Sunday, March 31, 2013

ಅಕ್ರಮ ಮದ್ಯ ಮಾರಾಟ ಓರ್ವನ ಬಂಧನ 
  • ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ ಸುಂಟಿಕೊಪ್ಪ ಪೊಲೀಸರು ಆತನಿಂದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಸುಂಟಿಕೊಪ್ಪ ಬಳಿಯ ಅತ್ತೂರು ನಲ್ಲೂರು ಗ್ರಾಮದ ಮತ್ತಿಕಾಡು ವಿನ ಭಂಡಾರಿ ತೋಟದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸುಂಟಿಕೊಪ್ಪ ಠಾಣಾಧಿಕಾರಿ ಕೃಷ್ಣಕುಮಾರ್‌ರವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಅತ್ತೂರು ನಲ್ಲೂರು ಗ್ರಾಮದ ಮತ್ತಿಕಾಡುವಿನ ಭಂಡಾರಿ ತೋಟದ ಬಳಿ ಸಂದೀಪ್ ಎಂಬವರು ತಮ್ಮ ಅಂಗಡಿ ಮುಂಭಾಗದಲ್ಲಿ ಸರ್ಕಾರದ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆತನಿಂದ ಸುಮಾರು ರೂ.3000/- ಬೆಲೆಬಾಳುವ 53 ಕ್ವಾರ್ಟರ್ ಮದ್ಯವನ್ನು ವಶಪಡಿಸಿಕೊಂಡು ಆತನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. 
ವ್ಯಕ್ತಿ ನಾಪತ್ತೆ ಪ್ರಕರಣ ದಾಖಲು 

  • ಕಾರವಾರಕ್ಕೆ ಹೋಗುವುದಾಗಿ ಹೇಳಿ ಹೋದ ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 30/03/2013ರಂದು ಸೋಮವಾರಪೇಟೆ ನಗರದ ನಿವಾಸಿ 56 ವರ್ಷ ಪ್ರಾಯದ ಎಂ.ಎನ್.ನಾಣಯ್ಯ ಎಂಬವರು ಕಾರವಾರಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ದಮಯಂತಿ ಎಂಬವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, March 30, 2013

ಬಾರ್‌ನಲ್ಲಿ ಗಲಾಟೆ, ಬಿಯರ್ ಬಾಟಲಿಯಿಂದ ಹಲ್ಲೆ 
  • ವ್ಯಕ್ತಿಯೊಬ್ಬರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಮಡಿಕೇರಿ ನಗರದ ಚರ್ಚ್‌ಸೈಡ್ ಬಾರ್‌ನಲ್ಲಿ ನಡೆದಿದೆ. ದಿನಾಂಕ 29-3-2013 ರಂದು ರಾತ್ರಿ ಸಮಯ 10.30 ಗಂಟೆಗೆ ನಾಪೋಕ್ಲುವಿನ ಸುಭಾಷ್ ನಗರದ ನಿವಾಸಿ ಮಿಥುನ್ ಎಂಬವರು ತನ್ನ ಸ್ನೇಹಿತರೊಂದಿಗೆ ನಗರದ ಚರ್ಚ್‌ ಸೈಡ್‌ ಹೋಟೆಲಿಗೆ ಹೋಗಿ ಮದ್ಯಪಾನ ಮಾಡಿ, ವಾಪಾಸು ಬರುವಾಗ  ಪುನಃ ಒಂದು ಬಿಯರ್‌ನ್ನು ಕೇಳಿದ್ದು, ಈ ವಿಚಾರದಲ್ಲಿ ಕ್ಯಾಶಿಯರ್‌ ಮತ್ತು ಸಪ್ಲಯರ್‌ನೊಂದಿಗೆ ಮಾತಾಗಿದ್ದು, ನಂತರ ಮಿಥುನ್‌ರವರು ಹೋಟೆಲಿನಿಂದ ವಾಪಾಸು ಹೋಗುವಾಗ ಹಿಂದಿನಿಂದ  ಹೋಟೆಲ್‌ ಸಪ್ಲಯರ್‌ ಒಬ್ಬ ಮಿಥುನ್‌ರವರ ತಲೆಗೆ ಬಿಯರ್ ಬಾಟಲಿಯನ್ನು ಎಸೆದು ಗಾಯಗೊಳಿಸಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಮದ ಕಡಿದು ಹಲ್ಲೆ. 
  • ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವ ಘಟನೆ ಪೊನ್ನಂಪೇಟೆ ಸಮೀಪದ ಬಾಳೆಲೆಯಲ್ಲಿ ನಡೆದಿದೆ. ದಿನಾಂಕ 28/03/2013 ರಂದು  ರಾತ್ರಿ 7.30 ಪಿ.ಎಂ ಬಾಳೆಲೆಯ ಅರಮಣಮಾಡ ಮಾದಯ್ಯ ಎಂಬವರ ತೋಟದ ಲೈನ್ ಮನೆಯಲ್ಲಿ ವಾಶವಿರುವ ಎರವರ ಸಿದ್ದ ಎಂಬವರಿಗೂ ಅವರ ಪಕ್ಕದ ಮನೆಯಲ್ಲಿ ವಾಸವಿರುವ ಮಂಜ ಎಂಬವರಿಗೂ  ಊಟ ಮಾಡುತ್ತಿದ್ದ ವಿಚಾರವಾಗಿ ಮಾತಾಗಿದ್ದು. ಸಿದ್ದರವರು ಅವನನ್ನು ಊಟದ ಹಣವನ್ನು ಕೊಡುವಂತೆ   ಕೇಳಿದಾಗ ಮಂಜುರವರು ಹಣ ಕೊಡುವುದಾಗಿ ಪಕ್ಕದಲ್ಲಿದ್ದ ಅವನ ಮನೆಗೆ ಹೋಗಿ ಬರುವಾಗ ಸರಾಯಿ ಕುಡಿದುಕೊಂಡು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದು ಸಿದ್ದ ಕುಳಿತ್ತಿದ್ದ ಮನೆಯ ವರಾಂಡಕ್ಕೆ ಬಂದು ಯಾವ ವಿಚಾರವನ್ನು ಕೇಳದೆ  ಕೈಯಲ್ಲಿದ್ದ ಕತ್ತಿಯಿಂದ  ಹಣೆಯ ಭಾಗಕ್ಕೆ ಎಡ ಕಿವಿಗೆ , ಎಡ ಕೈಗೆ, ಆತನ ಕೈಯಲ್ಲಿದ್ದ ಕತ್ತಿಯಿಂದ ಕಡಿದಿದ್ದು, ಸಿದ್ದನನ್ನು ಚಿಕಿತ್ಸೆ ಬಗ್ಗೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ದಿರುವ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಅಕ್ರಮ ಜೂಜಾಟ, ಐವರ ಬಂಧನ ರೂ. 17,330/- ವಶ
  •   ಅಕ್ರಮವಾಗಿ ಜೂಜಾಡುತ್ತಿದ್ದ ಐವರನ್ನು ಬಂಧಿಸಿರುವ ಭಾಗಮಂಡಲ ಪೊಲೀಸರು ರೂ.17,330/- ಗಳನ್ನು ವಶಪಡಿಸಿಕೊಂಡಿದ್ದಾರೆ. ಭಾಗಮಂಡಲ ಠಾಣಾ ವ್ಯಾಪ್ತಿಯ ಕರಿಕೆ ಗ್ರಾಮದ ಎಳ್ಳುಕೊಚ್ಚಿಯ ಬೇಕಲ್ ಸೋಮನಾಥ ಎಂಬವರ ಖಾಲಿ ಜಾಗದಲ್ಲಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಭಾಗಮಂಡಲ ಠಾಣಾಧಿಕಾರಿ ಅಯ್ಯನಗೌಡ ಹಾಗೂ ಸಿಬ್ಬಂದಿಯವರು ದಿನಾಂಕ 29/03/2013ರಂದು ಬೇಕಲ್ ಸೋಮನಾಥರವರ ಖಾಲಿ ಜಾಗದಲ್ಲಿ ಜೂಜಾಡುತ್ತಿದ್ದ ಸ್ಥಳಕ್ಕೆ ಧಾಳಿ ನಡೆಸಿ ಅಲ್ಲಿ ಅಕ್ರಮವಾಗಿ ಇಸ್ಪೇಟು ಎಲೆಗಳಿಂದ ಜೂಜಾಡುತ್ತಿದ್ದ ಕರಿಕೆಯ ಪ್ರಕಾಶ್, ಶ್ಯಾಂ ಪ್ರಕಾಶ್, ಅಯೊಂಟೋ ಹಾಗೂ ಕೇರಳದ ವಾಣಿದಾಸ್ ಮತ್ತು ಕುಂಞಿ ಕಟ್ಟಿನ್ ಎಂಬವರನ್ಉ ಬಂಧಿಸಿ ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ.17,330/- ಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. 
