಯ ಮೇಲೆ ಹಲ್ಲೆ:
     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಾರ್ಮಾಡು ಗ್ರಾಮದ ನಿವಾಸಿ ಬಂಟರ ಬಿ. ವಿಠಲ ಎಂಬವರು ದಿನಾಂಕದಿನಾಂಕ15-3-2015 ರಂದು ಅಮ್ಮತ್ತಿ- ಒಂಟಿಯಂಗಡಿ ಪಟ್ಟಣದಲ್ಲಿ ಅವರ ಪರಿಚಿತ ವ್ಯಕ್ತಿಗಳೊಂದಿಗೆ ಕಾರ್ಮಿಕರ ಬಗ್ಗೆ ಮಾತನಾಡಿಕೊಂಡಿರುವ ಸಂದರ್ಭದಲ್ಲಿ ಕಣ್ಣಂಗಾಲ- ಅಮ್ಮತ್ತಿ ನಿವಾಸಿ ಬಿಲ್ಲವರ ರಘು  ಹಾಗು ಒಂಟಿಯಂಗಡಿ ನಿವಾಸಿ ಜಗ್ಗು ಎಂಬವರು ಅಲ್ಲಿಗೆ ಬಂದು ಹಳೇ ದ್ವೇಷದಿಂದ ಬಂಟರ ಬಿ. ವಿಠಲರೊಂದಿಗೆ ಜಗಳ ಮಾಡಿ ಕೈಯಿಂದಹಲ್ಲೆ ಮಾಡಿದ್ದು ಅಲ್ಲದೆ ಜಗಳ ಬಿಡಿಸಲು ಬಂದ ಪೂಣಚ್ಚರವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ  ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Sunday, March 15, 2015

ಕತ್ತಿಯಿಂದ ಕಡಿದು ವ್ಯಕ್ತಿಯ ಕೊಲೆ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬಳಿಗೇರಿ ಗ್ರಾಮದ ಬೊಳ್ಳೂರು ಮೋಹನ್‌ರವರ ಲೈನ್‌ ಮನೆಯಲ್ಲಿ ಜೇನುಕುರುಬರ ಮುತ್ತಾ ಹಾಗು ಪತ್ನಿ ಬಾಗ್ಯ ವಾಸವಾಗಿದ್ದು ದಿನಾಂಕ 14-3-2015 ರಂದು ರಾತ್ರಿ ಸದರಿ ಮುತ್ತಾತಾನು ವಾಸವಾಗಿದ್ದ ಲೈನು ಮನೆಯ ಯಜಮಾನ ಮೋಹನ್‌ರವರೊಂದಿಗೆ ಜಗಳ ಮಾಡಿ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದು, ಅಲ್ಲದೆ ತನ್ನ ಪತ್ನಿ ಭಾಗ್ಯಳ ಮೇಲೂ ಕತ್ತಿಯಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:

     ತೋಟಕ್ಕೆ ಹಸು ನುಗ್ಗಿದ ವಿಚಾರದಲ್ಲಿ ಶನಿವಾರಸಂತೆ ನಿಡ್ತಕೊಪ್ಪಲು ಗ್ರಾಮದ ನಿವಾಸಿಗಳಾದ ಫಿರ್ಯಾದಿ ಶ್ರೀಮತಿ ಪ್ರೇಮ ಹಾಗುಪುಟ್ಟಸ್ವಾಮಿ ಎಂಬವರ ನಡುವೆ ಜಗಳವಾಗಿದ್ದು, ಪುಟ್ಟಸ್ವಾಮಿ ಯವರು ಶ್ರೀಮತಿ ಪ್ರೇಮಾರವರನ್ನು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಶನಿವಾರಸಂತೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮೂರ್ಚೆ ಗೋಗದಿಂ ಬಳಲುತ್ತಿದ್ದ ಯುವಕನ ಆತ್ಮಹತ್ಯೆ:

     ನಾಪೋಕ್ಲು ಠಾಣಾ ಸರಹದ್ದಿನ ಯವಕಪಾಡಿ ಗ್ರಾಮದ ನಿವಾಸಿ ವೇಲು ಎಂಬವರ ಮಗ 18 ವರ್ಷ ಪ್ರಾಯದ ರವಿ ಎಂಬಾತ ಮೂರ್ಚೆ ರೋಗದಿಂದ ಬಳಲುತ್ತಿದ್ದು ಇದರಿಂದ ಜಿಗುಪ್ಸೆಗೊಂಡು ದಿನಾಂಕ 14-3-2015 ಮನೆಯಲ್ಲಿ ಯಾರೂ ಇಲ್ಲದೆ ಸಮುದಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೈಕ್‌ಗೆ ಜೀಪು ಡಿಕ್ಕಿ ಹಿಂಬದಿ ಸವಾರನಿಗೆ ಗಾಯ:

    ದಿನಾಂಕ 14-3-2015 ರಂದು ಮೈಸೂರಿನ ನಿವಾಸಿ ಸಲ್ಮಾನ್‌ ಅಹಮ್ಮದ್‌ ಎಂಬವರು ಜಾಹಿದ್‌ರೊಂದಿಗೆ  ವಿರಾಜಪೇಟೆಯಿಂದ ಮೈಸೂರಿನ ಕಡೆಗೆ ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಹಾತೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಶ್ರಿಜನ್‌ ಎಂಬವರು ತಮ್ಮ ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿ ಪಡಿಸಿದ ಪರಿಣಾಮವಾಗಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಹಿಂಬದಿ ಸವಾರ ಜಾಹಿದ್‌ರವರಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಗೋಣಿಕೊಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Saturday, March 14, 2015

ಅಕ್ರಮ ಮರ ಮಾರಾಟ, ಪ್ರಕರಣ ದಾಖಲು:

     ವ್ಯಕ್ತಿಯೊಬ್ಬರು ಅಕ್ರಮವಾಗಿ ನಂದಿ ಮರಗಳನ್ನು ಕಡಿದು ಮಾರಾಟ ಮಾಡಿದ ಬಗ್ಗೆ ಶ್ರೀಮಂಗಲ ಠಾಣಾ ವ್ಯಾಪ್ತಿಯ ಹುದಿಕೇರಿ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಹುದಿಕೇರಿ ಗ್ರಾಮದ ವಾಸಿ ಕಿರಿಯಮಾಡ ತಮ್ಮಯ್ಯ ಎಂಬ ವರು ತಮ್ಮಕಾಫಿ ತೋಟದಲ್ಲಿದ್ದ ಅಕ್ರಮವಾಗಿ ಮರಗಳನ್ನು ಕಡಿದು ಮಾರಾಟ ಮಾಡಿರುವ ಬಗ್ಗೆ ಶ್ರೀಮಂಗಲ ಠಾಣಾಧಿಕಾರಿಯವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸದರಿಯವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಆರೋಪಿ ಕಿರಿಯಮಾಡ ತಮ್ಮಯ್ಯನವರು ಸರಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಸುಮಾರು 50000 ಸಾವಿರ ರೂ ಬೆಲೆಬಾಳುವ ನಂದಿಮರಗಳನ್ನು ಕಡಿದು ಮಾರಾಟ ಮಾಡಿರುವುದನ್ನು ಪತ್ತೆಹಚ್ಚಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.   

3 ತಿಂಗಳ ಮಗುವನ್ನು ಕೊಂದ ತಂದೆ, ಪ್ರಕರಣ ದಾಖಲು:

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಿಳಿಗೇರಿ ಗ್ರಾಮದಲ್ಲಿ ವಾಸವಾಗಿರುವ ಸುರೇಶ ಎಂಬ ವ್ಯಕ್ತಿ ದಿನಾಂಕ 27-2-2015 ರಂದು ತನ್ನ 3 ತಿಂಗಳ ಗಂಡು ಮಗುವನ್ನು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿ ದಿನಾಂಕ 28-2-2015 ರಂದು ಮಗುವಿನ ಶವವನ್ನು ಹೂತು ಹಾಕಿದ್ದು, ಈ ಸಂಬಂಧವಾಗಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಪ್ರಕರಣ ದಾಖಲಾಗಿದ್ದು, ತರುವಾಯ ಸದರಿ ಮಗುವನ್ನು ಆರೋಪಿ ಅಪ್ಪ ಸುರೇಶ ಕೊಲೆ ಮಾಡಿರುವ ಸಂಶಯದ ಮೇರೆಗೆ ದಿನಾಂಕ 13-3-2015 ರಂದು ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ ಮಡಿಕೇರಿ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕಾಫಿ ತೋಟದಿಂದ ಅಲ್ಯುಮಿನಿಯಂ ಪೈಪುಗಳ ಕಳವು:

ಕಾಫಿತೋಟಕ್ಕೆ ನೀರು ಹಾಕಲು ಅಳವಡಿಸಿದ ಅಲ್ಯುಮಿನಿಯಂ ಪೈಪುಗಳು ಕಳ್ಳತನ ವಾದ ಘಟನೆ ಕುಟ್ಟ ಠಾಣಾ ಸರಹದ್ದಿನ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ನಾಲ್ಕೇರಿ ಗ್ರಾಮದ ನಿವಾಸಿ ಎಂ.ಡಿ. ಬೋಪಯ್ಯನವರು ನೀರು ಹಾಯಿಸುವ 30 ಅಲ್ಯುಮಿನಿಯಂ ಪೈಪುಗಳನ್ನು ತಮ್ಮ ಕಾಫಿ ತೋಟದಲ್ಲಿ ಸಂಗ್ರಹಿಸಿ ಇಟ್ಟಿದ್ದು, ಅವುಳಗ ಪೈಕಿ 15ಪೈಪುಗಳನ್ನು ದಿನಾಂಕ 4-3-2015 ರಿಂದ 13-3-2013-3-2015ರ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕುಟ್ಟ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

ಶಾಲಾ ಬಾಲಕಿಗೆ ದಾರಿಯಲ್ಲಿ ಯುವಕನಿಂದ ಕಿರುಕುಳ:

