Tuesday, December 31, 2013

ದರೋಡೆ, ಪ್ರಕರಣ ದಾಖಲು:

      ಬೆಂಗಳೂರು ನಿವಾಸಿ ಇಲನ್‌ ಚೆರಿಯನ್‌ ಎಂಬುವವರು  ತಮ್ಮ ಭಾಪ್ತು ನಂ.ಕೆಎ-02 ಎಂ ಜಿ-1923 ರ ಸ್ಯಾಂಟ್ರೋ ಕಾರನ್ನು ದಿನಾಂಕ 10/12/2013 ರಂದು ತಮಗೆ ಪರಿಚಯವಿರುವ ವಿರಣ್ಯ ಪಾಳ್ಯದ ವಾಸಿ ವಿನಯ್‌ ಕುಮಾರ್‌ ಎಂಬುವವರಿಗೆ ಮದುವೆ ಹೋಗುವ ಉದ್ದೇಶದಿಂದ ನೀಡಿದ್ದು, ಸದರಿ ಕಾರನ್ನು ವಿನಯ್‌ ಕುಮಾರ್‌ರವರು ಇದುವರೆಗೂ ವಾಪಾಸ್ಸು ನೀಡದೆ ಇದ್ದು, ಇಲನ್‌ ಚೆರಿಯನ್‌ ರವರು ದಿನಾಂಕ 28/12/2013 ರಂದು  ಅವರ ಸ್ನೇಹಿತ ನರಸಿಂಹರವರೊಂದಿಗೆ  ಮೈಸೂರಿಗೆ ಬಂದು ನಂತರ ದಿನಾಂಕ:29/12/2013 ರಂದು ವಿನಯ್‌ ಕುಮಾರ್‌ರವರಿಗೆ ಕರೆ ಮಾಡಿದಾಗ 'ನಾನು ಗೋಣಿಕೊಪ್ಪಲ್ಲಿದ್ದೇನೆ ಅಲ್ಲಿಗೆ ಬನ್ನಿ ಕಾರನ್ನು ಕೊಡುತ್ತೇನೆ' ಎಂದು ಹೇಳಿದ ಮೇರೆಗೆ  ಇಲನ್‌ ಚೆರಿಯನ್‌ ಗೋಣಿಕೊಪ್ಪಲಿಗೆ ಬಂದಿದ್ದು,  ಸಮಯ ರಾತ್ರಿ 10.00 ಗಂಟೆಗೆ ವಿನಯ್‌ ಕುಮಾರ್‌ರವರು ಕರೆ ಮಾಡಿ ನೀವು ಪಾಲಿಬೆಟ್ಟಕ್ಕೆ ಬನ್ನಿ ಎಂದು ತಿಳಿಸಿದ ಮೇರೆ  ಇಲನ್‌ ಚೆರಿಯನ್‌ರವರು ಕಾರಿನಲ್ಲಿ ಪಾಲಿಬೆಟ್ಟ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಟಾಟಾ ಕಂಪೆನಿಯವರ ಮುಕಾ ಎಸ್ಟೇಟ್‌ ಬಳಿ ತಲುಪುವಾಗ್ಗೆ ಸಮಯ ರಾತ್ರಿ 11.00 ಗಂಟೆಗೆ ಹಿಂಬದಿಯಿಂದ ಒಂದು ಜೀಪ್‌ ಬಂದು ಅದರಲ್ಲಿದ್ದ 3-4 ಜನರು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ,ನಂತರ ಜೀಪನ್ನು ಹಿಂಬಾಲಿಸಿಕೊಂಡು ಬರುವಂತೆ ತಿಳಿಸಿ ಪಾಲಿಬೆಟ್ಟ ರಸ್ತೆಯಲ್ಲಿ ಮುಂದಕ್ಕೆ ಹೋಗಿ ಬಲ ತಿರುವಿನಲ್ಲಿ ಹೋಗಿ ಜೀಪನ್ನು ನಿಲ್ಲಿಸಿದ್ದು, ಅಲ್ಲಿದ್ದ  ವಿನಯ್‌ ಕುಮಾರ್‌ರವರು ಇಲನ್‌ ಚೆರಿಯನ್‌ರವರ ಕುತ್ತಿಗೆಯಲ್ಲಿದ್ದ 24 ಗ್ರಾಂ ಚಿನ್ನದ ಸರ,4 ಗ್ರಾಂ ನ ಚಿನ್ನದ ಉಂಗುರ  ಮತ್ತು ಅವರ ಸ್ನೇಹಿತ ನರಸಿಂಹರವರ ಮೊಬೈಲ್‌ ಫೋನನ್ನು ಬಲತ್ಕಾರವಾಗಿ ಬೆದರಿಸಿ ಪಡೆದುಕೊಂಡು ನಂತರ ಹಣವನ್ನು ಕೇಳಿದಾಗ  ಇಲ್ಲ ಎಂದು ಹೇಳಿದಾಗ ವಿನಯ್‌ ಕುಮಾರ್‌ ಮತ್ತು ಜೀಪಿನಲ್ಲಿದ್ದ ವ್ಯಕ್ತಿಗಳು ಗೋಣಿಕೊಪ್ಪಕ್ಕೆ ಕರೆದುಕೊಂಡು ಬಂದು ಎಸ್‌ಬಿಐ ಬ್ಯಾಂಕಿನ ಎ.ಟಿ.ಎಂ ನಿಂದ 15,000 ರೂ ಹಣವನ್ನು ಬೆದರಿಸಿ ಡ್ರಾ ಮಾಡಿಸಿ ಅದನ್ನು ತೆಗೆದುಕೊಂಡು ಹೋಗಿರುತ್ತಾರೆಂದು  ಗೋಣಿಕೊಪ್ಪ ಪೊಲೀಸರಿಗೆ ಇಲನ್‌ ಚೆರಿಯನ್‌ರವರು ದೂರು ನೀಡಿದ್ದು ಅದರಂತೆ ಗೋಣಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿದ ಸೋಲಾರ್‌ ಬ್ಯಾಟ್ರಿ ಕಳವು:
 
     ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ  ನೆಲ್ಲಿಹುದಿಕೇರೆ ಗ್ರಾಮ ಪಂಚಾಯ್ತಿಗೆ ಸೇರಿದ  ನೆಲ್ಲಿಹುದಿಕೇರಿ ಗ್ರಾಮದ ಕಾವೇರಿ ಹೊಳೆಯ  ಸಮೀಪ ಕಾಲು ದಾರಿಗೆ ಅಳವಡಿಸಿದ ಸೋಲಾರ್‌ ಲೈಟ್‌ನ ಬ್ಯಾಟರಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಮಾಡಿಕೊಂಡು ಹೋಗಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Monday, December 30, 2013

ಅಕ್ರಮ ಮದ್ಯ ಮಾರಾಟಮಾರಾಟ, ಪ್ರಕರಣ ದಾಖಲು:

     ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸ್‌ ದಾಳಿ ನಡೆಸಿ ಪ್ರಕರಣ ದಾಖಲಿಸಿದ  ಬಗ್ಗೆ  ವರದಿಯಾಗಿದೆ.  ದಿನಾಂಕ 29-12-2013 ರಂದು ಆರ್‌ ಮಂಚಯ್ಯ, ಎಎಸ್‌ಐ, ಶನಿವಾರಸಂತೆ ಪೊಲೀಸ್‌ ಠಾಣೆ ಇವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ  ಶನಿವಾರಸಂತೆಯ ಚಿನ್ನಳ್ಳಿ ರಸ್ತೆಯಲ್ಲಿ ವ್ಯಕ್ತಿಯೋರ್ವ ಸರಕಾರ ಯಾವುದೇ ಪರವಾನಗಿ ಇಲ್ಲದೆ ಪ್ಲಾಸ್ಟಿಕ್ ಚೀಲದಲ್ಲಿ ಬ್ರಾಂದಿ ಕ್ವಾಟರ್ ಗಳನ್ನು ಮಾರಾಟ ಮಾಡುತ್ತಿದ್ದುದನ್ನು ಸಿಬ್ಬಂದಿಯೊಂದಿಗೆ ಪತ್ತೆಹಚ್ಚಿ  ಸದರಿ  ಬ್ರಾಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು, ಆತನ ವಶದಲ್ಲಿದ್ದ  180 ಎಂ.ಎಲ್ ನ Old Admiral Brandy ಹೆಸರಿನ  5 ಟೆಟ್ರಾ ಪ್ಯಾಕ್,  90 ಎಂ.ಎಲ್ ನ Old Admiral Brandy ಹೆಸರಿನ  10 ಪ್ಲಾಸ್ಟಿಕ್ ಬಾಟಲ್,  90 ಎಂ.ಎಲ್ ನ Orginal Choice ಹೆಸರಿನ 96 ಸ್ಟ್ಯಾಂಡ್ ಪ್ಯಾಕ್  ಹಾಗೂ 90 ಎಂ.ಎಲ್ ನ  Orginal Choice ಹೆಸರಿನ 96 ಪ್ಲಾಸ್ಟಿಕ್ ಬಾಟಲ್ ಗಳನ್ನು ವಶಪಡಿಸಿಕೊಂಡು  ಪ್ರಕರಣ ದಾಖಲಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಮೋಟಾರ್‌ ಸೈಕಲ್‌ ಡಿಕ್ಕಿ, ಪಾದಾಚಾರಿ ಸಾವು:
     ವಾಯುವಿಹಾರಕ್ಕೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಮೋಟಾರ್‌ ಸೈಕಲ್‌ ಡಿಕ್ಕಿಯಾಗಿ  ಮೃತಪಟ್ಟ ಘಟನೆ ಪೊನ್ನಂಪೇಟೆ ನಗರದಲ್ಲಿ ನಡೆದಿದೆ.  ದಿನಾಂಕ 29-12-2013 ರಂದು ಎ. ಜೋಯಪ್ಪ ಎಂಬುವವರು ತನ್ನ ಸಹೋದರ ಬಿ.ಎ. ಬೆಳ್ಳಿಯಪ್ಪನವರೊಂದಿಗೆ   ಸಂಜೆ 6.30 ಗಂಟೆಯ ಸಮಯದಲ್ಲಿ ವಾಯುವಿಹಾರಕ್ಕೆಂದು ಪೊನ್ನಂಪೇಟೆ ಮುಖ್ಯರಸ್ತೆಯ ಕೊಡವ ಸಮಾಜದ ಮುಂದೆ ರಸ್ತೆಯ ಪುಟ್‌ಬಾತ್‌ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಪೊನ್ನಂಪೇಟೆ ಕಡೆಯಿಂದ KA-45-J-5693 ರ ಮೋಟಾರ್ ಸೈಕಲ್‌ನ್ನು ಅದರ ಸವಾರ ತನ್ನೊಂದಿಗೆ ಇನ್ನಿಬ್ಬರನ್ನು ಕೂರಿಸಿಕೊಂಡು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೆಳ್ಳಿಯಪ್ಪನವರಿಗೆ ಡಿಕ್ಕಿಪಡಿಸಿದ ಪರಿಣಾಮ ಬೆಳ್ಳಿಯಪ್ಪನವರು  ಕೆಳಗೆ ಬಿದ್ದು ಬೆಳ್ಳಿಯಪ್ಪನವರ ಮುಖಕ್ಕೆ ಗಂಭೀರ ಗಾಯವಾಗಿ ಬಾಯಿ, ಮೂಗು, ಕಿವಿಯಿಂದ ವಿಪರೀತ ರಕ್ತ ಸ್ರಾವ ವಾಗಿ ಪ್ರಜ್ಞಾಹೀನರಾಗಿದ್ದು ನಂತರ ಅವರನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ 
 

Friday, December 27, 2013


ಮಹಿಳೆಮೇಲೆ ದೌರ್ಜನ್ಯ, ಪ್ರಕರಣ ದಾಖಲು:

