Wednesday, April 30, 2014

ಕಾಯಿಲೆಯಿಂದ ಜಿಗುಪ್ಸೆಗೊಂಡ ಮಹಿಳೆ ಆತ್ಮಹತ್ಯೆ:

     ದಿನಾಂಕ 30-04-2014 ರಂದು ಸಮಯ ಬೆಳಿಗ್ಗೆ ವಿರಾಜಪೇಟೆ ತಾಲ್ಲೂಕು ನಾಲ್ಕೇರಿ ಗ್ರಾಮದ ಮುಕ್ಕಾಟೀರ ವಿಜಯ ಎಂಬವರಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಲೈನ್ ಮನೆಯಲ್ಲಿ ವಾಸವಿದ್ದ  70 ವರ್ಷ ಪ್ರಾಯದ ಶ್ರೀಮತಿ ಬಳ್ಳೆ @ ಕರ್ಪಿ ಎಂಬವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು  ಕಾಫಿ ಮರದ ಕೊಂಬೆಗೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಮಗಳಾದ ಶ್ರೀಮತಿ ಗಂಗೆ ಯವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ಮದ್ಯದ ಅಮಲಿನಲ್ಲಿ ಆಯತಪ್ಪಿ ಬಿದ್ದು ಮಹಿಳೆ ಸಾವು:
     ದಿನಾಂಕ 29-04-2014 ರಂದು ಸಮಯ 17.00 ಗಂಟೆಗೆ ವಿರಾಜಪೇಟೆ ತಾಲ್ಲೂಕು ಬಾಡಗ ಗ್ರಾಮದ ಬೊಳ್ಳೇರಗೇಟ್‌ನ ಬೊಳ್ಳೇರ ಚಂಗಪ್ಪ ಎಂಬುವವರ  ಲೈನ್ ಮನೆಯಲ್ಲಿ ವಾಸವಿದ್ದ ಶ್ರೀಮತಿ ಪುಟ್ಟಿ ಎಂಬಾಕೆಯು ವಿಪರೀತ ಮದ್ಯ ಸೇವಿಸಿದ ಅಮಲಿನಲ್ಲಿ ಆಯ ತಪ್ಪಿ ಲೈನ್ ಮನೆಯ ಪಕ್ಕದ ಚರಂಡಿಗೆ ಬಿದ್ದು  ಮೃತಪಟ್ಟಿದ್ದು ಮೃತಳ ಮಗಳು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, April 29, 2014

ಆತ್ಮಹತ್ಯೆ ಪ್ರಕರಣಗಳು:
 
ಜೀವನದಲ್ಲಿ ಜಿಗುಪ್ಸೆ ಗುಂಡು ಹೊಡೆದುಕೊಂಡು ವ್ಯಕ್ತಿಯ ಸಾವು:
     ಕಾಯಿಲೆಯಿಂದ ನರಳುತ್ತಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ, ಜಿಗುಪ್ಸೆಗೊಂಡು ಗುಂಡುಹೊಡೆದುಕೊಂಡು ಆತ್ಮಹತ್ಯೆ ಮಡಿಕೊಂಡ ಘಟನೆ ಕಟ್ಟೆಮಾಡು ಗ್ರಾಮದಿಂದ ವರದಿಯಾಗಿದೆ.  ಮಡಿಕೇರಿ ತಾಲೋಕು ಕಟ್ಟೆಮಾಡು ಗ್ರಾಮದ ನಿವಾಸಿ 68 ವರ್ಷ ಪ್ರಾಯದ ಪೂಣಚ್ಚ ಎಂಬುವವರು ಪ್ಯಾರಾಲೈಸಿಸ್‌ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29-4-2014 ರಂದು ತಮ್ಮ ಬಾಪ್ತು ಎಸ್‌ಬಿಬಿಎಲ್‌  ಬಂದೂಕಿನಿಂದ  ತನ್ನ ಎದೆಯ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಜೀವನದಲ್ಲಿ ಜಿಗುಪ್ಸೆ ಮಹಿಳೆ ಆತ್ಮಹತ್ಯೆ:
     ಜೀವನದಲ್ಲಿ ಜಿಗುಪ್ಸೆಗೊಂಡು  ಮಡಿಕೇರಿ ತಾಲೋಕು ಆವಂದೂರು ಗ್ರಾಮದ ನಿವಾಸಿ ಯಶೋದಾ ಎಂಬುವವರು ದಿನಾಂಕ 29-4-20124 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಅನಾರೋಗ್ಯದ ಹಿನ್ನೆಲೆ ವಿಷ ಸೇವಿಸಿ ಮಹಿಳೆಯ ಸಾವು:
     ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಕೊಟ್ಟಗೇರಿ ಗ್ರಾಮದಲ್ಲಿ ನೆಲಸಿರುವ ಕೂಲಿ ಕಾರ್ಮಿಕ  ಪಣಿಎರವರ ಕರಿಯ ಎಂಬುವವರ ಪತ್ನಿ ಅಮ್ಮಚ್ಚಿ ಎಂಬ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದು  ದಿನಾಂಕ 28-4-2014 ರಂದು  ವಿಷ ಪದಾರ್ಥವನ್ನು ಸೇವಿಸಿ ಸಾವನಪ್ಪಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿಉತ್ತಾರೆ. 
 
ವಿನಾಕಾರನ ವ್ಯಕ್ತಿಯ ಮೇಲೆ ಹಲ್ಲೆ:
ದಿನಾಂಕ 28.04.2014 ರಂದು ಸಮಯ 06:15 ಪಿ.ಎಂ.ಗೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಬಾಚಳ್ಳಿ ಗ್ರಾಮದಲ್ಲಿ  ಮಹೇಶ್‌ ಮತ್ತು ಜಯರಾಂ ಎಂಬ ವ್ಯಕ್ತಿಗಳು ಎ.ಜಿ. ದುಷ್ಯಂತ್‌ ಎಂಬವರ ಮನೆಯ ಮುಂದಿನ ನಲ್ಲಿಯ ಪಕ್ಕದಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡಿ  ದುಷ್ಯಂತ್‌ರವರನ್ನು ಅವಾಚ್ಯ ಶಬ್ದಗಳಿಂದ ಬೈದು, ಚಾಕುವಿನಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು, ಸೋಮವಾರಪೇಟೆ ಪೊಲೀಸರು ಈ ಸಂಬಂಧ ಪ್ರಕರನವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಕ್ಷುಲ್ಲಕ ಕಾರಣ ಹಲ್ಲೆ:
ದಿನಾಂಕ 28.04.2014 ರಂದು 06:30 ಪಿ.ಎಂ.ಗೆ  ಸೋಮವಾರಪೇಟೆ ತಾಲೋಕು ಕಲ್ಕಂದೂರು ಗ್ರಾಮದ ನಿವಾಸಿ ಕೆ.ಎಂ. ನಾಗರಾಜು ಎಂಬ ವ್ಯಕ್ತಿ  ಸುರೇಂದ್ರ ರವರ ಅಂಗಡಿ ಹತ್ತಿರ  ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಮುಸ್ತಫಾ, ಆಸಿಸ್‌ ಮತ್ತು ಆಸಿಸ್ ರವರ ತಮ್ಮಂದಿರು.  ನಾಗರಾಜುರವರನ್ನು ಕುರಿತು ಏಕೆ ಬೆಳಿಗ್ಗೆ ಕತ್ತಿಯನ್ನು ತೆಗೆದುಕೊಂಡು ಬಂದೆ ಎಂದು ಹೇಳಿ ಜಗಳ ತೆಗೆದು ಕೈಯಿಂದ ಮತ್ತು ದೊಣ್ಣೆಯಿಂದ  ಹೊಡದು ನೋವನ್ನುಂಟುಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 