     ಪಿರ್ಯಾದಿ ಸಂಗೀತ ವೈ.ಎಂ. ರವರು ನೆಲ್ಲಿಹುದಿಕೇರಿ ಫ್ರೌಡ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ದಿನಾಂಕ; 12.03.2015 ರಂದು ಎಂದಿನಂತೆ ತರಗತಿಗೆ ಹಾಜರಾಗಿ ಸಂಜೆ 5.00 ಗಂಟೆಗೆ ತರಗತಿ ಮುಗಿಸಿ ಮನೆಗೆ ಹೋಗುತ್ತಿರುವಾಗ್ಗೆ ಸಮಯ ಸುಮಾರು 5.30 ಗಂಟೆಗೆ ನೆಲ್ಯುಹುದಿಕೇರಿಯ ಬೆಟ್ಟದಕಾಡು ರಸ್ತೆಯಲ್ಲಿ ನಡೆದುಕೊಂಡು ಮನೆ ಕಡೆಗೆ ಹೋಗುತ್ತಿದ್ದಾಗ ಒಂದು ಮೋಟಾರ್ ಸೈಕಲ್ ಬಂದ ಯುವನೋರ್ವ ಹತ್ತಿರಬಂದು ಕೈ ಸನ್ನೆ ಮಾಡಿ ಕರೆದು ಕಿರುಕುಳ ನೀಡಿದ್ದು ಈ ವಿಚಾರವಾಗಿ ಫಿರ್ಯಾದಿ ಸಂಗೀತನವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. 

Friday, March 13, 2015

ಮೋಟಾರ್‌ ಸೈಕಲ್‌ ಅವಘಡ ಇಬ್ಬರಿಗೆ ಗಾಯ:

    ಸೋಮವಾರಪೇಟೆ ನಗರದ ಗಾಂಧಿನಗರದಲ್ಲಿ ವಾಸವಾಗಿರುವ ಫಿರ್ಯಾದಿ ಶ್ವೇತಕುಮಾರ್‌ ಹಾಗು ಮಂಜು ಎಂಬವರು ಅವರ ಸ್ನೇಹಿತ ನಿತಿನ್‌ ಕುಮಾರ್‌ ಎಂಬವರ ಮೋಟಾರ್‌ ಸೈಕಲ್‌ನಲ್ಲಿ ದಿನಾಂಕ 12-3-2015 ರಂದು ಕುಶಾಲನಗರದಿಂದ ಸೋಮವಾರಪೇಟೆ ಕಡೆಗೆ ಹೋಗುತ್ತಿದ್ದಾಗ ಸೋಮವಾರಪೇಟೆ ವಿವೇಕಾನಂದ ವೃತ್ತದ ಬಳಿ ತಲುಪಿದಾಗ ಸವಾರ ನಿತಿನ್‌ರವರು ಮೋಟಾರ್‌ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ವೃತ್ತದ ಸಿಮೆಂಟ್‌ ಕಟ್ಟೆಗೆ ಡಿಕ್ಕಿಪಡಿಸಿದ ಪರಿಣಾಮ ಶ್ವೇತಕುಮಾರ್, ಮಂಜು ಹಾಗು ನಿತಿನ್‌ರವರು ಗಾಯಗೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಚೆಕ್‌ ನೀಡಿ ವಂಚನೆ, ಪ್ರಕರಣ ದಾಖಲು:

     ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ನಿವಾಸಿ ಪಿರ್ಯಾದಿ ಎಂ.ಟಿ ಕಿಶನ್‌ ಮತ್ತು ಕೃಷ್ನ ಸ್ನೇಹಿತರಾಗಿದ್ದು ಸದರಿ ಕೃಷ್ಣರವರು ಬೆಂಗಳೂರಿನಲ್ಲಿ ಕೆ ಬಿ ಎನ್ ಅಸೋಶಿಯೇಟ್ಸ್ ಎಂಬ ಕನ್‌ಸ್ಟ್ರಕ್ಷನ್ ವ್ಯವಹಾರ ಮಾಡುತ್ತಿದ್ದು ಕೃಷ್ಣರವರು ಪಿರ್ಯಾದಿಯವರಿಂದ ತುರ್ತಾಗಿ 20,00,000 ರೂ ಹಣ ವನ್ನು ಸಾಲವಾಗಿ ದಿನಾಂಕ 26-08-2014 ರಂದು 1 ತಿಂಗಳ ಮಟ್ಟಿಗೆ ಪಡೆದುಕೊಂಡು ಪಿರ್ಯಾದಿ ಕಿಶನ್‌ರವರಿಗೆ ಐ.ಡಿ.ಬಿ.ಐ ಬ್ಯಾಂಕನ ಚೆಕ್ ನಂ 470863 ರನ್ನು 24-09-2014 ದಿನಾಂಕವನ್ನು ನಮೂದಿಸಿ ನೀಡಿದ್ದು, ಪಿರ್ಯಾದಿಯವರು ಒಂದು ತಿಂಗಳು ಕಳೆದ ನಂತರ ಆರೋಪಿಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸದೇ ಯಾವುದೇ ಉತ್ತರ ನೀಡದೇ ಇದ್ದುದ್ದರಿಂದ ಚೆಕ್‌ನ್ನು ಮಡಿಕೇರಿಯ ಹೆಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ ನಗದೀಕರಿಸಿಲು ನೀಡಿದಾಗ ಖಾತೆಯಲ್ಲಿ ಹಣ ಇಲ್ಲದೆ ಇದ್ದು ಈವರೆಗೂ ಹಣ ಹಿಂತಿರುಗಿಸದೆ ಪಿರ್ಯಾದಿಯವರಿಗೆ ಮೋಸ ಮಾಡಿರುವುದಾಗಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿಗೆ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಕೈಗೊಂಡಿದ್ದಾರೆ.

Thursday, March 12, 2015

ಅಕ್ರಮ ಮದ್ಯ ಮಾರಾಟ, ವ್ಯಕ್ತಿ ವಿರುದ್ದ ಪ್ರಕರಣ ದಾಖಲು:

ದಿನಾಂಕ 11-3-2015 ರಂದು ಸಿದ್ದಾಪುರ ಠಾಣಾಧಿಕಾರಿ ಹರಿವರ್ಧನರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ಮಡಿಕೇರಿ ತಾಲೋಕು ಹಾಲುಗುಂದ ಗ್ರಾಮದ ನಿವಾಸಿ ಪೊಟ್ಟಂಡ ಮುದ್ದಯ್ಯ ಎಂಬವರಿಗೆ ಸೇರಿದ ಅಂಗಡಿಗೆ ದಾಳಿ ನಡೆಸಿ ಸದರಿ ಮುದ್ದಯ್ಯನವರು ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಸುಮಾರು 1690/- ರೂ ಬೆಲೆಬಾಳುವ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.   

ನೀರಿನಲ್ಲಿ ಮುಳುಗಿ ವ್ಯಕ್ತಿಯ ಸಾವು: 

ದಿನಾಂಕ 10.03.15 ರಂದು ಸಮಯ ಮದ್ಯಾಹ್ನ 1.30 ಗಂಟೆಗೆ ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಹೇರೂರು ಗ್ರಾಮದ ಕೂರ್ಗ್‌ ಲಗೂನ್‌ ರೆಸಾರ್ಟ್‌ನ ಹಾರಂಗಿ ಹಿನ್ನೀರಿನಲ್ಲಿ ಫಿರ್ಯಾದಿ ಎನ್‌.ಬಸವರಾಜು ಅತ್ತಿಬೆಲೆ, ಅನೆಕಲ್‌ :ತಾ: ಬೆಂಗಳೂರು ಜಿಲ್ಲೆ ಇವರು ಹಾಗೂ ಸದ್ರಿಯವರ ಸ್ನೇಹಿತರು ಪ್ರವಾಸಕ್ಕೆ ಬಂದು ಹೊಳೆಯ ನೀರಿನಲ್ಲಿ ಅಡವಾಡಿಕೊಂಡಿರುವಾಗ, ಚಾಲಕ ನಾಗರಾಜು ಎಂಬವರು ಹಿನ್ನೀರಿನ ಆಚೆ ದಡಕ್ಕೆ ಈಜಿಕೊಂಡು ಹೋದವರು ನೀರಿನ ಮದ್ಯಭಾಗದಲ್ಲಿ ಮುಳುಗಿ ಹೋದವರು ಮೇಲೆ ಬಾರದೆ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಹೆಂಗಸು ಕಾಣೆ, ಪ್ರಕರಣ ದಾಖಲು:

ಸೋಮವಾರಪೇಟೆ ತಾಲೋಕು ಯಡವಾರೆ ಗ್ರಾಮದ ನಿವಾಸಿ ಕುರುಬರ ಪೊನ್ನಪ್ಪ ಎಂಬವರ ಪತ್ನಿ ಶ್ರೀಮತಿ ನೀಲಾವತಿ (35) ರವರು ದಿನಾಂಕ 3-3-2015 ರಂದು ಮನೆಯಿಂದ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವ್ಯಕ್ತಿಯ ಮೇಲೆ ಹಲ್ಲೆ:
ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುಕ್ಕೋಡ್ಲು ಗ್ರಾಮದ ವಾಸಿ ಕಾಳಚಂಡ ಯು. ರವಿ ತಮ್ಮಯ್ಯ ಎಂಬವರ ಮೇಲೆ ಅದೇ ಗ್ರಾಮದ ನಿವಾಸಿಗಳಾದ ನಂದೀರ ಸುಕೇಶ್‌ಮೊಣ್ಣಪ್ಪ ಮತ್ತು ಶಾಂತೆಯಂಡ ಪಿ.ಉತ್ತಯ್ಯ ರವರು ವಿನಾಕಾರಣ ದೊಣ್ಣೆ ಹಾಗು ಕೈಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Wednesday, March 11, 2015

ಸ್ಕೂಟರ್‌ ಅವಘಡ ಸವಾರನಿಗೆ ಗಾಯ:

