Thursday, October 31, 2013

ಸಾಲ ಬಾದೆ ವ್ಯಕ್ತಿಯ ಆತ್ಮಹತ್ಯೆ:

     ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕುಂಜಿಲ ಗ್ರಾಮದ ನಿವಾಸಿ  ರವಿಕುಮಾರ್‌ ಎಂಬ ವ್ಯಕ್ತಿ ಬ್ಯಾಂಕ್‌ ಹಾಗೂ  ವಿ.ಎಸ್.ಎಸ್.ಎಸ್.ಎನ್ ಭ್ಯಾಂಕ್ ಮತ್ತು ಇತರ ಕಡೆಗಳಲ್ಲಿ ಕೈ ಸಾಲ ಮಾಡಿಕೊಂಡಿದ್ದು ಸಾಲ ತೀರಿಸ;ಲು ಆಗದೇ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30-10-2013 ರಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,  ಸದ್ರಿ ವ್ಯಕ್ತಿಯ ಪತ್ನಿ ಪಾರ್ವತಿಯವರು  ನೀಡಿದ ದೂರಿನ ಮೇರೆಗೆ  ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಜೀವನದಲ್ಲಿ ಜಿಗುಪ್ಸೆ ವೃದ್ದನ ಆತ್ಮಹತ್ಯೆ:
 
ಸಿದ್ದಾಪುರ ಠಾಣಾ ವ್ಯಾಪ್ತಿಯ ಚೆನ್ನನಕೋಟೆ ಗ್ರಾಮದ ನಿವಾಸಿ 70 ವರ್ಷ ಪ್ರಾಯದ ತಿಮ್ಮ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣನ್ನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Wednesday, October 30, 2013

ಕಾರು ಅಫಘಾತ, ಇಬ್ಬರಿಗೆ ಗಾಯ 
     ಚಾಲಕನ ಅಜಾಗರೂಕತೆಯಿಂದ ಕಾರೊಂದು ತೋಡಿಗೆ ಬಿದ್ದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ಮಡಿಕೇರಿ ನಗರದ ಮೂರ್ನಾಡು ರಸ್ತೆಯಲ್ಲಿ ಸಂಭವಿಸಿದೆ. ದಿನಾಂಕ 29/10/2013ರಂದು ಸಂಜೆ ವೇಳೆ ಬೆಂಗಳೂರಿನ ಬನಶಂಕರಿ ನಿವಾಸಿ ವರುಣ ಎಂಬವರ ಕಾರು ಸಂಖ್ಯೆ ಕೆಎ-03-ಎಂಎಸ್-1002 ನ್ನು ಅದರ ಚಾಲಕ ಮಾಲತೇಶ್ ಎಂಬವರು ಚಾಲಿಸಿಕೊಂಡು ವಿರಾಜಪೇಟೆ ಕಡೆಯಿಂದ ಮಡಿಕೇರಿಗೆ ಬರುತ್ತಿರುವಾಗ ನಗರದ ಮೂರ್ನಾಡು ರಸ್ತೆಯ ಬಳಿ ಸರ್ಕಾರಿ ಆಸ್ಪತ್ರೆಯ ಶವಾಗಾರದ ಮುಂಭಾಗದ ತಿರುವಿನ ಬಳಿ ಕಾರು ಮಾಲತೇಶ್‌ರವರ ಅಜಾಗರೂಕತೆಯ ಚಾಲನೆಯ ಪರಿಣಾಮ ರಸ್ತೆ ಬದಿಯಲ್ಲಿರುವ ತೋಡಿಗೆ ಬಿದ್ದ ಪರಿಣಾಮ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ವರುಣರವರ ತಂದೆ ಗಜೇಂದ್ರ ಹಾಗೂ ಚಾಲಕ ಮಾಲತೇಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಠಾಣಾ ಪಿಎಸ್‌ಐ ಭರತ್‌ರವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, October 29, 2013

ಬೀಗ ಮುರಿದು ಭಾರೀ ಮೌಲ್ಯದ ಚಿನ್ನಾಭರಣ ಕಳವು 
      ಮನೆಯ ಬೀಗ ಮುರಿದು ಭಾರೀ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ವಿರಾಜಪೇಟೆ ತಾಲೂಕಿನ ನಲ್ವತೊಕ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 28/10/2013ರಂದು ನಲ್ವತೊಕ್ಲು ಗ್ರಾಮದ ನಿವಾಸಿ ಪಿ.ಯು.ರಮ್ಲತ್ ಎಂಬವರು ಎಂದಿನಂತೆ
ಮಕ್ಕಳನ್ನು ಶಾಲೆಗೆ ಕಳುಹಿಸಿ ಮನೆಗೆ ಬೀಗ ಹಾಕಿಕೊಂಡು ಮೈಸೂರಿಗೆ ಅವರ ಗಂಡನ ತಂಗಿಯೊಂದಿಗೆ ಅವರ ಮಗಳನ್ನು ಕರೆದು ಕೊಂಡು ಬರಲು ಹೋಗಿ ಸಂಜೆ ಬಂದು ರಾತ್ರಿ ನಲ್ವತ್ತೊಕ್ಲು ಗ್ರಾಮದ ಅವರ ಗಂಡನ ತಮ್ಮ ಅಬ್ದುಲ್ ಗಫೂರ್ ರವರ ಮನೆಯಲ್ಲಿ ತಂಗಿದ್ದು,  ಈ ದಿನ ಬೆಳಿಗ್ಗೆ 8-00ಗಂಟೆಗೆ ರಮ್ಲತ್‌ರವರ ಮಗಳು ಸಫ್ರೀನಾ ಶಾಲೆಗೆ ಹೋಗಲು ಮನೆಯ ಕೀಯನ್ನು ತೆಗೆದು ಕೊಂಡು ಹೋಗಿ ಮನೆಯ ಬಾಗಿಲನ್ನು ತೆಗೆದು ನೋಡಿದಾಗ ಮನೆಯಲ್ಲಿ ಬಟ್ಟೆ ಚೆಲ್ಲಾಪಿಲ್ಲಿಯಾಗಿದ್ದನ್ನು ನೋಡಿ  ಈ ವಿಚಾರವನ್ನು ತಾಯಿಗೆ ತಿಳಿಸಿದ ಮೇರೆ ರಮ್ಲತ್‌ರವರು ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಬಾಗಿಲನ್ನು ಮುರಿದು ಒಳಗೆ ನುಗ್ಗಿ ಬೀರು ವಿನ ಬೀಗವನ್ನು ಮುರಿದು ಬೀರುವಿನಲ್ಲಿಟ್ಟಿದ್ದ ನಗದು ರೂ.4,85,000/- ಹಾಗೂ  ರೂ. 1,50,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಡಿಕ್ಕಿ ಅರಣ್ಯ ವನಪಾಲಕ ಸಾವು 
     ರಸ್ತೆ ಬದಿಯಲ್ಲಿ ನಿಂತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರಿಗೆ ಕಾರು ಡಿಕ್ಕಿಯಾಗಿ ಸಾವಿಗೀಡಾದ ಘಟನೆ ಕುಶಾಲನಗರದ ಸಮೀಪದ ಆನೆಕಾಡುವಿನಲ್ಲಿ ನಡೆದಿದೆ. ದಿನಾಂಕ 28-10-2013 ರಂದು ಆನೆಕಾಡು ಅರಣ್ಯದ ವಾಚರ್ ಮೇದಪ್ಪ ಎಂಬವರು ಕರ್ತವ್ಯದ ನಿಮಿತ್ತ ಅರಣ್ಯ ಸಂಚಾರ ಮಾಡಿಕೊಂಡು ಆನೆ ಕಾಡಿನಲ್ಲಿರುವ ಅರಣ್ಯ ಕಛೇರಿಯ  ಹತ್ತಿರ  ಕುಶಾಲನಗರದಿಂದ ಮಡಿಕೇರಿಗೆ ಹೋಗುವ  ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ  ಮಡಿಕೇರಿ ಕಡೆಯಿಂದ ಕುಶಾಲನಗರದ ಕಡೆಗೆ ಬರುತ್ತಿದ್ದ ಕಾರು ನಂ. ಕೆಎ-12-ಜಡ್-22 ನ್ನು ಅದರ ಚಾಲಕ ಪ್ರಿನ್ಸ್ ಎಂಬುವವನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಫಾರೆಸ್ಟರ್ ಕಮಲಾಕ್ಷರವರಿಗೆ ಢಿಕ್ಕಿಪಡಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೇದಪ್ಪನವರ ಬಾಪ್ತು ನಂ.ಕೆಎ 12 ಕೆ 3975 ರ ಮತ್ತು ಕಮಲಾಕ್ಷರವರ ಬಾಪ್ತು ನಂ. ಕೆಎ 12 ಜೆ 7780 ರ  ದ್ವಿಚಕ್ರ ವಾಹನಗಳಿಗೆ ಢಿಕ್ಕಿಪಡಿಸಿ ಎರಡೂ ದ್ವಿಚಕ್ರ ವಾಹನಗಳು ಜಖಂ ಆಗಿರುವುದಲ್ಲದೆ ಕಮಲಾಕ್ಷರವರ ಎರಡೂ ಕಾಲುಗಳು ಮೂಳೆ ಮುರಿದಿದ್ದು ಎದೆಗೆ ಪೆಟ್ಟಾಗಿದ್ದು, ಚಿಕಿತ್ಸೆ ಬಗ್ಗೆ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ತುರ್ತು ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಚಿಕಿತ್ಸೆ ನೀಡಿದ ವೈದ್ಯರು ಸಲಹೆ ನೀಡಿದ ಮೇರೆಗೆ ಗಾಯಾಳು ಕಮಲಾಕ್ಷರವರನ್ನು 108 ಆಂಬುಲೆನ್ಸ್‌‌ನಲ್ಲಿ ಸಾಗಿಸುತ್ತಿದ್ದಾಗ  ದಾರಿಯಲ್ಲಿ  ಮಡಿಕೇರಿ ಬಳಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Sunday, October 27, 2013