    ಮಹಿಳೆಯೊಬ್ಬರಿಗೆ ತನ್ನ ಪತಿ ಹಾಗೂ ಅತ್ತೆ  ಮಾನಸಿಕ ಹಾಗು ದೈಹಿಕ ಹಿಂಸೆ ನೀಡಿರುವ ಹಿನ್ನೆಲೆಯಲ್ಲಿ ಆಕೆ  ಮನನೊಂದು ಸೀಮೆಎಣ್ಣೆಸುರಿದು ಬೆಂಕಿಹಚ್ಚಿಕೊಂಡ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೇಕೇರಿ ಗ್ರಾಮದಲ್ಲಿ ನಡೆದಿದೆ.  ಮೇಕೇರಿ ಗ್ರಾಮದ ನಿವಾಸಿ ಶ್ರೀಮತಿ  ವಿ.ಜೆ  ಸಂದ್ಯಾ ಎಂಬುವವರು ಈಗ್ಗೆ ಸುಮಾರು 6 ತಿಂಗಳ ಹಿಂದೆ ಮೇಕೇರಿ ಗ್ರಾಮದ ಆನಂದರವರ ಹಿರಿಯ ಮಗ ಜೀವನ್‌ರವರೊಂದಿಗೆ ಮದುವೆಯಾಗಿದ್ದು  ಆಕೆಯ ಗಂಡ ಜೀವನ್‌ ಮತ್ತು ಅತ್ತೆ ದೇವಕ್ಕಿಯವರು ಮದುವೆಯಾದ ನಂತರ ಸ್ವಲ್ಪ ಸಮಯದವರೆಗೆ ಅನ್ಯೋನ್ಯತೆಯಿಂದ ಇದ್ದು ನಂತರದ ದಿನಗಳಲ್ಲಿ ನೀನು ಚೆನ್ನಾಗಿಲ್ಲ, ನೀನು ಸರಿ ಇಲ್ಲ, ನೀನು ಅಡುಗೆ ಮಾಡುವುದು ಸರಿ ಇಲ್ಲ, ಎಂಬಿತ್ಯಾದಿಯಾಗಿ ಹೇಳಿಕೊಂಡು ದೈಹಿಕ ಹಾಗು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದು ಈ ವಿಷಯವನ್ನು  ಸಂದ್ಯಾರವರು ತನ್ನ ತಾಯಿ ಜಾನು ಹಾಗು ಅಕ್ಕ ಕೌಸಲ್ಯರವರಿಗೆ ತಿಳಿಸಿದ್ದು ಅವರು ಚೆನ್ನಾಗಿರುವಂತೆ ಪತಿಯವರಿಗೆ ಮತ್ತು ಅತ್ತೆಯವರಿಗೆ   ಬುದ್ದಿವಾದ ಹೇಳಿದರೂ ಕೇಳುತ್ತಿರಲಿಲ್ಲ.  ನಂತರ  ದಿನಾಂಕ 26-12-2013 ರಂದು ಸಂದ್ಯಾರವರು  ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಪುಕಾರು ನೀಡಿದ ವಿಷಯವಾಗಿ ಆಕೆಯ ಗಂಡ ಹಾಗು ಅತ್ತೆ ಸಂದ್ಯಾರವರಿಗೆ ಅವ್ಯಾಚ ಶಬ್ದಗಳಿಂದ ಬೈದು ನೀನು ನಮ್ಮ ಮನೆಗೆ ಬರಬೇಡ, ನೀನು ಬೇರೆ ಜಾತಿ ಎಂದು ಹೇಳಿದ್ದು  ಸಂದಾಯ ಇದರಿಂದ ಮನನೊಂದು ಸೀಮೆಎಣ್ಣೆಯನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು  ನಂತರ ಚಿಕಿತ್ಸೆಯ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನತನಿಖೆ ಕೈಗೊಂಡಿರುತ್ತಾರೆ. 

Thursday, December 26, 2013

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:

 
     ತನ್ನ ತಂದೆಯವರ ಬಗ್ಗೆ ಮಾತನಾಡಿದ  ಬಗ್ಗೆ ವಿಚಾರಿಸಿ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ  ಪೊನ್ನಂಪೇಟೆ ಪೊಲೀಸ್‌ ಠಾಣಾ ಸರಹದ್ದಿನ  ಮತ್ತೂರು ಗ್ರಾಮದಲ್ಲಿ ನಡೆದಿದೆ. ಮತ್ತೂರು ಗ್ರಾಮದ ನಿವಾಸಿ ಕೊರಕುಟೀರ ಬಿ ಉತ್ತಪ್ಪ ತಂದೆ ಕೆ.ಎ.ಬೋಪಯ್ಯ, ಪ್ರಾಯ 25 ವರ್ಷ  ಇವರು ದಿನಾಂಕ 25/12/2013 ರಂದು ಸಂಜೆ ಪೊನ್ನಂಪೇಟೆ ನಗರದ ಶಬರಿ ವೈನ್ಸ್ ಅಂಗಡಿಗೆ ಹೋಗಿ ಅಲ್ಲಿಂದ ಹೊರಗೆಬಂದು  ತನ್ನ ತಂದೆಯವರ ವಿಷಯವನ್ನು ಏಕೆ ಮಾತನಾಡಿದಿರಿ ಎಂಬುದಾಗಿ   ರಂಜನ್, ಮಂಜು, ಮತ್ತು ಸುಭಾಷ್ ಎಂಬುವರುಗಳಲ್ಲಿ ವಿಚಾರಿಸಿದ ಸಂದರ್ಭದಲ್ಲಿ  ಸದರಿಯವರುಗಳು  ಬಿ. ಉತ್ತಪ್ಪ ನವರಲ್ಲಿ   ಜಗಳ ತೆಗೆದು  ಹಲ್ಲೆ ನಡೆಸಿರುತ್ತಾರೆ.  ಈ ವಿಚಾರವಾಗಿಪೊನ್ನಂಪೇಟೆ ಪೊಲೀಸರು ಪ್ರಕರಣವನ್ನುದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ದ್ವೇಷದ ಹಿನ್ನಲೆ,   ವ್ಯಕ್ತಿಯ ಮೇಲೆ ಹಲ್ಲೆ ಕೊಲೆ ಬೆದರಿಕೆ:  

   ಸತೀಶ್‌ ಕುಮಾರ್‌ಎಂಬುವವರು  ಮಡಿಕೇರಿ ನಗರದಲ್ಲಿ  ನಡೆಸುತ್ತಿದ್ದ ತಾಂಡಂವ ನೃತ್ಯ ಅಕಾಡೆಮಿ ಶಾಲೆಗೆ ಮಡಿಕೇರಿ ನಗರ ವಾಸಿ  ಹರೀಶ್‌ ಪಳಂಗಪ್ಪ ಹಾಗೂ ಸರಿತಾ ಎಂಬುವವರ ಮಗ ದಿವಿನ್‌ ಎಂಬಾತನು ನೃತ್ಯಾಭ್ಯಾಸಕ್ಕಾಗಿ ಸೇರಿಸಿದ್ದು, ಸರಿತಾರವರು ಸತೀಶ್‌ಕುಮಾರ್‌ವರು  ತನ್ನ ಮಗನಿಗೆ ನೃತ್ಯವನ್ನು  ಸರಿಯಾಗಿ ಕಲಿಸುತ್ತಿಲ್ಲವೆಂದು  ಅಪಾದನೆ ಮಾಡಿದ ಕಾರಣಕ್ಕಾಗಿ ದಿವಿನ್‌ನನ್ನು ನೃತ್ಯ ಶಾಲೆಯಿಂದ ತೆಗೆದು ಹಾಕಿದ್ದು,   ದಿನಾಂಕ 23-8-2013 ರಂದು ಸಮಯ 16.00 ಗಂಟೆಗೆ ಹರೀಶ್‌ ಪಳಂಗಪ್ಪ ಹಾಗೂ ಸರಿತಾರವರು ಇತರೆ ಕೆಲವು ವ್ಯಕ್ತಿಗಳೊಂದಿಗೆ ಸತೀಶ್‌ ಕುಮಾರ್‌ರವರ  ನೃತ್ಯ ಶಾಲೆಗೆ ಬಂದು ಸ್ಟುಡಿಯೋದಲ್ಲಿದ್ದ ದಾಖಲಾತಿಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಲ್ಲದೇ, ನೆನಪಿನ ಕಾಣಿಕೆ, ಕಪ್,  ಶೀಲ್ಡ್‌ಗಳನ್ನು ಕಳ್ಳತನ ಮಾಡಿದ್ದು ಇದನ್ನು ತಡೆಯಲು ಹೋದ ಸತೀಶ್‌ ಕುಮಾರ್‌ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ  ಬೈದು ಕೊಲೆ ಬೆದರಿಕೆ ಹಾಕಿದ್ದಲ್ಲದೇ, ಬಲತ್ಕಾರವಾಗಿ ಕೆಲವು ಖಾಲಿ ಹಾಳೆಗೆ ಸಹಿ ಪಡೆದುಕೊಂಡಿರುವ ವಿಚಾರದಲ್ಲಿ ಸತೀಶ್‌ ಕುಮಾರ್‌ವರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನ ಮೇರೆಗೆ ನ್ಯಾಯಾಲಯದ ಆದೇಶದಂತೆ  ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Monday, December 23, 2013