    ಮಡಿಕೇರಿ ನಗರದ ಜಯನಗರದಲ್ಲಿ ವಾಸವಾಗಿರುವ ಶ್ರೀಮತಿ ಪುಷ್ಪಾವತಿ ಎಂಬವರ ತಮ್ಮ ಕೆ. ಶರತ್‌ ಕುಮಾರ್‌ ಎಂಬವರು ಈ ದಿನ ಬೆಳಗ್ಗೆ 2-00 ಗಂಟೆಯ ಸಮಯದಲ್ಲಿ ಸ್ಕೂಟರ್‌ನಲ್ಲಿ ಮಡಿಕೇರಿ ನಗರದಿಂದ ಜಯನಗರದ ಕಡೆಗೆ ಬರುತ್ತಿರುವಾಗ ಈಸ್ಟ್‌ ಎಂಡ್‌ ಪೆಟ್ರೋಲ್‌ ಬಂಕ್‌ ಬಳಿ ಅಪಘಾತಕ್ಕೀಡಾಗಿ ರಸ್ತೆಯ ಎಡಬದಿಯ ಚರಂಡಿಗೆ ಬಿದ್ದು ಸವಾರ ಶರತ್‌ಕುಮಾರ್‌ರವರು ಗಾಯಗೊಂಡಿದ್ದು, ಮಡಿಕೇರಿ ಸಂಚಾರಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಿಕ್ಷಕನಿಂದ ವಿದ್ಯಾರ್ಥಿನಿಯರ ಮೇಲೆ ಮಾನಸಿಕ,ಲೈಂಗಿಕ ಕಿರುಕುಳ: 

    ದಿನಾಂಕ 6-3-2015 ರ ಹಿಂದಿನ ದಿನಗಳಿಂದ ಹೆಬ್ಬಾಲೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಹೆಚ್.ಎಸ್.ಗಣೇಶ್ ಎಂಬವರು ಕೆಲವು ವಿದ್ಯಾರ್ಥಿನಿಯರಿಗೆ ದೈಹಿಕ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿರುವ ಕುರಿತಂತೆ ಕುಶಾಲನಗರದ ಚೈಲ್ಡ್ ಲೈನ್ ಸಂಸ್ಥೆಯವರ ಮೂಲಕ ಕೊಡಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಕಾಲೇಜಿಗೆ ಬೇಟಿ ನೀಡಿ ಅಲ್ಲಿನ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿನಿಯರೊಂದಿಗೆ ವಿಚಾರಿಸಿ , ಹೆಚ್.ಎಸ್.ಗಣೇಶ್ ಎಂಬುವರು ಬಹಳ ವರ್ಷಗಳಿಂದ ವಿದ್ಯಾರ್ಥಿನಿಯರಿಗೆ ಮೈಕೈ ಮುಟ್ಟುವುದು, ಮಕ್ಕಳಿಗೆ ಕಣ್ಣು ಹೊಡೆಯುವುದು, ಹೆಣ್ಣು ಮಕ್ಕಳನ್ನು ಅವರ ಕೊಠಡಿಗೆ ಒಬ್ಬೊಬ್ಬರನ್ನೆ ಕರೆಯುವುದು, ಹೆಣ್ಣು ಮಕ್ಕಳೊಂದಿಗೆ ಅಶ್ಲೀಲ ಮತ್ತು ಕೆಟ್ಟ ಪದಗಳನ್ನು ಆಡುವುದು, ಮುತ್ತು ಕೊಡು ಎಂದು ಕೇಳುವುದು, ಇತ್ಯಾದಿ ಮಾಡುತ್ತಿರುವುದಾಗಿ ತಿಳಿದು ಬಂದಿದ್ದು ಈ ಸಂಬಂಧ ಶ್ರೀ.ಬಿ.ಡಿ.ರವೀಂದ್ರ ಜಿಲ್ಲಾ ಮಕ್ಕಳ ರಕ್ಷಣಾದಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಡಿಕೇರಿ ಇರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆಸ್ತಿ ವಿವಾದ ಅಣ್ಣನಿಂದ ತಮ್ಮನ ಕೊಲೆ: 

    ಮನೆಯ ವಿಚಾರದ ದ್ವೇಷದಿಂದ ಅಣ್ಣನೊಬ್ಬ ತನ್ನ ತಮ್ಮನನ್ನು ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಸೋಮವಾರಪೇಟೆ ತಾಲೋಕು ಗರ್ವಾಲೆ ಗ್ರಾಮದಲ್ಲಿ ನಡೆದಿದೆ. ಗರ್ವಾಲೆ ಗ್ರಾಮದ ವಾಸಿಗಳಾದ ಕಾರ್ಯಪ್ಪ ಹಾಗು ಅವರ ತಮ್ಮ ನಂಜುಂಡ ರವರುಗಳ ನಡುವೆ ಆಸ್ತಿ ವಿಚಾರದಲ್ಲಿ ವೈಮನಸ್ಸು ಇದ್ದು ದಿನಾಂಕ 10-3-2015 ರಂದು ಬೆಳಿಗ್ಗೆ 9.30 ಗಂಟೆಗೆ ಅಣ್ನ ಕಾರ್ಯಪ್ಪನವರು ತನ್ನ ತಮ್ಮ ನಂಜುಂಡನವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದು ಅಲ್ಲದೆ ನಂಗುಂಡನವರ ಪತ್ನಿ ಜ್ಯೋತಿರವರನ್ನು ಸಹ ಕೊಲೆ ಮಾಡಲು ಪ್ರಯತ್ನಿಸಿದ್ದು, ಸೋಮವಾರಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಆನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯ ಆತ್ಮಹತ್ಯೆ:

ಕುಶಾಲನಗರ ಠಾಣಾ ವ್ಯಾಪ್ತಿಯ ಚಿಕ್ಕಳುವಾರ ಗ್ರಾಮದ ನಿವಾಸಿ 72 ವರ್ಷ ಪ್ರಾಯದ ಹುಚ್ಚಯ್ಯ ಎಂಬವರು ಸುಮಾರುಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ವಿಚಾರವಾಗಿ ಜಿಗುಪ್ಸೆಗೊಂಡು ದಿನಾಂಕ 10-3-2015 ರಂದು ಕ್ರಿಮಿನಾಶಕ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆಸ್ತಿ ವಿವಾದ ಹಿನ್ನೆಲೆ, ಅಣ್ಣನ ಮೇಲೆ ತಮ್ಮನಿಂದ ಹಲ್ಲೆ:

     ಶ್ರೀಮಂಗಲ ಠಾಣಾ ಸರಹದ್ದಿನ ಬಲ್ಯಮಂಡೂರು ಗ್ರಾಮದ ನಿವಾಸಿಗಳಾದ ಕೊಟ್ಟಂಗಡ ಅರಣು ಹಾಗು ಸಹೋದರ ಕೊಟ್ಟಂಗಡ ಪ್ರಕಾಶ್‌ ರವರ ನಡುವೆ ಆಸ್ತಿ ವಿಚಾರದಲ್ಲಿ ವೈಮನಸ್ಸಿದ್ದು ದಿನಾಂಕ 9-3-2015 ರಂದು ಕೊಟ್ಟಂಗಡ ಪ್ರಕಾಶ್‌ನವರು ಅಣ್ಣ ಅರುಣರವರ ಮನೆಯ ಅಂಗಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕಾಫಿ ಒಣಗಿಸಲು ಉಪಯೋಗಿಸುವ ಗೋರು ಮಣೆಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, March 10, 2015

ಆಸ್ತಿ ಹರಾಜು ಸಂಬಂಧ ನಕಲಿ ಸಹಿ ಮಾಡಿ ವಂಚನೆ, ಪ್ರಕರಣ ದಾಖಲು:

     ಬೆಂಗಳೂರಿನ ವೈಯಾಲಿಕಾವಲ್‌ ನಿವಾಸಿ ಫಿರ್ಯಾದಿ ಟಿ.ಎಸ್‌. ರಾಮಚಂದ್ರ ಎಂಬವರ ಆಸ್ತಿ ವಿಚಾರದಲ್ಲಿ ಕೋಮಲಾಕ್ಚಿ, ಭಾರತಿ ಹಾಗು ಗಣಪತಿ ಎಂಬವರ ವಿರುದ್ದ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಕೀಲ ಬಿ.ಜೆ ಪ್ರಸನ್ನ ಎಂಬವರು ಮೇಲ್ಕಂಡ ಪ್ರಕರಣಗಳ ಆರೋಪಿಗಳ ಗೈರು ಹಾಜರಿಯಲ್ಲಿ ಡೆಪ್ಯುಟಿ ರಿಜಿಸ್ಟಾರ್ ಕೊಆಪರೇಟೇವ್ ಸೊಸೈಟಿ ಕೊಡಗು ಜಿಲ್ಲೆ ಇವರ ಕಚೇರಿಗೆ ಆಸ್ತಿ ಹರಾಜು ಸಂಧರ್ಭ ತಕರಾರು ಸಂಬಂಧ ಸಲ್ಲಿಸಿದ ಕೆಲವು ದಾಖಲಾತಿಗಳಿಗೆ ನಕಲಿ ಸಹಿಯನ್ನು ಮಾಡಿ ಸಲ್ಲಿಸಿ ವಂಚಿಸಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಅಪಘಾತ ಸವಾರನ ಸಾವು:
    ಕುಶಾಲನಗರದ ಮಣಿಕಂಠ ಎಂಬವರು ತಮ್ಮ ಪತ್ನಿ ಸೀತಮ್ಮನ ವರೊಂದಿಗೆ ತಮ್ಮ ಬಾಪ್ತು ಮೋಟರ್ ಸೈಕಲ್ ನಂ ಕೆಎ 45 ಎಸ್ 6760 ರಲ್ಲಿ ಕುಶಾಲನಗರದಿಂದ ತಣ್ಣೀರು ಹಳ್ಳಕ್ಕೆ ಹೋಗುತಿದ್ದು ಕೂಡ್ಲೂರು ಕೈಗಾರಿಕ ಬಡಾವಣೆಯ ಕಾರ್ಪೋರೇಶನ್ ಬ್ಯಾಂಕ್ ಹತ್ತಿರ ತಲುಪುವಾಗ್ಗೆ ಕೆಎ 12 ಕೆ 1952 ರ ಸವಾರ ವಿವಿನ್ ರವರು ಬೈಕನ್ನು ರಸ್ತೆ ಬಲ ಬಾಗದ ಕಾರ್ಪೋರೇಶನ್ ಬ್ಯಾಂಕ್ ಕಡೆಗೆ ತಿರುಗಿಸಿದಾಗ ಮಣಿಕಂಠರವರು ತಮ್ಮ ಬೈಕನ್ನು ಕಾರ್ಪೋರೇಶನ್ ಬ್ಯಾಂಕ್ ಕಡೆಗೆ ತಿರುಗಿಸಿದಾಗ ಆಯತಪ್ಪಿ ಎರಡು ಬೈಕ್ ಸವಾರರು ಕೆಳಗೆ ಬಿದ್ದಿದ್ದು, ಆ ಸಮಯಕ್ಕೆ ಕೂಡಿಗೆ ಕಡೆಯಿಂದ ಕುಶಾಲನಗರ ಕಡೆಗೆ ಬರುತಿದ್ದ ಆಟೋರಿಕ್ಷಾ ನಂ ಕೆಎ 12 ಎ 8086 ರನ್ನು ಅದರ ಚಾಲಕ ಸತೀಶ್‌ ಎಂಬವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮಣಿಕಂಠರವರ ಮೇಲೆ ಹತ್ತಿಸಿದ ಪರಿಣಾಮ ತಲೆ ಬಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿ ಮೃತಪಟ್ಟಿದ್ದಲ್ಲದೆ, ಇತರ ಮೂವರು ಗಾಯಗೊಂಡಿದ್ದು, ಕುಶಾಲನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Monday, March 9, 2015

