Friday, February 28, 2014

ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿಯ ಸಾವು:

      ವ್ಯಕ್ತಿಯೊರ್ವ ಕೆರೆಯಲ್ಲಿ ಸ್ನಾನ ಮಾಡುತ್ತಿರುವಾಗ ಕಾಲು ಜಾರಿ ಕೆರೆಗೆ ಬಿದ್ದು ದುರ್ಮರಣಗೊಂಡ ಘಟನೆ ವಿರಾಜಪೇಟೆ ತಾಲೋಕಿನ ಬಾಡಗ ಗ್ರಾಮದಲ್ಲಿ ನಡೆದಿದೆ.   ದಿನಾಂಕ 27-2-2014 ರಂದು  ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ವಿ. ಬಾಡಗ ಗ್ರಾಮದ ನಿವಾಸಿ ಮಳವಂಡ ಸುರೇಶ್‌ ಎಂಬುವವರ ಲೈನುಮನೆಯಲ್ಲಿ ವಾಸವಾಗಿದ್ದ  55 ವರ್ಷದ  ಮೋನ ಎಂಬ ವ್ಯಕ್ತಿ  ಮನೆಯ ಪಕ್ಕದಲ್ಲಿದ್ದ ಕೆರೆಯಲ್ಲಿ ಸ್ನಾನ ಮಾಡುತ್ತಿರುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ. 
 

Thursday, February 27, 2014

ತಮ್ಮನಿಂದ ಅಕ್ಕನ ಮೇಲೆ ಅತ್ಯಾಚಾರ:

    ತಮ್ಮನೇ ತನ್ನ ಅಕ್ಕನ ಮೇಲೆ ಅತ್ಯಾಚಾರ ನಡೆಸಿದ ಘಟನೆ ವಿರಾಜಪೇಟೆ ನಗರ ಠಾಣಾ ಸರಹದ್ದಿನ ಕುಕ್ಲೂರು ಗ್ರಾಮದಲ್ಲಿ ನಡೆದಿದೆ.  ಯರವರ ಧರ್ಮ, ಪತ್ನಿ ಗೌರಿ ಹಾಗು  ಪತ್ನಿ ಗೌರಿಯ ತಮ್ಮ ರವಿ ಎಂಬುವವರು ವಿರಾಜಪೇಟೆ ತಾಲೋಕು ತಾಲೋಕು ಕುಕ್ಲೂರು ಗ್ರಾಮದ  ತಾತಂಡ ಕಾವೇರಪ್ಪ ಎಂಬುವವರ ಲೈನು ಮನೆಯಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ.  ದಿನಾಂಕ 26-2-2014 ರಂದು ರಾತ್ರಿ 10-30 ಗಂಟೆಗೆ ಧರ್ಮರವರು ಮನೆಯಲ್ಲಿಲ್ಲದ ಸಮಯದಲ್ಲಿ ಆತನ ಪತ್ನಿ ಗೌರಿಯ ತಮ್ಮ  ತನ್ನ ಅಕ್ಕ ಗೌರಿಯ ಮೇಲೆ ಅತ್ಯಾಚಾರ ನಡೆಸಿರುತ್ತಾನೆಂದು ಆರೋಪಿಸಿ  ಯರವರ ಧರ್ಮ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಮಾನಸಿಕ ಅಸ್ವಸ್ಥ ಹೊಳೆಗೆ ಬಿದ್ದು ದುರ್ಮರಣ:
 
ಸಿದ್ದಾಪುರ ಠಾಣಾ ಸರಹದ್ದಿನ ಕರಡಿಗೂಡು ಗ್ರಾಮದ ಕುಕ್ಕನೂರು ಹರೀಶ್‌ ಎಂಬುವರ ಲೈನು ಮನೆಯಲ್ಲಿ ವಾಸವಿದ್ದ  38 ವರ್ಷ ಪ್ರಾಯದ ಸುರೇಶ್‌ ಎಂಬ ವ್ಯಕ್ತಿ  ಮಾನಸಿಕ ಅಸ್ವಸ್ಥನಾಗಿದ್ದು ದಿನಾಂಕ 24-2-2014 ರಂದು ಸಂಜೆ ಮನೆಯಿಂದ ಹೋಗಿದ್ದು ದಿನಾಂಕ 26-2-2014 ರಂದು ಬೆಳಿಗ್ಗೆ ಕರಡಿಗೋಡು ಗ್ರಾಮದ ಕಾವೇರಿ ಹೊಳೆಯಲ್ಲಿ ಆತನ ಶವ ತೇಲುತ್ತಿರುವುದು ಕಂಡುಬಂದಿದ್ದು, ಈತ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟಿರಬಹುದೆಂದು  ಆತನ ಸಹೋದರ  ಸಿ. ರಮೇಶ್‌ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಅಕ್ರಮ ಹುಲಿಯ ಮೂಳೆ ಸಾಗಾಟ ಆರೋಪಿಯ ಬಂಧನ:
 
ಖಚಿತ ವರ್ತಮಾನದ  ಮೇರೆಗೆ ವಿರಾಜಪೇಟೆ ಅರಣ್ಯ ಸಂಚಾರಿ ದಳದ ಪೊಲೀಸರು ತಿತಿಮತಿ ಗ್ರಾಮದ ಚೈನ್‌ಗೇಟ್‌ ಬಳಿ ದಾಳಿ ನಡೆಸಿ  ಅಕ್ರಮವಾಗಿ ಸತ್ತ ಹುಲಿಯ ಮೂಳೆಗಳನ್ನು ಒಂದು ಚೀಲದಲ್ಲಿ ತುಂಬಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದ ವ್ಯಕ್ತಿ ಜೇನುಕುರುಬರ ಬಿ ದಿನೇಶ ತಂದೆ ಬಸವರಾಜು, ಪ್ರಾಯ 37 ವರ್ಷ, ಹಂಗಾಮಿ ವಾಚರ್ ಕೆಲಸ, ಪಿರಿಯಾಪಟ್ಟಣ ವಲಯ ವಾಸ ಆಲದಕಟ್ಟೆ ಗ್ರಾಮ ಇವರನ್ನು ಮಾಲು ಸಮೇತ ವಶಕ್ಕೆ ತೆಗೆದುಕೊಂಡಿರುತ್ತಾರೆ.  ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. 

Wednesday, February 26, 2014

ಪ್ರೀತಿಸುವ ನೆಪದಲ್ಲಿ  ಚಿನ್ನದ ಸರ ಸುಲಿಗೆ:

        ಯುವಕನೊಬ್ಬ ಯುವತಿಯನ್ನು ಒತ್ತಾಯ ಪೂರ್ವಕವಾಗಿ ಪ್ರೀತಿಸಲು ಪೀಡಿಸಿ ಕುತ್ತಿಗೆಯಿಂದ ಸುಮಾರು 2 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡು ಹೋಗಿರುತ್ತಾನೆಂದು ಆರೋಪಿಸಿ ದೂರನ್ನು ಮಡಿಕೇರಿ ನಗರ ಠಾಣೆಯಲ್ಲಿ ದಾಖಲಿಸಿದ್ದಾರೆ.  ಸೋಮವಾರಪೇಟೆ ತಾಲೋಕು ಹಾಲೇರಿ ಗ್ರಾಮದ ನಿವಾಸಿ ಶ್ರೀಮತಿ ರೇವತಿ ಎಂಬುವವರ ಮಗಳು ಕುಮಾರಿ ರಚಿತಾಳು ಕುಶಾಲನಗರದ ಕಾಲೇಜಿನಲ್ಲಿ ದ್ವೀತೀಯ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದು, ಪ್ರತಿ ದಿನ ಕಾಲೇಜಿಗೆ ಹೋಗುವಾಗ ಕುತ್ತಿಗೆಗೆ ಚಿನ್ನದ ಸರವನ್ನು ಧರಿಸುತ್ತಿದ್ದಳು. ಈಕೆಯನ್ನು ಈಗ್ಗೆ 2 ತಿಂಗಳಿನಿಂದ ಬಿಳಿಗೇರಿಯ ಶ್ಯಾಮ್ ಕೆ.ಟಿ. ಎಂಬುವವನು ಪ್ರೀತಿಸುವಂತೆ ಪೀಡಿಸುತ್ತಿದ್ದು, ಪ್ರೀತಿಸದಿದ್ದರೆ  ರಚಿತಾಳ ಹೆಸರನ್ನು ಹಾಳು ಮಾಡುವುದಾಗಿ ಬೆದರಿಸುತ್ತಿದ್ದು,  ದಿನಾಂಕ 23-02-2014 ರಂದು ರಚಿತಾಳು ತನ್ನ ಸ್ನೇಹಿತೆಯೊಂದಿಗೆ ಮಡಿಕೇರಿಯ ರಾಜಾಸೀಟಿಗೆ ಬಂದಿದ್ದಾಗ ಸಮಯ 15.00  ಗಂಟೆಗೆ  ಆರೋಪಿ ಶ್ಯಾಮ್ ಅಲ್ಲಿಗೇ ಬಂದು ರಚಿತಾಳ ಕೈಯನ್ನು ಹಿಡಿದು ಎಳೆದು,  ಪ್ರೀತಿಸಬೇಕೆಂದು  ಹೇಳಿದ್ದು,  ಇಲ್ಲದಿದ್ದರೆ ನಿನ್ನನ್ನು ಹೋಗಲು ಬಿಡುವುದಿಲ್ಲವೆಂದು  ಹೇಳಿ, ಚೈನನ್ನು ಬಿಚ್ಚಿಕೊಡು, ಇಲ್ಲದ್ದಿದ್ದರೆ ನಿನ್ನನ್ನು ಹೋಗಲು ಬಿಡುವುದಿಲ್ಲ. ಎಂದು ಬೆದರಿಸಿ ರಚಿತಾಳ ಕುತ್ತಿಗೆಯಲ್ಲಿದ್ದ ಎರಡುವರೆ ಪವನಿನ ಸುಮಾರು 50000-00 ರೂ ಬೆಲೆಯ  ಚಿನ್ನದ  ಚೈನನ್ನು ಬೆದರಿಸಿ ತೆಗೆದುಕೊಂಡು ಹೋಗಿದ್ದು ಇದರ ಸಂಬಂಧ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ:
 
