Wednesday, July 30, 2014

ಜಾಗದ ವಿವಾದ; ಹಲ್ಲೆ , ಕೊಲೆ ಬೆದರಿಕೆ
       ದಾರಿ ವಿವಾದದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಸಂಪಾಜೆ ಬಳಿಯ ಪೆರಾಜೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 29/07/2014ರ ಸಂಜೆ ಪೆರಾಜೆ ಗ್ರಾಮದ ನಿವಾಸಿ ಆರ್‌.ಡಿ.ಭವಾನಿಶಂಕರ್‌ ಎಂಬವರು ಗ್ರಾಮದಲ್ಲಿರುವ ತಮ್ಮ ಜಾಗದಲ್ಲಿ ಕೆಲಸ ಮಾಡುತ್ತಿದ್ದ ಆಳುಗಳಿಗೆ ಕಾಫಿ ಮತ್ತು ತಿಂಡಿಯನ್ನು ತೆಗೆದುಕೊಂಡು ಅವರ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ್ಗೆ ಪೆರಾಜೆ ಗ್ರಾಮದ ಪರುಗುಂಜೆ ಪರಮೇಶ್ವರರವರ ಮನೆಯ ಹತ್ತಿರ ರಸ್ತೆಯಲ್ಲಿ ನಿಂತಿದ್ದ ಪೆರಂಗಜೆ ಮನೆಯವರಾದ ಹರಿಪ್ರಸಾದ್, ದಿನೇಶ ಮತ್ತು ಗಂಗಾಧರರವರುಗಳು ಭವಾನಿ ಶಂಕರ್‌ರವರನ್ನು ತಡೆದು ನಿಲ್ಲಿಸಿ ಜಾಗದ ವಿಷಯದಲ್ಲಿ ಜಗಳವಾಡಿ ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿದ್ದು, ಘಟನೆಯನ್ನು ಕಂಡ ಪಕ್ಕದ ಮನೆಯವರಾದ ಕುಂದಲಪಾಡಿ ನಾಗೇಶ್ ಮತ್ತು ಯೋಗಿತ್‌ರವರುಗಳು ಬರುವುದನ್ನು ನೋಡಿ ಆರೋಪಿಗಳು ತನ್ನ ಕೈಯಲ್ಲಿದ್ದ ಕತ್ತಿ ಮತ್ತು ದೊಣ್ಣೆಯನ್ನು ತೋರಿಸಿ ಭವಾನಿಶಂಕರ್‌ರವರನ್ನು ಕೊಲೆ ಮಾಡುವುದಾಗಿ ಬೆದರಿಸಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜಗಳ ಬಿಡಿಸಲು ಹೋದಾತನ ಮೇಲೆ ಹಲ್ಲೆ
       ಜಗಳ ಬಿಡಿಸಲು ಹೋದಾತನ ಮೇಲೆಯೇ ಕತ್ತಿಯಿಂದ ಹಲ್ಲೆ ಮಾಡಿರುವ ಘಟನೆ ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಟಿ.ಶೆಟ್ಟಿಗೇರಿ ಗ್ರಾಮದ ಕೋಟ್ರಮಾಡ ಮಂಜು ಎಂಬವರ ತೋಟದ ಲೈನು ಮನೆಯಲ್ಲಿ ವಾಸವಿರುವ ಮಣಿಯ ಎಂಬಾತನು ದಿನಾಂಕ 28/07/2014 ರಂದು ಕೆಲಸಕ್ಕೆ ರಜೆ ಇದ್ದದರಿಂದ ರಾತ್ರಿ ಸಮಯ ತನ್ನ ತಾಯಿಯೊಂದಿಗೆ ಮನೆಯಲ್ಲಿರುವಾಗ ಪಕ್ಕದಲ್ಲಿಯೇ ವಾಸವಿರುವ ಮಣಿಯನ ಭಾವ ಚೋಕ್ರ ಎಂಬವರು ತನ್ನ ತಮ್ಮ ನಂದರವರೊಂದಿಗೆ ಜಗಳ ಮಾಡುತ್ತಿದ್ದುದನ್ನು ತಿಳಿದ ಮಣಿಯ ಇವರನ್ನು ಸಮಾಧಾನಪಡಿಸಲು ಹೋದಾಗ ನಂದನು ದೊಣ್ಣೆಯಿಂದ ಮಣಿಯನ ಭುಜಕ್ಕೆ ಹೊಡೆದಿದ್ದು ಚೋಕ್ರನು ಕತ್ತಿಯನ್ನು ತಂದು ಕತ್ತಿಯಿಂದ ತಲೆಗೆ ಕಡಿದು ಗಾಯಪಡಿಸಿರುವುವದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, July 28, 2014

ಪತಿಯಿಂದ ಪತ್ನಿಯ ಮೇಲೆ ಹಲ್ಲೆ:

     ಸಿದ್ದಾಪುರ ಠಾಣಾ ಸರಹದ್ದಿನ ಯಡೂರು ಗ್ರಾಮದಲ್ಲಿ ಶ್ರೀಮತಿ ಕುಮಾರಿ ಎಂಬ ಮಹಿಳೆ ತನ್ನ ಗಂಡ ನಂಜುಂಡ ಎಂಬವರೊಂದಿಗೆ ವಾಸವಾಗಿದ್ದು, ದಿನಾಂಕ 26-7-2014 ರಂದು  ನಂಜುಂಡ ವಿಪರೀತ ಮದ್ಯವನ್ನು ಸೇವಿಸಿ  ಯಾವುದೋ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು   ತನ್ನ ಹೆಂಡತಿ ಕುಮಾರಿ ಮೇಲೆ ಸುತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೈಯಿಂದ ಹಲ್ಲೆ ನಡೆಸಿ  ದೂಡಿ ನೆಲಕ್ಕೆ ಬೀಳಿಸಿ ಗಾಯಪಡಿಸಿದ್ದು, ಈ ಸಂಬಂಧ ಶ್ರೀಮತಿ ಕುಮಾರಿಯವರು  ಚಿಕಿತ್ಸೆಗಾಗಿ ಅಮ್ಮತ್ತಿಯ ಆರ್‌ಐಹೆಚ್‌ಪಿ ಆಸ್ಪತ್ರೆಗೆ ದಾಖಲುಗೊಂಡು ಸಿದ್ದಾಪುರ ಪೊಲೀಸರಿಗೆ ದೂರನ್ನು ನೀಡಿದ್ದು, ಅದರಂತೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
 
ಮಗನ ಹುಡುಕಲು ಹೋದ ತಾಯಿ ನೀರು ಪಾಲು:
 
     ಕಾಣೆಯಾದ ಮಗನನ್ನು ಹುಡುಕಲು ಹೋದ ತಾಯಿ ಆಕಸ್ಮಿಕವಾಗಿ ಹೊಳೆಗೆ ಬಿದ್ದು ದುರ್ಮರಣಗೊಂಡ ಘಟನೆ ವಿರಾಜಪೇಟೆ ಸಮೀಪದ ಅರಮೇರಿ ಗ್ರಾಮದಲ್ಲಿ ನಡೆದಿದೆ.  ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅರಮೇರಿ ಗ್ರಾಮದಲ್ಲಿ ವಾಸವಾಗಿದ್ದ ಶ್ರೀಮತಿ ರೇವತಿ ಎಂಬವರ ಮಗ ದಿನಾಂಕ 13-7-2014 ರಂದು ಮನೆ ಬಿಟ್ಟು ಹೋಗಿದ್ದು, ತಾಯಿ ಶ್ರೀಮತಿ ರೇವತಿ (34)ರವರು ದಿನಾಂಕ 15-7-2014 ರಂದು  ತನ್ನ ಮಗನನ್ನು ಹುಡುಕುತ್ತಾ ಹೋಗುವಾಗ  ಅರಮೇರಿ ಗ್ರಾಮದ ಅಯ್ಯಮಂಡ ಸೋಮಯ್ಯ ಎಂಬುವವರ ಗದ್ದೆಯ ಬಳಿ ಇರುವ ಸಣ್ಣ ಹೊಳೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುತ್ತಾರೆ.  ಈ ಸಂಬಂಧ ಶ್ರೀಮಟಿ ಹೆಚ್‌.ಎ ಅಕ್ಕು ಎಂಬುವವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  
 