ಜೀಪು ಅಪಘಾತ ಓರ್ವನ ಮುರ್ಮರಣ, ನಾಲ್ವರಿಗೆ ಗಾಯ:

     ಚಾಲಕನ ನಿಯಂತ್ರಣ ತಪ್ಪಿದ ಜೀಪೊಂದು ಅಪಘಾತಕ್ಕೀಡಾಗಿ ವ್ಯಕ್ತಿಯೊಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಮದೆನಾಡಿನಲ್ಲಿ ನಡೆದಿದೆ. ದಿನಾಂಕ 8-3-2015 ರಂದು ಫಿರ್ಯಾದಿ ಸುಳ್ಯ ತಾಲೋಕು ಪಿಂಡಿಮನೆ ದೊಡ್ಡಯ್ಯ ಎಂಬವರು ತಮ್ಮ ಕುಟುಂಬದವರೊಂದಿಗೆ ಸುಂಟಿಕೊಪ್ಪದಿಂದ ಸುಳ್ಯದ ಕಡೆಗೆ ಸದಾನಂದ ಎಂಬವರ ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ಸದರಿ ಜೀಪನ್ನು ಚಾಲಕ ಸದಾನಂದನವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ಜೀಪು ಬಿದ್ದು, ಜೀಪಿನಲ್ಲಿ ಪ್ರಯಾಣಿಸುತ್ತಿದ್ದವರು ಗಾಯಗೊಂಡು ಲಕ್ಷ್ಮಣ ಎಂಬವರು ಚಿಕಿತ್ಸೆ ಸಮಯದಲ್ಲಿ ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಪ್ರವಚನ ಸಭೆಯಲ್ಲಿ ಗುಂಪಿನಿಂದ ಹಲ್ಲೆ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೆಟ್ಟಗೇರಿ ಗ್ರಾಮದ ವಾಸಿ ಎಂ ಎ ಮಶೂದ್‌ರವರ ಮನೆಯಲ್ಲಿ ಇಸ್ಲಾಂ ಧರ್ಮದ ಕುರಿತು ನಡೆಯುತ್ತಿದ್ದ ಧಾರ್ಮಿಕ ಪ್ರವಚನ ವೇಳೆಯಲ್ಲಿ ಬೆಟ್ಟಗೇರಿ ಗ್ರಾಮದ ನಿವಾಸಿಗಳಾದ ಇಬ್ರಾಹಿಂ ಮದನಿ, ಮೊಹಿದ್ದೀನ್‌ ಕುಂಞಿ, ಶರ್ಪುದ್ದೀನ್‌ ಇಬ್ರಾಹಿಂ @ ಉಂಬಾಯಿ ಹನೀಫ್‌ ಉಡೋತ್‌ ಹಾಗು ನೌಷಾದ್‌ ಎಂಬವರ ಗುಂಪು ಅಲ್ಲಿಗೆ ಬಂದು ಪಟಾಕಿ ಸಿಡಿಸಿ ದಿಕ್ಕಾರ ಕೂಗಿ ಸಭೆಗೆ ಅಡ್ಡಿಪಡಿಸಿದ್ದು ಅಲ್ಲದೆ ಫಿರ್ಯಾದಿಪಿ.ಎಂ. ಮೊಹಿದು ರವರಿಗೆ ಹಲ್ಲೆ ನಡೆಸಿದ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿನಾಕಾರಣಕ್ಕೆ ವ್ಯಕ್ತಿಯ ಮೇಲೆ ಗುಂಪಿನಿಂದ ಹಲ್ಲೆ:

     ಮಡಿಕೇರಿ ನಗರದ ಶಾಸ್ತ್ರಿನಗರದ ನಿವಾಸಿ ಎಂ.ಎ. ಮೊಹ್ಮದ್‌ ಎಂಬವರು ದಿನಾಂಕ 8-3-2015 ರಂದು ಸಂಜೆ 7-30 ಗಂಟೆಯ ಸಮಯದಲ್ಲಿ ಮಡಿಕೇರಿ ನಗರದ ರಾಜಾಸೀಟ್‌ಬಳಿ ಇರುವಾಗ ಮಡಿಕೇರಿ ನಗರದ ಗೌಳಿಬೀದಿ ನಿವಾಸಿ ಹರ್ಷ ಇದ್ದ ಗುಂಪೊಂದು ವಿನಾ ಕಾರಣ ಕಲ್ಲುಮತ್ತು ಬಿಯರ್‌ಬಾಟಲಿಗಳಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಕಾರಿಗೆ ಟಾಟಾ ಏಸ್‌ ಡಿಕ್ಕಿ ನಾಲ್ವರಿಗೆ ಗಾಯ:

     ದಿನಾಂಕ 8-3-2015 ರಂದು ಮಡಿಕೇರಿ ಜೂನಿಯರ್‌ ಕಾಲೇಜು ಶಿಕ್ಷಕರಾದ ಸೋಮಯ್ಯ ನಾಯ್ಕ ರವರು ತಮ್ಮ ಸಂಸಾರದೊಂದಿಗೆ ಮಾರುತಿ-800 ಕಾರಿನಲ್ಲಿ ಮಡಿಕೇರಿ ಕಡೆಗೆಬರುತ್ತಿದ್ದಾಗ ಎದುರುಗಡೆಯಿಂದ ಮಡಿಕೇರಿ ಕಡೆಯಿಂದ ಬರುತ್ತಿದ್ದ ಟಾಟಾ ಏಸ್‌ ವಾಹನವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಮಡಿಕೇರಿ-ಮಂಗಳೂರು ರಸ್ತೆಯ ಮೊದಲನೇ ತಿರುವಿನಲ್ಲಿ ಮಾರುತಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಾಯಗೊಂಡಿದ್ದು, ಮಡಿಕೇರಿ ಟ್ರಾಫಿಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Sunday, March 8, 2015

ವೇಗದ ಚಾಲನೆ ಕಾರು ಜಖಂ:
     ಸಕಲೇಶಪುರ ತಾಲೋಕು ಚಂಗಡಹಳ್ಳಿ ಗ್ರಾಮದ ನಿವಾಸಿ ಎಂ.ಎಂ. ಹಾಲಪ್ಪ ಎಂಬವರ ಮಗ ವಿವೇಕ ಎಂಬವರು 7-3-2015 ರಂದು ಫೋರ್ಡ್ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಚಂಗಡಹಳ್ಳಿಕಡೆಯಿಂದ ಸೋಮವಾರಪೇಟೆ ಕಡೆಗೆ ಬರುತ್ತಿದ್ದಾಗ ಗೋಪಾಲಪುರ ಗ್ರಾಮದಲ್ಲಿ ಅಪಘಾತಕ್ಕೀಡಾಗಿ ಕಾರು ಜಖಂಗೊಂಡಿದ್ದು ಚಾಲಕ ವಿವೇಕನವರಿಗೆ ಯಾವುದೇ ಅಪಾಯವಾಗದೇ ಇದ್ದು, ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕರಿಮೆಣಸು ಕಳವು:
   ವಿರಾಜಪೇಟೆ ನಗರದ ದಕನ್ನಿ ಮೊಹಲ್ಲಾದ ನಿವಾಸಿಕೆ.ಜಿ.ಪೊನ್ನಪ್ಪನವರು ತಮ್ಮ ಮೆನಯ ಟೆರೇಸ್‌ಮೇಲೆ ಕರಿಮೆಣಸನ್ನು ಒಣಗಲು ಹಾಕಿದ್ದು ಅಲ್ಲಿಂದ ಸುಮಾರು 45 ಕೆ.ಜಿ. ಕರಿಮೆಣಸನ್ನು ಯಾರೋ ಕಳ್ಳರುಕಳವು ಮಾಡಿಕೊಂಡು ಹೋಗಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿ ವಿಚಾರದಲ್ಲಿ ವ್ಯಕ್ತಿಯ ಕೊಲೆಗೆ ಯತ್ನ:
     ಮಡಿಕೇರಿ ತಾಲೋಕು ಮುಕ್ಕೋಡ್ಲು ಗ್ರಾಮದ ನಿವಾಸಿ ತೇಲಬೈಲು ವಾಸುದೇವ ಎಂಬವರು ದಿನಾಂಕ7-3-2015 ರಂದು ರಾತ್ರಿ 9-30 ಗಂಟೆಗೆ ತಮ್ಮ ಮನೆಯ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಅವರ ಕುಟುಂಬದವರಾದ ದಿನೇಶ ಹಾಗು ಡೆನಿಲ್‌ ಎಂಬವವರು ಪಿಕ್‌ಅಪ್‌ ಜೀಪನ್ನು ಚಾಲಿಸಿಕೊಂಡು ಬಂದು ಡಿಕ್ಕಿ ಪಡಿಸಿ ಕೊಲೆಗೆ ಯತ್ನಿಸಿದ್ದು ಅಲ್ಲದೆ ಪುನ: ಬಂದು ಕತ್ತಿಯಿಂದ ಸದರಿ ಇಬ್ಬರು ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಿದ್ದು ಫಿರ್ಯಾದಿ ವಾಸುದೇವನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಮರದಿಂದ ಬಿದ್ದು ವ್ಯಕ್ತಿಯ ದುರ್ಮರಣ:
     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕೋಡಂಬೂರು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಭಾಗ್ಯಎಂಬವರ ಗಂಡ ಸುರೇಶ ಎಂಬವರು ದಿನಾಂಕ7-3-2015 ರಂದು ಪಿ.ವಿಶ್ವನಾಥ ಎಂಬವರ ಕಾಫಿತೋಟದಲ್ಲಿ ಮರಕ್ಕೆ ಹತ್ತಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮರದಿಂದ ಬಿದ್ದು ಗಂಭೀರ ಗಾಯಗೊಂಡು ನಂತರ ಸದರಿಯವರನ್ನು ಚಿಕಿತ್ಸೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ಧಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ,

