Saturday, August 21, 2010

ಆತ್ಮಹತ್ಯೆ ಪ್ರಕರಣ:

ವ್ಯಕ್ತಿಯೋರ್ವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮ ಹತ್ಯೆಮಾಡಿಕೊಂಡ ಪ್ರಕರಣ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 19-8-2010 ರಂದು ದೇವಣಗೇರಿ ಗ್ರಾಮದ ವಾಸಿ ಚಿನ್ನಿಯಪ್ಪ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ವಿಷ ಸೇವಿಸಿದ್ದು, ಅವರನ್ನು ಚಿಕಿತ್ಸೆಗಾಗಿ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ಸಮಯ ಅವರು ಮೃತಪಟ್ಟಿರುತ್ತಾರೆ. ಇವರು ಅಲ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದುದೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ.
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಸುಂಟಿಕೊಪ್ಪ ಠಾಣೆಯಲ್ಲಿ ವರದಿಯಾಗಿದೆ. ನಿನ್ನೆ ದಿನ 20-10-2010 ರಂದು ಅಪರಾಹ್ನ ಫಿರ್ಯಾದಿ ಎಂ.ಎ. ಉಸ್ಮಾನ್‌ರವರು ಸುಂಟಿಕೊಪ್ಪ ಗ್ರಾಮ ಪಂಚಾಯ್ತಿ ಸಮೀಪ ತಮ್ಮ ಕಾರಿನಲ್ಲಿ ಕುಳಿತು ಸ್ನೇಹಿತರೊಂದಿಗೆ ಮಾತನಾಡಿಕೊಂಡಿರುವಾಗ ಆರೋಪಿ ಕೆ.ಎ. ಉಸ್ಮಾನ್‌ ಅಲ್ಲಿಗೆ ಬಂದು ಏಕಾಎಕಿ ಎಂ.ಎ. ಉಸ್ಮಾನ್‌ರವರ ಮೇಲೆ ಹಲ್ಲೆನಡೆಸಿ ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೆ.ಎಫ್‌.ಡಿ. ಸಂಘಟಕರ ಜೊತೆಗೆ ಆಟವಾಡಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದು ಈ ಬಗ್ಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಪಾನಮತ್ತ ವ್ಯಕ್ತಿಯಿಂದ ಹಲ್ಲೆ.
ಪಾನಮತ್ತ ವ್ಯಕ್ತಿಯೋರ್ವರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ನಿಟ್ಟೂರು ಮಲ್ಲೂರು ಗ್ರಾಮದಲ್ಲಿ ನಡೆದಿದೆ. ದಿ. 20-8-2010 ರಂದು ಸಂಜೆ ಸದರಿ ಗ್ರಾಮದಲ್ಲಿ ಗ್ರಾಮಸ್ಥರು ಕೂಡಿಕೊಂಡು ಆನೆ ಹಾವಳಿಯ ಬಗ್ಗೆ ಚರ್ಚಿಸುತ್ತಿರುವಾಗ ಆರೋಪಿ ಮಲಚೀರ ತಮ್ಮಯ್ಯ ಎಂಬವರು ಪಾನಮತ್ತರಾಗಿ ಬಂದು ಫಿರ್ಯಾದಿ ಚಿಮ್ಮಣಮಾಡ ಸುಖ ತಿಮ್ಮಯ್ಯ ಎಂಬವರನ್ನು ಕುರಿತು ನೀನೇನು ಈ ಊರಿನ ಜನಪ್ರತಿನಿಧಿಯೇ ಎಂದು ಕೇಳಿ ಏಕಾಎಕಿ ಹಲ್ಲೆ ನಡೆಸಿದ್ದು ಈಗಲೇ ಕೋವಿತಂದು ನಿನ್ನನ್ನು ಮುಗಿಸಿ ಬಿಡುತ್ತೇನೆಂದು ಬೆದರಿಸಿದ್ದು, ಈ ಕುರಿತು ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Wednesday, August 18, 2010

ಬೈಕ್‌ ಡಿಕ್ಕಿ,ಪಾದಚಾರಿಗೆ ಗಾಯ.