ಮನೆಯಲ್ಲಿದ್ದ ಚಿನ್ನಾಭರಣ ಕಳವು 
     ಮನೆಗೆ ಪ್ರವೇಶಿಸಿದ ಅಪರಿಚಿತ ಕಳ್ಳರು ಚಿನ್ನಾಭರಣ ಕಳವು ಮಾಡಿದ ಪ್ರಕರಣ ಅಮ್ಮತ್ತಿ ನಗರದಲ್ಲಿ ನಡೆದಿದೆ. ದಿನಾಂಕ 26/10/2013ರಂದು ಅಮ್ಮತ್ತಿ ನಗರದ ನಿವಾಸಿ ಮಲ್ಲಂಗಡ ರೋಹಿಣಿ ಎಂಬವರು ತಮ್ಮ ಮನೆಯ ಹಿಂದೆ ಬಟ್ಟೆ ಒಗೆಯುತ್ತಿದ್ದು, ಮನೆಯೊಳಗೆ ಏನೋ ಶಬ್ದ ಕೇಳಿ ಬಂದು ಒಳಗೆ ಬಂದು ನೋಡಿದ್ದು, ಮನೆಯ ಮುಂದಿನ ಬಾಗಿಲಿಗೆ ಹಾಕಿದ್ದ ಬೋಲ್ಟ್ ತೆರೆದಿರುವುದನ್ನು ಕಂಡು ಸಂಶಯಗೊಂಡು ಮನೆಯ ಮೇಜಿನ ಮೇಲೆ ಒಂದು ಬ್ಯಾಗಿನಲ್ಲಿಟ್ಟಿದ್ದ ಡಬ್ಬಿಯನ್ನು ಪರಿಶೀಲಿಸಿದಾಗ ಅದರೊಳಗಿಟ್ಟಿದ್ದ ಸುಮಾರು ರೂ.24,000/- ಮೌಲ್ಯದ ಚಿನ್ನಾಭರಣ ಹಾಗೂ ರೂ.500/- ನಗದು ಕಾಣೆಯಾಗಿದ್ದು, ತಾವು ಮನೆಯ ಹಿಂದೆ ಕೆಲಸದಲ್ಲಿದ್ದಾಗ ಯಾರೋ ಕಳ್ಳರು ಮನೆ ಪ್ರವೇಶಿಸಿ ಆಭರನಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಫಘಾತ ಕಾರು ಜಖಂ 
    ಚಾಲಕನಅಜಾಗರೂಕತೆಯ ಚಾಲನೆಯಿಂದ ಕಾರೊಂದು ಗುಂಡಿಗೆ ಬಿದ್ದು ಜಖಂಗೊಂಡಿರುವ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾಕುಟ್ಟದಲ್ಲಿ ನಡೆದಿದೆ. ದಿನಾಂಕ 26/10/2013ರಂದು ಬೆಂಗಳೂರಿನ ಯಶವಂತಪುರದ ನಿವಾಸಿ ನರಸಿಂಹ ಮೂರ್ತಿ ಹಾಗೂ ಅವರ ಮಿತ್ರರು ಕೆಎ-51-ಪಿ-7331ರ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕೇರಳದ ಕುನ್ನತ್ತು ಪರಂಬು ಗ್ರಾಮದಲ್ಲಿ ಒಂದು ಮದುವೆ ಸಮಾರಂಭಕ್ಕೆ ಹೋಗುತ್ತಿರುವಾಗ ಮಾಕುಟ್ಟ ಬಳಿಯ ಆಂಜನೇಯ ದೇವಸ್ಥಾನದ ಸಮೀಪ ಕಾರು ಚಾಲಕ ಸುನಿಲ್ ಬಾಬು ಎಂಬವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಕಾರು ರಸ್ತೆ ಬದಿಯ ಗುಂಡಿಗೆ ಬಿದ್ದು ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, October 26, 2013

ಶೀಲ ಶಂಕಿಸಿ ಪತಿಯಿಂದ ಪತ್ನಿಗೆ  ಹಲ್ಲೆ 
     ಪತಿಯಿಂದ ಪತ್ನಿಗೆ ಮಾನಸಿಕ ಹಿಂಸೆ ಹಾಗೂ  ಹಲ್ಲೆ ನಡೆದಿರುವ ಘಟನೆ ಮಡಿಕೇರಿ ನಗರದ ಹೊಸ ಬಡಾವಣೆಯಲ್ಲಿ ನಡೆದಿದೆ. ಹೊಸ ಬಡಾವಣೆ ನಿವಾಸಿ ಸ್ವಾತಿ ಎಂಬವರು ದೇವರಾಜು ಎಂಬವರನ್ನು ಸುಮಾರು 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಈಗ್ಗೆ ಸುಮಾರು ಎರಡು ವರ್ಷಗಳಿಂದ ಪತಿ ದೇವರಾಜು ಸ್ವಾತಿಯವರ ಶೀಲ ಶಂಕಿಸಿ ಆಕೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ದಿನಾಂಕ 23/10/2013ರಂದು ದೇವರಾಜುರವರು ಸ್ವಾತಿಯವರೊಂದಿಗೆ ಜಗಳವಾಡಿ ಗಾರೆ ಕೆಲಸ ಮಾಡುವ ಮರದ ಮಟ್ಟ ಕೋಲಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಾಹನ ಅಫಘಾತ ಕಾರು ಚಾಲಕ ಗಾಯಾಳು 
      ಪಿಕ್ ಅಪ್ ಜೀಪು ಹಾಗೂ ಕಾರೊಂದು ಪರಸ್ಪರ ಡಿಕ್ಕಿಯಾದ ಪರಿಣಾಮ ಕಾರು ಚಾಲಕನಿಗೆ ಗಾಯಗಳಾಗಿರುವ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಫ್ತಿಯ ಕಾಕೋಟುಪರಂಬುವಿನಲ್ಲಿ ನಡೆದಿದೆ. ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ನಿವಾಸಿ ಮೋಹನ್ ಮುದ್ದಪ್ಪ ಎಂಬವರು ದಿನಾಂಕ 25/10/2013ರಂದು ವಿರಾಜಪೇಟೆ ಸಮೀಪದ ಬಿಟ್ಟಂಗಾಲದ ಆರ್‌.ಕೆ.ಫಾರಂ ಗೆ ಅವರ ಮಾರುತಿ ಎರ್ಟಿಗಾ ಕಾರು ಕೆಎ-12-ಪಿ-9079ರಲ್ಲಿ ಬರುತ್ತಿರುವಾಗ ಕಾಕೋಟುಪರಂಬು ಬಳಿ ವಿರಾಜಪೇಟೆ ಕಡೆಯಿಂದ ಕೆಎ-12-ಎ-3944ರ ಪಿಕ್‌ ಅಪ್ ಜೀಪನ್ನು ಅದರ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಹನ್ ಮುದ್ದಪ್ಪನವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡು ಮೋಹನ್‌ ಮುದ್ದಪ್ಪನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ಮಹಿಳೆಯ ಸಂಶಯಾಸ್ಪದ ಸಾವು 
       ನೇಣು ಬಿಗಿದುಕೊಂಡು ಮಹಿಳೆಯೊ0ಬ್ಬರು ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ಮಡಿಕೇರಿ ಸಮೀಪದ ಮಕ್ಕಂದೂರು ಗ್ರಾಮದಲ್ಲಿ ನಡೆದಿದೆ. ಮಕ್ಕಂದೂರು ನಿವಾಸಿ ಶೇಷಪ್ಪ ಎಂಬವರ ಮಗಳು ಹರಿಣಿ ಎಂಬಾಕೆಯನ್ನು ಅದೇ ಗ್ರಾಮದ ದಿನೇಶ ಎಂಬಾತನು ಮದುವೆಯಾಗಿದ್ದು ದಂಪತಿಗಳಿಬ್ಬರೂ ಅನ್ಯೋನ್ಯವಾಗಿದ್ದು, ದಿನಾಂಕ 25/10/2013ರಂದು ಹರಿಣಿಯು ಆಕೆಯ ಮನೆಯ ಸ್ನಾನದ ಕೋಣೆಯಲ್ಲಿ ಮಾಡಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅದೇ ಗ್ರಾಮದ ರವಿ ಎಂಬವರು ಶೇಷಪ್ಪನವರಿಗೆ ತಿಳಿಸಿದ್ದು, ಮಗಳ ಸಾವಿನ ಬಗ್ಗೆ ಸಂಶಯ ಇರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Friday, October 25, 2013