Saturday, March 7, 2015

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ನೇಣಿಗೆ ಶರಣು:

    ಸುಂಟಿಕೊಪ್ಪ ಠಾಣಾ ಸರಹದ್ದಿನ ಕಂಬಿಬಾಣೆ ಗ್ರಾಮದದಲ್ಲಿ ವಾಸವಾಗಿರುವ ಶ್ರೀಮತಿ ರಜನಿ ಎಂಬವರ ಗಂಡ ಅನಿಲ್‌ ಕೂಲಿಕೆಲಸ ಮಾಡಿ ಜೀವನ ನಡೆಸುತ್ತಿದ್ದು, ಕೆಲ ಸಮಯದಿಂದ ಎದೆನೋವಿನಿಂದ ಬಳಲುತ್ತಿದ್ದು, ಇದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 6-3-2015 ರಂದು ತಾನು ವಾಸವಾಗಿದ್ದ ವಾಸದ ಮೆನಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡಿಕೆ ಕಳವು ಪ್ರಕರಣ ದಾಖಲು: 

     ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ಕೆ. ಪೂವಪ್ಪನಾಯ್ಕ ಎಂಬವರು ಗುತ್ತಿಗೆಗೆ ಪಡೆದ ಅಡಿಕೆಯನ್ನು ಕುಯ್ದು ನಂಗಾರು ಸುಬ್ಬಯ್ಯ ಎಂಬವರ ಅಂಗಳದಲ್ಲಿ ಒಣಗಲು ಹಾಕಿದ್ದು ದಿನಾಂಕ 5-3-2015 ರಂದು ರಾತ್ರಿ ಸಮಯದಲ್ಲಿ ಅದೇ ಗ್ರಾಮದವರಾದ ಶಿವಕುಮಾರ್‌, ಕುಂಞಂದು ಹಾಗು ತಳೂರು ಶ್ಯಾಂ ಎಂಬವರುಗಳು ಒಂದು ವಾಹನದಲ್ಲಿ ಅಲ್ಲಿಗೆ ಬಂದು ಸುಮಾರು 192 ಕೆ.ಜಿ. ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪೂವಪ್ಪನಾಯ್ಕರವರು ನೀಡಿದದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ದಾರಿ ತಡೆದು ಹಲ್ಲೆ

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಹೆಮ್ಮಾಡು ಗ್ರಾಮದ ನಿವಾಸಿ ಲಲಿನ ಎಂಬವರು ದಿನಾಂಕ 5-3-2015 ರಂದು ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಅದೇ ಗ್ರಾಮದ ರಾಜೇಶ್‌ ಎಂಬಾತ ದವಸ ಭಂಡಾರದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಾರಿ ತಡೆದು ನಿಲ್ಲಿಸಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, March 6, 2015

ವೇಗದ ಚಾಲನೆ. ಜೀಪಿನಿಂದ ಬಿದ್ದು ನಾಲ್ವರಿಗೆ ಗಾಯ: 

     ನಾಗರಹೊಳೆ ಹಾಡಿಯಲ್ಲಿ ವಾಸವಾಗಿರುವ ಪಿರ್ಯಾದಿ ಜೆ.ಆರ್‌. ಸುರೇಶ ಎಂಬವರು ಕುಮಟೂರು ಗ್ರಾಮದ ತೀತೀರ ಸೂರಜ್ ರವರ ತೋಟಕ್ಕೆ ಮೆಣಸು ಕುಯ್ಯಲು ಸಂಗಡಿಗರೊಂದಿಗೆ ಹೋಗಿ ಸದರಿ ತೀತಿರ ಸೂರಜ್‌ರವರ ಜೀಪು ಸಂಖ್ಯೆ ಕೆಎ 12 ಎಂ 2542 ರಲ್ಲಿ ಮನೆಯ ಕಡೆಗೆ ಬರುತ್ತಿರುವಾಗ್ಗೆ ಕುಟ್ಟ_ ಶ್ರೀಮಂಗಲ ರಸ್ತೆಯಯಲ್ಲಿ ಸೂರಜ್ ರವರು ಜೀಪನ್ನು ಅತಿವೇಗವಾಗಿ ಚಾಲನೆ ಮಾಡಿ ಒಮ್ಮೆಲೇ ಜೀಪಿನ ಬ್ರೇಕ್ ಹಾಕಿದ್ದರಿಂದ ಜೀಪಿನಲ್ಲಿ ಕುಳಿತಿದ್ದ ನಾಲ್ಕು ಜನರು ಕೆಳಗೆ ರಸ್ತೆಗೆ ಬಿದ್ದು ಗಾಯಗೊಂಡಿದ್ದು ನಂತರ ಕುಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲುಗೊಂಡಿದ್ದು, ಈ ಸಂಬಂಧ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೋಟಾರ್‌ ಸೈಕಲ್ ಡಿಕ್ಕಿ ಬಾಲಕನಿಗೆ ಗಾಯ:

     ವಿರಾಜಪೇಟೆ, ಕಾವೇರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಕೆ.ಕೆ. ತನಿನ್‌ ಬೋಪಣ್ಣ ಎಂಬಾತ ದಿನಾಂಕ 5-3-2015 ರಂದು ಸಂಜೆ ವಿರಾಜಪೇಟೆ ಸಮೀಪದ ಮಲ್ಲಂಬಟ್ಟಿ ಎಂಬಲ್ಲಿ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಮೋಟಾರ್‌ ಸೈಕಲ್‌ವೊಂದನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡುಬಂದು ಡಿಕ್ಕಿಪಡಿಸಿ ಗಾಯಪಡಿಸಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.  

ಸಂಬಳದ ವಿಚಾರದಲ್ಲಿ ವ್ಯಕ್ತಿಗೆ ಕೊಲೆ ಬೆದರಿಕೆ:

    ಗೋಣಿಕೊಪ್ಪ ಠಾಣಾ ಸರಹದ್ದಿನ ಮಾಯಮುಡಿ ಗ್ರಾಮದ ನಿವಾಸಿ ಮನೋಜ್‌ ಎಂಬವರು ಬಿರುನಾಣಿ ಗ್ರಾಮದ ನಿವಾಸಿ ನರೇಂದ್ರ ಎಂಬವರಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿ ಕೆಲಸ ಮಾಡಿದ ಬಾಪ್ಸು ಸಂಬ ಳವನ್ನು ಕೇಳಿದ ವಿಚಾರದಲ್ಲಿ ನರೇಂದ್ರರವರು ಚಾಲಕ ಮನೋಜ್‌ರವರನ್ನು ಅವಾಚ್ಯ ಶಬ್ದಗಳಿಂದ ಬೈದುಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ಫಿರ್ಯಾದಿ ಮನೋಜ್‌ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಒಣಗಿಸಲು ಹಾಕಿದ್ದ ಕರಿಮೆಣಸು ಕಳ್ಳತನ:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಮೋದೂರು ಕಾಫಿ ತೋಟದ ಮಾಲೀಕ ಬಿದ್ದಂಡ ಪೂಣಚ್ಚನವರ ಕಾಫಿತೋಟದ ಕಣದಲ್ಲಿ ಒಣಗಿಸಲು ಹಾಕಿದ್ದ ಕರಿಮೆಣಸಿನಿಂದ ಸುಮಾರು 50 ಕೆ.ಜಿ. ಕರಿಮೆಣಸನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕೆಲಸಗಾರರಾದ ಬಿ.ಡಿ. ವರದರಾಜ ಮತ್ತು ಬಿ.ಆರ್‌. ಸಂದೇಶ್‌ರವರುಗಳ ಮೇಲೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಜೀವನದಲ್ಲಿ ಜಿಗುಪ್ಸೆ, ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:

     ವಿರಾಜಪೇಟೆ ತಾಲೋಕು ಅಮ್ಮತ್ತಿ ಕಾರ್ಮಾಡು ಗ್ರಾಮದ ವಾಸಿ 46 ವರ್ಷ ಪ್ರಾಯದ ಕೂಲಿಕಾರ್ಮಿಕ ಬೆನ್ನಿ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಪ್ರತಿ ದಿನ ಮದ್ಯಪಾನ ಮಾಡುತ್ತಿದ್ದು, ದಿನಾಂಕ 4-3-2015 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿಯವರ ಪುತ್ರ ಟಿ.ಅಗಸ್ಟಿನ್‌ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.   