     ಮಡಿಕೇರಿ ತಾಲೋಕಿನ ಐಕೊಳ ಗ್ರಾಮದ ನಿವಾಸಿ 45 ವರ್ಷ ಪ್ರಾಯದ ಬೆಟ್ಟಕುರುಬರ ಸೋಮಯ್ಯ ಎಂಬುವವರು ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು,  ಮೃತರ ಪತ್ನಿ ಶ್ರೀಮತಿ ಕಮಲ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  
 
 
 


Tuesday, February 25, 2014

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ, ಸವಾರನಿಗೆ ಗಾಯ:

      ಸುಂಟಿಕೊಪ್ಪ ಕಾನ್‌ಬೈಲ್‌ ಗ್ರಾಮದ ನಿವಾಸಿ ದಿಲೀಪ್‌ ಎಂಬುವವರು ದಿನಾಂಕ 24.02.2014 ರಂದು ಕೆಎ-12-ಹೆಚ್-3703 ರ ಮೋಟಾರ್ ಸೈಕಲ್‌ನಲ್ಲಿ  ಅಂದಗೋವೆ ಗ್ರಾಮದ ಕೂರ್ಗಳ್ಳಿ ಎಸ್ಟೇಟ್‌ನ ಕಡೆಗೆ ಹೋಗುತ್ತಿದ್ದು ಸದರಿಯವರು ಮೋಟಾರ್‌ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗ್ರೂಕತೆಯಿಂದ ಓಡಿಸಿ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ರಕ್ತಗಾಯಗೊಂಡಿದ್ದು,  ಸುಂಟಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಜೀವನದಲ್ಲಿ ಜಿಗುಪ್ಸೆ,  ವ್ಯಕ್ತಿಯ ಆತ್ಮಹತ್ಯೆ:
    ಮzsÀÄ, ¥ÁæAiÀÄ 39 ªÀµÀð, ಕಾರ್ಪೆಂಟರ್‌ ಕೆಲಸ, ವಾಸ ಅಮ್ಮಂಡನಾಣಯ್ಯನವರ ಬಾಡಿಗೆ ಮನೆ, ಗಾಂಧಿನಗರ, ಮೂರ್ನಾಡು, ಮಡಿಕೇರಿ ತಾಲೋಕು ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Monday, February 24, 2014

ಮಹಿಳೆಯ ಮಾನಭಂಗಕ್ಕೆ ಯತ್ನ:

       ಮಹಿಳೆಯೊಬ್ಬರು ನೀರು ತರಲೆಂದು ಹೋದಾದ ವ್ಯಕ್ತಿ ಯೋರ್ವ ಮಾನಭಂಗಕ್ಕೆ ಯತ್ನಿಸಿದ ಘಟನೆ ಕಗ್ಗೋಡ್ಲು ಗ್ರಾಮದ  ಹೂಕಾಡು ಪೈಸಾರಿಯಲ್ಲಿ ನಡೆದಿದೆ.   ಶ್ರೀಮತಿ ಸರಸು (42) ಎಂಬುವವರು ವಿರಾಜಪೇಟೆ ತಾಲೋಕು ಮಲ್ಲಮಟ್ಟಿ ಗ್ರಾಮದ ನಿವಾಸಿ ಸುಬ್ರಮಣಿ ಎಂಬುವವರೊಂದಿಗೆ  ಸುಮಾರು 20 ವರ್ಷಗಳ ಹಿಂದೆ ಮದುವೆಯಾಗಿದ್ದು ನಂತರ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದ ಕಾರಣ ಕಗ್ಗೋಡ್ಲು ಗ್ರಾಮದ ಹೂಕಾಡು ಪೈಸಾರಿಯಲ್ಲಿತುವ ತನ್ನ ತಾಯಿ ಮನೆಗೆ ಬಂದು ನೆಲೆಸಿದ್ದು, ದಿನಾಂಕ 23-2-2014 ರಂದು 4-00 ಗಂಟೆ ಸಮಯದಲ್ಲಿ ಮನೆಯತ್ತಿರದ  ಬೋರ್‌ವೆಲ್‌ಗೆ ನೀರು ತರಲೆಂದು ಹೋಗಿದ್ದಾಗ ಅದೇ ಗ್ರಾಮದ ನಿವಾಸಿ ಎಂ.ಸಿ. ಜನ ಎಂಬ ವ್ಯಕ್ತಿ ಅಲ್ಲೆಗೆ ಬಂದು ಮಾನಭಂಗ ಮಾಡುವ ಉದ್ದೇಶದಿಂದ ಶ್ರೀಮತಿ ಸರಸುರವರ ಕೈಹಿಡಿದು ಕೈಹಿಡಿದು ಎಳೆದುಕೊಂಡು ಪಕ್ಕದ ಕಾಫಿ ತೋಟಕ್ಕೆ ಹೋಗಿರುತ್ತಾರೆ ಎಂಬುದಾಗಿ ಶ್ರೀಮತಿ ಸರಸುರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಅಕ್ರಮ ಮದ್ಯ ಮಾಟಾಟ, ಪ್ರಕರಣ ದಾಖಲು:
 
    ಅಕ್ರಮವಾಗಿ ಅಂಗಡಿಯೊಂದರಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗೆ ಪೊಲೀಸರು ದಾಳಿಮ ನಡೆಸಿ ಮಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.  ಸೋಮವಾರಪೇಟೆ ವೃತ್ತ ನಿರೀಕ್ಷಕರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 23-2-2014 ರಂದು ಅಪರಾಹ್ನ 4-00 ಗಂಟೆಗೆ  ಸಿಬ್ಬಂದಿಗಳೊಂದಿಗೆ  ಕಿರುಗಂದೂರು ಗ್ರಾಮದ  ಕೆ.ಪಿ ಮೋಹನ ಎಂಬುವವರ  ಅಂಗಡಿಗೆ ದಾಳಿ ಮಾಡಿ  ಅಂಗಡಿಯಲ್ಲಿ ಸರಕಾರದ ರಹದಾಗಿ ಇಲ್ಲದೆ ಮಾರಾಟ ಮಾಡಲು ಒಂದು ರೆಟ್ಟಿನ ಬಾಕ್ಸ್‌ನಲ್ಲಿ KNOCK OUT STRONG BEER 330 ML  24  ಬಾಟಲಿಗಳು ಹಾಗೂ KNOCK OUT STRONG BEER 650  MLನ 8 ಬಾಟಲಿಗಳನ್ನು ವಶಪಡಿಸಿಕೊಂಡು  ಆರೋಪಿಯನ್ನು ಬಂಧಿಸಿ  ಅವರ ವಿರುಧ್ದ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Sunday, February 23, 2014

ಪಾಚಾದಾರಿಗಳಿಗೆ ಟೆಂಪೋ ಟ್ರಾವೆಲರ್‌ ಡಿಕ್ಕಿ:
 
     ಮಡಿಕೇರಿ ತಾಲೋಕು ಅರ್ವತ್ತೋಕ್ಲು ಗ್ರಾಮದ ನಿವಾಸಿಗಳಾದ  ತಳೂರು ಗಣಿತ್‌ ಕುಮಾರ್‌ ಹಾಗೂ ಅವರ ಮಾವ ಲಕ್ಷ್ಮಣರವರೊಂದಿಗೆ ದಿನಾಂಕ 22-2-2014 ರಂದು 3-30 ಗಂಟೆಯ ಸುಮಾರಿಗೆ ಬೆಟ್ಟಗೇರಿ ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಭಾಗಮಂಡಲ ಕಡೆಯಿಂದ ಕೆಎ-02-ಡಿ-8857 ರ ಟೆಂಪೋ ಟ್ರಾವೆಲರ್ ಚಾಲಕ ರಂಗನಾಥರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಡಿಕ್ಕಿಪಡಿಸಿದ ಪರಿಣಾಮ ಗಣಿತ್‌ ಕುಮಾರ್‌ರವರ ಎಡ ಭುಜಕ್ಕೆ ನೋವಾಗಿದ್ದು, ಲಕ್ಷ್ಮಣರರವರ ಎಡ ಕೆನ್ನೆಗೆ, ಎಡ ಬದಿಯ ಸೊಂಟಕ್ಕೆ, ಎಡ ಕಾಲಿನ ಮಂಡಿಗೆ, ಎಡ ಕೈಯ ಮಣಿಕೈಗೆ ಮತ್ತು ಎದೆಗೆ ಗಾಯನೋವು ಆಗಿದ್ದು  ಈ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Saturday, February 22, 2014

ಕೆಎಸ್‌ಆರ್‌ಟಿ ಬಸ್‌ ತಡೆದು ಚಾಲಕನ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ:

     ಕೆಎಸ್‌ಆರ್‌ಟಿಸಿ ಬಸ್‌ವೊಂದನ್ನು  ಮ್ಯಾಕ್ಸಿಕ್ಯಾಬ್‌ ವಾಹನದ ಚಾಲಕನೊಬ್ಬ  ತಡೆದು ಬಸ್‌ನ ಚಾಲಕನ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ  ಅರಣ್ಯ ಇಲಾಖಾ ಕಛೇರಿಯ ಬಳಿ ನಡೆದಿದೆ. ಸಿ.ಎನ್‌. ಪ್ರಶಾಂತ್‌ ಕುಮಾರ್‌ ಎಂಬುವವರು ಪುತ್ತೂತು ವಿಭಾಗದ ಕೆ.ಎಸ್‌.ಆರ್‌.ಟಿ.ಸಿ. ಬಸ್‌ನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 21-2-2014 ರಂದು  . ಕೆಎ-19 ಎಫ್- 2414ರ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹಾಸನದಿಂದ ಮಡಿಕೇರಿ ಕಡೆಗೆ ಪ್ರಯಾಣಿಕರೊಂದಿಗೆ ಬರುತ್ತಿದ್ದಾಗ  ಕುಶಾಲನಗರದ ಹೆಬ್ಬಾಲೆ ಗ್ರಾಮಕ್ಕೆ ತಲುಪುವಾಗ್ಗೆ KA 12 5157 ರ ಮ್ಯಾಕ್ಸಿಕ್ಯಾಬಿನ ಚಾಲಕ  ಬಸ್ಸಿಗೆ ದಾರಿಯನ್ನು ಬಿಡದೆ ಸಮಯ ಸುಮಾರು 18.5 ಗಂಟೆಗೆ ಕುಶಾಲನಗರದ ಅರಣ್ಯ  ಕಛೇರಿ ಜಂಕ್ಷನ್‌ ಬಳಿ ತಲುಪುವಾಗ್ಗೆ ಸದರಿ ಮ್ಯಾಕ್ಸಿ ಕ್ಯಾಬಿನ ಚಾಲಕ ಬಸ್ಸನ್ನು ಅಡ್ಡಗಟ್ಟಿ ನಿಲ್ಲಿಸಿ  ಅವಾಚ್ಯ ಶಬ್ದಗಳಿಂದ ಬೈದು ಚಾಲಕನನ್ನು  ಬಸ್ಸಿನಿಂದ ಹೊರಗಡೆ ಎಳೆದು ಹಾಕಿ ಅಲ್ಲಿಯೇ ರಸ್ತೆ ಬದಿಯಲ್ಲಿದ್ದ  ಒಂದು ಬಾಡ್ರಸ್‌ ಕಲ್ಲಿನಿಂದ  ಪಿರ್ಯಾದಿಯ ತಲೆಯ ಬಲಭಾಗಕ್ಕೆ  ಹೊಡೆದು ರಕ್ತಗಾಯಪಡಿಸಿ  ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು,  ಗಾಯಾಳು ಚಾಲಕನ್ನು ಚಿಕಿತ್ಸೆಗಾಗಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ  ದಾಖಲಾಗಿರುತ್ತಾರೆ.   ಈ ಸಂಬಂಧ ಕುಶಾಲನಗರ ಪೊಲೀಸರು  ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ
 
ಮನುಷ್ಯ ಕಾಣೆ:
 
     ಸಂತೆಗೆ ಹೋಗಿಬರುವುದಾಗಿ ತಿಳಿಸಿ ಹೋದ ವೃದ್ದರೊಬ್ಬರು ಕಾಣೆಯಾದ ಘಟನೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ 7ನೇ ಹೊಸಕೋಟೆ-ತೋಂಡೂರು ಗ್ರಾಮದಿಂದ ವರದಿಯಾಗಿದೆ.  ದಿನಾಂಕ 16-2-2014 ರಂದು 7ನೇ ಹೊಸಕೋಟೆ-ತೋಂಡೂರು ಗ್ರಾಮದಲ್ಲಿ ನೆಲೆಸಿರುವ 65 ವರ್ಷ ಪ್ರಾಯದ ಕೆ.ಕೆ. ರವಿ ಎಂಬುವವರು ಸುಂಟಿಕೊಪ್ಪದ ಸಂತೆಗೆ ಹೋಗಿ ಬರುತ್ತೇನೆಂದು ತಿಳಿಸಿ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.  ಈ ಸಂಬಂಧ  ಕಾಣೆ ವ್ಯಕ್ತಿಯ ಮಗ ಕೆ.ಆರ್‌. ಸಲೀಶ್‌ ಎಂಬುವವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥ, ಪ್ರಕರಣ ದಾಖಲು:
 
ಪ್ರೌಡಶಾಲಾ ಮಕ್ಕು ಬಿಸಿಯೂಟ ಸೇವಿಸಿ ಅಸ್ವಸ್ಥರಾದ ಘಟನೆ ಶನಿವಾರಸಂತೆ ನ್ಯಾಯದಳ್ಳ ಬೆಸೂರು ಸರ್ಕಾರಿ ಪ್ರೌಡಶಾಲೆಯಲ್ಲಿ ನಡೆದಿದೆ.  ದಿನಾಂಕ 21-2-2014 ರಂದು ಶನಿವಾರಸಂತೆ ನ್ಯಾಯದಳ್ಳ ಸರ್ಕಾರಿ ಪ್ರೌಡ ಶಾಲೆಯಲ್ಲಿ  ಮಧ್ಯಾಹ್ನ  ಎಂದಿನಂತೆ ಬಿಸಿಯೂಟ ಸೇವಿಸಿದ ಮಕ್ಕಳು ಅಸ್ವಸ್ಥರಾಗಿದ್ದು ಅವರನ್ನು ಕೊಡ್ಲಿಪೇಟೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
   

Friday, February 21, 2014

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:

        ರಸ್ತೆಯಲ್ಲಿ ಶಾಮೀಯಾನ ಇಳಿಸಿದ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಕೊಂಡಂಗೇರಿ ಗ್ರಾಮದಲ್ಲಿ ನಡೆದಿದೆ.  ಸಿದ್ದಾಪುರ ಠಾಣಾ ಸರಹದ್ದಿನ ಹಾಲುಗುಂದ ಗ್ರಾಮದ ನಿವಾಸಿ ಕೆ.ಎಂ. ಶಂಶುದ್ದೀನ್ ಇವರು ಕೊಂಡಂಗೇರಿ ಗ್ರಾಮದ ಅಬ್ದುಲ್‌ ಮಜೀದ್‌ರವರ ಶಾಮೀಯಾನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು  ದಿನಾಂಕ 20-2-2014 ರಂದು  ಅದೇ ಗ್ರಾಮದ ಕೊಪ್ಪದ ನಿವಾಸಿಯಾದ ಬಷೀರ್‌ರವರ ಮನೆಗೆ ಶಾಮೀಯಾನ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿ ಪಿಕ್‌ಅಪ್‌ ವಾಹನದಿಂದ ರಸ್ತೆಯಲ್ಲಿ ಇಳಿಸುತ್ತಿರುವ ವೇಳೆ  ಅದೇ ಗ್ರಾಮದ ವಾಸಿಗಳಾದ ಜಮೀರ್‌ ಹಾಗು ಜುಬೇರ್‌ ಎಂಬುವವರುಗಳು ವಿನಾಕಾರಣ ಕೆ.ಎಂ. ಶಮಶುದ್ದೀನ್‌ರವರ ಮೇಲೆ ಕೈಯಿಂದ ಹಾಗೂ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಗಾಯಪಡಿಸಿ ಕೊಲೆ ಮಾಡುವುದಾಗಿ ಬೆದರಿಸಿರುವ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 
ವಯೋವೃದ್ದ  ಕಾಣೆ ಪ್ರಕರಣ ದಾಖಲು:
 
       ವಯೋವೃದ್ದ ವ್ಯಕ್ತಿಯೊಬ್ಬರು ಮನೆಯಿಂದ ಹೋಡವರು ಕಾಣೆಯಾದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ಯ  ಮೈತಾಡಿ ಗ್ರಾಮದಲ್ಲಿ ನಡೆದಿದೆ.  ವಿರಾಜಪೇಟೆ ತಾಲೋಕು ಚಾಮಿಯಾಲ ಮೈತಾಡಿ ಗ್ರಾಮದಲ್ಲಿ ನೆಲೆಸಿರುವ ಕೆ.ಪಿ. ಶಂಶುದ್ದೀನ್‌ರವರ ತಂದೆ ಕೆ.ಎಂ. ಫರೀದ್‌ (85) ಎಂಬುವವರು ದಿನಾಂಕ: 19-02-14 ರಂದು ಸಮಯ 11-30ಗಂಟೆಗೆ ಪಿರ್ಯಾದಿಯವರ ತಂದೆಯವರು  ಮನೆಯಿಂದ ಹೇಳದೆ ಹೊರಟು ಹೋಗಿದ್ದು,  ತದನಂತರ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.  ಈ ಬಗ್ಗೆ ಕೆ.ಪಿ. ಶಂಶುದ್ದೀನ್‌ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ನೇಣುಬಿಗಿದುಕೊಂಡು ಬಾಲಕನ ಆತ್ಮಹತ್ಯೆ:

       ಮಡಿಕೇರಿ ತಾಲೋಕು ಚೇಲಾವರ ಗ್ರಾಮದ ನಿವಾಸಿ ಅಮಿತ್‌ ಸೋಮಯ್ಯ ಎಂಬುವವರ ಲೈನ್‌ ಮನೆಯಲ್ಲಿ ವಾಸಮಾಡಿಕೊಂಡಿರುವ ಹಸೀಂ ಆಲಿ  ಎಂಬುವವರ ಮಗ 10 ವರ್ಷ ಪ್ರಾಯದ ಹಲಿಲ್‌ ಹಲ ಅಲ್ಲಿ  ಎಂಬ ಬಾಲಕ ಶಾಲೆಗೆ ಹೋಗುವ ವಿಚಾರದಲ್ಲಿ ಬೇಸರ ಮಾಡಿಕೊಂಡು  ಲೈನು ಮನೆಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನಾಪೋಕ್ಲು ಪೊಲೀಸರು  ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಶಾಲಾ ವಿದ್ಯಾರ್ಥಿನಿಯ  ಅತ್ಯಾಚಾರಕ್ಕೆ ಯತ್ನ:

ದಿನಾಂಕ 20-02-2014 ಬೆಳಿಗ್ಗೆ 08.30 ರಿಂದ 09.00 ಗಂಟೆಯ ಸಮಯದಲ್ಲಿ ಮಡಿಕೇರಿ ಸಂತ ಮೈಕಲರ ಪ್ರೌಡಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಾಲೆಗೆಬರುತ್ತಿದ್ದ ವೇಳೆಯಲ್ಲಿ ಅಪರಿಚಿತ ವ್ಯಕ್ತಿ ಸಂತ ಮೈಕಲರ ದೇವಾಲಯದ ಬಳಿ ಉದ್ದೇಶಪೂರ್ವಕವಾಗಿ ವಿದ್ಯಾರ್ಥಿನಿಯ ಮೈಮೇಲೆ ಕೈಹಾಕಿ ಕಿರುಕುಳ ನೀಡಿದ ಘಟನೆ ನಡೆದಿದ್ದು  ಈ ಘಟನೆ ಸಿಸಿ ಕ್ಯಾಮರಾದಲ್ಲಿ  ಸೆರೆಯಾಗಿದ್ದು  ಮಡಿಕೇರಿ ನಗರ ಪೊಲೀಸರು ಮಡಿಕೇರಿಯ ಸಂತ ಮೈಕಲರ ಪ್ರೌಡಶಾಲೆಯ ಮುಖ್ಯೋಪಾದ್ಯಾಯರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
 

Thursday, February 20, 2014

ಹೆಂಗಸು ಕಾಣೆ ಪ್ರಕರಣ ದಾಖಲು:

     ವಿವಾಹಿತ ಮಹಿಳೆಯೊಬ್ಬರು ಮನೆಯಿಂದ ಗೋಣಿಕೊಪ್ಪ ನಗರಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ದೇವನೂರು-ಬಾಳೆಲೆ ಗ್ರಾಮದ ನಿವಾಸಿ ಮಂದೆಮಾಡ ಪೊನ್ನಪ್ಪ @ ಸುರೇಶ, ಇವರ ಪತ್ನಿ ನಳಿನಿ @ ಕೌಶಿ ಗಂಡ ಪ್ರಾಯ 33 ವರ್ಷ, ಗೃಹಿಣಿ, ಇವರು ದಿನಾಂಕ 19-2-2014 ರಂದು ಗೋಣಿಕೊಪ್ಪಲಿಗೆ ಬಟ್ಟೆ ಸರಿಪಡಿಸಲು ಹೋಗಿಬರುವುದಾಗಿ ತಿಳಿಸಿ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು ಸದರಿಯವರ ಪತಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಆಸ್ತಿ ವಿವಾದ  ಹಿನ್ನೆಲೆ  ವ್ಯಕ್ತಿಯ ದಾರಿ ತಡೆದು  ಕೊಲೆ ಬೆದರಿಕೆ:
ಆಸ್ತಿ ವಿವಾದದ ಹಿನ್ನೆಯಲ್ಲಿ ವ್ಯಕ್ತಿಯೊಬ್ಬರ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಬೇಲಿಯನ್ನು ಕಿತ್ತು ನಷ್ಟಪಡಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಡಂಗ ಮರೂರುನಲ್ಲಿ ನಡೆದಿದೆ. ಬಲ್ಲಾಡಿಚಂಡ ರಾಮಕೃಷ್ಣ, ತಂದೆ: ಲೇಟ್ ಕಾವೇರಪ್ಪ, ವಾಸ: ಕಡಂಗಮರೂರು ಗ್ರಾಮ, ವಿರಾಜಪೇಟೆ ತಾಲ್ಲೂಕು ಇವರಿಗೆ ಕಡಂಗಮರೂರು ಗ್ರಾಮದಲ್ಲಿ ಕಾಫಿ ತೋಟವಿದ್ದು  ಸದರಿ ತೋಟದ ಜಾಗದ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯವಿರುವುದಾಗಿದ್ದು,   ಅದೇ ಗ್ರಾಮದ ಪೂಣಚ್ಚ, ಗಂಗಮ್ಮ ಹಾಗು ಕಿರಣ್‌  ಎಂಬುವವರು ವ್ಯಾಜ್ಯವಿರುವ ಕಾಫಿ ತೋಟಕ್ಕೆ ದಿನಾಂಕ 19-2-2014 ರಂದು ಅಕ್ರಮ ಪ್ರವೇಶ ಮಾಡಿ ತೋಟದ ತಂತಿ ಬೇಲಿಯನ್ನು ಕಿತ್ತು ಬಿಸಾಡಿ 5000/- ರೂಗಳಷ್ಟು ನಷ್ಟಪಡಿಸಿದ್ದು,  ಇದನ್ನು ಕೇಳಲು ಹೋದಾಗ ಪೂಣಚ್ಚನವರು  ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು  ರಾಮಕೃಷ್ಣನವರು ವಿರಾಜಪೇಟೆ ಗ್ರಾಮಾಂತರ ಠಾಣೆಗೆ ದೂರನ್ನು ನೀಡಿದ್ದು ಅದ್ರಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.   

Wednesday, February 19, 2014

ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ ವ್ಯಕ್ತಿಯ ದುರ್ಮರಣ:

     ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದ ನಿವಾಸಿ ಮುಂಡಮಾಡ ಟಿ. ಸುಬ್ಬಯ್ಯ ಎಂಬವರು ದಿನಾಂಕ 18-2-2014 ರಂದು ರಾತ್ರಿ ಸುಮಾರು 10-30 ಗಂಟೆಗೆ ತಮ್ಮ ಬಾಪ್ತು ಮಾರುತಿ 800 ಕಾರಿನಲ್ಲಿ  ಪೊನ್ನಂಪೇಟೆ ಕಡೆಯಿಂದ ಕಾನೂರು ಕಡೆಗೆ ಪ್ರಯಾಣಿಸುತ್ತಿದ್ದು ಸದರಿಯವರು ಕಾರನ್ನು ಅರೀವೇಗ ಹಾಗೂ ನಿರ್ಲಕ್ಷ್ಯತನದಿಂದ ಓಡಿಸಿ ಮುಗುಟಗೇರಿ ಗ್ರಾಮ - ಕಾನೂರು ರಸ್ತೆಯ ಬದಿಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿಪಡಿಸಿದ್ದು ಇದರ ಪರಿಣಾಮವಾಗಿ  ಸುಬ್ಬಯ್ಯನವರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾನೂರು ಗ್ರಾಮದ ವಿನೋದ್‌ ಎಂಬುವವರ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ತಾಯಿ ಮತ್ತು ಮಗು ಕಾಣೆ ಪ್ರಕರಣ ದಾಖಲು:
    ತಾಯಿ ಹಾಗೂ ಎರಡು ವರ್ಷ ವಯಸ್ಸಿನ ಮಗುವೊಂದು ಕಾಣೆಯಾದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಸಿದ್ದಾಪುರ ನಗರದಲ್ಲಿ ನಡೆದಿದೆ.  ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಸಿ.ಎಂ. ಅಲವಿ ಎಂಬುವವರ ಮಗಳು 21 ವರ್ಷ ಪ್ರಾಯದ ರಂಸೀನಾ ಎಂಬುವವರು 6 ವರ್ಷಗಳ ಹಿಂದೆ ಸಕೀರ್‌ ಎಂಬುವವರೊಂದಿಗೆ ಮದುವೆಯಾಗಿ 2 ವರೆ ವರ್ಷದ ಮಗು ಇದ್ದು ಸಕೀರ್‌ ದುಬೈನಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದು, ರಂಸೀನಾ ತನ್ನ ಮಗುವಿನೊಂದಿಗೆ ತನ್ನ ತವರು ಸಿ.ಎಂ. ಅಲವಿಯವರ ಮನೆಯಲ್ಲಿ ನೆಲಸಿ  ಸಿದ್ದಾಪುರ ನಗರದ ಮಾಡ್ರನ್‌ ಕಂಪ್ಯೂಟರ್‌ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 18-2-2014 ರಂದು ತನ್ನ ಗಂಡನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಮಗುವಿನೊಂದಿಗೆ ಹೋಗಿ ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು,  ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಬೈಕ್‌ ಡಿಕ್ಕಿ ಮಹಿಳೆ ಹಾಗು ಸವಾರನಿಗೆ ಗಾಯ:
     ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಬೈಕ್‌ ಡಿಕ್ಕಿಯಾಗಿ ಮಹಿಳೆಗೆ ಹಾಗು ಬೈಕ್‌ ಸವಾರನಿಗೆ ಗಾಯಗಳಾದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಹೆಚ್‌ಆರ್‌ಪಿ ಕಾಲೋನಿಯ ಮುಖ್ಯ ರಸ್ತೆಯಲ್ಲಿ ನಡೆದಿದೆ.   ದಿನಾಂಕ 18-02-2014ರಂದು  ಕುಶಾಲನಗರದ ಹೆಚ್‌ಆರ್‌ಪಿ ಕಾಲೋನಿಯ ನಿವಾಸಿ ಶ್ರೀಮತಿ ರಾಮಿ ಎಂಬುವವರು ಐಬಿ ಜಂಕ್ಷನ್‌ ಕಡೆಯಿಂದ ಹೆಚ್‌ಆರ್‌‌ಪಿ ಕಾಲೋನಿ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಎದುರುಗಡೆಯಿಂದ ಬಂದ KA-12K-6663 ಮೋಟರು ಸೈಕಲ್ಲಿನ್ನು ಅದರ ಚಾಲಕ ಮಲ್ಲೇಶ್ ಎಂಬುವವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿ ಡಿಕ್ಕಿಪಡಿಸಿದ ಪರಿಣಾಮ ಶ್ರೀಮತಿ ರಾಮಿಯವರಿಗೆ ಗಾಯಗಳಾಗಿದ್ದು ಅಲ್ಲದೆ ಬೈಕ್‌ ಸವಾರನಿಗೂ ಗಾಯಗಳಾಗಿದ್ದು ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲು ಮಾಡಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, February 18, 2014