 ಮರಕ್ಕೆ ಟಾಟಾ ಸುಮೋ ಡಿಕ್ಕಿ 
      ಟಾಟಾ ಸುಮೋವೊಂದು ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ 8 ಜನರಿಗೆ ಗಾಯಗಳಾದ ಘಟನೆ ಪೊನ್ನಂಪೇಟೆ ಸಮೀಪದ ಪೊನ್ನಪ್ಪ ಸಂತೆ ಗ್ರಾಮದಲ್ಲಿ ನಡೆದಿದೆ, ದಿನಾಂಕ 24/10/2013ರಂದು ಸಂಜೆ ವೇಳೆಗೆ ಹುಣಸುರಿನ ಹನಗೋಡು ಹೋಬಳಿಯ ನಿವಾಸಿ ಲೋಕೇಶ್ ಮತ್ತು ಇತರೆ ಜನರು ಕೂಲಿ ಕೆಲಸಕ್ಕಾಗಿ ಕುಪ್ಪಂಡ ತಿಲಕ್ ಎಂಬವರ ತೋಟಕ್ಕೆ ಹೋಗಿ ವಾಪಾಸು ಕೆಎ-04-ಎನ್-5889ರ ಟಾಟಾ ಸುಮೋ ವಾಹನದಲ್ಲಿ ಹೋಗುತ್ತಿರುವಾಗ ಪೊನ್ನಪ್ಪ ಸಂತೆ ಗ್ರಾಮದ ಬೈರಮುಂಡ ಎಂಬಲ್ಲಿ ಟಾಟಾ ಸುಮೋ ಚಾಲಕ ಶಿವರಾಜು ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಟಾಟಾ ಸುಮೋವು ರಸ್ತೆ ಬದಿಯಲ್ಲಿರುವ ತೆಂಗಿನ ಮರಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಟಾಟಾ ಸುಮೋದಲ್ಲಿದ್ದ ಎಲ್ಲಾ 8 ಜನರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ವ್ಯಕ್ತಿಯ ಸಾವು 
      ಆಕಸ್ಮಿಕವಾಗಿ ವಿಷ ಸೇವಿಸಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಶನಿವಾರಸಂತೆ ಸಮೀಪದ ಗುಡುಗಳಲೆ ಎಂಬಲ್ಲಿ ನಡೆದಿದೆ. ಗುಡುಗಳಲೆಯ ನಿವಾಸಿ ರಾಮೇಗೌಡ ಎಂಬವರ ಮಗ ಸತೀಶ ಎಂಬಾತನು ಗುಡುಗಳಲೆಯ ವರ್ಕ್‌ಶಾಪ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 22/10/2013ರಂದು ರಾತ್ರಿ ವೇಳೆ ಕೈತಪ್ಪಿನಿಂದ ಆಕಸ್ಮಿಕವಾಗಿ ಯಾವುದೋ ವಿಷ ವಸ್ತುವನ್ನು ಸೇವಿಸಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 24/10/2013ರಂದು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 


Thursday, October 24, 2013

ದಾರಿ ತಡೆದು ಕೊಲೆ ಬೆದರಿಕೆ 
     ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ವ್ಯಕ್ತಿಯೊಬ್ಬರಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ವಿರಾಜಪೇಟೆ ಸಮೀಪದ ಕದನೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ: 22-10-13ರಂದು ಸಮಯ ರಾತ್ರಿ 9-30ಗಂಟೆಗೆ ವಿರಾಜಪೇಟೆಯ ನೆಹರು ನಗರ ನಿವಾಸಿ ಆಟೋ ಚಾಲಕ ವಿಜಯಕುಮಾರ್ ಎಂಬವರು ಮನೆಯ ಗೇಟನ್ನು ಹಾಕುತ್ತಿರುವಾಗ್ಗೆ ಪ್ರದೀಪ್ ಎಂಬವರು ವಿಜಯಕುಮಾರ್‌ರವರಿಗೆ ವಿನಾಕಾರಣ  ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೆ ದಿನಾಂಕ: 23-10-13ರಂದು ಸಮಯ ಸಂಜೆ 5-30ಗಂಟೆಗೆ ವಿಜಯಕುಮಾರ್‌ರವರು  ಆಟೋ ರಿಕ್ಷಾವನ್ನು ಓಡಿಸಿಕೊಂಡು ಬಾಡಿಗೆ ಹೋಗುತ್ತಿರುವಾಗ್ಗೆ ಕದನೂರು ಸಮೀಪ  ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ, ಹಲ್ಲೆ ಮಾಡಲು ಮುಂದಾದಾಗ ಆಟೋ ರಿಕ್ಷಾದಲ್ಲಿದ್ದ ಮಧು ಮತ್ತು ಇನ್ನೊಬ್ಬ ಸಮಾಧಾನ ಮಾಡಿದ್ದು ಆಗ ಪ್ರದೀಪ್  ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ವಿಜಯಕುಮಾರ್‌ರವರಿಗೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 


Wednesday, October 23, 2013

ಆತ್ಮಹತ್ಯೆಗೆ ಪ್ರಚೋದನೆ, ವಿಷ ಸೇವಿಸಿ ಆತ್ಮಹತ್ಯೆಗೆ ಯುವತಿಯ ಯತ್ನ:

       ಯುವತಿಗೆ ಪ್ರೀತಿಸಿದ ಯುವಕನಿಂದ ಆತ್ಮಹತ್ಯೆಗೆ ಪ್ರಚೋದನೆಯಿಂದ ಬೇಸತ್ತ ಯುವತಿ ವಿಷಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಮಡಿಕೇರಿ ಸಮೀಪದ ಮಕ್ಕಂದೂರು ಗ್ರಾಮದಲ್ಲಿ ನಡೆದಿದೆ.   ಮಡಿಕೇರಿ ತಾಲೋಕು ಮಕ್ಕಂದೂರು ಗ್ರಾಮದ ನಿವಾಸಿ ಪಿ. ಜಯಮಾಮ ಎಂಬವಳ ಮಗಳು ದಿವ್ಯಾ ಮತ್ತು ವಿರಾಜಪೇಟೆ ತಾಲೋಕು ಕೆದಮುಳ್ಳೂರು ಗ್ರಾಮದ ನಿವಾಸಿ ಹೊಸೋಕ್ಲು ಸುಧಿ ಎಂಬ ಯುವಕ ಪರಸ್ಪರ ಪ್ರೀತಿಸುತ್ತಿದ್ದು ಈ ನಡುವೆ ಸುಧಿ ದಿವ್ಯಾಳು ಬೇರೆಯವರ ಜೊತೆ ಸುತ್ತುತ್ತಿರುವೆ  ನೀನು ಸಾಯಿ ಎಂದು ಬೈದಿರುವ ಹಿನ್ನೆಲೆಯಲ್ಲಿ ದಿವ್ಯಾಳು ದಿನಾಂಕ 5-10-2013 ರಂದು ಮನೆಯಲ್ಲಿ ವಿಷಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ನಂತರ ಆಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು, ಪಿ. ಜಯರಾಮ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮಾರುತಿ ವ್ಯಾನ್‌ ಡಿಕ್ಕಿ ಇಬ್ಬರಿಗೆ ಗಾಯ:

     ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯರಿಬ್ಬರಿಗೆ ಮಾರುತಿ ವ್ಯಾನ್‌ ಡಿಕ್ಕಿಯಾಗಿ ಗಾಯಗಳಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.  ಮಡಿಕೇರಿ ಎಫ್‌.ಎಂ.ಸಿ. ಕಾಲೇಜು ವಿದ್ಯಾರ್ಥಿಗಳಾದ ಅನಿತ ಹಾಗೂ ಕವಿತ ಎಂಬವರು ಇಂದು ಬೆಳಿಗ್ಗೆ 8-30 ಗಂಟೆಗೆ  ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾದ ಮಡಿಕೇರಿ ನಗರದ ರಾಣಿಪೇಟೆ ಜಂಕ್ಷನ್‌ನಲ್ಲಿ ಮಾರುತಿ ವ್ಯಾನ್‌ ಚಾಲಕನೊಬ್ಬ ವ್ಯಾನ್‌ನನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಡಿಕ್ಕಿಪಡಿಸಿದ ಪರಿಣಾಮ ಇಬ್ಬರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ಜಿಕಿತ್ಸೆಗೆ ದಾಖಲಾಗಿದ್ದು, ಮಡಿಕೇರಿ ಟ್ರಾಫಿಕ್‌ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
 

Tuesday, October 22, 2013

ಹಣಕಾಸಿನ ವ್ಯವಹಾರದಲ್ಲಿ ಮಹಿಳೆ ಮೇಲೆ ಹಲ್ಲೆ:

     ಕೊಡ್ಲಿಪೇಟೆ ನಿವಾಸಿಯಾದ ರೇಷ್ಮಾಬಾನು ಎಂಬವರು ದಿನಾಂಕ  18-10-2013  ರಂದು ತಮ್ಮ ಮನೆಯಲ್ಲಿರುವಾಗ್ಗೆ ರಾಮನಗರದಲ್ಲಿರುವ ಶಹನಾಜ್ ಎಂಬ ಮಹಿಳೆ ಮತ್ತು ಅವರ 2 ಜನ ಹೆಣ್ಣು ಮಕ್ಕಳು  ಮನೆಗೆ ನುಗ್ಗಿ ನಿನ್ನ ಗಂಡ ನನಗೆ ದುಡ್ಡು ಕೊಡಬೇಕೆಂದು ಹೇಳಿ ಏಕಾಎಕಿ 3 ಜನರು ಸೇರಿಕೊಂಡು ರೇಷ್ಮಾಬಾನುಗೆ ಕೈಯಿಂದ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಗುದ್ದಿ  ನಂತರ ಕೆಳಕ್ಕೆ ಕೆಡವಿಕೊಂಡು ಕಾಲಿನಿಂದ ತುಳಿದಿದ್ದು ಅಲ್ಲದೆ ಕೊಲೆಮಾಡುತ್ತೇವೆಂದು ಬೆದರಿಕೆ ಹಾಕಿದ್ದು   ರೇಷ್ಮಾಬಾನುರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 

