ಹಳ್ಳಕ್ಕೆ ಬಿದ್ದ ವಾಹನ, ಅಪಾಯದಿಂದ ಇಬ್ಬರ ಪಾರು:
ರಾತ್ರಿವೇಳೆ ಚಲಿಸುತ್ತಿದ್ದ ಟೊಯೆಟೋ ಪಾರ್ಚುನರ್ ವಾಹನ ರಸ್ತೆಬದಿಯ ಹಳ್ಳಕ್ಕೆ ಬಿದ್ದು ವಾಹನದಲ್ಲಿದ್ದವರು ಯಾವುದೇ ಅಪಾಯದಿಂದ ಪಾರಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಇಬ್ನಿವಳವಾಡಿ ಗ್ರಾಮದಿಂದ ವರದಿಯಾಗಿದೆ. ನಿನ್ನೆ ದಿನ ರಾತ್ರಿ 10-00 ಗಂಟೆಯ ಸಮಯದಲ್ಲಿ ಎನ್.ಕೆ. ಶಿವಕುಮಾರ್ ಎಂಬವರು ಎಪಿ-16-ಬಿಕ್ಯೂ-1899 ರ ಟೊಯೆಟೋ ಪಾರ್ಚುನರ್ ವಾಹನದಲ್ಲಿ ಚಾಲಕ ಕಿರಣ್ಕುಮಾರ್ರವರೊಂದಿಗೆ ಬೆಂಗಳೂರಿನಿಂದ ಮಡಿಕೇರಿ ಕಡೆಗೆ ಬರುತ್ತಿರುವಾಗ ಮಡಿಕೇರಿ
ಸಮೀಪದ
ಇಬ್ನಿವಳವಾಡಿ
ಗ್ರಾಮದ
ಸ್ಯಾಂಡಲ್ಕಾಡ್ ಎಸ್ಟೇಟ್ ಹಾಗು ಸಿಂಕೋನ ಎಸ್ಟೇಟ್ ತಿರುವಿನಲ್ಲಿ ಚಾಲಕ ಕಿರಣ್ ಕುಮಾರ್ರವರು ಕಾರನ್ನು ಅತೀ ವೇಗ ಹಾಗು
ಅಜಾಗರೂಕತೆಯಿಂದ
ಚಾಲನೆ ಮಾಡಿದ ಪರಿಣಾಮ ಆತನ ನಿಯಂತ್ರಣ ತಪ್ಪಿ ಕಾರು
ರಸ್ತೆ ಬಲಬದಿಯ
ಹಳ್ಳಕ್ಕೆ ಉರುಳಿದ್ದು ವಾಹನದಲ್ಲಿದ್ದ
ಶಿವಕುಮಾರ್,
ಸುಮಂತ್
ಮತ್ತು ಚಾಲಕ
ಕಿರಣ್ಕುಮಾರ್ರವರು
ವಾಹನದಿಂದ
ಕೆಳಗೆ
ಹಾರಿ ಯಾವುದೇ ಅಪಾಯದಿಂದ ಪಾರಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಹಳೇ ದ್ವೇಷದಿಂದ ವ್ಯಕ್ತಿಯ ದಾರಿತಡೆದು ಹಲ್ಲೆ:
ಹಳೇ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯ ದಾರಿ ತಡೆದು ಹಲ್ಲೆನಡೆಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮಾಕುಟ್ಟದಿಂದ ವರದಿಯಾಗಿದೆ. ದಿನಾಂಕ 29-05-13ರಂದು ಸಮಯ 3-30ಪಿ.ಎಂ.ಗೆ ಇರಿಟ್ಟಿಯ ವಾಸಿ ರಾಮಚಂದ್ರನ್ ಎಂಬವರು ವಿರಾಜಪೇಟೆ ಕಡೆಯಿಂದ ಇರಿಟ್ಟಿ ಕಡೆಗೆ ತಮ್ಮ ಸ್ನೇಹಿತರ ವಾಹನದಲ್ಲಿ ಹೋಗುತ್ತಿರುವಾಗ ಮಾಕುಟ್ಟ ರಸ್ತೆಯ ಬಳಿ ಮೋರಿಯ ಸಮೀಪ ತಲುಪಿದಾಗ ಹಿಂಭಾಗದಿಂದ ಕಮಾಂಡರ್ ಜೀಪ್ ನಂ. ಕೆಎಲ್.05.8663 ರಲ್ಲಿ ಶಿಯೋಜ್ ಮತ್ತು ಇತರ 5 ಜನ ಇರಿಟ್ಟಿ ನಿವಾಸಿಗಳು ಬಂದು ರಾಮಚಂದ್ರನ್ಯವರ ಕಾರನ್ನು ತಡೆದು ನಿಲ್ಲಿಸಿ, ಅವರನ್ನು ಕಾರಿನಿಂದ ಎಳೆದು ಹಾಕಿ ಶಿಯೋಜ್ ಎಂಬುವವನು ಕೈಯಿಂದ ಹಾಗೂ ರಾಡಿನಿಂದ ಮುಖಕ್ಕೆ, ತಲೆ ಭಾಗಕ್ಕೆ ಹೊಡೆದಿರುವುದಲ್ಲದೆ, ಅವನ ಜೊತೆಗಿದ್ದವರೆಲ್ಲರೂ ಸೇರಿ "ಇವನಿಗೆ ಬಾರಿ ಸೊಕ್ಕು, ಅಹಂಕಾರ ಆಡುತ್ತಾನೆ, ಕೊಲ್ಲದೆ ಬಿಡಬಾರದು" ಎಂದು ಹೇಳಿ, ಸೂರಜ್, ವಿಬಿನ್, ವಿಜೇಶ್, ಪ್ರಜೀಶ್ ಹಾಗೂ ಶೈಜೀತ್ ರವರು ಸೇರಿ ಹೊಟ್ಟೆಗೆ, ತಲೆಗೆ, ಮುಖಕ್ಕೆ, ಕೈಯಿಂದ ಗುದ್ದಿ, ಕಾಲಿನಿಂದ ತುಳಿದು ಗಾಯಪಡಿಸಿ ಚಿಕಿತ್ಸೆಗಾಗಿ ಇರಿಟ್ಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯ ಆತ್ಮಹತ್ಯೆ:
ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಂಡಂಗಾಲ ಗ್ರಾಮದ ಮಲಚೀರ ಮೀನಾ ಎಂಬವರ ಲೈನು ಮನೆಯಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದ 50 ವರ್ಷ ಪ್ರಾಯದ ಕಾಳಿ ಎಂಬ ಮಹಿಳೆ ತನ್ನ ಗಂಡ ಮೃತಪಟ್ಟ ವಿಚಾರದಲ್ಲಿ ಬೇಸರಗೊಂಡು ಸುಮಾರು 15 ದಿನಗಳ ಹಿಂದೆ ಕಾಣೆಯಾಗಿದ್ದು, ದಿನಾಂಕ 30-5-2013 ರಂದು ಆಕೆಯ ಮೃತದೇಹ ರುದ್ರಗೊಪ್ಪೆ ಗ್ರಾಮದ ಹೊಳೆಯಲ್ಲಿ ಪತ್ತೆಯಾಗಿದ್ದು, ಈಕೆ ತನ್ನ ಗಂಡನನ್ನು ಕಳೆದುಕೊಂಡ ಬೇಸರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮೃತಪಟ್ಟಿರಬಹುದೆಂದು ನಂಬಲಾಗಿದ್ದು, ವಿರಾಜಪೇಟೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಇನಾವೋ ಕಾರಿಗೆ ಲಾರಿ ಡಿಕ್ಕಿ, ಕಾರು ಜಖಂ:
ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಳ್ಳುಮಾಡು ಗ್ರಾಮದ ಮಾತಂಡ ರಮೇಶ್ರವರ ಲೈನು ಮನೆಯಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದ 66 ವರ್ಷ ಪ್ರಾಯದ ವಯೋವೃದ್ಧ ಎರವರ ಮೊಣ್ಣ ಎಂಬ ವ್ಯಕ್ತಿ ಕಾಣೆಯಾದ ಬಗ್ಗೆ ವರದಿಯಾಗಿದೆ. ದಿನಾಂಕ 16-5-2013 ರಂದು ಊಟದ