Monday, April 28, 2014

ವಿನಾಕಾರಣ ಕತ್ತಿಯಿಂದ ಕಡಿದು ಗಾಯ:

        ವಿನಾ ಕಾರಣ ವ್ಯಕ್ತಿಯ ಮೇಲೆ ಕತ್ತಿಯಿಂದ ಕಡಿದು ಗಾಯಪಡಿಸಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ  ಪೊನ್ನಂಪೇಟೆ ನಗರದಲ್ಲಿ ನಡೆದಿದೆ.  ದಿನಾಂಕ  27-4-2014 ರಂದು ಮಧ್ಯಾಹ್ನ  ಬಲ್ಯಮಂಡೂರು ಗ್ರಾಮದ ನಿವಾಸಿ ಮಾಚಿಮಾಡ ಸನ್ನು ಎಂಬಾತನ  ಮೇಲೆ  ಬೊಟ್ಟಂಗಡ ನ್ರೇಂದ್ರ ಎಂಬ ವ್ಯಕ್ತಿ ವಿನಾಕಾರಣ ಕತ್ತಿಯಿಂದ ಕಡಿದು ಗಾಯಗೊಳಿಸಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಅಪ್ರಾಪ್ತ ಹುಡುಗಿ ಕಾಣೆ:

     ಕಾಲೇಜು ವಿದ್ಯಾಥಿನಿಯೊಬ್ಬಳು  ಸುಂಟಿಕೊಪ್ಪಕ್ಕೆ ಹೋಗಿಬರುತ್ತೇನೆಂದು ಹೋದವಳು ಮತ್ತೆ ಮನೆಗೆ ಬಾರದೇ ಕಾಣೆಯಾಗಿರುವ ಘಟನೆ  ಸುಂಟಿಕೊಪ್ಪ ಠಾಣೆ ವ್ಯಾಪ್ತಿ 7ನೇ ಹೊಡಕೋಟೆ ಗ್ರಾಮದಲ್ಲಿ ನಡೆದಿದೆ.  7ನೇ ಹೊಸಕೋಟೆ ಗ್ರಾಮದ ನಿವಾಸಿ ರಾಮದಾಸ್‌ ಎಂಬುವವರ ಮಗಳು  ವಿನಿತಾ(17) ಕುಶಾಲನಗರ ಜ್ಯೂನಿಯರ್‌ ಕಾಲೇಜಿನಲ್ಲಿ ವ್ಯಾಸಂಗ  ಮಾಡುತ್ತಿದ್ದು, ದಿನಾಂಕ 24-4-2014 ರಂದು  ಕಾಲೇಜಿಗೆ ಸಂಬಂಧಿಸಿದ ದಾಖಲಾತಿಗಾಗಿ ಸುಂಟಿಕೊಪ್ಪಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು,  ಬಸವನಳ್ಳಿ ಗ್ರಾಮದ  ಗೌತಮ್‌ ಎಂಬ ಯುವಕನೊಂದಿಗೆ  ಹೋಗಿರುವುದಾಗಿ, ವಿನಿತಾಳ ತಂದೆ ರಾಮದಾಸ್‌ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

ಕರಿಮೆಣಸು ಕಳವು, ಕೆಲಸದಾತನ ಮೇಲೆ ದೂರು:
     ದಿನಾಂಕ 23/04/2014 ರ ರಾತ್ರಿ ವೇಳೆಯಲ್ಲಿ ಬೆಸಗೂರು ಗ್ರಾಮದ ನಿವಾಸಿ ಬಲ್ಲಿಮಾಡ ಎನ್‌. ಗಣಪತಿ ಪಿರ್ಯಾದಿಯವರು ಅವರ ಮಗಳ ಮನೆಯ ಗೃಹ ಪ್ರವೇಶ ನಿಮಿತ್ತ ಮಗಳ ಮನೆಗೆ ತರೆಳಿದ್ದು ಮನೆಯಲ್ಲಿ ಯಾರೂ ಇಲ್ಲದ ವಿಚಾರ ತಿಳಿದುಕೊಂಡು ಸದ್ರಿಯವರ  ಮನೆಯಲ್ಲಿ ಕೆಲಸ ಮಾಡುತ್ತಿದ್ದ ಶಫಿ ಎಂಬಾತ  ರಾತ್ರಿ ಮನೆ ಕಾಯುವ ನೆಪದಲ್ಲಿ ತಂಗಿದ್ದು ಮರುದಿನ ಕಾರ್ಯಕ್ರಮ ಮುಗಿಸಿ ಪಿರ್ಯಾದಿಯವರು ಮನೆಗೆ ಬಂದಾಗ ಗೋದಾಮಿನಲ್ಲಿದ್ದ ಎರಡು ಚೀಲ ಕಾಳುಮೆಣಸು (ಅಂದಾಜು 70 ಕೆ.ಜಿ) ನಾಪತ್ತೆಯಾಗಿದ್ದು ಈ ಕಳ್ಳತನವನ್ನು  ಶಫಿಯು ಮಾಡಿರಬಹುದೆಂದು ಗಣಪತಿಯವರು ಪೊನ್ನಂಪೇಟೆ ಠಾಣೆಗೆ ದೂರನ್ನು ನೀಡಿದ್ದು ಅದರಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ:
     ಮಡಿಕೇರಿ ನಗರದ ಹೋಟೇಲ್‌ನಲ್ಲಿ ಕೆಲಸ ನಿರ್ವಹಿಸಿಕೊಂಡಿರುವ ರೀಟಾ ಎಂಬ ಮಹಿಳೆಯವರು ದಿನಾಂಕ 26-4-2014 ರಂದು ರಾತ್ರಿ 10-00 ಗಂಟೆಯ ಸಮಯದಲ್ಲಿ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿವಾಗ ಕಾರೊಂದನ್ನು ಅದರ ಚಾಲಕ ಅತೀ ವೇಗ ಹಾಗು ಅಜಾಅರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಆಕೆಯ ತಲೆಗೆ ಗಾಯವಾಗಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಾಗಿದ್ದು, ಮಡಿಕೇರಿ ಟ್ರಾಫಿಕ್‌ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ
 