Monday, October 21, 2013

ಮಾರುತಿ ಓಮ್ನಿಗೆ ಬಸ್‌ ಡಿಕ್ಕಿ ಡಿಕ್ಕಿ4 ಜನರಿಗೆ ಗಾಯ:
ಮಂಗಳೂರಿನ ಫರಂಗಿಪೇಟೆ ನಿವಾಸಿ ಮಹಮ್ಮದ್‌ ಅಶ್ರಫ್‌ ಎಂಬವರು ಈ ದಿನ ಕೆಲಸದ ನಿಮಿತ್ತ ತಮ್ಮ ಬಾಪ್ತು ಮಾರುತಿ ಓಮಿನಿ ವ್ಯಾನ್‌ ನಂಬರ್‌‌ ಕೆಎ-19-ಎಂಸಿ-166ರಲ್ಲಿ ಹೆಂಡತಿ ಸಮೀರಾ, ಮಗ ಶಾಯಫ್‌ ಮತ್ತು ಸಂಬಂಧಿಕರಾದ ಆಸಿಫ್‌‌ರವರೊಂದಿಗೆ ಆಸಿಫ್‌ರವರು ಸದರಿ ವ್ಯಾನನ್ನು ಚಾಲನೆ ಮಾಡಿಕೊಂಡು ಮಡಿಕೇರಿ ಕಡೆಗೆ ಬರುತ್ತಿರುವಾಗ್ಗೆ ಕಾಟಕೇರಿ ಎಂಬಲ್ಲಿ ಮಡಿಕೇರಿ ಕಡೆಯಿಂದ ಬಂದ ಕೆಎ-40-ಎಫ್‌-486 ರ ಕೆ.ಎಸ್.ಆರ್‌.ಟಿ.ಸಿ. ಬಸ್ಸು ಚಾಲಕ ಸದರಿ ಬಸ್ಸನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಾರುತಿ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನಲ್ಲಿದ್ದ 4 ಮಂದಿಗಳಿಗೆ ಗಾಯವಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ತೋಟದಿಂದ ಬೀಟಿ ಮರ ಕಳವು:
ಶನಿವಾರಸಂತೆ ಪೊಲೀಸ್‌ ಠಾಣಾ ಸರಹದ್ದಿನ ಕುರುಡುವಳ್ಳಿ ಗ್ರಾಮದ ನಿವಾಸಿ ಹೆಚ್‌.ಲೋಕೇಶ್‌ ಎಂಬವರ ಕಾಫಿ ತೋಟದಿಂದ ಯಾರೋ ಕಳ್ಳರು ಬೀಟಿ ಮರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಹೆಚ್‌. ಲೋಕೇಶ್‌ ಎಂಬವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ  ತನಿಖೆ ಕೈಗೊಂಡಿರುತ್ತಾರೆ. 
ಅಕ್ರಮ ಜೂಜಾಟ, ಪೊಲೀಸ್‌ ದಾಳಿ:
ಸಿದ್ದಾಪುರ ಪೊಲೀಸ್‌ ಠಾಣಾ ಪಿ.ಎಸ್‌.ಐ.ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಕರಡಿಗೋಡು ಗ್ರಾಮದ ಕಾವೇರಿ ನದಿ ತೀರದಲ್ಲಿ ಅಕ್ರಮವಾಗಿ ಇಸ್ಪೀಟ್‌ ಜೂಜಾಟ ಆಡುತ್ತಿದ್ದವರ ಮೇಲೆ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಕರಡಿಗೋಡು ನಿವಾಸಿಗಳಾದ ಖಲೀಲ್‌, ಮುನೀರ್‌, ಮೊಹಮ್ಮದ್‌ ಹಾಗೂ ಶಾನಫ್‌ ಎಂಬವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರು ಆಟಕ್ಕೆ ಬಳಸಿದ ರೂ.1720/ಗಳನ್ನು ಹಾಗೂ ಇಸ್ಪೀಟ್‌ ಎಲೆಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ
 
 
 
                                                                       

Sunday, October 20, 2013

ಕ್ಷುಲ್ಲಕ ಕಾರಣಕ್ಕೆ ಪತಿಯಿಂದ ಪತ್ನಿಯ ಮೇಲೆ ಹಲ್ಲೆ. 
      ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಮೇಲೆ ಪತಿಯು  ಹಲ್ಲೆ ಮಾಡಿದ ಘಟನೆ ಮಡಿಕೇರಿ ನಗರದ ಮಂಗಳೂರು ರಸ್ತೆಯಲ್ಲಿ ನಡೆದಿದೆ. ದಿನಾಂಕ 19/10/2013ರ ರಾತ್ರಿ ವೇಳೆ ಮಡಿಕೇರಿ ನಗರದ ಮಂಗಳೂರು ರಸ್ತೆಯ ಬಳಿ ವಾಸವಿರುವ ಪ್ರೇಮಾವತಿ ಎಂಬವರ ಗಂಡ ಲೋಕೇಶ ಎಂಬಾತನು ತನ್ನ ಪತ್ನಿ ಪ್ರೇಮಾವತಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಟಾರ್ಚ್‌ ಲೈಟಿನಿಂದ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರನಿ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ವಿವಾದ, ವ್ಯಕ್ತಿಯೊಬ್ಬರ ಮೇಲೆ ಗುಂಪು ಹಲ್ಲೆ 
       ರಸ್ತೆ ವಿವಾದದಲ್ಲಿ ವ್ಯಕ್ತಿಯೊಬ್ಬರ ಮೇಲೆ ಗುಂಪು ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ತಾಲೂಕಿನ ತಲ್ತರೆ ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ತಲ್ತರೆ ಶೆಟ್ಟಳ್ಳಿ ಗ್ರಾಮದ ನಿವಾಸಿ ವಿಶ್ವನಾಥ ಹಾಗೂ ಅದೇ ಗ್ರಾಮದ ನಿವಾಸಿ ಪ್ರಕಾಶ ಹಾಗೂ ಸೋದರರ ನಡುವೆ ರಸ್ತೆ ವಿಚಾರದಲ್ಲಿ ವಿವಾದವಿದ್ದು, ದಿನಾಂಕ 19/10/2013ರಂದು ಶಾಂತಳ್ಳಿಯ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲೇ ಸ್ಥಳದಲ್ಲಿದ್ದ ಆರೋಪಿಗಳಾದ ಪ್ರಕಾಶ, ರಾಜಪ್ಪ, ನಾಗರಾಜು, ನೂತನ್, ಭರತ್, ಭುವನ, ಕವನ ಮುಂತಾದವರು ದೊಣ್ಣೆ, ಕತ್ತಿಗಳಿಂದ ವಿಶ್ವನಾಥರವರ ಮೇಲೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ವ್ಯಕ್ತಿಯ ಸಾವು. 
       ಮನೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಟ್ಟ ಬಳಿಯ ಪೂಜೆಕಲ್ ಎಂಬಲ್ಲಿ ನಡೆದಿದೆ. ದಿನಾಂಕ 19/10/2013ರ ಬೆಳಗಿನ ಜಾವ ಸಮಯದಲ್ಲಿ ಪೂಜೆಕಲ್ ನಿವಾಸಿ ಕುಂಞಿಮೋನು ಎಂಬವರ ಮಗ 32 ವರ್ಷ ಪ್ರಾಯದ ವಿನು ಎಂಬಾತನು ಮನೆಯಲ್ಲಿ ಮನೆಯ ಮಾಡಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದಿರುವುದಿಲ್ಲ ಎಂದು ಕುಂಞಿಮೋನುರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್ ಡಿಕ್ಕಿ, ವ್ಯಕ್ತಿಯೊಬ್ಬರ ಸಾವು 
      ನಿಂತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ಡಿಕ್ಕಿಯಾಗಿ ಸಾವಿಗೀಡಾದ ಘಟನೆ ಗೋಣಿಕೊಪ್ಪ ನಗರದ ಪೊನ್ನಂಪೇಟೆ ಜಂಕ್ಷನ್ ಬಳಿ ನಡೆದಿದೆ.  ದಿನಾಂಕ 19/10/2013ರ ಸಂಜೆ ವೇಳೆ ಪೊನ್ನಂಪೇಟೆಯ ಮತ್ತೂರು ಗ್ರಾಮದ ನಿವಾಸಿಸಿ ಕೆ.ಕೆ.ಲೋಕೇಶ ಮತ್ತು ಕಾಕೇರ ಗಣೇಶ ಎಂಬವರುಗಳು ಸ್ವಂತ ಕೆಲಸದ ಸಂಬಂಧ ಗೋಣಿಕೊಪ್ಪ ನಗರಕ್ಕೆ ಬಂದು ಕೆಲಸ ಮುಗಿಸಿಕೊಂಡು ವಾಪಾಸು ಹೋಗಲು ನಗರದ ಪೊನ್ನಂಪೇಟೆ ಜಂಕ್ಷನ್ ಬಳಿ ಕೋಳಿ ಮಾಂಸದ ಅಂಗಡಿಯೊಂದರ ಬಳಿ ನಿಂತುಕೊಂಡಿರುವಾಗ ಶ್ರೀ ಇಗ್ಗುತಪ್ಪ ಎಂಬ ಹೆಸರಿನ ಖಾಸಗಿ ಬಸ್ ಸಂಖ್ಯೆ ಕೆಎ-12-ಎ-909 ರನ್ನು ಅದರ ಚಾಲಕ ಜಯ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಗಣೇಶ್ ರವರಿಗೆ ಬಸ್ಸಿನ ಮುಂದಿನ ಪುಟ್ ಬೋರ್ಡ್ ತಗುಲಿ ರಸ್ತೆಗೆ ಬಿದ್ದು ಬಸ್ಸಿನ ಹಿಂಭಾಗದ ಟೈಯರ್ ತಲೆಯ ಮೇಲೆ ಹರಿದು ತೀವೃ ಸ್ವರೂಪದ ಗಾಯ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, October 19, 2013