ದಿನಾಂಕ 11-8-2010 ರಂದು ಫಿರ್ಯಾದಿ ವಿ.ಪಿ ಅಚ್ಚುತರವರು ಕಾಲೇಜು ರಸ್ತೆ, ಆರ್ಮಿ ಕ್ಯಾಂಟಿನ್‌ ಕಡೆಗೆ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಆರೋಪಿ ಅಲ್ಲಾರಂಡ ವಿಠಲ ತನ್ನ ಬೈಕ್‌ ಸಂಖ್ಯೆ ಕೆಎ-12ಜೆ-1694ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ವಿ.ಪಿ ಅಚ್ಚುತರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿರವರಿಗೆ ಗಾಯಗಳಾಗಿದ್ದು, ಈ ಸಂಬಂಧ ಸದರಿಯವರ ದೂರಿನನ್ವಯ ಮಡಿಕೇರಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
4000 ರೂ. ಬೆಲೆಬಾಳುವ ಸಾಮಾಗ್ರಿ ಕಳವು, ಪ್ರಕರಣ ದಾಖಲು.
ದಿನಾಂಕ 17-8-2010 ರಂದು ಚೆನ್ನನಕೋಟೆ ಗ್ರಾಮದಲ್ಲಿ ಫಿರ್ಯಾದಿ ಸುಧರ್ಶನ್‌ ಎಂಬುವವರಿಗೆ ಸೇರಿದ ಕೊಠಡಿಯ ಬಾಗಿಲನ್ನು ಯಾರೋ ಕಳ್ಳರು ಮುರಿದು ಒಳಗೆ ಪ್ರವೇಶಿಸಿ ಸುಮಾರು 4000 ರೂ. ಬೆಲೆಬಾಳುವ ಗುದ್ದಲಿ, ಹಾರೆ, ಪಿಕಾಸಿ, ಬಾಂಡ್ಲಿ ಮತ್ತು ಇತರೆ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದರ ಪೊಲೀಸರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಬೈಕ್‌ ಸವಾರನ ಸಾವು.
ದಿನಾಂಕ 17-8-2010 ರಂದು ಕೊಳತೋಡು ಬೈಗೂರು ಗ್ರಾಮದಲ್ಲಿ ಆರೋಪಿತ ಬಸ್‌ ಚಾಲಕ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಎದುರುಗಡೆಯಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‌ ಸವಾರ ಬಿ.ಎ. ಹರೀಶ ಎಂಬಾತನು ಸ್ಥಳದಲ್ಲಿಯೇ ಸಾವನಪ್ಪಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಲಾರಿ ಬೈಕ್‌ಗೆ ಡಿಕ್ಕಿ, ಬೈಕ್‌ ಸವಾರನ ದುರ್ಮರಣ.
ದಿನಾಂಕ 17-8-2010 ರಂದು ಮನು ಎಂಬಾತನು ತನ್ನ ಬೈಕ್‌ನಲ್ಲಿ ಗುಡ್ಡೆ ಹೊಸೂರು ಕಡೆಗೆ ಗೋಗುತ್ತಿರುವ ಸಮಯ ಆರೋಪಿ ಲಾರಿ ಚಾಲಕ, ಕಣ್ಣನ್‌ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ಬೈಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ಮನು ಸ್ಥಳದಲ್ಲೇ ಸಾವನಪ್ಪಿದ್ದು, ಈ ಸಂಬಂಧ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ಪ್ರಕರಣ ದಾಖಲು.
ದಿನಾಂಕ 17-8-2010 ರಂದು ಮಡಿಕೆಬೀಡು ಗ್ರಾಮದಲ್ಲಿ ಅರೋಪಿಗಳಾದ ಮಂಜುನಾಥ, ರಂಗಸ್ವಾಮಿ, ಜನಧೀಶ ರವರು ಫಿರ್ಯಾದಿ ಕೆ.ಟಿ.ಸಣ್ಣಶೆಟ್ಟಿ ಎಂಬವರಿಗೆ ಕ್ಷುಲ್ಲಕ ಕಾರಣಕ್ಕೆ ಮನೆಗೆ ಹೋಗದಂತೆ ಅಡ್ಡಿಪಡಿಸಿ ಕೈಯಿಂದ ಹೊಡೆದು ಕಾಲಿನಿಂದ ಒದ್ದು ನೋವುಪಡಿಸಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸ್‌ ಠಾಣೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