ಮಿನಿ ಬಸ್ ಡಿಕ್ಕಿ, ಇಬ್ಬರಿಗೆ ಗಾಯ 
  • ಮ್ಯಾಜಿಕ್ ಐರಿಸ್ ವಾಹನಕ್ಕೆ ಮಿನಿ ಬಸ್ ಒಂದು ಡಿಕ್ಕಿಯಾಗಿ ಇಬ್ಬರಿಗೆ ಗಾಯಗೊಂಡ ಘಟನೆ ಭಾಗಮಂಡಲ ಸಮೀಪದ ಕಾರುಗುಂದ ಗ್ರಾಮದಲ್ಲಿ ನಡೆದಿದೆ. ದಿನಾಂಕ 29-3-13 ರಂದುಕೊಳಗದಾಳು ಗ್ರಾಮದ ಅಜ್ಜಿನಂಡ ಸಚಿನ್ ಎಂಬವರು ತನ್ನ  ಸ್ನೇಹಿತರಾದ ಚೋದಂಡ ಸೋಮಯ್ಯ ಹಾಗು ಅಜ್ಜಿನಂಡ ಬೆಳ್ಳಿಯಪ್ಪ ನವರೊಂದಿಗೆ ನಾಪೋಕ್ಲುವಿನಿಂದ  ಮ್ಯಾಜಿಕ್ ಐರಿಸ್ ಗಾಡಿ ನಂ ಕೆಎ-12-ಎ-6592 ರಲ್ಲಿ ಬರುತ್ತಿರುವಾಗ್ಗೆ ಎದುರುಗಡೆಯಿಂದ ಮಿನಿ ಬಸ್ಸ್ ವಾಹನ ಸಂಖ್ಯೆ ಕೆಎ-04-ಡಿ-3548 ನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸಚಿನ್‌ರವರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಜಖಂಗೊಂಡು ಸಚಿನ್ ಹಾಗು ಸೋಮಯ್ಯ ಎಂಬುವವರಿಗೆ ಗಾಯಗಳಾಗಿರುವ ಬಗ್ಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 

Friday, March 29, 2013

ಪಾದಚಾರಿಗೆ ಕಾರು ಡಿಕ್ಕಿ, ಗಾಯ 
  • ಪಾಧಚಾರಿಯೊಬ್ಬರಿಗೆ ಕಾರು ಡಿಕ್ಕಿಯಾಗಿ ಗಾಯಗಳಾದ ಘಟನೆ ಶನಿವಾರಸಂತೆ ಸಮೀಪದ ನಂದಿಗುಂದ ಗ್ರಾಮದಲ್ಲಿ ಇಂದು ನಡೆದಿದೆ. ಇಂದು ದಿನಾಂಕ 29/03/2013 ರ ಬೆಳಿಗ್ಗೆ 6.20 ಗಂಟೆಗೆ ನಂದಿಗುಂದ ಗ್ರಾಮದ ಜಿ.ಎಂ.ಧರ್ಮಪ್ಪ ಎಂಬವರ ತಮ್ಮ ಗೋಪಾಲಕೃಷ್ಣನು ತೋಟಕ್ಕೆ ಕೆಲಸದ ಜನರನ್ನು ಕರೆಯಲು ನಂದಿಗುಂದ ಗ್ರಾಮದ ಬಸ್ ತಂಗುದಾಣದ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಸೋಮವಾರಪೇಟೆ ಕಡೆಯಿಂದ ಒಂದು ಸ್ವಿಫ್ಟ್‌ ಡಿಸೈರ್‌ ಕಾರನ್ನು ಅದರ ಚಾಲಕ ಅನಿಲ್ ಎಂಬಾತನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗೋಪಾಲಕೃಷ್ಣರವರಿಗೆ ಹಿಂಭಾಗದಿಂದ ಡಿಕ್ಕಿಪಡಿಸಿದ ಪರಿಣಾಮ  ಗೋಪಾಲಕೃಷ್ಣರವರಿಗೆ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಬಸ್ ಸಮಯದ ವಿಚಾರದಲ್ಲಿ ಕಲಹ, ಓರ್ವನ ಮೇಲೆ ಹಲ್ಲೆ. 