ವಿಚಾರದಲ್ಲಿ ಜಗಳ ಮಾಡಿ ಕೋಪಗೊಂಡು ಪತ್ನಿಗೆ ತಿಳಿಸದೇ ಮೊಣ್ಣರವರು ಮನೆ ಬಿಟ್ಟು ಹೋದವರು ಕಾಣೆಯಾಗಿರುತ್ತಾರೆಂದು ತಿಳಿದುಬಂದಿದೆ. ಕಾಣೆಯಾದ ವ್ಯಕ್ತಿಯ ಪತ್ನಿ ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಹಳೇ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯ ದಾರಿ ತಡೆದು ಹಲ್ಲೆನಡೆಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮಾಕುಟ್ಟದಿಂದ ವರದಿಯಾಗಿದೆ. ದಿನಾಂಕ 29-05-13ರಂದು ಸಮಯ 3-30ಪಿ.ಎಂ.ಗೆ ಇರಿಟ್ಟಿಯ ವಾಸಿ ರಾಮಚಂದ್ರನ್ ಎಂಬವರು ವಿರಾಜಪೇಟೆ ಕಡೆಯಿಂದ ಇರಿಟ್ಟಿ ಕಡೆಗೆ ತಮ್ಮ ಸ್ನೇಹಿತರ ವಾಹನದಲ್ಲಿ ಹೋಗುತ್ತಿರುವಾಗ ಮಾಕುಟ್ಟ ರಸ್ತೆಯ ಬಳಿ ಮೋರಿಯ ಸಮೀಪ ತಲುಪಿದಾಗ ಹಿಂಭಾಗದಿಂದ ಕಮಾಂಡರ್ ಜೀಪ್ ನಂ. ಕೆಎಲ್.05.8663 ರಲ್ಲಿ ಶಿಯೋಜ್ ಮತ್ತು ಇತರ 5 ಜನ ಇರಿಟ್ಟಿ ನಿವಾಸಿಗಳು ಬಂದು ರಾಮಚಂದ್ರನ್ಯವರ ಕಾರನ್ನು ತಡೆದು ನಿಲ್ಲಿಸಿ, ಅವರನ್ನು ಕಾರಿನಿಂದ ಎಳೆದು ಹಾಕಿ ಶಿಯೋಜ್ ಎಂಬುವವನು ಕೈಯಿಂದ ಹಾಗೂ ರಾಡಿನಿಂದ ಮುಖಕ್ಕೆ, ತಲೆ ಭಾಗಕ್ಕೆ ಹೊಡೆದಿರುವುದಲ್ಲದೆ, ಅವನ ಜೊತೆಗಿದ್ದವರೆಲ್ಲರೂ ಸೇರಿ "ಇವನಿಗೆ ಬಾರಿ ಸೊಕ್ಕು, ಅಹಂಕಾರ ಆಡುತ್ತಾನೆ, ಕೊಲ್ಲದೆ ಬಿಡಬಾರದು" ಎಂದು ಹೇಳಿ, ಸೂರಜ್, ವಿಬಿನ್, ವಿಜೇಶ್, ಪ್ರಜೀಶ್ ಹಾಗೂ ಶೈಜೀತ್ ರವರು ಸೇರಿ ಹೊಟ್ಟೆಗೆ, ತಲೆಗೆ, ಮುಖಕ್ಕೆ, ಕೈಯಿಂದ ಗುದ್ದಿ, ಕಾಲಿನಿಂದ ತುಳಿದು ಗಾಯಪಡಿಸಿ ಚಿಕಿತ್ಸೆಗಾಗಿ ಇರಿಟ್ಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯ ಆತ್ಮಹತ್ಯೆ:
ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಂಡಂಗಾಲ ಗ್ರಾಮದ ಮಲಚೀರ ಮೀನಾ ಎಂಬವರ ಲೈನು ಮನೆಯಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದ 50 ವರ್ಷ ಪ್ರಾಯದ ಕಾಳಿ ಎಂಬ ಮಹಿಳೆ ತನ್ನ ಗಂಡ ಮೃತಪಟ್ಟ ವಿಚಾರದಲ್ಲಿ ಬೇಸರಗೊಂಡು ಸುಮಾರು 15 ದಿನಗಳ ಹಿಂದೆ ಕಾಣೆಯಾಗಿದ್ದು, ದಿನಾಂಕ 30-5-2013 ರಂದು ಆಕೆಯ ಮೃತದೇಹ ರುದ್ರಗೊಪ್ಪೆ ಗ್ರಾಮದ ಹೊಳೆಯಲ್ಲಿ ಪತ್ತೆಯಾಗಿದ್ದು, ಈಕೆ ತನ್ನ ಗಂಡನನ್ನು ಕಳೆದುಕೊಂಡ ಬೇಸರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮೃತಪಟ್ಟಿರಬಹುದೆಂದು ನಂಬಲಾಗಿದ್ದು, ವಿರಾಜಪೇಟೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಇನಾವೋ ಕಾರಿಗೆ ಲಾರಿ ಡಿಕ್ಕಿ, ಕಾರು ಜಖಂ:
ದಿನಾಂಕ 30-5-2013 ರಂದು ಸಿದ್ದಾಪುರ ಠಾಣಾ ವ್ಯಾಪ್ತಿಯ ಮಾಲ್ದಾರೆ ಗ್ರಾಮದ ವಾಸಿ ಸಮೀರ್ ಎಂಬವರು ಸ್ನೇಹಿತನೊಂದಿಗೆ ತಮ್ಮ
ಬಾಪ್ತು ಇನೋವಾ ಕಾರು ನಂ ಕೆಎ-12 ಎನ್ 3502 ರಲ್ಲಿ ಹೋಗುತ್ತಿರುವಾಗ್ಗೆ ಸಮಯ 16.30 ಗಂಟೆಗೆ ಸಿದ್ದಾಪುರ ನಗರದ ಮಡಿಕೇರಿ
ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ತಲುಪುವಾಗ್ಗೆ
ನೆಲ್ಲಿಹುದಿಕೇರಿ ಕಡೆಯಿಂದ ಸಿದ್ದಾಪುರದ ಕಡೆಗೆ ಒಂದು ಲಾರಿಯನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು
ಬಂದು ಇನೋವಾ ಕಾರಿಗೆ
ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು ಸಿದ್ದಾಪುರ ಪೊಲೀಸರು ಸಮೀರ್ರವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮುಂದಿ ಕ್ರಮ ಕೈಗೊಂಡಿರುತ್ತಾರೆ.
66 ವರ್ಷದ ವೃದ್ಧ ಕಾಣೆ, ಪ್ರಕರಣ ದಾಖಲು:

ಅಕ್ರಮ ಗಾಂಜಾ ಮಾರಾಟ ಪತ್ತೆ, ವ್ಯಕ್ತಿಯ ಬಂಧನ:
ವಿರಾಜಪೇಟೆ ನಗರ ಪೊಲೀಸರು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ದಿ ಆರೋಪಿಯನ್ನು ಬಂಧಿಸಿರುತ್ತಾರೆ. ದಿನಾಂಕ 30-5-2013 ರಂದು ವಿರಾಜಪೇಟೆ ನಗರದ ಶಿವಾಸ್ ಜಂಕ್ಷನ್ ಬಳಿ ಹೆಚ್,ಎಂ, ಉದಯ @ ಉಮ್ಮರ್ ಎಂಬ ವ್ಯಕ್ತಿ ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಗಾಂಜಾ ಮಾದಕ ಪದಾರ್ಥವನ್ನು ಮಾರಾಟ ಮಡುತ್ತಿದ್ದುದನ್ನು ಶ್ರೀ ಸುರೇಶ್ ಬೋಪಣ್ಣ, ಪಿಎಸ್ಐ ವಿರಾಜಪೇಟೆ ನಗರ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಪತ್ತೆಹಚ್ದಿ ಆರೋಪಿಯನ್ನು ಹಾಗೂ ಆತನಲ್ಲಿದ್ದ 270 ಗ್ರಾಂ 600 ಮಿಲಿ ಗಾಂಜಾ ಮಾದಕ ಪದಾರ್ಥವನ್ನು ವಶಪಡಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.