Wednesday, August 11, 2010

ಶಾಲಾ ಬಾಲಕಿ ನಾಪತ್ತೆ, ಪ್ರಕರಣ ದಾಖಲು
  • ಶಾಲೆಗೆಂದು ಹೋದ ಬಾಲಕಿಯೊಬ್ಬಳು ಮನೆಗೆ ಬಾರದೆ ನಾಪತ್ತೆಯಾಗಿರುವ ಪ್ರಕರಣ ಕುಶಾಲನಗರ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 10/08/2010ರಂದು ಕುಶಾಲನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ನಂಜರಾಯಪಟ್ಟಣದ ಮಹಮ್ಮದಾಲಿ ಎಂಬವರ ಪುತ್ರಿ 9 ವರ್ಷ ಪ್ರಾಯದ ಸುಮಯಾ ಎಂಬಾಕೆಯು ಶಾಲೆಗೆಂದು ಹೋದವಳು ಮನೆಗೆ ಮರಳಿ ಬಾರದಿರುವ ಬಗ್ಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಮನೆ ನುಗ್ಗಿ ಕತ್ತಿಯಿಂದ ಹಲ್ಲೆ, ಓರ್ವನಿಗೆ ಗಾಯ

  • ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 09/08/2010ರ ನಡುರಾತ್ರಿ 11:30 ಗಂಟೆಗೆ ಪ್ರಕರಣದ ಫಿರ್ಯಾದಿ ಬೇಗೂರು ಗ್ರಾಮದ ಈಶ್ವರ ಎಂಬವರು ತಮ್ಮ ಪತ್ನಿಯೊಂದಿಗೆ ಮನೆಯಲ್ಲಿರುವಾಗ ಅಲ್ಲಿಗೆ ಬಂದ ಆರೋಪಿಗಳಾದ ರಘು, ಕುಳಿಯ ಮತ್ತು ಬೆಳ್ಳಿ ಎಂಬವರು ಮನೆಗೆ ಬಂದು ರಘುರವರ ಅತ್ತೆ ಕಾವೇರಿಯವರು ಈಶ್ವರರವರ ಮಗುವನ್ನು ನೋಡಿಕೊಂಡ ಕೂಲಿಯ ವಿಚಾರದಲ್ಲಿ ಜಗಳವಾಡಿ ಮೂವರೂ ಸೇರಿಕೊಂಡು ಈಶ್ವರರವರಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದು, ಈ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ, ಪ್ರಕರಣ ದಾಖಲು

  • ಕರ್ತವ್ಯ ನಿರತ ವೈದ್ಯರೊಬ್ಬರ ಮೇಲೆ ಪಾನಮತ್ತರಾದ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ಗೋಣಿಕೊಪ್ಪ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ದಿನಾಂಕ 10/08/2010 ರಂದು ಸಂಜೆ ಗೋಣಿಕೊಪ್ಪ ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ದಿನೇಶ್‌ ಬಾಬುರವರು ಕರ್ತವ್ಯ ನಿರತರಾಗಿದ್ದಾಗ ಯಾರೋ ನಾಲ್ಕು ಅಪರಿಚಿತ ಪಾನಮತ್ತ ವ್ಯಕ್ತಿಗಳು ಬಂದು ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರ ಮೇಲೆ ಹಲ್ಲೆಯೆಸಗಿ ಕೊಲೆಬೆದರಿಕೆ ಹಾಕಿರುವ ಬಗ್ಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ, 6 ಜನರ ಬಂಧನ

  • ಅಕ್ರಮವಾಗಿ ಜೂಜಾಡುತ್ತಿದ್ದ 6 ಜನರನ್ನು ಬಂಧಿಸಿರುವ ಘಟನೆ ಭಾಗಮಂಡಲ ಪೊಲೀಸ್‌ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 10/08/2010ರಂದು ಸಂಜೆ ಭಾಗಮಂಡಲ ಠಾಣಾ ವ್ಯಾಪ್ತಿಯ ಕೊಟ್ಟೂರು ಗ್ರಾಮದಲ್ಲಿ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಭಾಗಮಂಡಲ ಠಾಣೆಯ ಪಿಎಸ್‌ಐ, ಹೆಚ್‌.ಎಂ.ವೆಂಕಟಪ್ಪನವರು ಸಿಬ್ಬಂದಿಯೊಂದಿಗೆ ಧಾಳಿ ನಡೆಸಿ ಕೊಟ್ಟೂರು ಗೋಪಾಲಕೃಷ್ಣ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಜೂಜಾಡುತ್ತಿದ್ದ ಕೇಚಪ್ಪನ ಲೋಹಿತಾಶ್ವ, ಎಂ.ಪಿ.ಸುಕುಮಾರ, ಕೇಕಡ ಕಿಶನ್‌, ದೊಡ್ಡೇರ ಬಿ ರಘು, ಕೇಟೋಳಿ ಯು ಪೂವಯ್ಯ, ಬೈಮನ ಎಂ ಜಗದೀಶ ಮುಂತಾದ 6 ಜನರನ್ನು ಬಂಧಿಸಿ ಜೂಜಾಡಲು ಉಪಯೋಗಿಸುತ್ತಿದ್ದ ಇಸ್ಪೀಟೆಲೆಗಳು ಹಾಗೂ ರೂ 450/-ನ್ನು ವಶಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tuesday, August 10, 2010