ಪರಸ್ಪರ ಬೈಕ್‌ಗಳ ಡಿಕ್ಕಿ: 

      ದಿನಾಂಕ: 15-02-14ರಂದು ಬೆಳಿಗ್ಗೆ 8-15ಗಂಟೆಗೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬೊಯಿಕೇರಿ ನಿವಾಸಿ  ಶಿವಪ್ಪ ಎಂಬುವವರು  ತನ್ನ ಪತ್ನಿಯೊಂದಿಗೆ  ಮೋಟಾರ್‌ ಸೈಕಲ್‌ನಲ್ಲಿ ಪ್ರಯಾಣಿಸುತ್ತಿರುವಾಗ  ಎದುರುಗಡೆಯಿಂದ   ದಿವನಾ ಎಂಬುವವರು ತಮ್ಮ ಮೋಟಾರ್‌ ಸೈಕಲ್‌ ಸಂ. ಕೆಎ.04.ಇಸಿ.9645ನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಶಿವಪ್ಪನವರ  ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ  ಶಿವಪ್ಪನವರಿಗೆ ಗಾಯಗಳಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಮನುಷ್ಯ ಕಾಣೆ, ಪ್ರಕರಣ ದಾಖಲು:
ವಿರಾಜಪೇಟೆ ತಾಲೋಕು ಕೋತೂರು ಗ್ರಾಮದ  ಶ್ರೀ ಕಟ್ಟೇಂಗಡ ಮೇದಪ್ಪನವರ ಲೈನು ಮನೆಯಲ್ಲಿ ವಾಸವಾಗಿದ್ದುಕೊಂಡು  ಕೂಲಿ ಕೆಲಸ ಮಾಡಿಕೊಂಡಿದ್ದ  ವೆಂಕಟ ನಾಯಕ ಎಂಬ ವ್ಯಕ್ತಿ ಅಂಗಡಿಗೆ ಹೋಗಿಬರುತ್ತೇನೆಂದು ಹೇಳಿ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಕುಟ್ಟ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   
 
ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ:
ದಿನಾಂಕ 17-02-2014 ರಂದು ಸಮಯ 18.30 ಗಂಟೆಗೆ ವಿರಾಜಪೇಟೆ ತಾಲ್ಲೂಕು ಕೋತೂರು ಗ್ರಾಮದಲ್ಲಿ   ಬಲ್ಯಮಂಡೂರು ಗ್ರಾಮದ ನಿವಾಸಿ ಎಂ.ಎನ್‌. ಚಂದ್ರ ಎಂಬುವವರು  ಬೈಕ್‌ನಲ್ಲಿ ಹೋಗುತ್ತಿದ್ದಾಗ ಅದೇ ಗ್ರಾಮದ ನಿವಾಸಿಗಳಾದ ಗಿರೀಶ್‌ @ ಮನು, ಮನು @ ಪ್ರಸಾದ್‌ ಹಾಗು ಗಣೇಶ ಎಂಬುವವರು  ಬೈಕನ್ನು ತಡೆದು ನಿಲ್ಲಿಸಿ  ಅವಾಚ್ಯ ಶಬ್ಧದಿಂದ ಬೈದು, ಎಡ ಕೈ ಮದ್ಯ ಬೆರಳಿಗೆ ಚಾಕುವಿನಿಂದ ಚುಚ್ಚಿ ಗಾಯಪಡಿಸಿದ್ದೂ  ಅಲ್ಲದೆ ಬೀರು ಬಾಟಲಿಯಿಂದ ಹಲ್ಲೆ ನಡೆಸಿ ನೋವುಂಟುಪಡಿಸಿದ್ದು  ನಂತರ  ಎಂ.ಎನ್‌. ಚಂದ್ರರವರು  ಕಾನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು  ಅವರು ನೀಡಿದ ಹೇಳಿಕೆಯ ಮೇರೆಗೆ ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Monday, February 17, 2014

ಹಣದ ವಿಚಾರ ವ್ಯಕ್ತಿಯ ಮೇಲೆ ಹಲ್ಲೆ:

      ಹಣದ ವಿಚಾರದಲ್ಲಿ ಜಗಳ ತೆಗೆದು ವ್ಯಕ್ತಿಯ ಮೇಲೆ ರೀಪರ್‌ನಿಂದ ಹಲ್ಲೆ ನಡೆಸಿ ಗಾಯಪಡಿಸಿದ ಗಟನೆ ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.  ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ  ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಶ್ರೀಮತಿ ಪಾತುಮ್ಮ ರವರು  ದಿನಾಂಕ 16-2-2014 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ಮನೆಯಲ್ಲಿದ್ದು ಆರೋಪಿಗಳಾದ ಅದೇ ಗ್ರಾಮದ ನಬೀಸಾ ಹಾಗು ಆಕೆಯ ಗಂಡ ಮನ್ಸೂರು ರವರು ಅಲ್ಲಗೆ ಬಂದು ಹಣದ ವಿಚಾರದಲ್ಲಿ ಜಗಳ ಮಾಡಿ ಹಳೇ ದ್ವೇಷದಿಂದ  ರೀಪರ್‌ನಿಂದ ಪಾತುಮ್ಮ್ರವರ ಗಂಡ ಮೊಹಮ್ಮದ್‌ರವರ ಮೇಲೆ ಹಲ್ಲೆನಡೆಸಿ ಗಾಯಪಡಿಸಿದ್ದು, ಅವರನ್ನು ಚಿಕಿತ್ಸೆಗಾಗಿ ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲು  ಮಾಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ
 
ಆಸ್ತಿ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ:
 
     ಸಿದ್ದಾಪುರ ಠಾಣಾ ಸರಹದ್ದಿನ  ಅರೆಕಾಡು ಗ್ರಾಮದಲ್ಲಿ ಫಿರ್ಯಾದಿ ಶ್ರೀ ನೆಲ್ಲಮಕ್ಕಡ ಮಂದ್ದಣ್ಣ (64) ಇವರಿಗೆ ಆಸ್ಇ ಮತ್ತು ಮನೆ ಇದ್ದು  ಇವರು ತಮ್ಮ ಪತ್ನಿಯೊಂದಿಗೆ ದಿನಾಂಕ 16-2-2014 ರಂದು ಅರೆಕಾಡುವಿನ ತಮ್ಮ ಮನೆಗೆ ಹೋಗಿದ್ದು  ಸದರಿಯವರ ಅಣ್ಣ  ಎನ್‌.ಕೆ. ಮುತ್ತಪ್ಪ ಮಗ ಪ್ರಮೋದ್‌ ರವರು ಆಸ್ತಿ ವಿಚಾರದಲ್ಲಿ ದ್ವೇಷವನ್ನು ಇಟ್ಟುಕೊಂಡು ಕ್ಷುಲ್ಲಕ ಕಾರಣವೊಂದಕ್ಕೆ ಜಗಳವಾಡಿ  ಮಂದಣ್ಣನವರ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಅಲ್ಲದೆ  ಕೊಲೆ ಬೆದರಿಕೆ ಹಾಕಿರುತ್ತಾರೆಂದು  ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನೀಡಿದ ಹೇಳಿಕೆಯ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಪಾದಾಚಾರಿಗೆ ಮೋಟಾರ್‌ ಸೈಕಲ್‌ ಡಿಕ್ಕಿ:
 
     ಕೊಡ್ಲಿಪೇಟೆನಗರದ  ನಿವಾಸಿ ಪಿ.ಎ.ಚೆರಿಯನ್ ಎಂಬುವವರು  ದಿನಾಂಕ : 08-02-2014 ಸಮಯ ಸುಮಾರು 10:30 ಗಂಟೆಗೆ ಕೊಡ್ಲಿಪೇಟೆ ಸರಕಾರಿ ಆಸ್ಪತ್ರೆಯ ಮುಂದೆ  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಅವರ ಹಿಂದಿನಿಂದ ಕೆಎ-12-ಕೆ-7816 ರ ಹೋಂಡಾ ಶೈನ್ ಮೋಟಾರ್ ಸೈಕಲಿನ ಚಾಲಕ ರಾಕೇಶ್ಎಂಬುವವರು ತನ್ನ ಬೈಕನ್ನು  ಅತೀವೇಗ ಮತ್ತು ನಿರ್ಲಕ್ಷ್ಯದಿಂದ ಚಾಲಿಸಿಕೊಂಡು ಬಂದು ಪಿ.ಎ. ಚೆರಿಯನ್‌ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮುಖ,ಕೈ,ಹಾಗೂ ದೇಹದ ಭಾಗಗಳಿಗೆ ರಕ್ತ ಗಾಯಗಳಾಗಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ವಿವಾಹಿತ ಮಹಿಳೆ ಕಾಣೆ, ಪ್ರಕರಣ ದಾಖಲು:
     ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿ ನೆಲೆಸಿರುವ ಎಂ.ಪಿ. ಪ್ರವೀಣ್‌ ಎಂಬುವವರ ಪತ್ನಿ  21 ವರ್ಷ ಪ್ರಾಯದ ಅಶ್ವಿನಿ ಎಂಬುವವರು ದಿನಾಂಕ 24-1-2014 ರಂದು ತನ್ನ ತಾಯಿಯ ಜೊತೆಯಲ್ಲಿ  ತಾಯಿ ಮನೆಗೆ ರೇಷನ್‌ ತರಲೆಂದು ಹೋಗಿದ್ದು  ನಂತರ ಮನೆಗೆ ಬಾರದೆ ಕಾಣೆಯಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ
 
