Saturday, April 30, 2011

ವಿನಾ ಕಾರಣ ವ್ಯಕ್ತಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ
  • ವಿನಾ ಕಾರಣ ವ್ಯಕ್ತಿಯೋರ್ವರ ಮೇಲೆ ಸಲಾಕೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣ ಭಾಗಮಂಡಲ ಠಾಣಾ ವ್ಯಾಪ್ತಿಯ ಚೇರಂಬಾಣೆಯ ತೊಟ್ಲು ಕುಂಞಿ ಎಂಬಲ್ಲಿ ನಡೆದಿದೆ. ದಿನಾಂಕ 29/04/2011ರ ರಾತ್ರಿ ಚೇರಂಬಾಣೆಯ ತೊಟ್ಲುಕುಂಞಿ ನಿವಾಸಿ ರವೀಂದ್ರ ಎಂಬವರು ತಮ್ಮ ಮನೆಗೆ ಹೋಗುತ್ತಿರುವಾಗ ಆರೋಪಿಗಳಾದ ಅದೇ ಗ್ರಾಮದ ನಿವಾಶಿಗಳಾದ ಅಬ್ಬಾಸ್, ರಫೀಕ್ ಮತ್ತು ಬಷೀರ್ ಎಂಬವರುಗಳು ಪಿಕ್ ಅಪ್ ಜೀಪಿನಲ್ಲಿ ಬಂದು ರವೀಂದ್ರರೊಂದಿಗೆ ಜಗಳವಾಡಿ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಕುರಿತು ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಣ್ಣ ತಮ್ಮಂದಿರ ಜಗಳ, ಕತ್ತಿಯಿಂದ ಹಲ್ಲೆ
  • ಮದ್ಯಪಾನ ಮಾಡಿ ಜಗಳವಾಡಿ ತಮ್ಮನೇ ಅಣ್ಣನ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೂರ್ನಾಡಿನ ಕಣ್ಣ ಬಲಮುರಿ ಎಂಬಲ್ಲಿ ನಡೆದಿದೆ. ದಿನಾಂಕ 29/04/2011ರಂದು ಕಣ್ಣ ಬಲಮುರಿ ಗ್ರಾಮದ ವಸಂತ ಎಂಬವರು ತಮ್ಮ ಮನೆಯಲ್ಲಿರುವಾಗ ಅಲ್ಲಿಗೆ ಮದ್ಯಪಾನ ಮಾಡಿ ಬಂದ ಅವರ ತಮ್ಮ ಶೇಖರ ಅಲ್ಲಿಗೆ ಬಂದು ಕ್ಷುಲ್ಲಕ ಕಾರಣಕ್ಕೆ ಅಣ್ಣನೊಂದಿಗೆ ಜಗಳವಾಡಿ ಕತ್ತಿಯಿಂದ ಕಡಿದು ವಸಂತರವರಿಗೆ ತೀವ್ರತರವಾದ ಗಾಯಗೊಳಿಸಿದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, April 29, 2011

ಮಹಿಳೆಯ ಆತ್ಮಹತ್ಯೆ
  • ತನ್ನ ಪತಿಯು ರಾತ್ರಿ ಊಟ ಮಾಡಲಿಲ್ಲ ಎಂದು ಜುಗುಪಸ್ಎಗೊಮಡ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಡೈರಿ ಫಾರಂ ಬಳಿ ನಡೆದಿದೆ. ಮಡಿಕೇರಿ ನಗರದ ಡೈರಿ ಫಾರಂ ನಿವಾಸಿ 22 ವರ್ಷ ಪ್ರಾಯದ ಮೆಹರುನ್ನೀಸಾ ಎಂಬಾಕೆಯು ಆಕೆಯ ಗಂಡ ಜಲೀಲ್ ದಿನಾಂಕ 28/04/2011ರ ರಾತ್ರಿ ಆಕೆಯ ಸಿಡುಕುತನದಿಂದ ಊಟ ಮಾಡಲಿಲ್ಲ ಎಂದು ಮನನೊಂದು ದಿನಾಂಕ 29/04/2011 ರ ಬೆಳಗಿನ ಜಾವ ಮನೆಯಲ್ಲಿ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಸಂಶಯಾಸ್ಪದ ವ್ಯಕ್ತಿಯ ಬಂಧನ
  • ಸಂಶಯಾಸ್ಪದವಾಘಿ ನಗರದಲ್ಲಿ ಸುತ್ತಾಡುತ್ತಿದ್ದ ಕೇರಳದ ವ್ಯಕ್ತಿಯೋರ್ವನನ್ನು ವಿರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ಇಂದು (29/4/2011) ಬೆಳಿಗ್ಗೆ ವಿರಾಜಪೇಟೆ ನಗರ ಠಾಣಾ ಸಿಬ್ಬಂದಿ ಸಿರಿಲ್ ಎಂಬವರು ನಗರ ಗಸ್ತು ಕರ್ತವ್ಯದಲ್ಲಿದ್ದಾಗ ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿಯ ಬಳಿ ಶಬರಿಗಿರಿ ಬೇಕರಿಯ ಪಕ್ಕದಲ್ಲಿ ಆರೋಪಿ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕೂಟುಪೊಳೆಯ ವಡಕ್ಕಿಪರಂಬಿಲ್ ಸಜಿ ಎಂಬಾತನು ಪೊಲೀಸ್ ಸಿಬ್ಬಂದಿ ಸಿರಿಲ್ ರವರನ್ನು ಕಂಡು ತನ್ನ ಇರುವಿಕೆಯನ್ನು ಮರೆಮಾಚಲು ಯತ್ನಿಸುತ್ತಿದ್ದು ಆತನನ್ನು ಆತನ ಇರುವಿಕೆಯ ಬಗ್ಗೆ ಪ್ರಶ್ನಿಸಿದಾಗ ಸೂಕ್ತ ಸಮಾಧಾನ ದೊರೆಯದ ಕಾರಣ ಆತನನ್ನು ಮುಂದಿನ ಕ್ರಮದ ಬಗ್ಗೆ ವಿರಾಜಪೇಟೆ ನಗರ ಠಾಣಾಧಿಕಾರಿಯವರ ಮುಂದೆ ಹಾಜರು ಪಡಿಸಿದ್ದು, ನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಂಗಡಿಯಾತನ ಮೇಲೆ ಗುಂಪು ಹಲ್ಲೆ
  • ಮದ್ಯಪಾನ ಮಾಡಿದ ಹಣವನ್ನು ಕೇಳಿದ ಅಂಗಡಿಯಾತನ ಮೇಲೆ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 28/04/2011ರಂದು ರಾತ್ರಿ 10.00 ಗಂಟೆಗೆ ವಿರಾಜಪೇಟೆ ನಗರದ ನಿವಾಸಿಗಳಾದ ಹರೀಶ, ಹೆಚ್.ಹರೀಶ, ವೆಂಕಟೇಶ, ಅಪ್ಪು ಮತ್ತು ಸಂತೋಷ್ ಎಂಬವರುಗಳು ವಿರಾಜಪೇಟೆ ನಗರದ ಮೂರ್ನಾಡು ರಸ್ತೆಯಲ್ಲಿರುವ ಕೆ.ಎ.ಮನು ಎಂಬವರ ಮದ್ಯದಂಗಡಿಗೆ ಮದ್ಯಪಾನ ಮಾಡಲು ಬಂದಿದ್ದು, ಬ್ರಾಂದಿ ಕುಡಿದ ಬಿಲ್ಲಿನ ಹಣವನ್ನು ಮನುರವರು ಕೇಳಿದಾಗ ಎಲ್ಲರೂ ಸೇರಿಕೊಂಡು ಮನುರವರಿಗೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ ಬಗ್ಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, April 28, 2011


ಬೈಕಿಗೆ ಜೀಪು ಡಿಕ್ಕಿ ಒಬ್ಬನಿಗೆ ಗಾಯ:


ಬೈಕಿಗೆ ಜೀಪು ಡಿಕ್ಕಿಯಾಗಿ ಒಬ್ಬನಿಗೆ ಗಾಯವಾದ ಬಗ್ಗೆ ಸೋಮವಾರಪೇಟೆ ಠಾಣಾ ಸರಹದ್ದಿನ ಗರ್ವಾಲೆ ಗ್ರಾಮದಿಂದ ವರದಿಯಾಗಿದೆ. ದಿನಾಂಕ 26-4-2011 ರಂದು ಫಿರ್ಯಾದಿ ಓ.ಬಿ.ಯೋಗೇಶ ರವರು ಸೋಮವಯ್ಯ ಎಂಬವರನ್ನು ಮೋಟಾರ್‌ ಸೈಕಲ್‌ನಲ್ಲಿ ಕೂರಿಸಿಕೊಂಡು ಸೂರ್ಲಬಿಯಿಂದ ಮಾದಾಪುರದ ಕಡೆಗೆ ಹೋಗುತ್ತಿರುವಾಗ ಗರ್ವಾಲೆಯ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ಟಿ.ಕೆ. ಕಾವೇರಪ್ಪ ಎಂಬವರು ಜೀಪು ಸಂಖ್ಯೆ ಕೆಎ-34 ಎಂ.1009ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಮೋಟಾರ್‌ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಸೋಮಯ್ಯ ರವರಿಗೆ ರಕ್ತ ಗಾಯವಾಗಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಮಹಿಳೆಯ ಮೇಲೆ ದೌರ್ಜನ್ಯ:


ವಿನಾ ಕಾರಣ ಗಂಡ ತನ್ನ ಹೆಂಡತಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವ ಬಗ್ಗೆ ಊರುಗುತ್ತಿ ಗ್ರಾಮದಿಂದ ವರದಿಯಾಗಿದೆ. ಫಿರ್ಯಾದಿ ಮಮತ ಎಂಬವರು 10 ವರ್ಷಗಳ ಹಿಂದೆ ಸುರೇಶ ಎಂಬವರನ್ನು ಮದುವೆಯಾಗಿದ್ದು, 2 ವರ್ಷಗಳ ನಂತರ ವಿನಾ ಕಾರಣ ಜಗಳ ತೆಗೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ದಿನಾಂಕ 27-4-2011 ರಂದು ಫಿರ್ಯಾದಿಯವರು ತವರು ಮನೆಯಿಂದ ತಡವಾಗಿ ಬಂದಿರುವುದಾಗಿ ಕಾಲಿನಿಂದ ಒದ್ದು ನೋವನ್ನುಂಟು ಮಾಡಿದ್ದು, ಇದೇ ರೀತಿ ಮಾಡಿದರೆ ಕೊಲೆ ಮಾಡುವುದಾಗಿ ಬೆಕರಿಕೆ ಹಾಕಿರುವ ಬಗ್ಗೆ ಫಿರ್ಯಾದಿಯವರ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