ಮನೆಯ ಬೀಗ ಮುರಿದು ಜಿನ್ನಾಭರಣ ಕಳವು:

 
     ದಿನಾಂಕ 8-10-2013 ರಂದು ಸಮಯ 17-00 ಗಂಟೆಗೆ ಶ್ರೀ.ಮುಕ್ತಾರ್ ಅಹಮ್ಮದ್ ತಂದೆ ಮಹಮ್ಮದ್ ಇಸಾಕ್ , ಪ್ರಾಯ 49 ವರ್ಷ, ವಾಸ ಮನೆ ನಂ 189, 5 ನೇ ಬ್ಲಾಕ್, ಮುಖ್ಯ ರಸ್ತೆ, ವಿರಾಜಪೇಟೆ ಇವರು ಸಂಸಾರ ಸಮೇತ ತಮ್ಮ ಮನೆಗೆ ಬೀಗ ಹಾಕಿ ತನ್ನ ಅಕ್ಕನ ಮಗನ ಮದುವೆಗೆಂದು ಹುಣಸೂರಿಗೆ ಹೋಗಿದ್ದು ಮದುವೆ ಮುಗಿಸಿ ನಿನ್ನೆ  ದಿನ ದಿನಾಂಕ 18-10-2013 ರಂದು ಬೆಳಿಗ್ಗೆ 9-45 ಗಂಟೆಗೆ ಮನೆಗೆ ಬಂದು ಬಾಗಿಲನ್ನು ತೆರೆಯಲು ಹೋದಾಗ  ಮನೆಯ ಮುಂಭಾಗಿಲಿನ ಚಿಲಕವು ನೇತಾಡುತ್ತಿದ್ದು ಬಾಗಿಲು ತೆಗೆದು ಒಳ ಹೋಗಿ ನೋಡಿದಾಗ ಮನೆಯ ಒಳಬಾಗಿಲಿನ ಡೋರ್ ಲಾಕ್  ಮತ್ತು ಬೀಗವನ್ನು ಯಾರೋ ಕಳ್ಳರು ಮುರಿದು  ಮನೆಯ ಒಳಗೆ ಇಟ್ಟಿದ್ದ ಎರಡು ಗಾಡ್ರೇಜ್ ಬೀರುವಿನ ಬಾಗಿಲು ತೆರೆದಿದ್ದು ಗಾಡ್ರೇಜ್ ಒಳಗೆ ಇಟ್ಟಿದ್ದ ಒಟ್ಟು 50 ಗ್ರಾಂನ  ಚಿನ್ನದ ವಾಲೆ, ಚಿನ್ನದ ನಾಣ್ಯ , ಚಿನ್ನದ ಉಂಗುರ, ಚಿನ್ನದ ಪೆಂಡೆಂಟ್ ಇವುಗಳು ಹಾಗೂ ಒಟ್ಟು 750 ಗ್ರಾಂ ನ ಬೆಳ್ಳಿಯ ಕಾಲು ಚೈನು, ಕೀ ಬಂಚ್ ಕಳ್ಳತನವಾಗಿದ್ದು, ಅಲ್ಲದೇ ಗಾಡ್ರೇಜ್ ಒಳಗೆ ಇಟ್ಟಿದ್ದ  ಡಬಲ್ ಸೀಮ್ ಇರುವ ಸ್ಯಾಮ್ ಸಂಗ್ ಮೊಬೈಲ್  ಹಾಗೂ ನಗದು ಹಣ  1,500/- ರೂ ಕಳ್ಳತನವಾಗಿದ್ದು   ಇವುಗಳ ಒಟ್ಟು ಮೌಲ್ಯ 1,40,000/- ಆಗಿರುತ್ತದೆ. ಈ ಬಗ್ಗೆ ಮುಕ್ತಾರ್‌ ಅಹಮ್ಮದ್‌ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 
ಆಕಸ್ಮಿಕ ನೀರಿಗೆ ಬಿದ್ದು ವ್ಯಕ್ತಿಯ ದುರ್ಮರಣ:
 
     ಆಕಸ್ಮಿಕವಾಗಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಪೆರಾಜೆ ಗ್ರಾಮದಲ್ಲಿ ನಡೆದಿದೆ.  ಪೆರಾಜೆ ಗ್ರಾಮದ ನಿವಾಸಿ ಶ್ರೀಮತಿ ಪಿ.ಡಿ. ಲೀಲಾವತಿ ಎಂಬವರ ಪತಿ ಧನಂಜಯ ಎಂಬವರು ದಿನಾಂಕ 18-10-2013 ರಂದು ಮನೆಯ ಹತ್ತಿರವಿರುವ  ಕುಂಡಾಡು ಹೊಳೆಯಲ್ಲಿ  ಆಕಸ್ಮಕವಾಗಿ ಬಿದ್ದು ಸಾವನಪ್ಪಿದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
   
ಮಹಿಳೆಗೆ ಪತಿಯಿಂದ ವರದಕ್ಷಿಣೆ ಕಿರುಕುಳ, ಕೊಲೆಗೆ ಯತ್ನ:   
 
     ಶ್ರೀಮತಿ ಹೆಚ್‌,ಎಂ, ಕೋಮಲ ಎಂಬವರು ಸುಮಾರು 2 ವರ್ಷಗಳ ಹಿಂದೆ ಕಿತ್ತೂರು ಗ್ರಾಮದ ಕಾಂತಿರಂಗ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದು, ಮದುವೆಯ ಸಮಯದಲ್ಲಿ ಕಾಂತಿರಂಗರವರು ವರಧಕ್ಷಿಣೆ ರೂಪದಲ್ಲಿ 7 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದು, 2011 ನೇ ಸಾಲಿನ ಜೂನ್ ತಿಂಗಳಲ್ಲಿ ಕಾಂತಿರಂಗ ಹಾಗು ಅತ್ತೆ ಗೌರಮ್ಮ ರವರು ಕೋಮಲರವರಿಗೆ   ಮದುವೆಯ ಸಮಯದಲ್ಲಿ ನೀಡಿದ ಚಿನ್ನಾಭರಣಗಳು ಸಾಲುವುದಿಲ್ಲ ಇನ್ನೂ 5 ಲಕ್ಷ ರೂಪಾಯಿ ವರಧಕ್ಷಿಣೆ ಬೇಕು ಎಂದು ಮಾನಸಿಕ ಹಿಂಸೆ ನೀಡಿದ್ದು, ಇದನ್ನು ತಿಳಿದ ಕೋಮಲರ  ತಂದೆ ಮಲ್ಲಯ್ಯರವರು 2011ನೇ ಸಾಲಿನ ಜೂನ್ ತಿಂಗಳಲ್ಲಿ  50,000 ರೂ ಹಣವನ್ನು ಮತ್ತು 2012 ನೇ ಸಾಲಿನ ಅಕ್ಟೋಬರ್ ತಿಂಗಳಿನಲ್ಲಿ 50,000 ನಗದು ಹಣವನ್ನು ವರಧಕ್ಷಿಣೆ ರೂಪದಲ್ಲಿ ನೀಡಿದ್ದು, ದಿನಾಂಕ: 14-10-2013 ರಂದು ಕೋಮಲರವರು ತನ್ನ ತವರು ಮನೆ ಸಕಲೇಶಪುರದಿಂದ ಕಿತ್ತೂರು ಗ್ರಾಮಕ್ಕೆ ಗಂಡನ ಮನೆಗೆ ಬಂದಾಗ ಆರೋಪಿ ಕಾಂತಿರಂಗನು 4 ಲಕ್ಷ ರೂಪಾಯಿ ತಂದಿದ್ದೀಯಾ ಎಂದು ಕೇಳಿ ಜಗಳವಾಡಿ ಕೈಗಳಿಂದ ಹೊಡೆದು ನೋವುಂಟು ಪಡಿಸಿರುವುದಲ್ಲದೆ,  ಕುತ್ತಿಗೆ ಹಿಸುಕಿ ತಾಯಿಯ ಪ್ರಚೋದನೆಯಿಂದ ಕೊಲೆ ಮಾಡಲು ಪ್ರಯತ್ನಿಸಿದ್ದು, ಈ ಬಗ್ಗೆ  ಸಕಲೇಶಪುರದ ಕಾಪರ್ಡ್‌ ಆಸ್ಪತ್ರೆಗೆ  ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ಹೆಚ್‌,ಎಂ. ಕೋಮಲರ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಜಮೀನು ವಿವಾದ ವ್ಯಕ್ತಿಗಳಿಂದ ಹಲ್ಲೆ:
      ದಿನಾಂಕ 18-10-2013 ರಂದು ಮದ್ಯಾಹ್ನ ಕೂಡಿಗೆ ಗ್ರಾಮದ ನಿವಾಸಿ ಸೋಮಶೇಖರ ತಮ್ಮ ಸತೀಶ ಹಾಗೂ  ಪತ್ನಿ ವೇದಾವತಿಯವರು ತಮ್ಮ ಜಮೀನಿನಲ್ಲಿ ತಡುಗುಣಿ ಕಾಳನ್ನು ಬಿತ್ತನೆ ಮಾಡುತ್ತಿದ್ದಾಗ ಅದೇ ಗ್ರಾಮದ  ತಿಮ್ಮಪ್ಪ ಕೆ.ಸಿ, ಹಾಗೂ ಕೆ.ಸಿ. ಮೋಹನ ಎಂಬುವರು ಸೋಮಶೇಖರರವರಿಗೆ  ಅವಾಚ್ಯ ಶಬ್ದಗಳಿಂದ ಬೈದು, ವೇದಾವತಿಯವರಿಗೆ ಹೊಡೆಯಲು ಬಂದಿದ್ದು ಅದನ್ನು ತಡೆಯಲು ಹೋದ ಸತೀಶರವರಿಗೆ ಮೋಹನ ಹಾಗೂ ತಿಮ್ಮಪ್ಪ ರವರು ನೆಲಕ್ಕೆ ಕೆಡವಿ ಬಲಕೈಯಿಂದ  ಗುದ್ದಿ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನ  ಮಾಡಿದ್ದು, ಸೋಮಶೇಖರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ  ಕೈಗೊಂಡಿರುತ್ತಾರೆ. 