ಜಾಗಕ್ಕೆ ಅಕ್ರಮ ಪ್ರವೇಶ, ಬೆಳೆ ನಾಶ: 
 
     ಜಾಗದ ವಿವಾದದ ಹಿನ್ನೆಲೆಯಲ್ಲಿ  ವ್ಯಕ್ತಿಯೊಬ್ಬರಿಗೆ ಸೇರಿದ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕರಿಮೆಣಸು ಬಳ್ಳಿಗಳನ್ನು ನಾಶಪಡಿಸಿದ ಘಟನೆ ಶ್ರೀಮಂಗಲ ಸಮೀಪದ ಬಲ್ಯಮಂಡೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 27-7-2014 ರಂದು ಬಲ್ಯಮಂಡೂರು ಗ್ರಾಮದ ನಿವಾಸಿ ಕೊಟ್ಟಂಗಡ ಕಾರ್ಯಪ್ಪನವರಿಗೆ ಸೇರಿದ ಜಾಗಕ್ಕೆ ಕೆಲ ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ ಸುಮಾರು 20-25 ವರ್ಷದ ಸುಮಾರು 100 ಕರಿಮೆಣಸು ಬಳ್ಳಿಗಳನ್ನು ಬುಡದಿಂದ ಕತ್ತರಿಸಿ ನಾಶಪಡಿಸಿದ್ದು, ಸುಮಾರು 5 ಲಕ್ಷ ರೂ. ನಷ್ಟಪಡಿಸಿದ್ದು, ಈ ಕೃತ್ಯವನ್ನು ಕೊಟ್ಟಂಗಡ ಕಾರ್ಯಪ್ಪನವರ ಮನೆಯವರೇ ಆದ  ಕೆ.ಕೆ. ಜೋಯಪ್ಪ, ಹಾಗು ಆತನ ಮಗ ಗಯಾ ಎಂಬವರು ಮಾಡಿರಬಹುದೆಂದು ಗುಮಾನಿ ಇರುತ್ತದೆ ಎಂದು ಶ್ರೀಮಂಗಲ ಪೊಲೀಸರಿ ಕೊಟ್ಟಂಗಡ ಕಾರ್ಯಪ್ಪನವರು ದೂರನ್ನು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  
 
ಪಾದಾಚಾರಿಗೆ ಬೈಕ್‌ ಡಿಕ್ಕಿ:
 
     ಪಾದಚಾರಿಗೆ ಬೈಕ್‌ ಡಿಕ್ಕಿಯಾಗಿ ಗಾಯಗೊಂಡ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.  ಮಡಿಕೇರಿ ನಗರದ ಕನ್ನಂಡಬಾಣೆಯಲ್ಲಿ ವಾಸವಾಗಿರುವ ಕಾರ್ಯಪ್ಪ ಎಂಬುವವರು ದಿನಾಂಕ 25-7-2014 ರಂದು ಮಡಿಕೇರಿ ನಗರದ ಜಿ.ಟಿ. ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಕೆಎ-1212ಕೆ-3607ರ ಮೋಟಾರ್‌ ಬೈಕ್‌ನ್ನು ಅದರ ಸವಾರ ಆಲನ್‌ ಜೋನ್‌ ಎಂಬ ವ್ಯಕ್ತಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರ್ಯಪ್ಪನವರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಸದರಿಯವರು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.  .   
 
 

Sunday, July 27, 2014

ಹಳೆ ವಾಹನ ಅಫಘಾತ ಪ್ರಕರಣ, ಮರು ದೂರು
        ಹಳೆಯ ವಾಹನ ಅಫಘಾತ ಪ್ರಕರಣವೊಂದರಲ್ಲಿ ನ್ಯಾಯಾಲಯದ ನಿರ್ದೇಶನದ ಮೇರೆ ಮರು ದೂರು ಶ್ರೀಮಂಗಲ ಠಾಣೆಯಲ್ಲಿ ದಾಖಲಾಗಿದೆ. ದಿನಾಂಕ 14/08/2012 ರಂದು ಬೆಳಿಗ್ಗೆ ಹುದಿಕೇರಿ ನಿವಾಸಿ ಸಿ ಎಂ ಅಚ್ಚಯ್ಯರವರು ತನ್ನ ಬಾಪ್ತು ಮಹೇಂದ್ರ ಪಿಕ್ ಅಪ್ ವಾಹನ ಸಂಖ್ಯೆ ಕೆಎ 12 ಎ 61ರಲ್ಲಿ ಹುದಿಕೇರಿ ಗ್ರಾಮದಿಂದ ಪೊನ್ನಂಪೇಟೆಗೆ ಹೋಗುತ್ತಿದ್ದಾಗ ಹುದಿಕೇರಿ ಗ್ರಾಮದ 7 ನೇ ಮೈಲಿನ ಹತ್ತಿರ ಹರಿಹರ ಗ್ರಾಮದ ಕೆ.ಡಿ.ಮುತ್ತಪ್ಪ ಎಂಬವರು ತಮ್ಮ ಕೆಎ 12 ಎನ್ 5616 ರ ಸ್ವಿಫ್ಟ್ ಡಿಜಾಯಿರ್ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಅಚ್ಚಯ್ಯನವರು ಓಡಿಸುತ್ತಿದ್ದ ಪಿಕ್ ಆಪ್ ವಾಹನಕ್ಕೆ ಡಿಕ್ಕಿ ಪಡಿಸಿ ತೀವ್ರ ಸ್ವರೂಪದ ಗಾಯವನ್ನುವುಂಟು ಮಾಡಿರುವುದಲ್ಲದೆ ಅವರೇ ಅಚ್ಚಯ್ಯನವರ ಮೇಲೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಸಿರುತ್ತಾರೆ. ಅಲ್ಲದೆ ಅಚ್ಚಯ್ಯನವರು ಈಗ ವೀಲ್ ಚೇರ್ ನಲ್ಲಿ ಇರುವುದಾಗಿದೆ. ಅದ್ದರಿಂದ ತನ್ನ ಗಂಡ ಅಚ್ಚುತ್ತರವರಿಗೆ ಡಿಕ್ಕಿ ಪಡಿಸಿದ ಕೆಎ 12 ಎನ್ 5616 ರ ಸ್ವಿಫ್ಟ್ ಡಿಜಾಯಿರ್ ಕಾರಿನ ಚಾಲಕ ಕೆ.ಡಿ.ಮುತ್ತಪ್ಪನವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಚ್ಚಯ್ಯನವರ ಪತ್ನಿ ಶ್ರೀಮತಿ ಲೀಲಾರವರು ಪೊನ್ನಂಪೇಟೆ ನ್ಯಾಯಲಯದಲ್ಲಿ ನೀಡಿದ ದೂರಿನ ಮೇರೆಗೆ ನ್ಯಾಯಾಲಯದ ನಿರ್ದೇಶನದಂತೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, July 26, 2014

ಆಸ್ತಿಯ ವಿಚಾರದಲ್ಲಿ ದಾರಿ ತಡೆದು ಹಲ್ಲೆ:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕೆದಮುಳ್ಳೂರು ಗ್ರಾಮದ ನಿವಾಸಿ ಬಿಲ್ಲವರ ಎಸ್‌. ಪೂವಪ್ಪ ಎಂಬುವವರು ದಿನಾಂಕ: 25-07-14ರಂದು ಸಂಜೆ  ತಮ್ಮ  ಕೊಟ್ಟಿಗೆಯ ಬಳಿ ಇದ್ದಾಗ  ಅಲ್ಲಿಗೆ ಆರೋಪಿ ಜೀವನ್ ಎಂಬುವವರು ಬಂದು ಜಾಗದ ವಿಚಾರದಲ್ಲಿ ತಕರಾರು ತೆಗೆದು ಜಗಳ ಮಾಡಿದ್ದು ಅಲ್ಲದೆ ಎಳೆದಾಡಿ ಶೂ ಕಾಲಿನಿಂದ ಎದೆಗೆ, ಬೆನ್ನಿಗೆ, ಮೂಗಿಗೆ ಒದ್ದು ಗಾಯಪಡಿಸಿದಲ್ಲದೆ ಕಬ್ಬಿಣದ ರಾಡಿನಿಂದ ಬಲ ಮೊಣಕಾಲಿಗೆ ಹೊಡೆದು ನೋವುಪಡಿಸಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಬಸ್ಸಿನಿಂದ ಇಳಿಯುವ ಸಮಯ ಕೆಳಗೆ ಬಿದ್ದು ವ್ಯಕ್ತಿಗೆ ಗಾಯ:
   ಶ್ರೀಮಂಗಲ ಪೊಲೀಸ್‌ ಠಾಣಾ ಸರಹದ್ದಿನ ಬೆಳ್ಳುರು ಗ್ರಾಮದ ನಿವಾಸಿ ದಿನಾಂಕ 24-7-2014 ರಂದು   ಪಶುಪತಿ ಬಸ್ಸಿನಲ್ಲಿ ಹತ್ತಿ   ಸಮಯ 11:00 ಎ.ಎಂ ಗಂಟೆಗೆ ಬೆಳ್ಳುರು ಬಸ್ಸು ತಂಗುದಾಣದ ಹತ್ತಿರ ಇಳಿಯುವ ಸಮಯ ಚಾಲಕ ಬಸ್ಸನ್ನು ಸರಿಯಾಗಿ ನಿಲ್ಲಸದೇ ಇದ್ದುದರಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು, ಶ್ರೀಮಂಗಲ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