  • ಬಸ್ ಹೊರಡುವ ಸಮಯದ ವಿಚಾರದಲ್ಲಿ ಕಲಹವುಂಟಾಗಿ ಖಾಸಿ ಬಸ್ ಚಾಲಕನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಪೊನ್ನಂಪೇಟೆ ಸಮೀಪದ ಜೋಡುಬೆಟ್ಟಿಯಲ್ಲಿ ನಡೆದಿದೆ. ದಿನಾಂಕ 28/03/2013ರಂದು ಮದ್ಯಾಹ್ನ ಗೋಣಿಕೊಪ್ಪದಿಂದ ಹೊರಡುವ ಜಯಲಕ್ಷ್ಮಿ ಬಸ್ಸಿನ ಚಾಲಕ ಎಂ.ಎ.ನಸೀರ್ ಎಂಬವರಿಗೂ ಮತ್ತೊಂದು ಖಾಸಗಿ ಬಸ್ ನ ಚಾಲಕ ಸತೀಶ್ ಎಂಬಾತನಿಗೂ ಪೊನ್ನಂಪೇಟೆಯಲ್ಲಿ ಬಸ್ ಹೊರಡುವ ಸಮಯದ ವಿಚಾರವಾಗಿ ಮಾತಿಗೆ ಮಾತಾಗಿದ್ದು, ನಂತರ ರಾತ್ರಿ 9.00 ಗಂಟೆಯ ಸಮಯದಲ್ಲಿ ಎಂ.ಎ. ನಸೀರ್‌ರವರು ಕರ್ತವ್ಯ ಮುಗಿಸಿ ಪೊನ್ನಂಪೇಟೆ ಬಳಿಯ ಜೋಡುಬೆಟ್ಟಿಯ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಸತೀಶನು ಒಂದು ಬೈಕಿನಲ್ಲಿ ಬಂದು ನಸೀರ್‌ವರ ಮೇಲೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಕ್ರಮ ಮದ್ಯ ಮಾರಾಟ, ಪ್ರಕರಣ ದಾಖಲು 
  • ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಶಾಲನಗರ ಸಮೀಪದ ಹೆಬ್ಬಾಲೆಯ ಹಳೆಗೋಟೆ ಎಂಬಲ್ಲಿ ಓರ್ವ ವ್ಯಕ್ತಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಕುಶಾಲನಗರ ಪಿಎಸ್‌ಐ ಚಿಕ್ಕಸ್ವಾಮಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದಾಗ ಹಳೆಗೋಟೆಯ ಒಂದು ಕಿರಾಣಿ ಅಂಗಡಿಯ ಮುಂದೆ ಓರ್ವ ವ್ಯಕ್ತಿ ಪ್ಲಾಸ್ಟಿಕ್ ಕೈಚೀಲವ್ನನು ಹಿಡಿದು ನಿಂತಿದ್ದು, ಪೊಲೀಸರನ್ನು ಕಂಡ ಒಡನೆ ಕೈಚೀಲವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಜೊತೆಯಲ್ಲಿದ್ದ ಪಂಚಾಯಿತಿದಾರರು ಆತನ್ನು ದೇವಪ್ಪ ಎಂದು ಗುರುತಿಸಿರುತ್ತಾರೆ. ನಂತರ ಪಿಎಸ್‌ಐರವರು ಆತನು ಬಿಟ್ಟು ಹೋಗಿದ್ದ ಕೈಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 180 ಎಂಎಲ್‌ನ 31 ಒರಿಜಿನಲ್ ಚಾಯ್ಸ್ ಮದ್ಯದ ಬಾಟಲಿಗಳಿದ್ದು ಅವುಗಳನ್ನು ಮಹಜರು ಮೂಲಕ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

Thursday, March 28, 2013