Wednesday, April 27, 2011

ರೂ 52,000 ಮೌಲ್ಯದ ಚಿನ್ನಾಭರಣ ಕಳವು
  • ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬಾಗಿಲು ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಗರಗಂದೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 26/4/2011ರಂದು ಗರಗಂದೂರು ಗ್ರಾಮದ ಎನ್.ಎ.ಯಶೋದ ಎಂಬವರು ಮನೆಗೆ ಬೀಗ ಹಾಕಿಕೊಂಡು ಲಕ್ಕೇರಿ ತೋಟದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದು, ಸಂಜೆ ಹಿಂದಿರುಗಿ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಹಿಂಬಾಗಿಲನ್ನು ತೆರದು ಒಳ ಪ್ರವೇಶಿಸಿ ಮನೆಯ ಬೀರುವಿನ ಬಾಗಿಲನ್ನು ತೆಗೆದು ಸುಮಾರು ರೂ 52,000- ಬೆಲೆಬಾಳುವ ಚಿನ್ನಾಭರಣ ಹಾಗೂ ಹಣವನ್ನು ಕಳವು ಮಾಡಿರುವ ಬಗ್ಗೆ ಇಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಬಾಟಲಿಯಿಂದ ಹಲ್ಲೆ'
  • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಬಾಟಲಿಯಿಂದ ಹಲ್ಲೆ ಮಾಡಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬಾಳೆಲೆ ನಗರದಲ್ಲಿ ನಡೆದಿದೆ. ದಿನಾಂಕ 26/4/2011ರಂದು ಬಾಳೆಲೆ ನಗರದ ಅಬ್ದುಲ್ ಅಜೀಜ್ ಎಂಬವರ ಹೋಟೆಲಿಗೆ ಆರೋಪಿಗಳಾದ ಗಾಣಂಗಡ ವಿಶು, ಬಬ್ಬು ಮತ್ತು ಅಳಮೇಂಗಡ ಸೋಮಯ್ಯ ಎಂಬವರು ಬಂದು ಕ್ಷುಲ್ಲಕ ಕಾರಣಕ್ಕೆ ಅಬ್ದುಲ್ ಅಜೀಜ್ ರವರೊಂದಿಗೆ ಜಗಳವಾಡಿ ಬಾಟಲಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಿಕ್ಷಾ-ಬೈಕ್ ಡಿಕ್ಕಿ, ಬೈಕ್ ಸವಾರನಿಗೆ ಗಾಯ
  • ರಿಕ್ಷಾ ಮತ್ತು ಬೈಕ್ ಡಿಕ್ಕಿಯಾಗಿ ಮೋಟಾರು ಬೈಕ್ ಸವಾರನಿಗೆ ಗಾಯಗಳಾಗಿರುವ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಸುಂದರನಗರದಲ್ಲಿ ನಡೆದಿದೆ. ದಿನಾಂಕ 26/4/2011ರ ಸಂಜೆ ಸುಂದರನಗರದ ನಿವಾಸಿ ಸ್ವಾಮಿ ಎಂಬವರ ಅಕ್ಕನ ಮಗ ಪ್ರದೀಪ ಎಂಬಾತನು ತನ್ನ ಮೋಟಾರು ಸೈಕಲ್ ಸಂಖ್ಯೆ ಕೆಎ--45-ಹೆಚ್-892ರಲ್ಲಿ ಕೆಲಸದ ನಿಮಿತ್ತ ಕುಶಾಲನಗರದ ಕಡೆಗೆ ಬರುತ್ತಿರುವಾಗ ಸುಂದರನಗರದ ಅಗ್ನಿಶಾಮಕ ಠಾಣೆಯ ಬಳಿ ಎದುರಿನಿಂದ ಓರ್ವ ರಿಕ್ಷಾ ಚಾಲಕನು ತನ್ನ ರಿಕ್ಷಾ ಸಂ.ಕೆಎ-12-6493ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಪ್ರದೀಪ ಚಾಲಿಸುತ್ತಿದ್ದ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಸವಾರ ಪ್ರದೀಪನು ಕೆಳಗೆ ಬಿದ್ದು ಗಾಯಗಳಾಗಿರುವ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, April 26, 2011


ವಿನಾಕಾರಣ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ:


ವಿನಾ ಕಾರಣ ಹಳೆ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ನೋವನ್ನುಂಟು ಮಾಡಿದ ಪ್ರಕರಣ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಚೆಂಬೆಬೆಳ್ಳೂರು ಗ್ರಾಮದಿಂದ ವರದಿಯಾಗಿದೆ. ದಿನಾಂಕ 25-4-11 ರಂದು ಫಿರ್ಯಾದಿ ಹರಿಜನರ ಬಿ. ದಿನೇಶ ಎಂಬವರು ಚೆಂಬೆಬೆಳ್ಳೂರು ಗ್ರಾಮದಲ್ಲಿರುವ ಭದ್ರಕಾಳಿ ದೇವಾಲಯಕ್ಕೆ ಹೋಗಿದ್ದು, ಅಲ್ಲಿಗೆ ಆರೋಪಿಗಳಾದ ಗಿರೀಶ್‌ ಹಾಗೂ ಗಣೇಶ್‌ ಎಂಬವರು ಬಂದು ವಿನಾಕಾರಣ ಹಳೆಯ ದ್ವೇಷದಿಂದ ಫಿರ್ಯಾದಿಯವರೊಂದಿಗೆ ಜಗಳ ತೆಗೆದು ಕೈಯಿಂದ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ನೋವನ್ನುಂಟು ಮಾಡಿದ್ದು ಈ ಸಂಬಂಧ ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಹಣದ ವಿಚಾರದಲ್ಲಿ ವ್ಯಕ್ತಿಗೆ ಹಲ್ಲೆ ಹಾಗೂ ಕೊಲೆ ಬೆದರಿಕೆ:


ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಹಾಲುಗುಂದ ಗ್ರಾಮದಿಂದ ವರದಿಯಾಗಿದೆ. ದಿನಾಂಕ 25-4-2011 ರಂದು ಫಿರ್ಯಾದಿ ಎ.ಇ. ಬಷೀರ್‌ ಎಂಬವರು ಕೊಂಡಂಗೇರಿ ಗ್ರಾಮದ ಸ್ಕೂಲ್‌ ಬಳಿ ನಿಂತಿರುವ ಸಮಯದಲ್ಲಿ ಆರೋಪಿ ಒಕ್ಕಲಿಗರ ಕಿರಣ್ @ ಕೀರ್ತಿ ಹಣದ ವಿಚಾರದಲ್ಲಿ ಏಕಾಎಕಿ ಜಗಳ ತೆಗೆದು ಹಲ್ಲಿನಿಂದ ಫಿರ್ಯಾದಿಯ ಬಲಗೈ ಹೆಬ್ಬೆರಳಿಗೆ, ಎದೆಯ ಭಾಗಕ್ಕೆ, ಕುತ್ತಿಗೆಯ ಭಾಗಕ್ಕೆ ಹಾಗೂ ಎಡ ತೊಡೆಗೆ ಕಚ್ಚಿ ಗಾಯಪಡಿಸಿ ಕತ್ತಿಯಿಂದ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಫಿರ್ಯಾದಿಯು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಈ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಕ್ಷುಲ್ಲಕ ಕಾರಣ ವ್ಯಕ್ತಿಗೆ ಹಲ್ಲೆ:


ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ ಬಗ್ಗೆ ಮಡಿಕೇರಿ ನಗರ ಠಾಣಾ ಸರಹದ್ದಿನ ಇಂದಿರಾ ನಗರದಿಂದ ವರದಿಯಾಗಿದೆ. ದಿನಾಂಕ 25-4-2011 ರಂದು ಫಿರ್ಯಾದಿ ಎಂ.ಎಂ. ಸಿರಾಜ್‌ ಎಂಬವರು ಆರೋಪಿ ಶಹಾಬುದ್ದೀನ್‌ ರವರನ್ನು ಕರೆದು ಗಾರೆ ಕೆಲಸಕ್ಕೆ ಸೇರು ಎಂದು ಹೇಳಿದ್ದು, ಈ ಬಗ್ಗೆ ಆರೋಪಿ ಫಿರ್ಯಾದಿಯೊಂದಿಗೆ ಜಗಳ ಮಾಡಿ ಕಬ್ಬಿಣದ ರಾಡಿನಿಂದ ಫಿರ್ಯಾದಿಯ ತಲೆಗೆ ಹೊಡೆದು ಗಾಯಪಡಿಸಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.




Monday, April 25, 2011

ಅಕ್ರಮ ಗೋಮಾಂಸ ಮಾರಾಟ, ಮಹಿಳೆಯ ಬಂಧನ
  • ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವರನ್ನು ವಿರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 24/4/2011ರಂದು ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿಯ ಬಳಿ ಅಕ್ರಮವಾಗಿ ಸರ್ಕಾರದ ಪರವಾನಗಿಯಿಲ್ಲದೆ ಗೋಮಾಂಸ ಮಾರಾಟ ಮಾಡುತ್ತಿದ್ದ ಹುಣಸೂರಿನ ಖುರ್ಷಿದ್ ಭಾನು ಎಂಬ ಮಹಿಳೆಯನ್ನು ವಿರಾಜಪೇಟೆ ನಗರ ಠಾಣಾಧಿಕಾರಿ ಅನೂಪ್ ಮಾದಪ್ಪರವರು ಬಂಧಿಸಿದ್ದಾರೆ. ಬಂಧಿತಳಿಂದ ಸುಮಾರು 13 ಕೆ.ಜಿ.ಯಷ್ಟು ಗೋಮಾಂಸವನ್ನು ವಶಪಡಿಸಿಕೊಂಡು ಕ್ರಮ ಜರುಗಿಸಿದ್ದಾರೆ.
ವಿನಾಕಾರಣ ವ್ಯಕ್ತಿಯ ಮೇಲೆ ದೊಣ್ಣೆಯಿಂದ ಹಲ್ಲೆ
  • ವಿನಾ ಕಾರಣ ವ್ಯಕ್ತಿಯೋರ್ವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ ಘಟನೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ನಾಕೂರು ಶಿರಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 23/4/2011ರಂದು ನಾಕೂರು ಶಿರಂಗಾಲ ಗ್ರಾಮದ ಬಿ.ಆರ್.ಗಣಪತಿ ಎಂಬವರೊಂದಿಗೆ ಅದೇ ಗ್ರಾಮದ ಬ್ರಿಜೇಶ್ ಎಂಬಾತನು ವಿನಾ ಕಾರಣ ಜಗಳವಾಡಿ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು, ಬಿಡಿಸಲು ಬಂದ ಗಣಪತಿಯವರ ಪತ್ನಿಯ ಮೇಲೂ ಹಲ್ಲೆ ಮಾಡಿರುವ ಬಗ್ಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬಸ್ ಅವಘಡ, ಮಹಿಳೆಗೆ ಗಾಯ
  • ಬಸ್ ಚಾಲಕನೋರ್ವ ಅಜಾಗರೂಕತೆಯಿಂದ ಬಸ್ ಚಾಲಿಸಿದ ಪರಿಣಾಮ ಮಹಿಳೆಯೋರ್ವರು ಗಾಯಗೊಂಡಿರುವ ಘಟನೆ ಶನಿವಾರಸಂತೆ ನಗರದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ದಿನಾಂಕ 24/04/2011ರಂದು ಕೊಡ್ಲಿಪೇಟೆಯ ಕಿತ್ತೂರು ಗ್ರಾಮದ ತಂಗಮ್ಮ ಎಂಬ ಮಹಿಳೆಯು ಶನಿವಾರಸಂತೆಗೆ ಕೆಎ-18-ಎ-7018ರ ಬಸ್ಸಿನಲ್ಲಿ ಬಂದು ಶನಿವಾರಸಂತೆ ನಗರದ ಬೈಪಾಸ್ ರಸ್ತೆಯ ಬಳಿ ಬಸ್ಸಿನಿಂದ ಇಳಿಯುವಾಗ್ಗೆ ಬಸ್ಸಿನ ಚಾಲಕ ದಿಢೀರನೆ ಬಸ್ಸನ್ನು ಚಾಲಿಸಿದ ಪರಿಣಾಮ ತಂಗಮ್ಮರವರು ಬಸ್ಸಿನಿಂದ ಬಿದ್ದು ಗಾಯಗೊಂಡಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಕ್ರಮ ಮದ್ಯ ಮಾರಾಟ, ಆರೋಪಿಯ ಬಂಧನ
  • ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ದಿನಾಂಕ 24/04/2011ರಂದು ನಿಟ್ಟೂರು ಗ್ರಾಮದ ಕೆ.ಎ.ಲೋಕೇಶ ಎಂಬವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಪೊನ್ನಂಪೇಟೆ ಠಾಣಾಧಿಕಾರಿ ಎನ್.ಎನ್.ರಾಮರೆಡ್ಡಿಯವರು ಸಿಬ್ಬಂದಿಯವರೊಂದಿಗೆ ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥ ನದಿಯ ಬಳಿ ನಿಂತಿದ್ದ ಆರೋಪಿ ಕೆ.ಎ.ಲೋಕೇಶರವರನ್ನು ಬಂಧಿಸಿ ಆತನ ವಶದಲ್ಲಿದ್ದ ಸುಮಾರು ರೂ.2,025/- ಬೆಲೆಯ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಿದ್ದಾರೆ.