 

Sunday, February 16, 2014


ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ:
      ಮನೆಯ ಪಕ್ಕದ ದಾರಿಯಲ್ಲಿ ಬೆಂಕಿ ಹಾಕಿದ ಬಗ್ಗೆ ವಿಚಾರಿಸಿದ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡಿಗೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.  ದಿನಾಂಕ  08-02-2014 ರಂದು ಸಮಯ 06.00 ಪಿ.ಎಂ.ಗೆ  ಶ್ರೀಮತಿ ಚಂದ್ರಮ್ಮ ಪ್ರಾಯ 30 ವರ್ಷ, ಕೂಲಿ ಕೆಲಸ,  ಕೂಡಿಗೆ ಕೊಪ್ಪಲು ಗ್ರಾಮ ಇವರು ಮನೆಯಲ್ಲಿರುವ ವೇಳೆ ಅವರ ಮನೆಯ ಪಕ್ಕದ ದಾರಿಯಲ್ಲಿ ಅದೇ ಗ್ರಾಮದ ಸತೀಶ ಎಂಬ ವ್ಯಕ್ತಿ  ಬೆಂಕಿ ಹಾಕಿದ್ದು  ಅದನ್ನು ಕೇಳಲು ಹೋದ ಚಂದ್ರಮ್ಮನವರ ಮೇಲೆ  ದೊಣ್ಣೆಯಿಂದ  ಹಲ್ಲೆ ನಡೆಸಿದ್ದು  ನೋವನ್ನುಂಟುಮಾಡಿದ್ದು  ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಸದರಿಯವರ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಅಪರಿಚಿತ ವ್ಯಕ್ತಿಯ ಶವ ಪತ್ತೆ:
     ಕುಶಾಲನಗರ ಠಾಣಾ ಸರಹದ್ದಿನ  ರಸೂಲ್‌ ಲೇಔಟ್‌ ಬಳಿ ಕಾವೇರಿ ನದಿ ತೀರದಲ್ಲಿ  ಸುಮಾರು 60 ವರ್ಷದ ಅಪರಿಚಿತ  ಗಂಡಸಿನ  ಶವವೊಂದು ಪತ್ತೆಯಾಗಿದ್ದು , ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿರುತ್ತಾರೆ. 
   
 

Saturday, February 15, 2014

ಅತೀ ವೇಗದ ಚಾಲನೆ ಬೈಕ್‌ ಸವಾರನಿಗೆ ಗಾಯ:

      ಅತೀ ವೇಗದ ಚಾಲನೆ ಮಾಡಿ ಬೈಕ್‌ ಸವಾರನೊಬ್ಬ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದು ಗಾಯಗೊಂಡಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.  ಮಡಿಕೇರಿ ತಾಲೋಕಿನ ಕಕ್ಕಬೆ ಗ್ರಾಮದ ನಿವಾಸಿ ನವೀನ್‌ ಎಂಬುವವರು ದಿನಾಂಕ 14-2-2014 ರಂದು  ಕೊಪ್ಪದಲ್ಲಿರುವ  ಅವರ ದೊಡ್ಡಮ್ಮನವರ ಮನೆಗೆ ಹೋಗಿದ್ದು ವಾಪಾಸ್ಸು ಮನೆಗೆ ಬರುವಾಗ ಅಣ್ಣ ಯೋಗ @ ಯೋಗೆಂದ್ರರವರ ಜೊತೆಯಲ್ಲಿ ಅವರ ಬಾಪ್ತು ಮೋಟಾರ್ ಸೈಕಲ್ ನಂ ಕೆಎ-45 ಆರ್ 5997ರಲ್ಲಿ ಬರುತ್ತಿರುವಾಗ್ಗೆ ಸಮಯ ಸುಮಾರು 18.30 ಗಂಟೆಗೆ ಸಿದ್ದಾಪುರ ನಗರದ ಮಡಿಕೇರಿ ರಸ್ತೆಯ ಚೇಂದಂಡ ಪೂವಯ್ಯರವರ ಮನೆಗೆ ಹೋಗುವ ಗೇಟಿನ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ತಲಪುವಾಗ್ಗೆ ಯೋಗ @ ಯೋಗೆಂದ್ರವರು ಬೈಕ್ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕಿನ  ನಿಯಂತ್ರಣ ತಪ್ಪಿ ಯೋಗ@ ಯೋಗೆಂದ್ರರವರು ಕೆಳಗೆ ಬಿದ್ದು ತಲೆಗೆ ಗಾಯವಾಗಿದ್ದು  ಚಿಕಿತ್ಸೆಗಾಗಿ ಸಿದ್ದಾಪುರ ಸರ್ಕಾರಿ  ಆಸ್ಪತ್ರೆಗೆ ದಾಖಲಿಸಿಸಲಾಗಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ಆಸ್ತಿ ವಿವಾದ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕಾಫಿಗಿಡಗಳ ನಾಶ:
        ಆಸ್ತಿ ವಿವಾದದ ಹಿನ್ನೆಲೆಯಲ್ಲಿ  ಸುಮಾರು 13 ಜನರ ಗುಂಪು ಜಿ.ಸಿ.ಬಿ ವಾಹನ ಸಮೇತ ವ್ಯಕ್ತಿಯೊಬ್ಬರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕಾಫಿಗಿಡಗಳನ್ನು ನಾಶಪಡಿಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ ಘಟನೆ ಭಾಗಮಂಡಲ ಠಾಣಾ ವ್ಯಾಪ್ತಿಯ ಬಿ. ಬಾಡಗ ಗ್ರಾಮದಲ್ಲಿ ನಡೆದಿದೆ.  ಬಿ.ಬಾಡಗ ಗ್ರಾಮದ ನಿವಾಸಿ  ಕೆ.ಸಿ. ಪೊನ್ನಪ್ಪ(50) ರವರು ದಿನಾಂಕ  10-2-2014 ರಂದು ಮನೆಯಲ್ಲಿರುವ ವೇಳೆಯಲ್ಲಿ  ಅದೇ ಗ್ರಾಮದ ನಿವಾಸಿಗಳಾದ  ಕೆ.ಯು. ಉಲ್ಲಾಸ, ಕೆ.ಆರ್‌. ಕುಟ್ಟಪ್ಪ, ಕೆ.ಎಂ. ಚಿಣ್ಣಪ್ಪ, ಸಂತೋಷ್‌ ಕುಮಾರ್‌,  ಕೆ.ಎ. ಕಿರಣ್‌ಕುಮಾರ್‌, ಕೆ. ಅಶೋಕ, ಕೆ.ಎ. ನಾಣಯ್ಯ,  ಕೆ.ಎ. ಸತೀಶ್‌, ಕೆ.ಎಸ್‌. ಸುಧಿ, ಕೆ.ಪಿ. ವಿಕ್ಕಿ, ಕೆ.ಪಿ. ಜೀವಿತ್‌ಕುಮಾರ್‌, ನಂದಕುಮಾರ್‌ ಹಾಗು ನಡುವಟ್ಟೀರ ವಿನಯ್‌ ಒಟ್ಟು 13 ಜನರ ಗುಂಪು  ಕೆ.ಸಿ. ಪೊನ್ನಪ್ಪರವರ ಕಾಫಿ ತೋಟದಲ್ಲಿ ಜೆ.ಸಿ.ಬಿ.ಯೊಂದಿಗೆ ಅಕ್ರಮ ಪ್ರವೇಶ ಮಾಡಿ ಸುಮಾರು 50 ಕಾಫಿ ಗಿಡಗಳನ್ನು ನಾಶಪಡಿಸಿದ್ದಲ್ಲದೇ  ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಜೀವ ಬಿದರಿಕೆ ಹಾಹಿರುತ್ತಾರೆಂದು ಭಾಗಮಂಡಲ ಪೊಲೀಸರಿಗೆ ದೂರನ್ನು ನೀಡಿದ್ದು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Thursday, February 13, 2014

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕನ ಆತ್ಮಹತ್ಯೆ:

      ಮಡಿಕೇರಿ ತಾಲೋಕಿನ ಮರಗೋಡು ಗ್ರಾಮದ ನಿವಾಸಿ ಸಿ.ವಿ. ವಾಸು ಎಂಬುವವರ ಮಗ  ಮಗ ಪ್ರಾಯ 22 ವರ್ಷದ ವಿಜೇಶ್‌‌ನು  ದಿನಾಂಕ 12-02-2014 ರಂದು ಸಮಯ 4-00 ಗಂಟೆಗೆ ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.  ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Wednesday, February 12, 2014

ಕ್ಷುಲ್ಲಕ ಕಾರಣ ಚೂರಿಯಿಂದ ತಿವಿದು ವ್ಯಕ್ತಿಯ ಕೊಲೆ:  