Friday, October 18, 2013

ದನಕ್ಕೆ ಬೈಕ್ ಡಿಕ್ಕಿ ಬೈಕ್ ಸವಾರನಿಗೆ ಗಾಯ ಓರ್ವ ಮಹಿಳೆ ಸಾವು
           ದನವೊಂದಕ್ಕೆ ಡಿಕ್ಕಿ ಹೊಡೆದು ಮೋಟಾರು ಬೈಕ್ ಸವಾರನಿಗೆ ಗಾಯಗಳಾಗಿ ಓರ್ವ ಮಹಿಳೆ ಸಾವಿಗೀಡಾದ ಘಟನೆ ಕುಶಾಲನಗರ ಸಮೀಪದ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 17-10-2013 ರಂದು ಸಂಜೆ ಸಮಯ ಬಸವನಹಳ್ಳಿ ಗ್ರಾಮದ ಹೊಸಕಾಡು ನಿವಾಸಿ ಸಿ.ಬಿ. ಕುಶಾಲಪ್ಪ ಎಂಬವರು  ಅವರ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಬಂದು ಮನೆಯ ಮುಂಬಾಗದ ಗೇಟಿನ ಬಳಿ ನಿಂತಿರುವಾಗ್ಗೆ ಆನೆಕಾಡು ಕಡೆಯಿಂದ ಕುಶಾಲನಗರದ ಕಡೆಗೆ ಪಲ್ಸರ್ ಮೋಟಾರ್ ಬೈಕ್ ನಂ ಕೆಎ 12 ಕೆ 8911 ರಲ್ಲಿ  ಅದರ ಚಾಲಕ ಕುಶಾಲನಗರ ನಿವಾಸಿ ವಿಶುಕುಮಾರ್ ಎಂಬವರು ಅವರ ತಾಯಿ ಚಂದ್ರಮ್ಮ ಎಂಬಾಕೆಯನ್ನು ಕೂರಿಸಿಕೊಂಡು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕುಶಾಲಪ್ಪನವರ  ಮನೆಯ ಮುಂಬಾಗದ ರಸ್ತೆಯಲ್ಲಿ ರಸ್ತೆಗೆ ದಾಟುತಿದ್ದ ಒಂದು ದನಕ್ಕೆ ಡಿಕ್ಕಿಪಡಿಸಿದ ಪರಿಣಾಮ ವಿಶುಕುಮಾರ್ ಹಾಗೂ ಚಂದ್ರಮ್ಮನವರು ರಸ್ತೆಗೆ ಬಿದ್ದು ಗಾಯಗಳಾಗಿದ್ದು, ಸ್ಥಳೀಯರು ಚಂದ್ರಮ್ಮ ಹಾಗೂ ವಿಶುಕುಮಾರ್‌ ರವರುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಂದ್ರಮ್ಮ ನವರು ಅಫಘಾತದ ತೀವ್ರ ಗಾಯದ ಪರಿಣಾಮ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮೋಟಾರು ಸೈಕಲ್ ಕಳವು, ಪ್ರಕರಣ ದಾಖಲು 
      ಮನೆಯ ಹಿಂಬದಿಯಲ್ಲಿ ನಿಲ್ಲಿಸಿದ್ದ ಬೈಕೊಂದನ್ನು ಯಾರೋ ಕಳವು ಮಾಡಿರುವ ಪ್ರಕರಣ ಸೋಮವಾರಪೇಟೆ ಠಾಣಾ ವ್ಯಾಫ್ತಿಯ ಮಾದಾಪುರ ಸಮೀಪದ ಇಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 16/10/2013ರಂದು ಇಗ್ಗೋಡ್ಲು ನಿವಾಸಿ ಅಬ್ದುಲ್ ಗಫಾರ್ ಎಂಬವರು ತಮ್ಮ ಮನೆಯ ಹಿಂಬದಿ ನಿಲ್ಲಿಸಿದ್ದ ಕೆಎ-01-ಎಕ್ಸ್-9460ರ ಮೋಟಾರು ಬೈಕನ್ನು ರಾತ್ರಿ ವೇಳೆ ಯಾರೋ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, October 17, 2013

ಸಾಲದ ವಿಚಾರದಲ್ಲಿ ಜಿರುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ:
ವ್ಯಕ್ತಿಯೊರ್ವರು ಸಾಲದ ಹಣ ಮರುಪಾವತಿಸಲು ಸಾದ್ಯವಾಗದ ಕಾರಣ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿಯಲ್ಲಿ ನಡೆದಿದೆ.  ಮಡಿಕೇರಿ ನಗರದ ಚೌಡೇಶ್ವರಿ ದೇವಾಲಯದ ಹತ್ತಿರ ವಾಸವಾಗಿದ್ದುಕೊಂಡು ಕಾರನ್ನು ಬಾಡಿಗೆಗೆ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಕೆ.ಕೆ. ಅಶೋಕ ಎಂಬ ವ್ಯಕ್ತಿ ಕಾರನ್ನು ಖರೀದಿಸದ ಸಾಲವನ್ನು ಪಾವತಿಸಲು ಸಾಧ್ಯವಾಗದ ಕಾರಣ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ಜೀವನದಲ್ಲಿ ಜಿಗುಪ್ಸೆ,ಮಹಿಳೆಯ ಆತ್ಮಹತ್ಯೆ:
ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ವಿ. ಬಾಡಗ ಗ್ರಾಮದಲ್ಲಿ ವಾಸವಾಗಿರುವ ರವಿ ಎಂಬವರ ಪತ್ನಿ ಶ್ರೀಮತಿ  ಜ್ಯೋತಿ ಎಂಬಾಕೆ ಮಕ್ಕಳಿಲ್ಲ ಎಂಬುದರ ಬಗ್ಗೆ ಬೇಸರದಿಂದಿದ್ದು ಇದೇ ಕಾರಣಕ್ಕೆ ನಿನ್ನೆ ದಿನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ  ಮನೆಯ ಒಳಗಡೆ  ವೇಲ್ ನಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,  ವಿರಾಜಪೇಟೆ ಗ್ರಾಮಾಂತರ  ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ  ಕ್ರಮ ಕೈಗೊಂಡಿರುತ್ತಾರೆ.
ಮೋಟಾರ್‌ ಸೈಕಲ್‌ ಕಳ್ಳತನ, ಪ್ರಕರಣ ದಾಖಲು:
ಮಡಿಕೇರಿ ನಗರದ ಆರ್‌ಎಂಸಿ ಬಳಿ ನಿಲ್ಲಿದ್ದ ಮೋಟಾರ್‌ ಸೈಕಲ್‌ ಕಳ್ಳತನವಾದ ಘಟನೆ ನಡೆದಿದೆ.  ದಿನಾಂಕ 14/10/2013 ರಂದು  ಮೈಸೂರು ನಿವಾಸಿ ಚಂದ್ರಶೇಖರ್ ಎಂಬವರು ತಮ್ಮ ಬಾಪ್ಸು ಕೆ.ಎ.45-ಕೆ.ಎ.45-ಕ್ಯು 4515ರ ಮೋಟಾರ್‌ ಸೈಕಲ್‌ನಲ್ಲಿ ಮಡಿಕೇರಿ ದಸರಾವನ್ನು ವೀಕ್ಷಿಸಲು ಬಂದು ರಾತ್ರಿ ವೇಳೆಯಲ್ಲಿ ಮಡಿಕೇರಿ ನಗರದ ಆರ್‌.ಎಂ.ಸಿ. ಬಳಿಯಲ್ಲಿ  ನಿಲ್ಲಿಸಿದ್ದು, ಬೆಳಗಿನ ಜಾವ 5-00 ಗಂಟೆಗೆ ನೋಡಿದಾಗ ವಾಹನವು ಅಲ್ಲಿರದೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಗೊತ್ತಾಗಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಹಳೇ ದ್ವೇಷ ವ್ಯಕ್ತಿಯ ಮೇಲೆ ಹಲ್ಲೆ:
 
ವ್ಯಕ್ತಿಯೊಬ್ಬರು ತೋಟದಿಂದ ಕೆಲಸ ಮುಗಿಸಿ ಮನೆಯ ಕಡೆಗೆ  ಹೋಗುತ್ತಿದ್ದ ವೇಳೆ  ಇಬ್ಬರು  ವ್ಯಕ್ತಿಗಳು  ಅವರ ಮೇಲೆ ಹಲ್ಲೆನಡೆಸಿದ ಘಟನೆ ನಾಪೋಕ್ಲು ಠಾಣಾ ವ್ಯಾಪ್ತಿಯ   ಮರಂದೋಡಾ ಗ್ರಾಮದಲ್ಲಿ ನಡೆದಿದೆ.  ದಿನಾಂಕ 16-10-2013 ರಂದು ಮರಂದೋಡ ಗ್ರಾಮದ ನಿವಾಸಿ ಅಣ್ಣಮಂಡ ಎಂ. ಚಂದ್ರಶೇಖರ್‌ ಎಂಬುವರು  ಕಾಫಿತೋಟಕ್ಕೆ ಕೆಲಸಕ್ಕೆ ಹೋಗಿ ಸಂಜೆ ಮನೆಯಕಡೆಗೆ ಹೋಗುತ್ತಿದ್ದಾಗ  ಆರೋಪಿಗಳಾದ ಅದೇ ಗ್ರಾಮದ ನರೇಶ ಮತ್ತು ಮೊಣ್ಣಪ್ಪ ಎಂಬ ವ್ಯಕ್ತಿಗಳು ಜಗಳ ಮಾಡಿ ಕಲ್ಲು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಚಂದ್ರಶೇಖರ್‌ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ವಿಪರೀತ ಮದ್ಯ ಸೇವನೆ ವ್ಯಕ್ತಿಯ ಸಾವು:
 
ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಅತಿಯಾಗಿ ಮದ್ಯಸೇವಿಸಿದ ಪರಿಣಾಮ ಸಾವನಪ್ಪಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಮತ್ತೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 16-10-2013 ರಂದು ವೆಸ್ಟ್‌ ನೆಮ್ಮಲೆ ಗ್ರಾಮದ ನಿವಾಸಿ 35 ವರ್ಷ ಪ್ರಾಯದ ಜೇನುಕುರುಬರ ರಾಮು ಎಂಬ ವ್ಯಕ್ತಿ ವಿಪರೀತ ಮದ್ಯಸೇವನೆ ಮಾಡಿದ್ದು ಮತ್ತೂರು ಗ್ರಾಮದ ಬಸ್‌ ಶೆಲ್ಟರ್‌ ಬಳಿ ಬಿದ್ದು  ಅಲ್ಲಿಯೇ ಮೃತಪಟ್ಟಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
                                                                        

Wednesday, October 16, 2013

ಲಕ್ಷಾಂತರ ರೂ ಮೌಲ್ಯದ ಕರಿಮೆಣಸು ಕಳವು 
      ಲಕ್ಷಾಂತರ ರೂಪಾಯಿ ಮೌಲ್ಯದ ಕರಿಮೆಣಸು ಕಳವು ಮಾಡಿದ ಘಟನೆ  ವಿರಾಜಪೇಟೆ ಸಮೀಪದ ಪಾಲಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 14/10/2013ರಂದು ರಾತ್ರಿ ಪಾಲಂಗಾಲ ಗ್ರಾಮದ ನಿವಾಸಿ ಕೆ.ಎಸ್‌.ಚಂಗಪ್ಪ ಎಂಬವರಿಗೆ ಅವರ ತೋಟದ ರೈಟರ್ ಅಶೋಕ ಎಂಬವರು ದೂರವಾಣಿ ಮೂಲಕ ಚಂಗಪ್ಪನವರ ತೊಟದ ಗೋದಾಮಿನ ಬಳಿ ಜನರ ಶಬ್ದ ಕೇಳುತ್ತಿರುವುದಾಗಿ ತಿಳಿಸಿದ್ದು, ಒಡನೆ ಚಂಗಪ್ಪನವರು ಗೋದಾಮಿನ ಬಳಿ ಹೋದಾಗ ಯಾರೋ ಅಪರಿಚಿತ ಕಳ್ಳರು ಚಂಗಪ್ಪ ಮತ್ತು ಅವರ ಅವರ ಜೊತೆಗಾರರನ್ನು ಕಂಡು ಓಡಿ ಹೋಗಿದ್ದು, ನಂತರ ಇವರುಗಳು ಗೋದಾಮಿನ ಬಳಿ ಹೋಗಿ ನೋಡಿದಾಗ ಕಳ್ಳರು ಗೋದಾಮಿನ ಮಾಡಿನ ಅಲ್ಯುಮಿನಿಯಂ ಶೀಟನ್ನು ತೆಗೆದು ನೈಲಾನ್ ಹಗ್ಗವೊಂದರ ಮೂಲಕ ಗೋದಾಮಿನ ಒಳಗೆ ಪ್ರವೇಶಿಸಿ ಸುಮಾರು ರೂ. 1,35,000/- ಮೌಲ್ಯದ 350 ಕೆ.ಜಿ.ಗಳಷ್ಟು ಕರಿ ಮೆಣಸನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆಯ ಬೀಗ ಮುರಿದು ನಗದು ಕಳವು 
      ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ನಗದು ಕಳವು ಮಾಡಿದ ಘಟನೆ ಸೋಮವಾರಪೇಟೆ ಸಮೀಪದ ನಗರೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 14/10/2013ರಂದು ನಗರೂರು ಗ್ರಾಮದ ಕೆ.ಎ.ಪ್ರಸಾದ್ ಎಂಬವರು ಅವರ ಕುಟುಂಬದೊಂದಿಗೆ ಮಡಿಕೇರಿಯ ದಸರಾ ನೋಡಲೆಂದು ಹೋಗಿದ್ದು, ನಂತರ 15/10/2013ರಂದು ವಾಪಾಸು ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳ ಪ್ರವೇಶಿಸಿ ಮನೆಯ ಒಳಗೆ ಬೀರುವಿನಲ್ಲಿದ್ದ ಸುಮಾರು ರೂ.17,000/-ವನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, October 15, 2013

ವಿನಾಕಾರಣ ಹಲ್ಲೆ, ಪ್ರಕರಣ ದಾಖಲು:

     ದಿನಾಂಕ 13.10.2013 ರಂದು ಸಮಯ ರಾತ್ರಿ 11:30 ಗಂಟೆಗೆ ಮಸಗೋಡು ಗ್ರಾಮದ ಎಂ.ಟಿ. ಸುದೀಪ ಹಾಗೂ ತೋಳೂರು ಶೆಟ್ಟಳ್ಳಿ ಗ್ರಾಮದ ಜಗದೀಶರವರೊಂದಿಗೆ ಆಯುಧ ಪೂಜಾ ಕಾರ್ಯ ಕ್ರಮ ನೋಡಿಕೊಂಡು ಸೋಮವಾರಪೇಟೆ ಮಾರ್ಕೆಟ್‌ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ  ಇಬ್ಬರು ಪೊಲೀಸ್‌ನವರು ಲಾಠಿಯನ್ನು ಹಿಡಿದುಕೊಂಡು ಸ್ವಲ್ಪ ಹೊತ್ತಿನ ಮುಂದೆ ಗಲಾಟೆ ಆಗಿರುತ್ತದೆ ಇಲ್ಲಿ ಏನು ಮಾಡುತ್ತೀದ್ದೀರಾ ಓಡಿ ಎಂದು ಹೇಳಿ ಲಾಠಿಯಿಂದ ಪಿರ್ಯಾದಿಯ ಎಡ ಕೈ ರಟ್ಟೆ, ಎಡ ಭಾಗದ ಸೊಂಟ ಮತ್ತು ತೊಡೆಯ ಭಾಗಕ್ಕೆ ಹೊಡೆದು ಎಡ ಕೈ ಅಂಗೈ, ಎಡ ಭಾಗದ ತೊಡೆ ಮತ್ತು ಬಲ ಕಣ್ಣಿನ ಹತ್ತಿರ ಹೊಡೆದು ಗಾಯ ಪಡಿಸಿರುತ್ತಾರೆ. ನಂತರ ಚಿಕಿತ್ಸೆ ಬಗ್ಗೆ  ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ದಾಖಲುಗೊಂಡಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
 

Monday, October 14, 2013

ಕ್ಷುಲ್ಲಕ ಕಾರಣ ಮಹಿಳೆ ಮೇಲೆ ಹಲ್ಲೆ:

     ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಸಹಪಾಠಿಯ ಮೇಲೆ ಹಲ್ಲೆನಡೆಸಿದ ಘಟನೆ ಐಗೂರು ಗ್ರಾಮದ ಕೂವರ್‌ಕೊಲ್ಲಿ ಕಾಫಿ ಎಸ್ಟೇಟ್‌ನಲ್ಲಿ ನಡೆದಿದೆ. ದಿನಾಂಕ 13.10.2013 ರಂದ ಸಮಯ 14:30 ಗಂಟೆಗೆ ಶ್ರೀಮತಿ ಸವಿತಾ ಎಂಬ ಮಹಿಳೆ ಕೂವರ್‌ ಕಾಫಿ ಎಸ್ಟೇಟ್‌ನಲ್ಲಿ ಕಳೆ ನಾಶಕ ಮದ್ದನ್ನು ಸಿಂಪಡಿಸುತ್ತಿರುವ ವೇಳೆ ಜೊತೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ  ಗೀತಾ  ಎಂಬಾಕೆಯನ್ನು ನೋಡಿ ನಗಾಡಿದರು ಎಂದು ಭಾವಿಸಿ ಗೀತಾಳು ಏಕಾಏಕಿ ಕೋಲು ತೆಗೆದು ಪಿರ್ಯಾದಿಯ ತಲೆಯ ಮೇಲ್ಭಾಗಕ್ಕೆ ಹೊಡೆದು ನೋವು ಪಡಿಸಿದ್ದಲ್ಲದೆ, ಕೈ ಮುಷ್ಠಿಯಿಂದ  ಎದೆಗೆ ಗುದ್ದಿ ನೋವು ಪಡಿಸಿದ್ದು ಈ ಸಂಬಂಧ ಸವಿತಾರವರು  ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರ,ಮ ಕೈಗೊಂಡಿದ್ದಾರೆ.
 