Thursday, July 24, 2014

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ 
      ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರಸಂತೆ ಬಳಿಯ ಹೆಗ್ಗುಳ ಗ್ರಾಮದಲ್ಲಿ ನಡೆದಿದೆ.  ಹೆಗ್ಗುಳ ಗ್ರಾಮದ ನಿವಾಸಿ ಹೆಚ್‌.ಎನ್.ದೇವಪ್ಪ ಎಂಬವರ ಅಣ್ಣ ಗಣೇಶ ಎಂಬವರು ದಿನಾಂಕ 23/07/2014ರ ಬೆಳಿಗ್ಗೆ ಮನೆಯಿಂದ ಹೋದವರು ವಾಪಾಸು ಬಾರದೆ ಇದ್ದು,  ದಿನಾಂಕ 24/07/2014ರಂದು ಬೆಳಿಗ್ಗೆ ಅದೇ ಗ್ರಾಮದ ಶಿವಣ್ಣ ಎಂಬವರು ದೂರವಾಣಿ ಮೂಲಕ ಕರೆಮಾಡಿ ಗಣೇಶನು ಒಂದು ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಿಳಿಸಿದ್ದು, ಗಣೇಶ್‌ರವರುಈಗ್ಗೆ 6 ತಿಂಗಳ ಹಿಂದೆ ಅವರ ಪತ್ನಿಯ ಸಾವಿನಿಂದ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಿಡಿಓ ಮೇಲೆ ಹಲ್ಲೆ, ಪ್ರಕರಣ ದಾಖಲು 
       ಪಂಚಾಯಿತಿ ಪಿಡಿಓ ಒಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಸಿದ್ದಾಪುರ ನಗರದಲ್ಲಿ ನಡೆದಿದೆ., ದಿನಾಂಕ 22/07/2014 ರಂದು ಮಧ್ಯಾಹ್ನ 12.00 ಗಂಟೆಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ಪಿಡಿಓ ಕೆ.ಎಂ.ತಿಮ್ಮಯ್ಯ ಎಂಬವರು  ಪಂಚಾಯ್ತಿ ಕಛೇರಿಯಿಂದ ಕೆಲಸದ ವಿಷಯಕ್ಕೆ ಮಡಿಕೇರಿಗೆ ಹೋಗಲು ತೆರಳುತ್ತಿದ್ದಾಗ ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂಭಾಗ ನವೀದ್, ಕುಂಞಪ್ಪ ಮತ್ತು ಇತರರು ಅಡ್ಡಹಾಕಿ "ನೀನು ಪಂಚಾಯ್ತಿಯನ್ನು ಲೂಟಿ ಮಾಡುತ್ತಿದ್ದೀಯಾ ನಿನ್ನನ್ನು ಇಲ್ಲಿ ಕೆಲಸ ಮಾಡಲು ಬಿಡುವುದಿಲ್ಲ" ಎಂದು ಬೆದರಿಕೆ ಹಾಕಿ, ಕಛೇರಿಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಎದುರು ಅಶ್ಲೀಲ ಶಬ್ದಗಳಿಂದ ಬೈದು ಬೈಕ್ ನಿಂದ ತಳ್ಳಿ ಬೀಳಿಸಲು ಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಟಾಟಾ ಏಸ್ ಮತ್ತು ಜೀಪು ಡಿಕ್ಕಿ, ಓರ್ವನಿಗೆ ಗಾಯ 
    ಟಾಟಾ ಏಸ್ ವಾಹನ ಮತ್ತು ಜೀಪು ಪರಸ್ಪರ ಡಿಕ್ಕಿಯಾಗಿ ಓರ್ವನಿಗೆ ಗಾಯಗಳಾದ ಘಟನೆ ಹುದಿಕೇರಿಯಲ್ಲಿ ನಡೆದಿದೆ. 

ದಿನಾಂಕ 23-7-14ರಂದು ಪೊನ್ನಪ್ಪ ಸಂತೆ ನಿವಾಸಿ ಪ್ರದೀಪ್ ಎಂಬವರು ತನ್ನ ತಂದೆಯ ಬಾಪ್ತು ಜೀಪು ಸಂಖ್ಯೆ ಕೆಎ-12-ಎಂ-798 ರಲ್ಲಿ ಪ್ರವೀಣ ಎಂಬುವರನ್ನು ಕರೆದು ಕೊಂಡು ಪೊನ್ನಂಪೇಟೆಯಿಂದ  ಕುಟ್ಟಕ್ಕೆ ಹೋಗುತ್ತಿದ್ದು, ಹುದಿಕೇರಿಯ ಐಪುಮಾಡ ಪೂಣ್ಣಚ್ಚರವರ ಮನೆಯ ಪಕ್ಕ ಸಾರ್ವಜನಿಕ ಮುಖ್ಯ ರಸ್ತೆಯಲ್ಲಿ ಎದುರಿನಿಂದ ಬಂದ ಒಂದು ಕೆಎ-45-6678 ರ ಟಾಟಾ ಸೂಪರ್ ಏಸ್  ವಾಹನದ ಚಾಲಕ ಕೆ.ಆರ್‌.ನಗರದ ನಿವಾಸಿ ರಮೇಶ ಎಂಬಾತನು ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರವೀಣರವರು ಚಾಲಿಸುತ್ತಿದ್ದ  ಜೀಪಿಗೆ ಡಿಕ್ಕಿ ಪಡಿಸಿ ಜೀಪು ಜಖಂಗೊಂಡಿದ್ದು, ಪ್ರವೀಣನಿಗೆ ಬಲಕಣ್ಣಿನ ಹುಬ್ಬಿನ ಹತ್ತಿರ ಗಾಯವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.







Tuesday, July 22, 2014

ಕಾಡಾನೆ ದಾಳಿ ವ್ಯಕ್ತಿಯ ಸಾವು:

      ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ನಿವಾಸಿ ಸಬಾಸ್ಟಿನ್‌ (43) ರವರು ಈ ದಿನ ಬೆಳಿಗ್ಗೆ  ರಬ್ಬರ್‌ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದಾಗ  ಆನೆಯೊಂದು ಅವರನ್ನು ಅಟ್ಟಿಸಿಕೊಂಡು ಬಂದು ದಾಳಿ ನಡೆಸಿದ್ದು,  ಸಬಾಸ್ಟಿನ್‌ ತೀವ್ರವಾಗಿ ಗಾಯಗೊಂಡು ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು  ಚಿಕಿತ್ಸೆ ಫಲಕಾರಿಯಾಗದೆ ಸಬಾಸ್ಟಿನ್‌ರವರು ಸಾವನಪ್ಪಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಕಾರಿಗೆ ಪಿಕ್‌ಅಪ್‌ ಜೀಪು ಡಿಕ್ಕಿ ಒಬ್ಬರಿಗೆ ಗಾಯ:
 