Thursday, March 5, 2015

ಆಕಸ್ಮಿಕ ಹೊಳೆಗೆ ಬಿದ್ದು ವ್ಯಕ್ತಿಯ ಸಾವು:

    ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಸಾವನಪ್ಪಿದ ಘಟನೆ ನಾಪೋಕ್ಲು ಠಾಣಾಸರಹದ್ದಿನ ಅರಪಟ್ಟು ನರಿಯಂದಡ ಗ್ರಾಮದಲ್ಲಿ ನಡೆದಿದೆ. ದಿನಾಂಕ 3-3-2015 ರಂದು ಕಡಂಗ-ಅರಪಟ್ಟು ಗ್ರಾಮದ ನಿವಾಸಿ ಮೇದರ ಕಾಶಿ ಎಂಬವರು ಕೈಕಾಲು ತೊಳೆಯಲು ಹತ್ತಿರದ ಹೊಳೆಗೆ ಇಳಿದಿದ್ದು ಆಕಸ್ಮಿಕ ಕಾಲು ಜಾರಿ ಹೊಳೆಗೆ ಬಿದ್ದು ಸಾವನಪ್ಪಿದ್ದು, ಇವರ ಸಂಬಂಧಿಕರಾದ ಮೇದರ ಅಯ್ಯಪ್ಪನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟಿ ಮತ್ತು ಜೀಪು ಪರಸ್ಪರ ಡಿಕ್ಕಿ ಸವಾರನಿಗೆ ಗಾಯ:

     ದಿನಾಂಕ 2-3-2015 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ಜೋಡುಬಟ್ಟಿ ಎಂಬಲ್ಲಿ ಎಂ.ಎನ್‌. ರತನ್‌ ಎಂಬವರು ತಮ್ಮ ಸ್ಕೂಟಿಯಲ್ಲಿ ಪೊನ್ನಂಪೇಟೆ ಕಡೆಯಿಂದ ಗೋಣಿಕೊಪ್ಪದ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಎಂ.ಕೆ. ಗಣಪತಿ ಎಂಬವರು ತಮ್ಮ ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎಂ.ಎನ್‌. ರತನ್‌ ರವರ ಸ್ಕೂಟಿಗೆ ಡಿಕ್ಕಿಪಡಿಸಿದ ಪರಿಣಾಮ ರತನ್‌ರವರ ಬಲ ಕಾಲು, ಮುಖ ಮತ್ತು ಶರೀರಕ್ಕೆ ಪೆಟ್ಟಾಗಿ ಸದರಿಯವರನ್ನು ಗೋಣಿಕೊಪ್ಪ ಸರಕಾರಿ ಆಸ್ಪತ್ತೆಗೆ ದಾಖಲಿಸಲಾಗಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ರಸ್ತೆ ತಕರಾರು, ತಮ್ಮನಿಂದ ಅಣ್ಣನ ಮೇಲೆ ಹಲ್ಲೆ:

     ಪೊನ್ನಂಪೇಟೆ ಠಾಣಾ ಸರಹದ್ದಿನ ಬೆಸಗೂರು ಗ್ರಾಮದ ನಿವಾಸಿಗಳಾದ ಬಿ.ಎಂ. ಕಾರ್ಯಪ್ಪನವರು ದಿನಾಂಕ 4-3-2015 ರಂದು ಕಾಫಿ ಮಾರಾಟ ಮಾಡುವ ಸಲುವಾಗಿ ಪಿಕ್‌ಅಪ್‌ ಜೀಪಿನಲ್ಲಿ ತಮ್ಮ ಮನೆಗೆ ಹೋಗುತ್ತಿದ್ದಾಗ ತಮ್ಮ ಮನೆಯ ಬಳಿಯ ರಸ್ತೆಗೆ ತಲುಪಿದಾಗ ಅವರ ತಮ್ಮ ಬಿ.ಎಂ. ಮಾದಪ್ಪಎಂಬವರು ಮಾರುತಿ ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ದಾರಿಯನ್ನು ಬಿಡದೆ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ತಲೆಗೆ ಗಾಯಪಡಿಸಿದ್ದು, ಅದೇ ವೇಳೆಗೆ ಮಾದಪ್ಪನವರ ಮಗಳಾದ ಸುಶ್ಮಿತಾಳು ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬಿ.ಎಂ. ಕಾರ್ಯಪ್ಪನವರನ್ನು ಬೈದಿರುತ್ತಾರೆಂದು ನೀಡಿದ ದೂರಿನ ಮೆರೆಗೆ ಪೊನ್ನಂಪೇಟೆ ಪೊಲೀಸರು ಎಫ್‌.ಐ.ಆರ್‌. ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮದುವೆ ವಿಚಾರದ ಹಿನ್ನೆಲೆ, ವ್ಯಕ್ತಿಗೆ ಕೊಲೆ ಬೆದರಿಕೆ:

     ಭಾಗಮಂಡಲ ಠಾಣಾ ಸರಹದ್ದಿನ ತಾವೂರು ಗ್ರಾಮದ ನಿವಾಸಿ ಯೋಗನಂದ ಎಂಬವರೊಂದಿಗೆ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಮುಚ್ಚಾರ ಮನೆ ಸುಂದರ ಗೌಡರ ಮಗಳು ಪವಿತ್ರಾ ಎಂಬುವಳೊಂದಿಗೆ ಮದುವೆ ನಿಶ್ವಿತಾರ್ಥವಾಗಿ ನಂತರ ದಿನಾಂಕ 08-02-2015 ರಂದು ರಾತ್ರಿ 8-45 ಗಂಟೆಗೆ ಹರೀಶ್ ಪೂಜಾರಿ ಎಂಬ ವ್ಯಕ್ತಿ ಅವರ ಮೊಬೈಲ್ ಸಂ. 9449219826 ರಿಂದ ಕರೆ ಮಾಡಿ ‘ನಾನು ಪವಿತ್ರಾಳನ್ನು ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದೇನೆ ಅವಳನ್ನೆ ನಾನು ಮದುವೆಯಾಗುತ್ತೇನೆ ಎಂಬಿತ್ಯಾಧಿ ಹೇಳಿ ಮಾರನೇಯ ದಿನವೂ ಕರೆ ಮಾಡಿ ನಿಮ್ಮ ಭಾವಚಿತ್ರ ಬಳಸಿ ಏನುಬೇಕಾದರೂ ಮಾಡುತ್ತೇನೆ ಅಲ್ಲದೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಸಿದ್ದು ಅಲ್ಲದೆ ಮದುವೆ ಯ ಬಳಿಕವೂ ಅಶ್ಲೀಲವಾಗಿ ಮೆಸೆಜ್ ಗಳನ್ನು ಕಳುಹಿಸಿ ತೊಂದರೆ ಕೊಡುತ್ತಿರುವ ಬಗ್ಗೆ ಸದರಿ ಯೋಗಾನಂದನವರು ನೀಡಿದದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Wednesday, March 4, 2015

ಮೋಟಾರ್‌ ಸೈಕಲ್‌ ಡಿಕ್ಕಿ ವ್ಯಕ್ತಿ ಸಾವು:
      ಕುಶಾಲನಗರ ಠಾಣಾ ಸರಹದ್ದಿನ ಹಳೆಕೂಡಿಗೆ ಗ್ರಾಮದ ನಿವಾಸಿ ಕೆ.ಎನ್‌. ವಸಂತಕುಮಾರ್‌ (38) ಎಂಬವವರು ದಿನಾಂಕ 2-3-2015 ರಂದು ಹಳೆಕೂಡಿಗೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದುಗಡೆಯಿಂದ ಕೆ.ಎ.ಕೆ.ಎ.45 ಕೆ.ಎ.45ಕೆ-ಕೆ.ಎ.45ಕೆ-641ರ ಮೋಟಾರ್‌ ಸೈಕಲನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಕೆ.ಎನ್‌. ವಂಸಂತಕುಮಾರ್‌ರವರ ವಂಸಂತಕುಮಾರ್‌ರವರ ತಲೆಯ ಭಾಗಕ್ಕೆ ಗಾಯವಾಗಿದ್ದು, ಸದರಿಯವರನ್ನು ಚಿಕಿತ್ಸೆಗಾಗಿ ಮೈಸೂರಿನ ಜೆ.ಎಸ್‌.ಎಸ್‌. ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದು, ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣದಾಖಲಿಸಿಲಾಗಿದೆ.
ವ್ಯಕ್ತಿಯ ಮೇಲೆ ಗುಂಪಿನಿಂದ ಹಲ್ಲೆ:   

     ದಿನಾಂಕ 2-3-2015 ರಂದು ಸೋಮವಾರಪೇಟೆ ತಾಲೋಕು ಮುಟ್ಲು ಗ್ರಾಮದ ನಿವಾಸಿ ಫಿರ್ಯಾಧಿ ಧರ್ಮಯ್ಯ ಎಂಬ ವ್ಯಕ್ತಿ ತಮ್ಮ ಗದ್ದೆಯ ಬಳಿ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಗಳಾದ ಕಾರ್ಯಪ್ಪ, ಮಿನ್ನಂಡ ನೇತ್ರ, ರಾಜೇಶ, ಮತ್ತು ಚಿಲ್ಲಜಮ್ಮನ ಅಶೋಕರವರು ಧರ್ಮಯ್ಯನವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕತ್ತಿ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರನ ಮೇರೆಗೆ ಸೋಮವಾರಪೇಟೆಪೊಲೀಸರುಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಯ ಆತ್ಮಹತ್ಯೆ: 
      ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಪೊನ್ನತ್‌ಮೊಟ್ಟೆ ಗ್ರಾಮದಲ್ಲಿ ನೆಲೆಸಿರುವ ಶ್ರೀಮತಿ ನಳಿನಿ ಎಂಬವರ ಮಗ ಪ್ರಾಯ 37 ವರ್ಷದ ಅನಿಲ್‌ಕುಮಾರ್‌ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 3-3-2015 ರಂದು ತಮ್ಮ ಮನೆಯಲ್ಲಿ ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೀವನದಲ್ಲಿ ಜಿಗುಪ್ಸೆ, ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ

    ವಿರಾಜಪೇಟೆ ನಗರ ಠಾಣಾ ಸರಹದ್ದಿನ ಬೇಟೋಳಿ ಗ್ರಾಮದ ಚಿಣ್ಣಪ್ಪ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ ಕುಮಾರ ಎಂಬವರು ದಿನಾಂಕ 3-3-2015 ರಂದು ತಾವು ವಾಸವಾಗಿದ್ದ ಲೈನು ಮನೆಯಲ್ಲಿ ಕುತ್ತಿಗೆಗೆ ನೇಣನ್ನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ನಗರ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನಕ್ರಮ ಕೈಗೊಂಡಿರುತ್ತಾರೆ.