ರಾಜಕೀಯ ದ್ವೇಷ  ಪರಸ್ಪರ ಹಲ್ಲೆ:

       ಚುನಾವಣಾ ಪ್ರಚಾರದ ವಿಚಾರದಲ್ಲಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಜಗಳ ಏರ್ಪಟ್ಟು ಹಲ್ಲೆಗೊಳಗಾದ ಇಬ್ಬರಿಗೆ ಗಾಯಗಳಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.  ಖಲೀಲ್‌ ಪಾಷಾ ತಂದಿ ಮೊಹಮ್ಮದ್‌, ಅಜಾದ್‌ ನಗರ ಇವರು  ದಿನಾಂಕ 22-12-2013 ರಂದು ಸಮಯ 02.30 ಪಿ ಎಂ ಗೆ ಜಲೀಲ್ ಮನ್ಸೂರ್ ಹಾಗೂ ಇತರರೊಂದಿಗೆ ಮಡಿಕೇರಿ ನಗರ ಸಭಾ ಚುನಾವಣೆಯ ಸಂಬಂಧ  ಆಜಾದ್ ನಗರದ ಉಕ್ಕುಡ ರಸ್ತೆಯಲ್ಲಿ ಮತಗಟ್ಟೆಯಿಂದ 200 ಮೀಟರ್ ದೂರದ ಲೈನಿಂದ ಹೊರಗಡೆ ಇದ್ದಾಗ ಕಾಂಗ್ರೇಸ್ ಪಕ್ಷದ ಜಕ್ರಿಯಾ ರವರು ಮತ ಯಾಚನೆ ಮಾಡುತ್ತಿದ್ದುದನ್ನು ಕಂಡು  ಮನ್ಸೂರ್ ರವರು ನೀವು ಲೈನಿನ ಓಳಗಡೆ ಕ್ಯಾನವಸ್ ಮಾಡುವುದು ಬೇಡ ಈ ಕಡೆ ಬನ್ನಿ ಬಾರದಿದ್ದರೆ ಚುನಾವಣಾ ಅಧಿಕಾರಿಗೆ ಫೋನ್ ಮಾಡುತ್ತೇವೆ ಎಂದು ಹೇಳಿದ್ದು  ಬೇರೆ ಪಕ್ಷಕವರಾದ ನೌಫಲ್‌, ಜಕ್ರಿಯಾ, ರಿಜ್ವಾನ್‌ ಹಾಗು ಮುಭಾರಕ್‌ ಎಂಬುವವರು ಸೇರಿ  ಖಲೀಲ್‌ ಪಾಷಾ ಹಾಗೂ ಮನ್ಸೂರ್‌ರವರ ಮೇಲೆ ಕೈಗಳಿಂದ ಹಾಗೂ ವಿಂಡೋ ಸಿಲ್ವರ್‌ ಬೀಡಿಂಗ್‌ ನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದು ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮನೆಯಿಂದ ಚಿನ್ನಾಭರಣ ಕಳವು ಪ್ರಕರಣ ದಾಖಲು:

      ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಯ ಚಿಕ್ಕಕೊಳತ್ತೂರು ಗ್ರಾಮದ ನಿವಾಸಿ  ಸಿ.ಎಸ್‌. ಫವನ್‌ ಕುಮಾರ್‌ ರವರ ಮನೆಯ ಹೆಂಚುಗಳನ್ನು ತೆಗೆದು ಮನೆಯೊಳಗೆ ಪ್ರವೇಶಿಸಿ ಮನೆಯ ಬೀರುವಿನ ಬೀಗವನ್ನು ಮುರಿದು ಒಟ್ಟು 47,000/- ರೂ ಮೌಲ್ಯದ ಚಿನ್ನಾಭರಣ ಹಾಗು ನಗದು ರೂ.2000/- ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Thursday, December 19, 2013

ಮನುಷ್ಯ ಕಾಣೆ ಪ್ರಕರಣಗಳು:

     ಮದುವೆಗೆಂದು ಹೋದ ವ್ಯಕ್ತಿ ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಅಭ್ಯತ್‌ಮಂಗಲ ಗ್ರಾಮದಿಂದ ವರದಿಯಾಗಿದೆ.  ಅಭ್ಯತ್‌ಮಂಗಲ ಗ್ರಾಮದ ನಿವಾಸಿ ಎರವರ ಬೆಳ್ಳಿಯವರ   ಮಗ ಪ್ರಾಯ 19 ವರ್ಷದ ಅಣ್ಣು ಎಂಬುವನು ದಿನಾಂಕ 8-12-2013 ರಂದು ತಮ್ಮ ಸಂಬಂಧಿಕರ ಮದುವೆಗೆಂದು ಗೋಣಿಕೊಪ್ಪಕ್ಕೆ ತೆರಳಿದ್ದು ಆತ ಮದುವೆಗೆ ಹೋಗದೆ ಮರಳಿ ಮನೆಗೂ ಬಾರದೆ ಕಾಣೆಯಾಗಿದ್ದು ಈ ಸಂಬಂಧ  ದಿನಾಂಕ 18-12-2013 ಎಅರವರ ಬೆಳ್ಳಿಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
 
     ವಿರಾಜಪೇಟೆ ನಗರದ ತೆಲುಗರ ಬೀದಿ ನಿವಾಸಿ ರೂಪೇಶ್‌ ಎಂಬುವವರಿಗೆ ದಿನಾಂಕ 28-11-2013 ರಂದು ರಾತ್ರಿ ಸಮಯ 9-30 ಪಿ.ಎಂ ಗೆ ಮನೆಯಿಂದ  ಹೊರಗಡೆ ಬಂದಾಗ ಮೋಟಾರ್ ಬೈಕ್‌ ತಾಗಿ  ಗಾಯವಾಗಿದ್ದು ಈ ಬಗ್ಗೆ ವಿರಾಜಪೇಟೆ ನಗರದ ವಾಸಿಗಳಾದ ಧನುಷ್‌, ಅಕ್ಷಯ್‌, ಮುಬಾರಕ್‌ ಮತ್ತು ಆಕಾಶ್‌ ಎಂಬುವವರು  ಕೈಯಿಂದ ಮತ್ತು ಕಲ್ಲಿನಿಂದ ಮುಖಕ್ಕೆ ಮತ್ತು ಹಣೆಯ ಎಡ ಭಾಗಕ್ಕೆ ಹೊಡೆದು ಗಾಯಪಡಿಸಿದ್ದು, ಈ ಸಂಬಂಧ ರೂಪೇಶ್‌ ರವರು ಈ ದಿನ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ

Wednesday, December 18, 2013

ಅಪಘಾತ ಪ್ರಕರಣ:

    ಆಟೋ ರಿಕ್ಕಾಕ್ಕೆ ಜೀಪು ಡಿಕ್ಕಿಯಾಗಿ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 4 ಮಂದಿಗೆ ಗಾಯಗಳಾದ ಘಟನೆ ಮಡಿಕೇರಿ ನಗರದ ಅಶೋಕಪುರದಲ್ಲಿ ನಡೆದಿದೆ.  ದಿನಾಂಕ 17-12-13 ರಂದು ರಫಿಕ್‌, ಇಬ್ನಿವಳವಾಡಿ ಗ್ರಾಮ ಇವರು ತಮ್ಮ  ಬಾಪ್ತು ಆಟೋ ರಿಕ್ಷಾದಲ್ಲಿ ಪತ್ನಿ ಹಾಗೂ ಮನೆಯವರೊಂದಿಗೆ  ಮಡಿಕೇರಿ ನಗರದ ಅಶೋಕಪುರದ ಕಡೆಗೆ ಹೋಗುತ್ತಿದ್ದಾಗ  ಒಂದು ಪಿಕ್ ಜೀಪು ಸಂಖ್ಯೆ ಕೆ ಎ 12 5899 ರ ಚಾಲಕನು ಜೀಪನ್ನು ಸಿದ್ದಾಪುರ ರಸ್ತೆ ಕಡೆಯಿಂದ  ಅತೀ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಡಿಕೊಂಡು ಬಂದು ಆಟೋ ರಿಕ್ಷಾಗೆ ಡಿಕ್ಕಿ ಪಡಿಸಿ ಜೀಪನ್ನು ನಿಲ್ಲಿಸದೆ ಹೋಗಿದ್ದು ಇದರ ಪರಿಣಾಮವಾಗಿ ರಫಿಕ್‌ರವರ ಆಟೋ ರಿಕ್ಷಾ ಜಖಂಗೊಂಡಿದ್ದಲ್ಲದೆ ಆಟೋ ರಿಕ್ಷಾದಲ್ಲಿದ್ದ ರಫಿಕ್‌ರವರ ಮಂಡಿಯ ಭಾಗಕ್ಕೆ ರಕ್ತಗಾಯವಾಗಿದ್ದು ಅಲ್ಲದೆ ರಿಕ್ಷಾದಲ್ಲಿ ಇದ್ದ  ರಮ್ ಲತ್,  ನಸೀರ, ಅಜ್ಜಿ ಆಯಿಷಾರವರಿಗೂ  ಗಾಯಗಳಾಗಿದ್ದು ರಫಿಕ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಟ್ರಾಫಿಕ್‌ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಅಸ್ವಾಭಾವಿಕ ಮರಣ:


       ವ್ಯಕ್ತಿಯೋರ್ವ ಕೆರೆಯಲ್ಲಿ ಸ್ನಾನ ಮಾಡುತ್ತಿರುವ ವೇಳೆ ಆಕಸ್ಮಿಕವಾಗಿ ಜಾರಿ ಕೆರೆಗೆ ಬಿದ್ದು ಸಾವನಪ್ಪಿದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 17.12.2013ರಂದು  ಹೊಸೂರು ಬೆಟ್ಟಗೇರಿ  ಗ್ರಾಮದ ಮುರುವಂಡ ಮುತ್ತಣ್ಣರವರ ಲೈನ್ ಮನೆಯಲ್ಲಿ ವಾಸವಾಗಿರುವ ಜೇನುಕುರುಬರ  ಕುಮಾರ ಎಂಬುವವರು  ಕೆರೆಯಲ್ಲಿ  ಸ್ನಾನ  ಮಾಡುತ್ತಿರುವಾಗ್ಗೆ ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು  ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

Tuesday, December 17, 2013


 ವ್ಯಕ್ತಿಯ ಜಾತಿ ನಿಂದಿಸಿ ಕೊಲೆ ಬೆದರಿಕೆ:

    ವ್ಯಕ್ತಿಯೊಬ್ಬರು ತಮ್ಮ ಮನೆಯ ಹತ್ತಿರ ವಾಸಮಾಡುವ ವಿಚಾರದಲ್ಲಿ ವ್ಯಕ್ತಿಯೊಬ್ಬರ ಜಾತಿ ನಿಂದಿಸಿ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಗಾಳಿಬೀಡುಗ್ರಾಮದಲ್ಲಿ ನಡೆದಿದೆ.  ಪರಿಶಿಷ್ಠ ಪಂಗಡಕ್ಕೆ ಸೇರಿದ ಅನಂತ ಕುಮಾರ್‌ ಎಂಬುವವರು ತನ್ನ ಸಂಸಾರದೊಂದಿಗೆ  ಗಾಳಿಬೀಡು ಗ್ರಾಮದಲ್ಲಿ ವಾಸವಾಗಿದ್ದು ಅವರ ಮನೆಯ ಹತ್ತಿರ ಕಾಂತರಾಜು ಎಂಬುವವರು ಅವರ ಸಂಸಾರದೊಂದಿಗೆ ವಾಸಿಸುತ್ತಿದ್ದು ಕಾಂತರಾಜುರವರು  ಅನಂತಕುಮಾರ್‌ ರವರಿಗೆ ನೆ ಬಿಟ್ಟುಹೋಗುವಂತೆ ಈ ಹಿಂದಿನಿಂದಲೂ ವಿನಾ ಕಾರಣ ಜಗಳ ಮಾಡುತ್ತಿದ್ದು  ದಿನಾಂಕ 16-12-2013 ರಂದು ಸಮಯ ಸುಮಾರು ರಾತ್ರಿ 09-00 ಗಂಟೆಗೆ ಅನಂತಕುಮಾರ್‌ರವರು  ಹಾಗೂ ಅವರ ಹೆಂಡತಿ ಜಯಲಕ್ಷ್ಮಿಯವರು ಮನೆಯಲ್ಲಿ ಇರುವಾಗ್ಗೆ ಕಾಂತರಾಜುರವರು  ಮನೆಯ ಮುಂದಿನ ಆವರಣಕ್ಕೆ ಬಂದು ಅವಾಚ್ಯವಾಗಿ ನಿಂದಿಸಿದ್ದು ಅಲ್ಲದೆ  ನಿನ್ನನ್ನು ಹಾಗೂ ನಿನ್ನ ಹೆಂಡತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುವ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮಕೈಗೊಂಡಿರುತ್ತಾರೆ. 