     ದಿನಾಂಕ 21-7-2014 ರಂದು ಮಡಿಕೇರಿ ನಗರ ನಿವಾಸಿ ವಿಮಾಶಂಕರ್‌ ಎಂಬುವವರು ಟೊಯಟೋ ಫಾರ್ಚುನರ್ ವಾಹನ ಸಂ KA-12-Z-1474 ರಲ್ಲ್ಲಿ ವಾಹನದ ಮಾಲಿಕ ಚಿಣ್ಣಪ್ಪನವರ ಕಡೆಯವರನ್ನು ಕರೆದುಕೊಂಡು ವಿರಾಜಪೇಟೆ ಕಡೆಗೆ ಹೋಗುತ್ತಿದ್ದಾದ ಎದುರುಗಡೆಯಿಂದ ಬಂದ ಪಿಕ್‌ಅಪ್‌ ವಾಹನವನ್ನು ಅದರ ಚಾಲಕ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ವಿಮಾಶಂಕರ್‌ರವರು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
 
ಆಟೋ ರಿಕ್ಷಾ ಅವಘಡ ಮಹಿಳೆಗೆ ಗಾಯ:
 
      ವಿರಾಜಪೇಟೆ ತಾಲೋಕು ನಾಂಗಾಲ ಗ್ರಾಮದ ನಿವಾಸಿ ಸಿ.ಯು. ಮಾಚಯ್ಯ ಹಾಗು ಮನೆಯವರು ದಿನಾಂಕ 21-7-2014 ರಂದು ಆಟೋ ರಿಕ್ಷಾದಲ್ಲಿ ವಿರಾಜಪೇಟೆ ಕಡೆಯಿಂದ ನಾಂಗಾಲದ ತಮ್ಮ ಮನೆಯ ಕಡೆಗೆ ಪ್ರಯಾಣಿಸುತ್ತಿದ್ದ  ವೇಳೆ ಆಟೋ ಚಾಲಕ ಆಟೋರಿಕ್ಷಾವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಆಟೋ ರಿಕ್ಷಾ ರಸ್ತೆಯಲ್ಲಿ ಮಗುಚಿಕೊಂಡು ರಿಕ್ಷಾದಲ್ಲಿದ್ದ ಮಾಚಯ್ಯನವರ ತಾಯಿ ಶ್ರೀಮತಿ ಮೀನಾಕ್ಚಿಯವರಿಗೆ ಗಾಯಗಳಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   

Monday, July 21, 2014

ಮಹಿಳೆಗೆ ವರದಕ್ಕಿಣೆ ಕಿರುಕುಳ,  ಕೊಲೆ ಬೆದರಿಕೆ:

     ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಠ ಎಂಬಲ್ಲಿ ವಾಸವಾಗಿರುವ ಶ್ರೀಮತಿ ಸುನಿತ ಎಂಬ ಮಹಿಳೆ  ದಿ: 14-9-2008 ರಂದು ಕೆ.ಎನ್. ರಿಜೇಶ್ ಎಂಬ ವ್ಯಕ್ತಿಯನ್ನು  ಸಾಂಪ್ರದಾಯಿಕವಾಗಿ ವಿವಾಹವಾಗಿದ್ದು, ವಿವಾಹದ ಸಂದರ್ಭದಲ್ಲಿ ಕೆ.ಎನ್‌ ರಿಜೇಶ್‌ಗೆ ವರದಕ್ಷಿಣೆ ರೂಪದಲ್ಲಿ ಸುಮಾರು 21.50 ಪೌನ್ ಚಿನ್ನಾಭರಣ ಹಾಗೂ ಹಣವನ್ನು ನೀಡಿ ವಿವಾಹ ಮಾಡಿಕೊಟ್ಟಿದ್ದು, ತದನಂತರ ಸುನಿತರವರ ಅತ್ತೆ ಸರಸು ಹಾಗು ಅತ್ತಿಗೆ  ರೀನಾ ಇವರುಗಳು ವರದಕ್ಷಿಣೆ ತರುವಂತೆ ವಿಪರೀತ ಮಾನಸಿಕ ಹಾಗೂ ದೈಹಿಕ ಕಿರುಕುಳ ಹಾಗೂ ಹಿಂಸೆಯನ್ನು ನೀಡಿದ್ದು ಅಲ್ಲದೆ ವಿಚ್ಚೇದನಕ್ಕಾಗಿ  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಬೇರೆ ಮಹಿಳೆ ವನಿತಾ ಎಂಬಾಕೆಯನ್ನು ಮದುವೆಯಾಗಿದ್ದು, ಈ ಈ ವಿಚಾರವಾಗಿ ದಿನಾಂಕ  7-7-2014 ರಂದು ಸುನಿತ ರವರು ನ್ಯಾಯಾಲಯಕ್ಕೆ ಹೋಗುವಾಗ ರಿಜೇಶ್‌ರವರು ಅವರ ದಾರಿ ತಡೆದು  ಕೊಲೆ ಬೆದರಿಕೆ ಹಾಕಿದ್ದು, ಈ ಸಂಬಂಧ ಶ್ರೀಮತಿ ಸುನಿತರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
 
ಅಕ್ರಮ ಮರದ ದಿಮ್ಮಿಗಳ ಸಾಗಾಟ:
 
   ದಿನಾಂಕ 21-07-2014 ರಂದು ಸಮಯ ಬೆಳಗಿನ ಜಾವ 05.30 ಗಂಟೆಗೆ ಮಡಿಕೇರಿ  ಸಮೀಪದ ಸಂಪಿಗೆ ಕಟ್ಟೆ ಜಂಕ್ಷನ್ ನಲ್ಲಿ  ತುಳುನಾಡಂಡ ತಿಮ್ಮಯ್ಯ, ಹಾಗು ಮಡಿಕೇರಿ ಭಗವತಿ ನಗರದ ಕುಶಾಲಪ್ಪ ಎಂಬುವವರು  ಕೆಎ-12-ಎ-9924 ರ ಟಾಟಾ 909 ಇ ಎಕ್ಸ್ 2 ರ  ಲಾರಿಯಲ್ಲಿ  ಸರಕಾರದ ಯಾವುದೇ ಪರವಾನಗಿ ಇಲ್ಲದೇ ವಿವಿಧ ಅಳತೆಯ ಚಾಗಟೆ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದುದ್ದನ್ನು ಮದಿಕೇರಿ ನಗರ ಪೊಲೀಸರು ಪತ್ತೆ  ಹಚ್ಚಿ ಆರೋಪಿಗಳನ್ನು  ಮಾಲು ಸಮೇತ ವಶಕ್ಕೆ ತೆಗೆದು ಕೊಂಡ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
 
ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ:
 
     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊಸ್ಕೇರಿ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಮಹೇಶ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 20-7-2014 ರಂದು ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿ ವ್ಯಕ್ತಿಯ ಪತ್ನಿ  ಶ್ರೀಮತಿ ಸಂಗೀತರವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   
 
 
 