ಮಹಿಳೆ ಮೇಲೆ ದೌರ್ಜನ್ಯ, ಪ್ರಕರಣ ದಾಖಲು:  

     ಸೋಮವಾರಪೇಟೆ ತಾಲೋಕು ಚಿಕ್ಕತ್ತೂರು ಕೂಡುಮಂಗಳೂರು ಗ್ರಾಮದ ನಿವಾಸಿ ಹಲ್‌ವಿನ್‌ ಶ್ಯಾಮ್‌ ಎಂಬವರು ಮಂಜುಳ ಎಂಬವರನ್ನು 7 ವರ್ಷಗಳ ಹಿಂದೆ ಮದುವೆಯಾಗಿದ್ದು, ಸದರಿ ಮಂಜುಳಾರವರನ್ನು ಪತಿ ಹಲ್‌ವಿನ್‌ ಶ್ಯಾಮ್‌ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು ವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದು, ದಿನಾಂಕ 3-3-2015 ಹಲ್‌ವಿನ್‌ ಶ್ಯಾಮ್‌ರವರು ವಿಪರೀತ ಮದ್ಯಸೇವನೆ ಮಾಡಿ ಪತ್ನಿ ಮಂಜುಳಾರವರನ್ನು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Tuesday, March 3, 2015

ಮನೆಗೆ ಅಕ್ರಮ ಪ್ರವೇಶ , ಮಹಿಳೆ ಮಾನಭಂಗಕ್ಕ ಯತ್ನ

    ಮನೆಗೆ ಅಕ್ರಮ ಪ್ರವೇಶ ಮಾಡಿ  ವ್ಯಕ್ತಿಯೋರ್ವ ತನ್ನ ಅತ್ತಿಗೆ ಮೇಲೆ ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದದಿಕೆ ಹಾಕಿದ ಘಟನೆ ಭಾಗಮಂಡಲ  ಸಮೀಪದ ಬೇಂಗೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 02-03-2015 ರಂದು ಭಾಗಮಂಡಲ ಠಾಣಾ ಸರಹದ್ದಿನ ಬೇಂಗೂರು ಗ್ರಾಮದ ನಿವಾಸಿ ಎ.ಎ.ನಳಿನಿ ಸಮಯ ಬೆಳಗ್ಗೆ 06-00 ಗಂಟೆಗೆ ತಮ್ಮ ಮನೆಯಲ್ಲಿರುವಾಗ್ಗೆ ಅವರ ಗಂಡನ ಅಣ್ಣನ ಮಗನಾದ ಟಿ.ಜೆ. ವಿನೋದ್ ಎಂಬಾತ ಮೋಟಾರು ಸೈಕಲ್ ನಂ ಕೆ.ಎ-12-ಕೆ.5692 ರಲ್ಲಿ ಅಲ್ಲಿಗೆ ಹೋಗಿ ಮನೆಗೆ ಅಕ್ರಮ ಪ್ರವೇಶ ಮಾಡಿ ನಳಿನಿಯವರನ್ನು ಅವಾಚ್ಯ ಶಬ್ದಗಳಿಂದ ಬೈದು ಅವರನ್ನು ಮತ್ತು ಅವರ ಗಂಡನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಬೆದರಿಸಿ ಸದರಿ ನಳಿನಿಯವರ ಎದಗೆ ಕೈ ಹಾಕಿ ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದು, ಅಲ್ಲದೇ ಕೈಯಿಂದ ನನ್ನ ಮುಖಕ್ಕೆ ಗುದ್ದಿ ಎಳೆದಾಡಿ ಬಟ್ಟೆಯನ್ನು ಹರಿದುಹಾಕಿದ್ದು ಅಲ್ಲದೆ ಮನೆಯೊಳಗಿದ್ದ ಶೋಕೇಸ್ ಮತ್ತು ವಾಜ್ ಗಳನ್ನು ಒಡೆದು ಸ್ಯಾಮ್ ಸಾಂಗ್ ಮೊಬೈಲ್ ಸೆಟ್ ನ್ನು ಒಡೆದು ಹಾಕಿದ ಬಗ್ಗೆ ಭಾಗಮಂಡಲ ಪೊಲೀಸರು ಎ.ಎ. ನಳಿನಿಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.   
ಜೀವದಲ್ಲಿ ಜಿಗುಪ್ಸೆ ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ: 

    ವಿರಾಜಪೇಟೆ ತಾಲೋಕು ತಿತಿಮತಿ ಗ್ರಾಮದಲ್ಲಿ ವಾಸವಾಗಿರುವ ಹೆಚ್‌.ಕೆ. ಬೋಜ ಎಂಬವರ ಸಾಕು ಮಗ ದಿನೇಶ (30) ದಿನಾಂಕ 2-3-2015 ರಂದು ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಸದರಿಯವರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಅವರ ಸಾಕು ತಂದೆ ಬೋಜ್ರವರು ನೀಡಿದ ದೂರನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯ ಆತ್ಮಹತ್ಯೆ:

    ವಿರಾಜಪೇಟೆ ತಾಲೋಕು ಅರಮೇರಿ ಗ್ರಾಮದ ಕಟ್ಟೇರ ಕಿರಣ್‌ ಎಂಬವರ ಲೈನ್‌ ಮನೆಯಲ್ಲಿ ವಾಸವಾಗಿರುವ ಕಾರ್ಮಿಕ ಹೆಚ್‌.ಎನ್‌. ಈರಪ್ಪ ಎಂಬವವರ ಪತ್ನಿ ಶ್ರೀಮತಿ ಸುಶೀಲ (40) ರವರು ಸುಮಾರು ಸಮಯದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಈ ವಿಚಾರವಾಗಿ ಬೇಸರಿಸಿಕೊಂಡು ಮದ್ಯಪಾನ ಮಾಡುತ್ತಿದ್ದು, ದಿನಾಂಕ 2-3-2015 ರಂದು ತಾನು ವಾಸವಾಗಿರುವ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

ಜಿಲ್ಲಾಸ್ಪತ್ರೆ ಕಛೇರಿಯಿಂದ ನಗದು ಕಳವು:

ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಕಛೇರಿಯಲ್ಲಿ ವಿವಿಧ ಭಾಪ್ತುಗಳಿಂದ ಸಂಗ್ರಹವಾಗಿದ್ದ ಸರಕಾರಿ ಹಣ ರೂ 83765-00 ರನ್ನು ಕಚೇರಿಯ ಕಪಾಟುವಿನಲ್ಲಿ ಪ್ರತ್ಯೇಕ ಎರಡು ಬ್ಯಾಗುಗಳಲ್ಲಿ ಇರಿಸಿದ್ದು ದಿನಾಂಕ 02-03-2015 ರಂದು ಸಮಯ ಬೆಳಿಗ್ಗೆ ನಗದು ವಿಭಾಗದ ಗುಮಾಸ್ತರು ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಿ ಕಪಾಟುವಿನ ಬೀಗ ತೆರೆಯಲು ನೋಡಿದಾಗ ಕಪಾಟುವಿನ ಬಾಗಿಲು ತನ್ನಿಂದ ತಾನೇ ತೆರೆದುಕೊಂಡಿದ್ದನ್ನು ನೋಡಿ, ತಕ್ಷಣ ಹಣವಿದ್ದ ಬ್ಯಾಗನ್ನು ಪರಿಶೀಲಿಸಿದಾಗ ಬ್ಯಾಗಿನಲ್ಲಿದ್ದ ಹಣವು ಕಾಣೆಯಾಗಿರುವುದು ಕಂಡು ಬಂದಿದ್ದು, ಸದರಿ ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಡಾ: ಕೆ.ಬಿ. ಮುತ್ತಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕರು , ಜಿಲ್ಲಾ ಆಸ್ಪತ್ರೆ, ಮಡಿಕೇರಿ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. 