Saturday, April 23, 2011

ಎತ್ತುಗಳ ಕಳವು, ಪ್ರಕರಣ ದಾಖಲು
  • ಮೂರು ಎತ್ತುಗಳನ್ನು ಕಳವು ಮಾಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುತ್ತಾರ್ಮುಡಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 20/04/2011ರಂದು ರಾತ್ರಿ ಮುತ್ತಾರ್ಮುಡಿ ಗ್ರಾಮದ ವಿಜಯರತ್ನ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಸುಮಾರು ರೂ.28,000/- ಬೆಲೆಬಾಳುವ ಮೂರು ಎತ್ತುಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು, ಹಾಕತ್ತೂರಿನ ಸಲಾಂ ಎಂಬ ವ್ಯಕ್ತಿಯ ಮೇಲೆ ಗುಮಾನಿ ಇರುವುದಾಗಿ ವಿಜಯರತ್ನರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಂಚಿಸಿ ಸಾಲ ಪಡೆದ ಪ್ರಕರಣ, ಮೊಕದ್ದಮೆ ದಾಖಲು
  • ವ್ಯಕ್ತಿಯೋರ್ವರ ಪಹಣಿ ಪತ್ರವನ್ನುಪಯೋಗಿಸಿ ಬ್ಯಾಂಕು ಸಾಲ ಪಡೆದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಆವಂದೂರು ಗ್ರಾಮದಲ್ಲಿ ನಡೆದಿದೆ. ಆವಂದೂರು ಗ್ರಾಮದ ಡಿ.ಎಂ.ರಾಘವಯ್ಯ ಎಂಬವರಿಗೆ ಸೇರಿದ ಸರ್ವೆ ನಂ. 34/4ಎ ರಲ್ಲಿನ ತೋಟದ ಪಹಣಿ ಪತ್ರವನ್ನು ಮಡಿಕೇರಿಯ ಐಟಿಐ ಬಳಿಯ ನಿವಾಸಿ ಸಿ.ಎಸ್.ರಾಘವಯ್ಯ ಎಂಬವರು ಡಿ.ಎಂ.ರಾಘವಯ್ಯ ಎಂಬವರಿಗೆ ತಿಳಿಯದಂತೆ ಪಡೆದು ಮಡಿಕೇರಿಯ ಇಂಡಿಯನ್ ಬ್ಯಾಂಕಿನಿಂದ ಸಾಲ ಪಡೆದಿದ್ದು, ಬ್ಯಾಂಕ್ ವ್ಯವಸ್ಥಪಾಕರಾದ ಆರ್.ರಾಮಸ್ವಾಮಿ ಎಂಬವರು ಸಹಾ ಇದರಲ್ಲಿ ಶಾಮೀಲಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, April 22, 2011



ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:


ಸಹೋದರನಿಗೆ ಬೈಯ್ಯುತ್ತಿರುವ ಬಗ್ಗೆ ವಿಚಾರಿಸಿದ ವ್ಯಕ್ತಿಯ ಮೇಲೆ ಬಾಟಲಿಯಿಂದ ಹೊಡೆದು ಗಾಯಪಡಿಸಿದ ಬಗ್ಗೆ ಕುಶಾಲನಗರ ಠಾಣೆಗೆ ವರದಿಯಾಗಿದೆ. ದಿನಾಂಕ 21-4-2011 ರಂದು ಸಂಜೆ 9-00 ಗಂಟೆಗೆ ಫಿರ್ಯಾದಿ ಕೆ.ಸಿ. ಶ್ರೀನಿವಾಸ ಎಂಬವರು ತಮ್ಮ ಪತ್ನಿ ಪೂರ್ಣಿಮರವರೊಂದಿಗೆ ಕುಶಾಲನಗರ ನಗರದ ಗಣಪತಿ ದೇವಾಲಯಕ್ಕೆ ಹೋಗಿ, ಅವರ ಸ್ನೇಹಿತರವರ ಕಾರಿಯಲ್ಲಿ ಕುಳಿತುಕೊಂಡು ಮೊಬೈಲ್‌ ಫೋನಿನಲ್ಲಿ ಮಾತನಾಡಿಕೊಂಡಿರುವಾಗ ಆರೋಪಿ ಮುಳ್ಳುಸೋಗೆ ಗ್ರಾಮದ ಮಹೇಶ ಅಲ್ಲಿಗೆ ಬಂದು ಫಿರ್ಯಾದಿಯ ತಮ್ಮ ಕುಮಾರ ಎಂಬವನಿಗೆ ಬೈಯುತ್ತಿದ್ದು, ಇದನ್ನು ವಿಚಾರಿಸಲು ಹೋದ ಫಿರ್ಯಾದಿಗೆ ಆರೋಪಿಯು ಬಾಟಲಿಯಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು ಫಿರ್ಯಾದಿಯವರು ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.



Thursday, April 21, 2011

ಕ್ಷುಲ್ಲಕ ಕಾರಣಕ್ಕೆ ಕಟ್ಟಿ ಹಾಕಿ ಹಲ್ಲೆ, ಗಾಯ
  • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರನ್ನು ಕೈಕಾಲುಗಳನ್ನು ಕಟ್ಟಿ ಹೊಡೆದು ಗಾಯಗೊಳಿಸಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಶಿರಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 10/04/2011ರಂದು ಶಿರಂಗಾಲ ಗ್ರಾಮದ ರಾಧಾ ಎಂಬವರ ಪತಿ ಆನಂದ ಎಂಬವರೊಂದಿಗೆ ಆರೋಪಿಗಳಾದ ತಮ್ಮಯ್ಯ, ವಿರೂಪಾಕ್ಷಿ ಮತ್ತು ಶಿವಾನಂದ ಎಂಬವರು ಹುಲ್ಲು ತೆಗೆಯುವ ವಿಚಾರದಲ್ಲಿ ಜಗಳವಾಡಿ ಆನಂದರವರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ತೀವ್ರತರವಾದ ಹಲ್ಲೆ ನಡೆಸಿರುವ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆಕಸ್ಮಿಕವಾಗಿ ರಾಸಾಯನಿಕ ಸೇವನೆ, ವ್ಯಕ್ತಿಯ ಸಾವು
  • ಔಷಧಿ ಎಂದು ತಿಳಿದು ವಿಷ ರಾಸಾಯನಿಕ ಸೇವಿಸಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಪ್ರಕರಣ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೇಲ್ ಚೆಂಬು ಗ್ರಾಮದಿಂದ ವರದಿಯಾಗಿದೆ. ದಿನಾಂಕ 12/04/2011ರಂದು ಎಂ.ಚೆಂಬು ಗ್ರಾಮದ ನಾರಾಯಣ ಎಂಬವರ ಅಣ್ಣ ಮಾಧವ ಎಂಬವರು ಹೊಟ್ಟೆನೋವು ಹೆಚ್ಚಾಗಿ ಔಷಧಿ ಎಂದು ಭಾವಿಸಿ ರಬ್ಬರ್ ಶೀಟಿಗೆ ಬಳಸುವ ಪಾರಾಮಿಕ್ ಆಸಿಡ್ ಅನ್ನು ಸೇವಿಸಿದ್ದು ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 20/4/2011ರಂದು ಸಾವನ್ನಪ್ಪಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮಹಿಳೆ ಕಾಣೆ, ಪ್ರಕರಣ ದಾಖಲು
  • ಮನೆಯಲ್ಲಿದ್ದ ಮಹಿಳೆಯೋರ್ವರು ನಾಪತ್ತೆಯಾಗಿರುವ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಳ್ಳೂರು ಗ್ರಾಮದಿಂದ ವರದಿಯಾಗಿದೆ. ದಿನಾಂಕ 09/04/2011ರಂದು ಮುಳ್ಳೂರು ಗ್ರಾಮದ ನಿವಾಸಿ ಕೆಂಚಯ್ಯ ಎಂಬವರು ತಮ್ಮ ಮಕ್ಕಳೊಂದಿಗೆ ಪಕ್ಕದ ಮನೆಗೆ ಹೋಗಿ ಟಿವಿ ವೀಕ್ಷಿಸಿ ವಾಪಾಸು ಮನೆಗೆ ಬಂದಾಗ ಮನೆಯಲ್ಲಿದ್ದ ಅವರ ಪತ್ನಿ 35 ವರ್ಷ ಪ್ರಾಯದ ಪಾರ್ವತಮ್ಮ ಮನೆಯಲ್ಲಿಲ್ಲದೆ ಇರುವುದು ಕಂಡು ಬಂದಿದ್ದು, ನೆಂಟರಿಷ್ಟರ ಮನೆಯಲ್ಲಿ ಸಹಾ ಹುಡುಕಿ ಪತ್ತೆಯಾಗದ ಕಾರಣ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮಹಿಳೆಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Wednesday, April 20, 2011

ಆಸ್ತಿ ವೈಷಮ್ಯ, ಮಹಿಳೆಯರಿಬ್ಬರ ಮೇಲೆ ಹಲ್ಲೆ
  • ಆಸ್ತಿ ವೈಷಮ್ಯದಿಂದ ಮಹಿಳೆಯರಿಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಚಾಮಿಯಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 19/04/2011ರ ಸಂಜೆ ವೇಳೆ ಮಡಿಕೇರಿ ತಾಲೂಕಿನ ಹಾಕತ್ತೂರಿನ ತೊಂಬತ್ತುಮನೆ ಪೈಸಾರಿಯ ಜೀನತ್ ಮತ್ತು ಅವರ ಅಕ್ಕ ಫಾತಿಮಾರವರು ತಮ್ಮ ತಂದೆಯ ಮನೆಯಾದ ಚಾಮಿಯಾಲಕ್ಕೆ ಹೋಗುತ್ತಿರುವಾಗ ಆರೋಪಿಗಳಾದ ಹಂಸ, ಸಫಿಯಾ, ನಿಜಾಮ, ಆಲಿ ಮತ್ತು ಅಶ್ರಫ್ ಎಂಬವರುಗಳು ಆಸ್ತಿಯ ವಿಚಾರದಲ್ಲಿ ಜಗಳವಾಡಿ ಜೀನತ್ ಹಾಗೂ ಫಾತಿಮಾರವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಳೆ ವೈಷಮ್ಯ ವ್ಯಕ್ತಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ
  • ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಿಪೇಟೆಯ ಬೆಸೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 19/04/2011ರಂದು ಸಂಜೆ ಬೆಸೂರು ಗ್ರಾಮದ ನಿವಾಸಿ ಕೆ.ಹೆಚ್.ಸ್ವಾಮಿ ಎಂಬವರು ಕೆಲಸಕ್ಕೆ ಹೋಗಲು ಬಸ್ಸಿಗಾಗಿ ಕಾದಿರುವಾಗ ಕೂಡ್ಲೂರು ಗ್ರಾಮದ ನಿಂಗೇಗೌಡ, ಸತೀಶ ಮತ್ತು ನಾಗ ಎಂಬವರುಗಳು ಸೇರಿ ಹಳೆ ವೈಷಮ್ಯದಿಂದ ಜಗಳವಾಡಿ ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಅಫಘಾತ, ಪಾದಚಾರಿಗೆ ಗಾಯ
  • ರಸ್ತೆ ಅಫಘಾತದಲ್ಲಿ ಪಾದಚಾರಿಯೋರ್ವರು ಗಾಯಗೊಂಡ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಕಲ್ಲುಕೋರೆ ಎಂಬಲ್ಲಿ ನಡೆದಿದೆ. ದಿನಾಂಕ 19/4/2011ರಂದು ಕಲ್ಲುಕೋರೆಯಲ್ಲಿ ಕೆಲಸ ಮಾಡಿಕೊಂಡಿರುವ ಜೇನುಕುರುಬರ ಪುಟ್ಟ ಎಂಬಾತನು ತಿತಿಮತಿಯ ಮಜ್ಜಿಗೆಹಳ್ಳದಿಂದ ತಮ್ಮ ಪತ್ನಿಯೊಂದಿಗೆ ಮನೆಗೆ ಹೋಗುತ್ಇರುವಾಗ ಉಮ್ಮರ್ ಎಂಬವರ ತೋಟದ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಮೋಟಾರು ಸೈಕಲ್ ಸವಾರ ಅತಿ ವೇಗ ಮತ್ತು ಅಜಾಗರೂಕತೆಯಿಂದ ಮೋಟಾರು ಸೈಕಲನ್ನು ಚಾಲಿಸಿಕೊಂಡು ಬಂದು ಪುಟ್ಟರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿರುವ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, April 19, 2011



ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ:


ದಿನಾಂಕ 18-4-2011 ರಂದು ರಾತ್ರಿವೇಳೆಯಲ್ಲಿ ಕುಟ್ಟ ಠಾಣಾ ವ್ಯಾಪ್ತಿಯ ಮಂಚಳ್ಳಿ ಗ್ರಾಮದಲ್ಲಿ ವಡ್ಡರ ರಾಜು ಎಂಬಾತನು ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಮಹಿಳೆಗೆ ವರದಕ್ಷಿಣೆ ಕಿರುಕುಳ, ಪ್ರಕರಣ ದಾಖಲು:


ಕುಶಾಲನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಅಳಿಲುಗುಪ್ಪೆ ಗ್ರಾಮದಲ್ಲಿ ವಾಸಿಸುತ್ತಿರುವ ಶ್ರೀಮತಿ ಸ್ವಾತಿ ಎಂಬವರು ಸುಮಾರು 3 ವರ್ಷಗಳ ಹಿಂದೆ ಆರೋಪಿ ರವಿ ಎಂಬಾತನನ್ನು ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆತನಿಗೆ ವರದಕ್ಷಿಣೆ ರೂಪದಲ್ಲಿ 50 ಗ್ರಾಂ ಚಿನ್ನ ಹಾಗೂ 20000 ರೂ. ಗಳನ್ನು ನೀಡಿದ್ದು, ನಂತರದ ದಿನಗಳಲ್ಲಿ ಫಿರ್ಯಾದಿ ಸ್ವಾತಿಯವರಿಗೆ ಆಕೆಯ ಗಂಡ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಆರೋಪಿಯ ತಾಯಿ 2ನೇ ಆರೋಪಿ ಜಯಮ್ಮ ಕೂಡಾ ವರದಕ್ಷಿಣೆ ಹಣವನ್ನು ತರುವಂತೆ ಮಾನಸಿಕ ಹಾಗೂ ಸೈಹಿಕವಾಗಿ ಕಿರುಕುಳ ನೀಡುತ್ತಿದ್ದುದರ ಬಗ್ಗೆ ಈ ದಿನ ದಿನಾಂಕ 19-4-2011 ರಂದು ಆರೋಪಿಗಳ ವಿರುದ್ದ ದೂರನ್ನು ನೀಡಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ರಸ್ತೆ ಅಪಘಾತ ವ್ಯಕ್ತಿಗೆ ಗಾಯ:


ಈ ದಿನ ದಿನಾಂಕ 19-4-2011 ರಂದು ಕುಶಾಲನಗರ ಠಾಣಾ ಸರಹದ್ದಿನ ಕೂಡ್ಲೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಫಿರ್ಯಾದಿ ಲೋಕೇಶ್‌ ಎಂಬವರು ಟಿವಿಎಸ್‌ ಮೋಟಾರ್‌ ಸೈಕಲ್‌ನಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿರುವಾಗ ಆರೋಪಿ ಪ್ರದೀಪ್‌ ಎಂಬವರು ತಮ್ಮ ಬಾಪ್ತು ಮೋ.ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಯ ಮೋ.ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಫಿರ್ಯಾದಿಯವರು ಗಾಯಗೊಂಡು ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲುಗೊಂಡಿರುತ್ತಾರೆ. ಈ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.



Monday, April 18, 2011

ರೂ 25,000/- ಮೌಲ್ಯದ ಕಾಫಿ ಕಳವು
  • ಸುಮಾರು ರೂ 25,000/- ಮೌಲ್ಯದ ಕಾಫಿಯನ್ನು ಯಾರೋ ಕಳವು ಮಾಡಿರುವ ಪ್ರಕರಣ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆ.ಹೆಬ್ಬಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ಕೆ.ಹೆಬ್ಬೆಟ್ಟಗೇರಿ ಗ್ರಾಮದ ನಿವಾಸಿ ಕಾರ್ಯಪ್ಪ ಎಂಬವರು ತಮ್ಮ ತೋಟದಿಂದ ಕುಯಿದ ಕಾಫಿಯನ್ನು ತಮ್ಮ ಕಣದಲ್ಲಿ ಒಣಗಲು ಹಾಕಿದ್ದು, ಯಾರೋ ಕಳ್ಳರು ಸುಮಾರು ರೂ. 25,000/- ಮೌಲ್ಯದ ಸುಮಾರು 10 ಚೀಲ ಕಾಫಿಯನ್ನು ಕಳವು ಮಾಡಿರುವುದಾಗಿ ನೀಡಿದ ದೂರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ವ್ಯಕ್ತಿಗೆ ಗಾಯ
  • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ರಾಜ ರಾಜೇಶ್ವರಿ ಚಿತ್ರ ಮಂದಿರದ ಬಳಿ ನಡೆದಿದೆ. ದಿನಾಂಕ 17/4/2011ರಂದು ರಾತ್ರಿ ವಿರಾಜಪೇಟೆ ನಗರದ ನೆಹರೂ ನಗರದ ನಿವಾಸಿ ಮುನ್ನ ಎಂಬವರು ಕೆಲಸ ಮುಗಿಸಿ ಮನೆಗೆ ವಾಪಾಸು ಹೋಗುತ್ತಿರುವಾಗ ಕಿರುಮಕ್ಕಿಯ ಶೇಖರ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಮುನ್ನರವರೊಂದಿಗೆ ಜಗಳವಾಡಿ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಬಗ್ಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ತೋಟದಿಂದ ಕರಿಮೆಣಸು ಕಳವು
  • ತೋಟವೊಂದರಿಂದ ಕರಿಮೆಣಸು ಕಳವು ಮಾಡಿರುವ ಪ್ರಕರಣ ಶ್ರೀಮಂಗಲ ಠಾಣಾ ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದಲ್ಲಿ ನಡೆದಿದೆ. ಶ್ರೀಮಂಗಲದ ಹೈಸೊಡ್ಲೂರು ಗ್ರಾಮದ ಗ್ಲೆನ್ ಲೋರ್ನಾ ಟೀ ಎಸ್ಟೇಟಿನಲ್ಲಿ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಸುಮಾರು ರೂ 7,000/- ಮೌಲ್ಯದ 70-80 ಕೆಜಿಗಳಷ್ಟು ಹಸಿ ಕರಿಮೆಣಸನ್ನು ಕಳವು ಮಾಡಿದ್ದು, ಅದೇ ತೋಟದ ಕಾರ್ಮಿಕರಾದ ಚಂದ್ರ, ರಾಜ ಮತ್ತು ಪೂಸೆ ಕುಮಾರ ಎಂಬವರ ಮೇಲೆ ಗುಮಾನಿ ಇರುವುದಾಗಿ ತೋಟದ ಫೀಲ್ಡ್ ಆಫೀಸರ್ ಬಿ.ಟಿ.ಕುಶಾಲಪ್ಪನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, April 16, 2011

ತೋಟ ಕೆಲಸದ ವಿಚಾರದಲ್ಲಿ ಜಗಳ, ಹಲ್ಲೆ ಕೊಲೆ ಬೆದರಿಕೆ
  • ತೋಟ ಕೆಲಸದ ವಿಚಾರದಲ್ಲಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದುದಲ್ಲದೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಕಿರುಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 14/04/2011ರಂದು ಕಿರುಗೂರಿನ ಹೆಚ್.ಜೆ.ಗಿಣಿ ಎಂಬಾತನು ಕೆಲಸ ಬಿಟ್ಟು ಮನೆಯ ಕಡೆ ಹೋಗುತ್ತಿರುವಾಗ ಆರೋಪಿ ಚೆಪ್ಪುಡಿರ ಕುಮಾರ್ ಎಂಬಾತನು ಗಿಣಿಯನ್ನು ಕರಿಮೆಣಸು ಕುಯ್ಯುವ ಕೆಲಸಕ್ಕೆ ಕರೆದಿದ್ದು, ಗಿಣಿಯು ತನಗೆ ಮರ ಹತ್ತಲು ಆಗದ್ದರಿಂದ ಕೆಲಸಕ್ಕೆ ಬರಲು ಸಾಧ್ಯವಿಲ್ಲವೆಂದು ತಿಳಿಸಿದಾಗ ಆರೋಪಿ ಕುಮಾರನು ಗಿಣಿಯ ಜಾತಿಯನ್ನು ನಿಂದನೆ ಮಾಡಿದುದಲ್ಲದೆ ಕೈಯಿಂದ ಹೊಡೆದು ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, April 15, 2011

ಅಕ್ರಮ ಪ್ರವೇಶ, ಕೊಲೆ ಬೆದರಿಕೆ
  • ಮನೆಗೆ ನುಗ್ಗಿ ವಸ್ತುಗಳನ್ನು ಹಾನಿಗೊಳಿಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೂರ್ನಾಡು ನಗರದಲ್ಲಿ ನಡೆದಿದೆ. ದಿನಾಂಕ 14/4/2011ರಂದು ಮೂರ್ನಾಡು ನಗರದ ಸ್ಟೇಟ್ ವ್ಯಾಂಕ್ ಬಳಿ ಇರುವ ರೇಖಾ ಎಂಬವರ ಮನೆಗೆ ಆರೋಪಿ ವಿ.ಟಿ.ಮಂಜುನಾಥ ಎಂಬಾತನು ಸುತ್ತಿಗೆಯನ್ನು ಹಿಡಿದುಕೊಂಡು ಅಕ್ರಮವಾಘಿ ಪ್ರವೇಶಿಸಿ ಮನೆ ಖಾಲಿ ಮಾಡುವ ವಿಚಾರದಲ್ಲಿ ಜಗಳವಾಡಿ ಸುತ್ತಿಗೆಯಿಂದ ಮನೆಯ ಡಿಶ್ ಆಂಟೆನಾ, ಹೂಕುಂಡಗಳನ್ನು ಒಡೆದು ಹಾಕಿ ಮನೆ ಖಾಲಿ ಮಾಡದಿದ್ದರೆ ಸುತ್ತಿಗೆಯಿಂದ ಹೊಡೆದು ಕೊಲ್ಲುವುದಾಗಿ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, April 14, 2011

ಪಾದಾಚಾರಿಗೆ ಮಾರುತಿ ಕಾರು ಡಿಕ್ಕಿ, ಗಾಯ:

ದಿನಾಂಕ 13-4-2011 ರಂದು ಮಡಿಕೇರಿ ನಗರದ ಬೆನಕಾ ಸ್ಟೋರ್ಸ್‌ ಬಳಿ ಫಿರ್ಯಾದಿ ಕೆ.ಟಿ. ನಂದಕುಮಾರ್‌ ಎಂಬವರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ನರಸಿಂಹ ಎಂಬವರು ತಮ್ಮ ಮಾರುತಿ ಆಲ್ಟೋ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಯ ಬಲ ಕಾಲಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಪಾದಾಚಾರಿಗೆ ಆಟೋರಿಕ್ಷಾ ಡಿಕ್ಕಿ, ಗಾಯ:


ದಿನಾಂಕ 13-4-2011 ರಂದು ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಿಪೇಟೆಯಲ್ಲಿ ಫಿರ್ಯಾದಿ ಕೆ.ಎಂ. ಉದಯಕುಮಾರ್‌ ಎಂಬವರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಆಟೋ ಚಾಲಕ ಸದರಿ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಗೆ ಗಾಯಗಳಾಗಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ದನದ ಕೊಟ್ಟಿಗೆಯ ವಿಚಾರದಲ್ಲಿ ವ್ಯಕ್ತಿಗೆ ಹಲ್ಲೆ ಮತ್ತು ಕೊಲೆ ಬೆದರಿಕೆ:


ದಿನಾಂಕ 13-4-2011 ರಂದು ಕುಶಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಫಿರ್ಯಾದಿ ಟಿ.ಕೆ. ಚಂದ್ರಶೇಖರಯವರೊಂದಿಗೆ ಆರೋಪಿ ಟಿ.ಕೆ. ವಿಶ್ವನಾಥ ಎಂಬವರು ದನದ ಕೊಟ್ಟಿಗೆ ವಿಚಾರದಲ್ಲಿ ಜಗಳ ಮಾಡಿ ಬಾಯಿಗೆ ಬಂದಂತೆ ಬೈದು, ಕೈಗಳಿಂದ ಶರೀರವನ್ನು ಹಿಡಿದುಕೊಂಡು ಕುತ್ತಿಗೆಗೆ ಹೊಡೆದು ಉಗುರುಗಳಿಂದ ಪರಚಿ ಕೊಂದು ಹಾಕುವುದಾಗಿ ಜೀವ ಬಿದರಿಕೆ ಹಾಕಿರುವ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಹಳೇ ದ್ವೇಷದಿಂದ ವ್ಯಕ್ತಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ: ದಿನಾಂಕ 13-4-2011 ರಂದು ರಾತ್ರಿ 10-30 ಗಂಟೆಗೆ ಗೋಣಿಕೊಪ್ಪ ನಗರದ ಅಚ್ಚಪ್ಪ ಲೇಔಟ್‌ನಲ್ಲಿ ಫಿರ್ಯಾದಿ ವಿ.ಎನ್‌. ಸೂರಿ ಎಂಬವರಿಗೆ ಆರೋಪಿಗಳಾದ ಶಿಯಾಬ್‌‌, ಅನಿಲ್‌, ರಹೀಂ ಹಾಗೂ ಇರ್ಫಾನ್‌ ಎಂಬವರು ಸೇರಿ ಕೈಗಳಿಂದ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಲ್ಲದೆ ಕೊಲೆ ಮಾಡುವುದಾಗಿ ಜೀವ ಬಿದರಿಕೆ ಹಾಕಿರುವ ಬಗ್ಗೆ ಗೋಣಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Wednesday, April 13, 2011