    ತನ್ನ ಹೆಂಡಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಎಂಬ ಕಾರಣಕ್ಕೆ  ವ್ಯಕ್ತಿಯೋರ್ವನನ್ನು ಚೂರಿಯಿಂದ ತಿವಿದು ಕೊಲೆ ಮಾಡಿದ  ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದ ಹೋಂಸ್ಟೇಯೊಂದರಲ್ಲಿ ನಡೆದಿದೆ.   ಪ್ರವೀಣ್‌ ಹಾಗು ಮಾರ್ಟಿನ್‌ ಎಂಬ ವ್ಯಕ್ತಿಗಳು ಮಡಿಕೇರಿ ತಾಲೋಕಿನ ಬೆಟ್ಟತ್ತೂರು ಗ್ರಾಮದ ತ್ರೀಹಿಲ್ಸ್‌‌ ಹೋಂಸ್ಟೇಯಲ್ಲಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ 11-2-2014 ರಂದು ರಾತ್ರಿ ಸಮಯ ಮಾರ್ಟಿನ್‌ನು ಪ್ರವೀಣರವರ ಪತ್ನಿ ರೇಖಾ ಎಂಬವರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಎಂಬ ಕಾರಣಕ್ಕೆ  ಪ್ರವೀಣ ಮಾರ್ಟಿನ್‌ ಮೇಲೆ ಹಲ್ಲೆ ನಡೆಸಿದ್ದು ಅಲ್ಲದೆ  ಚೂರಿಯಿಂದ ತಿವಿದು ಕೊಲೆ ಮಾಡಿದ್ದು,  ಹೋಂಸ್ಟೇಯಲ್ಲಿ ಆಕೌಂಟೆಂಟ್‌ ಕೆಲಸ ಮಾಡಿಕೊಂಡಿರುವ ಬಿ.ಎ. ಯತೀಶ್‌ ಕುಮಾರ್‌ ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೂರನ್ನು ನೀಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಕೌಟುಂಬಿಕ ಜಗಳ, ಮಹಿಳೆ ಮೇಲೆ ಹಲ್ಲೆ:
    ಮಡಿಕೇರಿ ತಾಲೋಕು ಹೊದ್ದೂರು ಗ್ರಾಮದ ನಿವಾಸಿ ಶ್ರೀಮತಿ ಕೆ.ಎ. ಐಸಮ್ಮ ಎಂಬವರು ತಮ್ಮ ಮನೆಯಲ್ಲಿರುವಾಗ ತಮ್ಮ ಅಳಿಯ ಹಸೈನಾರ್‌ರವರು ದಿನಾಂಕ 10-02-2014 ರಂದು ಸಮಯ 07-00 ಪಿ ಎಂ ಗೆ ಮನೆಗೆ ಬಂದು ಅವ್ಯಾಚ್ಯ ಜಗಳ ಮಾಡಿ ತನ್ನ ಪತ್ನಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅಲ್ಲದೆ ದೊಣ್ಣೆಯಿಂದ ಮನೆಯ ಕಿಟಕಿ ಗ್ಲಾಸ್‌ಗಳನ್ನು ಹಾಗೂ ಕರೆಂಟ್ ಮೀಟರ್ ಬಾಕ್ಸ್ ನ್ನು ಒಡೆದು ಚೂರು ಮಾಡಿದ್ದು, ಅಲ್ಲದೆ ಐಸಮ್ಮನವರ ಕೈ ಹಿಡಿದು ದೂಡಿ ಹಾಕಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದ್ರಿಕೆ ಹಾಕಿದ ಬಗ್ಗೆ, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ವಿನಾ ಕಾರಣ ವ್ಯಕ್ತಿಯ ಮೇಲೆ ಹಲ್ಲೆ: 
     ದಿನಾಂಕ 11-02-2014 ರಂದು ಸಮಯ 15.00 ಗಂಟೆಗೆ ವಿರಾಜಪೇಟೆ ತಾಲ್ಲೂಕು ಕೋತೂರು ಗ್ರಾಮದ ಬೊಮ್ಮಾಡು ಹಾಡಿಯಲ್ಲಿ  ತಿಮ್ಮ ಎಂಬ ವ್ಯಕ್ತಿ  ಕೋತೂರು ಗ್ರಾಮದ  ಜೆ.ಬಿ. ಎಂಬುವವರನ್ನು  ಅವಾಚ್ಯ ಶಬ್ಧಗಳಿಂದ ಬೈದು ಹಣೆಯ ಬಲ ಭಾಗಕ್ಕೆ ಕಾಡು ಮರದ ದೊಣ್ಣೆಯಿಂದ ಹೊಡೆದು ರಕ್ತ ಗಾಯಪಡಿಸಿದ್ದು  ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
 

Tuesday, February 11, 2014

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:

      ಸುಮಾರು 50 ವರ್ಷ ಪ್ರಾಯದ ಅಪರಿಚಿರ ವ್ಯಕ್ತಿಯೋರ್ವರ  ಮೃತದೇಹ ಪತ್ತೆಯಾದ ಬಗ್ಗೆ ವಿರಾಜಪೇಟೆ ನಗರ ಠಾಣೆಗೆ ವರದಿಯಾಗಿದೆ.  ದಿನಾಂಕ  10-2-2014 ರಂದು ವಿರಾಜಪೇಟೆ ನಗರದ ಮೀನುಪೇಟೆ ನಿವಾಸಿ ಹೆಚ್‌.ಆರ್‌. ವೇಲುಮುರುಗ ಎಂಬುವವರು  ನಗರದ  ದೊಡ್ಡಟ್ಟಿ ಚೌಕಿಯಿಂದ ಅಪ್ಪಯ್ಯಸ್ವಾಮಿ ರಸ್ತೆಗೆ  ನಡೆದುಕೊಂಡು ಹೋಗುವಾಗ ರಸ್ತೆಯ ಬಲ ಭಾಗದ ಮದರಸ ಕಟ್ಟಡದ ಮುಂಭಾಗ ಅಂದಾಜು 50 ವರ್ಷ ಪ್ರಾಯದ  ಒಬ್ಬ  ಗಂಡಸಿನ ಮೃತದೇಹ ಪತ್ತೆಯಾಗಿದ್ದು ಸದರಿ  ಮೃತ ಶರೀರದ  ಮೇಲೆ ಒಂದು ಬಿಳಿ ಪಂಚೆ ಮಾತ್ರ ಧರಿಸಿರುವುದು  ಕಂಡು ಬಂದಿರುತ್ತದೆ.  ಈ ಬಗ್ಗೆ  ವೇಲುಮುರುಗವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ಆಸ್ತಿ ವಿವಾದ, ಎರಡು ಗುಂಪುಗಳಿಂದ ಪರಸ್ಪರ ಹಲ್ಲೆ:
     ಆಸ್ತಿ ವಿವಾದದ ಹಿನ್ನೆಲೆಯಲ್ಲಿ  ಎರಡು ಗುಂಪುಗಳು ಅಕ್ರಮಕೂಟ ಸೇರಿ   ಪರಸ್ಪರ ಹೊಡೆದಾಡಿದ ಘಟನೆ ವಿರಾಜಪೇಟೆ ಠಾಣಾ ವ್ಯಾಪ್ತಿಯ ಬೇಟೋಳಿ ಗ್ರಾಮದ ಗುಂಡಿಗೆರೆಯಲ್ಲಿ ನಡೆದಿದೆ.   ದಿನಾಂಕ 10-2-2014 ರಂದು ಸಮಯ 1-30 ಗಂಟೆಗೆ ಗುಂಡಿಗೆರೆ ನಿವಾಸಿಗಳಾದ ಅಶ್ರಫ್‌, ಹಸೈನಾರ್‌, ನಸೀಬಾ,  ಉಮ್ಮರ್‌ ಮೂಸಾ, ಮುಸ್ತಾಫಾ, ಅಬೂಬಕರ್‌, ಜಿಮ್ಮಿ, ಅಬು ರವರ   ಕಡೆಯವರ ಕಡೆಗೂ ಹಾಗೂ  ಎಂ.ಎಂ. ಅಜೀಜ್‌, ಇಬ್ರಾಹಿಂ, ಆಲಿ, ಮಹಮ್ಮದ್‌, ಸುಲೇಮಾನ್‌ ಮತ್ತು ಶಾಫಿ‌ ಎಂಬುವವರ ಎರಡು ಗುಂಪುನ ನಡುವೆ ಆಸ್ತಿಯ ವಿಚಾರದಲ್ಲಿ ಜಗಳ ವಾಗಿ ಪರಸ್ಪರ  ದೊಣ್ಣೆ ಮತ್ತು ಕೈಗಳಿಂದ  ಹೊಡೆದಾಡಿಕೊಂಡಿದ್ದು  ಎರಡು ಗುಂಪುಗಳ  ಮೇಲೆ ಪ್ರತ್ಯೇಕವಾಗಿ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