ವರದಕ್ಷಿಣೆ ಕಿರುಕುಳ, ಪ್ರಕರಣ ದಾಖಲು
  • ವಿವಾಹಿತ ಮಹಿಳೆಯೋರ್ವರಿಗೆ ವರದಕ್ಷಿಣೆ ಕಿರುಕುಳ ಮಾತ್ರವಲ್ಲದೆ ಜೀವಬೆದರಿಕೆ ಹಾಖಿರುವ ಕುರಿತು ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಶಾಲನಗರದ ಬೈಪಾಸ್‌ ರಸ್ತೆಯ ಸವಿತಾ ಎಂಬಾಕೆಯು ಸುಮಾರು 11 ವರ್ಷಗಳ ಹಿಂದೆ ಅಲ್ಲಿನ ಸತೀಶ್‌ ಎಂಬಾತನ್ನು ವಿವಾಹವಾಗಿದ್ದು, ಎರಡು ಮಕ್ಕಳೊಂದಿಗೆ ಜೀವಿಸುತ್ತಿದ್ದು, ಇತ್ತೀಚೆಗೆ ಪತಿ ಸತೀಶ ಸವಿತಾಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ಈ ದಿನ ಅಪರಾಹ್ನ ಆಕೆಯೊಂದಿಗೆ ಜಗಳವಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ಸವಿತಾ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹುಡುಗಿ ನಾಪತ್ತೆ, ಪ್ರಕರಣ ದಾಖಲು
  • ತರಬೇತಿಗೆ ಹೋದ ತರುಣಿಯೊಬ್ಬಳು ಮನೆಗೆ ಬಾರದೆ ನಾಪತ್ತೆಯಾದ ಪ್ರಕರಣ ವಿರಾಜಪೇಟೆ ನಗರ ಠಾಣೆಯಲ್ಲಿ ಇಂದು ವರದಿಯಾಗಿದೆ. ದಿನಾಂಕ 4/8/2010ರಂದು ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆ ನಿವಾಸಿ ಎನ್‌.ಎಸ್‌.ಕೃಷ್ಣ ಎಂಬವರ ಮಗಳು ನಿಶ್ಮ ಎಂಬಾಕೆಯು ವಿರಾಜಪೇಟೆ ನಗರದ ಸುಣ್ಣದ ಬೀದಿಯಲ್ಲಿರುವ ಹೊಲಿಗೆ ತರಬೇತಿ ಕೇಂದ್ರಕ್ಕೆ ತರಬೇತಿಗೆಂದು ಹೋದವಳು ವಾಪಾಸು ಬಾರದೆ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಬೈಕ್‌ ಕಳವು ಆರೋಪಿಯ ಬಂಧನ, ಮೋಟಾರು ಬೈಕು ವಶ