Saturday, April 26, 2014

ಕಾಡಾನೆ ದಾಳಿ ಕಾರ್ಮಿಕನ ದುರ್ಮರಣ:

     ಸೌದೆಗೆಂದು ಕಾಡಿಗೆ ಹೋದ ಕಾರ್ಮಿಕನೋರ್ವನನ್ನು ಕಾಡಾನೆಯೊಂದು ತುಳಿದು ಸಾಯಿಸಿದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ಚೌಡಿಕಾಡು ಎಸ್ಟೇಟ್‌ನಲ್ಲಿ ನಡೆದಿದೆ. ದಿನಾಂಕ 25-4-2014 ರಂದು ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ ಸುರೇಶ (35), ಫೇರ್‌ ಲ್ಯಾಂಡ್‌ ಎಸ್ಟೇಟ್‌, ಬಿಬಿಟಿಸಿ, ಸಿದ್ದಾಪುರ ಇವರು ಸೌದೆತರಲೆಂದು ತನ್ನ ಮನೆಯವರೊಂದಿಗೆ ಚೌಡಿಕಾಡು ತೋಟಕ್ಕೆ ಹೋದ ಸಂದರ್ಭದಲ್ಲಿ ಕಾಡಾನೆಯೊಂದು ಅವರ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ 
 
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:
      ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಬಲಮುರಿಯ ಕೊಡಪರಂಬು ಪೈಸಾರಿಯಲ್ಲಿ ವಾಸವಿರುವ ಹೆಚ್‌.ಬಿ. ಬಸವ ಎಂಬ ವ್ಯಕ್ತಿಗೆ ದಿನಾಂಕ 25-04-2014 ರಂದು 5-00 ಗಂಟೆ ಸಮಯದಲ್ಲಿ  ಅವರ ಸೋಸೆ ಭವಾನಿ ಎಂಬವರು   ಮನೆಯ ಹತ್ತಿರ ತಡೆದು ನಿಲ್ಲಿಸಿ  ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ  ಹೊಡೆದು ಗಾಯಪಡಿಸಿರುವುದಾಗಿ ಆರೋಪಿಸಿ ನಾಪೋಕ್ಲು ಪೊಲೀಸರಿಗೆ ದೂರನ್ನು ನೀಡಿದ್ದು,  ಅದರಂತೆ ಠಾಣೆಯಲ್ಲಿ ಮೊಕದ್ದಮೆಯನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಅಪರಿಚಿತ ವ್ಯಕ್ತಿಗಳಿಂದ ಮಹಿಳೆಯೊಬ್ಬರ ಕುತ್ತಿಗೆಯಿಂದ ಮಾಂಗಲ್ಯ ಅಪಹರಣ: 
   ವಾಯು ವಿಹಾರಕ್ಕೆ ಹೋಗಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಅಪರಿಚಿತ ವ್ಯಕ್ತಿಗಳಿಬ್ಬರು ಮೋಟಾರ್‌ ಸೈಕಲ್‌ನಲ್ಲಿ ಬಂದು ಕುತ್ತಿಗೆಯಿಂದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾದ ಘಟನೆ ಕುಶಾಲನಗರದ ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ.  ದಿನಾಂಕ 25-04-2014 ರಂದು ಸಮಯ 17.45 ಗಂಟೆಗೆ ಕುಶಾಲನಗರದ ನಿವಾಸಿ ಶ್ರೀಮತಿ ಟಿ.ಎನ್‌. ಚಂದ್ರಕಲಾ ಎಂಬುವವರು ಎಂದಿನಂತೆ ವಾಕಿಂಗ್‌ ಮುಗಿಸಿ ಮನೆಕಡೆಗೆ ಬಸವೇಶ್ವರ ಬಡಾವಣೆಯ  ಸಾರ್ವಜನಿಕ ರಸ್ತೆಯಲ್ಲಿ ಒಬ್ಬರೇ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಬಜಾಜ್‌ ಡಿಸ್ಕವರಿ ಬೈಕಿನಲ್ಲಿ ಎರಡು ಜನ ಅಪರಿಚಿತ ವ್ಯಕ್ತಿಗಳು ಬಂದು   ಮೊಟಾರು ಸೈಕಲಿನ ಹಿಂಬದಿಯಲ್ಲಿ ಕುಳಿತ್ತಿದ್ದ ವ್ಯಕ್ತಿ  ಚಂದ್ರಕಲಾರವರ ಕುತ್ತಿಗೆಗೆ ಕೈ ಹಾಕಿ  ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕವಿರುವ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದು, ಈ ಸಂಬಂಧ  ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಹಳೆ ದ್ವೇಷ, ವ್ಯಕ್ತಿಯ ಕೊಲೆಗೆ ಯತ್ನ:
      ಆಟೋ ರಿಕ್ಷಾ ನಿಲುಗಡೆ ವಿಷಯದಲ್ಲಿ ಜಗಳವಾಗ ಹಿನ್ನೆಲೆಯಲ್ಲಿ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ  ಕೊಲೆಗೆ ಯತ್ನಿಸಿದ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಮದೆನಾಡು ಗ್ರಾಮದಲ್ಲಿ ನಡೆದಿದೆ.  ದಿನಾಂಕ 25-4-2014 ರಂದು ಸಂಜೆ 7-00 ಗಂಟೆಯ ಸಮಯದಲ್ಲಿ  ಮದೆನಾಡು ಗ್ರಾಮದ ನಿವಾಸಿ ಭುವನೇಶ್‌ ಎಂಬುವವನು  ತನ್ನ ಹಾಗು ಬಾನು ಎಂಬ ವ್ಯಕ್ತಿಯ ನಡುವೆ ಹಿಂದೆ ಆಟೋ ರಿಕ್ಷಾ ನಿಲ್ಲಿಸುವ ವಿಚಾರದಲ್ಲಿ ಜಗಳ ವಾದ ಹಿನ್ನೆಲೆಯಲ್ಲಿ ದ್ವೇಷವನ್ನಿಟ್ಟುಕೊಂಡು ಏಕಾಎಕಿಯಾಗಿ ಕತ್ತಿ ಹಾಗು ದೊಣ್ನೆಯಿಂದ  ಬಾನುರವರ ಮೇಲೆ ಹಲ್ಲೆನಡೆಸಲು ಮುಂದಾಗಿದ್ದು ಅದನ್ನು ತಡೆಯಲು ಯತ್ನಿಸಿದ ಬಾನುರವರ ತಂದೆ ಕೆ.ಸಿ. ಕಾರ್ಯಪ್ಪನವರ ಮೇಲೆ ಕತ್ತಿಯಿಂದ ಭುವನೇಶ್‌ ಹಲ್ಲೆ ಮಾಡಿ ತೀವ್ರಸ್ವರೂಪದ ಗಾಯ ಪಡಿಸಿ ಕೆಲೆ ಮಾಡಲು ಯತ್ನಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಆಸ್ತಿ ವಿವಾದ, ವ್ಯಕ್ತಿಯ ಮೇಲೆ ಹಲ್ಲೆ:
   ಆಸ್ತಿ ವಿಚಾರದ ಹಿನ್ನೆಲೆಯಲ್ಲಿ ಜಗಳ ಮಾಡಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಮತ್ತೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 25/04/2014 ರಂದು ರಾತ್ರಿ ಕಿರಗೂರು ಗ್ರಾಮದ ನಿವಾಸಿ ಅಲೆಮಾಡ ದಯಾನಂದ ಎಂಬವರು ದ್ವಿಚಕ್ರವಾಹನದಲ್ಲಿ ತಮ್ಮ  ಮನೆಯಕಡೆಗೆ ಹೋಗುತ್ತಿದ್ದಾಗ ಆರೋಪಿಗಳಾದ ಪೆಮ್ಮಂಡ ಅಪ್ಪಿ, ಮಧು ಹಾಗು ಇತರ ಕೆಲವು ಜನ ಸೇರಿ ದಾರಿತಡೆದು ಆಸ್ತಿ ವಿಚಾರದಲ್ಲಿ ಜಗಳ ಮಾಡಿ  ಹಾಕಿ ಸ್ಟಿಕ್ ನಿಂದ ಅವರ ದೇಹಕ್ಕೆ ಹಾಗೂ ಶರೀರದ ಇತರ ಭಾಗಗಳಿಗೆ ಹೊಡೆದು ಎರಡು ಕಾಲುಗಳ ಮುಂಗಾಲುಗಳಿಗೆ ಹೊಡೆದು ಗಾಯಪಡಿಸಿದ್ದು ಸದರಿಯವರು  ಚಿಕಿತ್ಸೆ ಬಗ್ಗೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಪೊನ್ನಂಪೇಟೆ ಪೊಲೀಸರಿಗೆ ದೂರನ್ನು ನೀಡಿದ್ದು ಅದರಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 