Sunday, July 20, 2014

ಕ್ಷುಲ್ಲಕ ಕಾರಣಕ್ಕೆ ಹಲ್ಲೆ; ಕಾರಿಗೆ ಹಾನಿ
           ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ ಹಲ್ಲೆ ಮಾಡಿ ಕಾರಿಗೆ ಹಾಣಿ ಮಾಡಿದ ಘಟನೆ ವಿರಾಜಪೇಟೆ ತಾಲೂಕಿನ ಕಡಂಗಮರೂರು ಗ್ರಾಮದಲ್ಲಿ ನಡೆದಿದೆ. 19-07-14ರಂದು ಸಂಜೆ ಸಮಯ ಕಡಂಗಮರೂರು ಗ್ರಾಮದ ನಿವಾಸಿ ಪಿ.ಎಂ.ಅಬೂಬಕರ್ ಎಂಬವರು ಕಡಂಗದ ಜುಮ್ಮ ಮಸೀದಿಯ ಉಸ್ತಾದ್ ರವರಿಗೆ ಊಟದ ವ್ಯವಸ್ಥೆಯನ್ನು ಮಾಡಿ ಕರೆಯಲು ಹೋದಾಗ ಉಸ್ತಾದ್ ರವರು ಬೇರೆಯವರ ಮನೆಗೆ ಊಟಕ್ಕೆ ಹೋಗಿರುವ ವಿಚಾರ ತಿಳಿದು ವಾಪಾಸ್ಸು ಮನೆಗೆ ಹೋಗಿ ಅವರ ಪತ್ನಿ ಅವ್ವಮ್ಮ ರವರನ್ನು ಜೊತೆಯಲ್ಲಿ ಕರೆದುಕೊಂಡು ಅವರ ಬಾಪ್ತು ಕಾರ್ ನಂ. ಕೆಎ-12-ಪಿ-6764ರ ಆಲ್ಟೋ ಕಾರಿನಲ್ಲಿ ತಂಗಿಯ ಮನೆಗೆ ಹೋಗುತ್ತಿರುವಾಗ ಕಡಂಗ ನಗರದಲ್ಲಿರುವ ಗಣಪತಿ ದೇವಸ್ಥಾನದ ಹತ್ತಿರ ಹಿಂಬದಿಯಿಂದ ಒಂದು ಕೆಂಪು ಆಲ್ಟೋ ಕಾರು ಬಂದು ಅಬೂಬಕರ್‌ರವರು ಚಾಲನೆ ಮಾಡುತ್ತಿದ್ದ ಕಾರಿನ ಮುಂಭಾಗ ಬಂದು ನಿಲ್ಲಿಸಿ, ಕಾರಿನಿಂದ ಇಳಿದು ಬಂದ ಕೆ.ಯು. ಸಿಯಾಬ್, ಉಸ್ಮಾನ್, ಇಸಾಕ್, ಸಫೀಕ್, ನಸೀರ್, ನೌಷಾದ್.ಪಿ.ಎ. ರವರು ಅಬೂಬಕರ್‌ರವರೊಂದಿಗೆ ಉಸ್ತಾದ್ ರವರನ್ನು ಊಟಕ್ಕೆ ಕರೆದ ವಿಚಾರದಲ್ಲಿ ಜಗಳವಾಡಿ ಏಕಾಏಕಿ ಕಾರಿನಲ್ಲಿದ್ದ ಅಬೂಬಕರ್ ಮತ್ತು ಅವರ ಪತ್ನಿ ಅವ್ವಮ್ಮ ರವರನ್ನು ಕಾರಿನಿಂದ ಎಳೆದು ಇಬ್ಬರ ಮೇಲೂ ಹಲ್ಲೆ ಮಾಡಿ ಕಾರಿನ ಗಾಜನ್ನು ಒಡೆದು ನಷ್ಟಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ, ಪ್ರಕರಣ ದಾಖಲು
           ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸಿರುವ ಪ್ರಕರಣವೊಂದು ಮಡಿಕೇರಿ ತಾಲೂಕಿನ ಮರಗೊಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 12-01-2012 ರಂದು ಪ್ರಕರಣದ ಫಿರ್ಯಾದಿ ಲೀನಾ ಎಂಬವರು ಮರಗೋಡು ನಿವಾಸಿ ಹರ್ಷ ಕೆ.ಎ. ಎಂಬವರವರನ್ನು ಅವರ ಸಂಪ್ರದಾಯದಂತೆ ಮಡಿಕೇರಿಯ ಕಾವೇರಿ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು ಮದುವೆಯ ಸಮಯದಲ್ಲಿ ಪತಿ ಹರ್ಷ, ಚಿರಮಣಿ, ಆಶಾ, ರತನ್ ಎಂಬವರುಗಳು ವರದಕ್ಷಿಣೆಯಾಗಿ ರೂ 15 ಲಕ್ಷ ನೀಡುವಂತೆ ಹೇಳಿದ ಮೇರೆಗೆ ಲೀನಾರವರ ತಂದೆ 15 ಲಕ್ಷ ರೂ ವನ್ನು ಲೀನಾ, ಲೀನಾರ ತಾಯಿ ತಾಯಿ ಹಾಗೂ ಹರ್ಷರವರ ಜಂಟಿ ಖಾತೆಯಲ್ಲಿ ಮಡಿಕೇರಿಯ ಕಾಲೇಜು ರಸ್ತೆಯಲ್ಲಿರುವ ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದು ಆರೋಪಿಗಳುಲೀನಾರವರಿಗೆ ವರದಕ್ಷಿಣೆಯಾಗಿ ತಂದೆಯವರು ಠೇವಣಿ ಇಟ್ಟ ಹಣವನ್ನು ತೆಗೆದುಕೊಂಡು ಬರದಿದ್ದರೆ ಮನೆಯಲ್ಲಿ ಇರುವುದು ಬೇಡವೆಂದು ಹೇಳಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು ಲೀನಾರವರು ದಿನಾಂಕ 05-07-14 ರಂದು ಅವರ ಅಕ್ಕನ ಗಂಡ ಸೋನಾಜಿತ್‌ರವರೊಂದಿಗೆ ಪತಿಯ ಮನೆಗೆ ಹೋದಾಗ ನಾಲ್ವರೂ ಆರೋಪಿಗಳು ವರದಕ್ಷಿಣೆ ಹಣ ತರದೇ ಮನೆಗೆ ಬರುವುದು ಬೇಡ ಎಂದು ಹೇಳಿ ಮನೆಗೆ ಕರೆದುಕೊಳ್ಳದೇ ಆಕೆಯ ಮೇಲೆ ಹಲ್ಲೆ ಮಾಡಿ ಮತ್ತೊಮ್ಮೆ ಮನೆಗೆ ಬಂದರೆ ಕಡಿದು ಕೊಲ್ಲುವುದಾಗಿಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, July 18, 2014

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:

     ವಿರಾಜಪೇಟೆ ಸಮೀಪದ ಕದನೂರು ಗ್ರಾಮದ ನಿವಾಸಿ ಮೈಕಲ್ ಬ್ರಿಗಾಂಜ, (53) ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ; 15-07-14 ರಂದು ಸಮಯ 16-00 ಗಂಟೆಗೆಯಿಂದ ದಿನಾಂಕ; 18-07-14ರಂದು ಕದನೂರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದು,  ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 
 
ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನ:
     ಕೆಲಸಕ್ಕೆ ಹೋಗಲಿಲ್ಲ ಎಂಬ ಕಾರಣಕ್ಕೆ ತನ್ನ ಮಗನ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಕುಶಾಲನಗರ ಠಾಣೆಗೆ ವರದಿಯಾಗಿದೆ.  ಕುಶಾಲನಗರದ ಹೊಸಪಟ್ಟಣ ಗ್ರಾಮದ ನಿವಾಸಿ ಸುರೇಶ್‌ ಮಾದಪ್ಪ ಎಂಬ ವ್ಯಕ್ತಿ  ತನ್ನ ಮಗ ಭಾನುಪ್ರಕಾಶ್‌ ಕೆಲಸಕ್ಕೆ ಹೋಗಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು  ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಮಾಡದೆ ಬಿಡುವುದಿಲ್ಲ ಎಂದುಕೊಂಡು ಕತ್ತಿಯಿಂದ ಭಾನುಪ್ರಕಾಶರವರ ಎಡಕೈ ಮತ್ತು ತಲೆಗೆ ಕಡಿದು ಕೊಲೆ ಮಾಡಲು ಯತ್ನಿಸಿ, ಗಾಯಪಡಿಸಿದ್ದು, ಭಾನುಪ್ರಕಾಶ್‌ನವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Thursday, July 17, 2014

ವೇಗದ ಚಾಲನೆ ರಸ್ತೆಯಲ್ಲಿ ಮಗುಚಿದ ಲಾರಿ:

     ಸಿಲ್ವರ್‌ ಮರ ತುಂಬಿದ ಲಾರಿಯೊಂದು ನಿಯಂತ್ರಣ ಕಳೆದುಕೊಂಡ ಕಾರಣ ರಸ್ತೆಯಲ್ಲಿ ಮಗುಚಿಕೊಂಡ ಘಟನೆ ಸೋಮವಾರಪೇಟೆಯ ಚೌಡ್ಲು ಗ್ರಾಮದಲ್ಲಿ ನಡೆದಿದೆ.  ಸೋಮವಾರಪೇಟೆ ತಾಲೋಕು ಗೋಪಾಲಪುರ ಗ್ರಾಮದ  ನಿವಾಸಿ ಮುಸ್ತಫಾ ಎಂಬವರು   ದಿನಾಂಕ 16.07.2014 ರಂದು ಕೆಎ-12 8194 ರ ಲಾರಿಯಲ್ಲಿ ಚೌಡ್ಲು ಗ್ರಾಮದಿಂದ ಸಿಲ್ವರ್‌ ಮರಗಳನ್ನು ಲೋಡ್‌ ಮಾಡಿಸಿಕೊಂಡು ಸಮಯ ಸಂಜೆ 06:00 ಗಂಟೆಗೆ ಸಮಯದಲ್ಲಿ ಚೌಡ್ಲು ಗ್ರಾಮದ ಸಾರ್ವಜನಿಕ ರಸ್ತೆಯಲ್ ಹೋಗುತ್ತಿದ್ದಾಗ  ಲಾರಿ ಚಾಲಕ ದಿನೇಶ ಎಂಬವರು ಲಾರಿಯನ್ನು ಅತೀ ವೇಗ ಹಾಗು ಅಜಾರೂಕತೆಯಿಂದ ಚಾಲಿಸಿ ನಿಯಂತ್ರಣ ಕಳೆದುಕೊಂಡ ಪರಿಣಾಮ  ಲಾರಿ ರಸ್ತೆಯಲ್ಲಿ ಮಗುಚಿ ಬಿದ್ದಿದ್ದು ಚಾಲಕ ಸೇರಿದಂತೆ ಲಾರಿಯಲ್ಲಿದ್ದ ಮುಸ್ತಾಫರವರು ಪ್ರಾಣಾಪಾಯದಿಂದ ಪಾರಾಗಿದ್ದು, ಸೋಮವಾರಪೇಟೆ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 
 