  • ಮೋಟಾರು ಬೈಕು ಕಳ್ಳತನ ಮಾಡಿದ ವ್ಯಕ್ತಿಯೋರ್ವನನ್ನು ಬಂಧಿಸಿರುವ ಬಗ್ಗೆ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 09/08/2010 ರಂದು ರಾತ್ರಿ ಸಿದ್ದಾಪುರ ಠಾಣೆಯ ಮುಖ್ಯ ಕಾನ್ಸ್‌ಟೇಬಲ್‌ ಹೆಚ್‌.ಕೆ.ಪಾರ್ಥ ಎಂಬವರು ತಮ್ಮ ಸಹ ಸಿಬ್ಬಂದಿಗಳೊಂದಿಗೆ ನಗರ ಗಸ್ತು ಮಾಡುತ್ತಿರುವ ಸಮಯದಲ್ಲಿ ನೆಲ್ಲಿ ಹುದಿಕೇರಿಯ ಮಸೀದಿ ಬಳಿ ಮೋಟಾರು ಸೈಕಲ್‌ನಲ್ಲಿ ಬರುತ್ತಿದ್ದ ಆರೋಪಿ ಕುಶಾಲನಗರದ ಸಿ.ಬಿ.ಸಂತೋಷ್‌ ಎಂಬಾತನ್ನು ತಡೆದು ವಿಚಾರಿಸಿದಾಗ ಮೋಟಾರು ಸೈಕಲ್‌ನ ಯಾವುದೇ ದಾಖಲಾತಿಗಳು ಕಂಡು ಬಾರದಿದ್ದು, ಹೆಚ್ಚಿನ ವಿಚಾರಣೆಯಲ್ಲಿ ಈತನು ತಾನು ಇನ್ನೂ ಮೂರು ಮೋಟಾರು ಸೈಕಲ್‌ಗಳನ್ನು ಕುಶಾಲನಗರದಿಂದ ಕಳವು ಮಾಡಿದ್ದು ಅರೆಕಾಡಿನಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆತನನ್ನು ಬಂಧಿಸಿ ಮೋಟಾರು ಸೈಕಲ್‌ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Wednesday, August 4, 2010

Inentional insult and life threat, case registered
  • A case of intentional insult and life threat is registered in Siddapura PS today. Prior to 6 months one Prathima, daughter of the complainant M K Annaiah of Byrambhada village introduced with the accused Darshan Aiyappa of Bangalore through internet and they were kept relationship through phone calls. Later on the accused Darshan started to force Prathima to marry him and she informed this to her father Annaiah. On 03/08/2010 evening when the complainant Annaiah was at his home, the accused called him through phone and abused him in filthy language and threatened him that he will kill him and his daughter Prathima if they seen in Madikeri.
Illegal gambling, 4 arrested, bet money seized
  • A case of gambling is reported in Virajpet Town PS. On 03/08/2010 on receiving the information about gambling at the building of one Kolathanda Bopaiah at FMC road of Virajpet Town, the PSI Anup Madappa conducted raid on the building and found the accused persons Naveena, K A Manu, M D Pavan and T P Srikanth were gambling using playing cards. During the course of raid, the police have seized playing cards and Rs.2650.oo which were used in gambling and arested the accused persons.

Tuesday, August 3, 2010

Consuming poison, one committed suicide

  • A case of un natural death is reported inm Ponnampet PS today. On 02/08/2010 night at Kottageri village, one girl Janu who was suffering from stomach ache from long time committed suicide by consuming poison as she was unable to sustain her illness and disgusted in life.

Road Accident, one injured

  • A case of non fatal road accident is registered in Madikeri Traffic PS. On 02/08/2010 near FMC College, when the complainant Balkis Banu of Madikeri Town was going to her house with her son Tasib by walk, the accused Auto Rikshaw driver Sahul Hameed drove his Rikshaw bearing No.KA-12-7134 in rash and negligent manner and dashed to Balkis banu resulting which she sustained injuries.

Unlawful transportation, Lorry & Wooden Logs seized worth Rs. 3,30,000

  • A case under forest act is reported in Virajpet Town PS. On 02/08/2010 receiving the information about transporting Rose wood logs with out any license, the PSI Anup Madappa detected the lorry bearing No.KA-12-1820 near Ammathi Road transporting wooden logs worth Rs. 1,30,000 without any license. The accused driver who was transporting the logs ran away from the place on seing the Police. The Police have seized the lorry along with wooden logs.

Monday, August 2, 2010



Boy missing, case registered.

A case of Boy missing has been registered in Madikeri Town Police Station. On 27/7/2010 at 0800 pm one Sameer M.E. (25), S/o Shahida R/o Ganapathy Street, Madikeri Town went outside for work and did not return to his house there after. He has been found missing since.


Lottery case.
A case under lottery act is rigistered in Siddaura PS. Today, on receiving credible information about selling the lottery tickets which were banned in Karnataka State, the PSI and staff have conducted a raid at Siddapura Town near Holamala Ganapthy Temple and seized lottery tickets of Rs.2000 and cash Rs.440 from the accused H. Abdul K.H. S/o Haneef of Badaga Bangangala village where they selling these tickets to the public.
House breaking burglary
A case of house breaking burglary is reported in Virajpet Town PS. On 31-7-2010 at 11-00 hrs at Ganesh Temple, Virajpet town some un-known culprits gained entry into the temple and break open the box and committed theft of Rs.15,000/-.