 


ಅನಾರೋಗ್ಯದ ವಿಚಾರದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ:

      ಮಡಿಕೇರಿ ನಗರದಲ್ಲಿ ನೆಲೆಸಿರುವ ಮಂಜುನಾಥ (38) ಎಂಬ ವ್ಯಕ್ತಿ  ಸಕ್ಕರೆ ಖಾಯಿಲೆ ಮತ್ತು ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದು  ಅಲ್ಲದೆ ಮದ್ಯ ಸೇವನೆಯ ಅಭ್ಯಾಸ ಇಟ್ಟುಕೊಂಡಿದ್ದು  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22-04-2014 ರಂದು  ಇಲಿ ವಿಷವನ್ನು ಸೇವಿಸಿದ್ದು, ಸದರಿಯವರನ್ನು  ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ  ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 25-04-2014 ರಂದು ರಾತ್ರಿ ಮೃತಪಟ್ಟಿದ್ದು. ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

 
 
 
 
 

Friday, April 25, 2014

ಪಟ್ಟಣ ಪಂಚಾಯ್ತಿ ಇಂಜಿನಿಯರ್‌ ಮೇಲೆ ನೌಕರನೊಬ್ಬನಿಂದ ಹಲ್ಲೆ:

     ಕರ್ತವ್ಯ ನಿಯೋಜಿಸಿದ ಅಧಿಕಾರಿಯೊಬ್ಬರ ಮೇಲೆ ಕೆಳದರ್ಜೆ ನೌಕರನೋರ್ವ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ.  ಎಸ್. ವೆಂಕಟೇಶ್ ತಂದೆ ಕೆ.ಟಿ ಶ್ರೀನಿವಾಸ, ಪ್ರಾಯ 35 ವರ್ಷ, ಇವರು ವಿರಾಜಪೇಟೆ ಪಟ್ಟಣ ಪಂಚಾಯತಿಯ ನೊಡೆಲ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪಟ್ಟಣ ಪಂಚಾಯತಿ ಅಧ್ಯಕ್ಷರು ಹಾಗೂ ಮುಖ್ಯ ಅಧಿಕಾರಿಯವರ ಆದೇಶದಂತೆ ನೀರು ಬಿಡುವ ಕರ್ತವ್ಯವನ್ನು ಸಿಬ್ಬಂದಿಯವರಿಗೆ ಸದ್ರಿಯವರು ನೇಮಕ ಮಾಡಲಾಗುತ್ತಿದ್ದು, ದಿನಾಂಕ 25/04/2014 ರಿಂದ 10/05/2014 ರವರೆಗೆ ಸನ್ನು ಕುಮಾರ್ ಎಂಬುವರನ್ನು ಭೇತ್ರಿಯಲ್ಲಿ ನೀರು ಸರಬರಾಜು ಮಾಡುವಂತೆ ಆದೇಶವನ್ನು ನೀಡಲಾಗಿದ್ದು, ಇದರ ಸಂಬಂಧ ದಿನಾಂಕ 24/04/2014 ರಂದು 15.00 ಗಂಟೆಗೆ ಎಸ್‌. ವೆಂಕಟೇಶ್‌ರವರು ಪಟ್ಟಣ ಪಂಚಾಯತಿಯ  ಮುಖ್ಯಾಧಿಕಾರಿಯವರ ಕಛೇರಿಯಲ್ಲಿ ಮಾತನಾಡಿಕೊಂಡಿರುವಾಗ್ಗೆ ಸನ್ನು ಕುಮಾರ್‌  ಬಾಯಿಗೆ ಬಂದಂತೆ ಬೈದು ಹೊರಗಡೆ ಹೋಗುವಾಗ  ದಾರಿ ತಡೆದು ಕೈಯಿಂದ ಎಡಕಣ್ಣಿನ ಭಾಗಕ್ಕೆ ಗುದ್ದಿ ನೋವು ಪಡಿಸಿದ್ದು  ಚಿಕಿತ್ಸೆಯ ಬಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸದರಿಯವರ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲು:
 