ಪರೀಕ್ಷಾ ಫಲಿತಾಂಶದ ಭಯ, ವಿದ್ಯಾರ್ಥಿ ಆತ್ಮಹತ್ಯೆ

  • ಪರೀಕ್ಷೆಯಲ್ಲಿ ಅನುತ್ತೀರ್ಣನಾಗಬಹುದೆನ್ನುವ ಭಯದಿಂದ ವಿದ್ಯಾರ್ಥಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ಸಮೀಪದ ನಗರಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 26.03.2013 ರಂದು ನಗರಳ್ಳಿ ಗ್ರಾಮದ ಪುಪ್ಪಯ್ಯ ಎಂಬವರ ಮಗ 8ನೇ ತರಗತಿ ವಿದ್ಯಾರ್ಥಿ ಚಂದನ್ ಶಾಂತಳ್ಳಿ ಗ್ರಾಮದ ಕುಮಾರಲಿಂಗಶ್ವೇರ ಫ್ರೌಡಶಾಲೆಗೆ ಪರೀಕ್ಷೆಗೆಂದು ಹೋದವನು ಪರೀಕ್ಷೆ ಬರೆದು ಶಾಲೆ ಬಿಟ್ಟ ನಂತರ ಮನೆಗೆ ಬಾರದೆ ಇದ್ದು.  ದಿನಾಂಕ 27.03.2013 ರಂದು ಬೆಳಿಗ್ಗೆ ಪುಪ್ಪಯ್ಯನವರು ಈ ಬಗ್ಗೆ ಶಾಲಾ ಉಪಾಧ್ಯಾಯರನ್ನು ವಿಚಾರಿಸಲೆಂದು ಶಾಂತಳ್ಳಿ ಶಾಲೆಗೆ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಗರಳ್ಳಿ ಗ್ರಾಮದ ಧರ್ಮಪ್ಪನವರ ಖಾಲಿ ಜಾಗದಲ್ಲಿ ಒಂದು ಕಾಡು ಮರದ ಕೊಂಬೆಗೆ ಚಂದನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದುದನ್ನು ಕಂಡಿದ್ದು,  ಪರೀಕ್ಷೆಯಲ್ಲಿ ಸರಿಯಾಗಿ ಬರೆಯದೆ ಅನುತ್ತೀರ್ಣನಾಗಬಹುದೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಮಹಿಳೆಗೆ ಮಾನಸಿಕ, ದೈಹಿಕ ಹಿಂಸೆ 
  • ಮಹಿಳೆಯೋರ್ವರಿಗೆ ಆಕೆಯ ಗಂಡ ಹಾಗೂ ಮನೆಯವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಬಗ್ಗೆ ಪ್ರಕರಣವು ಪೊನ್ನಂಪೇಟೆ ಠಾಣೆಯಲ್ಲಿ ವರದಿಯಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಆಶ್ರಿತಳಾಗಿದ್ದ ಅನುಪಮಾ ಎಂಬಾಕೆಯು 23/06/2012ರಂದು ಪೊನ್ನಂಪೇಟೆ ನಗರದ ನಿವಾಸಿ ಮಧು ಎಂಬವರನ್ನು ಮದುವೆಯಾಗಿದ್ದು, ಮದುವೆಯ ನಂತರ ಪತಿ ಮಧು, ಮಾವ ಸುಂದರೇಶ್ ಹಾಗೂ ಅತ್ತೆ ಇಂದಿರಾರವರು ಅನುಪಮರವರಿಗೆ ವಿನಾ ಕಾರಣ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು ನಂತರ 08/01/2013ರಂದು ಏಕಾ ಏಕಿ ಆಕೆಯನ್ನು ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಬಿಟ್ಟು ಹೋಗಿದ್ದು, ನಂತರ ಯಾವುದೇ ರೀತಿಯ ಸೌಹಾರ್ದಯುತ ಬಾಳುವೆ ನಡೆಸುವ ಪ್ರಯತ್ನ ಮಾಡದೆ ಇದ್ದು ದೂರವಾಣಿ ಮೂಲಕ ಅಶ್ಲೀಲವಾಗಿ ನಿಂದಿಸುವುದು ಮಾಡುತ್ತಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Wednesday, March 27, 2013