ಮಹಿಳೆ ಮೇಲೆ ಹಲ್ಲೆ, ಪ್ರಕರಣ ದಾಖಲು:
 
     ದನದ ವ್ಯಾಪಾರಿ ಹಾಗು ಜೊತೆಯವರು ಸೇರಿ ಮಹಿಳೆಯೊಬ್ಬರ ಮೇಲೆ ಹಲ್ಲೆನಡೆಸಿದ ಘಟನೆ ಶ್ರೀಮಂಗಲದ ಬಲ್ಯಮಂಡೂರು ಗ್ರಾಮದಲ್ಲಿ ನಡೆದಿದೆ.  ಶ್ರೀಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯ ಬಲ್ಯಮಂಡೂರು ಗ್ರಾಮದ ನಿವಾಸಿ ಶ್ರೀಮತಿ ಹೆಚ್‌.ಹೆಚ್‌. ಮಲ್ಲಿಗೆ ಎಂಬವರು ದಿನಾಂಕ: 14-7-2014ರಂದು ರಾತ್ರಿ  ತಮ್ಮ ಮನೆಯಲ್ಲಿ ಮಲಗಿದ್ದು,  ರಾತ್ರಿ 11:00 ಗಂಟೆಗೆಯ ಸಮಯದಲ್ಲಿ  ಕೊಟ್ಟಿಗೆಯ ಬಳಿ ದನಕರುಗಳು ಬೊಬ್ಬೆ ಹಾಕುವ ಶಬ್ದ ಕೇಳಿ ಬಂದು ನೋಡಿದಾಗ  ಕೊಟ್ಟಿಗೆಯ ಪಕ್ಕದ ರಸ್ತೆಯಲ್ಲಿ ದನದ ವ್ಯಾಪಾರಿ ಮುಸ್ತಾಫ ತನ್ನ ಪಿಕ್ ಅಪ್ ವಾಹನದೊಂದಿಗೆ ನಿಂತಿದ್ದು,  ಆತನನ್ನು ಏಕೆ ಇಲ್ಲಿ ಇದ್ದಿಯಾ ಎಂದು ಕೇಳಿದಾಗ ನೀನು ಯಾರು  ಏಕೆ ನನ್ನ ವಿಚಾರಿಸ್ತಿಯಾ ಎಂದು ಹೇಳಿ ಮಲ್ಲಿಗೆಯವರನ್ನು  ತಳ್ಳಿ ಕೆಳಗೆ ಬೀಳಿಸಿದ್ದು ಅಲ್ಲದೆ ಆತ ಹಾಗು ಆತನ ಜೊತೆಯಲ್ಲಿದ್ದ  ಕರಿಯಪ್ಪ, ಸುಂದರಿ ಮತ್ತು ಲೋಕೇಶ ಎಂಬವರು  ಕಾಚಿ ದೊಣ್ಣೆಯಿಂದ ಮತ್ತು ಕೈಯಿಂದ  ಹಲ್ಲೆ ನಡೆಸಿದ್ದು ಕಾಲಿನಿಂದ ಹೊಟ್ಟೆಯ ಭಾಗಕ್ಕೆ ಒದ್ದು ನೋವನ್ನುಂಟುಮಾಡಿದ ಬಗ್ಗೆ, ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದ ಹೆಚ್‌.ಹೆಚ್‌. ಮಲ್ಲಿಗೆಯವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಹಳೆಯ ದ್ವೇಷ ವ್ಯಕ್ತಿಗಳ ಮೇಲೆ ಹಲ್ಲೆ:
 
     ದಿನಾಂಕ: 14-7-2014ರಂದು ಸಮಯ ರಾತ್ರಿ ಸುಮಾರು 9:00 ಗಂಟೆಯ ಸಮಯದಲ್ಲಿ  ಶ್ರೀಮಂಗಲ ಠಾಣಾ ವ್ಯಾಪ್ತಿಯ ಬಲ್ಯಮಂಡೂರು ಗ್ರಾಮದ ನಿವಾಸಿ ಶ್ರೀಮತಿ ಹೆಚ್‌. ಕೆ . ಸುಂದರಿ  ಎಂಬವರ ಮನೆಯ ಅಂಗಳಕ್ಕೆ ಅದೇ ಗ್ರಾಮದವರಾದ ಹರೀಶ,  ಆತನ ಪತ್ನಿ ಮಲ್ಲಿಗೆ  ಹಾಗೂ ಪ್ರಮೋದ್  ಎಂಬವರು ಬಂದು ಹಳೆಯ ದ್ವೇಶದಿಂದ ಅವಾಚ್ಯ ಶಬ್ದಗಳಿಂದ ಬೈದು  ಹೆಚ್‌.ಕೆ. ಸುಂದರಿ ಹಾಗು ಆಕೆಯ ಗಂಡನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆಂದು ಶ್ರೀಮಂಗಲ ಪೊಲೀಸ್‌ ಠಾಣೆಗೆ ಶ್ರೀಮತಿ ಹೆಚ್‌.ಕೆ. ಸುಂದರಿ ದೂರನ್ನು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
 
ಕಾರ್ಮಿಕ ಇಲಾಖಾ ನ್ಯಾಯಾಲಯದಲ್ಲಿ ವ್ಯಕ್ತಿಯ ಅನುಚಿತ ವರ್ತನೆ:
 
      ದಿನಾಂಕ  16-07-2014 ರಂದು ಬೆಳಿಗ್ಗೆ ಕಾರ್ಮಿಕ ಇಲಾಖೆಯ ನ್ಯಾಯಾಲಯದಲ್ಲಿ ಹುಲುಗುಲಿ ಎಸ್ಟೇಟಿನ ಮಾಲೀಕರಾದ ಶ್ರೀ ಹಾಜಿ ಮಹಮ್ಮದ್ ರವರ  ವಿರುದ್ದ ಸದರಿ ಎಸ್ಟೇಟಿನ ನೌಕರರ ವಿವಾದವು ನಡೆಯುತ್ತಿದ್ದಾಗ ಇವರ ಪರವಾಗಿ ಹಾಜರಿದ್ದ  ಮಹಮ್ಮದ್ ಎಂಬುವವರು ಯಾವುದೇ ಅಧಿಕಾರ ಪತ್ರವನ್ನು ಹಾಜರುಪಡಿಸದೇ ನ್ಯಾಯಾಲಯದೊಳಗೆ ಹಾಜರಾಗಿ ನ್ಯಾಯಾಲಯದ ಕಲಾಪದಲ್ಲಿ ಅನುಚಿತವಾಗಿ ವರ್ತಿಸಿರುವ ಬಗ್ಗೆ ಮತ್ತು   ಸಮಯ 17.15 ಗಂಟೆಗೆ ಶ್ರೀ ಯತೀರಾಜು, ಕಾರ್ಮಿಕ ಅಧಿಕಾರಿ,  ತಾನು ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕ ಕಚೇರಿಗೆ ಸದರಿ ಮಹಮ್ಮದ್ @ ಇಂಗ್ಲೀಷ್ ಮಹಮ್ಮದ್ ರವರು ಕಚೇರಿ ಕೆಲಸದ ವೇಳೆಯಲ್ಲಿ ಕಚೇರಿಗೆ ನುಗ್ಗಿ ಯತೀರಾಜುರವರನ್ನು  ನಿಂದಿಸಿ,  ಅವಾಚ್ಯ ಶಬ್ದಗಳಿಂದ ಬೈದು, ಬೆದರಿಸಿರುತ್ತಾರೆಂದು ಕಾರ್ಮಿಕ ಅಧಿಕಾರಿ ಯತೀರಾಜುರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Wednesday, July 16, 2014