    ಭಾರತ ಸರ್ಕಾರದ ವತಿಯಿಂದ  ನಡೆಯುತ್ತಿರುವ ವಿದ್ಯುತ್‌ ಕಾಮಗಾರಿಗೆ ಸುಮಾರು 200 ರಿಂದ 300  ಜನರು ಸೇರಿ ಅಡ್ಡಿಪಡಿಸಿ ಅಧಿಕಾರಿ ಮೇಲೆ ಹಲ್ಲೆನಡೆಸಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 24/04/2014 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ನಲ್ಲೂರು ಗ್ರಾಮದಲ್ಲಿ ಪವರ್ ಗ್ರಿಡ್ ಕಾರ್ಪೋರೇಷನ್ ವತಿಯಿಂದ ಭಾತರ ಸರ್ಕಾರದ ಕೈಗಾ 3 ಮತ್ತು 4 ಯೋಜನೆ ಅಡಿಯಲ್ಲಿನ ಮೈಸೂರು ಕೊಜಿಕೋಡು ವಿದ್ಯುತ್ ಮಾರ್ಗದ ಅನುಷ್ಠಾನ ಕಾಮಗಾರಿಯನ್ನು ಎಸ್.ರವೀಂದರ್ ಕುಮಾರ್ ಬಿನ್ ಎಸ್. ಸೆಲ್ವನಾಥನ್, ಪ್ರಾಯ 51 ವರ್ಷ, ಅಪರ ಮಹಾ ವ್ಯವಸ್ಥಾಪಕರು, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯ ಲಿ. ವಿಭಾಗೀಯ ಮುಖ್ಯ ಕಛೇರಿ, ಯಶವಂತಪುರ, ಬೆಂಗಳೂರು  ಮತ್ತು ಇತರ ಸಿಬ್ಬಂದಿಯವರು ಮಾಡುತ್ತಿದ್ದಾಗ ಆರೋಪಿ  ಎಂ.ಎಂ.ರವೀಂದ್ರ ಹಾಗು ಸುಮಾರು 200 ರಿಂದ 300 ಜನರು ಗುಂಪು ಸೇರಿಸ ಅಕ್ರಮಕೂಟ ಕಟ್ಟಿಕೊಂಡು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಕಾಮಗಾರಿ ನಡೆಸದಂತೆ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಮಾಡಿ ಎಸ್.ರವೀಂದರ್ ಕುಮಾರವರನ್ನು ಅವಾಚ್ಯ ಶಬ್ದಗಳಿಂದ ಬೈದು ಅವರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿ ಕಾಮಗಾರಿಯನ್ನು ಹಾಳು ಮಾಡಿ ಕರ್ತವ್ಯ ನಿರ್ವಹಿಸದಂತೆ ತಡೆ ಮಾಡಿದ್ದು, ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ ಪೊಲೀಸರು ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Thursday, April 24, 2014

ಕಟ್ಟಡ ಕಾರ್ಮಿಕನೋರ್ವನ ಅಕಸ್ಮಿಕ ಸಾವು:

         ವ್ಯಕ್ತಿಯೋರ್ವ ಕುಳಿತ ಜಾಗದಲ್ಲೇ ಆಕಸ್ಮಿಕವಾಗಿ ಸಾವನಪ್ಪಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.  ಶ್ಯಾಮ್‌ (58) ಎಂಬ ವ್ಯಕ್ತಿ ಸುಮಾರು ಒಂದು ತಿಂಗಳಿಂದ ಮಡಿಕೇರಿ ನಗರದಲ್ಲಿ ವಾಸವಾಗಿದ್ದುಕೊಂಡು ಗಾರೆ ಕೆಲಸ ನಿರ್ವಹಿಸಿಕೊಂಡು ಜೀವನ ಸಾಗಿಸುತ್ತಿದ್ದು ಇವರ ಪತ್ನಿ ಹಾಗು ಮಗ ಚಿಕ್ಕಮಗಳೂರಿನಲ್ಲಿ ನೆಲೆಸಿದ್ದು, ಶ್ಯಾಮ್‌ರವರಿಗೆ ಮದ್ಯಪಾನ ಮಾಡುವ ಚಟವಿದ್ದು, ದಿನಾಂಕ 23-4-2014 ರಂದು ಮಡಿಕೇರಿ ನಗರದ ಕನಕದಾಸ ರಸ್ತೆಯಲ್ಲಿರುವ ಮಟನ್‌ ಅಂಗಡಿಯ ಮುಂದೆ ಇವರು ಮೃತಪಟ್ಟಿದ್ದು, ಇವರು ಮಟನ್‌ ಅಂಗಡಿಯ ಬಳಿ ಕುಳಿತಲ್ಲಿಯೇ ಆಕಸ್ಮಿಕವಾಗಿ ಮೃತಪಟ್ಟಿರುವುದು ಕಂಡುಬಂದಿದ್ದು, ಮೃತರ ಮಗ ಕಿರಣ್‌ ಕುಮಾರ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
ಮೋಟಾರ್‌ ಸೈಕಲ್‌ಗೆ ಜೀಪು ಡಿಕ್ಕಿ, ಸವಾರನಿಗೆ ಗಾಯ:
      ಮೋಟಾರ್‌ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಜೀಪು ಡಿಕ್ಕಿಯಾಗಿ ಸವಾರನೊಬ್ಬ ಗಾಯಗೊಂಡ ಘಟನೆ ಮಡಿಕೇರಿ ಬಳಿಯ ಸಂಪಾಜೆಯಲ್ಲಿ ನಡೆದಿದೆ.  ದಿನಾಂಕ 22-4-2014 ರಂದು 3-15 ಗಂಟೆಯ ಸಮಯದಲ್ಲಿ  ಚೆಂಬು ಗ್ರಾಮದ ನಿವಾಸಿ ಜಯಪ್ರಕಾಶ್‌ ಎಂಬವರು ತಮ್ಮ ಬಾಪ್ತು ಮೋಟಾರ್‌ ಸೈಕಲ್‌ನಲ್ಲಿ ತಮ್ಮ ಸಂಬಂಧಿಯೊಬ್ಬರೊಂದಿಗೆ ಮಡಿಕೇರಿ ಕಡೆಯಿಂದ ಸಂಪಾಜೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಜೀಪನ್ನು ಅದರ ಚಾಲಕ ಗುಡ್ಡೆಮನೆ ನಿತ್ಯಾನಂದ ಎಂಬವರು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಜಯಪ್ರಕಾಶ್‌ರವರಿಗೆ ಗಾಯಗಳಾಗಿ ಚಿಕಿತ್ಸೆಗಾಗಿ ಆಸ್ಪತ್ರಗೆ ದಾಖಲಾಗಿರುತ್ತಾರೆ.  ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   
ವಿಪರೀತ ಮದ್ಯಸೇವನೆ, ವ್ಯಕ್ತಿಯ ಸಾವು:
     ಅತಿಯಾಗಿ ಮದ್ಯಸೇವಸಿದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಕುಟ್ಟ ಠಾಣಾ ವ್ಯಾಪ್ತಿಯ ತೈಲಾ ಗ್ರಾಮದ ಪನ್ಯ ಎಸ್ಟೇಟ್‌ನಲ್ಲಿ ನಡೆದಿಚೆ.  ದಿನಾಂಕ 23-04-2014 ರಂದು ವಿರಾಜಪೇಟೆ ತಾಲ್ಲೂಕು ಕುಟ್ಟ, ತೈಲಾ ಗ್ರಾಮದ ಪನ್ಯ ಎಸ್ಟೇಟ್‌ನಲ್ಲಿ ಪನ್ಯ ಭದ್ರಕಾಳಿ ಜಾತ್ರೆ ವೀಕ್ಷಿಸಲು ಬಂದಿದ್ದ ಪಿರ್ಯಾಧಿ ಬಿ.ಪಿ. ಶಿವ ಎಂಬವರ  ತಂದೆ ಬೋಜ(50) ಎಂಬವರು ವಿಪರೀತ ಮದ್ಯಪಾನ ಮಾಡಿದ್ದರ ಪರಿಣಾಮವಾಗಿ ಸಾವನಪ್ಪಿದ್ದು, ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಆಸ್ತಿ ವಿವಾದ ಹಿನ್ನೆಲೆ, ಜಾಗಕ್ಕೆ ಅಕ್ರಮ ಪ್ರವೇಶ, ಬೇಲಿ ನಾಶ:
     ಆಸ್ತಿಯ ವಿವಾದದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರ ಕಾಫಿತೋಟಕ್ಕೆ ಅಕ್ರಮ ಪ್ರವೇಶ ಮಾಡಿ ತಂಬಿಬೇಲಿಯನ್ನು ಕಡಿದು ನಷ್ಟಪಡಿಸಿದ ಘಟನೆ ವಿರಾಜಪೇಟೆ ತಾಲೋಕು, ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ.  ಮಡಿಕೇರಿ ನಿವಾಸಿ ಬಿ.ಬಿ. ಮುತ್ತಣ್ಣ ಎಂಬವರಿಗೆ ವಿರಾಜಪೇಟೆ ತಾಲೋಕು, ಕೆದಮುಳ್ಳೂರು ಗ್ರಾಮದಲ್ಲಿ ಆಸ್ತಿ ಇದ್ದು ಸದರಿ ಆಸ್ತಿಗೆ ದಿ: 22-04-14ರಂದು ಸಾಯಂಕಾಲ 5-00ಗಂಟೆಗೆ ಜೆರಿ ಲೋಫೇಸ್, (2)ಶಾಂತಿ ಲೋಫೇಸ್, (3) ಸುಮಿ (4) ಸುನೀಲ್ ಲೋಫೇಸ್, (5) ದೀಪಕ್ ಲೋಪೇಸ್, (6) ಟೆರಿ ಲೋಫೇಸ್ , (7) ಫಿಲೀಪ್ ಲೋಪೇಸ್  ಮತ್ತು (8) ರೀಟಾ ಲೋಫೇಸ್ ಸೇರಿ ಅಕ್ರಮ ಪ್ರವೇಶ ಮಾಡಿ ಎರಡು ಬದಿಯ ಬೇಲಿ ಯನ್ನು ಪೂರ್ತಿ ಕಡಿದು ಅಂದಾಜು 55,000/- ನಷ್ಟಪಡಿಸಿ ಇದನ್ನು ವಿಚಾರಿಸಿದ ಫಿರ್ಯಾದಿ ಬಿ.ಬಿ. ಮುತ್ತಣ್ಣನವರಿಗೆ  ಕತ್ತಿಯನ್ನು ತೋರಿಸಿ ಕಡಿದು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಆರೋಪಿಸಿ ಬಿ.ಬಿ. ಮುತ್ತಣ್ಣನವರು ದೂರನ್ನು ನೀಡಿದ್ದು  ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಪತಿಯ ಅಗಲಿಕೆಯಿಂದ ಅಘಾತಗೊಂಡು ಪತ್ನಿಯ ಆತ್ಮಹತ್ಯೆ:
     ಪತಿಯ ಸಾವಿನಿಂದ ಅಘಾತಗೊಂಡ ವೃದ್ಧ ಮಹಿಳೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಮುಗುಟಗೇರಿ ಗ್ರಾಮದಲ್ಲಿ ನಡೆದಿದೆ. ಮುಗುಟಗೇರಿಯಲ್ಲಿ ವಾಸವಾಗಿದ್ದ ಚಿಣ್ಣಮ್ಮ ಎಂಬವರು ತಮ್ಮ ಪತಿಯು ಸಾವನಪ್ಪಿದ ಹಿನ್ನೆಲೆಯಲ್ಲಿ ಅಘಾತಗೊಂಡು ದಿನಾಂಕ 23-4-2014 ರಂದು ರಾತ್ರಿ ಮನೆಯ ಸಮೀಪದ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.      
 