ಆಸ್ತಿ ವಿಚಾರದಲ್ಲಿ ಅಣ್ಣನಿಗೆ ತಮ್ಮಂದಿರಿಂದ ಹಲ್ಲೆ:

     ಭಾಗಮಂಡಲ ಪೊಲೀಸ್‌ ಠಾಣಾ ವ್ಯಾಪ್ತಿಯ ದೊಡ್ಡಪುಲಿಕೋಟು ಗ್ರಾಮದಲ್ಲಿ ವಾಸವಾಗಿರುವ ಪೊನ್ನುಕಂಡ ರಾಮಯ್ಯ ಎಂಬುವವರು ದಿನಾಂಕ 15-12-2013 ರಂದು ರಾತ್ರಿ  ಹುತ್ತರಿ ಹಬ್ಬದ ನಿಮಿತ್ತ ಕದುರನ್ನು ತೆಗೆದುಕೊಂಡು ತನ್ನ ಮನೆಯವರೊಂದಿಗೆ ಹೋಗುತ್ತಿದ್ದಾಗ ಅವರ ಸಹೋದರರಾದ  ಪೊನ್ನುಕಂಡ ಸುಬ್ಬಯ್ಯ ಹಾಗು ಗುರುವಪ್ಪ ಎಂಬವರುಗಳು  ರಾಮಯ್ಯನವರ ದಾರಿ ತಡೆದು  ಅವಾಚ್ಯ ಶಬ್ದಗಳಿಂದ ಬೈದು ಆಸ್ತಿಯನ್ನು ಸರಿಯಾಗಿ ಪಾಲು ಮಾಡಿಕೊಡಲಿಲ್ಲ ವೆಂದು  ದೊಣ್ಣೆಯಿಂದ ಹಲ್ಲೆನಡೆದಿದ್ದು  ಈ ಸಂಬಂಧ ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   

ಮೋಟಾರ್‌ ಸೈಕಲ್‌ಗೆ ಆಟೋ ರಿಕ್ಷಾ ಡಿಕ್ಕಿ ಸವಾರರಿಗೆ ಗಾಯ:

     ದಿನಾಂಕ 15-12-2013 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ನಾಂಗಾಲ ಗ್ರಾಮದ ನಿವಾಸಿ ಪಿ.ಸಿ. ಮಾಚಯ್ಯನವರು  ಗಣಪತಿ ಎಂಬುವವರೊಂದಿಗೆ ಮೋಟಾರ್‌ ಸೈಕಲ್‌ನಲ್ಲಿ  ವಿರಾಜಪೇಟೆಯಿಂದ  ಮನೆಗೆ ಹೋಗುತ್ತಿರುವ ವೇಳೆ ಬಿಟ್ಟಂಗಾಲ  ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ವಿರಾಜಪೇಟೆ ಕಡೆಗೆ ಹೋಗುತ್ತಿದ್ದ ಕೆಎ.12.7691ರ ಆಟೋ ರಿಕ್ಷಾ ಚಾಲಕನು ಸದ್ರಿ ಆಟೋ ರಿಕ್ಷಾ ವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಸವಾರರಿಬ್ಬರಿಗೂಗಾಯಗಳಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನಕ್ರಮ ಕೈಗೊಂಡಿರುತ್ತಾರೆ. 

Monday, December 16, 2013


ಮೋಟಾರ್‌ ಸೈಕಲ್‌ಗೆ ಆಟೋ ಡಿಕ್ಕಿ, ಸವಾರನ ದುರ್ಮರಣ:

ದಿನಾಂಕ 15-12-2013 ರಂದು ಸಮಯ 05.30 ಗಂಟೆಗೆ ಸೈಯದ್‌ ರಫೀಕ್‌ (32) , ತಂದೆ ಸೈಯದ್‌ ಆಲಿ, ತ್ಯಾಗರಾಜ ಕಾಲೋನಿ, ಶನಿವಾರಸಂತೆ ವಾಸಿ ಇವರು   ಶನಿವಾರಸಂತೆಯಿಂದ ಕೊಡ್ಲಿಪೇಟೆ ಕಡೆಗೆ ಕೆಎ-12-ಇ-808 ರ ಬೈಕಿನಲ್ಲಿ ಹೋಗುತ್ತಿರುವಾಗ ಕಣ್ಣಾರಳ್ಳಿ ಗ್ರಾಮದ ಬಳಿ     ಎದುರುಗಡೆಯಿಂದ ಕೆಎ-12-ಎ-8805ರ ಟಾಟಾ ಎಸಿ ಆಟೋವನ್ನು ಅದರ ಚಾಲಕ ಅತೀವೇಗ ಹಾಗು ಅಜಾಗರುಕತೆಯಿಂದ ಚಾಲಿಸಿಕೊಂಡು ಬಂದು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಸೈಯದ್‌ ರಫೀಕ್‌ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  
ಟ್ರಾಕ್ಟರ್‌ ಅಪಘಾತ ಒಬ್ಬ ವ್ಯಕ್ತಿಯ ದುರ್ಮರಣ, 6 ಮಂದಿಗೆ ಗಾಯ:

ದಿನಾಂಕ 15-12-13ರಂದು ಪಿರ್ಯಾದಿ ಹಾಗೂ ಪ್ರಕಾಶ್,ಸುಜಿತ್, ನಾಗಪ್ಪ, ಸಂಗಪ್ಪ, ಮನು, ಮಣಿ, ಹಾಗೂ ಸೋಮಶೇಖರ್ ರವರೊಂದಿಗೆ ಪ್ರಕಾಶ್ ರವರ ಬಾಪ್ತು ಟ್ರಾಕ್ಟರ್ ನಲ್ಲಿ ಪೂಜೆ ಮಾಡಲು ಬಾಳುಗೋಡು ಗ್ರಾಮದಿಂದ ಟ್ರಾಕ್ಟರ್   ಟಿಲ್ಲರ್ ನಂ. ಕೆಎ.45.7124ರಲ್ಲಿ ಮಾಕುಟ್ಟದ ಆಂಜನೇಯ ದೇವ ಸ್ಥಾನಕ್ಕೆ  ಪ್ರಕಾಶ್ ರವರು ಚಾಲನೆ ಮಾಡಿಕೊಂಡು ಪೆರುಂಬಾಡಿಯಿಂದ 2ಕಿ.ಮೀ. ಮಾಕುಟ್ಟದ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ, ಟ್ರಾಕ್ಟರ್ ಚಾಲಕ ಸದರಿ ಟ್ರಾಕ್ಟರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ತಿರುವು ರಸ್ತೆಯ ಬದಿಯಲ್ಲಿ ಒಂದು ಕಲ್ಲಿಗೆ ಟ್ರಾಕ್ಟರ್ ನ ಟ್ರೈಲರ್‌ ಚಕ್ರ ತಾಗಿ ಟ್ರಾಕ್ಟರ್ ಹಾಗೂ ಟೈಲರ್ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಟ್ರಾಕ್ಟರ್‌ನಲ್ಲಿದ್ದ  7 ಮಂದಿಗೆ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗೆ ವಿರಾಜಪೇಟೆ  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆವೇಳೆಯಲ್ಲಿ ಸಂಗಪ್ಪ ನವರು ಚಿಕಿತ್ಸೆ ಮೃತಪಟ್ಟಿದ್ದು  ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕಾರಿಗೆಮೋಟಾರ್‌ ಸೈಕಲ್‌ ಡಿಕ್ಕಿ ಸವಾರರಿಗೆ ಗಾಯ:

ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ  ಕೊಟ್ಟಗೇರಿ ಗ್ರಾಮದ ವಾಸಿ ಎಂ.ಎ. ಪೂಣಚ್ಚ ಎಂಬುವವರು  ದಿನಾಂಕ 15/12/2013 ರಂದು ಸ್ವಂತ ಕೆಲಸದ ನಿಮಿತ್ತ  ತಮ್ಮ ಬಾಪ್ತು ಕಾರು ನಂ.ಕೆಎ-12-ಪಿ-3281 ರಲ್ಲಿ ಪೊನ್ನಂಪೇಟೆ ಕಡೆಗೆ ಹೋಗುತ್ತಿದ್ದಾಗ  ಸಮಯ ಬೆಳಿಗ್ಗೆ 11.15 ಗಂಟೆಗೆ ಕಾನೂರಿನ ಚೈನ್‌ಗೇಟ್ ತಿರುವಿನ ಬಳಿ ಎದುರುಗಡೆಯಿಂದ ಕೆಎ-12-ಎಲ್-0976 ರ ಮೋಟಾರ್ ಸೈಕಲ್ ಚಾಲಕ 2 ಜನರನ್ನು ಕೂರಿಸಿಕೊಂಡು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ್ದು, ಮೋಟಾರ್ ಸೈಕಲ್‌ನಲ್ಲಿದ್ದ 3 ಜನರು ಕೆಳಗೆಬಿದ್ದು ಗಾಯಗೊಂಡಿದ್ದು  ಸದರಿಯವರನ್ನು ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಪೊನ್ನಂಪೇಟೆಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮೋಟಾರ್‌ ಸೈಕಲ್‌ಗೆ ಆಟೋ ಡಿಕ್ಕಿ ಇಬ್ಬರಿಗೆ ಗಾಯ:

      ಎಂ.ಆರ್‌. ರತೀಶ್‌ ಎಂಬುವವರು ತನ್ನ ಸ್ನೇಹಿತ ಎಂ ಹೆಚ್ ಸತೀಶರವರೊಂದಿಗೆ ಕೆಎ-12-ಕೆ-6855 ರ ಹೀರೋ  ಹೋಂಡಾ ಮೋಟಾರು ಸೈಕಲಿನಲ್ಲಿ ಮುರ್ನಾಡುವಿಗೆ ಹೋಗಿ ಸಾಮಾನು ತೆಗೆದುಕೊಂಡು ವಾಪಾಸ್ಸು ಹಾಕತ್ತೂರು 
ಕಡೆಗೆ ಬರುತ್ತಿದ್ದು ಮುರ್ನಾಡು ನಗರದ ಬಸ್ಸು ನಿಲ್ದಾಣದ ಸಾರ್ವಜನಿಕ ರಸ್ತೆಯಲ್ಲಿ ತಲುಪುವಾಗ ಎದುರುಗಡೆಯಿಂದ 
ಕೆಎ-12-ಎ-8045 ರ ಆಟೋವನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು 
ಬಂದು ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್‌ ಸೈಕಲ್‌ನಲ್ಲಿದ್ದ ಇಬ್ಬರೂ ಕೆಳಗೆ ಬಿದ್ದಿದ್ದು   ರತೀಶ್‌
ರವರ ತಲೆಯ ಹಿಂಭಾಗ, ಮುಖದ ಎಡಭಾಗ, ಕಣ್ಣು ಹಾಗೂ ಎಡ ಕೈಯ ಬೆರಳು, ಮೊಣಕೈಗೆ, ಎಡ ಕಾಲಿಗೆ 
ರಕ್ತ ಗಾಯವಾಗಿದ್ದು, ಮೋಟಾರು ಸೈಕಲನ್ನು ಚಾಲನೆ ಮಾಡುತ್ತಿದ್ದ ಸತೀಶರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಈ 
ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಡಿಕೇರಿ ಗ್ರಾಮಾಂತರಪೊಲೀಸರು ಪ್ರಕರಣವನ್ನು
ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 

Thursday, December 12, 2013

ಪಾದಾಚಾರಿಗೆ ಕಾರು ಡಿಕ್ಕಿ, ಗಾಯ:

     ಪಾದಾಚಾರಿಯೊಬ್ಬರಿಗೆ ಮಾರುತಿ ಕಾರು ಡಿಕ್ಕಿಯಾಗಿ ಗಾಯಗಳಾದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿಗೆ ಸೇರಿದ ಅಮ್ಮತ್ತಿ ನಗರದಲ್ಲಿ ನಡೆದಿದೆ. ದಿನಾಂಕ: 11-12-13ರಂದು ಸಮಯ 4-50ಗಂಟೆಗೆ ಕಾರ್ಮಾಡು ಅಮ್ಮತ್ತಿ ಗ್ರಾಮದ ನಿವಾಸಿ ಶ್ರೀಮತಿ ಹೆಚ್‌.ಆರ್‌. ವೆಂಕಟಮ್ಮ ಎಂಬುವವರು  ಅಮ್ಮತ್ತಿ ನಗರದಲ್ಲಿರುವ ಮೆಡಿಕಲ್ ಶಾಪ್ ಗೆ ನಡೆದುಕೊಂಡು ಹೋಗು ತ್ತಿದ್ದಾಗ ಗಣೇಶ ಮೆಡಿಕಲ್ ಮುಂಭಾಗದ ಸಾರ್ವಜನಿಕ ರಸ್ತೆಯ ಬಳಿ ತಲುಪುವಾಗ್ಗೆ, ಸಿದ್ದಾಪುರ ಕಡೆಯಿಂದ ಕೆಎ.02-3479ರ ಮಾರುತಿ 800 ಕಾರನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆ ಯಿಂದ ಚಾಲನೆ ಮಾಡಿ  ಡಿಕ್ಕಿಪಡಿಸಿದ ಪರಿಣಾಮ ವೆಂಕಟಮ್ಮನವರು  ರಸ್ತೆಗೆ ಬಿದ್ದು ಗಾಯಗೊಂಡಿದ್ದು  ಚಾಲಕನು ಅಪಘಾತಪಡಿಸಿ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿದ್ದು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   