ಆಪ್ರಾಪ್ತ ವಯಸ್ಸಿನ ಹುಡುಗಿ ಕಾಣೆ:

     ವಿರಾಜಪೇಟೆ ತಾಲೋಕು ಚಿಕ್ಕಮಂಡೂರು ಗ್ರಾಮದ ವಾಸಿ ಪಣಿಎರವರ ಬೊಳ್ಳಿ ಎಂಬವರ ಮಗಳು ಪೂವಮ್ಮ (8) ಪೊನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತಿದ್ದು  ಜೂನ್ ತಿಂಗಳಲ್ಲಿ 5-6 ದಿನಗಳು ಮಾತ್ರ ಶಾಲೆಗೆ ಹೋಗಿದ್ದು ಪಿರ್ಯಾದಿಯವರ ಹಿರಿಯ ಮಗಳು  ಶಾಲೆಗೆ ಹೋಗುವಂತೆ ಒತ್ತಾಯಿಸಿದ್ದ ಕಾರಣ ನಾಳೆಯಿಂದ ಶಾಲೆಗೆ ಹೋಗುವುದಾಗಿ ಪೂವಮ್ಮಳು ತಿಳಿಸಿದ್ದು ದಿನಾಂಕ 03/07/2014 ರಂದು ಬೆಳಿಗ್ಗೆ 08:30 ಗಂಟೆಗೆ ಶಾಲೆಗೆ ಹೋಗುತ್ತೇನೆ ಎಂದು ತನ್ನ ತಂದೆ ಬೊಳ್ಳಿಯವರಿಗೆ ತಿಳಿಸಿ ಮನೆಯಲ್ಲಿ ಇದ್ದವಳು  ಪಿರ್ಯಾದಿ ಸಂಜೆ ಕೆಲಸ ಮುಗಿಸಿಕೊಂಡು ವಾಪಸ್ಸು  ಬಂದು ನೋಡಿದಾಗ  ಪೂವಮ್ಮಳು ಮನೆಯಲ್ಲಿ ಇರದೇ  ಕಾಣೆಯಾಗಿದ್ದು, ಶ್ರೀಮಂಗಲ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Tuesday, July 15, 2014









 
ಹೆಂಗಸು ಕಾಣೆ, ಪ್ರಕರಣ ದಾಖಲು:

       ಮಡಿಕೇರಿ ತಾಲೋಕು, ಕಾಂತೂರು ಮೂರ್ನಾಡು ಗ್ರಾಮದ ನಿವಾಸಿ ವಿಜಯ ಎಂಬುವವರು ಪತ್ನಿ ಶ್ರೀಮತಿ ಗವಿತ @ ರಮ್ಯ (38) ಇವರು ದಿನಾಂಕ 14-7-2014 ರಂದು ಎಂದಿನಂತೆ ಮನೆಯಲ್ಲಿ ಇದ್ದು,  ಮನೆಯಿಂದ ಕಾಣೆಯಾಗಿದ್ದು,  ವಿಜಯರವರ ಸಹೋದರ ದಿನೇಶ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
 
 
 
ವಾಹನ ಅವಘಡ ವ್ಯಕ್ತಿಯ ದುರ್ಮರಣ: 
     ವಾಹನ ಅಪಘಾತದಲ್ಲಿ ವ್ಯಕ್ತಿಯೋರ್ವರು ದುರ್ಮರಣಗೊಂಡು ಇನ್ನೊಬ್ಬರು ಗಾಯಗೊಂಡ ಘಟನೆ ಮಡಿಕೇರಿ ಸಮಿಪದ ಮೇಕೇರಿ ಗ್ರಾಮದಲ್ಲಿ ನಡೆದಿದೆ.  ಈ ದಿನ ಅಪರಾಹ್ನ 1-30 ಗಂಟೆಗೆ  ಕಗ್ಗೋಡ್ಲು ಗ್ರಾಮದ ನಿವಾಸಿ ಉತ್ತಯ್ಯ ಎಂಬುವವರು ಭಾಸ್ಕರ ಎಂಬುವವರೊಂದಿಗೆ  ತಮ್ಮ ಕಾರಿನಲ್ಲಿ ಮಡಿಕೇರಿಯಿಂದ ಚೇರಂಬಾಣೆಕಡೆಗೆ ಹೋಗುತ್ತಿರುವ ವೇಳೆ ಮೇಕೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಕಾರು ಅಪಘಾತಕ್ಕೀಡಾಗಿ  ಚಾಲಕ ಉತ್ತಯ್ಯನವರು ಹಾಗು ಭಾಸ್ಕರರವರು ಗಾಯಗೊಂಡು, ಸದರಿಯವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಉತ್ತಯ್ಯನವರು ಮೃತಪಟ್ಟಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ನಂಬಿಸಿ ಅತ್ಯಾಚಾರ, ಪ್ರಕರಣ ದಾಖಲು: 
     ವಿರಾಜಪೇಟೆ ಸಮೀಪದ ಕಣ್ಣಂಗಾಲ ಗ್ರಾಮದ ನಿವಾಸಿ ಸುಂದರ ಎಂಬುವವರ ಮಗಳು ಶಾಲಿನಿ (19) ಎಂಬಾಕೆಯನ್ನು ಅದೇ ಗ್ರಾಮದ ನಿವಾಸಿ ಮಲೆಯಾಳಿ ತೀಯರ ಜನಾಂಗದ ಸುನು ಎಂಬುವವನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಸುಮಾರು 8 ತಿಂಗಳಿನಿಂದ ಅನೈತಿಕ ಲೈಂಗಿಕ ಸಂಬಂಧ ಹೊಂದಿದ್ದು, ಈ ದಿನ ದಿನಾಂಕ: 15-11-2013ರಂದು ಮುಕ್ಕಾಟ್ಟಿ ರಘು ರವರ ಕಾಫಿ ತೋಟದ ಪಕ್ಕದ ಕಾಡಿನ ಪಕ್ಕದಲ್ಲಿರುವ  ಜಾಗದಲ್ಲಿ ಬಲತ್ಕಾರವಾಗಿ ಅತ್ಯಾಚಾರ ಎಸಗಿ  ತಾನು ಗರ್ಭಿಣಿ ಯಾಗಿದ್ದು, ಈ ವಿಚಾರವನ್ನು ಪೊಲೀಸರಿಗೆ ದೂರು ನೀಡಿದ್ದಲ್ಲಿ ಕೊಲೆ  ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ  ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪಾನಮತ್ತ ವ್ಯಕ್ತಿ ರಸ್ತೆಯಲ್ಲಿ ಬಿದ್ದು ಸಾವು:
     ದಿನಾಂಕ 14-07-2014 ರಂದು ಸಮಯ ಸಂಜೆ 18.15 ಗಂಟೆಗೆ  ಮಡಿಕೇರಿ ಖಾಸಗಿ ಬಸ್ಸು ನಿಲ್ದಾಣದ ಪಕ್ಕದ ಸುರಭಿ ಬಾರ್ ಮುಂಭಾಗ ರಸ್ತೆ ಬದಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಮದ್ಯಪಾನ ಮಾಡಿ ಬಿದ್ದು ಹೋಗಿದ್ದು,  ಪ್ರಜ್ಞಾಹೀನನಾಗಿದ್ದ  ಆತನನ್ನು  ಆಟೋ ರಿಕ್ಷಾದಲ್ಲಿ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿ ವೈದ್ಯರು ಪರೀಕ್ಷಿಸಿ ಆತನ ಮೃತಪಟ್ಟಿರುವುದಾಗಿ ತಿಳಿಸಿದ್ದು,  ಆತನ ಜೇಬಿನಲ್ಲಿದ್ದ ಆಸ್ಪತ್ರೆಯ ಚೀಟಿಯಲ್ಲಿ ಪುಟ್ಟಪ್ಪ ಪ್ರಾಯ 50 ವರ್ಷ ಎಂದು ನಮೂದಿಸಿದ್ದು, ಈತನ ಸಂಬಂಧಿಕರ ಪತ್ತೆಯ ಬಗ್ಗೆ ಪತ್ರಿಕೆ ಹಾಗೂ ಟಿ ವಿ ವಾಹಿನಿಯಲ್ಲಿ ಬಾವ ಚಿತ್ರವನ್ನು ಪ್ರಕಟಿಸಿದ್ದು, ಈವರೆಗೂ ಆತನ ಸಂಬಂಧಿಕರು ಯಾರು ಪತ್ತೆಯಾಗದೇ ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Monday, July 14, 2014