Sunday, February 9, 2014

ಅಕ್ರಮ ಜೂಜಾಟ, 6 ಜನರ ಬಂಧನ 
    ಅಕ್ರಮವಾಗಿ ಜೂಜಾಡುತ್ತಿದ್ದ 6 ಜನರನ್ನು ಭಾಗಮಂಡಲ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 08/02/2014ರ ರಾತ್ರಿ ವೇಳೆ ಕರಿಕೆ ಬಳಿಯ ಆನೆಪಾರೆ ಗ್ರಾಮದ ಬಳಿ ರಸ್ತೆಯ ಸಮೀಪ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಸುಳೀವಿನ ಮೇರೆಗೆ ಭಾಗಮಂಡಲ ಠಾಣೆಯ ಮುಖ್ಯ ಕಾನ್ಸ್‌ಟೇಬಲ್ ಸಿದ್ದಯ್ಯ ಹಾಗೂ ಇತರೆ ಸಿಬ್ಬಂದಿಯವರು ಸ್ಥಳಕ್ಕೆ ತೆರಳಿದಾಗ ಕರಿಕೆ ಗ್ರಾಮದ ನಿವಾಸಿಗಳಾದ ಮೋಹನ, ಸುಕುಮಾರ, ವಿಜು, ಶಂಕರ, ರಾಜ ಮತ್ತು ಬಾಲನ್ ಎಂಬವರುಗಳು ಅಕ್ರಮವಾಗಿ ಜೂಜಾಡುತ್ತಿದ್ದುದು ಕಂಡು ಬಂದಿದ್ದು ಎಲ್ಲರನ್ನೂ ಬಂಧಿಸಿದ ಪೊಲೀಸರು ಜೂಜಾಟಕ್ಕೆ ಉಪಯೋಗಿಸಿದ ಇಸ್ಪೇಟು ಎಲೆಗಳು ಹಾಗೂ ಹಣ ರೂ.2,300/-ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಗುಂಪು ಹಲ್ಲೆ 
   ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಗುಂಪು ಹಲ್ಲೆ ಮಾಡಿದ ಘಟನೆ ಚೆಟ್ಟಳ್ಳಿ ನಗರದಲ್ಲಿ ನಡೆದಿದೆ.ದಿನಾಂಕ 08/02/2014ರ ರಾತ್ರಿ ವೇಳೆ ಚೆಟ್ಟಳ್ಳಿ ನಗರದ ಎಂ.ಅಣ್ಣಪ್ಪ ಎಂಬವರ ಪಕ್ಕದ ಮನೆಯ ನಿವಾಸಿಗಳಾದ ವೇಲಮ್ಮ ಮತ್ತು ಅವರ ಮಕ್ಕಳು ಜೋರಾಗಿ ಬೊಬ್ಬೆ ಹಾಕುತ್ತಾ ಜಗಳ ಮಾಡುತ್ತಿದ್ದು ಈ ಬಗ್ಗೆ ವಿಚಾರಿಸಿದ ಅಣ್ಣಪ್ಪ ಹಾಗೂ ಅವರ ಪತ್ನಿ ಮೇಲೆ ವೇಲಮ್ಮ,ಮಂಜು ಹಾಗೂ ಮುತ್ತಪ್ಪ ಎಂಬವರು ಸೇರಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, February 8, 2014

ಪೆಟ್ಟಿಗೆ ಅಂಗಡಿಗೆ ಬೆಂಕಿ, ಸಾಮಗ್ರಿ ನಾಶ 
      ಪೆಟ್ಟಿಗೆ ಅಂಗಡಿಗೆ ಬೆಂಕಿ ಹಚ್ಚಿ ಸಾಮಗ್ರಿಗಳನ್ನು ನಾಶಗೊಳಿಸಿದ ಘಟನೆ ಕುಟ್ಟ ಸಮೀಪದ ಕೋತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 07/02/2014ರ ಬೆಳಗಿನ ಜಾವ ಕೋತೂರು ಗ್ರಾಮದ ನಿವಾಸಿ ಸ್ವಾಮಿಗೌಡ ಎಂಬವರ ತಳ್ಳುಗಾಡಿಯ ಪೆಟ್ಟಿಗೆ ಅಂಗಡಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಸುಮಾರು ರೂ.50,000/- ಮೌಲ್ಯದ ವಸ್ತುಗಳು ನಾಶವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಲಾಟರಿ ಮಾರಾಟ, ಓರ್ವನ ಬಂಧನ 
    ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಗೋಣಿಕೊಪ್ಪ ವೃತ್ತ ನಿರೀಕ್ಷಕರು ಬಂಧಿಸಿದ್ದಾರೆ. ದಿನಾಂಕ 07/02/2014ರಂದು ಗೋಣಿಕೊಪ್ಪ ನಗರದ ಮಾರುಕಟ್ಟೆ ಬಳಿ ಜಲೀಲ್ ಎಂಬ ವ್ಯಕ್ತಿ ಅಕ್ರಮವಾಗಿ ಲಾಟರಿಗಳನ್ನು ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ.ರಾಜುರವರು ಸ್ಥಳಕ್ಕೆ ತೆರಳಿದಾಗ ಮಾರುಕಟ್ಟೆಯ ಹಿಂಭಾಗದ ಹೋಟೆಲ್ ಒಂದರ ಬಳಿ ಗೋಣಿಕೊಪ್ಪದ ಅರ್ವತೊಕ್ಲು ನಿವಾಸಿ ಅಬ್ದುಲ್ ಜಲೀಲ್ ಎಂಬಾತನು ಕೇರಳ ರಾಜ್ಯದಲ್ಲಿ ಮಾರಾಟವಾಗುವ ಲಾಟರಿ ಟಿಕೆಟಿನ ಪ್ರಥಮ ಬಹುಮಾನ ಬರುವ ಲಾಟರಿಯ  ಕೊನೆಯ ಅಂಕಿಗೆ 10 ರೂ. ಮುಖ ಬೆಲೆಗೆ 100 ರೂಗಳಂತೆ ನೀಡುವುದಾಗಿ ತಿಳಿಸಿ ಜನರಿಂದ ಅಂಕಿಗಳನ್ನು ಬರೆಸುತ್ತಿರುವುದು ಕಂಡು ಬಂದಿದ್ದು, ಈ ವ್ಯಾಪಾರಕ್ಕೆ ಸರ್ಕಾರದ ಯಾವುದೇ ಪರವಾನಗಿ ಇಲ್ಲದ ಕಾರಣ ವೃತ್ತ ನಿರೀಕ್ಷಕರು ಆತನನ್ನು ಬಂಧಿಸಿ ಆತನಿಂದ ರೂ. 9,700/- ನಗದು ಹಾಗೂ ಅಂಕಿಗಳನ್ನು ಬರೆಯಲು ಉಪಯೋಗಿಸುತ್ತಿದ್ದ ಹಾಳೆಗಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, February 7, 2014

ಬೈಕ್‌ಗೆ ಸ್ಕೂಟರ್ ಡಿಕ್ಕಿ, 
      ಮೋಟಾರು ಬೈಕ್ ಒಂದಕ್ಕೆ ಸ್ಕೂಟರ್ ಒಂದು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 06/02/2014ರ ಸಂಜೆ ಮಡಿಕೇರಿ ನಗರದ ಡೈರಿ ಫಾರಂ ಬಳಿಯ ನಿವಾಸಿ ಎ.ಎಸ್.ಗೋಪಾಲ ಎಂಬವರು ಐಕೊಳ ಗ್ರಾಮದ ಅವರ ತೋಟಕ್ಕೆ ಹೋಗಿ ವಾಪಾಸು ಮಡಿಕೇರಿಗೆ ವರ ಕೆಎ-12-ಹೆಚ್-8717ರ ಮೋಟಾರು ಬೈಕಿನಲ್ಲಿ ಬರುತ್ತಿರುವಾಗ ಕಗ್ಗೋಡ್ಲು ಬಳಿ ಕೆಎ-03-ಹೆಚ್‌ಎಂ-8120ರ ಸ್ಕೂಟರನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗೋಪಾಲರವರು ಚಾಲಿಸಿಕೊಂಡು ಬರುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಗೋಪಾಲರವರಿಗೆ ಗಾಯಗಳಾಗಿ ಬೈಕ್ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 


Thursday, February 6, 2014

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ 

     ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿರುವ ಘಟನೆ ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 05/02/2014ರಂದು ಸಂಜೆ ಕೆದಮುಳ್ಳೂರು ಗ್ರಾಮದ ಉಪ್ಪಾರಶೆಟ್ಟರ ನಾಗಮ್ಮ ಎಂಬವರು ತಮ್ಮ ಮನೆಯ ಮುಂದೆ ಸೀನಪ್ಪ ಎಂಬವರ ಜೊತೆ ಮಾತನಾಡಿಕೊಂಡಿರುವಾಗ ಆಕೆಯ ಪತಿ ಹರೀಶ ಬಂದು ನಾಗಮ್ಮನವರೊಂದಿಗೆ ಜಗಳವಾಡಿ ಅಲ್ಲಿಯೇ ಬಿದ್ದಿದ್ದ ಕಬ್ಬಿಣದ ಸಲಾಕೆಯಿಂದ ನಾಗಮ್ಮ ಹಾಗೂ ಸೀನಪ್ಪನವರಿಗೆ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ವ್ಯಕ್ತಿಯ ಮೇಲೆ ಹಲ್ಲೆ 

     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವ ಘಟನೆ ವಿರಾಜಪೇಟೆ ಬಳಿಯ ಬೋಯಿಕೇರಿ ಎಂಬಲ್ಲಿ ನಡೆದಿದೆ. ದಿನಾಂಕ 05/02/2014ರಂದು ಬೆಳಿಗ್ಗೆ ವಿರಾಜಪೇಟೆ ನಗರದ ತೆಲುಗರ ಬೀದಿಯ ಪಿ.ಎಸ್.ಲೋಕೇಶ್ ಹಾಗೂ ಕದನೂರು ಬೋಯಿಕೇರಿಯ ನಿವಾಸಿ ಸತೀಶ್ ಎಂಬವರಿಗೆ ಲೋಕೇಶ್‌ರವರ ಅಕ್ಕನ ಮಗಳ ಮಗುವಿನ ನಾಮಕರಣ ಸಮಾರಂಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದ್ದು, ಸಂಜೆ ವೇಳೆ ಲೋಕೇಶ್ ಬೋಯಿಕೇರಿಯ ಬಸ್ ತಂಗುದಾಣದಲ್ಲಿ ನಿಂತಿರುವಾಗ ಅಲ್ಲಿಗೆ ಬಂದ ಸತೀಶ್ ಲೋಕೇಶ್‌ ರವರೊಂದಿಗೆ ಪುನಃ ಜಗಳವಾಡಿ ದೊಣ್ಣೆ ಹಾಗೂ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.