ಕೆರೆಗೆ ಹಾರಿ ವ್ಯಕ್ತಿಯ ಆತ್ಮಹತ್ಯೆ
ಕೆರೆಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ರುದ್ರಗುಪ್ಪೆ ಗ್ರಾಮದಲ್ಲಿ ನಡೆದಿದೆ. ದಿನಾಂಕ: 27-08-15ರಂದು ಕಂಡಂಗಾಲ ಗ್ರಾಮದ ಕೆ.ಜಿ. ಕುಟ್ಟಪ್ಪ ನವರು ವಿರಾಜಪೇಟೆ ನಗರದ ಸೆರೆನಿಟಿ ಹಾಲ್ನಲ್ಲಿ ಮದುವೆಗೆ ಬಂದಿದ್ದು, ದಿನಾಂಕ 28-08-15ರಂದು ಕುಟ್ಟಪ್ಪನವರ ಅಣ್ಣ ಕೆ.ಜಿ.ಕಾರ್ಯಪ್ಪನವರಿಗೆ ಇನ್ನೊಬ್ಬ ಸೋದರ ದೇವಯ್ಯನವರು ಫೋನ್ ಮಾಡಿ ಕುಟ್ಟಪ್ಪನವರು ಕಾಣೆಯಾಗಿರುವ ವಿಚಾರ ತಿಳಿಸಿದ ಮೇರೆ ಕಾರ್ಯಪ್ಪ ಹಾಗೂ ದೇವಯ್ಯರವರು ಕುಟ್ಟಪ್ಪರವರನ್ನು ಸುತ್ತಾ ಮುತ್ತ ಹುಡುಕಿದ್ದು ಪತ್ತೆಯಾಗಿರುವುದಿಲ್ಲ. ನಂತರ ದಿನಾಂಕ: 29-08-15ರಂದು ಕಾರ್ಯಪ್ಪನವರು ಮನೆಯಲ್ಲಿರುವಾಗ ಸಹೋದರ ದೇವಯ್ಯನವರು ದೂರವಾಣಿ ಕರೆ ಮಾಡಿ ಕುಟ್ಟಪ್ಪನ ಮೃತದೇಹ ಅವರ ಕೆರೆಯಲ್ಲಿ ತೇಲುತ್ತಿರುವುದಾಗಿ ತಿಳಿಸಿದ ಮೇರೆ ಹೋಗಿ ನೋಡಲಾಗಿ ಕುಟ್ಟಪ್ಪನವರ ಮೃತ ದೇಹ ನೀರಿನಲ್ಲಿ ತೇಲು ತ್ತಿದ್ದು, ಮದುವೆಗೆ ಹೋದವನು ವಿಪರೀತ ಮದ್ಯಪಾನ ಮಾಡಿದ ಅಮಲಿನಲ್ಲಿ ಕೆರೆಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ಮಹಿಳೆಯ ಆತ್ಮಹತ್ಯೆ
ನೇಣು ಬಿಗಿದುಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮ್ಮತ್ತಿ ಬಳಿಯ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 29-08-2015 ರಂದು ಕಾರ್ಮಾಡು ನಿವಾಸಿ ಕುಟ್ಟಂಡ ಕಾವೇರಪ್ಪ ಎಂಬವರು ಎಂದಿನಂತೆ ಬೆಳಿಗ್ಗೆ ತೊಟಕ್ಕೆ ಹೋಗಿ ಸಂಜೆ ಮನೆಯ ಹಿಂಬಾಗಿಲಿನಿಂದ ಒಳಗೆ ಹೋಗಿ ಹೆಂಡತಿಯನ್ನು ಕರೆದಾಗ ಯಾವುದೇ ಉತ್ತರ ಬಾರದೇ ಇದ್ದಾಗ ಮಲಗುವ ಕೋಣೆಯಲ್ಲಿ ನೋಡಲಾಗಿ ಅವರ ಹೆಂಡತಿ ಲಲಿತಾರವರು ಮನೆಯ ಮಲಗುವ ಕೋಣೆಯಲ್ಲಿ ಮಂಚದ ಮೇಲೆ ಒಂದು ಸ್ಟೂಲ್ ಇಟ್ಟು ಅದರ ಸಹಾಯದಿಂದ ಸೀಲಿಂಗ್ ಫ್ಯಾನಿನ ಹುಕ್ಕಿಗೆ ಸೀರೆಯನ್ನು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಮೃತೆಯು ಸುಮಾರು 10 ವರ್ಷದಿಂದ ಸಕ್ಕರೆ ಖಾಯಿಲೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖವಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.