ರಸ್ತೆ ಅಪಘಾತ ಪ್ರಕರಣ: ದಿ; 12-4-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಪಾಲಗಾಲ ಗ್ರಾಮದಲ್ಲಿ ಪಿರ್ಯಾದಿ ಚಾವಂಡ ಸೋಮಯ್ಯ ರವರು ತಮ್ಮ ಬಾಪ್ತು ಟಿಪ್ಪರ್‌ ಲಾರಿಯಲ್ಲಿ ಮಡಿಕೇರಿಯ ಕಡೆಗೆ ಪ್ರಯಾಣಿಸುತ್ತಿದ್ದಾಗ ಎದುರುಗಡೆ ಯಿಂದ ಆರೋಪಿ ಕೆಎ-12-1930 ರ ಟಿಪ್ಪರ್‌ ಲಾರಿ ಚಾಲಕ ಸದರಿ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿಯ ವಾಹನವು ಜಕ್ಕಂಗೊಂಡಿರುವುದಾಗಿದೆ ಈ ಬಗ್ಗೆ ಪ್ರಕರಣ ದಾಖಲುಗೊಂಡಿದೆ. ವಂಚನೆ ಪ್ರಕರಣ: ಪಿರ್ಯಾದಿ ಟಿ.ಎಸ್‌ ಮಲ್ಲೇಶ್‌ಪ್ಪ ಇವರು ಚಿಕ್ಕಗ್ರಾಮದ ಬಾಪುಜಿ ವಿದ್ಯಾಸಂಸ್ಥೆಯಲ್ಲಿ ಅಧ್ಯಕ್ಷರಾಗಿದ್ದು ಸದರಿ ಸಂಸ್ಥೆಯಲ್ಲಿ ಖಜಾಂಚಿಯಾಗಿರುವ ಶ್ರೀಮತಿ ಇಂದಿರಾ ಲಿಂಗರಾಜರವರು 2009-10 ನೇ ಸಾಲಿನಲ್ಲಿ ರೂ 38,974 ಗಳನ್ನು ಅಧ್ಯಕ್ಷರ ಗಮನಕ್ಕೆ ಬಾರದಂತೆ ದುರುಪಯೋಗ ಪಡಿಸಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸ್‌‌ ಠಾಣೆ ಪ್ರಕರಣ ದಾಖಲಾಗಿರುತ್ತದೆ. ಆಸ್ತಿ ವಿಚಾರದಲ್ಲಿ ಮಹಿಳೆಯ ಮೇಲೆ ಹಲ್ಲೆ: ದಿ: 12-4-2011 ರಂದು ನಾಪೋಕ್ಲು ಪೊಲೀಸ್‌ ಠಾಣಾ ವ್ಯಾಪ್ತಿಯ ಬಾವಲಿ ಗ್ರಾಮದಲ್ಲಿ ಫಿರ್ಯಾದಿ ಶ್ರೀಮತಿ ಬಿದ್ದಂಡ ಪ್ರೀತಾ ರವರು ತಮಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗ್ಗೆ ಅರೋಪಿಗಳಾದ ಬಿದ್ದಂಡ ಚಂಗಪ್ಪ , ಶ್ರೀಮತಿ ಕಾವೇರಿ, ಭರತ್‌ ಸೇರಿ ಕಾಫಿ ಹಣ್ಣುಗಳನ್ನು ಕುಯ್ಯುವ ವಿಚಾರದಲ್ಲಿ ಹಲ್ಲೆ ನಡೆಸಿ ಪಿರ್ಯಾದಿಯವರ ಮನೆಯ ಕಿಟಿಕಿ ಗಾಜುಗಳನ್ನು ಹೊಡೆದು ನಷ್ಟ ಉಂಟುಮಾಡಿದ್ದು ಈ ಬಗ್ಗೆ ನಾಪೋಕ್ಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಹೊಲಕ್ಕೆ ಬೆಂಕಿ ಪ್ರಕರಣ : ದಿ: 10-4-2011 ರಂದು ಕುಶಾಲನಗರ ಠಾಣಾ ವ್ಯಾಪ್ತಿಯ ಬಸಿರುಗುಪ್ಪೆ ಗ್ರಾಮದಲ್ಲಿ ಆರೋಪಿ ವಸಂತ ಎಂಬವನ್ನು ಪಿರ್ಯಾದಿ ಕೃಷ್ಣಪ್ಪಎಂಬವರ ಹೊಲಕ್ಕೆ ಬೆಂಕಿ ಹಚ್ಚಿದ ಪರಿಣಾಮ ಹೊಲದಲ್ಲಿ ಇದ್ದು ಸಿಲ್ವರ್‌ ಮರಗಳು ಬೆಂಕಿ ಶಾಖಾದಿಂದ ಬಾಡಿರುವ ವಿಚಾರದಲ್ಲಿ ಆರೋಪಿಯು ಪಿರ್ಯಾದಿಗೆ ಗುಂಡು ಹೊಡೆದು ಕೊಲೆಮಾಡುವುದಾಗಿ ಅಲ್ಲದೇ ಅವಾಚ್ಯಶಬ್ದಗಳಿಂದ ಬೈದಿರುವುವ ಬಗ್ಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ.

Tuesday, April 12, 2011

ಬಸ್ಸು ಕಾರು ಡಿಕ್ಕಿ, ಕಾರು ಚಾಲಕನಿಗೆ ಗಾಯ
  • ಕಾರಿಗೆ ಬಸ್ಸೊಂದು ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಗಾಯಗೊಂಡಿರುವ ಘಟನೆ ಮಡಿಕೇರಿ ನಗರದ ಜಿ.ಟಿ.ವೃತ್ತದ ಬಳಿ ನಡೆದಿದೆ. ದಿನಾಂಕ 11/04/2011ರಂದು ನಗರದ ಮಂಗಳಾದೇವಿ ನಗರದ ನಿವಾಸಿ ಎಂ.ಪಿ.ಮುತ್ತಪ್ಪ ಎಂಬವರು ತಮ್ಮ ಮಾರುತಿ ಕಾರು ಸಂ.ಕೆಎ-01-ಎನ್-9246ರಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ, ಆರೋಪಿ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಬಸಯ್ಯ ಎಂಬವರು ತಮ್ಮ ಬಸ್ ಸಂ.ಕೆಎ-19-ಎಫ್-2509ನ್ನು ಅತಿ ವೀಗ ಹಾಗೂ ಅಜಾಗರೂಕತೆಯಿಂದ ಚಾಲಿಸಿ ಫಿರ್ಯಾದಿ ಮುತ್ತಪ್ಪನವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಮುತ್ತಪ್ಪನವರ ಹೊಟ್ಟೆಗೆ ನೋವುಂಟಾಗಿದ್ದು, ಈ ಬಗ್ಗೆ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ವ್ಯಕ್ತಿಗೆ ಗಾಯ
  • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬಾಳೆಲೆ ನಗರದಲ್ಲಿ ನಡೆದಿದೆ. ದಿನಾಂಕ 11/4/2011ರ ಸಂಜೆ ಬೀಳೂರು ಗ್ರಾಮದ ಪಣಿ ಎರವರ ಚಿಣ್ಣಿ ಎಂಬಾಕೆಯು ತನ್ನ ಗಂಡ ಬೊಳ್ಳಿ ಎಂಬಾತನೊಂದಿಗೆ ಬಾಳೆಲೆ ಸಂತೆಯಿಂದ ಮನೆ ಸಾಮಾನುಗಳನ್ನು ಖರೀದಿಸಿ ಮನೆಗೆ ಹೋಗುತ್ತಿದ್ದಾಗ ಆರೋಪಿಗಳಾದ ಪಣಿ ಎರವರ ಮೊಣ್ಣ ಮತ್ತು ಮಡಿವಾಳರ ಲಕ್ಕು ಎಂಬವರು ಬಂದು ಮೀನು ಖರೀದಿಸಿದ ವಿಚಾರದಲ್ಲಿ ಜಗಳವಾಡಿ ಕಲ್ಲಿನಿಂದ ಬೊಳ್ಳಿಯ ತಲೆಗೆ ಹೊಡೆದು ಗಾಯಗೊಳಿಸಿದ ಬಗ್ಗೆ ಪೊನ್ನಂಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಳೆ ವೈಷಮ್ಯದಿಂದ ಹಲ್ಲೆ, ವ್ಯಕ್ತಿಗೆ ಗಾಯ
  • ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಕಾನೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 11/4/2011ರಂದು ಕೋತೂರು ಗ್ರಾಮದ ಪ್ರದೀಪ ಎಂಬವರು ತಮ್ಮ ಲಾರಿಯಲ್ಲಿ ಭದ್ರಗೊಳ ಗ್ರಾಮದಿಂದ ತಮ್ಮ ಮನೆಗೆ ಹೋಗುತ್ತಿರುವಾಗ ಅದೇ ಗ್ರಾಮದ ಜಗ್ಗು ಎಂಬಾತನು ಕಾನೂರು ಬಳಿ ಲಾರಿ ನಿಲ್ಲಿಸಿ ಪ್ರದೀಪರವರ ಮೇಲೆ ಹಳೆ ವೈಷಮ್ಯದಿಂದ ಏಕಾಏಕಿ ಕಲ್ಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಬಗ್ಗೆ ಪೊನ್ನಂಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, April 11, 2011

ಶುಂಠಿ ಬೆಳೆ ವಿಚಾರದಲ್ಲಿ ಹಲ್ಲೆ, ಕೊಲೆ ಬೆದರಿಕೆ
  • ಶುಂಠಿ ಬೆಳೆ ವಿಚಾರದಲ್ಲಿ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣ ಶನಿವಾರಸಂತೆ ಠಾಣಾ ವ್ಯಾಪ್ತಿಯ ಬಸವನಕೊಪ್ಪ ಗ್ರಾಮದಲ್ಲಿ ನಡೆದಿದೆ. ದಿನಾಂಕ 10/4/2011ರಂದು ಬಸವನಕೊಪ್ಪ ಗ್ರಾಮದ ರಾಣಿ ಎಂಬವರ ಮನೆಗೆ ಆರೋಪಿಗಳಾದ ರವಿ ಹಾಗೂ ಪ್ರವೀಣ ಎಂಬವರು ಬಂದು ಅವರು ಚರ್ಚ್‌ನ ಜಾಗದಲ್ಲಿ ಶುಂಠಿ ಬೆಳೆಸಿರುವ ಬಗ್ಗೆ ರಾಣಿಯವರೊಂದಿಗೆ ಜಗಳವಾಡಿ ರಾಣಿಯವರಿಗೆ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಾಲೇಜಿಗೆಂದು ಹೋದ ಹುಡುಗ ನಾಪತ್ತೆ
  • ಕಾಲೇಜಿಗೆಂದು ಹೋದ ಹುಡುಗ ನಾಪತ್ತೆಯಾಗಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 6/4/2011ರಂದು ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಟಕೇರಿ ಗ್ರಾಮದ ಎಂ.ಸಿ.ವಸಂತ ಎಂಬವರ ಮಗ ಎಂ.ವಿ.ಚರಣ್ ಎಂಬಾತನು ತಾನು ವ್ಯಾಸಂಗ ಮಾಡುತ್ತಿದ್ದ ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಮನೆಯಿಂದ ಹೋಗಿದ್ದು, ಕಾಲೇಜಿಗೂ ಹೋಗದೆ ಎಲ್ಲಿಯೋ ಹೋಗಿರುವುದಾಗಿ ನೀಡಿದ ಪುಕಾರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕಾಣೆಯಾದ ಹುಡುಗನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಪತ್ನಿಯಿಂದಲೇ ಪತಿಯ ಮೇಲೆ ಹಲ್ಲೆ
  • ಕ್ಷುಲ್ಲಕ ಕಾರಣಕ್ಕೆ ಪತ್ನಿಯೇ ಪತಿಯ ಕಾಳಿಗೆ ಕಡಿದು ಹಲ್ಲೆ ಮಾಡಿರುವ ಘಟನೆ ಭಾಗಮಂಡಲ ಠಾಣಾ ವ್ಯಾಪ್ತಿಯ ಕರಿಕೆ ಗ್ರಾಮದ ಚೆತ್ತುಕಾಯದಲ್ಲಿ ನಡೆದಿದೆ. ದಿನಾಂಕ 8/4/2011ರಂದು ಕರಿಕೆಯ ಚೆತ್ತುಕಾಯದ ನಿವಾಸಿ ಡಿ.ಪಿ. ಮಾಧವ ಎಂಬವರು ಸುಳ್ಯಕ್ಕೆ ಹೋಗಿ ಬಂದ ವಿಚಾರದಲ್ಲಿ ಅವರ ಪತ್ನಿ ಅನುರಾಧ ಎಂಬಾಕೆಯು ಮಾಧವರವರೊಂದಿಗೆ ಜಗಳವಾಡಿ ಕತ್ತಿಯಿಂದ ಎರಡೂ ಕಾಲುಗಳಿಗೆ ಕಡಿದು ಗಾಯಗೊಳಿಸಿರುವ ಬಗ್ಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಗಾಯಾಳು ಮಾಧವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Saturday, April 9, 2011

ಮಹಿಳೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ, ಪ್ರಕರಣ ದಾಖಲು:



  • ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆ-ತಾಳೂರು ಗ್ರಾಮದ ವಾಸಿ ಶ್ರೀಮತಿ ಗಾಯತ್ರಿಯವರು 3 ವರ್ಷಗಳ ಹಿಂದೆ ರವೀಂದ್ರ ಎಂಬವರನ್ನು ಮದುವೆಯಾಗಿದ್ದು, ಇವರುಗಳಿಗೆ ಒಂದು ಗಂಡು ಮಗು ಇರುತ್ತದೆ. ನಂತರದ ದಿನಗಳಲ್ಲಿ ಫಿರ್ಯಾದಿ ಗಾಯತ್ರಿಯವರ ಗಂಡ ಆರೋಪಿ ರವೀಂದ್ರ ಮದ್ಯಪಾನ ಮಾಡುವ ಬಗ್ಗೆ ಹಣ ಕೇಳಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ದಿನಾಂಕ 8-4-2011 ರಂದು ಸಂಜೆ ಸಮಯ 08-00 ಗಂಟೆಗೆ ಆರೋಪಿ ಫಿರ್ಯಾದಿಯ ಮೇಲೆ ಹಲ್ಲೆ ಮಾಡಿ ನೋವನ್ನುಂಟುಮಾಡಿ ನೀನು ಮನೆಯಲ್ಲಿ ಇರುವುದು ಬೇಡ, ಮನೆಯಿಂದ ಹೋಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಸಂಬಂಧ ಫಿರ್ಯಾದಿಯವರ ದೂರಿನನ್ವಯ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಖೆ ಕೈಗೊಂಡಿರುತ್ತಾರೆ.

ಕ್ಲುಲ್ಲಕ ಕಾರಣಕ್ಕೆ ಹಲ್ಲೆ:



  • ದಿನಾಂಕ 8-4-2011 ರಂದು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಗಂಗಾವಾರ ಗ್ರಾಮದಲ್ಲಿ ಫಿರ್ಯಾದಿ ಲೋಕೇಶ್‌ ಎಂಬವರು ಉಮಾಪತಿ ಹಾಗೂ ಆರೋಪಿ ಲಿಂಗರಾಜುರವರೊಂದಿಗೆ ಮಾತನಾಡಿಕೊಂಡಿರುವಾಗ ಆರೋಪಿ ಏಕಾಎಕಿ ಅವಾಚ್ಯ ಶಬ್ದಗಳಿಂದ ಬೈದು ಸ್ಟೀಲ್‌ ಊಟದ ತಟ್ಟೆಯಿಂದ ಹಲ್ಲೆ ಮಾಡಿ ತಲೆಗೆ ರಕ್ತ ಗಾಯಪಡಿಸಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮಹಿಳೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಪ್ರಕರಣ:



  • ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಕೃಷ್ಣಕಾಲೋನಿಯಲ್ಲಿ ವಾಸಿಸುವ ಶ್ರೀಮತಿ ಶಾರದ ಎಂಬವರು ಸುಮಾರು 21 ವರ್ಷಗಳ ಹಿಂದೆ ನರಸಿಂಹ ಎಂಬವರನ್ನು ಮದುವೆಯಾಗಿದ್ದು, ಆರೋಪಿ ತನ್ನ ಹೆಂಡತಿ ಶಾರದ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿರುವುದಾಗಿ ಅನುಮಾನಗೊಂಡು ಪ್ರತಿ ದಿನ ನಿಂದಿಸುವುದು, ದೈಹಿಕ ಹಿಂಸೆ ನೀಡುವುದು ಮಾಡಿಕೊಂಡಿದ್ದು, ದಿನಾಂಕ 5-4-2011 ರಂದು ಹೆಂಡತಿಯೊಂದಿಗೆ ಜಗಳ ತೆಗೆದು ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸ್‌ ಠಾಣೆಗೆ ಫಿರ್ಯಾದಿ ನೀಡಿದ ದೂರಿನ ಮೇರೆ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮತಾಂತರ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ:



  • ದಿನಾಂಕ 1-4-2011 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ನಂದಿಮೊಟ್ಟೆ ಗ್ರಾಮದಲ್ಲಿ ಫಿರ್ಯಾದಿ ಪ್ರಸನ್ನ, ಪೊಲೀಸ್ ಕಾನ್ಸ್‌ಟೇಬಲ್‌ ತನ್ನ ಸ್ನೇಹಿತರೊಂದಿಗೆ ಮತಾಂತರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸ್ಥಳ ನೋಡಲು ಹೋಗಿದ್ದಾಗ ಆರೋಪಿಗಳಾದ ಜಗನ್‌ ಹಾಗೂ 11 ಜನರು ಅಕ್ರಮ ಕೂಟಸೇರಿಕೊಂಡು ಫಿರ್ಯಾದಿ ಮತ್ತು ಅವರ ಸಂಗಡಿಗರನ್ನು ದಾರಿ ತಡೆದು ಹಲ್ಲೆ ನಡೆಸಿದ್ದು, ಫಿರ್ಯಾದಿಯ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮನೆಗೆ ನುಗ್ಗಿ ಕಳ್ಳತನ, ಪ್ರಕರಣ ದಾಖಲು:



  • ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮದೆನಾಡು ಗ್ರಾಮದ ಬೆಳಕುಮಾನಿ ಎಂಬಲ್ಲಿ ಫಿರ್ಯಾದಿಯವರು ತಮ್ಮ ಮನೆಗೆ ಬೀಗವನ್ನು ಹಾಕಿ ತಮ್ಮ ತಾಯಿಯವರನ್ನು ಕರೆದುಕೊಂಡು ಬರಲು ಬೆಂಗಳೂರಿಗಿ ಹೋಗಿದ್ದು, ದಿನಾಂಕ 8-4-2011 ರಂದು ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಮನೆಯಲ್ಲಿದ್ದ 5000 ರೂ ಬೆಲೆಬಾಳುವ ಟಿ.ವಿ ಹಾಗೂ 2000 ರೂ ನಗದನ್ನು ಕಳವುಮಾಡಿಕೊಂಡು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಜಾಗದ ವಿಚಾರದಲ್ಲಿ ವ್ಯಕ್ತಿಯನ್ನು ನಿಂದಿಸಿ ಹಲ್ಲೆ:



  • ದಿನಾಂಕ 8-4-2011 ರಂದು ಕುಶಾಲನಗರ ಠಾಣಾ ಸರಹದ್ದಿನ ಮೂಡ್ಲುಕೊಪ್ಪಲು ಶಿರಂಗಾಲ ಗ್ರಾಮದಲ್ಲಿ ಫಿರ್ಯಾದಿ ಎಸ್‌.ಎನ್‌. ಅನಿತ ಎಂಬವರು ತಮ್ಮ ವಾಸಕ್ಕೆ ಹೊಸ ಮನೆ ನಿರ್ಮಿಸುತ್ತಿದ್ದು, ಆರೋಪಿಗಳಾದ ಗೋವಿಂದಪ್ಪ ಹಾಗೂ ಲಕ್ಷಮಮ್ಮ ಎಂಬವರು ಅಲ್ಲಿಗೆ ಬಂದು ಈ ಜಾಗ ನಮಗೆ ಸೇರಿದ್ದು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಫಿರ್ಯಾದಿಯ ಮೇಲೆ ಹಲ್ಲೆ ನಡೆಸಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


Friday, April 8, 2011

ಹುಡುಗಿ ನಾಪತ್ತೆ, ಪ್ರಕರಣ ದಾಖಲು
  • 17 ವರ್ಷದ ಹುಡುಗಿಯೋರ್ವಳು ಕಾಣೆಯಾಗಿರುವ ಪ್ರಕರಣ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಹರಿಶ್ಚಂದ್ರಪುರದಲ್ಲಿ ನಡೆದಿದೆ. ದಿನಾಂಕ 6/4/2011ರಂದು ಹರಿಶ್ಚಂದ್ರಪುರದ ನಿವಾಸಿ ಹೂವು ವ್ಯಾಪಾರ ಮಾಡುವ ಅಸ್ಗರ್ ಎಂಬವರ ಮಗಳು 17 ವರ್ಷ ಪ್ರಾಯದ ಫರಾನ್ ಎಂಬಾಕೆಯು ಅಂಗಡಿಯಲ್ಲಿ ಹೂ ಕಟ್ಟುತ್ತಿದ್ದು, ಮದ್ಯಾಹ್ನದ ಊಟಕ್ಕೆಂದು ಮನೆಗೆ ಹೋಗಿ ಊಟ ಮುಗಿಸಿ ಅಂಗಡಿಗೆಂದು ಹೋದವಳು ಅಂಗಡಿಗೆ ಹೋಗದೆ ಎಲ್ಲಿಗೋ ಹೋಗಿದ್ದು, ಸಮೀಪದ ಬಂಧು ಮಿತ್ರರಲ್ಲಿ ವಿಚಾರಿಸಿದರೂ ಪತ್ತೆಯಾಗದ ಕಾರಣ ನೀಡಿದ ದೂರಿಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ದೂರವಾಣಿ ಮೂಲಕ ಕೊಲೆ ಬೆದರಿಕೆ, ಪ್ರಕರಣ ದಾಖಲು
  • ವ್ಯಕ್ತಿಯೋರ್ವರಿಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ ಹಾಕಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯಬೈಚನಹಳ್ಳಿಯಲ್ಲಿ ನಡೆದಿದೆ. ದಿನಾಂಕ 28/3/2011ರಂದು ಬೈಚನಹಳ್ಳಿಯ ನಿವಾಸಿ ಹರಿಶ್ಚಂದ್ರ ಎಂಬವರಿಗೆ ಮಿಥುನ್ ರೂಬಿ ಎಂಬಾತನು ದೂರವಾಣಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕೊಲೆ ಬೆದರಿಕೆ, ಪ್ರಕರಣ ದಾಖಲು
  • ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುವ ವಿಚಾರದಲ್ಲಿ ವ್ಯಕ್ತಿಯೋರ್ವರಿಗೆ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಬೆದರಿಸಿದ ಪ್ರಕರಣ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೆಬ್ಬಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 07/4/2011ರ ರಾತ್ರಿ 8:30 ಗಂಟೆಗೆ ಹೆಬ್ಬಟ್ಟಗೇರಿಯ ಷಣ್ಮುಖ ಕಾಲೋನಿಯ ನಿವಾಸಿ ಪಿ.ಬಿ.ನಾರಾಯಣ ಎಂಬವರಿಗೆ ಅದೇ ಗ್ರಾಮದ ಬಿಲ್ಲವರ ಗುಲಾಬಿ ಮತ್ತು ಕೃಷ್ಣಪ್ಪ ಎಂಬವರು ಅವರ ವಿರುದ್ದ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುವ ವಿಚಾರದಲ್ಲಿ ನಾರಾಯಣರವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಬೆದರಿಸಿದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, April 7, 2011