ಅಕ್ರಮ ಪ್ರವೇಶ, ಅವಾಚ್ಯ ನಿಂದನೆ, ಕೊಲೆ ಬೆದರಿಕೆ:

      ಮಡಿಕೇರಿ ತಾಲೋಕು ಪೆರಾಜೆ ಗ್ರಾಮದ ನಿವಾಸಿ ಶ್ರೀಮತಿ ಸಾವಿತ್ರಿ ಮತ್ತು ಅವರ ಗಂಡ ಧನುಂಜಯರವರು ದಿನಾಂಕ 01-07-2014 ರಂದು ಅವರ ಸ್ವಾದೀನದಲ್ಲಿರುವ ಜಾಗದಲ್ಲಿ ಕಾಡು ಕಡಿಯುತ್ತಿರುವಾಗ ಸಮಯ ಸುಮಾರು 10-30 ಎ ಎಂ ಗೆ ಅದೇ ಗ್ರಾಮದವರೇ ಆದ ಬಂಗಾರಕೋಡಿ ಸೀತಾರಾಮ, ಬಾಸ್ಕರ, ವಿಮಲ ಮತ್ತು ವನಜರವರು ಸದರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಈ ಜಾಗ ನಮಗೆ ಸೇರಬೇಕೆಂದು ಬಾಯಿಗೆ ಬಂದಂತೆ ಅವಾಚ್ಯವಾಗಿ  ಬೈದು ಸೀತಾರಾಮ ಕತ್ತಿಯಿಂದ ಕಡಿದು ಕೊಲೆ ಬೆದರಿಕೆ ಹಾಕಿದ್ದು, ಅಲ್ಲದೆ ಶ್ರೀಮತಿ ಸಾವಿತ್ರಿಯವರನ್ನು ದೂಡಿ ಬೀಳಿಸಿ ಕೈಗೆ ತೀವ್ರಗಾಯಗೊಳಿಸಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಈ ದಿನ ದಿನಾಂಕ 14-7-2014ರಂದು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 
ಅನಧಿಕೃತ ಬಡ್ಡಿವ್ಯವಹಾರ, ಆರೋಪಿಗಳ ಬಂಧನ: 
      ದಿನಾಂಕ 13/07/2014 ರಂದು ಬೆಳಿಗ್ಗೆ 6.30 ಗಂಟೆಗೆ ಸಿದ್ದಾಪುರ ಠಾಣಾ ಪಿ.ಎಸ್‌.ಐ,ರವರಾದ ಹರಿವರ್ಧನರವರಿಗೆ ಪಲ್ಲಕೆರೆ ಎಂಬಲ್ಲಿ ತಮಿಳುನಾಡುವಿನಿಂದ ಬಂದ ವ್ಯಕ್ತಿಗಳು ಸಾರ್ವಜನಿಕರಿಗೆ ಬಡ್ಡಿಗೆ ಹಣ ನೀಡಿ ಅವರಿಂದ ಹೆಚ್ಚಿನ ರೂಪದಲ್ಲಿ ಬಡ್ಡಿ ಹಣ ವಸೂಲು ಮಾಡುತ್ತಿದ್ದಾರೆಂಬ ಬಂದ ಖಚಿತ ವರ್ತಮಾನದ ಮೇರೆಗೆ ಸದರಿಯವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಸಾರ್ವಜನಿಕರಿಂದ ಹಣ ತೆಗೆಯುವುದು ಕೊಡುವುದು ಮಾಡುತ್ತಿದ್ದ ಆಸಾಮಿಗಳಾದ 1) ಎಸ್ ರಾಮ್ ಕುಮಾರ್ ತಂದೆ ಪೌತಿ ಎ ಷಣ್ಮುಗಂ ಪ್ರಾಯ 38 ವರ್ಷ ಬಡ್ಡಿ ವ್ಯವಹಾರ ವೃತ್ತಿ, ವಾಸ ಹಾಲಿ ಬಸವೇಶ್ವರ ಬಡಾವಣೆ ಕುಶಾಲನಗರ ಸ್ವಂತ ಪಲ್ಲಪಟ್ಟಿ ಗ್ರಾಮ ಅವರಕುರುಚಿ ಆಂಚೆ ಮತ್ತು ತಾಲ್ಲೂಕು ಕರೂರು ಜಿಲ್ಲೆ ತಮಿಳೂನಾಡು ರಾಜ್ಯ 2) ಪಿ ಬಾಲಾಜಿ ತಂದೆ ಕೆ ಪಳನಿಸ್ವಾಮಿ ಪ್ರಾಯ 23 ವರ್ಷ ಬಡ್ಡಿ ವ್ಯವಹಾರ ವಾಸ ಎರಡನೇ ಕ್ರಾಸ್ ಮಾರ್ಕೇಟ್ ರಸ್ತೆ ಕುಶಾಲನಗರ ಸ್ವಂತ ಜಿ ಕಲ್ಲುಪಟ್ಟಿ ಗ್ರಾಮ ತೇನಿ ಅಂಚೆ ಮತ್ತು ನಗರ ಪೆರಿಯಕುಳಂ ತಾ ತಮಿಳುನಾಡು, 3) ಎ ಬಾಲುಸ್ವಾಮಿ ತಂದೆ ಅನುಗುಸ್ವಾಮಿ ಪ್ರಾಯ 29 ವರ್ಷ ಬಡ್ಡಿ ವ್ಯವಹಾರ ವೃತ್ತಿ ವಾಸ ಎರಡನೇ ಕ್ರಾಸ್ ಮಾರ್ಕೇಟ್ ರಸ್ತೆ ಕುಶಾಲನಗರ ಸ್ವಂತ  ಜಿ ಕಲ್ಲುಪಟ್ಟಿ ಗ್ರಾಮ ತೇನಿ ಅಂಚೆ ಮತ್ತು ನಗರ ತಮಿಳುನಾಡು 4) ಎಸ್ ರವಿ ತಂದೆ ಪೌತಿ ಸುಬ್ರಮಣಿ ಪ್ರಾಯ 43 ವರ್ಷ ಬಡ್ಡಿ ವ್ಯವಹಾರ ವಾಸ ಮಾರುತಿ ಬಡಾವಣೆ ಜನತಾ ಕಾಲೋನಿ ಕುಶಾಲನಗರ ಸ್ವಂತ ಕರೂರು ಪರಮಿತೆ ಗ್ರಾಮ ಮತ್ತು ಅಂಚೆ ಕರೂರು ಜಿಲ್ಲೆ ರವರುಗಳನ್ನು  ಪತ್ತೆ ಹಚ್ಚಿ ಅವರುಗಳು ಸರ್ಕಾರದ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರನ್ನು ನಂಬಿಸಿ ವಂಚಿಸಿ ಬಡ್ಡಿ ಹಣವನ್ನು ವಸೂಲು ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆರೋಪಿಗಳು ಸಂಗ್ರಹಿಸಿದ ಹಣ, ಮೊಬೈಲ್ ಫೋನ್ ಮತ್ತು ಮೋಟಾರ್ ಸೈಕಲ್ ಮತ್ತು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಜೀವನದಲ್ಲಿ ಜಿಗುಪ್ಸೆ, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ:
 
     ಸಿದ್ದಾಪುರ ಠಾಣಾ ವ್ಯಾಪ್ತಿಯ ಅಬ್ಬೂರು ಚೆನ್ನಂಗಿ ಗ್ರಾಮದ ನಿವಾಸಿ ಕೆ.ಪಿ. ಮಾದಪ್ಪ(64) ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 10-7-2014 ರಂದು ಕ್ರಿಮಿನಾಶಕ ಪದಾರ್ಥವನ್ನು ಸೇವಿಸಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 11-7-2014 ರಂದು ಮೃತಪಟ್ಟಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.