Wednesday, April 23, 2014

ಅಕ್ರಮ ಪ್ರವೇಶ, ಜೀವ ಬೆದರಿಕೆ:

      ಸೋಮವಾರಪೇಟೆ ಬೆಟ್ಟದಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಜಲಜಾಕ್ಷಿಯವರು ದಿನಾಂಕ 22.04.2014 ರಂದು  3:00 ಗಂಟೆಗೆ  ಅವರ  ಮನೆಯಲ್ಲಿರುವಾಗ್ಗೆ ಅದೇ ಗ್ರಾಮದ  ಕೆ.ಪಿ ಚಂದ್ರಎಂಬವರು ತನ್ನ ಕೈಯಲ್ಲಿ ಕತ್ತಿ ಹಾಗೂ ದೊಣ್ಣೆ  ಹಿಡಿದುಕೊಂಡು ಬಂದು  ಮನೆಗೆ ಅಕ್ರಮ ಪ್ರವೇಶ ಮಾಡಿ  ಅವಾಚ್ಯ ಶಬ್ದಗಳಿಂದ ಬೈದು  ನಿನ್ನ ಗಂಡ ಸಿಕ್ಕಿದರೆ ಈಗಲೆ, ನಿನ್ನನ್ನು ಮತ್ತು ನಿನ್ನ  ಗಂಡನನ್ನು ಕೊಲೆ ಮಾಡುತ್ತೇನೆ ಎಂದು ಬೆದೆರಿಕೆ  ಹಾಕಿದ್ದು, ಈ ಬಗ್ಗೆ  ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಿಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಜಾತಿ ನಿಂದನೆ, ಪ್ರಕರಣ ದಾಖಲು:
    ವಿರಾಜಪೇಟೆ ತಾಲೋಕು ಬಿಟ್ಟಂಗಾಲ ಗ್ರಾಮದಲ್ಲಿ ಹೆಚ್‌.ಬಿ. ಪ್ರಸನ್ನ ಎಂಬವರು ಬಿಟ್ಟಂಗಾಲ ಪೆಗ್ಗರೆಕಾಡು ಗ್ರಾಮದ ಕಾಲೋನಿಯ ಪಕ್ಕದ ಸಮೂದಾಯ ಭವನದದಲ್ಲಿ ಸಭೆಯನ್ನು ನಡೆಸುತ್ತಿದ್ದು ಅಲ್ಲಿ ಅದೇ ಗ್ರಾಮದ ಚೋಮಣಿ ಎಂಬುವವರು ಅಲ್ಲಿಂದ ನೀರಿನ ಟ್ಯಾಂಕ್‌ನಿಂದ ನೀರನ್ನು ತುಂಬಿಸಿದ್ದು, ಅದೇ ವಿಚಾರವಾಗಿ ವಾಗಿ ಚೋಮಣಿ, ಸುಭಾಶ್‌, ಅಂಜನ್‌, ಸುಬ್ಬಯ್ಯ ಎಂಬುವವರು ಸೇರಿ ಪ್ರಸನ್ನರವರ ಜಾತಿ ಯನ್ನು ನಿಂದಿಸಿದ್ದು ಅಲ್ಲದೆ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು, ಹೆಚ್‌.ಬಿ. ಪ್ರಸನ್ನ ರವರ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಕ್ಷುಲ್ಲಕ ಕಾರಣ, ವ್ಯಕ್ತಿಗೆ ಜೀವ ಬೆದರಿಕೆ:
     ಮಡಿಕೇರಿ ತಾಲೋಕು ಹಾಕತ್ತೂರು ಗ್ರಾಮದ ನಿವಾಸಿ ಪಿ.ಎ. ಭರತ್‌ ಎಂಬವರೊಂದಿಗೆ ಕಿಗ್ಗಾಲು ಗ್ರಾಮದ  ನಿವಾಸಿ ಪಿ.ಕೆ. ಪೂಣಚ್ಚ ಎಂಬ ವ್ಯಕ್ತಿ ಕಾಫಿ ತೋಟದಲ್ಲಿ ಕಾಫಿ ಗಿಡಗಳನ್ನು ಕಪಾತು ಮಾಡಿದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಪಿ.ಎ. ಭರತ್‌ನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ಮೊಬೈಲ್‌ ರೀಜಾರ್ಜಮಾಡುವ ನೆಪದಲ್ಲಿ ವಂಚನೆ:
     ಮಡಿಕೇರಿ ನಗರದ ಶ್ರೀ ಪಿ. ಮಹೇಶ್‌‌ರವರಿಗೆ ಸೇರಿದ ಮಡಿಕೇರಿನಗರದ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣದ ಬಳಿ ಇರುವ ಮಹದೇಶ್ವರ ಸ್ಟೋರ್ಸ್‌ಗೆ ನಾಲ್ಕು ಜನ ಅಪರಿಚಿತ ವ್ಯಕ್ತಿಗಳು ದಿನಾಂಕ 19-4-14 ರಂದು 12-30 ಗಂಟೆಗೆ ಬಂದು ಒಂದೇ ಮೊಬೈಲ್‌ ಸಂಖ್ಯೆಯಿಂದ ಎಲ್ಲಾ ನೆಟ್‌ವರ್ಕಗಳ ಮೊಬೈಲ್‌ಗಳಿಗೆ ರೀಚಾರ್ಜ್‌ ಮಾಡಬಹುದೆಂದು,  10,000 ರೂಗಳಿಗೆ 400 ರೂ ಕಮಿಷನ್‌ ನೀಡಲಾಗುವುದೆಂದು ನಂಬಿಸಿ ರೂ.10000/- ಹಣವನ್ನು ಪಡೆದು ವಂಚಿಸಿರುವುದಾಗಿ ಮಹೇಶ್‌ನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 

Tuesday, April 22, 2014

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:

       ಅಂದಾಜು 50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೋರ್ವರ ಮೃತದೇಹವು ವಿರಾಜಪೇಟೆ ನಗರದ ಸುಂಕದಕಟ್ಟೆಯ ಹತ್ತಿರದ ಬಸ್ಸು ತಂಗುದಾಣದ ಬಳಿ ಪತ್ತೆಯಾಗಿದೆ.   ದಿನಾಂಕ 21-4-2014 ರಂದು ಬೆಳಿಗ್ಗೆ ವಿರಾಜಪೇಟೆ ನಗರದ ನಿವಾಸಿ ಸತೀಶ್‌ ಎಂಬವರಿಗೆ  ನಗರದ ಸುಂಕದಕಟ್ಟೆ ಬಳಿ ಇರುವ  ಹಳೆಯ ಪ್ರಗತಿ ಶಾಲೆಯ ಹತ್ತಿರ  ಇರುವ ಬಸ್ ಶೆಲ್ಟರ್ ಬಳಿ  ಒಬ್ಬ ಅಪರಿಚಿತ ಅಂದಾಜು 50 ವರ್ಷ ಪ್ರಾಯದ ಗಂಡಸಿನ ಮೃತದೇಹ ಪತ್ತೆಯಾಗಿದ್ದು  ಈ ಸಂಬಂಧ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ವ್ಯಕ್ತಿಯ ಬರ್ಬರ ಹತ್ಯೆ, ಪ್ರಕರಣ ದಾಖಲು:
  ಕಾರ್ಮಿಕನೊಬ್ಬನನ್ನು ದುಷ್ಕರ್ಮಿಗಳು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಮಾಡಿದ ಘಟನೆ ಕುಟ್ಟ ಪೊಲೀಸ್‌ ಠಾಣಾ ವ್ಯಾಪ್ತಿಯ ಬೊಮ್ಮಾಡು ಕೋತೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 20-04-2014 ರ ರಾತ್ರಿಯಿಂದ ದಿನಾಂಕ 21-04-2014 ರ ಬೆಳಿಗ್ಗೆ 06.00 ಗಂಟೆಯ ಒಳಗೆ ವಿರಾಜಪೇಟೆ ತಾಲ್ಲೂಕಿನ ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ಬೊಮ್ಮಾಡು ಕೋತೂರು ಗ್ರಾಮದ ಪ್ರಕಾಶ್‌ರವರ ತೋಟದ ಲೈನು ಮನೆಯಲ್ಲಿ ವಾಸವಾಗಿದ್ದ ರವಿ ಎಂಬುವವರನ್ನು ಪ್ರಕಾಶ್‌ರವರ ಕಾಫಿ ತೋಟದಲ್ಲಿ ಯಾರೋ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ತಲೆ, ಹಣೆ, ಮುಖ, ಹಾಗೂ ಕೈ ಭಾಗಗಳಿಗೆ ಕಡಿದು ಕೊಲೆ ಮಾಡಿದ್ದು, ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ವಕ್ಫ್ ಆಸ್ತಿ ಅತಿಕ್ರಮಣ, ಪ್ರಕರಣ ದಾಖಲು:

     ಮಡಿಕೇರಿ ನಗರದ ಡಾ. ಅಂಬೇಡ್ಕರ್ ಬಡಾವಣೆಯಲ್ಲಿ ವಾಸವಿರುವ ಫೈರೋಜ್ ಎಂಬುವವರು ಜಿಲ್ಲಾ ವಕ್ಫ್ ಮಂಡಳಿಯ ಗಮನಕ್ಕೆ ಬಾರದ ಹಾಗೆ ಸರಕಾರಿ ರಜಾ ದಿನಗಳಾದ 17-04-2014 ಮತ್ತು 18-04-2014 ರಂದು  ತನ್ನ ಮನೆಯ ಪಕ್ಕದಲ್ಲಿರುವ ವಕ್ಫ್ ಆಸ್ತಿಯನ್ನು ಅತಿಕ್ರಮಣ ಮಾಡಿರುತ್ತಾರೆಂದು ಆರೋಪಿಸಿ  ಸಾದತ್‌ ಹಸನ್‌, ಜಿಲ್ಲಾ ವಕ್ಫ್ ಮಂಡಳಿ, ಬಟ್ಕಳ  ಮಸೀದಿ ಕಾಂಪ್ಲೆಕ್ಸ್‌, ಮಹದೇವಪೇಟೆ  ಎಂಬುವವರು ಮಡಿಕೇರಿ ಠಾಣೆಗೆ ದೂರನ್ನು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

ಲಾರಿ ಬಸ್ಸಿಗೆ ಡಿಕ್ಕಿ, ಬಸ್ಸ್‌ ಚಾಲಕ ಮತ್ತು ಬೈಕ್‌ಸವಾರರಿಬ್ಬರಿಗೆ ಗಾಯ:

    ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಚಾಲಕ ಶ್ರೀ ಮಲ್ಲಿಕಾರ್ಜುನ ಎಂಬುವವರು  ದಿನಾಂಕ 22-04-2014 ರಂದು ಮೈಸೂರಿನಿಂದ ಕುಶಾಲನಗರ ಮಾರ್ಗವಾಗಿ  ಮಡಿಕೇರಿ ಕಡೆಗೆ ಬರುತ್ತಿರುವಾಗ್ಗೆ ಸಮಯ 08-30         ಎಎಂಗೆ ಬೋಯಿಕೇರಿ ಎಂಬಲ್ಲಿಗೆ ತಲುಪುವಾಗ ಇದುರುಗಡೆಯಿಂದ ಲಾರಿಯೊಂದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸಿಗೆ ಡಿಕ್ಕಿಪಡಿಸಿದ  ಪರಿಣಾಮ ಬಸ್ಸು ಒಮ್ಮೆಲೇ ಹಿಂದಕ್ಕೆ ಚಾಲನೆಗೊಂಡು ಬಸ್ಸಿನ ಚಾಲಕ ಮಲ್ಲಿಕಾರ್ಜುನನವರ ಬಲ ಕಾಲಿಗೆ ಗಾಯನೋವುಂಟಾಗಿದ್ದು ಅಲ್ಲದೆ ಬಸ್ಸಿನ ಹಿಂದಿನಿಂದ ಬರುತ್ತಿದ್ದ ಒಂದು ಮೋಟಾರು ಸೈಕಲಿಗೆ ಬಸ್ಸು ತಾಗಿ ಬಸ್ಸಿನ ಕೆಳಗೆ ಬಿದ್ದು  ಅದರಲ್ಲಿ  ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ  ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ

ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ:

     ದಿನಾಂಕ 21.04.2014 ರಂದು ಚಿಕ್ಕತೋಳೂರು ಗ್ರಾಮದ ನಿವಾಸಿ ಸಿ;ಕೆ. ರಾಘವೇಂದ್ರ ಎಂಬುವವರು ತಮ್ಮ ಜೀಪಿನಲ್ಲಿ  ಸೋಮವಾರಪೇಟೆಯಿಂದ ಚಿಕ್ಕತೋಳೂರು ಕಡೆಗೆ ಹೋಗುತ್ತಿದ್ದಾಗ ಆರೋಪಿಗಳಾದ ಚಂದ್ರಪ್ಪ, ಪ್ರಶಾಂತ, ಬೆಳ್ಪಪ್ಪ, ಈರಪ್ಪ ಮತ್ತು  ಅನಂತ ಎಂಬ ವ್ಯಕ್ತಿಗಳು  ಜೀಪನ್ನು ತಡೆದು ನಿಲ್ಲಿಸಿ, ರಾಘವೇಂದ್ರರವರನ್ನು ಅವಾಚ್ಯ ಶಬ್ದಗಳೊಂದ ಬೈದು ಕೈಯಿಂದ ಹಲ್ಲೆ ನಡೆಸಿ  ಗಾಯಪಡಿಸಿದ್ದು, ಸೋಮವಾರಪೇಟೆ ಪೊಲೀಸರು ಈ ಸಂಬಂಧ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.