ಆತ್ಮಹತ್ಯೆ ಪ್ರಕರಣ: ಕುಶಾಲನಗರ ಠಾಣಾ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದ ನಿವಾಸಿ ಯಾದ ವೆಂಕಟೇಶ್‌ರವರ ಅಕ್ಕನ ಮಗ ಮೃತ್ತನ ಶಂಕರನ್ನು ಕಿವುಡ ಮತ್ತು ಮೂಗನಾಗಿದ್ದು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದು ಮನೆಯ ಹಾಲ್‌ನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವಯ ಕುಶಾಲನಗರದ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ. ಕೊಲೆ ಬೆದರಿಕೆ : ದಿ: 6-4-11 ರಂದುಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪೆರಾಜೆ ಗ್ರಾಮದ ನಿವಾಸಿ ಕೆ.ಬಿ ಗಣಪತಿ ಯವರು ಮತ್ತು ಜಿಲ್ಲಾ ಪಂಚಾಯತ್‌ ಸದಸ್ಯರು ಆರ್‌.ಡಿ. ಆನಂದ್‌ರವರೊಂದಿಗೆ ಮಾತ್ತಾನಾಡುತ್ತಿದ್ದಾಗ ಆರೋಪಿಯಾದ ಬಿ.ಎಂ. ಗಾಂಧಿ ಪ್ರಸಾದ್‌ ರವರು ಏಕಾಏಕಿಯಾಗಿ ಬಂದು ಪಿರ್ಯಾದಿರವನ್ನು ಮತ್ತು ಅವರ ಮಗನನ್ನು ಕುರಿತು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ನಿಮ್ಮ ಸಂತಾನ ಮುಗಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ. ರಸ್ತೆ ಅಪಘಾತ ವಿದ್ಯಾರ್ಥಿಗೆ ಗಾಯ: ದಿ: 7-4-11 ರಂದು ಶನಿವಾರಸಂತೆ ಠಾಣೆ ವ್ಯಾಪ್ತಿಯ ಮಲೆಯಾಳಂ ಸ್ಕೂಲ್‌ ಹತ್ತಿರ ಎಂ.ಎಸ್‌. ಹ್ಯಾರಿಸ್‌ ನ್ನು ಶಾಲೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಟಿ.ವಿ.ಎಸ್‌ ವಿಕ್ಟ್‌ರ್‌ ಕೆ.ಎ. 12-4245ರ ಬೈಕ್‌ ಅತಿ ವೇಗ ಮತ್ತು ಅಜಾಗರೂಕತೆ ಓಡಿಸಿಕೊಂಡು ಡಿಕ್ಕಿ ಪಡಿಸಿದ ಪರಿಣಾಮ ತಲೆಯ ಹಿಂಭಾಗ ಮತ್ತು ಬಲಗೈಗೆ ಗಾಯವಾಗಿದು ಚಾಲಕನ್ನು ನಿಲ್ಲಿಸದೇ ಓಡಿಕೊಂಡು ಹೋಗಿರುವುದಾಗಿ ಕೊಟ್ಟ ಪುಕಾರಿನ್ವ ಪ್ರಕರಣವನ್ನು ಸಿದ್ದಾಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Wednesday, April 6, 2011

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:




  • ದಿನಾಂಕ 5-4-2011 ರಂದು ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದಿನ ಮೈತಾಡಿ ಗ್ರಾಮದಲ್ಲಿ ಫಿರ್ಯಾದಿ ಶ್ರೀಮತಿ ಬೇಬಿಯವರು ಬೋರ್‌ವೆಲ್‌ನಲ್ಲಿ ನೀರು ತುಂಬಿಸುತ್ತಿರುವಾಗ ಆರೋಪಿಗಳಾದ ರಾಜ ಮತ್ತು ದಿವ್ಯಾ ಎಂಬವರು ಅಲ್ಲಿಗೆ ಬಂದು ವಿನಾಕಾರಣ ಜಗಳ ತೆಗೆದು ದೊಣ್ಣೆಯಿಂದ ಫಿರ್ಯಾದಿ ಮತ್ತು ಆಕೆಯ ಗಂಡನಿಗೆ ಹಲ್ಲೆ ಮಾಡಿ ಗಾಯಪಡಿಸಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನಕ್ರಮ ಕೈಗೊಂಡಿರುತ್ತಾರೆ.

ಕೊಲೆ ಪ್ರಕರಣ:




  • ದಿನಾಂಕ 5-4-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದದ ವಾಸಿ ಆರೋಪಿ ಮುತ್ತ ಅಡುಗೆ ಮಾಡುವ ವಿಚಾರದಲ್ಲಿ ತನ್ನ ಹೆಂಡತಿ ಕಾವೇರಿ ಎಂಬಾಕೆಯೊಂದಿಗೆ ಜಗಳ ತೆಗೆದು ದೊಣ್ಣೆಯಿಂದ ಹಲ್ಲೆಮಾಡಿದ ಪರಿಣಾಮ ಆಕೆಯು ತೀವ್ರ ಗಾಯಗೊಂಡು ಮೃತಪಟ್ಟಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಆರೋಪಿಯ ವಿರುದ್ದು ಕೊಲೆ ಮೊಕದ್ದಮೆಯನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, April 5, 2011

ರಸ್ತೆ ಅಫಘಾತ, ಕಾರು ಜಖಂ
  • ರಸ್ತೆ ಅಫಘಾತವೊಂದರಲ್ಲಿ ಕಾರು ಜಖಂಗೊಂಡ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೋಯಿಕೇರಿಯ ಸ್ಯಾಂಡಲ್ ಕಾಡ್ ಎಸ್ಟೇಟ್ ಬಳಿ ಇಂದು ನಡೆದಿದೆ. ಇಂದು ಬೆಳಿಗ್ಗೆ ಮೇಕೇರಿಯ ಸಿ.ಡಿ.ಪ್ರಸಾದ್ ಎಂಬವರು ತಮ್ಮ ಇಂಡಿಕಾ ಕಾರಿನಲ್ಲಿ ಮಡಿಕೇರಿಯಿಂದ ಕುಶಾಲನಗರ ಕಡೆಗೆ ಹೋಗುತ್ತಿರುವಾಗ ಸುಂಟಿಕೊಪ್ಪದ ಎನ್.ಎಂ.ರಾಜೇಶ್ ಎಂಬವರು ತಮ್ಮ ಮೋಟಾರು ಸೈಕಲ್ ಸಂ.ಕೆಎ-12-ಹೆಚ್-5275ರಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೋಯಿಕೇರಿ ಬಳಿಯ ಸ್ಯಾಂಡಲ್ ಕಾಡ್ ಸಿ.ಡಿ.ಪ್ರಸಾದ್‌ರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿಗೆ ಜಖಂಗೊಂಡಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಣದ ವಿಚಾರದಲ್ಲಿ ಮನೆಗೆ ನುಗ್ಗಿ ಹಲ್ಲೆ, ಇಬ್ಬರಿಗೆ ಗಾಯ
  • ಹಣದ ವಿಚಾರದಲ್ಲಿ ಮನೆಗೆ ನುಗ್ಗಿ ಪತಿ ಪತ್ನಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆಯ ಕಲ್ಲುಕೋರೆ ಎಂಬಲ್ಲಿ ನಡೆದಿದೆ. ದಿನಾಂಕ 4/4/2011ರ ರಾತ್ರಿ ಕೊಡ್ಲಿಪೇಟೆಯ ಕಲ್ಲು ಕೋರೆಯ ನಿವಾಸಿ ಎಸ್.ನಾಗರಾಜುರವರು ತಮ್ಮ ಅತ್ತೆಯ ಮನೆಯಲ್ಲಿ ಊಟ ಮಾಡಿಕೊಂಡಿರುವಾಗ್ಗೆ ಆರೋಪಿಗಳಾದ ದಿಲೀಪ ಮತ್ತು ನಿತಿನ್ ಎಂಬವರು ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಹಣದ ವಿಚಾರದಲ್ಲಿ ಜಗಳವಾಡಿ ನಾಗರಾಜುರವರ ಮೇಲೆ ಕೈಯಿಂದ ಹಾಗೂ ಕಲ್ಲಿನಿಂದ ಹಲ್ಲೆ ಮಾಡಿದ್ದು, ಜಗಳ ಬಿಡಿಸಲು ಬಂದ ನಾಗರಾಜುರವರ ಹೆಂಡತಿಯ ಮೇಲೂ ಹಲ್ಲೆ ನಡೆಸಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಹಲ್ಲೆ
  • ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೊಳತ್ತೋಡು ಬೈಗೋಡು ಎಂಬಲ್ಲಿ ನಡೆದಿದೆ. ದಿನಾಂಕ 4/4/2011ರಂದು ಕೊಳತ್ತೊಡು ಬೈಗೋಡು ಗ್ರಾಮದ ಪಂಜರಿ ಎರವರ ಸುಬ್ರಮಣಿ ಎಂಬಾತನು ಹಣದ ವಿಷಯವಾಗಿ ಮಾತನಾಡಲು ತನ್ನ ಹೆಂಡಿತಯ ಅಣ್ಣ ಮಣಿ ಎಂಬಾತನ ಮನೆಗೆ ಹೋಗಿದ್ದು, ಅಲ್ಲಿ ಸುಬ್ರಮಣಿಗೂ, ಮಣಿಗೂ ಹಣದ ವಿಷಯವಾಗಿ ಜಗಳವಾಗಿದ್ದು, ಮಣಿ ಮತ್ತು ಆತನ ಹೆಂಡತಿ ಭಾಗ್ಯ ಇಬ್ಬರೂ ಸೇರಿಕೊಂಡು ಸುಬ್ರಮಣಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವರದಕ್ಷಿಣೆ ಕಿರುಕುಳ ಕೊಲೆ ಬೆದರಿಕೆ.
  • ವರದಕ್ಷಿಣೆಗಾಗಿ ಪೀಡಿಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ವಿರಾಜಪೇಟೆ ಠಾಣಾ ವ್ಯಾಪ್ತಿಯ ಕೊಳತ್ತೋಡು ಬೈಗೋಡು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೇತ್ರಿ ಗ್ರಾಮದ ನಿವಾಸಿ ಆರಿಫಾ ಎಂಬಾಕೆಯು ಮೈಸೂರಿನ ರಿಯಾಝ್ ಎಂಬಾತನನ್ನು 7 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆಯನಂತರ ಆಕೆಗೆ ಅವಳ ಪತಿಯು ಮಾನಸಿಕ ಹಾಗೂ ದೈಹಿಕವಾಘಿ ಹಿಂಸೆ ನೀಡುತ್ತಿದ್ದು, ಇತ್ತೀಚೆಗೆ ದಿನಾಂಕ 29/3/2011ರಂದು ಆಕೆಯ ಮೇಲೆ ರಿಯಾಜ್ ಹಲ್ಲೆ ಮಾಡಿದ್ದು, ನಂತರ ಆಕೆಯು ತನ್ನ ತಮದೆಯ ಊರಾದ ಬೇತ್ರಿಗೆ ಬಂದಿದ್ದು, ಆರೋಪಿ ರಿಯಾಜ್ ಅಲ್ಲಿಗೂ ಹೋಗಿ ಆರಿಫಾಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, April 4, 2011

ಕಳ್ಳತನ ಪ್ರಕರಣ: ದಿ: 3-4-11 ರಂದು ಕುಶಾಲನಗರ ರಾಧಕೃಷ್ಣ ಬಡಾವಣೆ ನಿವಾಸಿ ಯಾದ ರತನ್‌ಲಾಲ್‌ ಚಿನ್ನದ ವ್ಯಾಪಾರಿ ಯಾಗಿದ್ದು , ತನ್ನ ಚಿನ್ನ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗನಾದ ಕಿಶನ್‌ ಹಾಗೂ ಹೆಂಡತಿ ಮಕ್ಕಳನ್ನು ಬಿಟ್ಟು , ಸ್ವಂತ ಕೆಲಸ ಮೇರೆ ಮೈಸೂರಿಗೆ ಹೋಗಿದ್ದು ಮೈಸೂರಿನಲ್ಲಿದ್ದ ವೇಳೆಯಲ್ಲಿ ಚಿನ್ನದ ಅಂಗಡಿಯ ಮಾಲೀಕನ ಹೆಂಡತಿ ದೂರವಾಣಿ ಕರೆಮಾಡಿ ಅಂಗಡಿಯಲ್ಲಿಟ್ಟಿದ್ದ 110 ಗ್ರಾಂ ಉಂಗುರದ ಡಬ್ಬಿಯನ್ನು ಒಟ್ಟು ಅಂದಾಜಿ 2,00,000=00 ಆಗಿದ್ದು ಯಾರೋ 3 ಜನ ಅಪರಿಚಿತ ಗಂಡಸರು ವ್ಯಾಪಾರ ಮಾಡುವುದಾಗಿ ಅಂಗಡಿಗೆ ಬಂದು ಕಳವು ಮಾಡಿಕೊಂಡು ಹೋಗಿರುವುದಾಗಿ ಕೊಟ್ಟ ಪುಕಾರಿನ್ವಯ ಕುಶಾಲನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.