ಹಳೆ ದ್ವೇಷ, ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ
  • ಹಳೆ ವೈಷಮ್ಯದಿಂದ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಘಟನೆ ಕುಶಾಲನಗರ ಸಮೀಪದ ದೊಡ್ಡ ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 26-03-2013 ರಂದು ರಾತ್ರಿ ಸಮಯ 09:00 ಗಂಟೆಗೆ  ದೊಡ್ಡಬೆಟ್ಟಗೇರಿ ಗ್ರಾಮದ ನಿವಾಸಿ ತೀರ್ಥೇಶ ಎಂಬವರು ತಮ್ಮ  ಹೊಲದಲ್ಲಿ ಶುಂಠಿಗೆ ನೀರು ಹಾಯಿಸುತ್ತಿರುವಾಗ ಅದೇ ಗ್ರಾಮದ ದೊರೆ ಎಂಬುವನು ಹಳೇ ವೈಷಮ್ಯದಿಂದ ತೀರ್ಥೇಶರವರ ಬಳಿ ಬಂದು ಜಗಳ ತೆಗೆದು ಅಶ್ಲೀಲ ಶಬ್ಧಗಳಿಂದ ಬೈದು, ಕತ್ತಿಯಿಂದ  ತಲೆಗೆ ಕಡಿದು ಗಾಯಗೊಳಿಸಿರುವ ಬಗ್ಗೆ ನೀಡಿದ ದೂರಿಗೆ ಕುಶಾಲನಗರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಮನೆ ಮುಂದೆ ನಿಲ್ಲಿಸಿದ್ದ ಜೀಪ್ ಕಳವು 
  • ಮನೆಯ ಮುಂದೆ ನಿಲ್ಲಿಸಿದ್ದ ಜೀಪನ್ನು ಕಳವು ಮಾಡಿದ ಘಟನೆ ವಿರಾಜಪೇಟೆ ನಗರದ ಶಾಂತಿ ನಗರದಲ್ಲಿ ನಡೆದಿದೆ. ವಿರಾಜಪೇಟೆ ಸಮೀಪದ ಯೂರೋ ಕೂರ್ಗ್  ಎಸ್ಟೇಟ್ ನಲ್ಲಿ  ರೈಟರ್ ಕೆಲಸ ಮಾಡುತ್ತಿರುವ ಟಿ.ಕೆ.ಉಸ್ಮಾನ್ ಎಂಬವರು ದಿನಾಂಕ 26-3-2013 ರಂದು ಸ್ವಂತ ಕೆಲಸದ ನಿಮಿತ್ತ ಮಡಿಕೇರಿಗೆ ತೆರಳಿ  ಸಂಜೆ ವಾಪಾಸು ಶಾಂತಿನಗರದ ವಾಸದ ಮನೆಗೆ ಬಂದಿದ್ದು, ಅವರ ತೋಟದ ಮನೆಯಲ್ಲಿ ನಿಲ್ಲಿಸಿದ್ದ ಪಿಕ್ ಅಪ್ ಜೀಪ್ ಸಂ ಕೆಎ-13-ಎಫ್-9457   ವಾಹನವನ್ನು ಯಾರೋ  ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಇಸ್ಮಾಯಿಲ್ ಎಂಬವರು ದೂರವಾಣಿ ಮೂಲಕ ಉಸ್ಮಾನ್‌ರವರಿಗೆ  ಕೂಡಲೆ ಅವರು ತೋಟದ ಮನೆಗೆ ಹೋಗಿ ನೋಡುವಾಗ್ಗೆ ಸುಮಾರು 2,50,000/- ರೂ ಬೆಲೆಬಾಳುವ ಪಿಕ್ ಅಪ್ ಜೀಪ್ ವಾಹನವು ಕಳುವಾಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ. 