Monday, December 9, 2013

ಅಕ್ರಮ ಪ್ರವೇಶ, ವ್ಯಕ್ತಿಯ ಮೇಲೆ ಹಲ್ಲೆ:

     ಕೂಲಿ ಹಣದ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ  ಮಡಿಕೇರಿ ಬಳಿಯ ಮಕ್ಕಂದೂರು ಗ್ರಾಮದಲ್ಲಿ ನಡೆದಿದೆ.  ಹೆಚ್‌.ಜಿ. ಸಂತೋಷ ಎಂಬುವವರು  ತನ್ನ ತಂದೆ ತಾಯಿಯವರೊಂದಿಗೆ ಕೂಲಿಕೆಲಸ ಮಾಡಿಕೊಂಡು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿಗೆ ಸೇರಿದ ಮಕ್ಕಂದೂರು ಗ್ರಾಮದಲ್ಲಿ ವಾಸವಾಗಿದ್ದು ದಿನಾಂಕ 07-12-2013 ರಂದು ಸಂಜೆ 7-30 ಗಂಟೆಗೆ ಮನೆಯಲ್ಲಿರುವಾಗ್ಗೆ ಪಕ್ಕದ ಮನೆಯವರಾದ ಕಾರ್ತಿಕ್‌, ದಿವ್ಯಾ, ಚಂದ್ರ, ಲೀಲಾ ಮತ್ತು ಕಾವ್ಯ ಎಂಬುವವರು ಸಂತೋಷ್‌ವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಕೂಲಿಕೆಲಸದ ಹಣದ ವಿಚಾರದಲ್ಲಿ ಜಗಳ ತೆಗೆದು ಅವ್ಯಾಚ ಶಬ್ದಗಳಿಂದ ಬೈದು ಕಾರ್ತಿಕ್‌ ಎಂಬುವವನು ತನ್ನ ಕೈಲ್ಲಿದ್ದ ಕತ್ತಿಯಿಂದ ಸಂತೋಷ್‌ರವರ ತಲೆಗೆ, ಎಡದವಡೆಗೆ ಕಡಿದು ಗಾಯವನ್ನುಂಟು ಮಾಡಿದ್ದು, ಉಳಿದವರು ಸಹ ಹಲ್ಲೆ ನಡೆಸಿದ್ದು  ಸಂತೋಷ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಮುಖಾಮುಖಿ ಡಿಕ್ಕಿ ಎರಡೂ ಕಾರುಗಳು ಜಖಂ:
     ಮೈಸೂರಿನ ನಿವಾಸಿ ಏಕಾಂಬರಂ ಎಂಬವರು ಅವರ ಬಾಪ್ತು ಕೆ.ಎ-55-3919 ಕಾರಿನಲ್ಲಿ ಮಡಿಕೇರಿ ಕಡೆಯಿಂದ ಮೈಸೂರು ಕಡೆಗೆ ದಿನಾಂಕ 8-11-2013 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ಪ್ರಯಾಣಿಸಿತ್ತಿದ್ದಾಗ ಮಡಿಕೇರಿ ನಗರ ಚೈನ್‌ ಗೇಟ್‌ ಬಳಿ ಎದುರುಗಡೆ ಯಿಂದ ಕೆಎ-12-ಕೆಎ-12-3223ರ ಕಾರನ್ನು ಅದರ ಚಾಲಕ ಜೇಕಬ್‌ ಕೊಲನೂರ ಜೋಸೆಫ್‌ ಎಂಬವರು ಅತೀ ವೇಗ ಹಾಗೂ ಅಜಾಗದೂಕತೆಯಿಂದ ಓಡಿಸಿಕೊಂಡು ಬಂದು ಏಕಾಂಬರಂ ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾದ ಎರಡೂ ಕಾರುಗಳು ಜಖಂಗೊಂಡಿದ್ದು ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಮನುಷ್ಯ ಕಾಣೆ, ಪ್ರಕರಣ ದಾಖಲು:
     ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಹೋದ ವ್ಯಕ್ತಿಯೊಬ್ಬರು ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಗ್ರಾಮದಿಂದ ವರದಿಯಾಗಿದೆ.  ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಮುಸ್ತಾಫ ಎಂಬುವವರು  ದಿನಾಂಕ  3-12-2013 ರಂದು ಬೆಳಿಗ್ಗೆ 08:00 ಗಂಟೆಗೆ ಪುಲಿಯೇರಿ ಗ್ರಾಮದ ನರಾಜ ಇವರ ಜೀಪು ಸಂಖ್ಯೆ ಕೆ.ಎ.28ಎಂ 1687 ರನ್ನು ಬಾಡಿಗೆಗೆ ತೆಗೆದುಕೊಂಡು ಹೋಗಿದ್ದು ಈವರೆಗೂ ಮರಳಿ ಮನೆಗೆ ಬಾರದೇ ಇದ್ದು, ಸದರಿಯವರ ಪತ್ನಿ ಶ್ರೀಮತಿ ಮೈಮುನಾರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   
ಆಕಸ್ಮಿಕ ಹಗ್ಗ ಕುತ್ತಿಗೆಗೆ ಬಿಗಿದು 14 ವರ್ಷ ಬಾಲಕ ದುರ್ಮರಣ:
    ಸೋಮವಾರಪೇಟೆ ತಾಲೋಕು, ಚೇರಳ ಶ್ರೀಮಂಗಲ ಗ್ರಾಮದಲ್ಲಿ ವಾಸವಾಗಿರುವ ಪಿ.ಎಂ. ಸಂಶುದ್ದೀನ್‌ ಎಂಬುವವರ ಮಗ 14 ವರ್ಷ ಪ್ರಾಯದ ಸಿರಾಜ್‌‌ನು ತಮ್ಮ ಮನೆಯ ಹಿಂಬದಿಯಲ್ಲಿ ಹಳೆಯ ಮನೆಗೆ ಹೊಸದಾಗಿ ಕಟ್ಟಿದ್ದ ಕೋಣೆಯಲ್ಲಿ ಇದ್ದ  ಹಗ್ಗದ ಮೇಲೆ ಆಕಸ್ಮಿಕವಾಗಿ ಬಿದ್ದು ಹಗ್ಗವು ಮಗನ ಕುತ್ತಿಗೆಗೆ ಸುತ್ತಿಕೊಂಡು ಮೃತಪಟ್ಟಿದ್ದು  ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.