ಕತ್ತಿಯಿಂದ ಹಲ್ಲೆ ಹಾಗೂ ಕೊಲೆ ಬೆದರಿಕೆ:


ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ 2 ನೇ ಮೊಣ್ಣಗೇರಿ ಗ್ರಾಮಾದ ನಿವಾಸಿಯಾದ ಕೆಂಚಪ್ಪನವರಿಗೆ 2 ಹೆಂಡತಿಯಾರಿದ್ದು ಅದರಲ್ಲಿ 2ನೇ ಹೆಂಡತಿಯಾದ ಚಂದ್ರಾವತಿ ಗರ್ಬಿಣಿಯಾಗಿದ್ದು, 1ನೇ ಹೆಂಡಿತಯಾದ ಅರೋಪಿ ಕಾವೇರಮ್ಮಳು ಎರಡನೇ ಹೆಂಡತಿಯಾದ ಚಂದ್ರಾವತಿ (ಪಿರ್ಯಾದಿ) ರವರಿಗೆ ಅನಾವಶ್ಯಕ ಜಗಳ ತೆಗೆದು ಅವಾಚ್ಚ ಶಬ್ಬಗಳಿಂದ ಬೈದು ಹಿಡಿದು ಎಳೆದಾಡಿ ಕೆಳಗೆ ಬೀಳಿಸಿ ಕಾಲಿನಿಂದ ಹೊಟ್ಟೆಗೆ ಒದ್ದು ಮನೆಯೊಳಗಿನಿಂದ ಕತ್ತಿಯನ್ನು ತೆಗೆದು ಕಡಿಯಲು ಬಂದು , ತೆಡೆಯಲು ಬಂದ ಪಿರ್ಯಾದಿಯವರ ಗಂಡನಿಗೆ ಎಡಗೈ ತೋರು ಬೆರಳಿಗೆ ಗಾಯವಾಗಿರುತ್ತದೆ. ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.


2) ಶನಿವಾರ ಸಂತೆ ಠಾಣಾ ವ್ಯಾಪ್ತಿಯ ಸಿಡಿಗಳಲೆ ಗ್ರಾಮದ ನಿವಾಸಿ ಪಿರ್ಯಾದಿಯಾದ ಸರಸ್ವತಿ ಗಂಡ ಕುಮಾರ್‌ ತನ್ನ ಮನೆಯ ಹತ್ತಿರವಿದ್ದಾಗ ಆರೋಪಿಯಾದ ದರ್ಮ ಎಂಬವನ್ನು ಅಲ್ಲಿ ಗೆ ಬಂದು ಪಿರ್ಯಾದಿರವರಲ್ಲಿ ಆರೋಪಿ ಯ ರೇಷನ್ ಕಾಡ್‌ನ್ನು ಕೇಳಿ ಯಾಕೆ ವಾಪಸ್ಸು ಕೊಟ್ಟಿವೆಂದು ಅವ್ಯಾಚ್ಚ ಶಬ್ಬಗಳಿಂದ ಬೈದ್ದು ಕಾಲಿನಿಂದ ಒದ್ದು , ಕೈಯಿಂದ ಕಪಾಲಕ್ಕೆ ಹೊಡೆದು, ಪೊಲೀಸರಿಗೆ ದೂರು ಕೊಟ್ಟರೆ ನಿನ್ನನ್ನು ಕೊಲೆ ಮಾಡುವುದಾಗಿ ಹೇಳಿ ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಶನಿವಾಸಂತೆ ಠಾಣೆಯಲ್ಲಿ ದಿ: 2-4-11 ರಂದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.



ಆತ್ಮಹತ್ಯೆ ಪ್ರಕರಣ:


ದಿ: 3-4-11 ಸಂಜೆ 23-30 ಗಂಟೆಗೆ ಸುಂಠಿಕೊಪ್ಪ ಠಾಣಾ ವ್ಯಾಪ್ತಿಯ ಕಾರೆಕೊಲ್ಲಿ ಗ್ರಾಮ ಬಿ ಎಸ್ಟೇಟ್‌ ಹೊರೂರು ಗ್ರಾಮದ ವಾಸಿ ಶ್ರೀ ಬಟ್ಟಯ್ಯರವರ ಮಗ ಗುರುವಪ್ಪ ಪ್ರಾಯ 28 ವರ್ಷ, ಹೆಂಡತಿ ಮಕ್ಕಳೊಂದಿಗೆ ಲೈನ್ ಮನೆಯಲ್ಲಿ ವಾಸವಾಗಿದ್ದು ಸದ್ರಿಯವನ್ನು ಸುಂಟಿಕೊಪ್ಪ ಸಂತೆಗೆ ಹೋಗಿ ಮಧ್ಯಾಪಾನ ಮಾಡಿಕೊಂಡು ಮನೆಗೆ ಬಂದಿದ್ದು ಆತನ ಹೆಂಡತಿ ಮನೆಯಲ್ಲಿ ಗಲಾಟೆ ಮಾಡಬೇಡ , ಅಕ್ಕಪಕ್ಕದವರಿಗೆ ತೊಂದರೆಯಾಗುತ್ತದೆ ಹೇಳಿದಾಗ ಆತನು ಒಳಗಡೆ ಹೋಗಿ ಮಲಗಿದ್ದು, ಸ್ವಲ್ಪ ಸಮಯದ ನಂತರ ಗುರುವಪ್ಪನ್ನು ನೈಲಾನ್‌ ಹಗ್ಗದಿಂದ ನೇಣು ಬಿಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವಯ ಸುಂಠಿಕೊಪ್ಪ ಠಾಣೆಯಲ್ಲಿ ಪ್ರಕರಣವನ್ನು ದಾಖಿಲಿಸಿಕೊಂಡಿರುವುದಾಗಿದೆ.

Saturday, April 2, 2011

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:




  • ದಿನಾಂಕ 1-4-2011 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಾಟಕೇರಿ ಗ್ರಾಮದ ಕೋರನಬಾಣೆ ಪೈಸಾರಿಯಲ್ಲಿ ಫಿರ್ಯಾದಿ ಬಿ.ಕೆ. ಲಿಂಗಪ್ಪ ಎಂಬವರು ತಮ್ಮ ಮನೆಯ ಪಕ್ಕದಲ್ಲಿರುವ ಬೋರ್‌ವೆಲ್‌ನಿಂದ ನೀರು ತುಂಬಿಸುವ ವಿಚಾರದಲ್ಲಿ ಆರೋಪಿ ಡಾಲು ಕೆ.ಆರ್‌ ಹಾಗೂ ಚೇತನ್‌ ಎಂಬವರಿಗೆ ಬಿಂದಿಗೆಯಲ್ಲಿ ನೀರು ತುಂಬಿಸಿಕೊಳ್ಳಿ ಎಂಬುದಾಗಿ ಹೇಳಿದ ವಿಚಾರದಲ್ಲಿ ಆರೋಪಿಗಳು ಫಿರ್ಯಾದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆನಡೆಸಿ ನೋವನ್ನುಂಟು ಮಾಡಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


Friday, April 1, 2011

ಮತಾಂತರ ಯತ್ನ, ಹಲ್ಲೆ, ಪ್ರಕರಣ ದಾಖಲು
  • ಮತಾಂತರಜ್ಜೆ ಯತ್ನಿಸಿ, ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಸ್ತೂರು ಗ್ರಾಮದಲ್ಲಿ ಇಂದು ನಡೆದಿದೆ. ಇಂದು ಬೆಳಿಗ್ಗೆ ಸಮಯ ಸುಮಾರು 09:30 ಗಂಟೆಗೆ ಆರೋಪಿಗಳಾದ ಇ.ಎಸ್.ಪ್ರಸನ್ನ, ಪೊಲೀಸ್ ಕಾನ್ಸ್‌ಟೇಬಲ್, ಜಿಲ್ಲಾ ಸಶಸ್ತ್ರ ದಳ, ಎ.ಜೆ.ದಿವಾಕರ, ಮಂಗಳಾದೇವಿ ನಗರ, ಡಯಾಸ್, ಯಲಹಂಕ, ಬೆಂಗಳೂರು ಮತ್ತು ಅಂತೋಣಿ, ಕಾಂಡನಕೊಲ್ಲಿ ಗ್ರಾಮ ಮುಂತಾದವರು ಎರಡು ಮೋಟಾರು ಬೈಕುಗಳಲ್ಲಿ ದೇವಸ್ತೂರು ಗ್ರಾಮಕ್ಕೆ ಹೋಗಿ ಗ್ರಾಮದ ಗಗನ್ ಎಂಬವರೊಂದಿಗೆ ತಾವು ಪತ್ರಿಕಾ ಪ್ರತಿನಿಧಿಗಳು ಮತ್ತು ಪೊಲೀಸ್ ಇಲಾಖೆಯವರು ಎಂದು ಹೇಳಿ ನಂತರ ದಿನಾಂಕ 26/03/2011ರಂದು ತಮ್ಮ ಕಡೆಯವರನ್ನು ಪೊಲೀಸರಿಗೆ ಒಪ್ಪಿಸಿದ್ದು, ಗ್ರಾಮದವರು ಏನೆ ಮಾಡಿದರೂ ತಾವು ಹಿಂದೂಗಳನ್ನು ಮತಾಂತರ ಮಾಡುವುದಾಗಿ ಹೇಳಿರುವುದಲ್ಲದೆ ತಾವು ಸುಮಾರು 40 ಜನರಿದ್ದು, ಊರಿನ ಜನರನ್ನೂ, ಮಹಿಳೆಯರನ್ನೂ ಕೊಲ್ಲುವುದಾಗಿ ಹೇಳಿ ಫಿರ್ಯಾದಿ ಗಗನ್‌ರವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೈಯಿಂದ ದೂಡಿ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕಯಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ
  • ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿರುವ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 31/03/2011ರಂದು ಗೋಪಾಲಪುರ ಗ್ರಾಮದ ಮೈಮಯನ ಎಂಬವರು ತಮ್ಮ ಪಕ್ಕದ ಮನೆಯ ಹೇಮ ಎಂಬವರೊಂದಿಗೆ ಮಾತನಾಡಿಕೊಂಡು ನಿಂತಿದ್ದಾಗ, ಆರೋಪಿಗಳಾದ ಸಾವಿತ್ರಮ್ಮ, ಲೀಲಾ ಮತ್ತು ರವಿ ಎಂಬವರು ಮೈಮುನರವರನ್ನು ಕುರಿತು ಅಶ್ಲೀಲ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಮೈಮುನ ಹಾಗೂ ಹೇಮರವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕಯಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ವ್ಯಕ್ತಿಗೆ ಗಾಯ
  • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿರುವ ಘಟನೆ ಭಾಗಮಂಡಲ ಠಾಣಾ ವ್ಯಾಪ್ತಿಯ ಕರಿಕೆ ಗ್ರಾಮದ ದೊಡ್ಡಚೇರಿಯಲ್ಲಿ ನಡೆದಿದೆ. ದಿನಾಂಕ 31/03/2011ರಂದು ಅಪರಾಹ್ನ ದೊಡ್ಡಚೇರಿಯ ಪಿ.ಕೆ.ಕೇಶವ ಎಂಬವರು ಜೊತೆ ಅದೇ ಗ್ರಾಮದ ಜೋಬಿ ಎಂಬಾತನು ನೀರಿನ ಪೈಪ್ ತುಂಡರಿಸಿದ ವಿಷಯದಲ್ಲಿ ಜಗಳವಾಡಿ ಕೇಶವರವರ ಮೇಲೆ ಕೈಯಿಂದ ಹಾಗೂ ಕಲ್ಲಿನಿಂದ ಜಜ್ಜಿ ಗಾಯಗೊಳಿಸಿದ ಬಗ್ಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.