Monday, March 2, 2015

ವ್ಯಕ್ತಿಗೆ ಕೊಲೆ ಬೆದರಿಕೆ ಪ್ರಕರಣ ದಾಖಲು:
    ವಿರಾಜಪೇಟೆ ತಾಲೋಕು ದೇವಣಗೇರಿ ಗ್ರಾಮದ ನಿವಾಸಿ ಪಿರ್ಯಾದಿ  ಐಚಂಡ ಪಿ.ಸುನಿಲ್‌  ಹಾಗೂ ಅವರ ಪತ್ನಿ ಪೂರ್ಣಿಮ ರವರು ದಿನಾಂಕ 21-2-2015 ರಂದು  ತಮ್ಮ ತೋಟದಲ್ಲಿ ಕಾಫಿ ಕುಯ್ಯುತ್ತಿರುವ ಸಂದರ್ಭದಲ್ಲಿ  ಅವರ ಕುಟುಂಬದವರಾದ  ಐಚಂಡ ಜೂಬಿ ಹಾಗು  ನಾಣಯ್ಯ ರವರುಗಳು  ಅಲ್ಲಿಗೆ ಬಂದು ವಿನಾ: ಕಾರಣ ಅವಾಚ್ಯ ಶಬ್ದಗಳಿಂದ ಬೈದು  ರುವುದಲ್ಲದೆ ತೋಟದದಿಂದ ಹೋರಗೆ ಹೋಗುವಂತೆ ಸೂಚಿಸಿ ಕೊಲೆ ಬೆದರಿಕೆ ಹಾಕಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಸ್ಟೇರ್‌ಕೇಸ್‌ನಿಂದ ಬಿದ್ದು ವ್ಯಕ್ತಿ ಸಾವು:
     ಕುಶಾಲನಗರ ಠಾಣಾ ಸರಹದ್ದಿನ ತೊರೆನೂರು ಗ್ರಾಮದ 55 ವರ್ಷ ಪ್ರಾಯದ ಮೂರ್ತಾಚಾರಿ ಎಂಬವರು ದಿನಾಂಕ 10-2-2015 ರಂದು ಸ್ಟೇರ್‌ಕೇಸ್‌ ಹತ್ತುತ್ತಿದ್ದಾಗ ಅಕಸ್ಮಿಕ ಜಾರಿ ಬಿದ್ದು ಗಂಭೀರ ಗಾಯಗೊಂಡು ಸದರಿಯವರನ್ನು ಚಿಕಿತ್ಸೆ ಸಂಬಂಧ ನಿಮಾನ್ಸ್‌ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 28-2-2015 ರಂದು ಮೃತಪ್ಟಿದ್ದು, ಕುಶಾಲನಗರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಜೀಪು ಅಪಘಾತ ಚಾಲಕನ ದುರ್ಮರಣ:
    ದಿನಾಂಕ 1/3/15 ರಂದು ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ಮಾಯಮುಡಿ ಗ್ರಾಮದ ಕೊಂಗಂಡ ಟಿ.ಅಪ್ಪಯ್ಯನವರ  ಸಹೋದರ ಕೆ.ಟಿ.ಕಾರ್ಯಪ್ಪ @ ಮನುರವರು ತಮ್ಮ  ಬಾಪ್ತು ಕೆಎ 12 ಎಂ 2446 ರ ಜೀಪಿನಲ್ಲಿ ದೇವರಪುರದಿಂದ ತನ್ನ ಮನೆಗೆ ಕಮಟೆ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಜೀಪನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಜೀಪು ದಿಬ್ಬಕ್ಕೆ ಹತ್ತಿ ಮಗುಚಿಕೊಂಡು ಕಾರ್ಯಪ್ಪರವರ ಮುಖ ಮತ್ತು ಎದೆಯ ಭಾಗಕ್ಕೆ ಪೆಟ್ಟಾಗಿ ಮೃತಪಟ್ಟಿದ್ದು ಗೋಣಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
 
ಮೋಟಾರ್‌ಸೈಕಲ್‌ಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ: 
   ದಿನಾಂಕ 28-2-2015 ರಂದು ಕುಶಾಲನಗರ ನಿವಾಸಿ ಎಂ.ಆರ್‌. ಮುತ್ತುರಾಜ್‌ ಎಂಬವರು ತಮ್ಮ ಮೋಟಾರ್‌ ಸೈಕಲ್‌ನಲ್ಲಿ ಸಂಜಯ್‌ ಎಂಬವರೊಂದಿಗೆ ಕೂಡಿಗೆಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಸೀಗೆಹೊಸೂರು ಗ್ರಾಮದ ನಿವಾಸಿ ಪ್ರಭು ಎಂಬವರು ತಮ್ಮ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್‌ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ಮುತ್ತುರಾಜ್‌ಹಾಗು ಸಂಜಯ್‌ ರವರು ಗಾಯಗೊಂಡಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. 

Sunday, March 1, 2015

ಜೀವನದಲ್ಲಿ ಜಿಗುಪ್ಸೆ ಮಹಿಳೆ ಆತ್ಮಹತ್ಯೆ:
    ದಿನಾಂಕ 28-02-2015 ರಂದು ರಾತ್ರಿ 07.00 ಗಂಟೆಯಿಂದ 10.00 ಗಂಟೆಯ ಮಧ್ಯದ ಅವಧಿಯಲ್ಲಿ ಕುಟ್ಟ ತೈಲಾ ಗ್ರಾಮದ ಕಳ್ಳಿಚಂಡ ಧನು ರವರ ಲೈನ್ ಮನೆಯಲ್ಲಿ ವಾಸವಾಗಿದ್ದ ಪಿರ್ಯಾಧಿ ಪಂಜರಿ ಎರವರ ಸುರೇಶ ಎಂಬವರ ಹೆಂಡತಿ ಶ್ರೀಮತಿ ಕಾಳಿ ಎಂಬವರು ಯಾವುದೋ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಸುರೇಶರವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇಂಜಿನಿಯರ್‌ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು:
     ಸವಿತಾ ಇಂಜಿನಿಯರಿಂಗ್‌ ಕಾಲೇಜು,ತಮಿಳುನಾಡು ವಿದ್ಯಾರ್ಥಿಗಳು ಪ್ರವಾಸಕ್ಕೆ ಕೊಡಗು ಜಿಲ್ಲೆಗೆ ಬಂದಿದ್ದು, ಆರ್‌. ಶರ್ಮಾ ಎಂಬ ವಿದ್ಯಾರ್ಥಿ ಈ ದಿನಾಂಕ 1-3-2015 ರಂದು ಸಿದ್ದಾಪುರ ಠಾಣಾ ಸರಹದ್ದಿನ ದುಬಾರೆ ಕಾವೇರಿ ನದಿಯಲ್ಲಿ ಈಜಲು ಹೋಗಿ ಆಕಸ್ಮಿಕ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಸದರಿ ಇಂಜಿನಿಯರಿಂಗ್‌ ಕಾಲೇಜಿನ ಅಸಿಸ್ಟೆಂಟ್‌ ಪ್ರೊಫಿಸರ್‌ ಸುದರ್ಶನ್‌ ಎಂಬವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಪ್ರವೇಶ, ಕೊಲೆ ಬೆದರಿಕೆ:
     ವಿರಾಜಪೇಟೆ ತಾಲೋಕು ಹೊಸೂರು ಗ್ರಾಮದ ನಿವಾಸಿ ಪಿರ್ಯಾದಿ ಸಿ.ಬಿ. ಅಯ್ಯಪ್ಪ ಎಂಬವರಿಗೆ ಸೇರಿದ ಹೊಸೂರು ಗ್ರಾಮದ ಸರ್ವೇ.ನಂ.24/3 ರಲ್ಲಿ 5 ಎಕರೆ ಮತ್ತು ಅತ್ತೂರು ಗ್ರಾಮದ ಸರ್ವೇ.ನಂ. 2 ರಲ್ಲಿ 2.98 ಎಕ್ರೆ ಆಸ್ತಿಯಿದ್ದು ಅದೇ ಗ್ರಾಮದ ಸಿ.ಎ.ಮುತ್ತಣ್ಣ ಎಂಬುವವರಿಗೆ 1987 ರಲ್ಲಿ 2006 ರವರೆಗೆ ಬೊಗ್ಯಕ್ಕೆ ನೀಡಿದ್ದು ಸದರಿ ಅವಧಿ ಮುಗಿದುಹೋಗಿದ್ದು ಸದರಿ ಆಸ್ತಿಗೆ ದಿನಾಂಕ 01/03/2015 ರಂದು ಬೆಳಿಗ್ಗೆ 10.30 ಗಂಟೆಗೆ ಸಿ.ಎ.ಮುತ್ತಣ್ಣ, ಆತನ ಹೆಂಡತಿ ಹಾಗೂ ಅವರ ಕೆಲಸದಾಳುಗಳಾದ ಸುಮಾರು ಅಪರಿಚಿತ 30 ಜನ ಕೂಲಿಕಾರ್ಮಿಕರು ಅಕ್ರಮ ಪ್ರವೇಶ ಮಾಡಿ ಪಿರ್ಯಾದಿಯವರ ತೋಟದ ತಂತಿ ಬೇಲಿಯನ್ನು ಕಡಿದು ಕೈಯಲ್ಲಿ ಮಾರಕಾಸ್ತ್ರಗಳಾದ ಕತ್ತಿ ಹಾಗೂ ದೊಣ್ಣೆಗಳನ್ನು ಹಿಡಿದುಕೊಂಡು ಪಿರ್ಯಾದಿಯವರನ್ನು ದಾರಿ ತಡೆದು ಕೊಲೆಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆನೆ ದಾಳಿ ವ್ಯಕ್ತಿಯ ದುರ್ಮರಣ:
    ಸೌದೆಗೆಂದು ಹೋದ ವ್ಯಕ್ತಿ ಆನೆ ದಾಳಿಗೆ ಬಲಿಯಾದ ಘಟನೆ ಶ್ರೀಮಂಗಲ ಠಾಣಾ ಬಿರುನಾಣಿ ಗ್ರಾಮದಲ್ಲಿ ನಡೆದಿದೆ. ಈ ದಿನ ದಿನಾಂಕ 1-3-2015 ರಂದು ಬಿರುನಾಣಿ ಗ್ರಾಮದ ನಿವಾಸಿ ರಾಜು ಎಂಬ ವ್ಯಕ್ತಿ ಬೆಳಿಗ್ಗೆ 6-00 ಗಂಟೆಗೆ ಸೌದೆ ತರಲೆಂದು ಕಾಡಿಗೆ ಹೋಗಿದ್ದು ಅವರ ಮೇಲೆ ಆನೆ ದಾಳಿ ನಡೆಸಿದ ಪರಿಣಾಮ ಸದರಿಯವರು ಸ್ಥಳದಲ್ಲೇ ಸಾವನಪ್ಪಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.