ಚಾಲಕನ ನಿರ್ಲಕ್ಷ್ಯ ಬಸ್ಸಿನಿಂದ ಕೆಳಗೆ ಬಿದ್ದು ಗಾಯ:
ದಿನಾಂಕ 10-10-2013 ರಂದು ಶ್ರೀಮತಿ ಪಿಲೋಮಿನಾ ಗಂಡ ಪೌತಿ ಜೋಸೇಪ್ @ ಕುಂಞಪ್ಪ,ಪ್ರಾಯ62 ವರ್ಷ, ಮನೆಕೆಲಸ, ವಾಸ ಅಮ್ಮತ್ತಿ ಕಾರ್ಮಾಡ್ ಗ್ರಾಮ, ವಿರಾಜಪೇಟೆ ಇವರು ಅಮ್ಮತ್ತಿಯಿಂದ ವಿರಾಜಪೇಟೆಗೆ ಕೆ.ಎಸ್.ಆರ್ ಟಿ.ಸಿ ಬಸ್‌ವೊಂದರಲ್ಲಿ ಬಂದು ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿಯ ಹತ್ತಿರ ಬಸ್ಸಿನಿಂದ ಇಳಿಯುತ್ತಿರುವಾಗ ಚಾಲಕ ಬಸ್ಸನ್ನು ಒಮ್ಮೆಲೆ ನಿರ್ಲಕ್ಷತನದಿಂದ ಚಾಲನೆ ಮಾಡಿದ ಪರಿಣಾಮ ಬಸ್ಸಿನಿಂದ ಕೆಳಗೆ ಬಿದ್ದು ಅವರ ಬಲದ ಕಾಲಿಗೆ ಬಲದ ಮೊಣಕೈಗೆ ತರಚಿದ ರಕ್ತ ಗಾಯವಾಗಿದ್ದು ಇದರ ಸಂಬಂಧ ಗಾಯಾಳು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯ ಬಗ್ಗೆ ದಾಖಲಾಗಿದ್ದು ಈ ಸಂಬಂಧ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಅಕ್ರಮ ಜೂಜಾಟ, 5 ಮಂದಿಯ ಬಂಧನ: :
     ಅಕ್ರಮವಾಗಿ ಇಸ್ಪೀಟ್‌ ಎಲೆಗಳಿಂದ ಜೂಜಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ವಿರಾಜಪೇಟೆನಗರದಲ್ಲಿ ನಡೆದಿದೆ.  ದಿನಾಂಕ 14-10-2013  ರಂದು ಬೆಳಗಿನ ಜಾವ ವಿರಾಜಪೇಟೆ ನಗರ ಠಾಣಾ ಉಪನಿರೀಕ್ಷಕರಾದ ಶ್ರೀ ಸುರೇಶ್‌ ಬೋಪಣ್ಣರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರೊಂದಿಗೆ ವಿರಾಜಪೇಟೆ ನಗರದ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕ ಸಾರ್ವಜನಿಕ ರಸ್ತೆಯ ಒತ್ತಾಗಿ ಖಾಲಿ ಜಾಗದಲ್ಲಿ ಕೆಲವು ವ್ಯಕ್ತಿಗಳು  ಸರ್ಕಾರದ ಪರವಾನಗೆ ಇಲ್ಲದೇ ಅಕ್ರಮವಾಗಿ ಹಣವನ್ನು ಪಣವಾಗಿದ್ದು ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳಿಂದ ಜೂಜಾಟ ಆಡುತ್ತಿದ್ದವರ ಮೇಲೆ  ದಾಳಿ ಮಾಡಿ 5 ಜನ ಆರೋಪಿಗಳನ್ನು  ಹಾಗೂ ಪಣವಾಗಿಟ್ಟ ಹಣ ಒಟ್ಟು ರೂ 2,290/- ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ

Sunday, October 13, 2013

ರಸ್ತೆ ಅಫಘಾತ ನಾಲ್ವರಿಗೆ ಗಾಯ 
      ಕಾರೊಂದು ರಸ್ತೆ ಬದಿಯ ಬರೆಗೆ ಡಿಕ್ಕಿಯಾದ ಪರಿಣಾಮ ನಾಲ್ವರಿಗೆ ಗಾಯಗಳಾದ ಘಟನೆ ಮಡಿಕೇರಿಯ ಸಂಪಾಜೆ ಸಮೀಪದ ಕೊಯನಾಡುವಿನಲ್ಲಿ ನಡೆದಿದೆ. ದಿನಾಂಕ 12-10-2013 ರಂದು ಮೈಸೂರು ನಿವಾಸಿ ಗುಣಶೇಖರ್ ಎಂಬವರು ತಮ್ಮ ತಂದೆ ಆನಂದರಾವ್‌, ತಮ್ಮನ ಹೆಂಡತಿ ಕಸ್ತೂರಿ, ತಂಗಿ ಸಂಧ್ಯಾ ಕುಮಾರಿ, ಅವರ ಮಗಳು ಸ್ವಾತಿ, ಭಾವನ ಮಗ ಉಲ್ಲಾಸನವರೊಂದಿಗೆ ಅವರ ಇನ್ನೋವಾ ಕಾರು ನಂಬರ್‌ ಕೆಎ-09-ಜೆಡ್‌-8555 ರಲ್ಲಿ ಮೈಸೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿರುವಾಗ್ಗೆ  ಸಂಜೆ ಸಮಯ ಸಂಪಾಜೆ ಕೊಯನಾಡು ಬಳಿ ಕಾರು ಚಾಲಕ ಸುರೇಶ್‌‌ರವರು  ಕಾರನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯ ಬರೆಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಕಸ್ತೂರಿ, ಸಂಧ್ಯಾ, ಆನಂದ ರಾವ್ ಮತ್ತು ಉಲ್ಲಾಸರವರಿಗೆ  ಗಾಯ ನೋವುಂಟಾಗಿದ್ದು ಗಾಯಾಳುಗಳಿಗೆ ಸಂಪಾಜೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ 
      ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ಸಮೀಪದ ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ. ಕಟ್ಟೆಮಾಡು ಗ್ರಾಮದ ಪೋತಂಡ್ರ ತೇಜ ಪ್ರಸಾದ್ ಎಂಬವರಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಸುಮಾರು 32 ವರ್ಷ ಪ್ರಾಯದ ವಿಠಲ ಎಂಬಾತನು ದಿನಾಂಕ 12/10/2013ರಂದು ಆತನು ವಾಶವಿರುವ ಲೈನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಜೀವನದಲ್ಲಿ ಜುಗುಪ್ಸೆಗೋಮಡಿರುವುದೇ ಆತ್ಮಹತ್ಯೆಗೆ ಕಾರಣವೆಂದುತಿಳಿದುಬಂದಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

Saturday, October 12, 2013

ಮನೆಗೆ ನುಗ್ಗೆ ಚಿನ್ನದ ಆಭರಣ ಹಾಗು ನಗದು ಕಳವು:

     ಮನೆಯಲ್ಲಿ ಯಾರೂ ಇಲ್ಲದೆ ಸಮಯ ಸಾಧಿಸಿ ಮನೆಗೆ ನುಗ್ಗಿ ಚಿನ್ನಾಭರಣ ಹಾಗು ನಗದು ಸೇರಿ 30 ಸಾವಿರ ರೂ ಕಳ್ಳತನ ಮಾಡಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮಕ್ಕಂದೂರು ಗ್ರಾಮದಲ್ಲಿ ನಡೆದಿದೆ. ಮಕ್ಕಂದೂರು ಗ್ರಾಮದ ಭದ್ರಕಾಳಿ ಪೈಸಾರಿಯಲ್ಲಿ ವಾಸವಾರಿರುವ ಬಿ.ಕೆ. ಶಿವಪ್ಪ ಎಂಬವರ ಮನೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಸಾಧಿಸಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗವನ್ನು ತೆರೆದು ಒಳಗೆ  ನುಗ್ಗಿ 4 ಗ್ರಾಂ ಚಿನ್ನದ ಉಂಗುರ ಮತ್ತು ಅದರೊಂದಿಗೆ ಮಗ ಇಟ್ಟಿದ್ದ ರೂ. 10,000=00 ಮತ್ತು ಮಲಗುವ ಕೋಣೆಯಲ್ಲಿದ್ದ ರೂ. 8,000=00 ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಚಿನ್ನದ ಉಂಗುರದ ಬೆಲೆ ರೂ. 12,000=00 ಮತ್ತು ನಗದು ಹಣ ರೂ. 18,000=00 ಒಟ್ಟು ರೂ. 30,000=00 ಆಗಿದ್ದಿ, ಈ ಸಂಬಂಧ ಬಿ.ಕೆ. ಶಿವಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:
     ದಿನಾಂಕ 11/10/2013 ರಂದು ಮಧ್ಯಾಹ್ನ 2.00 ಗಂಟೆ ಸಮಯದಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಕೊಟ್ಟಗೇರಿ ಗ್ರಾಮ ಲಕ್ಷ್ಮಣತೀರ್ಥ ಹೊಳೆಯಲ್ಲಿ ಕಳ್ಳಿಚಂಡ ಕುಶಾಲಪ್ಪ ಎಂಬವರ ಗದ್ದೆಯ ಪಕ್ಕದ ಜಾಗದಲ್ಲಿ ಹೊಳೆಯಿಂದ ಸರ್ಕಾರದ ರಹದಾರಿ ಇಲ್ಲದೇ ತೆಪ್ಪದ ಮೂಲಕ ಮರಳು ಸಾಗಿಸುತ್ತಿದ್ದಾರೆಂದು ಬಾತ್ಮೀದಾರರು ಮಾಹಿತಿ ಮೇರೆಗೆ ಫಿರ್ಯಾದಿ ಟಿ.ಸಿ. ಚಂದ್ರನ್‌, ಕಂದಾಯ ನಿರೀಕ್ಷಕರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.