ಹೋಟೆಲ್ ಉದ್ಯೋಗಿ ಮೇಲೆ ಗುಂಪು ಹಲ್ಲೆ 
  • ಹೋಟೆಲ್ ಉದ್ಯೋಗಿಯೊಬ್ಬರ ಮೇಲೆ ಕೆಲ ಯುವಕರು ಗುಂಪು ಹಲ್ಲೆ ಮಾಡಿದ ಘಟನೆ ಕುಶಾಲನಗರದ ಬಾಪೂಜಿ ಬಡಾವಣೆಯಲ್ಲಿ ನಡೆದಿದೆ. ದಿನಾಂಕ 26/3/2013 ರಂದು ಸಂಜೆ ಸಮಯ 4-30 ಪಿ.ಎಂ.ಗೆ ಕುಶಾಲನಗರದ ಬಾಪೂಜಿ ಬಡಾವಣೆಯಲ್ಲಿರುವ ಡೆಲಿಷಿಯಸ್ ಹೋಟೆಲ್ ನಲ್ಲಿ ಕೆಲ ಹುಡುಗಿಯರು ಕಾಫಿ ಕುಡಿಯುತ್ತಿರುವಾಗ ಕುಶಾಲನಗರದ ನಿವಾಸಿ  ಚೇತನ್ ಎಂಬಾತನು ಹೋಟೆಲ್ ಗೆ ಪ್ರವೇಶ ಮಾಡಿ ವಿನಾ ಕಾರಣ ಹುಡುಗಿಯರಿಗೆ ತೊಂದರೆ ಮಾಡುತ್ತಿದ್ದು ಈ ಬಗ್ಗೆ ಕೇಳಲು ಹೋದ ಹೋಟೆಲ್ ಕ್ಯಾಷಿಯರ್ ಫಾಜಿಲ್ ಎಂಬವರಿಗೆ ಅಶ್ಲೀಲ ಶಬ್ದಗಳಿಂದ ಬೈದು ಹೋಟೆಲ್ ನಲ್ಲಿದ್ದ ಕುರ್ಚಿಯಿಂದ ಕೈಗೆ ಮಂಡಿಗೆ,ಎದೆಗೆ ಹೊಡೆದು ಗಾಯಪಡಿಸಿದಲ್ಲದೆ ಆತನ ಜೊತೆಯಲ್ಲಿದ್ದ  ಸಂತೋಷ್ ಮತ್ತು ಯೋಗೆಶ್ ರವರುಗಳು ಕೈಯಿಂದ ಹೊಡೆದು ನೋವುಪಡಿಸಿದ್ದು ಆ ಸಮಯದಲ್ಲಿ ಫಾಜಿಲ್ ರವರ ಸೋದರ ಫೈರೋಜ್ ಅಹಮದ್ ಹಾಗೂ ಸುಬ್ರಮಣಿ ಎಂಬವರು ಬಂದು ಬಿಡಿಸಿ ಫಾಜಿಲ್‌ರವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಮೋಟಾರು ಬೈಕಿಗೆ ಕಾರು ಡಿಕ್ಕಿ , ಬೈಕ್ ಸವಾರನಿಗೆ ಗಾಯ 
  • ಮೋಟಾರು ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯಗಳಾದ ಘಟನೆ ಶನಿವಾರಸಂತೆ ಸಮೀಪದ ಹೆಗ್ಗುಳ ಗ್ರಾಮದಲ್ಲಿ ನಡೆದಿದೆ. ದಿನಾಂಕ: 26-03-2013 ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದ ವೇದಮೂರ್ತಿ ಎಂಬವರು  ಮದುವೆಯ ಆಮಂತ್ರಣ ಪತ್ರ ಕೊಡಲು ಸೋಮವಾರಪೇಟೆಗೆ ತನ್ನ ಗೆಳೆಯನೊಂದಿಗೆ ಕೆಎ-05-ಈ-3109ರ ಮೋಟಾರು ಬೈಕಿನಲ್ಲಿ ಹೋಗಿ ಆಮಂತ್ರಣ ಪತ್ರ ಕೊಟ್ಟು ವಾಪಾಸ್ಸು ತನ್ನ ಮನೆಗೆ ವಾಪಾಸ್ಸು ಬರುತ್ತಿರುವಾಗ್ಗೆ ಹೆಗ್ಗುಳ ಗ್ರಾಮದ  ಸಮೀಪವಿರುವ ತಿರುವಿನಲ್ಲಿ ಎದುರುಗಡೆಯಿಂದ ಕೆಎ-12-ಎಂ-169 ರ ಮಾರುತಿ ಕಾರಿನ ಚಾಲಕ ಬಸವರಾಜು ಎಂಬವರು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ವೇದಮೂರ್ತಿಯವರು ಬೈಕಿನಿಂದ ಕೆಳಗೆ ಬಿದ್ದು ಶರೀರಕ್ಕೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ, ಗಾಯ 
  • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ಶನಿವಾರಸಂತೆ ಸಮೀಪದ ಗೋಪಾಲಪುರದ ನಿವಾಸಿ ವಿಶ್ವನಾಥ ಎಂಬವರ ಅಣ್ಣ ವಿಜು ಎಂಬವರು ಸೋಮವಾರಪೇಟೆಯಲ್ಲಿ ಟೈಲರಿಂಗ್‌ ಕೆಲಸ ಮಾಡಿಕೊಂಡಿದ್ದು, ವಿಶ್ವನಾಥರವರು ಸುಮಾರು 2  ತಿಂಗಳ ಹಿಂದೆ ಬಟ್ಟೆ ಹೊಲಿದು ಕೊಡಲು ಕೊಟ್ಟಿದ್ದು, ದಿನಾಂಕ : 19-03-2013 ರಂದು ಬಟ್ಟೆ ಹೊಲಿಯಲು ಕೊಟ್ಟ ವಿಚಾರದಲ್ಲಿ ವಿಶ್ವನಾಥರವರಿಗೂ ಅವರ ಅಣ್ಣನಿಗೂ ಮಾತಿಗೆ ಮಾತು ಬೆಳೆದಿದ್ದು, ಆಗ ಆರೋಪಿ ಗೋಪಾಲಪುರ ಗ್ರಾಮದ ಹೊನ್ನರಾಜು ಎಂಬವರು ಬಂದು  ಅಶ್ಲೀಲ ಶಬ್ದಗಳಿಂದ ವಿಶ್ವನಾಥರವರಿಗೆ ಬೈಯ್ದು ಕೈಯಿಂದ ಹೊಡೆದು ಕಾಲಿನಿಂದ ಒದ್ದು, ದೊಣ್ಣೆಯಿಂದ ಕಣ್ಣಿನ ಭಾಗಕ್ಕೆ ಹೊಡೆದು ಗಾಯಗೊಳಿಸಿದ್ದು, ಶನಿವಾರಸಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ನೀಡಿದ ದೂರಿನ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಸಿಡಿಲು ಬಡಿದು ಕೂಲಿ ಕಾರ್ಮಿಕನ ಸಾವು 
  • ಸಿಡಿಲು ಬಡಿದು ಕೂಲಿ ಕಾರ್ಮಿಕನೋರ್ವ ಮರದಿಂದ ಬಿದ್ದು ಸಾವಿಗೀಡಾದ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ಬಿಬಿಟಿಸಿ, ಫೇರ್ ಲ್ಯಾಂಡ್ ಎಸ್ಟೇಟಿನ ಲೈನು ಮನೆಯಲ್ಲಿ ವಾಸವಾಗಿರುವ ಮಾದೇವ ಶೆಟ್ಟಿರವರು ಹೆಂಡತಿ ದೇವಿ ಹಾಗೂ ಮಗ ಚೆಲುವನೊಂದಿಗೆ ಬಾಡಗ ಬಾಣಂಗಾಲ ಗ್ರಾಮದ ಫೇರ್ ಲ್ಯಾಂಡ್ ಎಸ್ಟೇಟಿನಲ್ಲಿ ಕರಿಮೆಣಸು ಕುಯ್ಯುವ ಕೆಲಸ ಮಾಡುತ್ತಿದ್ದು ದಿನಾಂಕ 26.03.2013  ರಂದು ಮಗ ಚೆಲುವನು ತೋಟದೊಳಗಿರುವ ಮರದಿಂದ ಕರಿಮೆಣಸು ಕುಯ್ಯುತ್ತಿರುವಾಗ ಆಕಸ್ಮಿಕವಾಗಿ ಸಿಡಿಲು ಬಡಿದು ಮರದಿಂದ ಕೆಳಗೆ ಬಿದ್ದಿದ್ದು ಕೂಡಲೇ ಮಾದೇವ, ಮೇಸ್ತ್ರಿ ಕಿರಣ ಹಾಗೂ ಇತರರು ಸೇರಿ ತೋಟದ ಆಂಬುಲೆನ್ಸ್ ವಾಹನದಲ್ಲಿ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆ ತಂದಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.